೬೫ನೆಯ ಸಿ.ಪಿ.‌ರ್.ಐ ಸಂಸ್ಥಾಪನಾ ದಿನಾಚರಣ ಸಮಾರಂಭದ

ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ (ಸಿ.ಪಿ.ರ್.ಐ), ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಒಂದು ಸ್ವಾಯತ್ತ ಸಂಸ್ಥೆ. ಸಿ.ಪಿ.‌ರ್.ಐನ ಪ್ರಧಾನ ಕಛೇರಿಯು ಬೆಂಗಳೂರಿನ ಸದಾಶಿವನಗರದಲ್ಲಿದೆ. ಆರಂಭದಲ್ಲಿ 1960 ರಲ್ಲಿ ಬೆಂಗಳೂರು ಮತ್ತು ಭೋಪಾಲ್‌ನಲ್ಲಿ ಸ್ಥಾಪಿಸಲಾದ ಸಿಪಿಆರ್‌ಐ ಈಗ ಹೈದರಾಬಾದ್, ನಾಗುರ, ನೋಯ್ತಾ, ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ತನ್ನ ಘಟಕಗಳೊಂದಿಗೆ ದೇಶದ ಇತರ ಸ್ಥಳಗಳಲ್ಲಿ ಹರಡಿದೆ. ನಾಸಿಕ್ ಹಾಗೂ ರಾಯಪುರ್ ದಲ್ಲೂ ಸಹ ಸಿ.ಪಿ.ರ್.ಐ ತನ್ನ ಎರಡು ಘಟಕಗಳನ್ನು ಸ್ಥಾಪಿಸುತ್ತಿದೆ. ಪ್ರಸ್ತುತ ಸಿ ಪಿ ಆರ್ ಐ ನ ಮಹಾನಿರ್ದೇಶಕರಾಗಿ ಶ್ರೀ ಬಿ ಎ ಸಾವಲೆ ಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಿ.ಪಿ.ರ್.ಐ ಭಾರತ ಮತ್ತು ವಿದೇಶಗಳಲ್ಲಿ ಆರು ದಶಕಗಳಿಂದ ವಿದ್ಯುತ್ ವಲಯದ ಉಪಯುಕ್ತತೆಗಳಿಗೆ ಅಪಾರ ಕೊಡುಗೆ ನೀಡುತ್ತಾ ಬರುತ್ತಿದೆ. ಸಿ.ಪಿ.‌ರ್.ಐನ ಚಟುವಟಿಕೆಗಳೆಂದರೆ ವಿದ್ಯುತ್ ವಲಯದಲ್ಲಿ ಅನ್ವಯಿಕ ಸಂಶೋಧನೆ, ವಿದ್ಯುತ್ ಉಪಕರಣಗಳ ಪರೀಕ್ಷಣೆ ಮತ್ತು ಪ್ರಮಾಣೀಕರಣ, ವಿದ್ಯುತ್ ಉಪಯುಕ್ತತೆಗಳಿಗೆ ಮತ್ತು ಉದ್ಯಮಗಳಿಗೆ ಸಲಹೆಗಾರ, ಕ್ಷೇತ್ರ ಪರಿವೀಕ್ಷಣಾ ಮುಂತಾದ ಉಪಯುಕ್ತ ಸೇವೆಗಳನ್ನು ವಿದ್ಯುತ್ ವಲಯಕ್ಕೆ ನೀಡುತ್ತ ಅಪಾರ ಸೇವೆಯನ್ನು ಒದಗಿಸುತ್ತಿದೆ. ಸಿ.ಪಿ.ಆರ್.ಐ ದೇಶದ ವಿದ್ಯುತ್ ಉದ್ಯಮಕ್ಕೆ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಮತ್ತು ಗುಣಮಟ್ಟ ಸುಧಾರಣೆಯಲ್ಲಿ ಒಂದೇ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ವಿದ್ಯುತ್ ಉಪಕರಣಗಳ ಪರೀಕ್ಷೆ ಮತ್ತು ಅವುಗಳ ಪ್ರಮಾಣೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುವುದು ಗಮನಾರ್ಹ ಸಂಗತಿ. ಸ್ವತಂತ್ರ ಪ್ರಾಧಿಕಾರವಾಗಿ

