ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಶ್ರೀ ಎನ್.ಮಂಜುನಾಥ್ ಪ್ರಸಾದ್ ರವರು ಅಧಿಕಾರ ಸ್ವೀಕಾರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಶ್ರೀ ಎನ್.ಮಂಜುನಾಥ್ ಪ್ರಸಾದ್ ರವರು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಇಂದು ಸಂಜೆ ಸುಮಾರು 5.00 ಗಂಟೆ ಸಮಯದಲ್ಲಿ ಅಧಿಕಾರ ಸ್ವೀಕರಿಸಿದರು.

ತದನಂತರ ಮಹಾಪೌರರು ರವರ ಕೊಠಡಿಯಲ್ಲಿ ಪೂಜ್ಯ ಮಹಾಪೌರರು ರವರನ್ನು ಭೇಟಿ ಮಾಡಿ ಪಾಲಿಕೆಯಲ್ಲಿನ ಸ್ಥಿತಿಗತಿಗಳ ಕುರಿತು ಚರ್ಚೆ ನಡೆಸಿದರು. ಅಲ್ಲದೇ ಮಾನ್ಯ ಆಯುಕ್ತರು ರವರು ವಿಶೇಷ ಆಯುಕ್ತರುಗಳ ಜೊತೆ ಬಿಬಿಎಂಪಿ ವಾರ್ ರೂಂ ಹಾಗೂ ಇತರೆ ಕಾರ್ಯಚಟುವಟಿಕೆಗಳನ್ನು ಪರಿಶೀಲನೆ ನಡೆಸಿದರು.

City Today News

(citytoday.media)

9341997936

ವಾಣಿಜ್ಯ ಚಟುವಟಿಕೆ ಮಳಿಗೆಗಳು ಕನ್ನಡ ಭಾಷೆಯಲ್ಲಿ ಪ್ರಥಮ ಮತ್ತು ನಿರ್ದಿಷ್ಟ ಅಳತೆಯಲ್ಲಿ ಫಲಕ ಆಳವಡಿಸಿ – ಮಹಾಪೌರರಾದ ಗೌತಮ್ ಕುಮಾರ್

ಕನ್ನಡಕ್ಕೆ ಕೈ ಎತ್ತು ,ನಿನ್ನ ಕೈ ಕಲ್ಪವೃಕ್ಷವಾಗುವುದು ಕವಿವಾಣಿಯಂತೆ .ಮಹಾಪೌರರಾದ ಗೌತಮ್ ಕುಮಾರ್ ರವರು ವಾಣಿಜ್ಯ ಚಟುವಟಿಕೆ ಮಳಿಗೆಗಳು ಕನ್ನಡ ಭಾಷೆಯಲ್ಲಿ ಪ್ರಥಮ ಮತ್ತು ನಿರ್ದಿಷ್ಟ ಅಳತೆಯಲ್ಲಿ ಫಲಕ ಆಳವಡಿಸಿ ,ಅದರ ಫೋಟೋ ಬಿ.ಬಿ.ಎಂ.ಪಿ.ಗೆ.ನೀಡಿದ ಮೇಲೆ ಟ್ರೇಡ್ ಲೈಸೆನ್ಸ್ ಕೊಡಲಾಗುವುದು ಎಂಬ ದಿಟ್ಟ ನಿರ್ಧಾರವನ್ನು ನವಂಬರ್ ಒಂದರಿಂದ ಜಾರಿಗೆ ತರಲು ತೀರ್ಮಾನಿಸಿರುವ ಮಹಾಪೌರರ ಕಾರ್ಯಕ್ಕೆ ಶ್ಲಾಘನೀಯ ಅಭಿನಂದನೆಗಳು.

City Today News

(citytoday.media)

9341997936

ದ್ವಿಚಕ್ರ ವಾಹನ ಮೂಲಕ ಮೇಯರ್ ನಗರ ಪ್ರದಕ್ಷಿಣೆ.

