Ugadi Celebrations Marked with Grandeur at Raghavendra Swamy Mutt in Jayanagar

Bengaluru: The Ugadi festival was celebrated with traditional fervour and spiritual splendour at the Sri Raghavendra Swamy Mutt in Jayanagar 5th Block.
As per the directives of Sri Subudhendra Teertha, the celebrations were conducted under the leadership of senior administrator R.K. Vadeendracharya. A series of special rituals were performed at the Brindavana of Raghavendra Swamy, including taila abhyanjana (oil ritual), phala panchamruta abhisheka, kanaka abhisheka, and an elaborate Navaratna Kavacha alankara. The rituals concluded with a grand maha mangalarati and anna prasada distribution for devotees.

In the evening, a special Panchanga Sravana (astrological discourse) was delivered by Dr. Agnihotri Venugopal Acharya, who was honoured with traditional offerings. The festivities also featured a series of cultural and religious events such as pallakki utsava, rathotsava, gajavahana procession, ashtavadhana, and tottilu pooja.

Speaking on the occasion, Nandakishore Acharya said that a large number of devotees visited the mutt, participated in the rituals, and received the blessings of Sri Hari, Vayu, and Guru.
Several dignitaries, including R.K. Vadeendracharya, Nandakishore Acharya, media personality Sripad Patil from Republic Kannada, along with devotees, disciples, volunteers, and staff members, were present during the celebrations.

City Today News 9341997936

ஊஞ்சலில் அருளிய தஞ்சம்மன் – பக்தர்கள் மனம் கவர்ந்த தாலாட்டு சேவை!

வேலூர் கலஸ்பாளையத்தில் அமைந்துள்ள ஸ்ரீ வீரபத்திரர் ஆலயத்தில் எழுந்தருளியிருக்கும் ஸ்ரீ தஞ்சம்மன் அம்மனுக்கு, ஒவ்வொரு மாதமும் அமாவாசை தினத்தன்று சிறப்பு ‘ஊஞ்சல்’ மற்றும் ‘தாலாட்டு’ சேவை பூஜைகள் நடைபெற்று வருகின்றன. அந்த வகையில், பங்குனி மாத அமாவாசையை முன்னிட்டு நடைபெற்ற இந்த சிறப்பு பூஜை நிகழ்ச்சி பக்தி பரவசத்துடன் நடைபெற்றது.

இந்த நிகழ்வுகள் குறித்து ஆலய தர்மகர்த்தா P. பத்மராஜ் தெரிவித்ததாவது, “ஒவ்வொரு அமாவாசை தினத்திலும் அன்னை தஞ்சம்மனுக்கு ஊஞ்சல் மற்றும் தாலாட்டு சேவை நடைபெற்று வருகிறது. இதில் கலந்து கொள்ளும் பக்தர்கள் மனநிறைவு மற்றும் ஆன்மிக அமைதியை பெறுகின்றனர். குறிப்பாக பங்குனி அமாவாசை நாளில் நடைபெறும் பூஜைக்கு சிறப்பு முக்கியத்துவம் உண்டு,” என்றார்.

இந்த ஊஞ்சல் சேவை பூஜையில் ஏராளமான பக்தர்கள் திரளாக கலந்து கொண்டு, அன்னை தஞ்சம்மன் அருளைப் பெற ஆராதனை செய்தனர். அம்மனுக்கு அலங்காரங்கள் செய்து, பாரம்பரிய முறையில் ஊஞ்சல் ஆட்டி, தாலாட்டு பாடல்களுடன் நடைபெற்ற இந்த வழிபாடு பக்தர்களை ஆனந்த நிலைக்குக் கொண்டு சென்றது.
பூஜையின் போது, குடும்ப நலன், ஆரோக்கியம் மற்றும் வாழ்வில் முன்னேற்றம் கிடைக்க வேண்டும் என பக்தர்கள் மனமார வேண்டிக் கொண்டனர். பக்தர்களின் திரளான பங்கேற்புடன் நடைபெற்ற இந்த அமாவாசை சிறப்பு சேவை, ஆலய வளாகத்தில் ஆன்மீக சூழலை உருவாக்கியது.

