ಧರ್ಮಸ್ಥಳ ಧರ್ಮಾಧಿಕಾರಿ ಡಾ . ವೀರೇಂದ್ರ ಹೆಗಡೆ ಅವರ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ

ಬೆಂಗಳೂರು – ಧರ್ಮಸ್ಥಳ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಯವರು ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ಮಾಡಿದ್ದಾರೆ ಎಂದು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ . ಈ ಹೇಳಿಕೆಯನ್ನು ಜಾಗೃತ ಭಕ್ತ ಸಮುದಾಯ ವ್ಯಾಪಕವಾಗಿ ಖಂಡಿಸುತ್ತದೆ . ಗುರುವಾಯನಕೆರೆಯ ಸೋಮನಾಥ ನಾಯಕ್ ಎನ್ನುವ ವ್ಯಕ್ತಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಮತ್ತು ಕೆಲವು ಪತ್ರಿಕೆಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಜಮೀನಿನ ಕುರಿತು ಅನಗತ್ಯ ಹಾಗೂ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ . ಆದರೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ . ವೀರೇಂದ್ರ ಹೆಗಡೆಯವರು ಇಂತಹ ಯಾವುದೇ ಹುನ್ನಾರ ಮಾಡಿಲ್ಲ ಎಂದು ಸದ್ಭಾವನ ಜ್ಯೋತಿ ರಥಯಾತ್ರೆ ಸಮಿತಿ ರಾಜ್ಯಾಧ್ಯಕ್ಷ ಎಂ . ಕೃಷ್ಣಮೂರ್ತಿ , ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್‌ ಸಾರ್‌ , ಕರವೇ ನಗರ ಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಹೋರಾಟಗಾರ ಎನ್.ವಿ. ಲಕ್ಷ್ಮಿನ ನಾರಾಯಣ ಆದ ನಾವುಗಳು ಹೇಳುತ್ತಿದ್ದೇವೆ . ಅಪಪ್ರಚಾರ ಮಾಡುವ ಗುರುವಾಯನಕೆರೆಯ ಸೊಮನಾಥ್ ನಾಯಕ್ ಅಂತಹ ವ್ಯಕ್ತಿಗಳಿಗೆ ಸತ್ಯಾಂಶವನ್ನು ತಿಳಿಸಿಕೊಡುವುದೇ ನಮ್ಮ ಉದ್ದೇಶ . ಈ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸುವುದೇನೆಂದರೆ ಕ್ಷೇತ್ರಕ್ಕೆ ಸಂಬಂಧಿಸಿದ ಜಮೀನುಗಳ ಪಹಣಿ ಪತ್ರಿಕೆಗಳನ್ನು ಪರಿಶೀಲಿಸಿದಾಗ 1970 ರ ದಶಕದಿಂದ 2021 ರ ವರೆಗೆ ದಸ್ತಾವೇಜ್ ನಲ್ಲಿ ದಾಖಲಾಗಿರುವ ಅಂದರೆ 51 ವರ್ಷದ RTC / ಪಹಣಿ ಪತ್ರಿಕೆಗಳನ್ನು ಕೂಲಂಕುಷವಾವಾಗಿ ಪರಿಶೀಲಿಸಿ ನೋಡಿದಾಗ ಎಲ್ಲಿಯೂ ದೇವರ ಹೆಸರಿನ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ಬರೆಸಿಕೊಂಡಿರುವುದು ಕಂಡು ಬಂದಿಲ್ಲ . ಬೆಳ್ತಂಗಡಿ ಭೂ – ನ್ಯಾಯ ಮಂಡಳಿಯ ಆದೇಶದ ಪ್ರತಿಯನ್ನು ಪಡೆದುಕೊಂಡು ಅವಲೋಕಿಸಿದಾಗ ಅದರಲ್ಲಿಯೂ ಕೂಡ ದೇವರ ಹೆಸರಿನಲ್ಲಿರುವ ಆಸ್ತಿಯನ್ನು ಹೆಗ್ಗಡೆಯವರು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿರುವಂತಹ ಯಾವುದೇ ಕೃತ್ಯದ ಉಲ್ಲೇಖ ಇರುವುದಿಲ್ಲ . ಬದಲಾಗಿ ಹೆಗ್ಗಡೆಯವರಲ್ಲಿ ಹೆಚ್ಚುವರಿ ಜಮೀನು ಇಲ್ಲ ಅಂದರೆ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿ ಇಲ್ಲ . ಎಲ್ಲವೂ ಪಾರದರ್ಶಕವಾಗಿದ್ದು ಸದರಿ ಸರ್ಕಾರದ ದಸ್ತಾವೇಜಿನ ದಾಖಲೆಯಲ್ಲಿ ಮಿತಿಗಿಂತ ಜಾಸ್ತಿ ಜಮೀನು ಹೆಗ್ಗಡೆಯವರಲ್ಲಿ ಇಲ್ಲ ಎನ್ನುವ ಆದೇಶ ಮಾತ್ರ ಇದೆ . ವಾಸ್ತವಿಕತೆ ಹೀಗೆ ‘ ಮಿತಿಗಿಂತ ಜಾಸ್ತಿ ಇಲ್ಲ ಎಂಬ ಅಂಶ ಕಂಡು ಬಂದಿದೆ . ಆದರೆ ಸೋಮನಾಥ ನಾಯಕ್ ಎನ್ನುವವರು ನಿರಾಧಾರ ರಹಿತ ಆರೋಪ ಮಾಡಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ . ಸತ್ಯದ ತಲೆ ಮೇಲೆ ಹೊಡೆಯಲು ಹೋಗಿರುವುದು ಅಕ್ಷಮ್ಯ ಅಪರಾಧವಾಗಿದೆ ಇದನ್ನು ಬಿಟ್ಟು ಕೊಟ್ಟು ಸತ್ಯದ ದರ್ಶನ ಮಾಡಿಕೊಳ್ಳುವುದು ಅಗತ್ಯವಾಗಿದೆ ಅಲ್ಲವೇ . ಭಾರತದ ಸರ್ವೋಚ್ಛ ನ್ಯಾಯಾಲಯ ಹಾಗೂ ಮೈಸೂರು ಹೈಕೋರ್ಟ್ ಆದೇಶದಲ್ಲಿಯೂ ಕೂಡ ಹೆಗ್ಗಡೆಯವರು ಪರಂಪರಾಗತವಾಗಿ ಸಾವಿರಾರು ಎಕರೆ ಜಮೀನು ಹೊಂದಿದವರಾಗಿದ್ದಾರೆ ಎನ್ನುವ ಉಲ್ಲೇಖ ಕೂಡ ಇದೆ ಈ ಮೂರ್ಖ ಶಿಖಾಮಣಿಗಳು ಇದನ್ನು ಅವಲೋಕಿಸಿದಂತೆ ಕಾಣುವುದಿಲ್ಲ ಎಂಬ ಸಂಶಯ ಮೂಡುತ್ತದೆ . ರಾಜ್ಯದ ಯಾವುದೇ ದಾಖಲೆ ನೋಡಿದರೂ ದೇವರ ಆಸ್ತಿಯನ್ನು ಹೆಗ್ಗಡೆಯವರು ಬರೆಸಿಕೊಂಡಿದ್ದಾರೆ ಎಂಬ ಅಂಶ ಕಂಡು ಬರುವುದಿಲ್ಲ . ಅಲ್ಲದೇ ತಮ್ಮ ಹತ್ತಿರ ಇರುವ ಸಾವಿರಾರು ಎಕರೆ ಭೂಮಿಯನ್ನು ಈಗಾಗಲೇ ಬಡವರಿಗೆ ಹಂಚಿರುವ ಹೆಗ್ಗಡೆಯವರು ಜಾತ್ಯಾತೀತ ಮನೋಧರ್ಮಭಾವ ವುಳ್ಳವರಾಗಿರುವ ಪೂಜ್ಯರು ಇಂದಿಗೂ ಕೂಡ ಮಾನವ ಧರ್ಮೋದ್ದಾರಕ ರಾಗಿದ್ದಾರೆ ನೇತ್ರಾವತಿ ತಟದಲ್ಲಿರುವ ಧರ್ಮಸ್ಥಳದ ಶ್ರೀ ಕ್ಷೇತ್ರ ಸಾರಿ ಸಾರಿ ಹೇಳುತ್ತ ಬಂದಿದೆ . ಆರೋಪ ಮಾಡುವವರ ಚರಿತ್ರೆಯನ್ನು ಜಾಲಾಡಿದಾಗ ಇದರ ಹಿಂದೆ ಕಾಣದ ಕೈಗಳ ನಿಗೂಢವಾದ ರಹಸ್ಯವೇ ಇದೆ . ಆರೋಪ ಮಾಡಿದವರ ಚರಿತ್ರೆ ಕೆದಕುತ್ತ ಸಾಗಿದಂತೆ ಅವರ ಕರ್ಮಕಾಂಡ ಹೇಳತೀರದು . ಬಡವರನ್ನು ವಂಚಿಸಿ ಸರಕಾರವನ್ನೂ ವಂಚಿಸಿ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎನ್ನುವ ಆರೋಪಗಳಿವೆ . ಧರ್ಮಸ್ಥಳ ಧರ್ಮಾಧಿಕಾರಿ ಡಾ . ವಿರೇಂದ್ರ ಹೆಗಡೆಯವರ ಮೇಲೆ ಅನಗತ್ಯ ಆರೋಪ ಮಾಡುತ್ತಿರುವ ಇವರ ಉದ್ದೇಶ ಬೇರೆಯದೇ ಇದೆ . ಮತ್ತೊಮ್ಮೆ ಇಂತಹ ಆಧಾರ ರಹಿತ ಹಾಗೂ ಸತ್ಯಕ್ಕೆ ದೂರವಾದ ಆರೋಪ ಮಾಡಬಾರದೆಂದು ಈ ಮೂಲಕ ಅವರಿಗೆ ಎಚ್ಚರಿಕೆ ನೀಡುತ್ತಿದ್ದೇವೆ .

