ಪದ್ಮಭೂಷಣ ಡಾ. ಎಂ. ಸಿ. ಮೋದಿ ಕಣ್ಣಿನ ಆಸ್ಪತ್ರೆ ಆವರಣ ರಾಜಾಜಿನಗರ ಬೆಂಗಳೂರಿನಲ್ಲಿ ಭಾರತ ಸ್ವಾತಂತ್ರದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಲ್ಲನಗೌಡ ಎಸ್. ಪಾಟೀಲ (ಕೋರವಾರ) ಇವರು ಧ್ವಜಾರೋಹಣವನ್ನು ನೆರವೇರಿಸಿ, ಸಭೆಯನ್ನುದ್ದೇಶಿಸಿ ಸ್ವಾತಂತ್ರೋತ್ಸವ ಹಾಗೂ ಡಾ. ಎಂ. ಸಿ. ಮೋದಿಜಿಯವರ ಕುರಿತು ಪದ್ಮಭೂಷಣ, ನೇತ್ರತಜ್ಞ, ಗಿನ್ನಿಸ್ ದಾಖಲೆಯ ಸರದಾರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಡಾ. ಎಂ. ಸಿ. ಮೋದಿಜಿಯವರ ಅದ್ಭುತ ಸಾಧನೆ ಮತ್ತು ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ & ಪ್ರಶಂವಸನೀಯ ಎಂದು ಮಾತನಾಡಿದರು. ಇದಲ್ಲದೇ ಭಾರತ ದೇಶವು ಸ್ವತಂತ್ರ್ಯವಾಗಲು ಶ್ರಮಿಸಿದ ಪ್ರಮುಖ ನೇತಾರರಾದ ಮಹಾತ್ಮಾ ಗಾಂಧೀಜಿ, ಮಂಗಲಪಾಂಡೆ, ಭಗತಸಿಂಗ್, ಸುಭಾಸಚಂದ್ರ ಬೋಸ್, ಚಂದ್ರಶೇಖರ ಆಜಾದ್ ಹಾಗೂ ಇನ್ನೂ ಹಲವಾರು ನೇತಾರರ ತ್ಯಾಗ, ಬಲಿದಾನ & ನಿರಂತರ ಹೋರಾಟ, ಚಳುವಳಿಗಳ ಫಲಶೃತಿಯಿಂದ ಭಾರತ ದೇಶವು ಸ್ವಾತಂತ್ರ್ಯವಾಗಲು ಸಾಧ್ಯವಾಯಿತು ಎಂದು ಎಳೆ ಎಳೆಯಾಗಿ ಹೇಳಿದರು. ಯಾವುದೇ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ಗುಣಾತ್ಮಕ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲಂಭಿತವಾಗಿರುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯ ಎಂದರೆ ಈ ಭಾರತ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಎಲ್ಲಾ ರೀತಿಯ ಮೂಲಭೂತ ಹಕ್ಕು ಹಾಗೂ ಎಲ್ಲಾ ರೀತಿಯ ಸ್ವಾತಂತ್ರ್ಯವಿದೆ. ಇದನ್ನು ಯಾರೂ ಅಡ್ಡಿಪಡಿಸಬಾರದು. ಸುಭಾಸ್ ಮೋದಿ, ಮಲ್ಲಿಕಾರ್ಜುನ ಮೋದಿ, ಗುಬ್ಬಿ ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ, ರುದ್ರಪ್ಪ ಏನ್. ಏನ್., ಎಸ್. ಎಸ್. ಸಂತಿ ಸಹಾಯಕ ಇಂಜಿನಿಯರ್ ಐಟಿಐ ಲಿಮಿಟೆಡ್ ಬೆಂಗಳೂರು, ಕರ್ಜಗಿ ದಾವಣಗೆರೆ ಹಾಗೂ ಮುಂತಾದವರು ಭಾಗವಹಿಸಿದ್ದರು.
