” ಶ್ರೀ ಕ್ಷೇತ್ರ ಮಂತ್ರಾಲಯದ ಅಭಿವೃದ್ಧಿ ಹರಿಕಾರರಾದ -‘ ಪ್ರಾತ:ಸ್ಮರಣೀಯ ಪರಮ ಪೂಜ್ಯ 108 ಶ್ರೀ ಸುಜಯೀoದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ “

ಪರಮಪೂಜ್ಯ ಶ್ರೀ ಸುಜಯೀoದ್ರ ತೀರ್ಥ ಶ್ರೀ ಪಾದಂಗಳವರ ಅಮೃತ ಹಸ್ತಗಳಲ್ಲಿ ಪ್ರತಿಷ್ಟಾಪನೆಗೊಂಡ ಬೆಂಗಳೂರಿನ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಪರಮ ಪೂಜ್ಯ ಶ್ರೀ108 ಶ್ರೀ ಸುಜಯೀoದ್ರ ತೀರ್ಥ ಶ್ರೀಪಾದಂಗಳವರ “ಆರಾಧನಾ” ಪ್ರಯುಕ್ತ ವಿಶೇಷ ಉತ್ಸವಗಳು ಮತ್ತು ವಿದ್ವಾಂಸರಾದ ವಿದ್ವಾನ್ ಗಯಾ ರಾಮಾಚಾರ್ಯರಿಂದ ಪ್ರವಚನ ನೆರವೇರಿತು ಹಾಗೂ ಭಜನಾ ಮಂಡಳಿಯಿಂದ ಶ್ರೀ ಹರಿ ಭಜನೆ ಸನ್ನಿಧಿಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಈ ಆರಾಧನಾ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಆಚರಣೆ

ಬೆಂಗಳೂರು, ಜಯನಗರ: ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವವು ಬೆಂಗಳೂರು ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ನೆರವೇರಿತು. ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ, ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯ ಮತ್ತು ಜಿ.ಕೆ. ಆಚಾರ್ಯರ ನೇತೃತ್ವದಲ್ಲಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಹೋತ್ಸವದ ಅಂಗವಾಗಿ ಶ್ರೀ ಹರಿ ವಾಯು ಉತ್ಸವ ಸೇವಾ ಭಜನಾ ಮಂಡಳಿ ವಿಶೇಷ ಭಜನೆ ನಡೆಸಿದ್ದು, ಭಕ್ತರಿಗಾಗಿ ರಥೋತ್ಸವ ಮತ್ತು ಅನ್ನ ಸಂತರ್ಪಣೆ ಆಯೋಜಿಸಲಾಯಿತು. ನೂರಾರು ಭಕ್ತರು ಈ ಪಾವನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಹರಿ, ವಾಯು, ಗುರುಗಳು ಹಾಗೂ ಶ್ರೀ ಪುರಂದರ ದಾಸರ ಅನುಗ್ರಹಕ್ಕೆ ಪಾತ್ರರಾದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದ್ದಾರೆ.

ಈ ಮಹೋತ್ಸವವು ಭಕ್ತರಲ್ಲಿ ಆಧ್ಯಾತ್ಮಿಕತೆ ಹಾಗೂ ಭಕ್ತಿ ಭಾವನೆ ಹೆಚ್ಚಿಸುವತ್ತ ಒತ್ತಾಸೆಯಾಗಿದೆ.

City Today News 9341997936

ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ 7 ದಿನಗಳ “ಉರೂಸ್ ಮುಬಾರಕ್” – ಭಕ್ತರ ಪಾಲಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾಗಮ



ಬೆಂಗಳೂರು , ಜನವರಿ 29, 2025: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಪವಾಡ ಪುರುಷರಾದ ಬಹು. ಹುತ್ ಸೂಫಿ ಶಹೀದ್ (ರ) ಹಾಗೂ ಸೈಯದ್ ಹಸನ್ ಸಖಾಫ್ ಅಲ್ ಹಳರಮಿ (ರ) ಯವರ ನೆನಪಿಗಾಗಿ ನಡೆಯುವ “ಉರೂಸ್ ಮುಬಾರಕ್” ಈ ಬಾರಿ ಫೆಬ್ರವರಿ 21 ರಿಂದ 28, 2025ರವರೆಗೆ ನಡೆಯಲಿದೆ.

ಈ ಮಹೋತ್ಸವದಲ್ಲಿ ಖತಮುಲ್ ಖುರಾನ್, ಧಾರ್ಮಿಕ ಉಪನ್ಯಾಸಗಳು, ಸಾಮೂಹಿಕ ವಿವಾಹ, ಸಾರ್ವಜನಿಕ ಸಮ್ಮೇಳನ ಮತ್ತು ಸಮಾರೋಪ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಜಾತಿ-ಮತ ಭೇದವಿಲ್ಲದೆ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಫೆಬ್ರವರಿ 24, 2025ರಂದು ಆಗಮಿಸುವ ಭಕ್ತರು ಹಾಗೂ ಭಾಂದವರಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾ-ಅತ್ನ ಅಧೀನದಲ್ಲಿ ಆಯೋಜಿಸಲಾಗುತ್ತಿದೆ.

