ಹಳ್ಳಿ ಸೊಗಡಿನ ಶಕ್ತಿ ಪ್ರದರ್ಶನ: ‘ಹಳ್ಳಿ ಪವರ್’ ಗ್ರಾಂಡ್ ಫಿನಾಲೆಗೆ ಕ್ಷಣಗಣನೆ

‘ಹಳ್ಳಿ ಪವರ್’ ಗ್ರಾಂಡ್ ಫಿನಾಲೆ ಡಿಸೆಂಬರ್ 27–28ರಂದು ಜೀ ಪವರ್‌ನಲ್ಲಿ

ಬೆಂಗಳೂರು, ಡಿಸೆಂಬರ್ 25, 2025:
ಹೊಸ ಚಾನೆಲ್ ಜೀ ಪವರ್ ತನ್ನ ವಿಭಿನ್ನ ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳ ಮೂಲಕ ಕಡಿಮೆ ಅವಧಿಯಲ್ಲೇ ವೀಕ್ಷಕರ ಮನಗೆದ್ದಿದೆ. ಅದರಲ್ಲೂ ಅಕುಲ್ ಬಾಲಾಜಿ ನಿರೂಪಣೆಯ ‘ಹಳ್ಳಿ ಪವರ್’ ರಿಯಾಲಿಟಿ ಶೋ ಪ್ರೇಕ್ಷಕರಲ್ಲಿ ವಿಶೇಷ ಕುತೂಹಲ ಮೂಡಿಸಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಬಹುನಿರೀಕ್ಷಿತ ಗ್ರ್ಯಾಂಡ್ ಫಿನಾಲೆ ಎಪಿಸೋಡ್‌ಗಳು ಡಿಸೆಂಬರ್ 27 ಮತ್ತು 28ರಂದು ರಾತ್ರಿ 8:30ರಿಂದ 10:30ರವರೆಗೆ ಜೀ ಪವರ್ ಚಾನೆಲ್‌ನಲ್ಲಿ ಪ್ರಸಾರವಾಗಲಿದ್ದು, ‘ಹಳ್ಳಿ ಪವರ್’ ಸೀಸನ್ 1ರ ವಿಜೇತೆ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

‘ಹಳ್ಳಿ ಪವರ್’ ಪರಿಕಲ್ಪನೆಯಲ್ಲೇ ವಿಭಿನ್ನವಾಗಿರುವ ರಿಯಾಲಿಟಿ ಶೋ. ನಗರ ಜೀವನದಲ್ಲಿ ಬೆಳೆದ ಯುವತಿಯರು ತಮ್ಮ ಆರಾಮದಾಯಕ ಸಿಟಿ ಲೈಫ್ ಅನ್ನು ಬಿಟ್ಟು ಹಳ್ಳಿಗೆ ಬಂದು ನಿಜವಾದ ಗ್ರಾಮೀಣ ಜೀವನವನ್ನು ಅನುಭವಿಸುವುದು ಈ ಶೋದ ಪ್ರಮುಖ ಅಂಶ. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಕೃಷಿ, ಜಾನುವಾರುಗಳ ಪಾಲನೆ, ಮನೆಮಠದ ಕೆಲಸಗಳು ಸೇರಿದಂತೆ ಹಳ್ಳಿಯ ದಿನನಿತ್ಯದ ಬದುಕನ್ನು ಪ್ರತಿಬಿಂಬಿಸುವ ವಿವಿಧ ಟಾಸ್ಕ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಜೊತೆಗೆ ಶಕ್ತಿಪರೀಕ್ಷೆ ಮಾಡುವ ಫಿಸಿಕಲ್ ಟಾಸ್ಕ್‌ಗಳು ಶೋಗೆ ಮತ್ತಷ್ಟು ರೋಚಕತೆಯನ್ನು ತಂದಿವೆ.

ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ನಡೆದ ಈ ರಿಯಾಲಿಟಿ ಶೋ ಹಳ್ಳಿ ಸೊಗಡು, ನೈಜತೆ ಮತ್ತು ಸಂಸ್ಕೃತಿಯನ್ನು ಮನಮುಟ್ಟುವ ರೀತಿಯಲ್ಲಿ ತೆರೆ ಮೇಲೆ ತಂದಿದೆ. ಅಕುಲ್ ಬಾಲಾಜಿ ಅವರ ಚುರುಕಾದ ನಿರೂಪಣೆ, ಸ್ಪರ್ಧಿಗಳ ಛಲ ಮತ್ತು ಹೋರಾಟದ ಮನೋಭಾವವೇ ‘ಹಳ್ಳಿ ಪವರ್’ ಯಶಸ್ಸಿನ ಪ್ರಮುಖ ಕಾರಣಗಳಾಗಿವೆ.

ಈ ಶೋನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಮತ್ತು ಮಣ್ಣಿನ ಮಗಳು ಫರೀನ್ ಫಿನಾಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರ ಶ್ರಮ, ಸಾಧನೆ ಮತ್ತು ದೃಢ ಸಂಕಲ್ಪವೇ ಅವರನ್ನು ಫಿನಾಲೆ ಹಂತಕ್ಕೆ ತಲುಪಿಸಿದ್ದು, ಸೀಸನ್ 1ರ ಕಿರೀಟ ಯಾರ ಮುಡಿಗೆ ಸೇರುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
ಭಾವನಾತ್ಮಕ ಕ್ಷಣಗಳು, ಉಸಿರುಗಟ್ಟಿಸುವ ಟಾಸ್ಕ್‌ಗಳು ಮತ್ತು ರೋಚಕ ತಿರುವುಗಳೊಂದಿಗೆ ‘ಹಳ್ಳಿ ಪವರ್’ ಗ್ರ್ಯಾಂಡ್ ಫಿನಾಲೆ ವೀಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.
‘ಹಳ್ಳಿ ಪವರ್’ ಸೀಸನ್ 1ರ ವಿಜೇತ ಯಾರು ಎಂಬುದನ್ನು ತಿಳಿದುಕೊಳ್ಳಲು ಡಿಸೆಂಬರ್ 27 ಮತ್ತು 28ರಂದು ಸಂಜೆ 8:30ರಿಂದ ರಾತ್ರಿ 10:30ರವರೆಗೆ ಜೀ ಪವರ್ ಅನ್ನು ತಪ್ಪದೇ ವೀಕ್ಷಿಸಿ.

City Today News 9341997936

ದೀಪಾಲಂಕಾರಿತ ಕ್ರೀಡಾಂಗಣದಲ್ಲಿ ಖೋ-ಖೋ ಜೋರು: 66 ತಂಡಗಳ ಪೈಪೋಟಿ

ಬೆಂಗಳೂರು: ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಅಧ್ಯಕ್ಷ ಶ್ರೀ ಲೋಕೇಶ್ವರ್ ಅವರೊಂದಿಗೆ KSKKA ಉಪಾಧ್ಯಕ್ಷರಾದ ಜಯರಾಮ್ ಕೆ.ಆರ್., ಗುಂಜೂರ್ ಕೆ.ಕೆ. ಸಂಸ್ಥೆಯ ಅಧ್ಯಕ್ಷ ಜಿ.ಟಿ. ನಾಗೇಶ್, ಉಪಾಧ್ಯಕ್ಷ ಜಿ.ಎಂ. ಬಸವರಾಜ್ ಸೇರಿದಂತೆ ರಾಜ್ಯ ಬೋ–ಖೋ ಸಂಸ್ಥೆಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಹೊರರಾಜ್ಯಗಳಿಂದ ಆಗಮಿಸುವ 66 ತಂಡಗಳಿಗಾಗಿ ರೈಲ್ವೆ ನಿಲ್ದಾಣದಲ್ಲೇ ಸ್ವಾಗತ ವ್ಯವಸ್ಥೆ ಮಾಡಲಾಗಿದ್ದು, ಸಾರಿಗೆ ಹಾಗೂ ವಸತಿ ವ್ಯವಸ್ಥೆ ಸಂಪೂರ್ಣ ಸಿದ್ಧವಾಗಿದೆ. ಗಂಡು ಮಕ್ಕಳ ವಸತಿಯನ್ನು ಡೆಲ್ಲಿ ಪಬ್ಲಿಕ್ ಸ್ಕೂಲ್, ಸೂಲಕುಂಟೆ–ಸರ್ಜಾಪುರದಲ್ಲಿ, ಹೆಣ್ಣು ಮಕ್ಕಳ ಸಾರಿಗೆ ಮತ್ತು ವಸತಿಯನ್ನು ಪ್ರೆಡೀ ಜಿ.ಎಸ್. ಶಾಲೆ ಹಾಗೂ ವಾಹೇ ಗ್ಲೋಬಲ್, ಕಾಚಮಾರನಹಳ್ಳಿ–ಗುಂಜೂರ್‌ನಲ್ಲಿ ಏರ್ಪಡಿಸಲಾಗಿದೆ. ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ಊಟ–ಉಪಹಾರ, ನೀರಿನ ವ್ಯವಸ್ಥೆ ಹಾಗೂ ದೀಪಾಲಂಕಾರಿತ ಹೊನಲು ಬೆಳಕಿನ ಕ್ರೀಡಾಂಗಣ ಸಿದ್ಧವಾಗಿದೆ. ವಿ.ಐ.ಪಿ., ಕ್ರೀಡಾಧಿಕಾರಿಗಳು, ಪ್ರೇಕ್ಷಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿದೆ.