ಸೆಲಬ್ರೆಟಿ ಫ್ಯಾಷನ್ ವೀಕ್ ಈ ಷೋನಲ್ಲಿ ಸೆಲಬ್ರೆಟಿಗಳು ಮಾತ್ರ ಭಾವಗಹಿಸಲಿದ್ದಾರೆ ಹಾಗೂ ಮಿಸ್ಟರ್ , ಮಿಸ್ ಇಂಡಿಯಾ ದಿನಾಂಕ ಆಗಸ್ಟ್ 29 , 2021 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ರ್ರ್ಯಾಡಿಸನ್ ಬ್ಯೂ ಎಟ್ರಿಯಾನಲ್ಲಿ ಸ್ಪರ್ಧೆ ನಡೆಯಲಿದ್ದು , ಈ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತ ದೇಶದ ನಾನಾ ಭಾಗಗಳಿಂದ ನೋಂದಾಯಿಸಿಕೊಂಡಿರುತ್ತಾರೆ . ಈ ಸ್ಪರ್ಧೆಯಲ್ಲಿ ಹೊರ ರಾಜ್ಯಗಳಿಂದ ತೀರ್ಪುಗಾರರು ಮತ್ತು ಕಾಸ್ಟ್ಯೂಮ್ ಡಿಸೈನರ್‌ಗಳು ಆಗಮಿಸಲಿದ್ದಾರೆ . ಆಸಕ್ತಿವುಳ್ಳವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೋಂದಾಯಿಸಿಕೊಳ್ಳತಕ್ಕದ್ದು . ಹೆಚ್ಚಿನ WWW.rockingrathu.com & Mobile No .: 96201 02456 ಮಾಹಿತಿಗೆ ಸಂಪರ್ಕಿಸಬಹುದಾಗಿದೆ . . ( ಪತ್ರಿಕಾಗೋಷ್ಠಿಯಲ್ಲಿ ಆರ್.ಆರ್ . ಗ್ರೂಪ್ & ರಾಕಿಂಗ್ ರಾತು ಮಾಡಲ್ಸ್ ಸಿ.ಇ.ಓ. ಶ್ರೀ ರಾಕಿಂಗ್ ರಾತು , ಸಿ.ಫೈ , ಈವೆಂಟ್ಸ್‌ನ ಸಿ.ಇ.ಓ. ಶ್ರೀಮತಿ ಅರ್ಪಿತದೇವ್ , ಫೋಟೋಗ್ರಫಿ ಟೀಂ ಶ್ರೀ ಪ್ರಾಣೇಶ್ ಭಟ್ , ಆಲೋಕ್ ಜೈನ್ ಹಾಗೂ ಸೆಲೀನ್ ಇದ್ದರು .
* Launches an ad and 360 marketing campaign to highlight the exterior emulsion with up to 15 years Performance warranty
*The revolutionary exterior emulsion provides superior water resistance and extreme durability to protect from extreme heat and rain
Bengaluru, August 11th 2021: Nippon Paint (India) Private Limited (Decorative Division) Asia’s leading paint manufacturer today launched the advertising campaign for Weatherbond PRO- the high durable exterior emulsion offering up to 15 years of protection against extreme climate conditions like prolonged exposure to heat, and heavy spells of rain. Based on extensive research done by Nippon Paint’s R&D team, this product was developed for customers who need advance protection for their home exteriors in terms of extended fresh look, strong waterproofing and protection from Algal and Fungal attacks.
Some of the key features of Weatherbond PRO are Extreme durability with up to 15 years performance warranty, Algal and Fungal resistance, Dirt pick-up resistance, low VOC and water- resistant film that gives a polished look for years to come. These high-performance features ensure that homes are protected from climatic incursions, which lead to chalking, flaking, dampness and mouldy surfaces. Weatherbond PRO provides good film integrity and excellent colour retention, which ensures that exterior walls stay beautiful for years to come. Weatherbond PRO is a pure acrylic elastomeric exterior paint, powered by fibres, which aid in crack bridging and protection from hairline cracks. The Weatherbond PRO system provides effective waterproofing and anti-carbonation properties as well.
The revolutionary paint’s campaign was launched today by Mr. Mahesh S. Anand – President, Mr. Mark Titus – Director Marketing and Mr Ankur Bharadwaj – Director Sales at a press event.
Emphasizing the need for such a breakthrough product in the market, Mr. Mahesh S. Anand, President – Nippon Paint (India) Private Limited (Decorative Division) commented, “We are excited to launch this new advertising campaign on Weatherbond PRO featuring next Gen actors Tanya Hope, Ashwin Kumar and of course the Weatherbond Blobhy. With Weatherbond PRO, we wish to offer our customers a paint that can protect their home exteriors all year round to withstand extreme weather conditions. We have noticed that customers are increasingly aware of exterior paint’s role in not just beautification but also for protection from external elements. We are positive that the recovering markets combined with this advertising campaign will boost interest in the product amongst discerning homeowners. In addition, all of Nippon Paint’s products are green and eco-friendly.”
