ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾಧೀಂದ್ರ ಆಚಾರ್ಯರ ನೇತೃತ್ವದಲ್ಲಿ ಹಾಗೂ ಧರ್ಮಾಧಿಕಾರಿಗಳಾದ ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವವುವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ಚಂದ್ರಿಕಾ ಭಜನಾ ಮಂಡಳಿ ಹಾಗೂ ಹಯವದನ ಭಜನಾ ಮಂಡಳಿಯಿಂದ ವಿಶೇಷವಾಗಿ ಶ್ರೀ ಹರಿ ಭಜನೆ ಕಾರ್ಯಕ್ರಮ ಹಾಗೂ ಮಹಾ ರಥೋತ್ಸವದ ಮುಂಭಾಗದಲ್ಲಿ ಕೋಲಾಟ ದೊಂದಿಗೆ ಶ್ರೀಹರಿ ಭಜನೆ ಹಾಗೂ ಕನಕಾಭಿಷೇಕ ಮತ್ತು ಅನ್ನಸಂಪರ್ಪಣೆ ಕಾರ್ಯಕ್ರಮ ನೆರವೇರಿತು ಈ ಸಂದರ್ಭದಲ್ಲಿ ಭಜನಾಮಂಡಳಿಗಳಿಗೆ ಪ್ರೋತ್ಸಾಹಿಸಿ ಸಹಕಾರ ನೀಡುತ್ತಿರುವ ಶ್ರೀ ಸುಧೀಂದ್ರ ದೇಸಾಯಿಯವರು ಹಾಗೂ ಶ್ರೀಮಠದ ಸಿಬ್ಬಂದಿಗಳು ಭಕ್ತರು ಶಿಷ್ಯರು ಭಾಗವಹಿಸಿದ್ದರು.
ಅನಧಿಕೃತ ನೀರಾವರಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಮೂಲಸೌಕರ್ಯಗಳನ್ನು ಕಲ್ಪಿಸಲು ಕರೆಯಲಾಗಿರುವ ಟೆಂಡರ್ ಗಳಿಗೆ ಕೂಡಲೇ ಕಾರ್ಯಾದೇಶ ನೀಡಲು ಎಲೆಕ್ನಿಕಲ್ ಇಪಿಸಿ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಉದ್ದೇಶಪೂರ್ವಕವಾಗಿ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಸರಕಾರದ ಧೋರಣೆಯನ್ನು ಅಸೋಸಿಯೇಷನ್ ಖಂಡಿಸಿದೆ. ಸರ್ಕಾರವನ್ನು ಆಗ್ರಹಪಡಿಸಿದೆ.
ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿ
ಸರಕಾರ 31-05-2022ರಲ್ಲಿ ರೈತರ ಪಂಪ್ ಸೆಟ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಟೆಂಡರ್ ಆಹ್ವಾನಿಸಿರುತ್ತದೆ. ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ಕನಿಷ್ಠ ಮೊತ್ತಕ್ಕೆ ಬಿಡ್ ಮಾಡಿರುವ ಗುತ್ತಿಗೆದಾರರನ್ನು ಆಹ್ವಾನಿಸಿ ದರ ಸಂಧಾನ ತೀರ್ಮಾನವನ್ನು ಕೈಗೊಂಡಿರುತ್ತದೆ. ನಂತರ ಲೆಟರ್ ಆಫ್ ಇಂಟೆಂಟ್ ನೀಡಿರುತ್ತದೆ. ಈ ದರಕ್ಕೆ ಗುತ್ತಿಗೆದಾರರು ಒಪ್ಪಿದ್ದು ಕಾಮಗಾರಿಗಳನ್ನು ನಡೆಸಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಗುತ್ತಿಗೆದಾರರು ಬ್ಯಾಂಕ್ ಖಾತರಿ ಒಪ್ಪಂದ ಪತ್ರವನ್ನು ನೀಡಿರುತ್ತಾರೆ. ಅದರಂತೆ ರಾಜ್ಯದ ಎಸ್ಕಾಂಗಳು ಅನಧಿಕೃತ ಪಂಪ್ ಸೆಟ್ ಗಳಿಗೆ ಮೂಲಸೌಕರ್ಯ ಕಲ್ಪಿಸಲು ವಿಸ್ತತ ಕಾರ್ಯಾದೇಶ ನೀಡಿರುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು 23-10-2023 ರಂದು ಸರಕಾರ ರೈತರ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದ ಆದೇಶ ಹೊರಡಿಸಿರುತ್ತದೆ. ಪ್ರತಿ ಅಂದಾಜುಪಟ್ಟಿಗೆ ಪ್ರತ್ಯೇಕ ಕಾರ್ಯಾದೇಶ ನೀಡಬೇಕಾಗಿರುತ್ತದೆ. ಆದರೆ ಪ್ರತ್ಯೇಕ ಕಾರ್ಯಾದೇಶ ನೀಡಲು ಸರಕಾರ ಮೀನಮೇಷ ಎಣಿಸುತ್ತಿದೆ.
