Dr ಜ್ಯೋತಿ ರಾಥೋಡ್ ಅವರಿಗೆ “National Women’s Achievers Award”

National Press Council of India ವತಿಯಿಂದ ನೀಡುವ 2021 ನೇ ಸಾಲಿನ

National Women’s Achievers Award ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಗಣನೀಯ ಸಾಧನೆಯನ್ನು ಪರಿಗಣಿಸಿ Dr ಜ್ಯೋತಿ ರಾಥೋಡ್ ಅವರಿಗೆ ನೀಡಿ ಗೌರವಿಸಲಾಯಿತು

City Today News
9341997936

ಸಂಶೋಧನೆಗಳು ವರ್ತಮಾನದ ಸಂಗತಿಗಳೊಂದಿಗೆ ಮುಖಾಮುಖಿಯಾಗಲಿ-ಡಾ.ಸಿದ್ಧಲಿಂಗಯ್ಯ

ಸಂಶೋಧನೆ ಎನ್ನುವುದು ನಮ್ಮ ಅರಿವಿನ ವಿಸ್ತಾರಕ್ಕೆ ದಾರಿ ತೋರಿಸಬೇಕು.ಆದರೆ ಇತ್ತೀಚಿಗೆ ನಡೆಯುತ್ತಿರುವ ಸಂಶೋಧನೆಗಳು ಅಕಾಡೆಮಿಕ್ ವಲಯಕ್ಕೆ ಸೀಮಿತವಾಗಿ ಇದರಿಂದ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಸಂಶೋಧನೆಯು ವರ್ತಮಾನದ ವಿಚಾರಗಳಿಗೆ ಹೆಚ್ಚು ಮುಖಾಮುಖಿಯಾಗಬೇಕೆಂದು ಖ್ಯಾತ ಸಾಹಿತಿಗಳಾದ ಡಾ.ಸಿದ್ಧಲಿಂಗಯ್ಯ ಅವರು ತಿಳಿಸಿದರು.
ನಗರದ ಲೊಯೋಲ ಪದವಿ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾದೆಮಿ ಸಹಯೋಗದಲ್ಲಿ ನಡೆದ ‘ ಕನ್ನಡ ಸಂಶೋಧನೆ : ಸಮಕಾಲೀನ ಸವಾಲುಗಳು ‘ ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರ ‘ಪ್ರಭುತ್ವ,ಧರ್ಮ ಮತ್ತು ಜನತೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತ ಬೀದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಮತ್ತು ಅದಿವಾಸಿ ಜನರ ಬಗ್ಗೆ ಕ್ಷೇತ್ರಕಾರ್ಯದಿಂದ ಮಾಡುವ ಸಂಶೋಧನೆಯಿಂದ ನಾವು ಸರ್ಕಾರದ ಗಮನವನ್ನು ಸೆಳೆದು ಈ ನೆಲೆಯಲ್ಲಿ ಅವರಿಗೆ ಪರಿಹಾರ ಸೂಚಿಸಬಹುದಾಗಿದೆ ಎಂದರು. ಲೇಖಕ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಸಮಕಾಲೀನ ತಲ್ಲಣಗಳಿಗೆ ಮಿಡಿಯದ ಯಾವುದೇ ಸಂಶೋಧನೆ ಪ್ರಯೋಜನಕ್ಕೆ ಬರುವುದಿಲ್ಲ. ಸಂಶೋಧಕನಿಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕಾಗುತ್ತದೆ ಎಂದು ನುಡಿದರು. ಹಾಗೆಯೇ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರವಾದುದಾಗಿದೆ. ಇಂತಹ ವಿಚಾರಗಳ ಸಂಶೋಧನೆಯಿಂದ ಕನ್ನಡ ಸಾಹಿತ್ಯದ ಅನನ್ಯತೆಯನ್ನು ತಿಳಿಯಬಹುದು.ಇತ್ತೀಚಿನ ದಿನಗಳಲ್ಲಿ ಸಂಶೋಧಕರು ಸಂಶೋಧನೆಯ ಸಂದರ್ಭದಲ್ಲಿ ವಿಷಯದ ಆಯ್ಕೆಯಲ್ಲಿಯೇ ಎಡವುತ್ತಾರೆ.ಇದರಿಂದ ಅವರ ಸಂಶೋಧನೆಯು ಚಲನಶೀಲತೆಯಿಂದ ಕೊಡಿರದೆ ಜಡತ್ವಕ್ಕೆ ಮುಖಮಾಡುತ್ತದೆ.ಮ ಎಂದರು‌. ಆಶಯ ಭಾಷಣವನ್ನು ವಿಶ್ರಾಂತ ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯ ಮಾಡಿದರು.ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಪ್ರಬಂಧ ಮಂಡನಕಾರರು ತಮ್ಮ ಸಂಶೋಧನ ಲೇಖನಗಳನ್ನು ಮಂಡಿಸಿದರು.ಈ ಕಾರ್ಯಕ್ರಮದಲ್ಲಿ ವಾಗ್ಮಿಗಳಾದ ಡಾ.ಬೈರಮಂಗಲ ರಾಮೇಗೌಡ ,ಡಾ.ವಡ್ಡಗೆರೆ ನಾಗರಾಜಯ್ಯ ಮತ್ತು ಜಿ.ಟಿ. ನರೇಂದ್ರಕುಮಾರ್ ಉಪಸ್ಥಿತರಿದ್ದರು. ರವಿಕುಮಾರ್ ಪಿ.ಜಿ. ನಿರೂಪಿಸಿದರು‌.

