ಕಾಲೇಜುಗಳ ಆರಂಭ;   ನವೆಂಬರ್‌ 17ರಿಂದ ಪದವಿ, ಎಂಜನೀಯರಿಂಗ್‌, ಡಿಪ್ಲೊಮೋ ಕಾಲೇಜುಗಳ ಆರಂಭ; ಎಸ್‌ಒಪಿ ಬಿಡುಗಡೆ ಮಾಡಿದ ಡಿಸಿಎಂ

ಬೆಂಗಳೂರು: ಕೋವಿಡ್‌-19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತವಾಗಿರುವ ಪದವಿ, ಎಂಜನೀಯರಿಂಗ್‌ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್‌ 17ರಿಂದ ಆರಂಭಿಸುವ ಬಗ್ಗೆ ಯುಜಿಸಿ ಮಾರ್ಗಸೂಚಿಯಂತೆ ಉನ್ನತ ಶಿಕ್ಷಣ ಇಲಾಖೆ ಎಸ್‌ಒಪಿ (ಪ್ರಮಾಣಿತ ಕಾರ್ಯಚರಣಾ ವಿಧಾನ) ಯನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; ಆಫ್‌ಲೈನ್‌ ತರಗತಿಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಈ ಎಸ್‌ಒಪಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸೂಚನೆಗಳಿದ್ದು, ಅವುಗಳ ಪ್ರಕಾರವೇ ತರಗತಿಗಳು ನಡೆಯುತ್ತವೆ. ಹಾಗೆಯೇ, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ನಿಗದಿತ ಸೂಚನೆಗಳಿವೆ ಎಂದು ಡಿಸಿಎಂ ತಿಳಿಸಿದ್ದಾರೆ.

ಸ್ನಾತಕೋತ್ತರ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ:
ಆಯ್ಕೆ 1: ಭೌತಿಕ ತರಗತಿಗಳಿಗೆ ಹಾಜರಾಗುವುದು

  • ಭೌತಿಕ ತರಗತಿಗಳನ್ನು ನವೆಂಬರ್‌ 17ರಿಂದ ಪ್ರಾರಂಭಿಸುವುದು. ಭೌತಿಕವಾಗಿ ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಅವರ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಮಾಡಿದ ಒಪ್ಪಿಗೆ ಪತ್ರ ಪಡೆದು ಭೌತಿಕ ತರಗತಿಗಳನ್ನು ನಡೆಸುವುದು.
  • ಭೌತಿಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧಪಡಿಸಿಕೊಳ್ಳುವುದು.
  • ಬೋಧನಾ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಅವಶ್ಯಕವಿದ್ದಲ್ಲಿ ಪಾಳಿ ವ್ಯವಸ್ಥೆಯ (shift system) ಮೇರೆಗೆ ನಡೆಸುವುದು.

ಆಯ್ಕೆ-2: ಆನ್‌ಲೈನ್ ತರಗತಿಗಳ ಮೂಲಕ ಅಭ್ಯಾಸ ಮಾಡುವುದು:

  • ಭೌತಿಕ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿಗಳನ್ನು ನಡೆಸುವುದು. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಯಸಿದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿ ದಿನವು ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸುವುದು.
  • ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯಕವಿರುವಂತೆ ತರಗತಿ ವೇಳಾ ಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ದಪಡಿಸಿಕೊಳ್ಳುವುದು.

*ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂಗಳ ಅಧ್ಯಯನ ಸಾಮಗ್ರಿಗಳನ್ನು ಪ್ರತಿ Period/ Sessionಗೆ ಸಂಬಂಧಿಸಿದAತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ವಾಟ್ಸಾಪ್/ಇ-ಮೇಲ್ ಮೂಲಕ ಕಡ್ಡಾಯವಾಗಿ ನೀಡುವುದು. ಅಧ್ಯಯನ ಸಾಮಗ್ರಿಗಳು Video Lectures, PowerPoint Presentations, E-Notes, E-Books, Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿ ಇರತಕ್ಕದ್ದು. ಸದರಿ ಅಧ್ಯಯನ ಸಾಮಗ್ರಿಗಳನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್‌ ಮಾಡತಕ್ಕದ್ದು.

ಸ್ನಾತಕೋತ್ತರ, ಅಂತಿಮ ವರ್ಷ ಹೊರತುಪಡಿಸಿ ಇತರೆ ವಿದ್ಯಾರ್ಥಿಗಳಿಗೆ:

*ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವುದು. ಈ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿದಿನವೂ ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸುವುದು.

*ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗ ಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯವಿರುವಂತೆ ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ದಪಡಿಸಿಕೊಳ್ಳುವುದು.

*ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂಗಳ ಅಧ್ಯಯನ ಸಾಮಾಗ್ರಿಗಳನ್ನು ಪ್ರತಿ Period/ Session ಗೆ ಸಂಬAಧಿಸಿದAತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ ವಾಟ್ಸಾಪ್/ ಇ-ಮೇಲ್ ಮೂಲಕ ಕಡ್ಡಾಯವಾಗಿ ನೀಡುವುದು. ಅಧ್ಯಯನ ಸಾಮಗ್ರಿಗಳು Video Lectures, PowerPoint Presentations, E-Notes, E-Books, Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿಇರತಕ್ಕದ್ದು. ಈ ಅಧ್ಯಯನ ಸಾಮಗ್ರಿಗಳನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್‌ ಮಾಡತಕ್ಕದ್ದು.

*ಆನ್‌ಲೈನ್/ಸಂಪರ್ಕ ತರಗತಿಗಳಿಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಆನ್-ಕ್ಯಾಂಪಸ್ ಹಾಗೂ ಆಫ಼್-ಕ್ಯಾಂಪಸ್ ಹಾಸ್ಟೆಲ್‌ಗಳಲ್ಲಿ ಉಳಿದು ಕೊಳ್ಳಬಹುದು.

ಸಾಮಾನ್ಯ ಮಾರ್ಗಸೂಚಿಗಳು:

*ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯಸಾಮಾಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು.

*ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೋವಿಡ್-19 (RTPCR)‌ ಪರೀಕ್ಷೆಯನ್ನು ಮಾಡಿಕೊಂಡು Test Report Negative ಇದ್ದಲ್ಲಿ ಮಾತ್ರ ವಿ‍ಶ್ವವಿದ್ಯಾಲಯ / ಕಾಲೇಜುಗಳಿಗೆ ಹಾಜರಾಗುವುದು.