Talking about the brand campaign, Mr. Mark Titus, Director of Marketing – Nippon Paint (India) Private Limited (Decorative Division) said, “With the advent of monsoon in Karnataka, we expect a surge in demand for Weatherbond PRO as the paint addresses the various challenges faced by homeowners in maintaining their home exteriors. To accelerate awareness creation, we will be using a multi-platform approach to connect with consumers in Karnataka including mass advertising, BTL and Digital programs, to reach out to several of our key stakeholders including consumers, painters, dealers, architects and engineers.”
Nippon Paint Weatherbond PRO is commercially available in the Karnataka market through Nippon Paint’s select dealer partners. To learn more about Nippon’s Weatherbond PRO, visit https://www.nipponpaint.co.in/products/weatherbond-pro/
ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವರಾಗಿ ಆಯ್ಕೆಯಾಗಿರುವ ಉತ್ತರ ಕರ್ನಾಟಕ ಭಾಗದ ಪ್ರಭಾವೀ, ಜನಪ್ರೀಯ ಹಾಗೂ ಹೆಮ್ಮೆಯ ನಾಯಕರಾಗಿರುವ ಸನ್ಮಾನ್ಯ ಶ್ರೀ ಸಿ. ಸಿ. ಪಾಟೀಲ್ ಜೀ, ಸನ್ಮಾನ್ಯ ಶ್ರೀ ಮುರುಗೇಶ್ ನಿರಾಣಿ ಜೀ ಮತ್ತು ಸನ್ಮಾನ್ಯ ಶ್ರೀ ಶಂಕರ್ ಪಾಟೀಲ್ ಮುನೇನಕೊಪ್ಪ ಜೀ ಇವರೆಲ್ಲರಿಗೂ ಮಾಹಿತಿ ತಂತ್ರಜ್ಞಾನ ಉದ್ಯಮಿ, ಬಿಜೆಪಿ ಮುಖಂಡರು ಹಾಗೂ
ಅಖಿಲ ಭಾರತ ಲಿಂಗಾಯತ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ (ಕೋರವಾರ) ಇವರು ಹೃತ್ಪೂರ್ವಕವಾದ ಅಭಿನಂದನೆಗಳು ಸಲ್ಲಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿದ ಕ್ಷಣ.
ಈ ಸಂಧರ್ಭದಲ್ಲಿ ಶ್ರೀ ಬಸವರಾಜ ದಿಂಡೂರ ನಿಕಟ ಪೂರ್ವ್ ರಾಜ್ಯಾಧ್ಯಕ್ಷರು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ, ಶ್ರೀ ಜಿ.ಬಿ. ಪಾಟೀಲ (ಹೆಬ್ಬಾಳ) ಜಾಗತಿಕ ಲಿಂಗಾಯತ ಮುಖಂಡರು, ಎಂ. ಎಸ್ ಪಾಟೀಲ, ಮಹಾಂತೇಶ್ ತಾರಾಪುರ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರವು ಶ್ರೀ ಡಿ.