ಸಯ್ಯದ್ ಕುಟುಂಬದ ನೇತೃತ್ವದ ಧಾರ್ಮಿಕ ಪಂಡಿತರು, ರಾಜ್ಯ ಹಾಗೂ ಹೊರರಾಜ್ಯಗಳಿಂದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

400 ವರ್ಷಗಳ ಪರಂಪರೆಯ ಮಹತ್ವ:
ಹಿಜ್ರಿ 11ನೇ ಶತಮಾನದಲ್ಲಿ, ಇಸ್ಲಾಂನ ನವೋತ್ಥಾನ ನಾಯಕರು ಈಜಿಪ್ಟ್ ನಿಂದ ಪ್ರವಾದಿ (ಸ)ವರ ಝಿಯಾರತ್ ಮುಗಿಸಿ ಧರ್ಮಪ್ರಚಾರಕ್ಕಾಗಿ ಕೊಡಗು ತಲುಪಿದರು. ಕೊನೆಗೆ, ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯವಿಶ್ರಾಂತಿ ಪಡೆದ ಈ ಔಲಿಯಾಗಳ ದರ್ಗಾ ಜನರ ಸಂಕಟಗಳಿಗೆ ಪರಿಹಾರ ದೊರಕುವ ಪುಣ್ಯಸ್ಥಳವಾಗಿ ಬೆಳೆಯುತ್ತಿದೆ.

ಈ ಕಾರ್ಯಕ್ರಮದ ಕುರಿತು ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಬೂಬಕ್ಕರ್ ಸಕಾಫಿ, ಅಧ್ಯಕ್ಷರು ಮನವಿ ಮಾಡಿದರು.

ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಜಮಾ-ಅತ್ ಸದಸ್ಯರನ್ನು ಸಂಪರ್ಕಿಸಲು 7204882008.

City Today News 9341997936

Sadhguru Presence In Chikkaballapur Republic Day Celebration

26 January 2025 : Cool But Bright Sunday At 7:30 am Sadhguru Presence To Chikkaballapur Visit Given Visitors , there Residents And 76th with volunteers Republic Day Celebrated .

Avalagurki Panchayat President Mrs. A. Netra And Their Husband Mr. Satish Who This Brief In the program Participated in Panchayat The president Adiyogi – Naga In the plaza The national flag The national anthem was played . Then , Sadhguru ‘Sannidhiya ‘ Sounds Off Isha ‘s team Volunteers In Kannada Patriotism The song Sung by . Republic Day In case Sadhguru’s Message Kannada And In English With reading Program Finished .



Sadhguru Presence In October 2022 Naga With the establishment To the public Opened . Nagana In addition , the presence To the prestigious ‘ Adiyogi ‘ and ‘ Nandi ‘ Home is the past . Year Capricorn On the day of Sankranti From Sadhguru Established The great arrow This Year Capricorn On the day of Sankranti To the public Unveiled . Independence Day celebration And Republic Day Each Year Sadhguru In the presence Special With programs Celebrated .

City Today News 9341997936

ಆರ್ಟ್ ಕಲ್ಚರಲ್  ಎಜುಕೇಶನಲ್ ಎನ್ಲೈಟ್ ಫೌಂಡೇಶನ್ ವತಿಯಿಂದ “76ನೇ ಗಣರಾಜ್ಯೋತ್ಸವ” ಆಚರಣೆ

“76ನೇ ಗಣರಾಜ್ಯೋತ್ಸವ” ಆಚರಣೆ ಅಂಗವಾಗಿ ಆರ್ಟ್ ಕಲ್ಚರಲ್  ಎಜುಕೇಶನಲ್ ಎನ್ಲೈಟ್ ಫೌಂಡೇಶನ್   ಸಂಸ್ಥಾಪಕಿ ಡಾ|| ಅಂಬಿಕಾ ಸಿ ಮತ್ತು   ಸಂಸ್ಥೆಯವರು
  ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು “ಹೈರೆಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್” ವಿಶ್ವ ದಾಖಲೆ ಪ್ರತಿಭಾ ಪ್ರದರ್ಶನದಲ್ಲಿ ಯಶಸ್ವಿಯಾಗಿ ಪಾಲ್ಗೊಂಡವರಿಗೆ ಪ್ರಶಸ್ತಿ ನೀಡಿ   ಗೌರವಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಸಿ ಎಸ್ ಶ್ವೇತಾ ವಿಶ್ವನಾಥ್ – ಚೈತನ್ಯ ಶಾಲೆಯ ಪ್ರಾಂಶುಪಾಲರು, 
ಡಾ|| ಆರ್ ಸದಾಶಿವಯ್ಯ-  ಖ್ಯಾತ ಜ್ಯೋತಿಷಿ, ಜಿ. ಅಪ್ಪಯಣ್ಣ- ಬಿ ಎಂ ಎಸ್ ಕಾನೂನು ಮಹಾ ವಿದ್ಯಾಲಯದ ಆಡಳಿತ ಅಧಿಕಾರಿ,  ಸಮಾಜ ಸೇವಕರುಗಳಾದ ಬದ್ರಿನಾಥ್ ಕೆ,
ರಾಜಶೇಖರ್ ಜೆ, ಭೂಪಾಲಂ ಸುನಿಲ್, ಶಿವರುದ್ರಪ್ಪ ಮತ್ತು  ಯೋಗ ಗುರು ಕಲಂದರ್ ಭಾಷಾ   ರವರುಗಳು  ಉಪಸ್ಥಿತರಿದ್ದು,   ಕಾರ್ಯಕ್ರಮ ಯಶಸ್ವಿಗೊಳ್ಳುವುದರಲ್ಲಿ
ಮಕ್ಕಳು, ಶಿಕ್ಷಕರು ಮತ್ತು ಪೋಷಕರೊಂದಿಗೆ   ಪ್ರಮುಖ ಪಾತ್ರ ವಹಿಸಿದರು,
ಈ ಕಾರ್ಯಕ್ರಮವನ್ನು ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ವರ್ಡ್ ಕಲ್ಚರ್ ಆಡಿಟೋರಿಯಂ ನಲ್ಲಿ ಏರ್ಪಡಿಸಲಾಗಿತ್ತು.

City Today News 9341997936