ಸಿ.ಪಿ.‌ರ್.ಐ ತನ್ನ 65ನೇ ಸಂಸ್ಥಾಪನಾ ದಿನಚರಣೆಯನ್ನು ದಿನಾಂಕ 2025 ರ ಜನವರಿ 16 ತಾರೀಖಿನಂದು ಆಚರಿಸಿತು. ಭಾರತ ಸರ್ಕಾರದ ಇಂಧನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳಾದ ಶ್ರೀ ಶ್ರೀಕಾಂತ್ ನಾಗುಲಪಲ್ಲಿ ಐಎಎಸ್, ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಸಂದರ್ಭದಲ್ಲಿ, ಕೊಚ್ಚಿಯ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಒ) ನೌಕಾ ಭೌತಿಕ ಮತ್ತು ಸಮುದ್ರಶಾಸ್ತ್ರ ಪ್ರಯೋಗಾಲಯದ (ಎನ್.ಸಿ.ಒ.ಎಲ್) ನಿರ್ದೇಶಕ ಮತ್ತು ಅತ್ಯುತ್ತಮ ವಿಜ್ಞಾನಿಯೆಂಬ ಖ್ಯಾತಿ ಪಡೆದ ಡಾ. ಡಿ. ಶೇಷಗಿರಿಯವರು, 35 ನೇ ಜವಾಹರಲಾಲ್ ನೆಹರು ಸ್ಮಾರಕ ಉಪನ್ಯಾಸವನ್ನು”ವಾಯುಗಾಮಿ ರೇಡಾರ್ಗಳು. ಭಾರತೀಯ ಸನ್ನಿವೇಶ” ಎಂಬ ವಿಷಯದ ಮೇಲೆ ನೀಡಿದರು. ಮಹಾನಿರ್ದೇಶಕ ಶ್ರೀ ಬಿ.ಎ.ಸಾವಲೆ ಅಧ್ಯಕ್ಷತೆ ವಹಿಸಿದ್ದರು. సి.పి.రా.ఐ ಸಂಸ್ಥೆಯ ನಿರ್ದೇಶಕರುಗಳಾದ ಶ್ರೀ ಸ್ವರಾಜ್ ಕುಮಾರ್ ದಾಸ್ ಮತ್ತು ಶ್ರೀ ಸುಧಾಕರ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

City Today News 9341997936

“ಧನುರ್ಮಾಸ ಸಮಾಪ್ತಿ- ಪೌರ್ಣಮಿ ಪ್ರಯುಕ್ತ ಪ್ರಾತಃಕಾಲ ಸಾಮೂಹಿಕ ಶ್ರೀಸತ್ಯನಾರಾಯಣ ವ್ರತ ಪೂಜೆಯೊಂದಿಗೆ ದರ್ಶನ ಪಡೆದ ಭಕ್ತರು”

“ಧನುರ್ಮಾಸ ಸಮಾಪ್ತಿ- ಪೌರ್ಣಮಿ ಪ್ರಯುಕ್ತ ಪ್ರಾತಃಕಾಲ ಸಾಮೂಹಿಕ ಶ್ರೀಸತ್ಯನಾರಾಯಣ ವ್ರತ ಪೂಜೆಯೊಂದಿಗೆ ದರ್ಶನ ಪಡೆದ ಭಕ್ತರು”

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ  ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ “ಪೌರ್ಣಮಿ”ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ರಾಘವೇಂದ್ರ ಕಟ್ಟಿ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾ ಕರ್ತೃಗಳು  ಸತ್ಯನಾರಾಯಣವ್ರತ ಪೂಜೆಯಲ್ಲಿ   ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ತೀರ್ಥ “ಮಂತ್ರಾಕ್ಷತೆ” ಪ್ರಸಾದವನ್ನು ಸ್ವೀಕರಿಸಿ  ಹಾಗೂ ಶ್ರೀ ಹರಿ ವಾಯು ಗುರುಗಳಿಗೆ ಸಮರ್ಪಿಸಿದ “ಹುಗ್ಗಿ ಮತ್ತು ಪೊಂಗಲ್” ಪ್ರಸಾದವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