ಎಸ್. ಅರುಣ್‍ರವರನ್ನು ರಾಜ್ಯ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಿಸಿದ್ದು, ಇವರು ದಿನಾಂಕ: 04-10-2019 ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಸರ್ಕಾರದ ಆದೇಶ ಸಂಖ್ಯೆ: ಹಿಂವಕ 210 ಬಿಸಿಎ 2018, ಬೆಂಗಳೂರು ದಿನಾಂಕ: 21-09-2018ರನ್ವಯ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವನ್ನು 2013ರ ಕಂಪನಿ ಕಾಯ್ದೆ ಅನ್ವಯ ದಿನಾಂಕ: 13-06-2019ರಂದು ನೋಂದಣಿ ಮಾಡಿಸುವ ಮೂಲಕ ಸ್ಥಾಪನೆ ಮಾಡಿದ್ದು, ಅಧ್ಯಕ್ಷರು ನಿಗಮವನ್ನು ಪ್ರಾರಂಭಿಕ ಹಂತದಿಂದ ಮುನ್ನಡೆಸಿರುತ್ತಾರೆ. ನಿಗಮದಿಂದ ಸ್ವಯಂ ಉದ್ಯೋಗ ನೇರ ಸಾಲ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿರುತ್ತದೆ. ನಿಗಮದ ವತಿಯಿಂದ ಪ್ರಥಮ ಬಾರಿಗೆ ಎಲ್ಲಾ ಯೋಜನೆಗಳ ಮಾಹಿತಿಯನ್ನು ವಿನೂತನವಾಗಿ ಕಿರುಚಿತ್ರದ ಮೂಲಕ ಹಾಗೂ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳನ್ನು ಬಳಸಿ ವ್ಯಾಪಕ ಪ್ರಚಾರ ನೀಡಲಾಗಿರುತ್ತದೆ. ಆನ್ ಲೈನ್ ಮುಖಾಂತರ ಅರ್ಜಿಗಳನ್ನು ಸ್ವೀಕರಿಸುವುದಲ್ಲದೇ ನಿಗಮದ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ DIGITALIZATION ಮಾಡಲಾಗಿದೆ. ಮಾನ್ಯ ಅಧ್ಯಕ್ಷರು ಹಾಗೂ ನಿಗಮದ ನಾಮ ನಿರ್ದೇಶಕರುಗಳ ಸಹಕಾರದಿಂದ ಕಳೆದ 02 ವರ್ಷಗಳಲ್ಲಿ ನಿಗಮಕ್ಕೆ ಬಿಡುಗಡೆಯಾಗಿರುವ ರೂ. 16.00 ಕೋಟಿಗಳ ಅನುದಾನದಲ್ಲಿ ರೂ. 15.50 ಕೋಟಿ ವೆಚ್ಚದಲ್ಲಿ 1565 ಫಲಾನುಭವಿಗಳಿಗೆ ಸಾಲ ನೀಡಿ ಶೇ.97 ರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಷಯವಾಗಿರುತ್ತದೆ. ಅಧ್ಯಕ್ಷರ ಪ್ರವಾಸದ ಸಮಯದಲ್ಲಿ ಸಾಲ-ಸೌಲಭ್ಯಗಳನ್ನು ಪಡೆದಿರುವಂತಹ ಫಲಾನುಭವಿಗಳು ಸಾಲ ಮರುಪಾವತಿಸಲು ಪ್ರತಿ ತಿಂಗಳು ದೂರವಿರುವ ಜಿಲ್ಲಾ ಕಛೇರಿಗಳಿಗೆ ಪ್ರಯಾಣ ಮಾಡಲು ಸಮಯ ಹಾಗೂ ಆರ್ಥಿಕ ವೆಚ್ಚದ ಹೊರೆ ಬೀಳುತ್ತದೆ ಎಂದು ಅಳಲು ತೋಡಿಕೊಂಡಿರುವ ಮೇರೆಗೆ ನಿರ್ದೇಶಕ ಮಂಡಳಿ ಸಭೆಯಲ್ಲಿ ಆನ್‍ಲೈನ್ ಮೂಲಕ ಮರುಪಾವತಿ ಪಡೆಯಲು ತೀರ್ಮಾನಿಸಲಾಗಿರುತ್ತದೆ. ಫಲಾನುಭವಿಗಳಿಂದ ಸಾಲ ಮರುಪಾವತಿ ಪಡೆಯಲು ಆನ್‍ಲೈನ್ ಮರುಪಾವತಿ ವಿಧಾನಗಳಾದಂತಹ PhonePe, Google Pay, Paytm etc., ಮೂಲಕ ಪಡೆಯುವ ನಿಟ್ಟಿನಲ್ಲಿ Razor Pay ಮತ್ತು ಕೇಂದ್ರ ಸರ್ಕಾರದ Pay Gov ಬಳಸಿ ಮರುಪಾವತಿಯನ್ನು ಸುಗಮವಾಗಿ ಪಾವತಿಸಲು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮೊಬೈಲ್ ಆ್ಯಪ್ ಅನ್ನು ನಿಗಮವು ಸಿದ್ದಪಡಿಸಿರುತ್ತದೆ. ಶೀಘ್ರದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ನಿಗಮದ ಮರುಪಾವತಿ ಮೊಬೈಲ್ ಆ್ಯಪ್ ಗೆ ಚಾಲನೆ ನೀಡಲು ಉದ್ದೇಶಿಸಲಾಗಿರುತ್ತದೆ. ಪ್ರಸ್ತುತ ನಿಗಮದಲ್ಲಿ ಪ್ರಥಮ ಸಾಲಿನಲ್ಲಿಯೇ ರೂ. 1.00 ಕೋಟಿಯಷ್ಟು ಮರುಪಾವತಿ ಮೊತ್ತ ಸ್ವೀಕೃತವಾಗಿದ್ದು, ಶೇ. 75 ರಷ್ಟು ಮರುಪಾವತಿ ಆಗಿರುವುದು ನಿಗಮದ ಸಾಧನೆಯಾಗಿರುತ್ತದೆ. ಸಾಲ ಮರುಪಾವತಿಗಾಗಿ ಬಲ್ಕ್ ಎಸ್.ಎಂ.ಎಸ್, ಕಿರು ಚಿತ್ರಗಳು ಹಾಗೂ ವಾಯ್ಸ್ ಕಾಲ್ ಮೂಲಕ ಮಾನ್ಯ ಅಧ್ಯಕ್ಷರು ಫಲಾನುಭವಿಗಳಿಗೆ ಸಂದೇಶ ನೀಡಿರುತ್ತಾರೆ. 2021-22 ನೇ ಸಾಲಿನಲ್ಲಿ ನಿಗಮಕ್ಕೆ ಒದಗಿಸಿದ ರೂ. 500.00 ಲಕ್ಷಗಳ ಅನುದಾನ ಸೇರಿದಂತೆ ಸ್ವೀಕೃತಿಯಾಗಿರುವ ಮರುಪಾವತಿ / ಉಳಿಕೆ ಮೊತ್ತ ರೂ. 620.00 ಲಕ್ಷಗಳಿಗೆ ಕ್ರಿಯಾ ಯೋಜನೆ ಹಾಗೂ ಈ ಕೆಳಕಂಡ ನೂತನ ಯೋಜನೆಗಳ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ (ಫುಡ್ ಟ್ರಕ್)
ವಾಸವಿ ಜಲಶಕ್ತಿ ಯೋಜನೆ (ಕೊಳವೆ ಬಾವಿ ಕೊರೆಯಲು ಸಾಲ)
ಜ್ಞಾನಜ್ಯೋತಿ ಯೋಜನೆ (ಪದವಿ ಪೂರ್ವ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್)
ಜೀವನರಕ್ಷಾ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ (45 ವರ್ಷ ಮೇಲ್ಪಟ್ಟವರಿಗೆ ಸಾಲ/ಸಹಾಯಧನ)
ಕರೋನದಿಂದ ಮೃತಪಟ್ಟಂತಹ ಫಲಾನುಭವಿಗಳ ಸಾಲ ಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.
2021-22 ನೇ ಸಾಲಿನಲ್ಲಿ ನಿಗಮದಿಂದ ಸರ್ಕಾರಕ್ಕೆ ಸಲ್ಲಿಸಲಾದ ನೂತನ ಪ್ರಸ್ತಾವನೆಗಳ ವಿವರ
ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ: ಆರ್ಯ ವೈಶ್ಯ ಸಮುದಾಯದವರು ಪಾರಂಪರಿಕವಾಗಿ ತಿಂಡಿ ತಿನಿಸುಗಳನ್ನು ತಯಾರಿ ಮಾಡುವುದರಲ್ಲಿ ನೈಪುಣ್ಯತೆ ಹೊಂದಿರುವುದರಿಂದ ಉತ್ತಮ ಗುಣಮಟ್ಟದ ಹಾಗೂ ಆರೋಗ್ಯಕರವಾದ ತಿನಿಸುಗಳನ್ನು ಆಹಾರ ವಾಹಿನಿಯಲ್ಲಿ ಪ್ರಾರಂಭಿಸಲು ನಿಗಮದಿಂದ ಪ್ರೋತ್ಸಾಹ ನೀಡುವ ಅವಶ್ಯಕತೆ ಇರುತ್ತದೆ. ಸದರಿ ಯೋಜನೆಯಡಿ 50 ಫಲಾನುಭವಿಗಳಿಗೆ ಬ್ಯಾಂಕ್‍ಗಳ ಸಹಯೋಗದಿಂದ ಘಟಕ ವೆಚ್ಚ ಒಂದಕ್ಕೆ ರೂ. 2.00 ಲಕ್ಷಗಳ ಸಹಾಯಧನವನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.