*ಎಲ್ಲಾ ಕಾಲೇಜುಗಳು ತಮ್ಮ ತಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗೊಂದಿಗೆ Mapping ಮಾಡಿಕೊಳ್ಳವುದು.

*ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ ತನ್ನ ಸಹಪಾಠಿಗಳಲ್ಲೇನಾದರು ಕೋವಿಡ್‌ ಗೆ ಸಂಬಂಧಿಸಿದ ಲಕ್ಷಗಳನ್ನು ಕಂಡುಬಂದಲ್ಲಿ ಅದನ್ನು ಕೋವಿಡ್‌ ಕಾರ್ಯಪಡೆ / ಸೆಲ್‌ ಗಮನಕ್ಕೆ ತರುವಂತೆ ಸೂಚಿಸುವುದು.

*ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ಸ್ವತ: ತಂದು ಅವರೇ ಉಪಯೋಗಿಸುವುದು.

*ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್‌ ಮತ್ತು Face Shield/ Visor ಅನ್ನು ಧರಿಸುವುದು. ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್‌ಗಳನ್ನು ತೆರೆಯುವಂತಿಲ್ಲ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎನ್‌.ಸಿ.ಸಿ ಹಾಗೂ ಎನ್‌.ಎಸ್‌.ಎಸ್‌ ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.

ಪ್ರವೇಶ/ ನಿರ್ಗಮನ ಕೇಂದ್ರಗಳ ಸುರಕ್ಷತಾ ಕ್ರಮಗಳು:

*ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಸಾನಿಟೈಸರ್ಗಳ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು.

*ಪ್ರವೇಶ/ ನಿರ್ಗಮನ ಸ್ಥಳಗಳಲ್ಲಿ ಜನಸಂದಣಿಯನ್ನು ತಪ್ಪಿಸಬೇಕು. ವಿವಿಧ ಕೋರ್ಸುಗಳಿಗೆ ಸೀಮಿತ ವಿದ್ಯಾರ್ಥಿ ಸಂಖ್ಯೆಯನ್ನು ನಿಗಧಿಗೊಳಿಸಿ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನದ ಸಮಯಗಳನ್ನು ಅನುಸರಿಸಬೇಕು.

*ಆವರಣದ ಒಳಗೆ ಮತ್ತು ಹೊರಗೆ ಕ್ಯೂ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ನೆಲದ ಮೇಲೆ 6 ಅಡಿಗಳ ಅಂತರವಿರುವ ನಿರ್ದಿಷ್ಟ ಗುರುತುಗಳನ್ನು ಮಾಡುವುದು ಮತ್ತು ಅದನ್ನು ಪಾಲಿಸಬೇಕು.

*ಒಂದು ವೇಳೆ ಪ್ರವೇಶ/ ನಿರ್ಗಮನಕ್ಕೆ ಒಂದಕ್ಕಿಂತ ಹೆಚ್ಚು ಗೇಟ್ ಗಳನ್ನು ಸಂಸ್ಥೆಯು ಹೊಂದಿದ್ದಲ್ಲಿ, ಜನಸಂದಣಿಯನ್ನು ತಪ್ಪಿಸಲು, ಎಲ್ಲಾ ಗೇಟ್ ಗಳನ್ನು ಸಾಕಷ್ಟು ಎಚ್ಚರಿಕೆಯಿಂದ ಬಳಸಬೇಕು. ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನದ ಮೇಲ್ವಿಚಾರಣೆಯನ್ನು ಮಾಡಬೇಕು.

*ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿಯ ಥರ್ಮಲ್‌ ತಪಾಸಣೆ, ಮುಖಗವಸು/ ಮಾಸ್ಕ್ ಧರಿಸುವುದು, ಕೈಗಳನ್ನು ಶುದ್ಧಿಗೊಳಿಸುವುದನ್ನು ಎಲ್ಲಾ ಪ್ರವೇಶ ಕೇಂದ್ರಗಳಲ್ಲಿ ಖಚಿತಪಡಿಸಿಕೊಳ್ಳಬೇಕು.

*ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣಗಳನ್ನು ಹೊಂದಿರುವವರು ಶಿಕ್ಷಣ ಸಂಸ್ಥೆಯ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸುವುದು.

ತರಗತಿ ಕೊಠಡಿಗಳು ಮತ್ತು ಇತರ ಕಲಿಕಾ ತಾಣಗಳು ಹೇಗಿರಬೇಕು:

*ಎಲ್ಲಾ ಕಲಿಕಾ ಸ್ಥಳಗಳಲ್ಲಿ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬೇಕು. ಆಗಾಗ್ಗೆ ಸ್ಪರ್ಶಿಸಲ್ಪಡುವ ಡೋರ್ ನಾಬ್ ಗಳು, ಎಲಿವೇಟರ್ ಬಟನ್ ಗಳು, ಹ್ಯಾಂಡ್ ರೈಲ್ ಗಳು, ಕುರ್ಚಿಗಳು, ಬೆಂಚುಗಳು, ವಾಶ್ ರೂಮ್ ಫಿಕ್ಚರ್ ಗಳು ಇತ್ಯಾದಿ, ಎಲ್ಲಾ ತರಗತಿಗಳು, ಪ್ರಯೋಗಾಲಯಗಳು, ಲಾಕರ್ ಗಳು, ಪಾರ್ಕಿಂಗ್ ಪ್ರದೇಶಗಳು ಹಾಗೂ ತರಗತಿಗಳಲ್ಲಿ ಸ್ವಚ್ಛಗೊಳಿಸುವಿಕೆ ಮತ್ತು ನಿಯತ ಸೋಂಕು ತಡೆಗಟ್ಟುವಿಕೆ (1% ಸೋಡಿಯಂ ಹೈಪೋಕ್ಲೋರೈಟ್ ಬಳಸಿ) ಪ್ರಕ್ರಿಯೆಯನ್ನು ತರಗತಿಗಳು ಪ್ರಾರಂಭವಾಗುವ ಮುನ್ನ ಮತ್ತು ದಿನದ ಕೊನೆಯಲ್ಲಿ ಕಡ್ಡಾಯಗೊಳಿಸಬೇಕು. ಬೋಧನಾ ಸಾಮಗ್ರಿಗಳು, ಕಂಪ್ಯೂಟರ್, ಲ್ಯಾಪ್ ಟಾಪ್, ಪ್ರಿಂಟರ್ ಗಳನ್ನು ನಿಯಮಿತವಾಗಿ 70% ಆಲ್ಕೋಹಾಲ್ ಸ್ವೈಪ್ ನಿಂದ ಒರೆಸಿ ಸೋಂಕು ತೆಗೆಯಬೇಕು.