City Today News 9341997936

ಬೆಂಗಳೂರು: ಆಧ್ಯಾತ್ಮಿಕ ಮಾರ್ಗದರ್ಶನ–ದರ್ಶನ ಕಾರ್ಯಕ್ರಮ ಆಯೋಜನೆ

ಬೆಂಗಳೂರು, ಮಾ.18 — ನಗರದಲ್ಲಿ ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಉದ್ದೇಶದಿಂದ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ (ದಕ್ಷಿಣಪೀಠ, ನಾಣಿಜಧಾಮ, ರತ್ನಾಗಿರಿ) ಅವರ ಉಪಸ್ಥಿತಿಯಲ್ಲಿ ವಿಶೇಷ ‘ಸಮಸ್ಯೆ ಮಾರ್ಗದರ್ಶನ ಹಾಗೂ ದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಂಕರಪುರದ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ. “ನೀವು ಬಾಳಿರಿ, ಇತರರನ್ನು ಬಾಳಿಸಿರಿ” ಎಂಬ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತರ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಗುರುಗಳು ಮಾರ್ಗದರ್ಶನ ನೀಡಲಿದ್ದಾರೆ.

ಸಂಸ್ಥೆಯು ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು, ಗ್ರಾಮ ಸ್ವಚ್ಛತಾ ಅಭಿಯಾನ, ಉಚಿತ ಇಂಗ್ಲಿಷ್ ಮಾಧ್ಯಮ ಶಾಲೆಗಳು, ವೇದಪಾಠ ಶಾಲೆಗಳು, ರಕ್ತದಾನ ಶಿಬಿರಗಳು ಮತ್ತು ಉಚಿತ ಚಿಕಿತ್ಸಾಲಯಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ಇದಲ್ಲದೆ, 185 ಮರಣೋತ್ತರ ದೇಹದಾನ ಹಾಗೂ 143 ಅಂಗಾಂಗ ದಾನಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಿರುವುದು ಗಮನಾರ್ಹ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 53 ಆಂಬ್ಯುಲೆನ್ಸ್‌ಗಳ ಮೂಲಕ 24 ಗಂಟೆಗಳ ತುರ್ತು ಸೇವೆಯನ್ನೂ ನೀಡಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದವರ ಪುನರ್ವಸತಿ, ಮಹಿಳಾ ಸಬಲೀಕರಣಕ್ಕಾಗಿ ಉಚಿತ ಹೊಲಿಗೆ ಯಂತ್ರ ವಿತರಣೆ, ಕಾನೂನು ಸಾಕ್ಷರತಾ ಶಿಬಿರಗಳು ಮತ್ತು ತುರ್ತು ನೆರವು ಕಾರ್ಯಗಳನ್ನು ಸಂಸ್ಥೆ ಕೈಗೊಂಡಿದೆ. ಈ ವರ್ಷ ಜನವರಿಯಲ್ಲಿ ನಡೆದ ರಕ್ತದಾನ ಅಭಿಯಾನದಲ್ಲಿ ಕೇವಲ 15 ದಿನಗಳಲ್ಲಿ 1,71,150 ರಕ್ತದ ಬಾಟಲಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲಾಗಿದೆ. ‘ಬ್ಲಡ್ ಇನ್ ನೀಡ್’ ಮತ್ತು ‘ಏಕ್ ಪೇಡ್ ಮಾಁ ಕೆ ನಾಮ್’ ಯೋಜನೆಯಡಿ 1,11,426 ಮರಗಳನ್ನು ನೆಡುವ ಕಾರ್ಯವೂ ನಡೆದಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಕುಟುಂಬದವರೊಂದಿಗೆ ಭಾಗವಹಿಸಿ ಗುರುಗಳ ಧರ್ಮೋಪದೇಶ ಮತ್ತು ಮಾರ್ಗದರ್ಶನದ ಪ್ರಯೋಜನ ಪಡೆಯುವಂತೆ ಬೆಂಗಳೂರು ಪೀಠದ ಪ್ರಮುಖರಾದ ಅಭಿಜಿತ್ ಅವಸರೆ, ಮಹೇಂದ್ರ ನಿಕಮ್, ಯೋಗೇಶ್ ಗೌಡ, ಬಾಳಾಸಾಹೇಟ್ ಪೊಳ್ ಹಾಗೂ ಜಗದೀಶ್ ಭೋಜೇ ಅವರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