ವಾಸವಿ ಜಲಶಕ್ತಿ ಯೋಜನೆ: ಆರ್ಯ ವೈಶ್ಯ ಸಮುದಾಯದಲ್ಲಿ ಇರುವ ಸಣ್ಣ ರೈತರಿಗೆ ಕೃಷಿ ಅಭಿವೃದ್ಧಿಗಾಗಿ ನೀರಾವರಿ ಸೌಲಭ್ಯವನ್ನು ಒದಗಿಸುವುದು ಸದರಿ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಕೊಳವೆ ಬಾವಿ ಕೊರೆಯುವುದು, ಪಂಪ್‍ಸೆಟ್ ಅಳವಡಿಸುವುದು ಮತ್ತು ವಿದ್ಯುದ್ಧೀಕರಣವನ್ನು ಮಾಡಿಸಲು ಅತೀ ಕಡಿಮೆ ಬಡ್ಡಿ ದರ ಶೇ. 4 ರಂತೆ ಗರಿಷ್ಠ ರೂ. 2.00 ಲಕ್ಷ ಸಾಲ ಹಾಗೂ ವಿದ್ಯುದ್ಧೀಕರಣಕ್ಕೆ ರೂ. 50,000/- ಗಳ ಸಹಾಯಧನ ನೀಡಿ ಕೃಷಿಗೆ ಅನುವಾಗುವಂತೆ ನೆರವು ನೀಡಲು ಪ್ರಾರಂಭಿಕವಾಗಿ 30 ಫಲಾನುಭವಿಗಳಿಗೆ ಸಾಲ / ಸಹಾಯಧನ ನೀಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.
ಜ್ಞಾನಜ್ಯೋತಿ ಯೋಜನೆ: ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ ದ್ವಿತೀಯ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದಂತಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಮೆರಿಟ್ ಆಧಾರದನ್ವಯ ಉಚಿತವಾಗಿ ಲ್ಯಾಪ್‍ಟಾಪ್ ಅನ್ನು ರೂ. 60,000/- ಮಿತಿಯೊಳಗೆ 100 ಫಲಾನುಭವಿಗಳಿಗೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
ಜೀವನರಕ್ಷಾ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ: ಈ ಯೋಜನೆಯಲ್ಲಿ 45 ವರ್ಷ ಮೇಲ್ಪಟ್ಟ ಆರ್ಯ ವೈಶ್ಯ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕನಿಷ್ಠ ರೂ. 1,00,000/- ದಿಂದ ಗರಿಷ್ಠ ರೂ.2,00,000/-ಗಳ ಆರ್ಥಿಕ ನೆರವು ಹಾಗೂ ಈ ಮೊತ್ತದಲ್ಲಿ ಶೇ.10ರಷ್ಟು ಸಹಾಯಧನ ಹಾಗೂ ಉಳಿಕೆ ಮೊತ್ತವಾದ ಶೇ.90ರಷ್ಟು ಸಾಲವನ್ನು ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ನೀಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ.
ಹಾಜರಿದ್ದವರು:-
ಶ್ರೀ ಡಿ.ಎಸ್. ಅರುಣ್, ಅಧ್ಯಕ್ಷರು
ಶ್ರೀ ಎನ್. ಮಂಜೇಶ್, ನಿರ್ದೇಶಕರು
ಶ್ರೀಮತಿ ಉಮಾ ಸಾಯಿರಾಂ, ನಿರ್ದೇಶಕರು
ಶ್ರೀ ಜಡೆಮೂರ್ತಿ ಬೆನ್ನೂರು, ನಿರ್ದೇಶಕರು
ಶ್ರೀ ಸಿ.ಆರ್. ನರಸಿಂಹಮೂರ್ತಿ, ನಿರ್ದೇಶಕರು
ಶ್ರೀ ನಾಗೇಶ್ ಜಿ.ಪಿ., ನಿರ್ದೇಶಕರು
ಶ್ರೀ ಹೆಚ್.ಜೆ. ಹನುಮಂತಯ್ಯ, ನಿರ್ದೇಶಕರು
ಶ್ರೀಮತಿ ಕೆ. ದೀಪಶ್ರೀ, ಕೆ.ಜಿ.ಎಸ್. ವ್ಯವಸ್ಥಾಪಕ ನಿರ್ದೇಶಕರು
You must be logged in to post a comment.