*ತರಗತಿಗಳು, ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್ ಗಳು, ಗ್ರಂಥಾಲಯಗಳು ಮತ್ತು ಅಲ್ಲಿನ ಆಸನಗಳನ್ನು ಸ್ವಚ್ಚವಾಗಿಡಬೇಕು ಹಾಗೂ ಆಸನಗಳ ನಡುವೆ ಅಂತರವನ್ನು ಗುರುತಿಸಬೇಕು.

*ಉಗುಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು.

*ಆರೋಗ್ಯ ಸೇತು ಆ್ಯಪ್’ ಅನ್ನು ಮೊಬೈಲ್ ನಲ್ಲಿ ಅನುಸ್ಥಾಪನೆಗೊಳಿಸಿ ಬಳಸುವ ಕುರಿತು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸಲಹೆ ನೀಡುವುದು.

*ಅವಶ್ಯಕತೆಗೆ ಅನುಸಾರವಾಗಿ ಜಿಲ್ಲಾ ಆರೋಗ್ಯ ಕೇಂದ್ರದ ಸಹಾಯದೊಂದಿಗೆ ವೈದ್ಯಕೀಯ ಸಮಾಲೋಚಕರನ್ನು ವಿದ್ಯಾರ್ಥಿಗಳು ಭೇಟಿಮಾಡಿ ತಮ್ಮ ಆತಂಕ, ಮಾನಸಿಕ ಒತ್ತಡ ಅಥವಾ ಭಯದ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸುವುದು.

*ಸಾಮಾಜಿಕ ಅಂತರ ಕಾಪಾಡಲು ಶಿಕ್ಷಣ ಸಂಸ್ಥೆಗಳ ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕ, ಚಿಹ್ನೆ, ಭಿತ್ತಿಪತ್ರಗಳನ್ನು ಪ್ರದರ್ಶಿಸಬೇಕು. ಸಂಸ್ಥೆಯ ಕೋವಿಡ್ ಕೋಶ/ ಕಾರ್ಯಪಡೆಯ ವಿವರಗಳನ್ನು ಪ್ರಚುರಗೊಳಿಸಬೇಕು (ತುರ್ತು ಸಂಖ್ಯೆ, ಸಹಾಯವಾಣಿ ಸಂಖ್ಯೆ, ಇಮೇಲ್ ಐಡಿ ಮತ್ತು ಸಂಪರ್ಕ).

*ಶಿಕ್ಷಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸುವುದನ್ನು ಕಡ್ಡಾಯಗೊಳಿಸುವುದು.

*ಶಿಕ್ಷಣ ಸಂಸ್ಥೆಗಳು ಅಗತ್ಯಾನುಸಾರ ಬೋಧನಾ ಸಮಯವನ್ನು ವಿಸ್ತರಿಸಬಹುದು ಅಥವಾ ಪರಿವರ್ತಿಸುವುದು.

*ತರಗತಿ ಕೊಠಡಿ, ಕಲಿಕಾ ತಾಣಗಳಲ್ಲಿ ಸ್ಥಳಾವಕಾಶದ ಲಭ್ಯತೆಯನ್ನು ಆಧರಿಸಿ, ತರಗತಿಗಳಿಗೆ ಹಾಜರಾಗಲು 50% ವರೆಗಿನ ವಿದ್ಯಾರ್ಥಿಗಳಿಗೆ ರೊಟೇಷನ್ ಆಧಾರದ ಮೇಲೆ ಅವಕಾಶ ನೀಡುವುದು.

*ಸಂದರ್ಶಕರಿಗೆ ಪ್ರವೇಶ ನೀಡಬಾರದು ಅಥವಾ ಅವರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಪ್ರವೇಶಾವಕಾಶ ನೀಡಿದಲ್ಲಿ ಸಂದರ್ಶಕರ ಸಂಪೂರ್ಣ ಸಂಪರ್ಕ ವಿವರಗಳನ್ನು ಅವನು/ ಅವಳು ಭೇಟಿ ಯಾಗುವ ವ್ಯಕ್ತಿಗಳ ಹೆಸರುಗಳ ಜೊತೆಗೆ ನಿರ್ವಹಿಸತಕ್ಕದ್ದು.

*ವಿದ್ಯಾರ್ಥಿಗೆ ಅಥವಾ ಅವರ ಮನೆಯಲ್ಲಿ ಯಾವುದೇ ವ್ಯಕ್ತಿಗೆ ಕೋವಿಡ್ ಸೊಂಕಿನ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ, ಮೂಗು ಸೋರುವುದು ಮುಂತಾದ ಲಕ್ಷಣಗಳಿದ್ದಲ್ಲಿ ವಿದ್ಯಾರ್ಥಿಯನ್ನು ಕಾಲೇಜಿಗೆ ಕಳುಹಿಸದೆ ಹಾಗೂ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಪಡೆಯುವ ಬಗ್ಗೆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಅರಿವು ಮೂಡಿಸುವುದು.

*ವಿದ್ಯಾರ್ಥಿಗಳು ಕಾಲೇಜಿನ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಕೈಗಳನ್ನು ಸ್ವಚ್ಚಗೊಳಿಸಿಕೊಳ್ಳಲು ಅವಕಾಶ ಕಲ್ಪಿಸತಕ್ಕದ್ದು. ಅಗತ್ಯತೆಗೆ ಅನುಸಾರ ಥರ್ಮಲ್ ಸ್ಕ್ಯಾನರ್ ಗಳನ್ನು ಒದಗಿಸಿಕೊಳ್ಳುವುದು ಮತ್ತು ಪ್ರತಿ ದಿನ ಪ್ರತಿ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ಕಡ್ಡಾಯವಾಗಿ ಪರೀಕ್ಷಿಸುವುದು.

*ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಿಸುವ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗೆ ರೋಗ ಲಕ್ಷಣಗಳು ಇದ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ಕ್ರಮವಹಿಸುವುದು ಹಾಗೂ ಅವರಿಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ಸೂಚಿಸುವುದು ಮತ್ತು ಮಾರ್ಗದರ್ಶನ ನೀಡುವುದು.

*ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿಯು ಕಡ್ಡಾಯವಾಗಿ ಮತ್ತು ಸರಿಯಾಗಿ ಮಾಸ್ಕ್ (ಮುಖ ಕವಚ) ಧರಿಸಿರುವುದನ್ನು ಖಚಿತಪಡಿಸಿಕೊಳ್ಳುವುದು. ವಿದ್ಯಾರ್ಥಿಗಳು ಕಾಲೇಜಿನ ಆವರಣ, ತರಗತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್, ಉಪಹಾರ ಗೃಹ, ಕ್ರೀಡಾಂಗಣ, ಬ್ಯಾಂಕ್ ಸೇರಿದಂತೆ ಯಾವುದೇ ಸ್ಥಳ ಹಾಗೂ ಸಂದರ್ಭಗಳಲ್ಲಿಯೂ ಗುಂಪು ಸೇರದೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸೂಚಿಸುವುದು.

*ವಿದ್ಯಾರ್ಥಿಗಳು / ಕಾಲೇಜು ಸಿಬ್ಬಂದಿ ಬಳಸಿದ ಮಾಸ್ಕ್ ಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಸೂಕ್ತ ಕಸದ ತೊಟ್ಟಿ / ಬುಟ್ಟಿಗಳ ವ್ಯವಸ್ಥೆ ಮಾಡುವುದು.

*ಕಾಲೇಜಿನ ಪ್ರಾಂಶುಪಾಲರು, ಬೋಧಕರು ಮತ್ತು ಆಡಳಿತ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಅಗಿಂದಾಗ್ಗೆ ಸಾಬೂನು/ ಸ್ಯಾನಿಟೈಸರ್ ನಿಂದ ಕೈತೊಳೆದುಕೊಳ್ಳುವುದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.

*ಕಾಲೇಜಿನ ಪ್ರಾಂಶುಪಾಲರು, ಬೋಧಕರು, ಆಡಳಿತ ಸಿಬ್ಬಂದಿಗಳಲ್ಲಿ ಯಾರಿಗಾದರೂ ಕೋವಿಡ್ ಸೊಂಕಿನ ಲಕ್ಷಣಗಳು ಇದ್ದಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸುವುದು.

*ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯಕರ, ಶುಚಿ ಮತ್ತು ಸ್ವಾಸ್ಯವಾದ ಆಹಾರ ಪದಾರ್ಥಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸುವುದು ಹಾಗೂ ವಿದ್ಯಾರ್ಥಿಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವ್ಯಾಯಾಮ, ಯೋಗ, ಸರಳ ಪ್ರಾಣಾಯಾಮಗಳನ್ನು ಸಾಮಾಜಿಕ ಅಂತರದೊಂದಿಗೆ ಮಾಡುವಂತೆ ಪ್ರೇರೇಪಿಸುವುದು.

*ಹೆಚ್ಚಿನ ಸಲಹೆ, ಮಾರ್ಗದರ್ಶನ ಮತ್ತು ಸಂಶಯಗಳ ನಿವಾರಣೆಗಾಗಿ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವುದು. ವಿದ್ಯಾರ್ಥಿಗಳ ಪೋಷಕರಿಂದ ನಿರಂತರ ಪ್ರತಿಕ್ರಿಯೆ (Continuous Feedback) ಪಡೆಯಲು ಕಾಲೇಜು ಹಂತದಲ್ಲಿ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು.

*ಕಾಲೇಜು ಹಂತದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಕೋವಿಡ್-19 ರ ಸಾಂಕ್ರಾಮಿಕ ಹಿನ್ನಲೆಯಲ್ಲಿ ಉದ್ಭವಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಬೋಧಕವರ್ಗ ಹಾಗೂ ಬೋಧಕೇತರ ಸಿಬ್ಬಂದಿಯನ್ನೊಳಗೊಂಡ ಕೋವಿಡ್ ಕಾರ್ಯಪಡೆ (Taskforce) ಯನ್ನು ಪ್ರಾಂಶುಪಾಲರು ತಮ್ಮ ಅಧ್ಯಕ್ಷತೆಯಲ್ಲಿ ರಚಿಸುವುದು.

*ವಿಶ್ವವಿದ್ಯಾಲಯ ಹಂತದಲ್ಲಿ ಕೋವಿಡ್ ಮಾರ್ಗಸೂಚಿಗಳ ಅನುಸರಣೆ ಹಾಗೂ ಕೋವಿಡ್-19ರ ಸಾಂಕ್ರಾಮಿಕ ಹಿನ್ನಲೆಯಲ್ಲಿ ಉದ್ಭವಿಸುವಂತಹ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಕೋವಿಡ್ ಕಾರ್ಯಪಡೆ (Taskforce) ಯನ್ನು ರಚಿಸಲು ಉಪಕುಲಪತಿಗಳು ಕ್ರಮಕೈಗೊಳ್ಳುವುದು.

*ಪ್ರತಿ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಿಂದ ನಿಯತವಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಪಡೆಯಲು ಕ್ರಮಕೈಗೊಳ್ಳುವುದು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದರ ಬಗ್ಗೆ ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರೊAದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಕಾಲೇಜುಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ವಿಶ್ವವಿದ್ಯಾಲಯವು ನಿಗಾವಹಿಸುವುದು.

*ಕಾಲೇಜಿನಲ್ಲಿ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಿಟ್ಟು ಅದರಲ್ಲಿ ಕೋವಿಡ್ ಪ್ರಥಮ ಚಿಕಿತ್ಸೆಗಾಗಿ ಕೋವಿಡ್ ಕಿಟ್‌ಗಳನ್ನು ಹಾಗೂ ಅಗತ್ಯತೆಗೆ ಅನುಸಾರವಾಗಿ ಪಲ್ಸ್-ಆಕ್ಸಿಮೀಟರ್‌ಗಳನ್ನು ಒದಗಿಸಿಕೊಳ್ಳುವುದು.

