ಆರ್ ವಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಬೆಂಗಳೂರು ಜಯನಗರ ಆರ್ ವಿ ಸಂಸ್ಥೆಯ ಶಾಶ್ವತಿ ಸಭಾಂಗಣದಲ್ಲಿ ಪ್ರಥಮ ವರ್ಷದ ತರಗತಿಗಳ ಉದ್ಘಾಟನೆ ಮತ್ತು ಆರ್ ವಿ ಲಾ ಜರ್ನಲ್ ಬಿಡುಗಡೆ ಸಮಾರಂಭ

ಆರ್ ವಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಬೆಂಗಳೂರು ಜಯನಗರ ಆರ್ ವಿ ಸಂಸ್ಥೆಯ ಶಾಶ್ವತಿ ಸಭಾಂಗಣದಲ್ಲಿ ಪ್ರಥಮ ವರ್ಷದ ತರಗತಿಗಳ ಉದ್ಘಾಟನೆ ಮತ್ತು ಆರ್ ವಿ ಲಾ ಜರ್ನಲ್ ಬಿಡುಗಡೆ ಸಮಾರಂಭವನ್ನು 21 ನವೆಂಬರ್ 2022,ಸೋಮವಾರದಂದು ನೆರವೇರಿಸಿತು.

ಪ್ರಥಮ ವರ್ಷದ ತರಗತಿಗಳ ಉದ್ಘಾಟನೆಯನ್ನು ಮುಖ್ಯ ಅತಿಥಿ ಕರ್ನಾಟಕ ಉಚ್ಚ ನ್ಯಾಯಾಲಯದ ಸನ್ಮಾನ್ಯ ನ್ಯಾಯಾಧೀಶರಾದ ಶ್ರೀನಿವಾಸ ಹರೀಶ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ ಡಾ. ಚಿದಾನಂದ ಎಸ್.ಪಾಟೀಲ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ ಮತ್ತು ಡಾ. ಸಾಯಿರಾಂ ಭಟ್ ಹಿರಿಯ ಪ್ರಾಧ್ಯಾಪಕರು, ರಾಷ್ಟ್ರೀಯ ಕಾನೂನು ಶಾಲೆ ಇಂಡಿಯಾ ವಿಶ್ವವಿದ್ಯಾಲಯ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ರಾದ ಡಾ. ಎಂ ಪಿ ಶ್ಯಾಮ್ ವಹಿಸಿದರು.