City Today News 9341997936

ಕಂಠೀರವ ಸ್ಟುಡಿಯೋ ವಜ್ರಮಹೋತ್ಸವ ಆಚರಣೆಗೆ ಸರ್ಕಾರದ ಗಮನ ಸೆಳೆಯಲಿ

ಕಂಠೀರವ ಸ್ಟುಡಿಯೋಸ್ ವಜ್ರಮಹೋತ್ಸವ ಆಚರಣೆ, ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವರಣಕ್ಕೆ ಆಗ್ರಹ

ಬೆಂಗಳೂರು, ಮಾ.16: ಬೆಂಗಳೂರಿನ ಕಂಠೀರವ ಸ್ಟುಡಿಯೋ ಸ್ಥಾಪನೆಯ ಪ್ರಮುಖ ರೂವರಿಯಾಗಿದ್ದ ತಿಪಟೂರಿನ ಕಲಾಕಂಠೀರವ ದಿವಂಗತ ಟಿ.ಎಸ್. ಕರಿಬಸಯ್ಯ ಅವರ ಸೇವೆ ಮತ್ತು ಕೊಡುಗೆಗಳನ್ನು ಕನ್ನಡ ಚಿತ್ರೋದ್ಯಮ ಸೂಕ್ತವಾಗಿ ಸ್ಮರಿಸಿಲ್ಲ ಎಂದು ಕಲಾಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟುಡಿಯೋ ಆವರಣದಲ್ಲಿ ಸಿದ್ಧವಾಗಿರುವ ಕರಿಬಸಯ್ಯ ಅವರ ಪುತ್ಥಳಿಯನ್ನು ಇದೇ ತಿಂಗಳ 18ರಂದು ಅನಾವರಣಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ 18ರಂದು ಕಂಠೀರವ ಸ್ಟುಡಿಯೋ ಸ್ಥಾಪನೆಗೆ 60 ವರ್ಷಗಳು ಪೂರ್ಣಗೊಳ್ಳಲಿದ್ದು, ಅದನ್ನು ವಜ್ರಮಹೋತ್ಸವವಾಗಿ ಆಚರಿಸಬೇಕು ಎಂದರು. ಅದೇ ವೇಳೆ ಕರಿಬಸಯ್ಯ ಅವರಿಗೆ 115ನೇ ಜಯಂತಿಯೂ ಆಗುತ್ತಿರುವುದರಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಹಾಗೂ ಕನ್ನಡ ಚಿತ್ರರಂಗವು ಸಮಗ್ರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.

ಕಂಠೀರವ ಸ್ಟುಡಿಯೋ ಸ್ಥಾಪನೆ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಮಹತ್ವದ ತಿರುವು ನೀಡಿದ ಘಟನೆಯಾಗಿದೆ. 1966ರ ತನಕ ಕನ್ನಡ ಸಿನಿಮಾಗಳ ಚಿತ್ರಿಕರಣಕ್ಕಾಗಿ ಕಲಾವಿದರು ಮತ್ತು ತಾಂತ್ರಿಕರು ಮದರಾಸಿಗೆ ತೆರಳಬೇಕಾಗಿದ್ದ ಪರಿಸ್ಥಿತಿ ಇತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸುಸಜ್ಜಿತ ಸ್ಟುಡಿಯೋಗಳ ಕೊರತೆ ಇರುವುದನ್ನು ಮನಗಂಡ ಕರಿಬಸಯ್ಯ ಅವರು ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣ ಅವರೊಂದಿಗೆ ಸೇರಿ ಬೆಂಗಳೂರಿನಲ್ಲಿ ಕಂಠೀರವ ಸ್ಟುಡಿಯೋವನ್ನು ಸ್ಥಾಪಿಸಿದರು. ಇದರಿಂದ ಅನೇಕ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರಿಗೆ ಆಶ್ರಯ ದೊರಕಿತು ಎಂದು ಹೇಳಿದರು.