ಜಾಗೃತ ಭಕ್ತ ಸಮುದಾಯ

City Today News
9341997936

“ಕ್ಯಾಬ್ ಚಾಲಕ ಸಾವು” ಬೆಂಗಳೂರಿನ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಆತ್ಮಹತ್ಯೆ

ಕ್ಯಾಬ್ ಚಾಲಕ ಸಾವು

ಬೆಂಗಳೂರಿನ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ , ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಸರಿ ಸುಮಾರು 2.30 ರ ವೇಳೆಗೆ ತೀರಿಹೋಗಿದ್ದಾರೆ, ಹ್ಯಾಪ್ ಆಧಾರಿತ ಕ್ಯಾಬ್ ಸಂಸ್ಥೆಗಳ ಹಾವಳಿ ಹೆಚ್ಚಾಗಿದೆ, ಒಂದು ದಿನಕ್ಕೆ ಎರಡು ಟ್ರಿಪ್ಪು ಕೂಡ ಸಿಗುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ,

ಈ ಘಟನೆಯನ್ನು ಖಂಡಿಸಿ ಇಂದು ಬೆಂಗಳೂರಿನ ಏರ್ಪೋರ್ಟ್ ಟ್ಯಾಕ್ಸಿ ಡ್ರೈವರ್ ಗಳು ಪ್ರತಿಭಟನೆ ನಡೆಸಲಿದ್ದಾರೆ,

City Today News
9341997936

ಮಹಿಳೆಯರ ಮೇಲೆ ಇತೀಚಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು ಅವರ ಸುರಕ್ಷತೆ ಅತೀ ಅಗತ್ಯ

ಮಹಿಳೆಯರ ಸುರಕ್ಷತೆ ಹಾಗೂ ಅವರ ಮೇಲಿನ ದೌರ್ಜನ್ಯ ಗಳು, ವಿವಾಹ ವಿಚ್ಚೇದನಾದಂತಹ ಸಮಸ್ಯೆಗಳ ಪರಿಹಾರಕ್ಕೆ ನೂತನವಾಗಿ
ಮಾನವ ಹಕ್ಕುಗಳ ಕೌಟುಂಬಿಕ ಸಲಹಾ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ ಎಂದು ನಿವೃತ್ತ ಸೈನಿಕ, ವಕೀಲ ಸಿಂಹ ಶಿವುಗೌಡ ಭಾರತೀಯ ತಿಳಿಸಿದ್ದಾರೆ