ಆರ್ ವಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಪ್ರಾಂಶುಪಾಲರಾದ ಪ್ರೊ. ಡಾ. ಅಂಜಿನಾ ರೆಡ್ಡಿ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿ ಸ್ವಾಗತ ಕೋರಿದರು. ಇದೇ ಸಂದರ್ಭದಲ್ಲಿ ಆರ್ ವಿ ಲಾ ಜರ್ನಲ್ ಸಂಪುಟ ಹಾಗೂ ಆರ್ ವಿ ನ್ಯೂಸ್ ಲೆಟರ್ ಅನ್ನು ಬಿಡುಗಡೆ ಮಾಡಲಾಯಿತು. ಉಚ್ಛ ನ್ಯಾಯಾಲಯದ ಸನ್ಮಾನ್ಯ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಕಾನೂನು ಕಲಿಕೆಯ ವಿವಿಧ ಹಂತಗಳನ್ನು, ಇಂದು ಕಾನೂನಿನ ಸಹಾಯಹಸ್ತವನ್ನು ಸಮಾಜದ ದುರ್ಬಲ ವರ್ಗದ ಜನರಿಗೆ ತಲುಪಿಸಬೇಕು ಎಂದು ಕರೆ ನೀಡಿದರು. ನೂತನ ಕಾನೂನು ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ, ಪದವಿಯ ಅಭ್ಯಾಸದ ಜೊತೆಗೆ ನ್ಯಾಯಾಲಯದ ಕಲಾಪಗಳನ್ನು ಗಮನಿಸಬೇಕು, ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನ, ತರಬೇತಿ ಪಡೆಯಬೇಕು. ಸ್ವಯಂ ಸೇವಾ ಸಂಸ್ಥೆಗಳಲ್ಲಿ ತರಬೇತಿ ಪಡೆಯಬೇಕು, ಆಗಲೇ ಶ್ರೇಷ್ಠ ವಕೀಲರಾಗಲು ಸಾಧ್ಯ ಎಂದು ತಿಳಿಸಿದರು. ಸಂವಿಧಾನದ ಮಹತ್ವತೆಯನ್ನು ನ್ಯಾಯಮೂರ್ತಿಗಳು ವಿವರಿಸುತ್ತಾ ಸಂವಿಧಾನದ ಮೂಲ ಭೂತ ಹಕ್ಕುಗಳಲ್ಲದೆ ಸಾಂವಿಧಾನಿಕ ಕರ್ತವ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಲು ಕರೆ ನೀಡಿದರು. ನ್ಯಾಯಾಲಯಗಳಲ್ಲಿ ಕನ್ನಡ ವ್ಯವಹಾರದ ಭಾಷೆಯನ್ನಾಗಿ ಉಪಯೋಗಿಸಬೇಕು ಇದರಿಂದ ನ್ಯಾಯಾಲಯಕ್ಕೆ ವ್ಯಾಜ್ಯ ನಿರ್ಣಯಕ್ಕಾಗಿ ಬರುತ್ತಿರುವ ಗ್ರಾಮೀಣ ಜನರಿಗೆ ನ್ಯಾಯಾಲಯದ ಕಲಾಪಗಳು ಸುಲಭವಾಗಿ ಅರ್ಥವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಡಾ. ಚಿದಾನಂದ ಪಾಟೀಲ್ ಹಾಗೂ ಡಾ. ಸಾಯಿರಾಂ ಭಟ್ ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿ ಜೀವನ ಕೌಶಲ್ಯ ಅಭಿವೃದ್ಧಿ, ಸಂವಹನ ಕೌಶಲ್ಯ, ಅಗತ್ಯವಾದ ಕಾನೂನಿನ ಅರಿವು ಜ್ಞಾನವನ್ನು ಪಡೆಯಲು ಅಳವಡಿಸಿಕೊಳ್ಳಬೇಕಾದ ಸಾಧ್ಯತೆಗಳ ಬಗ್ಗೆ ಪ್ರಶೋತ್ತರ ಸಂವಾದ ನಡೆಸಿಕೊಟ್ಟರು. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷರಾದ ಡಾ. ಎಂ ಪಿ ಶ್ಯಾಮ್ ರವರು ತಮ್ಮ ಅಧ್ಯಕ್ಷೀಯ ಭಾಷಣ ದಲ್ಲಿ ಕಾನೂನೂ ಶಿಕ್ಷಣ ಮತ್ತು ತರಬೇತಿ ಸಮಾಜದ ಸಂಪೂರ್ಣ ಒಳಿತಿಗೆ ಕಾರಣವಾಗಬೇಕು, ನೂತನ ಕಾನೂನು ವಿದ್ಯಾರ್ಥಿಗಳಿಗೆ ಆರ್ ವಿ ಇನ್ಸಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಸಂಸ್ಥೆಯಲ್ಲಿರುವ ಸೌಲಭ್ಯ ಸೌಕರ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.

City Today News – 9341997936

ಸದಾಶಿವ ಆಯೋಗ ವರದಿ ಜಾರಿಗೆ ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಹಾಗೂ ಮುಖಂಡರಿಗೆ ಬಂಜಾರ ಸಮಾಜದ ಸಂಪೂರ್ಣ ವಿರೋಧ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಹಾಗೂ ಮುಖಂಡರುಗಳು ಚುನಾವಣಾ ದೃಷ್ಟಿಯಿಂದ ಸದಾಶಿವ ಆಯೋಗ ವರದಿ ಜಾರಿಯಾಗಬೇಕೆಂದು ಹೇಳಿಕೆ ನೀಡುತ್ತಿರುವುದನ್ನು ರಾಜ್ಯದ 30 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಬಂಜಾರ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಂತಹವರಿಗೆ ಬೆಂಬಲ ನಿರಾಕರಿಸುವುದಾಗಿ ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.