ಮಹಾಪೌರರಾದ ಗೌತಮ್ ಕುಮಾರ್ ರವರು ಪಶ್ವಿಮ ವಲಯ ಕಛೇರಿಯಿಂದ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಮಂತ್ರಿ ಮಾಲ್ ನಿಂದ ಹೊರಟು ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚಾರಿಸಿ ವಾಸ್ತವ ಸ್ಥಿತಿಗತಿ ಅರಿಯಲು ದ್ವಿಚಕ್ರ ವಾಹನದಲ್ಲಿ ತೆರಳಿದರು.ಕಾರ್ಯಪಾಲಕ ಅಭಿಯಂತರು ಜೊತೆಯಲ್ಲಿ ಇದ್ದರು .
ಜಂಟಿ ಆಯುಕ್ತರು ಕಛೇರಿಯಲ್ಲಿ ಕೂರುವ ಬದಲು ಪ್ರತಿ ವಾರ್ಡ್ ಪ್ರಮುಖ ರಸ್ತೆ ,ಅಡ್ಡರಸ್ತೆಗಳನ್ನು ಪರಿಶೀಲನೆ ಮಾಡಿದರೆ ,ಸಾರ್ವಜನಿಕರ ಸಮಸ್ಯೆಗಳು ನೇರವಾಗಿ ಗಮನಕ್ಕೆ ಬರುತ್ತದೆ .ಎಂದು ಮಹಾಪೌರರಾದ ಗೌತಮ್ ಕುಮಾರ್ ರವರು ಜಂಟಿ ಆಯುಕ್ತರಿಗೆ ಖಡಕ್ ಸೂಚನೆ ನೀಡಿದರು.

City Today News

(citytoday.media)

9341997936

ಶ್ರೀ ಎನ್ . ಆರ್ . ರಮೇಶ್ ರವರು ಬ್ಲಾಕ್‌ಮೇಲ್ ಮಾಡುವುದನ್ನು ಮತ್ತು ಪೌರಕಾರ್ಮಿಕರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು

ಇತ್ತೀಚಿಗೆ ಬಿ . ಬಿ . ಎಂ . ಪಿ . ಮಾಜಿ ಸದಸ್ಯರಾದ ಶ್ರೀ ಎನ್ . ಆರ್ . ರಮೇಶ್‌ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬಿ . ಬಿ . ಎಂ . ಪಿ . ಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಇ . ಎಸ್ . ಐ . / ಪಿ . ಎಫ್ ಹಣ ಸುಮಾರು 584 ಕೋಟಿರುಗಳ ಹಣವನ್ನು ಗುತ್ತಿಗೆದಾರರು ವಂಚನೆ ಮಾಡಿರುತ್ತಾರೆ . ಸದರಿ ವಿಷಯವನ್ನು ಎ . ಸಿ . ಬಿ . ಮತ್ತು ಸಿ . ಓ . ಡಿ . ವತಿಯಿಂದ ತನಿಖೆಯನ್ನು ಮಾಡಿಸುತ್ತಿರುವುದಾಗಿ ಹೇಳಿಕೊಂಡಿರುವುದು ಮತ್ತು ಹಿಂದಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರು ಮತ್ತು ಅಂದಿನ ಸಚಿವರಾದ ಶ್ರೀ ಕೆ . ಜೆ . ಜಾರ್ಜ್ ರವರು ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದಾರೆಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿರುತ್ತದೆ ಮತ್ತು ಹಾಸ್ಯಸ್ಪದವಾಗಿರುತ್ತದೆ . ನಾನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಮೇಲೆ ಅಂದಿನ ಮುಖ್ಯಮಂತ್ರಿಗಳಾ | ಶ್ರೀ ಸಿದ್ದರಾಮಯ್ಯ ರವರು ಮತ್ತು ಶ್ರೀ ಕೆ . ಜೆ . ಜಾರ್ಜ್ ರವರ ಗಮನಕ್ಕೆ ಸದರಿ ವಿಷಯವನ್ನು ತಂದೆ : ತನಿಖೆಗೆ ಆದೇಶ ಮಾಡಿಸಿರುತ್ತೇನೆ ಮತ್ತು ಭಾರತ ದೇಶದಲ್ಲಿ ಯಾವುದೇ ರಾಜ್ಯಗಳಲ್ಲಿ ಮಾಡದೇ ಇರುವಂತಹ ಹಲವಾರು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುತ್ತಾರೆ . ಶ್ರೀ ಸಿದ್ದರಾಮಯ್ಯರವರು ಮತ್ತು ಶ್ರೀ ಕೆ . ಜೆ . ಜಾರ್ಜ್ ರವರು ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದಾರೆಂದು ಹೇಳಿದ್ದಾರೆ . ಭಾರತ ದೇಶದಲ್ಲಿ 12 ಲಕ್ಷಗುತ್ತಿಗೆ ಕಾರ್ಮಿಕರು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದೆ . ಆದರೆ ಗುತ್ತಿಗೆದಾರರಿಂದ ಆಗುತ್ತಿರುವ ಶೋಷಣೆ ಮತ್ತು ದಬ್ಬಾಳಿಕೆಯನ್ನು ಕಂಡು ಅಂದಿನ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಮೊಟ್ಟ ಮೊದಲನೇಯದಾಗಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಸದರಿ ಗುತ್ತಿಗೆ ಕಾರ್ಮಿಕರಿಗೆ ನೇರವಾಗಿ ಸರ್ಕಾರದಿಂದಲೇ ವೇತನ ಪಾವತಿ ಮಾಡಿರುತ್ತಾರೆ . ಗುತ್ತಿಗೆದಾರರನ್ನು ಓಡಿಸಿರುತ್ತಾರೆ . ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದರೆ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡುತ್ತಿರಲಿಲ್ಲಾ ಎಂಬುವುದು ಶ್ರೀ ಎನ್ . ಆರ್ . ರಮೇಶ್ ರವರು ಗಮನಿಸಬೇಕಾಗಿದೆ . ರಾಜ್ಯದಲ್ಲಿ ಶ್ರೀ ಬಿ . ಎಸ್ . ಯಡೂರಪ್ಪ ರವರು ಮುಖ್ಯಮಂತ್ರಿಗಳಾಗಿದ್ದಾಗ ಗುತ್ತಿಗೆದಾರರ ಜೊತೆ ಶಾಮೀಲಾಗಿ ಬಿ . ಬಿ . ಎಂ . ಪಿ . ಯಲ್ಲಿ ಗುತ್ತಿಗೆ ಪದ್ಧತಿಯನ್ನು 30 ವರ್ಷಕ್ಕೆ ಖಾಸಗಿ ಕಂಪನಿಗೆ ನೀಡಲು ಒಪ್ಪಂದ ಮಾಡಿಕೊಂಡಿದ್ದು , ನಂತರ ಸದರಿ ಪ್ರಕ್ರಿಯೆಯನ್ನು ರಾಜ್ಯದ ಹೈಕೋರ್ಟ್‌ ರದ್ದು ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿರುತ್ತದೆ .

ಶ್ರೀ ಸಿದ್ದರಾಮಯ್ಯ ಸರ್ಕಾರದಲ್ಲಿ ಪೌರಕಾರ್ಮಿಕರ ಸುವರ್ಣಯುಗವೆಂದರೆ ತಪ್ಪಗಲಾರದು , ಅವರ ಅಧಿಕಾರ ಅವಧಿಯಲ್ಲಿ ಈ ಕೆಳಕಂಡ ಐತಿಹಾಸಿಕ ಯೋಜನೆಗಳನ್ನು ಜಾರಿಗೊಳಿಸಿರುತ್ತಾರೆ .

1 ) ಗುತ್ತಿಗೆ ಪದ್ದತಿಯನ್ನು ರದ್ದು ಮಾಡಿ ಸದರಿ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಿಂದ ನೇರ ವೇತನ ಪಾವತಿ .

2 ) 7800 ವೇತನವನ್ನು ಎರಡು ಪಟ್ಟು ಹೆಚ್ಚು ಮಾಡಿ 14800 ರೂ ವೇತನ ಜಾರಿ ಮಾಡಿರುವುದು .