*ಕ್ಯಾಂಪಸ್ ನಲ್ಲಿ ಸಾಕಷ್ಟು ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

*ಮಾನಸಿಕ ಆರೋಗ್ಯ & ಯೋಗಕ್ಷೇಮಕ್ಕೆ ಶಿಕ್ಷಣ ಸಚಿವಾಲಯದ ವೆಬ್ ಸೈಟ್ ನಲ್ಲಿ ರಚಿಸಲಾಗಿರುವ “ಮನೋದರ್ಪಣ್” ಹೆಸರಿನ ವೆಬ್ ಪೇಜ್ ನ ಬಗ್ಗೆ ಎಲ್ಲಾ ಬೋಧಕ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಅರಿವು ಮೂಡಿಸಬೇಕು. ಈ ವೆಬ್ ಪೇಜ್ ಸಲಹೆ, ಪ್ರಾಯೋಗಿಕ ಸಲಹೆಗಳು, ಭಿತ್ತಿಪತ್ರಗಳು, ವೀಡಿಯೋಗಳು, ಮನೋಸಾಮಾಜಿಕ ಬೆಂಬಲ, FAQ ಮತ್ತು ಆನ್ ಲೈನ್ ಪ್ರಶ್ನೆ ಮಾಡುವ ಅವಕಾಶಗಳನ್ನು ಒಳಗೊಂಡಿದ್ದು, ಇವುಗಳ ಸದುಪಯೋಗ ಪಡಿಸಿಕೊಳ್ಳಲು ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಟೆಲಿ ಕೌನ್ಸಲಿಂಗ್ ನೀಡುವ ರಾಷ್ಟ್ರೀಯ ಟೋಲ್ ಫ್ರೀ ಸಹಾಯವಾಣಿ (84454440632) ಅನ್ನು ಸ್ಥಾಪಿಸಲಾಗಿದ್ದು, ಅದನ್ನು ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಬಳಸಿಕೊಳ್ಳುವುದು.

*ಕೇಂದ್ರ ಆರೋಗ್ಯ & ಕುಟುಂಬ ಕಲ್ಯಾಣ ಸಚಿವಾಲಯ https://www.mohfw.gov.in ನವರ ಕೆಳಕಂಡ ವಿಡಿಯೋ ಮತ್ತು ಡಾಕ್ಯುಮೆಂಟ್ ಲಿಂಕ್ ಗಳನ್ನು ವಿಶ್ವವಿದ್ಯಾಲಯ/ ಕಾಲೇಜು ವೆಬ್ ಸೈಟ್ ನಲ್ಲಿ ಪ್ರಕಟಿಸುವುದು ಮತ್ತು ಸದರಿ ಲಿಂಕ್ ಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ಇ-ಮೇಲ್, ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಮತ್ತು ಟ್ವಿಟರ್ ಮೂಲಕ ಹಂಚಿಕೊಳ್ಳುವುದು.

*ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಲು ಪ್ರಾಯೋಗಿಕ ಸಲಹೆಗಳು. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ನೋಡಿ..
https://www.youtube.com/watch?v=uHB3WJsLJ8s&feature=youtube

ಕೋವಿಡ್‌-19ರ ಸಮಯದಲ್ಲಿ ನಮ್ಮ ಮನಸ್ಸನ್ನು ನಿಭಾಯಿಸುವ ಬಗ್ಗೆ. ಡಾಕ್ಯೂಮೆಂಟ್‌ ನೋಡಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
https://www.mohfw.gov.in/pdf/MindingourmindsduringCoronaeditedat.pdf

*ಕೋವಿಡ್‌-19 ಸಮಯದಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ವಿವಿಧ ಆರೋಗ್ಯ ತಜ್ಞರ ಅಭಿಪ್ರಾಯಗಳನ್ನು ಪಾಲಿಸುವುದು. ಅದಕ್ಕೆ ಅಗತ್ಯವಾದ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ..
https://www.youtube.com/watch?v=iuKhtSehp24&feature=youtube

ನಡೆವಳಿಕೆಯ ಸ್ವಾಸ್ಥ್ಯ: ಟೋಲ್ ಫ್ರೀ ಸಹಾಯವಾಣಿ – 0804611007 

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಜಾಗೃತಿ:

*ಕೋವಿಡ್-19 ಸೋಂಕು ಹೇಗೆ ಹರಡುತ್ತದೆ, ಸೋಂಕಿನ ಸಾಮಾನ್ಯ ಲಕ್ಷಣಗಳು ಮತ್ತು ಅದರ ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದು.‌

*ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಉದಾಹರಣೆಗೆ, ಕೈಗಳನ್ನು ಹೇಗೆ ತೊಳೆಯುವುದು, ಕೆಮ್ಮುವುದು ಅಥವಾ ಸೀನುವುದು ಹೇಗೆ ಹಾಗೂ ಮುಖ, ಕಣ್ಣು, ಬಾಯಿ ಮತ್ತು ಮೂಗುಗಳನ್ನು ಮುಟ್ಟುವುದನ್ನು ತಪ್ಪಿಸುವುದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ನಿಯಮಿತವಾಗಿ ತಿಳಿಸುವುದು.

*ಸಾಮಾಜಿಕ ಅಂತರ, ಮುಖಕವಚ/ ಮಾಸ್ಕ್ ಧರಿಸುವುದು, ಸ್ವಚ್ಛತೆ ಇತ್ಯಾದಿಗಳ ಅಗತ್ಯವನ್ನು ಮನವರಿಕೆ ಮಾಡುವುದು.

*ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ ಮತ್ತು ಮುಂತಾದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು.

*ಮಾನಸಿಕ ಆರೋಗ್ಯವನ್ನು ಸುಧಾರಿಸಲು ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಸ್ನೇಹಿತರು, ಶಿಕ್ಷಕರು ಮತ್ತು ಪೋಷಕರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಬೇಕು. ಏಕಾಗ್ರತೆ, ಸಕಾರಾತ್ಮಕ ಮನೋಭಾವ, ಉತ್ತಮ ಆಹಾರ ಸೇವನೆ, ವಿಶ್ರಾಂತಿ ಮತ್ತು ನಿದ್ರೆಗಳ ಆವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡುವುದು.

