ಬೆಂಗಳೂರು,ಜು,18:ನಗರದ ಅಸ್ಪತ್ರೆಗಳು ಹಾಗೂ ಪ್ರಮುಖ ಸರ್ಕಾರಿ ಕಟ್ಟಡಗಳಲ್ಲಿ ರಾಜ್ಯ ಅಗ್ನಿಶಾಮಕ ದಳದಿಂದ ವಿಶೇಷ ವಾಹನಗಳ ಮೂಲಕ ವ್ಯಾಪಕವಾಗಿ ರೋಗ ನಿರೋಧಕ ಔಷಧಿ ಸಿಂಪಡಿಸಲಾಯಿತು. ಕಳೆದ ಮೂರು ದಿನಗಳಲ್ಲಿ ಬೆಂಗಳೂರಿನ ಎಲ್ಲ ಪ್ರಮುಖ ಅಸ್ಪತ್ರೆಗಳ ಒಳಗೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೂರಾರು ಅಗ್ನಿ ಶಾಮಕ ದಳ ಸಿಬ್ಬಂದಿ ವಿಶೇಷ ವಾಹನಗಳಲ್ಲಿ ಸುಧಾರಿತ ಜೆಟ್ ಮೂಲಕ ರೋಗ ನಿರೋಧಕ ಔಷಧಿಯನ್ನು ಸಿಂಪಡಿಸಿದರು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ಲಾಕ್ ಡೌನ್ ಮಾಡಲಾಗಿದ್ದು ಈ ನಡುವೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಲಾಯಿತು.
ಈ ಮಧ್ಯೆ ಜನ ಮತ್ತು ವಾಹನಗಳಿಲ್ಲದೆ, ಖಾಲಿ ಇರುವ ಪ್ರಮುಖ ರಸ್ತೆಗಳಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಲಾಯಿತು.
ಕೇವಲ ರಸ್ತೆಗಳಷ್ಟೇ ಅಲ್ಲದೆ, ಪ್ರಮುಖ ಆಸ್ಪತ್ರೆಗಳ ಸರಹದ್ದಿನಲ್ಲೂ ಅಗ್ನಿ ಶಾಮಕದಳದ ಸಿಬ್ಬಂದಿ ಔಷಧಿ ಸಿಂಪಡಣೆ ಮಾಡಿದರು. ವಿಕ್ಟೋರಿಯಾ ಅಸ್ಪತ್ರೆ, ಬೌರಿಂಗ್ ಅಸ್ಪತ್ರೆ, ಕೆಸಿ ಜನರಲ್ ಅಸ್ಪತ್ರೆ, ಆಕಾಶ್ ಅಸ್ಪತ್ರೆ, ಇಎಸ್ಐ ಅಸ್ಪತ್ರೆ, ಹೈಕೋರ್ಟ್, ವಿ.ವಿ.ಟವರ್ , ಮೆಟ್ರೋ ನಿಲ್ದಾಣ, ಉದ್ಯಾನಗಳು ಸೇರಿದಂತೆ 50ಕ್ಕೂ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ರೋಗನಿರೋಧಕ ಸಿಂಪಡಣೆ ಮಾಡಿತು. ಎಡಿಜಿಪಿ ಸುನೀಲ್ ಅಗರ್ ವಾಲ್ , ವಿಕ್ಟೋರಿಯಾ ಆಸ್ಪತ್ರೆ ಬಳಿ ಈ ಕಾರ್ಯಕ್ಕೆ ಚಾಲನೆ ನೀಡಿದರು.
ಇಂದು ನಗರದ ಅರಮನೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ ೧೦೧ ನೇ ಜನ್ಮದಿನೋತ್ಸವವನ್ನು ಮೈಸೂರು ಅರಮನೆ ಮಂಡಳಿ ಮತ್ತು ಶ್ರೀ ನಾಲ್ವಡಿ ಪೌಂಢೇಷನ್ ವತಿಯಿಂದ ಆಚರಿಸಲಾಯಿತು ಈ ಸಂಧರ್ಭದಲ್ಲಿ ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ , ಅರಮನೆ ಮಂಡಳಿಯ ಉಪನಿರ್ದೇಶಕರಾದ ಟಿ.ಎಸ್ ಸುಬ್ರಹ್ಮಣ್ಯ , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ , ನಾಲ್ವಡಿ ಪೌಂಡೇಷನ್ ಅಧ್ಯಕ್ಷರಾದ ನಂದೀಶ್ ಅರಸ್, ಮಾಜಿ ನಗರ ಪಾಲಿಕೆ ಸದಸ್ಯರಾದ ರಘುರಾಜೇ ಅರಸ್ , ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷರಾದ ಯಮುನಾ , ವಿಶ್ವ ಇತರರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಸರ್ದಾರ್ ಲಿಂಗರಾಜೇ ಅರಸ್ ಅವರ ಮಗ ಎ.ಎಸ್ ನಂಜುಂಡರಾಜೇ ಅರಸ್ ಅವರು ನೂರು ವರ್ಷಗಳ ಹಿಂದೆ ಪೆನ್ಸಿಲ್ ನಲ್ಲಿ ಬರೆದ ಮುಮ್ಮಡಿ ಅವರ ಮತ್ತು ನಾಲ್ವಡಿ ಅವರ ಪೋಟೊ ನಾಲ್ವಡಿ ಪೌಂಡೇಷನ್ ಇಂದ ಅರಮನೆ ಮಂಡಳಿಗೆ ಲೋಕಸಭಾ ಸದಸ್ಯರು ಬಿಡುಗಡೆ ಮಾಡಿ ಹಸ್ತಾಂತರಿಸಿದರು
ಮೈಸೂರು ಸಂಸ್ಥಾನದ ಕೊನೆಯ ಅರಸ ಮತ್ತು ಸ್ವತಂತ್ರ್ಯಾನಂತರ ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿದ್ದ ರಾಜರ್ಷಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜನ್ಮ ಜಯಂತಿ ಇಂದು. ದಕ್ಷತೆ, ಅಂತಃಕರಣ, ದೂರದೃಷ್ಟಿಯುಳ್ಳ ನೇತಾರರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು, ಲೋಕ ಕಂಡ ಮಹಾನ್ ವಿದ್ವಾಂಸರು, ಸಂಗೀತ ಶಾಸ್ತ್ರಜ್ಞರೂ, ವಾಗ್ಗೇಯಕಾರರೂ ಆಗಿದ್ದರು. ದಕ್ಷ ಆಡಳಿತಗಾರರಾಗಿ, ಕನ್ನಡ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ನಮ್ಮ ಸನಾತನ ಧರ್ಮದ ಆಶಯದಂತೆ ರಾಜ್ಯಾಡಳಿತ ನಿರ್ವಹಿಸಿದ್ದರು. ಅರಸೊತ್ತಿಗೆಯನ್ನು ಭಾರತದ ಆಡಳಿತದಲ್ಲಿ ವಿಲೀನಗೊಳಿಸುವ ಸರ್ದಾರ್ ಪಟೇಲ್ ಅವರ ನಿರ್ಧಾರವನ್ನು ಒಪ್ಪಿ ಮೈಸೂರು ಸಂಸ್ಥಾನವನ್ನು ಗಣರಾಜ್ಯದಲ್ಲಿ ವಿಲೀನಗೊಳಿಸಿದ ಪ್ರಪ್ರಥಮ ದೊರೆ ಇವರು. ಪ್ರಜಾಪ್ರಭುತ್ವವಾದಿಯಾಗಿದ್ದ ಇವರು ಪ್ರಜಾ ಪ್ರಾತಿನಿಧಿಕ ಸಭೆ (ಇಂದಿನ ವಿಧಾನ ಪರಿಷತ್) ಸ್ಥಾಪಿಸಿ, ಹಲವಾರು ನಾಯಕರುಗಳ ರಾಜಕೀಯ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ವಿಶ್ವ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಜೋಗದಲ್ಲಿ ಸ್ಥಾಪಿಸಲಾಗಿರುವ ಶರಾವತಿ ನದಿಗೆ ಅಣೆಕಟ್ಟು ಮತ್ತು ಜಲವಿದ್ಯುದಾಗಾರ ಒಡೆಯರ್ ಅವರ ಕೊಡುಗೆ. ಭಾರತದ ಆಡಳಿತರಂಗದ ಇತಿಹಾಸದಲ್ಲಿಯೇ ಪ್ರಥಮವಾಗಿ ಪಂಚವಾರ್ಷಿಕ ಯೋಜನೆ ಜಾರಿಗೆ ತಂದ ಧೀಮಂತರು ಒಡೆಯರ್ ಅವರು.