ಈ ಟೆಂಡರ್ ಆಹ್ವಾನಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಒಪ್ಪಿಗೆ ನೀಡಿರುತ್ತದೆ. ಈ ವರ್ಷದಲ್ಲೇ ಅನುದಾನ ಬಿಡುಗಡೆ ಮತ್ತು ಇಲಾಖೆಯ ಬಜೆಟ್‌ನಲ್ಲಿ ಹಣ ಹೊಂದಿಸಿಕೊಳ್ಳಲು ಸಮ್ಮತಿ ನೀಡಿರುತ್ತದೆ. ಈ ಆದೇಶದನ್ವಯ ಎಲ್ಲಾ ಎಸ್ಕಾಂಗಳು ಅನುದಾನದ ಹೊಂದಾಣಿಕೆ ಮಾಡಿಕೊಂಡಿರುತ್ತವೆ. ಹೆಸ್ಕಾಂ, ಬೆಸ್ಕಾಂ ಮತ್ತು ಸೆಸ್ಕ್ ನಲ್ಲಿ ಸುಮಾರು 1,500 ಕೋಟಿ ರೂಪಾಯಿ ಮೊತ್ತಕ್ಕೆ, ಟೆಂಡರ್ ಆಹ್ವಾನಿಸಲಾಗಿರುತ್ತದೆ. ಈ ಮಧ್ಯೆ ಸರಕಾರದ ಆದೇಶವಿದ್ದು, ಬಜೆಟ್ ನಲ್ಲಿ ಹಣ ನಿಗಧಿಯಾಗಿರುವುದರಿಂದ ಹೆಸ್ಕಾಂನಲ್ಲಿ ಸುಮಾರು 200 ಕೋಟಿ ರೂ.ಗಳಷ್ಟು ಮೊತ್ತದ ಕಾಮಗಾರಿಗಳು ಚಾಲ್ತಿಯಲ್ಲಿವೆ. ಸೆಸ್ಕ್ ಕೇಂದ್ರ ಕಚೇರಿಯಿಂದ ವಿಭಾಗೀಯ ಕಚೇರಿಗಳಿಗೆ ಅಲ್ಪ ಪ್ರಮಾಣದ ಅನುದಾನ ಬಿಡುಗಡೆಯಾಗಿದ್ದು ಅಲ್ಲಿಯೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಸಾಮಗ್ರಿಗಳನ್ನು ಖರೀದಿ ಮಾಡಿರುವ ಗುತ್ತಿಗೆದಾರ:
ಹೆಸ್ಕಾಂ, ಬೆಸ್ಕಾಂ ಮತ್ತು ಸೆಸ್ಕ್ ನಲ್ಲಿ ಆದೇಶ ಇದೆ ಎಂಬ ಕಾರಣಕ್ಕೆ ಟೆಂಡರ್ ಪಡೆದುಕೊಂಡಿರುವ ಗುತ್ತಿಗೆದಾರರು ವಿದ್ಯುತ್ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಇಲಾಖಾ ತಪಾಸಣೆ ನಡೆಸಿದ ನಂತರ ಖರೀದಿ ಮಾಡಿರುತ್ತಾರೆ. ಈ ವಸ್ತುಗಳನ್ನು ದಾಸ್ತಾನು ಮಾಡಲು ಗೋದಾಮುಗಳನ್ನು ನಿರ್ಮಿಸಿಕೊಳ್ಳಲಾಗಿದೆ ಇಲ್ಲವೇ ಬಾಡಿಗೆಗೆ ಪಡೆಯಲಾಗಿದೆ. 1500 ಕೋಟಿ ರೂ. ಟೆಂಡರ್ ಗೆ 500-600 ಕೋಟಿ ರೂ.