*ಶುಚಿರುಚಿಯಾದ ಆಹಾರ ಮತ್ತು ತಾಜಾ ಹಣ್ಣುಗಳ ಸೇವನೆ, ಆಗಾಗ್ಗೆ ಬಿಸಿ ನೀರು ಕುಡಿಯುವುದು, ಜಂಕ್ ಫುಡ್ ಅಥವಾ ಇತರೆ ವಸ್ತುಗಳನ್ನು ತ್ಯಜಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವುದು.

*ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಆಡಿಯೋ, ವಿಡಿಯೋ ಮತ್ತಿತರ ಮಾಧ್ಯಮ ಬಿಡಿಭಾಗಗಳನ್ನು ಶುಚಿಗೊಳಿಸುವಂತೆ ತಿಳಿಸುವುದು. 

*ವಿದ್ಯಾರ್ಥಿಗಳು ತಮ್ಮ ಲ್ಯಾಪ್‌ಟಾಪ್‌ಗಳು, ಆಡಿಯೋ, ವಿಡಿಯೋ ಮತ್ತು ಇತರ ಮಾಧ್ಯಮ ಪರಿಕರಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುವಂತೆ ತಿಳಿಸುವುದು.

*ಕೋವಿಡ್-19 ನ ಸೋಂಕು, ಪರಿಣಾಮ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು. ವೈರಸ್‌ನಿಂದ ಉಂಟಾಗುವ ಸೋಂಕಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಕ್ಯಾಂಪಸ್ ನ ಸೂಕ್ತ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಸ್ಟಿಕ್ಕರ್‌ಗಳನ್ನು ಅಂಟಿಸಬೇಕು.‌

*ವಿಕಲಚೇತನರಿಗೆ ಸೂಕ್ತ ಮತ್ತು ಸಮಯೋಚಿತ ಸೌಲಭ್ಯಗಳನ್ನು ಒದಗಿಸಬೇಕು. ಜಾತಿ, ಮತ, ಲಿಂಗ ತಾರತಮ್ಯ ಮಾಡಬಾರದು.

*ಪುಸ್ತಕಗಳು, ಇತರ ಕಲಿಕಾ ಸಾಮಗ್ರಿಗಳು ಮತ್ತು ತಿನ್ನಬಹುದಾದ ವಸ್ತುಗಳನ್ನು ಹಂಚಿಕೊಳ್ಳುವುದನ್ನು ನಿರುತ್ಸಾಹಗೊಳಿಸಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ/ರಾಜ್ಯ ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸುವುದು.

*ಹಾಸ್ಟೆಲ್‌ಗಳಿಗೆ ಸಂಬoಧಿಸಿದ ಆರೋಗ್ಯ ಮಾರ್ಗಸೂಚಿಗಳನ್ನು ಸಮಾಜ ಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊರಡಿಸಲಿದ್ದು ಸದರಿ ಮಾರ್ಗಸೂಚಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಹಾಗೂ ಇತರೆ ಎಲ್ಲಾ ಹಾಸ್ಟೆಲ್‌ಗಳಲ್ಲಿಯೂ ಕಡ್ಡಾಯವಾಗಿ ಅನುಸರಿಸುವುದು.

*ಜಿಲ್ಲೆಯಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಸಾಂಕ್ರಾಮಿಕ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೋವಿಡ್ ಉಸ್ತುವಾರಿ ಮತ್ತು ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿದ್ದು; ಜಿಪಂ ಸಿಇಓ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಸರ್ಜನ್‌, ಜಿಲ್ಲಾ ಸಾರಿಗೆ ಅಧಿಕಾರಿ (ಆರ್ಟಿಓ), ಕೆಎಸ್‌ಆರ್‌ಟಿಯ ವಿಭಾಗೀಯ ನಿಯಂತ್ರಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಜಿಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಸದಸ್ಯ ರಾಗಿರುತ್ತಾರೆ.

ಜಿಲ್ಲಾ ಮಟ್ಟದ ಸಮಿತಿಯ ಪಾತ್ರ ಮತ್ತು ಕರ್ತವ್ಯಗಳು:

*ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಮತ್ತು ಸಾಮಾನ್ಯ ಮಾರ್ಗಸೂಚಿಗಳ ಅನುಷ್ಠಾನವನ್ನು ಪರಿವೀಕ್ಷಿಸುವುದು.

*ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಅವಶ್ಯಕತೆಗನುಸಾರವಾಗಿ ಕೋವಿಡ್ ತಪಾಸಣೆ ನಡೆಸುವುದು.

*ವಿದ್ಯಾರ್ಥಿಗಳಿಗೆ ಸಾರಿಗೆ ಮತ್ತು ಬಸ್‌ಪಾಸ್ ವ್ಯವಸ್ಥೆ ಕಲ್ಪಿಸುವುದು. ಕಾಲೇಜುಗಳಿಗೆ ಕೋವಿಡ್ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಒದಗಿಸುವುದು.

*ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಮತ್ತು ಇತರೆ ಹಾಸ್ಟೆಲ್‌ಗಳನ್ನು ಪ್ರಾರಂಬಿಸುವುದು ಮತ್ತು ಸದರಿ ಹಾಸ್ಟೆಲ್‌ಗಳಲ್ಲಿ ಕೋವಿಡ್ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು.

*ವಿದ್ಯಾರ್ಥಿಗಳಲ್ಲಿ ಕರೋನ ಹರಡುವಿಕೆಯನ್ನು ತಡೆಗಟ್ಟುವ ಕುರಿತಂತೆ ಜಾಗೃತಿ ಮೂಡಿಸುವುದು.

City Today News

(citytoday.media)

9341997936

NDDB DAIRY SERVICES puts India on the World Map: develops an indigenous sex sorting technology to ensure birth of female calves

NDDB DAIRY SERVICES, a wholly-owned subsidiary of National Dairy Development Board (NDDB), today announced its indigenously developed path breaking technology for sex sorting bovine sperms that will ensure the birth of only female calves. This technology is another step that will propel India to become “Atmanirbhar”.

The results of the field trials conducted by NDDB DAIRY SERVICES to ascertain the performance of the product under actual field conditions are encouraging and the first female calf from sex sorted semen dose produced at Alamadhi Semen Station was born in a farm near Chennai in October, 2020.