ಒಳಮೀಸಲಾತಿಗೆ ಸಂಬಂಧಿಸಿದಂತೆ ದಿನನಿತ್ಯ ಆಗುತ್ತಿರುವ ಬೆಳವಣಿಗೆಗಳು ರಾಜಕೀಯ ಪ್ರೇರಿತವಾಗಿದ್ದು ಪರಿಶಿಷ್ಟ ಜಾತಿಗಳನ್ನು ಒಡೆಯಲು ನಡೆಸಲಾಗುತ್ತಿರುವ ಅತೀ ದೊಡ್ಡ ಷಡ್ಯಂತ್ರ ಇದಾಗಿದೆ. ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾಗಿದೆ. ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ವಿವಿಧ ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿರುವ ಕಾರಣ ರಾಜ್ಯ ಸರ್ಕಾರ ಈ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸುತ್ತೇವೆ.

2005 ರಲ್ಲಿ ರಚನೆಯಾದ ಸದಾಶಿವ ಆಯೋಗ 7 ವರ್ಷಗಳ ನಂತರ 2012 ರಲ್ಲಿ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವರದಿ ಸಲ್ಲಿಕೆಯಾಗಿದೆ. ವರದಿ ಸಲ್ಲಿಕೆಯಾಗಿ ಈಗಾಗಲೇ 10 ವರ್ಷಗಳು ಕಳೆದಿದ್ದು, ಈಗ ಅದನ್ನು ಜಾರಿಗೊಳಿಸಬೇಕೆನ್ನುವುದು ಅಪ್ರಸ್ತುತ ಹಾಗೂ ಅರ್ಥಹೀನವಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿ ಅಂಕಿಅಂಶ ಹಾಗೂ ಸದಾಶಿವ ಆಯೋಗ ವರದಿ ಅಂಕಿಅಂಶಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಸರ್ಕಾರ ಮತ್ತೊಂದು ಜಾತಿಗಣತಿ ಮಾಡಿ ಸ್ಪಷ್ಟ ವರದಿ ನೀಡಬೇಕೆಂದು ಕೋರುತ್ತೇವೆ. ರಾಜ್ಯ ಸರ್ಕಾರಕ್ಕೆ

ರಾಜ್ಯದಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಇನ್ನಿತರೆ ಪರಿಶಿಷ್ಟ ಜಾತಿಯ ಸಮುದಾಯಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬಡತನ, ಅನಕ್ಷರತೆ, ನಿರುದ್ಯೋಗ, ವಲಸೆ, ದಬ್ಬಾಳಿಕೆ, ಅತ್ಯಾಚಾರ, ಸರ್ಕಾರಿ ಸೌಲಭ್ಯ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದು ಸೇರಿದಂತೆ ಸಾಕಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಇವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್‌.ಡಿ. ಕುಮಾರಸ್ವಾಮಿ, ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್ ಕಟೀಲ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ, ರಾಜ್ಯ ಸರ್ಕಾರದ ಮಧ್ಯಮ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಚುನಾವಣೆ ಹಿತದೃಷ್ಟಿಯಿಂದ ಎಡ ಸಮುದಾಯದ ಮತವನ್ನು ಓಲೈಸುವ ಸಲುವಾಗಿ ಸದಾಶಿವ ಆಯೋಗ ವರದಿ ಜಾರಿಗೆ ಬೆಂಬಲ ಸೂಚಿಸುತ್ತಿರುವುದು ವಿಪರ್ಯಾಸವಾಗಿದೆ. ಸಾರ್ವಜನಿಕವಾಗಿ ಬಹಿರಂಗವಾಗದ ಸದಾಶಿವ ಆಯೋಗ ವರದಿಯನ್ನು ಏಕಾಏಕಿ ಜಾರಿ ಮಾಡಬೇಕು ಎನ್ನುವ ರಾಜಕೀಯ ಪಕ್ಷಗಳಿಗೆ ಹಾಗೂ ನಾಯಕರುಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಬಂಜಾರ ಸಮುದಾಯದ ವಿರೋಧವಿದೆ ಎಂದು ಈ ಪತ್ರಿಕಾ ಗೋಷ್ಠಿಯ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.