ಗಳಷ್ಟು ಬಂಡವಾಳ ಹೂಡಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಲಾಗಿದೆ. ಈ ಗೋದಾಮುಗಳಿಗೆ 24 ಭದ್ರತೆ, ಸಿಸಿಟಿವಿ ಮತ್ತು ಕಚೇರಿ ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಎಲ್ಲ ಖರ್ಚು ವೆಚ್ಚಗಳನ್ನು ಗುತ್ತಿಗೆದಾರರೇ ಭರಿಸುತ್ತಿದ್ದಾರೆ. ಕಾಮಗಾರಿಗಳು ಯಾವುದೇ ಕ್ಷಣದಲ್ಲಿ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಹಲವಾರು ಗುತ್ತಿಗೆದಾರರು ಕಾರ್ಮಿಕರನ್ನು ನೇಮಿಸಿಕೊಂಡು ಸಂಬಳವನ್ನೂ ನೀಡುತ್ತಿರುವ ಉದಾಹರಣೆಗಳುಂಟು. ಈ ಸಾಮಗ್ರಿಗಳ ಖರೀದಿಗೆ ಬ್ಯಾಂಕ್ ಗಳಿಂದ ಓವರ್ ಡ್ರಾಫ್ಟ್ ಪಡೆದುಕೊಂಡು ಬಡ್ಡಿ ಕಟ್ಟುತ್ತಿದ್ದೇವೆ. ಕಾಲಮಿತಿಯೊಳಗೆ ಈ ಓವರ್ ಡ್ರಾಫ್ಟ್ ಹಣವನ್ನು ಪಾವತಿಸುವಂತೆ ಬ್ಯಾಂಕ್ ಗಳು ಒತ್ತಡ ಹೇರುತ್ತಿವೆ. ಸಕಾಲದಲ್ಲಿ ಪಾವತಿ ಮಾಡದಿದ್ದರೆ ಗುತ್ತಿಗೆದಾರರನ್ನು ಸುಸ್ತಿದಾರರನ್ನಾಗಿ ಮಾಡುವ ಸಂಭವವಿರುತ್ತದೆ. ಹೆಚ್ಚವರಿ ಹಣಕ್ಕೆ ಆಸ್ತಿಪಾಸ್ತಿಗಳನ್ನು ಅಡಮಾನ ಮಾಡಿದ್ದೇವೆ. ಖಾಸಗಿ ಲೇವಾದೇವಿಗಾರರಿಂದ ಬಡ್ಡಿಗೆ ಹಣ ತಂದಿರುತ್ತೇವೆ. ಆದರೆ ಸರಕಾರ ಮಾತ್ರ ಕಾರ್ಯಾದೇಶ ನೀಡದೆ ಸತಾಯಿಸುತ್ತಿದೆ. ವಿಧಾನಸೌಧದ ಮಟ್ಟದಲ್ಲಿ ನಾವು ಕಾರ್ಯಾದೇಶ ನೀಡಿರುತ್ತೇವೆ ಎಂದು ಹೇಳುತ್ತಾರೆ. ಆದರೆ ವಿಭಾಗೀಯ ಕಚೇರಿಗಳಲ್ಲಿ ಯಾವುದೇ ಕಾರ್ಯಾದೇಶ ನೀಡಬೇಡಿ ಎಂದು ಮೌಖಿಕವಾಗಿ ಆದೇಶ ಬಂದಿರುತ್ತದೆ ಎಂದು ಸ್ಥಳಿಯ ಮಟ್ಟದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ನಷ್ಟ ಅನುಭವಿಸುವುದು ಗುತ್ತಿಗೆದಾರ. ರೈತರು ಹಣ ಪಾವತಿಸಿ ಐದಾರು ವರ್ಷಗಳಾದರೂ ಸಕ್ರಮಗೊಳಿಸಲಾಗದೆ ಪರೋಕ್ಷವಾಗಿ ಸರಕಾರವೂ ನಷ್ಟ ಅನುಭವಿಸುವಂತಾಗುತ್ತದೆ.