City Today News
9341997936

COTTAGE CRAFT INDUSTRIES CELEBRATE “UGADI FESTIVE EXHIBITION”.

Bengaluru April 2021, COTTAGE CRAFT INDUSTRIES who are manufacturer of textile and Carpets from the last couple of decades. In its endeavour to promote Indian Handicrafts and Handlooms and to showcase the rich heritage of India. COTTAGE CRAFT INDUSTRIES is celebrating “UGADI” festival with special discount of upto 30% on all the handlooms and handicrafts from 01st – 18th April 2021,

At #144, M G Road, Shubharam complex, basement Bangalore – 560001.

On display are exquisite silk & cotton sarees (maheshwari, tussar, chanderi banarasi, rawsilk),silk stoles, pashmina shawls, Women’s wear-kurtis & dupattas ,Men’s wear-Kurtas, handloom fabrics, S.K Set,bedspread,cushion cover

On display of exquisite hand knotted carpets, brass, wood & marble handicrafts, Jewellery, paintings, pottery, Art objects each product reflects the rich culture and tradition of Indian crafts. Cottage crafts industries promotes sustainable lifestyle handloom and handicraft products striking a fine balance between the needs of the artisans, the customer and the environment

Presenting spectacular variety of Artifacts, each piece painstakingly handcrafted and authentic – sure to make an Everlasting impression on your exquisite taste and an eye for detail. This exhibition has something for everyone to browse through our extensive collection comprising of artisans from all over the country.

 