ಒಳಮೀಸಲಾತಿ ಹೋರಾಟ ನೆಪದಲ್ಲಿ ಬಂಜಾರ ಸಮಾಜದ ಆರಾಧ್ಯದೈವ ಕುಲಗುರು ಸಂತ ಶ್ರೀ ಸೇವಾಲಾಲ್‌ ಮಹಾರಾಜರನ್ನು ಹಾಗೂ ರಾಜ್ಯ ಸರ್ಕಾರದ ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ರವರನ್ನು ಮಾದಿಗ ದಂಡೋರ ಸಮಿತಿಯವರು ಏಕ ವಚನದಲ್ಲಿ ನಿಂಧಿಸುವುದು. ಅಪಮಾನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಮಾದಿಗ ದಂಡೋರ ಸಮಿತಿಯವರು ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡುವುದು ಬಿಟ್ಟು ಬಂಜಾರ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಯಪಡಿಸುತ್ತೇವೆ.

ಪರಿಶಿಷ್ಟ ಸಮುದಾಯಗಳ ಮಧ್ಯೆ ಬಿನ್ನಾಭಿಪ್ರಾಯ ಮೂಡಿಸಿ ಏಕತೆಗೆ ಧಕ್ಕೆ ತರುತ್ತಿರುವ ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ಈ ಮೂಲಕ ಅಗ್ರಹಿಸುತ್ತೇವೆ.

ಒಂದು ವೇಳೆ ತರಾತುರಿಯಲ್ಲಿ ಆಯೋಗದ ವರದಿ ಶಿಫಾರಸಿಗೆ ಸರ್ಕಾರ ಮುಂದಾದರೆ ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಂಜಾರ ಸಮುದಾಯ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗಿರೀಶ್ ಡಿ.ಆರ್. ರಾಜ್ಯಾಧ್ಯಕ್ಷರು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

DIGITAL HEALTH SYMPOSIUM ONADVANCING, DIGITAL HEALTHCARE, MANAGEMENT, INNOVATION, RESEARCH AND ENTREPRENEURSHIP (ADMIRE)

Institute of Health Management Research (IIHMR) Bangalore is elated to announce a Digital Health Symposium for healthcare professionals and aspirants of the healthcare industry on 26th Nov at Hotel Chancery Pavilion, Bangalore. The symposium will focus on the transition enabled by technology, challenges, strategies to move from conventional hospital to digital hospital enterprise. As the healthcare industry is changing at a fascinating rate, to stay in tune, it is the right time to ADMIRE the smarter, technologically advanced, and faster-evolving healthcare sector. The symposium will allow the participants to engage with industry leaders, present their innovative products and services to the stakeholders, and discuss recent trends, technology, and advancements.

The event will be marked with the presence of Dr S Sadagopan, Distinguished Professor IIHMR, Former Director IIIT Bangalore, Dr C S Kedar IAS (Rtd), Former Director General ESIC, Advisor IIHMR Bangalore., Dr. S D Gupta (Trustee Secretary IIHMR Society) ,Sri. Randeep Health commissioner and other eminent industry professionals from healthcare industry.

City Today News – 9341997936

” ವೀರಪ್ಪನ್” ಫಿಲಂ ಮತ್ತು ವೆಬ್ ಸರಣಿ “

ನಮ್ಮ ಸಂಸ್ಥೆಯಿಂದ ಈ ಹಿಂದೆ “ಅಟ್ಟಹಾಸ” ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿದ್ದು ಅಟ್ಟಹಾಸ ಚಿತ್ರವು ಜನ ಮನ್ನಣಿಯಗಳಿಸುವುದರ ಜೋತೆಗೆ ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿತ್ತು.

ಪ್ರಸ್ತುತ ನಮ್ಮ ಸಂಸ್ಥೆಯ ವತಿಯಿಂದ ಅಟ್ಟಹಾಸ ಚಿತ್ರದ ಮುಂದುವರೆದ ಬಾಗ “ವೀರಪ್ಪನ್’ ಫಿಲಂ ಮತ್ತು ವಬ್ ಸರಣಿಯನ್ನು ಕನ್ನಡ ಭಾಷೆಯಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರಸ್ತುತ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಚಿತ್ರಿಕರಣವು ಭರದಿಂದ ಸಾಗಿದ್ದು, ಈಗಾಗಲೆ 95 ದಿನಗಳ ಚಿತ್ರೀಕರಣವನ್ನು ಮಾಡಿದ್ದವ