Cith Today News 9341997936

ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ಕಾರ್ಯಾಧ್ಯಕ್ಷರಾದ  ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ( ದಿ) ಸುಕ್ಷೇತ್ರ ನರಸಿಪುರ ಹಾವೇರಿ ಹಾಗೂ ಮಾಜಿ ಸಚಿವರು ಕರ್ನಾಟಕ ಸರಕಾರ, ರವರ ನೇತೃತ್ವದಲ್ಲಿ ಗುರುಪೀಠದ ಮುಖಂಡರುಗಳ ಸಮ್ಮುಖದಲ್ಲಿ ನಡೆಸಿ ಕೆಳಕಂಡ ಮಾಹಿತಿ ನೀಡಿದರು.

ಸ್ಥಳ: ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ(ರಿ), ಸುಕ್ಷೇತ್ರ ನರಸಿಪುದ, ಹಾವೇರಿ : 14 ಮತ್ತು 15 ಜನವರಿ 2025.

ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ 7ನೇ ಅಂಬಿಗರ ಶರಣ ಸಂಸ್ಕೃತಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತಿಯನ್ನು ಆಚರಿಸಲಾಗುತ್ತಿದೆ.

ಕಾರ್ಯಕ್ರಮದ ವಿಶೇಷತೆಗಳು:

ನೇತೃತ್ವ ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮ ಚೌಡಯ್ಯ ಪೀಠಾಧ್ಯಕ್ಷರು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರ ತಾಲ್ಲೂಕು ಹಾವೇರಿ

ಮುಖ್ಯ ಅತಿಥಿಗಳು : ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳು ಶ್ರೀ ಸಿದ್ದರಾಮಯ್ಯನವರು

ವಿವಿಧ ಧಾರ್ಮಿಕ ಕಾರ್ಯಕ್ರಮಗಳು: ಶ್ರೀ ಅಂಬಿಗರ ಚೌಡಯ್ಯನವರ ತೊಟ್ಟಿಲು ಉತ್ತವ ಹಾಗೂ ಮೂಲ ಐಕ್ಕ ಮಂಟಪದ ಪೂಜೆ

ಸಮಾಜ ಸೇವೆ: ರಕ್ತದಾನ ಶಿಬಿರ

ಸಾಮಾಜಿಕ ಕಾರ್ಯಕ್ರಮಗಳು : ಸರಳ ಸಾಮೂಹಿಕ ವಿವಾಹ ಮಹೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು: ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ, ಪ್ರಪ್ರಥಮ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ.
ಸಾಹಿತ್ಯಕ ಕಾರ್ಯಕ್ರಮ: ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗ್ರಂಥ ಬಿಡುಗಡೆ.

ಹಾಗಾಗಿ ಈ ಕಾರ್ಯಕ್ರಮವು ಸಮಸ್ತ ಕರ್ನಾಟಕದ ಜನತೆಗ ಹಾಗೂ ಅಂಬಿಗ, ಮೀನುಗಾರ. ಕಬ್ಬಲಿಗ ಹಾಗೂ ಇನ್ನಿತರ ಮೀನುಗಾರ ಸಮಾಜದ ಬಂಧುಗಳು ಆಗಮಿಸಲು ಕಾರ್ಯಕ್ರಮವನ್ನು ಯಶಸ್ವೀ ಗೊಳಿಸಲು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಅಂದರು.