City Today News
9341997936

ಮರೆಯಾದ ಮಾಣಿಕ್ಯಗಳು

ದಿವಂಗತ ಮಾನ್ಯ ಶ್ರೀ ಕೆ.ಡಿ. ಪಾಟೀಲ (ಮಿಣಜಗಿ) ಗೌಡರು, ಉತ್ತರ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯ ತಾಳೀಕೋಟಿ ತಾಲೂಕಿನ ಮಿಣಜಗಿ ಗ್ರಾಮದ ಗೌಡರು. ತಂದೆ ಶ್ರೀ ದ್ಯಾಮನಗೌಡ ಪಾಟೀಲ ಹಾಗೂ ತಾಯಿ ಶ್ರೀಮತಿ ಅವ್ವಮ್ಮಗೌಡತಿ ದ್ಯಾಮನಗೌಡ ಪಾಟೀಲ ಸಾಕೀನ ಮಿಣಜಗಿ ದಂಪತಿಗಳ ಜೇಷ್ಠ ಸುಪುತ್ರನಾಗಿ ಜನಿಸಿ, ಬಾಲ್ಯದ ಜೀವನವನ್ನು ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಅಜ್ಜ (ತಾಯಿಯ ತಂದೆ) ಗಡೇದ ಗೌಡರು ಹಾಗೂ ಜಮೀನುದಾರ ಮನೆತನದ ದಿವಂಗತ ಶ್ರೀ ಭೀಮನಗೌಡ ಮಹಾಂತಪ್ಪಗೌಡ ಬಿರಾದಾರ ಹಾಗೂ ಅಜ್ಜಿ (ತಾಯಿಯ ತಾಯಿ) ದಿವಂಗತ ಶ್ರೀಮತಿ ನೀಲಮ್ಮಗೌಡತಿ ಭೀಮನಗೌಡ ಬಿರಾದಾರ ಸಾಕೀನ ಕೋರವಾರ ಇವರ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದರು.
ನಂತರ ಬೆಳೆದು ದೊಡ್ಡವರಾದ ಮೇಲೆ ತಮ್ಮ ಸ್ವಗ್ರಾಮ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮಕ್ಕೆ ತೆರಳಿದರು. ದಿವಂಗತ ಶ್ರೀ ಭೀಮನಗೌಡ ಮಹಾಂತಪ್ಪಗೌಡ ಬಿರಾದಾರ ಸಾಕೀನ ಕೋರವಾರ, ಇವರ ಮೊಮ್ಮಗಳಾದ ಶ್ರೀಮತಿ ಗೌರಾಬಾಯಿಗೌಡತಿ ರಾಮನಗೌಡ ಬಿರಾದಾರ ಸಾಕೀನ ಕೋರವಾರ ಇವರೊಂದಿಗೆ ವಿವಾಹವಾಯಿತು. ನಂತರ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ನಿಸ್ವಾರ್ಥ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಮಾಡಿ, ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರೆಂದೂ ಯಾವುದಕ್ಕೂ ಆಶೆಪಟ್ಟವರಲ್ಲ. ದಾನ ಧರ್ಮಕ್ಕೆ ಹೆಸರಾದವರು. ಜಿಲ್ಲೆಯ ಹಲವಾರು ಮಠ ಮಾನ್ಯಗಳಿಗೆ ತಮ್ಮ ಒಡೆತನದಲ್ಲಿರುವ ಕಲ್ಲು ಗಣಿಗಾರಿಕೆಗಳಿಂದ, ಲಾರಿ ಹಾಗೂ ಟ್ರ್ಯಾಕ್ಟರುಗಳ ಗಟ್ಟಲೆ ಕಲ್ಲಿನ ಪಸಿ೯ಗಳನ್ನು, ಕಬ್ಬಿಣವನ್ನು ಹಾಗೂ ಆಥಿ೯ಕ ಸಹಾಯವನ್ನೂ ಮಾಡಿದ್ದಾರೆ. ಎಲ್ಲ ವಗ೯ದ ಬಡಬಗ್ಗರಿಗೂ ಸಹಾಯ ಸಹಕಾರವನ್ನು ಮಾಡಿ ಸ್ಫಂಧಿಸಿದ್ದಾರೆ. ಇದರ ಹಿಂದೆ ಯಾವುದೇ ಸ್ವಾಥ೯ ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಡೆಯುವ ಉದ್ದೇಶವಿಲ್ಲದೇ, ತ್ಯಾಗದ, ಉದಾರ ಮನಸ್ಸಿನ ಹ್ರೃದಯಶಾಲಿಗಳಾಗಿದ್ದರು. ವಿಶಾಲ ಮನೋಭಾವನೆಯನ್ನು ಹೊಂದಿದವರು. ಅವರ ವ್ಯಕ್ತಿತ್ವವೇ ಹಾಗಿತ್ತು. ಎಷ್ಟೋ ಭಾರಿ ರಾಜಕೀಯ ಅವಕಾಶಗಳು(ಶಾಸಕ, ಸಂಸದ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಗಳು) ತಾನಾಗಿಯೇ ಇವರನ್ನು ಅರಸಿ ಬಂದರೂ ನೇರವಾಗಿ ತಿರಸ್ಕರಿಸಿ, ತ್ಯಾಗದ ಮನೋಭಾವನೆಯನ್ನು ಮೆರೆದವರು. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಇವರ ಜನಪ್ರೀಯತೆ ಇತ್ತು. ಎಲ್ಲಾ ಸಮಾಜದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ಎಲ್ಲ ಸಮಾಜದ ಜನಸಾಮಾನ್ಯರ ನ್ಯಾಯ ಪಂಚಾಯತಿಗಳು ಇವರ ಮನೆಯಲ್ಲಿಯೇ ಬಗಹರಿಸುತ್ತಿದ್ದರು. ಎಲ್ಲಾ ಇಲಾಖೆಗಳ ಅಧಿಕಾರಿಗಳೂ ನೇರವಾಗಿ ಮನೆಗೆ ಬಂದು ಗೌರವದಿಂದ ಜನಸಾಮಾನ್ಯರ ಕೆಲಸ ಮಾಡಿಕೊಡುತ್ತಿದ್ದರು. ತುಂಬಾ ಧೈರ್ಯವಂತ, ಹಠವಾದಿ, ಪ್ರಾಮಾಣಿಕ ವ್ಯಕ್ತಿತ್ವವುಳ್ಳ ಧೀಮಂತ ಜನಾನುರಾಗಿಯಾಗಿ ಹೆಸರು ಮಾಡಿದ್ದರು. ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಬ್ಯಾಂಕ್ ಅಧ್ಯಕ್ಷರಾಗಿ ಯಾವುದೇ ಆಶೆ ಆಮಿಷಕ್ಕೆ ಬಲಿಯಾಗದೇ ತಕ್ಕಡಿ ತೂಗಿದಂತೆ ಕಾಯ೯ನಿವ೯ಸುತ್ತಿದ್ದರು.