3 ) ಬಿಸಿ ಊಟದ ಯೋಜನೆ ಜಾರಿ ಮಾಡಿರುವುದು .

4 ) ಸ್ಥಳೀಯ ಸಂಸ್ಥೆಗಳ ಎಸ್ . ಸಿ . ಪಿ . ಮತ್ತು ಟಿ . ಎಸ್ . ಪಿ . ಮೀಸಲಾತಿ ಹಣದಲ್ಲಿ ಇವರಿಗೆ ಶೇ . 20 % ಮೀಸಲು ಆದೇಶ ಮಾಡಿರುವುದು .

5 ) ಬಿ . ಡಿ . ಎ . ಕಟ್ಟಿಸಿರುವ 400 ಫ್ಲಾಟ್‌ಗಳನ್ನು ಉಚಿತವಾಗಿ ಪೌರಕಾರ್ಮಿಕರಿಗೆ ನೀಡಲು ಆದೇಶ ಮಾಡಿರುವುದು .

6 ) ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಯೋಜನೆ ಜಾರಿ ಮಾಡಿರುವುದು .

7 ) ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಸಂಬರ್ಧದಲ್ಲಿ ಈ ಜನಾಂಗದ ಒಬ್ಬರನ್ನು ನೇಮಕ ಮಾಡಲು ಆದೇಶ ಮಾಡಿರುವುದು .

8 ) ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ ಮಾಡಿರುವುದು .

ಇತ್ಯಾದಿ ಯೋಜನೆಗಳನ್ನು ಜಾರಿ ಮಾಡಿರುತ್ತಾರೆ . ಸದರಿ ಯೋಜನೆಗಳು ಭಾರತ ದೇಶದ ಯಾವುದೇ ರಾಜ್ಯದಲ್ಲಿ ಜಾರಿಯಾಗಿರುವುದಿಲ್ಲಾವೆಂದು ತಿಳಿಸುತ್ತೇನೆ .

ಸದರಿ ವಿಷಯವಾಗಿ ಶ್ರೀ ಎನ್ . ಆರ್ , ರಮೇಶ್ ರವರ ಜೊತೆ ಚರ್ಚಿಸಲು ಸಿದ್ಧನಿದ್ದೇನೆ . ಶ್ರೀ ಎನ್ . ಆರ್ . ರಮೇಶ್ ರವರು ಬ್ಲಾಕ್‌ಮೇಲ್ ಮಾಡುವುದನ್ನು ಮತ್ತು ಪೌರಕಾರ್ಮಿಕರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು .

ನಾರಾಯಣ – ಮಾಜಿ ಅಧ್ಯಕ್ಷರು,

ಎನ್. ಪಿ. ಶ್ರೀನಿವಾಸ್,

ಸುರೇಶ್ ಬಾಬು,

ಮತ್ತು ಎಂ. ಜಿ. ಶ್ರೀನಿವಾಸ್ ಉಪಸ್ತಿತರಿದ್ದರು

City Today News

(citytoday.media)

9341997936

ಬೃಹತ್ ಬೆಂಗಳೂರು ಮಹಾನಗರ ಪಾಲಿಕಯ ಅನುದಾನದಡಿಯಲ್ಲಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿಲೇಔಟ್ – ವಾರ್ಡ್ ನಂ : 43ರಲ್ಲಿ “ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ದಿನಾಂಕ 03 . 03 . 2019 ರಂದು ಬೆಳಿಗ್ಗೆ : 9 . 30ಕ್ಕೆ ಹಮ್ಮಿಕೊಳ್ಳಲಾಗಿದೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕಯ ಅನುದಾನದಡಿಯಲ್ಲಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿಲೇಔಟ್ – ವಾರ್ಡ್ ನಂ : 43ರಲ್ಲಿ “ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ದಿನಾಂಕ 03 . 03 . 2019 ರಂದು ಬೆಳಿಗ್ಗೆ : 9 . 30ಕ್ಕೆ ಹಮ್ಮಿಕೊಳ್ಳಲಾಗಿದೆ .