ಈ ಸರಣಿಯಲ್ಲಿ ಮೂಡಿಬರುತ್ತಿರುವ ದೃಶ್ಯಗಳು ನೈಜ್ಯತೆಯಿಂದ ಕೂಡಿದ್ದು, ಈ ಸರಣಿಯಲ್ಲಿ ವೀರಪ್ಪನ್ ನನ್ನು ಸೆರೆಹಿಡುಯುವ ಕಾರ್ಯಕ್ಕಾಗಿ ನಮ್ಮ ಪೋಲಿಸ್ ಅಧಿಕಾರಿಗಳು ತೋರಿದ ಧೈರ್ಯ ಹಾಗು ಸಾಹಸದ ಬಗ್ಗೆ ಸಂಪೂರ್ಣವಾಗಿ ತಿಳಿಸುವ ಪ್ರಯತ್ನ ಮಾಡುತಿದ್ದೇವೆ.

ಅದೇ ರೀತಿಯಲ್ಲಿ ವೀರಪ್ಪನ್ ಕಾರ್ಯಚರಣೆಯ ವೇಳೆ ಹುತಾತ್ಮರಾದ ‘ಶ್ರೀ ದಿನೇಶ್, ಶ್ರೀ ಜಗ್ಗನ್ನಾಥ್, ಶ್ರೀ ರಾಮಲಿಂಗು, ಶ್ರೀ ಹರಿಕೃಷ್ಣ, ಶ್ರೀ ಶಕೀಲ್ ಅಹಮದ್, ಶ್ರೀ ಗೋಪಲ್ ಹೊಸೂರ್ ರವರ ಮೇಲಾದ ಧಾಳಿ, ಪಾಲರ್ ಬ್ಲಾಸ್ಟ್” “ಡಾ.ರಾಜುಮಾರ್ ಹಾಗೆ ಮಿನಿಸ್ಟರ್ ನಾಗಪ್ಪ ರವರ ಅಪಹರಣ” ಇನ್ನು ಇತರ ಅಧಿಕಾರಿಗಳ ಕರ್ತವ್ಯದ ಬಗ್ಗೆ ಸಂಪೂರ್ಣವಾಗಿ ತೋರಿಸುತ್ತಿದ್ದವೆ.

ನಿಮ್ಮೆಲ್ಲಾರಿಗು ತಿಳಿದಿರುವ ಹಾಗೆ, ಒಂದು ಚಿತ್ರ ನಿರ್ಮಿಸುವಾಗ ನೂರಾರು ಅಡೆತಡೆಗಳು ಇದ್ದೆ ಇರುತ್ತವೆ, ಅದರಲ್ಲು ಈ ರೀತಿಯ ನೈಜ ಚಿತ್ರಗಳಿಗಂತು ಅಡೆ ತಡೆಗಳು ಸರವೇ ಸಾಮಾನ್ಯ,

ಈ ಹಿಂದೆ ನಮ್ಮ ಅಟ್ಟಹಾಸ ಚಿತ್ರದ ಚಿತ್ರಿಕರಣ ಹಾಗು ಬಿಡುಗಡೆ ಸಮಯದಲ್ಲು ಮುತ್ತುಲಕ್ಷ್ಮಿಯವರು ಚೆನ್ನೈ ಹೈ ಕೋರ್ಟ್ನಲ್ಲಿ ತಡೆ ತಂದಿದ್ದರು, ಅಲ್ಲಿ ತೀರ್ಪು ನಮ್ಮ ಪರವಾಗಿ ಆಗಿತ್ತು, ನಂತರ ಮುತ್ತುಲಕ್ಷ್ಮಿಯವರು ಸುಪ್ರೀಮ್ ಕೋರ್ಟ್ ಹೋದಾಗ, ಅಲ್ಲಿ ನಮಗೆ ರಾಜಿಯಾಗಬೇಕಾಯಿತು, ಹಾಗು ಮುತ್ತುಲಕ್ಷ್ಮಿಯವರಿಗೆ 25 ಲಕ್ಷಗಳನ್ನು ನೀಡಿರುತ್ತವೆ.