ಅಖಂಡ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವೀ ರಾಜಕಾರಣಿಗಳಲ್ಲೊಬ್ಬರಾದ ನಲವತವಾಡ ದೇಶಮುಖ ಮನೆತನದ ಹಿರಿಯ ನಾಯಕ ಮಾಜೀ ಸಚಿವರಾದ ದಿವಂಗತ ಮಾನ್ಯ ಶ್ರೀ ಜೆ.ಎಸ್. ದೇಶಮುಖ ಧನೇರ ಗರಡಿಯಲ್ಲಿ ಬೆಳೆದು, ನಂತರ ಮಾನ್ಯ ಶ್ರೀ ಕೆ.ಡಿ. ಪಾಟೀಲರು ಅಖಂಡ ವಿಜಯಪುರ ಜಿಲ್ಲೆಯಲ್ಲಿ ಮನೆಮಾತಾಗಿದ್ದರು.

ನಂತರ ನಲವತವಾಡ ದೇಶಮುಖ ಮನೆತನದ ಮಾಜೀ ಸಚಿವರಾದ ದಿವಂಗತ ಮಾನ್ಯ ಶ್ರೀಮತಿ ವಿಮಲಾಬಾಯಿ. ಜೆ. ದೇಶಮುಖ ಅಮ್ಮನವರೂ ದೈವಾಧೀನರಾದರು. ಈ ಮೂರು ವ್ಯಕ್ತಿಗಳು ದೈವಾಧೀನರಾದ ಮೇಲೆ ಮುದ್ದೇಬಿಹಾಳ ತಾಲೂಕು ಇಂತಹ ಮೇರು ವ್ಯಕ್ತಿತ್ವದ ಜನನಾಯಕರನ್ನು ನೋಡಲೇ ಇಲ್ಲ. ಮಾನ್ಯ ಶ್ರೀ ಕೆ.ಡಿ. ಪಾಟೀಲ (ಮಿಣಜಗಿ) ಗೌಡರು ದೈವಾಧೀನರಾದ ಮೇಲೆ ಅವರ ಹೆಸರು ಇನ್ನೂ ಅಜರಾಮರವಾಗಿದೆ. ಇಂದಿಗೂ ಕೆ.ಡಿ. ಪಾಟೀಲ ಮಿಣಜಗಿ ಗೌಡರು ಮಾಡಿದ ಕೆಲಸಗಳ ಬಗ್ಗೆ ಹಾಗೂ ಅವರ ಧೈರ್ಯ, ದಿಟ್ಟ ನಿಲುವು ಹಾಗೂ ಹಠವಾದಿತನದ ಬಗ್ಗೆ ಜನ ಮಾತನಾಡುತ್ತಾರೆ. ಎಕೆಂದರೆ ಇವರ ಮಾಡಿದ ಕಾಯ೯ಗಳು ಸತ್ಯ, ನ್ಯಾಯ, ನೀತಿ, ಧರ್ಮ ಮತ್ತು ನಿಸ್ವಾರ್ಥದಿಂದ ಕೂಡಿದವುಗಳಾಗಿದ್ದವು‌. ಎಲ್ಲ ಸಮಾಜದವರನ್ನೂ ವಿಶ್ವಾಸ ದಿಂದ ಪ್ರೀತಿಯಿಂದ ಕಾಣುತ್ತಿದ್ದರು. ಇವೆಲ್ಲ ಅಂಶಗಳು ಅವರ ಜನಪ್ರೀಯತೆಯನ್ನು ಹೆಚ್ಚಿಸಿದ್ದವು.