ಅರ್ಹರಿಗೆ ಗುತ್ತಿಗೆ ನೀಡಲು ಮನವಿ:
ಟೆಂಡರ್ ಗಳನ್ನು ಆಹ್ವಾನಿಸುವಾಗ ವಿನಾಕಾರಣ ಇಲ್ಲಸಲ್ಲದ ಮತ್ತು ಅನಾವಶ್ಯಕವಾದ ನಿಬಂಧನೆಗಳನ್ನು ಹಾಕುವುದನ್ನು ಕೈ ಬಿಡಬೇಕು. ತಮಗೆ ಬೇಕಾಗಿರುವ ಗುತ್ತಿಗೆದಾರರ ಹಿತ ಕಾಪಾಡಲು ಈ ರೀತಿ ಮಾಡಲಾಗುತ್ತದೆ ಎನ್ನುವುದು ರಹಸ್ಯವೇನಲ್ಲ. ಹಲವು ದಶಕಗಳ ಅನುಭವ ಇರುವ ಗುತ್ತಿಗೆದಾರರು ಕಾಮಗಾರಿಗಳನ್ನು ಪಡೆದುಕೊಳ್ಳಲು ವಿದ್ಯುತ್ ಕಾಮಗಾರಿ ಕುರಿತು ಕನಿಷ್ಠ ಜ್ಞಾನವೂ ಇಲ್ಲದ ಮೂರನೇ ವ್ಯಕ್ತಿಗೆ ನಮಸ್ಕಾರ ಹಾಕಬೇಕಾಗುತ್ತದೆ. ಈ ಮೂರನೇ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳುವವರು ಯಾರು ಎಂದು ಸರಕಾರವೇ ಬಹಿರಂಗಪಡಿಸಬೇಕು.
ಅನುದಾನ ಇದ್ದಷ್ಟೇ ಟೆಂಡರ್ ಆಹ್ವಾನಿಸಿ:
ಪ್ರತಿ ಹೊಸ ಸರಕಾರ ರಚನೆಯಾದಾಗ ಮತ್ತು ಹೊಸ ಸಚಿವರು ನೇಮಕಗೊಂಡಾಗ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳನ್ನು ಆಹ್ವಾನಿಸುವುದು ಸರಕಾರಗಳಿಗೆ ಚಾಳಿಯಾಗಿಬಿಟ್ಟಿದೆ. ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್)ಮಾರ್ಚ್ ಅಂತ್ಯಕ್ಕೆ ಸುಮಾರು 10,000 ಕೋಟಿ ರೂ.ಗಳ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದೆ. ಆದರೆ ಬಜೆಟ್ ಅನುದಾನ ಇರುವುದು ಕೇವಲ 3,562 ಕೋಟಿ ರೂಪಾಯಿಗಳು ಮಾತ್ರ! ಇದರಿಂದ ಸರಕಾರ ಅಥವಾ ಅಧಿಕಾರಿಗಳಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ಬಂಡವಾಳ ಹೂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆಸ್ತಿಯನ್ನು ಸರಕಾರಕ್ಕೆ ವರ್ಗಾವಣೆ ಮಾಡುವ ಗುತ್ತಿಗೆದಾರ ತೊಂದರೆಗೀಡಾಗುತ್ತಾನೆ. ಉಳಿದ 6,500 ಕೋಟಿ ರೂ.ಗಳನ್ನು ಸರಕಾರ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ? ಗುತ್ತಿಗೆದಾರ ಸರ್ಕಾರದ ಭಾಗವಲ್ಲ. ಹಾಗಾಗಿ ಎಷ್ಟು ಅನುದಾನ ಇದೆ, ಇಲ್ಲ ಎನ್ನುವುದು ಎಂದು ತಿಳಿಯುವ ವೇಳೆಗೆ ಕಾಲ ಮಿಂಚಿ ಹೋಗಿರುತ್ತದೆ. ಇದರಿಂದ ಗುತ್ತಿಗೆದಾರ ಮತ್ತೆ ಸಾಲಗಾರನಾಗುತ್ತಾನೆ. ಸರಕಾರ ದಯಮಾಡಿ ಅನುದಾನ ಲಭ್ಯತೆ ಎಷ್ಟಿರುತ್ತದೆಯೋ ಅಷ್ಟು ಮೊತ್ತಕ್ಕೆ ಮಾತ್ರ ಟೆಂಡರ್ ಆಹ್ವಾನಿಸಬೇಕು ಎಂದು ಕೇಳಿಕೊಳ್ಳುತ್ತೇವೆ.
ಬೆಸ್ಕಾಂ ನಿಮಗಳಿಗೆ ಬದ್ಧವಾಗಿರಬೇಕು:
ಬೆಸ್ಕಾಂ ಮೂರು ವರ್ಷಗಳ ಹಿಂದೆ ತನ್ನ ಎಲ್ಲಾ 18 ಗ್ರಾಮೀಣ ವಿಭಾಗಗಳಲ್ಲಿ ರೇಟ್ ಕಾಂಟ್ರಾಕ್ಟ್ ಕರೆದಿರುತ್ತದೆ. ಈ ಒಪ್ಪಂದದ ಪ್ರಕಾರ ಆ ವಿಭಾಗದಲ್ಲಿ ನಡೆಯುವ ಎಲ್ಲ ಕಾಮಗಾರಿಗಳನ್ನು ಒಪ್ಪಂದ ಮಾಡಿಕೊಂಡಿರುವ ಗುತ್ತಿಗೆದಾರ ಎರಡು ವರ್‌ಷ ನಿರ್ವಹಿಸಬೇಕಾಗಿರುತ್ತದೆ. ಸರಕಾರ, ಸಚಿವ ಮತ್ತು ಅಧಿಕಾರಿ ಬದಲಾದಾಗ ಈ ನಿಯಮ ಬಾಯಿ ಮಾತಿನಲ್ಲಿ ಬದಲಾಗಿ ಬಿಡುತ್ತದೆ. ಆ ಹೊಸ ಅಧಿಕಾರಿ ಮತ್ತೆ ಟೆಂಡರ್ ಆಹ್ವಾನಿಸಿ ಹೊಸ ಗುತ್ತಿಗೆದಾರನಿಗೆ ಟೆಂಡರ್ ನೀಡುತ್ತಾನೆ. ಇದು ನಿಯಮಗಳ ಸ್ಪಷ್‌ಟ ಉಲ್ಲಂಘನೆಯಾಗಿರುತ್ತದೆ. ಆ ಹೊಸ ಗುತ್ತಿಗೆದಾರ ಹೊಸ ಅಧಿಕಾರಿಯ ಬೇಕುಬೇಡಗಳನ್ನು ಪೂರೈಸುತ್ತಾನೆ. ಎರಡು ವರ್ಷದ ಕೊನೆಯಲ್ಲಿ ಹಳೆಯ ಗುತ್ತಿಗೆದಾರನಿಗೆ ಕೆಲವು ಕಾಮಗಾರಿಗಳನ್ನು ನೀಡಲಾಗುತ್ತದೆ. ಒಪ್ಪಂದದ ಅವಧಿಯ ಕೊನೆಯಲ್ಲಿ ಕಾಮಗಾರಿಗಳನ್ನು ನೀಡುವುದರಿಂದ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯ ಇರುವುದಿಲ್ಲ. ಮತ್ತೆ ಗುತ್ತಿಗೆದಾರನಿಗೆ ದಂಡ ವಿಧಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಕಾಲಮಿತಿಯ ವಿಸ್ತರಣೆಗೆ ಮತ್ತೆ ಅಧಿಕಾರಿಯ ಬೇಕು ಬೇಡಗಳನ್ನು ಪೂರೈಸಬೇಕಾಗಿರುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಕುರಿತು ಮತ್ತೊಮ್ಮೆ ಮುಖ್ಯಮಂತ್ರಿಗಳು, ಇಂಧನ ಸಚಿವರಿಗೆ ಪತ್ರ ಬರೆಯುತ್ತೇವೆ. ಭ್ರಷ್ಟಾಚಾರವನ್ನು ಕೊನೆಗಾಣಿಸಲು ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆಗಳನ್ನು ನಡೆಸಬೇಕು. ಅರ್ಹ ಗುತ್ತಿಗೆದಾರರಿಗೆ ಕಾಮಗಾರಿಗಳು ಲಭ್ಯವಾಗಬೇಕು. ಸ್ಪರ್ಧಾತ್ಮಕವಾಗಿ ಟೆಂಡರ್ ಗಳನ್ನು ನಡೆಸಿದರೆ ಭ್ರಷ್ಟಾಚಾರವನ್ನು ಕೊನಗಣಿಸಬಹುದಾಗಿದೆ. ಅನುದಾನ ಲಭ್ಯತೆ ಆಧರಿಸಿ ಟೆಂಡರ್ ಆಹ್ವಾನಿಸಬೇಕು ಮತ್ತು ಕಾಮಗಾರಿಗಳನ್ನು ನಡೆಸಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇವೆ. ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಲಾಖೆಯ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಬೇಕು ಎಂದು ವಿನಂತಿಸುತ್ತೇವೆ. ಸುದ್ದಿಗೋಷ್ಠಿಯಲ್ಲಿ ಎಚ್.ಎನ್.ರಾಮಕೃಷ್ಣ ಅಧ್ಯಕ್ಷರು, ಉಪಾಧ್ಯಕ್ಷ ಎಂ. ವಿ. ನಿಖಿತ್ ಗೌಡ, ಕಾಯದರ್ಶಿ ಅರ್ಜುನ್ ಕೋರೆ ಖಜಾಂಚಿ ಟಿ. ಕೆ. ಪ್ರವೀಣ್ ಮತ್ತು ಸದಸ್ಯ ಎಂ.ಎಸ್.ಮಂಜುನಾಥ ಉಪಸ್ಥಿತರಿದ್ದರು.
Bengaluru. We are delighted to announce the launch of our 7th edition of The India Advantage Summit to be held this Tuesday and Wednesday (21st and 22nd November 2023) at The Ritz-Carlton, Bengaluru. The two-day summit is designed to forge meaningful partnerships and spotlight leaders in technology and innovation who are solving the greatest sustainability challenges facing us today.