ಪಂದ್ಯಾವಳಿ ಸುರಕ್ಷಿತವಾಗಿ ನಡೆಯಲು ಪೊಲೀಸ್ ಸಹಕಾರ, ಆರೋಗ್ಯದ ದೃಷ್ಟಿಯಿಂದ ವೈದ್ಯರು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ದೀಪಾಲಂಕಾರಕ್ಕೆ ಬೆಸ್ಕಾಂ, ಸ್ವಚ್ಛತೆಗೆ ಬಿಬಿಎಂಪಿ, ಸಂಚಾರ ಸುಗಮಕ್ಕೆ ಟ್ರಾಫಿಕ್ ಪೊಲೀಸರ ನೆರವು ಪಡೆಯಲಾಗಿದೆ. ವ್ಯಾಪಕ ಪ್ರಚಾರವೂ ಈಗಾಗಲೇ ಕೈಗೊಳ್ಳಲಾಗಿದೆ.

ಈ ಹಿಂದೆ ಗುಂಜೂರ್ ಕೆ.ಕೆ. ಕ್ಲಬ್ ಸೀನಿಯರ್ ಹಾಗೂ ಸಬ್ ಜೂನಿಯರ್ ಖೋ-ಖೋ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, 20ಕ್ಕೂ ಹೆಚ್ಚು ಬಾಲಕಿಯರು ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ. ವಿವಿಈಗ ಅಧ್ಯಕ್ಷ ಸುಧಾಂಶು ಮಿತ್ತಲ್ ಸೇರಿದಂತೆ ಗಣ್ಯರು ಸಹಕಾರ ನೀಡುತ್ತಿದ್ದಾರೆ. ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಗೋಷ್ಠಿಯಲ್ಲಿ ಆಯೋಜಕರು ತಿಳಿಸಿದರು.

City Today News 9341997936

ಬೆಂಗಳೂರು ದೇವಾಂಗ ಸಂಘದ ಶತಮಾನೋತ್ಸವಕ್ಕೆ ಸಕಲ ಸಿದ್ಧತೆ, ಸಾಮಾಜಿಕ–ಶೈಕ್ಷಣಿಕ ಸೇವೆಯ ನೂರು ವರ್ಷಗಳ ಸಾರ್ಥಕ ಪಯಣ