The current technologies for the sex sorting of bovine sperms are proprietary to a few multi-national companies which makes the cost prohibitive for the dairy farmers. The ability to assure the birth of only female calves provides huge financial advantage to dairy farmers as the economic utility of a male calf is negligible.

Shri Dilip Rath, Chairman of NDDB, informed that NDDB DAIRY SERVICES had taken up the project to develop an indigenous technology for sex sorting bovine sperms a few years back with an objective to significantly bring down the cost of the sex sorted semen doses so that it becomes affordable for the dairy farmers in the country. This development would lead to large scale adoption of the technology.

The sex sorted semen doses produced using the indigenous technology is reported to be meeting the industry quality and production benchmarks.

A not for profit Company registered under the Companies Act, NDDB DAIRY SERVICES functions as a delivery arm of NDDB for field operations relating to promoting Producer Companies and Productivity Enhancement Services. Thus far, 15 Milk Producer Companies have been set up.

NDDB Dairy Services also manages four large semen stations in the country- Sabarmati Ashram Gaushala near Ahmedabad, Animal Breeding Centre near Lucknow, Alamadhi Semen Station near Chennai and Rahuri Semen Station near- Pune. These semen stations together produce about 35% of the total semen produced in the country.

NDDB DAIRY SERVICES has partnered with Jiva Sciences, a Bangalore-based R&D organization, for developing the indigenous sex sorting technology. Some of the key components used in the technology are developed by premier institutes of the country like National Centre for Biological Sciences- Bangalore, Indian Institute of Science- Bangalore and Indian Institute of Technology- Madras.

Shri Rath was confident that the new technology would help in achieving the Honorable Prime Minister’s vision of ‘Make in India’ programme and the current quest for an Atmanirbhar Bharat where products made in India could be used across the world- ‘Local for Global’.

Shri Saugata Mitra, Managing Director, NDDB DAIRY SERVICES, said, “The technology will help bring down the cost of artificial insemination using sex sorted semen significantly from the existing Rs 1,000/-. This will also be a turning point in overcoming the problem of stray cattle in the country”. Shri Mitra further mentioned that the sex sorted doses are expected be commercially available in January 2021 and would go a long way in doubling the farmer’s income

City Today News

(citytoday.media)

9341997936

ಡಾ.ಬಿ.ಸುಧಾ ( ಕೆ.ಎ.ಎಸ್ ) ರವರ ವಿರುದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರ 6 ವಿವಿಧ ತಂಡಗಳಿಂದ ಶೋಧನೆ ಕಾರ್ಯ

ಡಾ.ಬಿ.ಸುಧಾ ( ಕೆ.ಎ.ಎಸ್ ) ಆಡಳಿತಾಧಿಕಾರಿ , ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ , ಶಾಂತಿನಗರ , ಬೆಂಗಳೂರು ರವರ ವಿರುದ್ದ ಅಕ್ರಮ ಆಸ್ತಿಗಳ ಗಳಿಕೆ ಸಂಬಂಪಟ್ಟಂತೆ ದಿನಾಂಕ : 07.11.2020 ರಂದು ಬೆಂಗಳೂರು , ಮೈಸೂರು ಹಾಗೂ ಉಡುಪಿ ಜಿಲ್ಲೆಯ ಒಟ್ಟು 7 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರ 6 ವಿವಿಧ ತಂಡಗಳಿಂದ ಶೋಧನೆ ಕಾರ್ಯವನ್ನು ಕೈಗೊಳ್ಳಲಾಗಿದೆ . ಶೋಧನಾ ಕಾಲದಲ್ಲಿ ಈ ಕೆಳಕಂಡಂತೆ ಚರ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿದ್ದು ಇವುಗಳ ಬಗ್ಗೆ ತನಿಖೆ ಮುಂದುವರೆದಿರುತ್ತದೆ .

1. ಆರೋಪಿತರು ಮತ್ತು ಅವರ ಕುಟುಂಬ ಸದಸ್ಯರು ಹಾಗು ಅವರಿಗೆ ಪರಿಚಯವಿರುವ ಇತರೆ ವ್ಯಕ್ತಿಗಳ ಹೆಸರಿನಲ್ಲಿರುವ ಸುಮಾರು 200 ಕ್ಕೂ ಹೆಚ್ಚು ಸ್ವತ್ತಿಗೆ ಸಂಬಂಧಪಟ್ಟ ದಾಖಲಾತಿಗಳು , ಆಸ್ತಿಗಳ ಕ್ರಯ ಪತ್ರಗಳು , ಜಿಪಿಎ ಪತ್ರಗಳು , ಕೆಲವು ಒಪ್ಪಂದದ ಕರಾರು ಪತ್ರಗಳು ಮತ್ತು ಇತರೆ ದಾಖಲಾತಿಗಳು ದೊರೆತ್ತಿರುತ್ತವೆ .

2. ಆರೋಪಿತರು ಮತ್ತು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 50 ಬ್ಯಾಂಕ್ ಖಾತೆಗಳ ವಿವರಗಳು , ಸುಮಾರು 50 ಕ್ಕೂ ಅಧಿಕ ಚೆಕ್ ಅಫ್ಗಳು ದೊರೆತಿರುತ್ತೇವೆ .

3. ಆರೋಪಿತರು ಮತ್ತು ಅವರೊಂದಿಗೆ ವ್ಯವಹಾರದ ಸಂಬಂಧ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಯಲ್ಲಿ ರೂ . 36,89.000 / – ನಗದು ಹಣ ದೊರೆತಿರುತ್ತದೆ .

4. ಆರೋಪಿ ಡಾ || .ಬಿ.ಸುಧಾ ರವರು ಮತ್ತು ಅವರಿಗೆ ಸಂಬಂಧಪಟ್ಟ ಇತರೆ ವ್ಯಕ್ತಿಗಳ ಬ್ಯಾಂಕ್ ಖಾತೆಗಳಲ್ಲಿ ಸುಮಾರು 3.5 ಕೋಟಿ ರೂ.ಗಳು ಠೇವಣಿಗಳು ಪತ್ತೆಯಾಗಿರುತ್ತದೆ .