The global landscape has witnessed notable advancements in elevating environmental concerns, with sustainable development becoming integral to public, private, and societal discussions. Despite these achievements, there is still a considerable distance to cover. It is crucial for society to expedite the development of emerging climate technologies, ensuring their availability for widespread use in the mid-to-long term.
Speaking on the occasion Jose Jacob Director & Curator, The India Advantage Summit (TIA Summit) said ” This year marks a pivotal moment as we aim to reignite conversations with inspiring global leaders to discuss ideas and solutions that will unfold new technological avenues towards a sustainable environment. When technology is integrated with governmental reforms and well thought out policies, the impact could very well alter our planets present and future”.
Sujith Nair Co-Founder – CEO Foundation for Interoperability in Digital Economy while giving the key note speech at the TIA Summit 2023, kindled the audience by asking the question, ”Is a conversation on accelerating climate actions complete without having a conversation on interoperability ”. He emphasized on keeping the balance between the Interoperability in Digital Economy and growth.
Andreas Machwirth Deputy Director International Economic Relations and FDI said” I think the TIA Summit is a perfect platform to bring all the companies, institutions, bright and innovative minds and cutting edge technologies together to build up new collaborations partnerships and dynamic innovation ecosystems to tackle key challenges world wide.” He added ” my delegation with representatives of companies institutions and specially muncipalities are very keen to get in touch with the representatives of various companies in the audience.”
More than 60 speakers from 13 counties including India and across are sharing their experience and speak about the advancement and its implications on topics ranging from Spacetech and Proptech to Cybersecurity and Healthtech that will help us accelerate transformations in sustainable development during the summit.