ಬೆಂಗಳೂರು: 1924ರ ಫೆಬ್ರವರಿ 12ರಂದು ಸ್ಥಾಪಿತವಾದ ಬೆಂಗಳೂರು ದೇವಾಂಗ ಸಂಘ (ರಿ) ಶತಮಾನೋತ್ಸವದ ಗಡಿ ತಲುಪಿದ್ದು, ನೂರು ವರ್ಷಗಳ ಅವಧಿಯಲ್ಲಿ ಸಮಾಜ, ಶಿಕ್ಷಣ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಸಂಘ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಸಂಘದ ಅಧ್ಯಕ್ಷ ಜಿ. ರಮೇಶ್ ಅವರು ತಿಳಿಸಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ವರ್ಷಗಳ ಹಿಂದೆ ಗಂಡು ಮಕ್ಕಳ ಹಾಸ್ಟೆಲ್ ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೇವಾಂಗ ಸಂಘ ಕ್ರಾಂತಿಕಾರಿ ಹೆಜ್ಜೆ ಇಟ್ಟಿತು. ಈ ಹಾಸ್ಟೆಲ್‌ನಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವೀಧರರಾಗಿ ಹೊರಬಂದು, ಇಂದಿನ ದಿನಗಳಲ್ಲಿ ಇಂಜಿನಿಯರ್‌ಗಳು, ವೈದ್ಯರು, ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉನ್ನತ ಹಾಗೂ ಮಧ್ಯಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂಘದ ಶೈಕ್ಷಣಿಕ ಬದ್ಧತೆಯ ಫಲವಾಗಿದೆ ಎಂದು ಹೇಳಿದರು.
ಸದ್ಯ ದೇವಾಂಗ ಸಂಘ ಕಾಲೇಜು ಆವರಣದಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್ ನಿರ್ಮಾಣ ಹಂತದಲ್ಲಿದ್ದು, ಮುಂದಿನ ವರ್ಷದ ಜೂನ್ ತಿಂಗಳಿನಿಂದ ಸುಮಾರು 60 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸಲಾಗುವುದು. ಇದರಿಂದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಂಘದ ಸೇವೆ ನಿರಂತರವಾಗಿದೆ. 1981ರಲ್ಲಿ ಪ್ರಾರಂಭವಾದ ದೇವಾಂಗ ಸಂಘ ಶಾಲೆಯಲ್ಲಿ ಇಂದು ಎಲ್.ಕೆ.ಜಿ.ಯಿಂದ 10ನೇ ತರಗತಿಯವರೆಗೆ ಸುಮಾರು ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2004ರಲ್ಲಿ ಪ್ರಾರಂಭವಾದ ಪದವಿ ಪೂರ್ವ ಕಾಲೇಜು, 2007ರಿಂದ ನಡೆಯುತ್ತಿರುವ ಪದವಿ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎ ಕೋರ್ಸ್‌ಗಳು ಲಭ್ಯವಿವೆ. 2023ರಲ್ಲಿ ಮೂರು ವರ್ಷದ ಕಾನೂನು ಪದವಿ ಕಾಲೇಜು ಹಾಗೂ 2024ರಲ್ಲಿ ಐದು ವರ್ಷದ ಬಿಕಾಂ–ಎಲ್‌ಎಲ್‌ಬಿ ಕೋರ್ಸ್ ಆರಂಭವಾಗಿದ್ದು, ಪ್ರಸ್ತುತ ಸುಮಾರು 150 ವಿದ್ಯಾರ್ಥಿಗಳು ದೇವಾಂಗ ಕಾನೂನು ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸಂಘದ ಶಾಲೆ ಹಾಗೂ ಕಾಲೇಜುಗಳಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಶಿಕ್ಷಣ, ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ಒದಗಿಸಲಾಗುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್‌ಗಳಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಂಘವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯವಾಗಿದೆ. ಮಹಾದಾನಿ ಶ್ರೀ ಪತಿಯಪ್ಪನವರ ಜಯಂತಿ, ದೇವಾಂಗ ಮೂಲಪುರುಷ ಶ್ರೀ ದೇವಲ ಮಹರ್ಷಿಗಳ ಜಯಂತಿ, ಶ್ರೀ ಗಾಯತ್ರಿ ಜಯಂತಿ, ಶ್ರೀರಾಮನವಮಿ, ಲಲಿತಾ ಸಹಸ್ರನಾಮ ಪಠಣ, ಆಯುಧಪೂಜೆ, ಋಗ್ವೋಪಾಕರ್ಮ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜೊತೆಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಿ ಗೌರವಿಸುವ ಪರಂಪರೆಯನ್ನೂ ಸಂಘ ಮುಂದುವರಿಸಿಕೊಂಡು ಬಂದಿದೆ.
ಹೀಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ನೂರು ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿರುವ ನೆನಪಿಗಾಗಿ ಶತಮಾನೋತ್ಸವ ಸಮಾರಂಭವನ್ನು ಬೆಂಗಳೂರು ಅರಮನೆ ಮೈದಾನದಲ್ಲಿನ ಗಾಯತ್ರಿ ವಿಹಾರ, ಗೇಟ್ ಸಂಖ್ಯೆ–4ರಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ.
ಈ ಸಮಾರಂಭಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನೇಕ ಗಣ್ಯರು ಆಗಮಿಸಲಿದ್ದಾರೆ. ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು, ಲೋಕೋಪಯೋಗಿ ಇಲಾಖೆ ಸಚಿವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಲೋಕಸಭಾ ಸದಸ್ಯರು ತೇಜಸ್ವಿ ಸೂರ್ಯ ಹಾಗೂ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ಡಾ. ಕೆ. ನಾರಾಯಣ, ಶಾಸಕರು ರಿಜ್ವಾನ್ ಹರ್ಷದ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಅದೇ ರೀತಿ ಶ್ರೀ ಗಾಯತ್ರಿ ಪೀಠ ಹಂಪಿಯ ಹೇಮಕೂಟದ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಆಶೀರ್ವಚನ ನೀಡಲಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ 25 ಸಾವಿರಕ್ಕೂ ಹೆಚ್ಚು ಮಂದಿ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಶತಮಾನೋತ್ಸವ ಸಮಾರಂಭದಲ್ಲಿ ಮಾಧ್ಯಮ ಪ್ರತಿನಿಧಿಗಳು ತಪ್ಪದೇ ಭಾಗವಹಿಸಿ, ಸಂಘದ ನೂರು ವರ್ಷದ ಸಾಧನೆಯನ್ನು ಜನತೆಗೆ ತಲುಪಿಸಬೇಕೆಂದು ಅಧ್ಯಕ್ಷ ಜಿ. ರಮೇಶ್ ಅವರು ಮನವಿ ಮಾಡಿದರು.