ಮೇಲ್ಕಂಡ ಸಂಸ್ಥೆಯ ನಿರ್ದೇಶಕ ಹಾಗೂ ನಿರ್ಮಾಪಕ ಎ.ಎಂ.ಆರ್.ರಮೇಶ್ ಆದ ನನ್ನ ನಿರ್ದೇಶನದ “VEERAPPAN – HUNGER FOR KILLING” ಫಿಲಂ ಮತ್ತು ವಬ್ ಸರಣಿಯ ಬಗ್ಗೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯವರು ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್ನಲ್ಲಿ ದಾವ ಹೋಡಿ ಇದಕ್ಕೆ ಸ್ಸೇ ಮತ್ತು ತಡೆ ತಂದಿದ್ದರು.

ಈ ಬಗ್ಗೆ ದಿನಾಂಕ : 15.11.2022 ರಂದು ಸಿಟಿ ಸಿವಿಲ್ ಕೋರ್ಟ್ (ಸಷನ್ ಜಡ್, ಮೆಯೊ ಹಾಲ್ ಬೆಂಗಳೂರು) ನಲ್ಲಿ ತೀರ್ಪು ಹೊರಬಂದಿದ್ದು, ತೀರ್ಪಿನಲ್ಲಿ ಮುತ್ತುಲಕ್ಷ್ಮಿಯವರ ದಾವೆಯನ್ನು ವಜಾಗೊಳಿಸಿ ಎ.ಎಂ.ಅರ್ ಪಿಕ್ಚರ್ಸ್ ರವರ ಪರವಾಗಿ ತೀರ್ಪು ಹೋರಬಂದಿದೆ, ಯಾವುದೇ ಅಡೆತಡೆಯಿಲ್ಲದೇ ಫಿಲಂ ಮತ್ತು ವೆಬ್ ಸೀರೀಸ್‌’ಗೆ ಅನುಮತಿ ನೀಡಲಾಗಿದೆ ಎಂದು AMR ರಮೇಶ್ ಚಲನಚಿತ್ರ ನಿರ್ದೇಶಕ/ನಿರ್ಮಾಪಕ  ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Primus Senior Homes teams up with LiveAltlife to conduct a diabetes awareness session

Bangalore, Nov 22, 2022: India is often called the ‘Diabetes Capital of the World’, as it accounts for 17% percent of the total number of diabetics globally. Senior citizens of the country suffer a higher risk of being diabetic. On average, 14 percent of the population above the age of 60 suffer from diabetes in India. The number of cases of diabetes in senior citizens across India in 2050 is estimated to be about 33.3 million.

As November is Diabetes Awareness Month, Primus Senior Homes which offers premium elder care services and senior residences teamed up with the health-tech startup, LiveAltlife to educate and support its residents who are diabetic. The residents were taken through an extensive educational program that dealt with types of Diabetes, symptoms, causes, preventive measures, and the role of nutrition in its successful management.   

Talking about the session, Adarsh Narahari, Founder and Managing Director of Primus Lifespaces said, “Senior Living is all about creating an ecosystem of care, convenience & comfort wherein we are able to reduce the process of ageing through proactive medical care and creation of like-minded communities. At Primus, we go the extra mile in keeping them physically and mentally fit — especially with our bespoke services and dynamic activity calendars. A number of our residents are diabetic and we aim to offer the best possible support and care to them. Hence, the diabetes awareness session organized in partnership with LiveAltlife is an effort to provide the best care for our residents.” 

Adding to this, Vivek Subramanyam, Founder & CEO, LiveAltlife said, “It was a pleasure interacting with the energetic seniors at Primus Reflection around Diabetes and other lifestyle conditions. The curiosity among elders to learn more and enthusiasm to defeat disease was very commendable. We look forward to partnering with Primus in our mission of transforming health. Our approach to reversing Diabetes or other lifestyle conditions is by fixing the underlying root cause: metabolic imbalances, chronic inflammation, and impaired immunity.”

A One-Stop Solution for Diabetes Reversal in India, LiveAltlife helps people battling metabolic disorders like Diabetes, PCOS, obesity, cardiovascular health etc. to restore and reverse their health in a safe & natural way.  

City Today News – 9341997936