ವಿಶೇಷವಾಗಿ ಪೋಲಿಸ್ ಇಲಾಖೆ ಹಾಗೂ ಅಧಿಕಾರಿಗಳು ಮಿಣಜಗಿ ಗೌಡರೆಂದರೆ ತುಂಬಾ ಇಷ್ಟ ಪಡುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಇದಲ್ಲದೇ ದಿವಂಗತ ಮಾನ್ಯ ಶ್ರೀ ಜೆ.ಎಸ್. ದೇಶಮುಖ ಧನೇರಿಗೂ ಮಿಣಜಗಿ ಕೆ.ಡಿ. ಪಾಟೀಲರೆಂದರೆ ಅಪಾರ ಪ್ರೀತಿ ವಾತ್ಸಲ್ಯವಿತ್ತು.
ಪ್ರಸ್ತುತ ಈ ನಾಯಕರುಗಳು ಇಹಲೋಕ ತ್ಯಜಿಸಿದ್ದರೂ ಇವರ ನೆನಪುಗಳು ಇನ್ನೂ ಹಚ್ಚುಹಸುರಾಗಿ ಉಳಿದಿವೆ.
ಈ ನಾಯಕರುಗಳು ಅಕಾಲಿಕ ಮರಣ ಹೊಂದದೆ ಇನ್ನೂ ಹಲವಾರು ವರ್ಷಗಳ ಕಾಲ ಬದುಕಿದ್ದರೆ ವಿಜಯಪುರ ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಅನೂಕೂಲವಾಗುವ ಸಾಧ್ಯತೆಗಳಿದ್ದವು ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ.

City Today News
9341997936

ಅಮೆಜಾನ್ ಫುಡ್ ಮಾರ್ಚ್ 26 ರಿಂದ 2021 ರ ಏಪ್ರಿಲ್ 4 ರವರೆಗೆ ಬೆಂಗಳೂರಿನಲ್ಲಿ ‘ಗ್ರೇಟ್ ಫುಡಿ ಫೆಸ್ಟ್’ ಘೋಷಿಸಿದೆ