City Today News 9341997936

Hip stiffness emerges as key factor in chronic lower back pain

Chronic lower back pain, a leading cause of reduced mobility among older adults, is increasingly being linked to problems in the hips rather than the spine alone, medical experts say.

According to the World Health Organization (WHO), nearly one in 13 people worldwide experience lower back pain — a figure that represents a 60% rise since 1990. The number is projected to climb to about 843 million by 2050, highlighting the growing public health burden.

Dr. Aravind P.R., Consultant in Rehabilitation Medicine at Aster Whitefield, Bengaluru, points out that nearly half of patients with long-standing back pain show signs of hip dysfunction, including muscle weakness and restricted movement. “Many of these patients report significant relief only after therapy focuses on the hips,” he says. Weak hip muscles or stiff hip joints place additional strain on the spine, often leading to persistent discomfort.

Sedentary lifestyles, prolonged sitting, desk-bound jobs and reduced physical activity weaken the gluteal muscles and tighten hip flexors, Dr. Aravind explains. This imbalance disrupts pelvic alignment and can make routine activities such as walking, bending or climbing stairs painful.

“Back pain is not just a spinal problem,” he notes. “When the hips are weak or tight, the spine compensates. This forces the lower back into unnatural movement patterns, triggering pain that tends to recur.”

Shift towards hip-focused therapy:
Physiotherapists are now placing greater emphasis on hip-strengthening and mobility exercises — including glute bridges, clamshells and hip-flexor stretches — alongside core and spinal training. According to Dr. Aravind, patients often notice improvements in posture, balance and mobility within weeks of beginning targeted hip exercises.

Recent studies indicate that individuals with chronic back and hip pain who underwent hip-focused physiotherapy showed greater improvements in mobility and balance compared to those who received spine-centred treatment alone. Addressing limited hip extension and muscle weakness was also found to enhance walking endurance and reduce back pain symptoms.

Why hips matter in recovery:
Experts underline the crucial role of the hips in supporting healthy spinal movement. When hip function is compromised, the pelvis may tilt forward or sideways, increasing strain on the lumbar spine. This can weaken core muscle activation, disrupt gait and lead to compensatory spinal movements that cause inflammation and long-term pain.
Dr. Aravind observes that a combined approach — strengthening the hips, stabilising the core and improving spinal mobility — often brings lasting relief.