ಕನ್ನಡ ನಾಡು ಕಂಡ ಅಗ್ರಮಾನ್ಯ ಸಾಧಕರಾದ ಇವರ ಸೇವೆ ಮತ್ತು ಸಾಧನೆಗಳು ನಮಗೆ ಆದರ್ಶಪ್ರಾಯವಾಗಿವೆ. ಇಂತಹಾ ರಾಜನೀತಿಜ್ಞ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜಯಂತಿ ಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.
– ಶ್ರೀ .ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ
Bengaluru, July 17,2020:Chief Minister B.S. Yediyurappa today convened a meeting with in charge ministers of 8 zones of BBMP regarding COVID management in the city.
During the meeting he directed them to remove all obstacles in admission of infected to hospitals. He directed them to ensure availability of treatment to COVID as well as non-COVID patients in private hospitals according to government guidelines. He advised them to make sure about the admission of asymptomatic and mildly symptomatic to COVID care Centres or home quarantine them so that hospital beds are made available to those who are in dire need of treatment in hospitals.
CM directed to conduct rapid antigen tests for the dead and take necessary steps to handover the body or conduct last rites according to guidelines. He directed them to conduct rapid antigen tests to those who died at home and facilitate the family to conduct last rites sooner.
On this occasion CM clarified that lock down is not a solution to contain COVID and there is no such proposal to extend lockdown in the city.
Vacant posts are being filled to avoid lack of doctors. Volunteers have been identified in each ward and ambulances have also been notified. If private hospitals refuse admission, he directed them to take stringent action. Nodal officers and volunteers would be deputed to private hospitals to ensure smooth coordination and to provide information about admissions and bed availability.
He alos informed that Marriage halls and hotels are identified in each ward to quarantine people who cannot go on home quarantine due to lack amenities in their homes.
He directed to conduct more number of tests across the state and also to depute more number of police personnel to avoid crowding in certain places.
He directed to decentralized bed allocation system to zonal level and closely monitor and ensure bed allocation and arrival of ambulance to the doorstep of the infected within two hours of being tested positive.
He also directed to give priority for the admission of symptomatic people above 65 years of age and asymptomatic to be admitted to covid care centre.
You must be logged in to post a comment.