Bangalore, Karnataka – November 21s, 2023 – Leading contemporary home décor brand Nestasia,today announced the grand opening of its first store in Bangalore. The 680 sq. ft. outlet nestled inbustling Bellandur, Bengaluru, marks a significant milestone in the brand’s retail expansion becomingthe second physical store for Nestasia nationwide.
The store’s design draws inspiration from a global contemporary design aesthetic curated by the founders and creative directors at Nestasia. Crafted with precision, the space features a neutral white colour palette with gold accents, creating a soothing canvas for the products and a serene atmosphere for customers. The minimal floor plan, sculptural display units, and arch-infused gondolas seamlessly blend refined elegance with moderate minimalism, allowing the products to take centre stage.
Adding another layer of character to the place are the oakwood tables that complement the white and gold scheme. The store is a celebration of form and functionality, where every product is meticulously designed to balance quality, utility, and beauty – the three integral pillars of Nestasia’s QUB (Quality, Utility & Beauty) model.
Reflecting on Nestasia’s journey, Aditi Murarka, Co-Founder, Nestasia said, “At Nestasia we aspireto make home special. Our goal is to bring to life trending, and topical designs that create a vibe. Weunderstand that beautiful products at home should also serve a purpose, and we’ve struck a balancebetween form and functionality. With the omni-channel approach, we now open our doors inBangalore, a celebration of home decor, tableware, and everything home to upgrade and Make HomeSpecial. We believe in the power of design to inspire and connect with our shoppers, and this storemarks another step towards that vision.”
Shedding light on the brand’s expansion into the offline retail space, she added, “The early trendsfrom the offline foray have been very positive. Nestasia has seen over 80% conversion rate from walkin customers and the average Order Value offline is 30% higher than the similar metric seen in onlineorders. The offline stores sport a modern contemporary and minimal design which enables theproducts to be the standout feature. Although the current stores are between 600-1000 square feet ofcarpet area, the brand is exploring larger format stores in the future. By the end of 2024, the target isto have 20% of revenue coming from offline stores. Nestasia ended FY22 with net revenue of Rs 21.8crore and will be EBITDA positive in FY24.”
The Bangalore store launch is also set to offer an exclusive preview of its Christmas collection at the Bangalore store, welcoming the holiday cheer. The collection in sync with the holiday spirit, features products that cover all your holiday essentials from themed mugs, picture frames, decor items, Christmas wreaths, unique Christmas ornaments, colourful holiday cushion covers, throw blanketsand other holiday paraphernalia.
Over the years and moving forward. Nestasia envisions a future where every home becomes a placeof personal expression and pride, and this store is a testament to that commitment.
03.12.2023 ರಂದು ವಿಶೇಷ ವಿಶ್ವ ವಿಕಲ ಚೇತನರ ದಿನಚಾರಣೆಯಾಗಿದ್ದು ಮಹಾಲಕ್ಷ್ಮೀಲೇಔಟ್ ನಲ್ಲಿರುವ ಶ್ರೀ ಸಂಜೀವಿನಿ ಫೌಂಡೇಷನ್ ಹಾಗೂ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಸೇರಿ ಕಾಲ್‌ನಡಿಗೆ (Walka Thon) ಕಾರ್ಯಕ್ರಮವನ್ನು ಬೆಳಗ್ಗೆ 7.00 ಘಂಟೆಯಿಂದ 10.00 ಘಂಟೆಯವರೆಗೂ ಕಾಲ್‌ನಡಿಗೆ ಕಾರ್ಯಕ್ರಮವನ್ನು ಮಹಾಲಕ್ಷ್ಮಿ ಲೇಔಟ್ (ಕಮಲಮ್ಮನ ಗುಂಡಿ) ರಾಣಿ ಅಬ್ಬಕ್ಕ ಕ್ರೀಡಾಂಗಣದಿಂದ ನಡೆದು – 1ನೇ ಬ್ಲಾಕ್ ಸರ್ವಿಸ್ ರಸ್ತೆ – ಸ್ವಾತಿ ಹೋಟೆಲ್ ರಸ್ತೆ – ಮೋದಿ ಆಸ್ಪತ್ರೆ ರಸ್ತೆ – ಶಂಕರಮಠ ರಸ್ತೆ – ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಸಮಾಗಮಾ ಮಾಡುತ್ತೇವೆ ಇದರ ಉದ್ಘಾಟಣಾ ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಲಿ ಶಾಸಕರು ಮಹಾಲಕ್ಷ್ಮೀ ಲೇಔಟ್, ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಕೆ.ಗೋಪಾಲಯ್ಯ ನವರು ಉದ್ಘಾಟಿಸಲಿದ್ದಾರೆ.