Steps to manage lower back pain:
Physiotherapists recommend that people experiencing recurrent lower back pain consider:
Undergoing a hip mobility and gait assessment
Strengthening the gluteal muscles
Reducing prolonged sitting with regular movement breaks
Practising hip-flexor stretches and pelvic stability exercises
Integrating hip training with core strengthening rather than focusing only on the spine

As the prevalence of chronic back pain continues to rise globally, specialists believe hip-focused therapy may play a central role in future treatment strategies.

“We can no longer treat the spine in isolation,” Dr. Aravind says. “When the hips are addressed, the back finally begins to heal.”

City Today News 9341997936

ನಿರ್ಗತಿಕ ಕುಟುಂಬಗಳಿಗೆ ಶಾಶ್ವತ ವಸತಿ ಒದಗಿಸಲು ಆಗ್ರಹ

ಬೆಂಗಳೂರು, ಡಿ.23: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ಬಡಾವಣೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳ ಸಂವಿಧಾನ ವಿರೋಧಿ ಕ್ರಮಗಳಿಂದ ಮನೆ ಕಳೆದುಕೊಂಡ 400ಕ್ಕೂ ಹೆಚ್ಚು ಕುಟುಂಬಗಳಿಗೆ ಅದೇ ಸ್ಥಳದಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಮಂಗಳವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಕುಮಾರ್ ಸಮತಳ ಅವರು, ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ಕೋಗಿಲು ಗ್ರಾಮದ ಸರ್ವೇ ನಂಬರ್ 99ರ ಸರ್ಕಾರಿ ಭೂಮಿಯಲ್ಲಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ವಸತಿ ರಹಿತ ಕುಟುಂಬಗಳು 25–30 ವರ್ಷಗಳಿಂದ ನೆಲೆಸಿದ್ದವು ಎಂದು ತಿಳಿಸಿದ್ದಾರೆ. ಸ್ಥಳ ಮಂಜೂರಿಗಾಗಿ 94ಸಿ ಕಲಂ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಸರ್ಕಾರದಿಂದ ತಾತ್ಕಾಲಿಕ ಹಕ್ಕುಪತ್ರಗಳನ್ನೂ ಪಡೆದಿದ್ದರು. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಆ ಹಕ್ಕುಪತ್ರಗಳನ್ನು ರದ್ದುಗೊಳಿಸಿ, ಮೂರು ತಿಂಗಳ ಮುಂಚಿತ ನೋಟಿಸ್ ನೀಡದೇ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಬಡ ಕುಟುಂಬಗಳು ಕೂಲಿ ಕೆಲಸದಿಂದ ಸಂಗ್ರಹಿಸಿದ್ದ ಆಹಾರ, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಳ್ಳಲು ಕೂಡ ಅವಕಾಶ ನೀಡದೇ ಪೊಲೀಸ್ ಬಲದೊಂದಿಗೆ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಅಮಾನವೀಯ ಘಟನೆ ನಡೆದಿರುವುದು ದುಃಖಕರ ಎಂದು ಅವರು ಹೇಳಿದರು.

ತೆರವು ಕಾರ್ಯಾಚರಣೆಯಿಂದ ವಸತಿ ಕಳೆದುಕೊಂಡ ಎಲ್ಲ ಕುಟುಂಬಗಳಿಗೆ ತಕ್ಷಣವೇ ವಾಸಯೋಗ್ಯ ತಾತ್ಕಾಲಿಕ ಶೆಡ್‌ಗಳು, ಮೂಲಭೂತ ಸೌಕರ್ಯಗಳು ಹಾಗೂ ಪ್ರತಿ ತಿಂಗಳು ಅಗತ್ಯ ಆಹಾರ ಸಾಮಗ್ರಿಗಳನ್ನು ಸರ್ಕಾರವೇ ಪೂರೈಸಬೇಕು ಎಂದು ಸಮಿತಿ ಒತ್ತಾಯಿಸಿದೆ.

City Today News 9341997936