ಅಮೆಜಾನ್ ಫುಡ್ ಮಾರ್ಚ್ 26 ರಿಂದ ಏಪ್ರಿಲ್ 4, 2021 ರವರೆಗೆ 10 ದಿನಗಳ ಗ್ರೇಟ್ ಫುಡಿ ಫೆಸ್ಟ್ ಸುದೀರ್ಘ ಆಹಾರದ ಉತ್ಸಾಹವನ್ನು ಘೋಷಿಸಿತು. ಈ ವಿಶಿಷ್ಟ ಆಹಾರ ಉತ್ಸವದ ಸಮಯದಲ್ಲಿ, ಬೆಂಗಳೂರಿನ ಗ್ರಾಹಕರು ಜನಪ್ರಿಯ ಮತ್ತು ನೈರ್ಮಲ್ಯ ಪ್ರಮಾಣೀಕೃತ ರೆಸ್ಟೋರೆಂಟ್‌ಗಳಿಂದ ರುಚಿಕರವಾದ ಆರ್ಡರ್ ಮೇಲೆ ಉತ್ತಮ ಡೀಲುಗಳನ್ನು ಮತ್ತು ಕ್ಯಾಶ್‌ಬ್ಯಾಕ್‌ಗಳನ್ನು ಆನಂದಿಸಬಹುದು. ಮತ್ತು ಅನುಕೂಲಕರ ಮನೆ ಬಾಗಿಲಿನ ವಿತರಣೆಯೊಂದಿಗೆ ಮತ್ತು ಕ್ಲೌಡ್ ಅಡುಗೆಮನೆಗಳಲ್ಲಿ ಭಾಗಿಯಾಗಿ.
ಆಹಾರ ಉತ್ಸವದ ಅಂಗವಾಗಿ, ಬೆಂಗಳೂರಿನ ಗ್ರಾಹಕರು ಈ ರೀತಿಯ ಮೊದಲ ಅಂತರ್-ನೆರೆಹೊರೆಯ ಆಹಾರ ಮುಖಾಮುಖಿಯಲ್ಲಿ ಭಾಗವಹಿಸಬಹುದು, ಅಲ್ಲಿ ಅವರು ‘ಗ್ರೇಟ್ ಫುಡಿ ಫೆಸ್ಟ್’ ಸಮಯದಲ್ಲಿ ಆದೇಶಗಳನ್ನು ನೀಡುವ ಮೂಲಕ ಪ್ರವೇಶಿಸಬಹುದು. ಗ್ರಾಹಕರು ತಮ್ಮ ಸ್ಥಳವನ್ನು ಆಧರಿಸಿ ಬೆಂಗಳೂರಿನಾದ್ಯಂತ 5 ತಂಡಗಳಾಗಿ ವಿಂಗಡಿಸಲಾಗಿದೆ – ಉತ್ತರ ಬೆಂಗಳೂರು ಬಿಂಜರ್ಸ್, ಪೂರ್ವ ಬೆಂಗಳೂರು ಬೆಲ್ಟರ್ಸ್, ಮಧ್ಯ ಬೆಂಗಳೂರು ಕ್ರಂಚರ್ಸ್, ಪಶ್ಚಿಮ ಬೆಂಗಳೂರು ಮಂಚರ್ಸ್ ಮತ್ತು ದಕ್ಷಿಣ ಬೆಂಗಳೂರು ಸ್ನ್ಯಾಕರ್ಸ್. ಉತ್ಸವದ ಕೊನೆಯಲ್ಲಿ ಗರಿಷ್ಠ ಸಂಖ್ಯೆಯ ಆರ್ಡರ್ಗಳನ್ನು ಹೊಂದಿರುವ ನೆರೆಹೊರೆಯ ತಂಡವು ಪಂದ್ಯವನ್ನು ಗೆಲ್ಲುತ್ತದೆ. ಫೇಸ್-ಆಫ್ ವಿಜೇತರು ಹೆಚ್ಚುವರಿ 10% ಕ್ಯಾಶ್ಬ್ಯಾಕ್ ಅನ್ನು ಆನಂದಿಸಬಹುದು, ಆದರೆ ಪ್ರೈಮ್ ಸದಸ್ಯರು ಮುಂದಿನ ಒಂದು ತಿಂಗಳಲ್ಲಿ ಅವರು ನೀಡುವ ಪ್ರತಿಯೊಂದು ಆರ್ಡರಿನಲ್ಲೂ 15% ಕ್ಯಾಶ್ಬ್ಯಾಕ್ ಪಡೆಯಬಹುದು.