“2ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಸಂಜೀವಿನಿ ವಿಕಲ ಕಲಾ ಸಂಭ್ರಮ ಕಾರ್ಯಕ್ರಮವನ್ನು ದಿನಾಂಕ:16-12-2023 ರಂದು ಬೆಳಗ್ಗೆ 8.00 ಘಂಟೆಯಿಂದ ಸಂಜೆ 5.00 ಘಂಟೆಯವರೆಗೂ ಕ್ರಿಕೆಟ್ ಆಟ ಮತ್ತು ಕೆಲವೊಂದು ಕ್ರೀಡಾ ಸ್ಪರ್ಧೆಗಳನ್ನು ವಿಕಲಚೇತನರಿಗೆ ಆಯೋಜಿಸಲಾಗಿದೆ. ದಿನಾಂಕ:17-12-2023 ರಂದು ಬೆಳಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೂ ವಿಶೇಷ ವಿಕಲಚೇತನ ಬುದ್ಧಿ ಮಾಂಧ್ಯ ಮಕ್ಕಳಿಗೆ ಕೆಲವೊಂದು ಚಿತ್ರಕಲಾ ಸ್ಪರ್ಧೆ ಮತ್ತು ದೈಹಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ದಿನಾಂಕ:17-12-2023 ರಂದು ಸಂಜೆ 4.00 ಘಂಟೆಯಿಂದ ರಾತ್ರಿ 10.00 ಘಂಟೆಯವರೆಗೂ ಕೆಲವೊಂದು ಮನರಂಜನಾ ಕಾರ್ಯಕ್ರಮಗಳನ್ನು ವಿಶೇಷ ವಿಕಲ ಚೇತನರನ್ನು ರಂಜಿಸಲು ಆಯೋಜಿಸಲಾಗಿದೆ. ಮತ್ತು ಕರ್ನಾಟಕದ್ಯಾಂತ ಎಲ್ಲಾ ರಂಗದಲ್ಲಿ ಸಾಧನೆ ಮಾಡಿರುವ ವಿಶೇಷ ಚೇತನರಿಗೆ ಮತ್ತು ಸಮಾಜದ ಏಳಿಗೆಗೆ ದುಡಿದ ಸಾಧಕರಿಗೆ ಸಂಜೀವಿನಿ ರತ್ನ ಪ್ರಶಸ್ತಿ ಎಂಬ ಹೆಸರಿನ ಪ್ರಶಸ್ತಿಯನ್ನು ಕೊಡಲಾಗುವುದು. ಮುಂದಿನ ದಿನಗಳಲ್ಲಿ ಅವರಿಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ಸದಾ ಭಾಗಿಯಾಗಿರುತ್ತದೆ.
ಈ ಸಮಾರಂಭಕ್ಕೆ ಭಾಗವಹಿಸಲಿರುವ ಮುಖ್ಯ ಅತಿಥಿಗಳಿಂದ ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ವಿತರಿಸಲಾಗುವುದು ಹಾಗೂ ಈ ಸಮಾರಂಭಕ್ಕೆ ಆಗಮಸಲಿರುವ ಸದಾ ಸಮಾಜದ ಏಳಿಗೆಗಾಗಿ ದುಡಿಯುತ್ತಿರುವ ಗಣ್ಯರಿಗೆ ಈ ಸಮಾರಂಭಕ್ಕೆ ಅಹ್ವಾನ ಶ್ರೀ ಸಂಜೀವಿನಿ ಫೌಂಡೇಷನ್ ಅಧ್ಯಕ್ಷರು ಮತ್ತು ಪಧಾದಿಕಾರಿಗಲು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
You must be logged in to post a comment.