ಅಭಿವೃದ್ಧಿ ಕಾಮಗಾರಿಗಳ ವಿವರಗಳು : ನಾಡಪ್ರಭು ಕೆಂಪೇಗೌಡ ಸಮುದಾಯ ಭವನ ಎ . ಬಿ ವಾಜಪೇಯಿ ನಗರ ಆರೋಗ್ಯ ಕೇಂದ್ರ ಶ್ರೀ ಶ್ರೀ ಶ್ರೀ ಸಿದ್ದಗಂಗಾ ಆಟೋ ಸ್ಟಾಂಡ್ ಕುಡಿಯುವ ನೀರಿನ ಘಟಕಗಳು ಬಸ್ ತಂಗು ತಾಣ , ಗುದ್ದಲಿ ಪೂಜೆ : ಡಾ / / ರಾಜ್‌ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಂದಿನಿ ಲೇಔಟ್ ಈಜುಕೊಳ ಈ ಮೇಲ್ಕಂಡ ಕಾಮಗಾರಿಗಳ ಉದ್ಘಾಟನೆಯನ್ನು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಡಿ . ವಿ ಸದಾನಂದ ಗೌಡರವರು ನೆರವೇರಿಸಲಿದ್ದಾರೆ . ಕರ್ನಾಟಕ ಸರ್ಕಾರದ ಘನವೆತ್ತ ಉಪ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಡಾ . ಜಿ . ಪರಮೇಶ್ವರ್ ರವರು ಜ್ಯೋತಿ ಬೆಳಗಿಸಲಿದ್ದಾರೆ , ಈ ಸಮಾರಂಭದ ಅಧ್ಯಕ್ಷತೆಯನ್ನು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಕೆ . ಗೋಪಾಲಯ್ಯರವರು ವಹಿಸಲಿದ್ದು , ಸದರಿ ಸಭೆಗೆ ಪೂಜ್ಯ ಮಹಾಪೌರರಾದ ಸನ್ಮಾನ್ಯ ಶ್ರೀಮತಿ ಗಂಗಾಂಬಿಕೆರವರು ಆಗಮಿಸಲಿದ್ದಾರೆ .

ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಂದಾಜು ವೆಚ್ಚ : ನಾಡಪ್ರಭು ಕೆಂಪೇಗೌಡ ಸಮುದಾಯ ಭವನ ಅಂದಾಜು ವೆಚ್ಚ : ರೂ . 300 . 00 ಲಕ್ಷಗಳು ಎ . ಬಿ ವಾಜಪೇಯಿ ನಗರ ಆರೋಗ್ಯ ಕೇಂದ್ರ ಅಂದಾಜು ವೆಚ್ಚ : ರೂ . 50 . 00 ಲಕ್ಷಗಳು ಶ್ರೀ ಶ್ರೀ ಶ್ರೀ ಸಿದ್ದಗಂಗಾ ಆಟೋ ಸ್ಟಾಂಡ್ – 2 ಅಂದಾಜು ವೆಚ್ಚ : ರೂ 5 0 . 00 ಲಕ್ಷಗಳು ಕುಡಿಯುವ ನೀರಿನ ಘಟಕಗಳು ಅಂದಾಜು ವೆಚ್ಚ : ರೂ 13 . 00 ಲಕ್ಷಗಳು ಬಸ್ ತಂಗು ತಾಣ – 2 ಅಂದಾಜು ವೆಚ್ಚ : ರೂ 15 . 00 ಲಕ್ಷಗಳು ಗುದ್ದಲಿ ಪೂಜೆ : ಡಾ | | ರಾಜ್‌ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಂದಾಜು ವೆಚ್ಚ : ರೂ . 500 . 00 ಲಕ್ಷಗಳು ನಂದಿನಿ ಲೇಔಟ್ ಈಜುಕೊಳ ಅಂದಾಜು ವೆಚ್ಚ : ರೂ , 450 . 00 ಲಕ್ಷಗಳು

City Today News

(citytoday.media)

9341997936