ರಂಗಭೂಮಿ ಮತ್ತು ಚಿತ್ರರಂಗದ ಅಭಿವೃದ್ಧಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರಿಬಸಯ್ಯ ಅವರ ಕಲಾಸೇವೆ ಇಂದು ಮರೆತಿರುವಂತಾಗಿದೆ ಎಂದು ಅವರು ವಿಷಾದಿಸಿದರು. ಸ್ಟುಡಿಯೋ ಸರ್ಕಾರದ ಸುಪರ್ದಿಗೆ ಬಂದು ಹಲವು ವರ್ಷಗಳಾದರೂ ಅವರ ಸ್ಮರಣಾರ್ಥವಾಗಿ ಯಾವುದೇ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸಿಲ್ಲ ಎಂದು ಆರೋಪಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಶದಲ್ಲಿದ್ದು, ಕಂಠೀರವ ಸ್ಟುಡಿಯೋಸ್ ವಜ್ರಮಹೋತ್ಸವ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಸಂಘಟನೆಗಳು ಒಗ್ಗೂಡಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ತಿಪಟೂರು ದಯಾನಂದ್ ಸಾಗರ್ ಮತ್ತು ಕನ್ನಡ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

City Today News 9341997936

ಸಮಾಜದಲ್ಲಿ ಮಹಿಳೆಯರ ಸ್ಥಾನ ಮತ್ತಷ್ಟು ಬಲವಾಗಲಿ: ಜಿ.ಆರ್. ಪ್ರದೀಪ್

ಮಹಿಳೆಯರ ಗೌರವ ನಮ್ಮೆಲ್ಲರ ಆದ್ಯ ಕರ್ತವ್ಯ: ಜಿ.ಆರ್. ಪ್ರದೀಪ್
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಮಹಿಳಾ ದಿನಾಚರಣೆ

ಬೆಂಗಳೂರು: ಮಹಿಳೆಯರನ್ನು ಗೌರವಿಸುವ ಮನೋಭಾವ ಸಮಾಜದಲ್ಲಿ ನಿರಂತರವಾಗಿ ಬಲಪಡಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ದಕ್ಷಿಣ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿ ಕಾಣುವ ಮನೋಭಾವ ಬೆಳೆಸಬೇಕಿದೆ. ಮಹಿಳಾ ಶಕ್ತಿಗೆ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕಾರ್ಯ ಮುಂದುವರಿಯಬೇಕು ಎಂದು ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ ತಿಳಿಸಿದರು. ವಿವಿಧ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ನೋಂದಣಿಯಾಗುವಂತೆ ಸದಸ್ಯತ್ವ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಮೂಹಿಕ ಮಹಾಲಕ್ಷ್ಮಿ ಪೂಜೆ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಿತು.
ಕಾರ್ಯಕ್ರಮದಲ್ಲಿ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಶಿ, ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷೆ ಪೂರ್ಣಿಮಾ, ರಾಜ್ಯ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಸೋಮಯಾಜಿ, ರಾಜ್ಯ ಉದ್ಯಮ ವಿಭಾಗದ ಅಧ್ಯಕ್ಷ ಶ್ರೀಧರ್, ಬೆಂಗಳೂರು ದಕ್ಷಿಣ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯನಾರಾಯಣ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

City Today News 9341997936