‘ಗ್ರೇಟ್ ಫುಡಿ ಫೆಸ್ಟ್’ ಸಮಯದಲ್ಲಿ, ಗ್ರಾಹಕರು ಬರ್ಗರ್ ಕಿಂಗ್, ಟ್ಯಾಕೋ ಬೆಲ್, ಸಬ್‌ವೇ, ಬೆಹ್ರೌಜ್ ಬಿರಿಯಾನಿ, ಫಾಸೋಸ್, ಚಾಯ್ ಪಾಯಿಂಟ್, ಫ್ರೆಶ್ ಮೆನು, ಮೊಜೊ ಪಿಜ್ಜಾ, ಪಂಜಾಬ್ ಗ್ರಿಲ್, ಬಾಕ್ಸ್ 8 ನಂತಹ ಉನ್ನತ ಮಳಿಗೆಗಳಿಂದ ಉತ್ತಮ ವ್ಯವಹಾರಗಳನ್ನು ಆರ್ಡರ್ ಮಾಡಬಹುದು ಮತ್ತು ಆನಂದಿಸಬಹುದು. ನಗರದ ಮೆಚ್ಚಿನವುಗಳಾದ ಅಡಿಗಾಸ್, ಎಂಪೈರ್, ಎ 2 ಬಿ, ಆನಂದ್ ಸ್ವೀಟ್ಸ್, ಕಣ್ಣನ್ ಕೆಫೆ, ಟೊಸ್ಕಾನೊ, ಪಿಜ್ಜಾ ಬೇಕರಿ, ಫ್ಯಾಟಿ ಬಾವೊ, ಟೋಸ್ಟ್ ಮತ್ತು ಟಾನಿಕ್, ಟೋಯಿಟ್, ಬರ್ಮಾ ಬರ್ಮಾ, ಮಾಮಾಗೊಟೊ, ಬ್ರಿಕ್ ಓವನ್, ಗಿಲ್ಲಿಸ್, ಬಿಗ್ ಪಿಚರ್, ಕಪೂರ್ಸ್ ಕೆಫೆ, ಚಿನಿಟಾ, ವಿಂಡ್‌ಮಿಲ್ಸ್ ಕರಕುಶಲ ವಸ್ತುಗಳು, ಹಿಮಕರಡಿ ಮತ್ತು ಇನ್ನೂ ಅನೇಕ ಹೋಟೆಲುಗಳಿಂದ ಆರ್ಡರ್ ಮಾಡಬಹುದು.
ಈವೆಂಟ್‌ನ ಒಂದು ಭಾಗವಾಗಿ, ಅಮೆಜಾನ್ ತೆರೆಮರೆಯಲ್ಲಿ ಹೋಗಿ ನಗರದ ಕೆಲವು ನೈರ್ಮಲ್ಯದ ರೆಸ್ಟೋರೆಂಟ್‌ಗಳ ಸೂಕ್ಷ್ಮ ನೋಟವನ್ನು ತರುತ್ತಿದೆ. ಮೊಟ್ಟಮೊದಲ ಬಾರಿಗೆ, ಗ್ರಾಹಕರು ಬೆಂಗಳೂರಿನ ಕೆಲವು ಅಪ್ರತಿಮ ಭಕ್ಷ್ಯಗಳ ಹಿಂದಿನ ಕಥೆಗಳನ್ನು ಅವುಗಳನ್ನು ರಚಿಸಿದ ಬಾಣಸಿಗರಿಂದ ನೇರವಾಗಿ ಕೇಳುತ್ತಾರೆ, ಬೆಂಗಳೂರಿನ ತೆರೆದ ಅಡಿಗೆಮನೆಗಳನ್ನು ಅನ್ವೇಷಿಸುತ್ತಾರೆ ಮತ್ತು ವಿಶೇಷ ಕೊಡುಗೆಗಳನ್ನು ಅನ್ಲಾಕ್ ಮಾಡಲು ಮತ್ತು ಮತ್ತು ಕೂಪನ್‌ಗಳಿಗಾಗಿ ಫುಡ್ ಹಂಟ್‌ನಂತಹ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ .
ಅಮೆಜಾನ್ ಆಹಾರವನ್ನು ಅಮೆಜಾನ್.ಇನ್ ಅಪ್ಲಿಕೇಶನ್‌ನಲ್ಲಿ ಪ್ರವೇಶಿಸಬಹುದು ಅಥವಾ ಕ್ಯಾಟಗರಿ ಬಾರ್‌ನಲ್ಲಿರುವ ‘ಫುಡ್’ ಐಕಾನ್ ಕ್ಲಿಕ್ ಮಾಡುವ ಮೂಲಕ, ಕೇವಲ ‘ಅಮೆಜಾನ್ ಫುಡ್’ ಗಾಗಿ ಹುಡುಕುವ ಮೂಲಕ ಅಥವಾ ‘ಶಾಪಿಂಗ್ ಬೈ ಕ್ಯಾಟಗರಿ’ ಅಡಿಯಲ್ಲಿ ‘ಅಮೆಜಾನ್ ಫುಡ್’ ಆಯ್ಕೆ ಮಾಡುವ ಮೂಲಕ ಪ್ರವೇಶಿಸಬಹುದು. ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ here.

City Today News
9341997936