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳೆಯರ ಮೇಲೆ ಇತೀಚಿನ ದಿನಗಳಲ್ಲಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು ಅವರ ಸುರಕ್ಷತೆ ಅತೀ ಅಗತ್ಯ ವಾಗಿದೆ. ವಿವಾಹ ವಿಚ್ಚೇದನ ದಂತಹ ಸಮಸ್ಯೆ ನಿವಾರಣೆಗೆ ಕೌನ್ಸಿಲಿಂಗ್ ಅಗತ್ಯವಿದೆ ಎಂದರು.
ಸಂಸ್ಥೆಯ ನಿರ್ದೇಶಕ ಲಯನ್ ಗಜೇಂದ್ರ ನಾಯ್ಡು ಮಾತನಾಡಿ ವಿವಾಹ ವಿಚ್ಛೇದನದಂತಹ ಪ್ರಕರಣಗಳಲ್ಲಿ ಕೌನ್ಸಿಲಿಂಗ್ ಅಗತ್ಯವಿದೆ.ಇದರ ಮೂಲಕ ಹೆಣ್ಣು ಮಕ್ಕಳಿಗೆ ಸ್ಥೈರ್ಯ ನೀಡುವುದು ಮುಖ್ಯವಾಗಿದೆ. ಕುಟುಂಗಳನ್ನು ಒಂದು ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕಿ ಲಯನ್ ಸುಮಾ ಮಹೇಂದರ್ ಮಾತನಾಡಿ, ಮಹಿಳೆಯರ ಪರವಾಗಿ ಹೆಚ್ಚಿನ ಮಟ್ಟದಲ್ಲಿ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಪುರುಷರು ಕೂಡ ಮಹಿಳೆಯರಿಂದ ಶೋಷಣೆಗೆ ಒಳಗಾಗುತ್ತಿದ್ದು ಅವರ ಪರವಾಗಿ ನಿಲ್ಲುವ ಅಗತ್ಯವಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮೋಹನ್ ಕುಮಾರ್
ಸಹ ಕಾರ್ಯದರ್ಶಿ ನೀಲಾ ಪಟೇಲ್ ಮದ್ದೂರು, ರಜನಿ ರಾಜ್ ಮತ್ತಿತರರು ಹಾಜರಿದ್ದರು.

City Today News
9341997936

ಅಗರ್ವಾಲ್ ಸಮಾಜ ಯುವ ಸಂಘವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಪ್ ಲಾಂಚ್ ಮತ್ತು ಟೀಮ್ ಲಾಂಚ್ ಕಾರ್ಯವನ್ನು ಆಯೋಜಿಸಿತು.

ಅಗರ್ವಾಲ್ ಸಮಾಜ ಯುವ ಸಂಘವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಪ್ ಲಾಂಚ್ ಮತ್ತು ಟೀಮ್ ಲಾಂಚ್ ಕಾರ್ಯವನ್ನು ಆಯೋಜಿಸಿತು.

ಸಮಾರಂಭದಲ್ಲಿ ಟೂರ್ನಮೆಂಟ್ ಟ್ರೋಫಿಯನ್ನು ಪ್ರಾರಂಭಿಸಲಾಯಿತು.  ಪಂದ್ಯಾವಳಿಯ ವಿಜೇತರಿಗೆ ನೀಡಲಾಗುವ ಟ್ರೋಫಿ 4.5 ಅಡಿ ಮತ್ತು ಕೈಯಿಂದ ಮಾಡಿದ ಟ್ರೋಫಿಯಾಗಿದೆ.

ಎಲ್ಲಾ 12 ತಂಡದ ಟಿ-ಶರ್ಟ್ ಮತ್ತು ಲೋಗೊಗಳನ್ನು ಸಂಘಟಕರು, ತಂಡದ ಮಾಲೀಕರು, ಕ್ಯಾಪ್ಟನ್‌ಗಳು ಮತ್ತು ಅತಿಥಿಗಳು ಪ್ರಾರಂಭಿಸಿದರು.