5. ಆರೋಪಿತರು ಮತ್ತು ಅವರಿಗೆ ಸಂಬಂಧಪಟ್ಟ ಇತರೆ ವ್ಯಕ್ತಿಗಳ ಮನೆಯಲ್ಲಿ ಸುಮಾರು 3.7 ಕೆ.ಜಿ ಚಿನ್ನಾಭರಣಗಳು ಮತ್ತು ಮಾರು 10.5 ಗಳು ಬೆಳ್ಳಿಯ ವಸ್ತ್ರಗಳು ಪತ್ತೆಯಾಗಿರುತ್ತದೆ .

ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನಾ ಕಾರ್ಯ ಕೈಗೊಂಡಿದ್ದು , ಪ್ರಕರಣದಲ್ಲಿ ತನಿಖೆ ಮುಂದುವರೆದಿರುತ್ತದೆ .

City Today News

(citytoday.media)

9341997936

Flatheads launches Aurea: India’s first sneakers with natural Bamboo uppers

Made in India, the casual all-day shoes are designed to stay cool in India’s tropical climate

Available in 5 different colours: Pepper, Treebark, Marine, Tofu and Slate

Bangalore, November 9th 2020 : Indian D2C footwear brand, Flatheads, today unveiled India’s first sneaker collection made with natural bamboo uppers. The new collection titled ‘Aurea’, comprises a range of all-day sneakers, available exclusively on http://www.flatheads.in.

Aurea’s debut puts Flatheads on the map with some of the world’s leading brands making bamboo sneakers, such as Baubax and Cariuma. While most of these brands are difficult to source in India without burning a hole in your pocket, the premium bamboo sneakers from Flatheads are moderately priced at Rs. 4995. The brand is “Made in India for the world”, being the first Indian brand making world-class sneakers with bamboo uppers.

The Aurea rangeis designed to stay cool on the feet, and is perfect for India’s tropical climate. Moreover, the bamboo fibre also lends its antimicrobial properties to the uppers, making them great for all day wear, for over 14 hours at a stretch. The sneakers are designed to be minimalistic, modern and elegant, in order to blend in easily with its audience’s ever-evolving wardrobe. The collection is also extremely lightweight, breathable, comfortable and durable, with the added benefits of being cool and sweat resistant over long-duration wear.The Aurea range is available in 5 fresh colours, Pepper (a black and grey melange on black soles), Treebark (brown on white soles), Marine (blue on white soles), Tofu (cream on brown soles), and Slate (dark grey on black soles)

A pioneer in premium natural fibres sneakers, the Flatheads brand aims to make everyday sneakers more comfortable, sustainable, and durable for the urban post-millennial consumer. The brand recently gained popularity amongst the start-up community in India, being sported by some of the leading names such as PankajChaddah, Co-founder of Zomato; Naveen Tewari, Founder and CEO of InMobi and Rajiv Srivatsa, Co-Founder of Urban Ladder amongst others.

Speaking on the launch of the Flatheads Aurea, Utkarsh Biradar, CEO, Flatheads, said, “When we started Flatheads, our vision was to offer customers the ultimate in comfort, reflecting their individuality and sense of everyday style. We differentiated ourselves in the market by championing all-day wear sneakers that were extremely lightweight and breathable. Moving into natural fibres was the logical next step for us to sustain our vision, while still maintaining the premium quality of our products. Despite the crowded footwear market in India, no other brand is using natural fibres like bamboo in sneakers. We decided it was time to change that and use India’s superior quality bamboo to its full potential.”

City Today News

(citytoday.media)

9341997936

Four Amrita Vishwa Vidyapeetham Scientists Among World’s Top 2%: Stanford Study

Dr. Maneesha Ramesh, Dr. Shanti Nair, Dr. R Jayakumar and Dr. Madhav Dutta figure in the ranking in recognition of the quality of their research

NEW DELHI / November 9, 2020: Four scientists of Amrita Vishwa Vidyapeetham have been featured in the ranking of top 2% scientists in the world in their respective fields published by Stanford University of the US. Dr. Maneesha Ramesh, Dr. Shanti Nair, Dr. R Jayakumar and Dr. Madhav Dutta figure in the ranking in recognition of the quality of their research.

Dr. Maneesha Ramesh, from Amrita Center for Wireless Networks & Applications, Amrita School of Engineering (Amritapuri Campus), has been recognized as among the world’s top scientists in the field of networking, telecommunications, artificial intelligence and image processing.

Dr. Shanti Nair and Dr. R Jayakumar, both from the Center for Nanosciences & Molecular Medicine, Amrita Institute of Medical Sciences (Kochi campus), figure in the Stanford list for their work in the areas of polymers, nanoscience and nanotechnology.

Dr. Madhav Dutta, from Amrita School of Engineering (Coimbatore campus), has been included in the ranking for his pioneering research in the field of energy.

Dr. P. Venkat Rangan, Vice Chancellor, Amrita Vishwa Vidyapeetham, congratulated the scientists for bringing laurels to the university, which is also an Institution of Eminence. He said: “This is a momentous occasion for us as the high caliber of our scientists and researchers has been recognized on the world stage. I congratulate the four scientists whose untiring work and unwavering commitment towards research excellence have placed them in global rankings. This is ample testimony to the vision of our Chancellor, Sri Mata Amritanandamayi.”

Dr. P. Venkat Rangan added: “Amrita Vishwa Vidyapeetham is a research-intensive institution with more than 25 dedicated centers of research. Its faculty members have published over 12,000 research articles in peer-reviewed journals and conferences, attracting 65,000 citations, filed more than 120 patents, and written over 300 scholarly books in the past 15 years. The institution has secured research grants of over $100 million from various Governmental and private funding agencies including World Bank, UNESCO, UNDP, Gates Foundation, etc.”

The global study of scientists was conducted by researchers from Stanford University using the Scopus database of Elsevier. Based on several parameters including citations, h-index, co-authorship and a composite indicator, they created a database of more than 1,00,000 top-scientists of the world in various fields. The findings were published in the journal PLOS Biology.

Amrita Vishwa Vidyapeetham is among the fastest-growing institutions of higher learning in India, with a student population of more than 20,000 and 1,800-strong faculty. It has established more than 180 collaborations with the Top 500 world ranked universities in the last 15 years.

Amrita Vishwa Vidyapeetham has emerged as the 4th best university in the country in the National Institutional Ranking Framework (NIRF) Ranking 2020 released by the Government of India. It has also been ranked 7th among medical colleges in India.

City Today News

(citytoday.media)

9341997936