  ಸಂಘಟಕರು ಮಹಿಳಾ ಮತ್ತು ಮಕ್ಕಳ ಕ್ರಿಕೆಟ್ ಘೋಷಿಸಿದರು.

ಕಾರ್ಯದ ಸಮಯದಲ್ಲಿ ತಂಡದ ಎಲ್ಲಾ ಮಾಲೀಕರು ಮತ್ತು ಪಂದ್ಯಾವಳಿಯ ಪ್ರಾಯೋಜಕರನ್ನು ಬೆಂಬಲ ಮತ್ತು ಕೊಡುಗೆಗಾಗಿ ಸನ್ಮಾನಿಸಲಾಯಿತು.

ಮುಂದಿನ ದಿನಗಳಲ್ಲಿ ಅಗರ್ವಾಲ್ ಸಮಾಜ ಕರಣಾಟಕ ಅಂತರ ಅಗರ್ವಾಲ್ ಸಮಾಜ ರಾಜ್ಯ ಮತ್ತು ಅಂತರ ಸಮಾಜ ಕ್ರಿಕೆಟ್ ಪಂದ್ಯಾವಳಿಗಳನ್ನು ಸಹ ಆಯೋಜಿಸಲಿದೆ ಎಂದು ಸಂಘಟಕರು ಘೋಷಿಸಿದ್ದಾರೆ

ಮುಖ್ಯ ಅತಿಥಿಗಳು: ಸಂಜಯ್ ಗರ್ಗ್, ಅಧ್ಯಕ್ಷ;  ವಿಜಯ್ ಸರಫ್ ಕಾರ್ಯದರ್ಶಿ;  ಸತೀಶ್ ಗೋಯಲ್, ಖಜಾಂಚಿ, ಕುನಾಲ್ ಗೋಯೆಲ್- ಯುವ ಅಧ್ಯಕ್ಷ, ಅಗರ್ವಾಲ್ ಸಮಾಜ ಕರ್ನಾಟಕ.

ಇತರ ಉಪಸ್ಥಿತಿಯವರು: ನೇಹಾ ದಾಲ್ಮಿಯಾ, ಸಂಜಯ್ ಮೊಹ್ತಾ, ಶಿವ ತೆಕ್ರಿವಾಲ್, ಸಂಜಯ್ ಜಲ್ಲನ್, ವಿವೇಕ್ ಗೋಯೆಲ್, ಆಕಾಶ್ ಅಗರ್ವಾಲ್, ಅಂಕಿತ್ ಅಗರ್ವಾಲ್, ನಾರಾಯಣ್ ಗುಪ್ತಾ, ಮತ್ತು ಅಗರ್ವಾಲ್ ಸಮಾಜ ಮುಖ್ಯ ಸಮಿತಿ, ಯುವ ಮತ್ತು ಮಹಿಲಾ ಸಮಿತಿಯ ಎಲ್ಲಾ ಸಮಿತಿ ಸದಸ್ಯರು.

City Today News
9341997936

Agarawal Samaj Yuva Sangh organised a Cup Launch and Team Launch function in Chinnaswamy Stadium.

Agarawal Samaj Yuva Sangh organised a Cup Launch and Team Launch function in Chinnaswamy Stadium.

During the function the Tournament Trophy was launched. The trophy which will be Given to the winner of the Tournament is 4.5 Feet and is handmade trophy.

Also all the 12 team T-shirt’s and Logos were launched by the organisers, Team Owners , Captains and Guests.

The Organizers announced Women’s and children Cricket.

During the Function all the team owners and Sponsors of the Tournament were felicitated for the support and contribution.

The organisers also announced that in the coming days Agarawal Samaj Karanataka will also be organzing Inter Agrawal Samaj State and Inter Samaj cricket tournaments also

Chief Guests: Sanjay Garg, President; Vijay Saraf Secretary; Satish Goyal, Treasurer, Kunal Goel- Yuva President,Agrawal Samaj Karnataka.

Other Present were: Neha Dalmia, Sanjay Mohta, Shiv Tekriwal, Sanjay Jallan,Vivek Goel, Akash Agarwal, Ankit Agarwal, Narayan Gupta, and all Committee members of Agarawal Samaj Main Committe, Yuva and Mahila Committee.

City Today News
9341997936