City Today News 9341997936

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಏಕಾದಶಿ ಟಿಟಿಡಿ ಮಾಹಿತಿ`          

                                                                              

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಟಿಟಿಡಿ ಮಾಹಿತಿ ಕೇಂದ್ರ, 16 ಕ್ರಾಸ್, ವೈಲ್ಕಾವಲ್ ಬೆಂಗಳೂರು, ದೇವಸ್ಥಾನದ ಅಧಿಕಾರಿಗಳು 10.01.2025 ರಂದು ವೈಕುಂಠ ಏಕಾದಶಿಯ ಮುನ್ನಾದಿನದಂದು 3.30 AM ನಿಂದ 11.45 PM ವರೆಗೆ ನಿರಂತರವಾಗಿ ಎಲ್ಲಾ ಭಕ್ತರಿಗೆ ಅನುಕೂಲಕರವಾದ ದರ್ಶನ ಸೌಕರ್ಯವನ್ನು ಏರ್ಪಡಿಸುತ್ತಿದ್ದಾರೆ. ಸಾಯಿ ಭೋಜನದಲ್ಲಿ ನಿರಂತರವಾಗಿ ಅನ್ನಪ್ರಸಾದವನ್ನು ಉಚಿತವಾಗಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ

ವ್ಯವಸ್ಥೆಗಳ ಜೊತೆಗೆ ಟಿಟಿಡಿಯು ಸ್ನಿವಾರಿ ಲಡ್ಡು ಪ್ರಸಾದವನ್ನು 50/- ದರದಲ್ಲಿ ಪ್ರತಿ ಲಡ್ಡುಗಳನ್ನು ಬೆಳಿಗ್ಗೆ 5.00 ರಿಂದ ಸ್ಟಾಕ್ ಪೂರ್ಣಗೊಳ್ಳುವವರೆಗೆ ಮಾರಾಟ ಮಾಡುತ್ತಿದೆ. ದೇವಾಲಯದ ಭಕ್ತರ ಅನುಕೂಲಕ್ಕಾಗಿ ಅಗರಬತ್ತಿ, ಪಂಚಗವ್ಯ ಉತ್ಪನ್ನಗಳಂತಹ ಟಿಟಿಡಿ ಉತ್ಪನ್ನಗಳ ಮಾರಾಟವನ್ನು ಸಹ ಮಾಡಲಾಗಿದೆ.

ಬೆಂಗಳೂರಿನ ಎಚ್‌ಡಿಪಿಪಿಯಿಂದ ಸಾಂಸ್ಕೃತಿಕ ಮತ್ತು ಭಕ್ತಿ ಕಾರ್ಯಕ್ರಮಗಳನ್ನು ಈ ದೇವಾಲಯದ ಆವರಣದಲ್ಲಿ ದಿನವಿಡೀ ವಿಶೇಷವಾಗಿ ಆಯೋಜಿಸಲಾಗಿದೆ.

ಈ ದೇವಾಲಯದಲ್ಲಿ ವೆಂಕಟೇಶ್ವರನ ದರ್ಶನ ಮತ್ತು ಆಶೀರ್ವಾದವನ್ನು ಹೊಂದಲು ಮತ್ತು ವೈಕುಂಠ ಏಕಾದಶಿ ದಿನದಂದು ಏರ್ಪಡಿಸಲಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲಾ ಭಕ್ತರು, ಬೆಂಗಳೂರಿನವರಿಗೆ ಟಿಟಿಡಿ ಅಧಿಕಾರಿಗಳು ವಿಶೇಷವಾಗಿ ಭಗವಾನ್ ವೆಂಕಟೇಶ್ವರನ ಸೇವೆಯಲ್ಲಿ ಸಹಾಯಕ ಮಾಜಿ ಅಧಿಕಾರಿ, TTD, BLR ಯವರು ವಿನಂತಿಸಿರುತ್ತಾರೆ.

City Today News 9341997936

ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ”ಶ್ರೀಗುರುರಾಘವೇಂದ್ರರ ಉತ್ಸವ” “ಉದ್ಘಾಟನೆ”

“ಶ್ರೀಗುರುರಾಘವೇಂದ್ರರ ಉತ್ಸವ”
ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಶ್ರೀಗಳಿಂದ “ಉದ್ಘಾಟನೆ” ಜಯನಗರ ಶಾಲಿನಿ ಮೈದಾನದಲ್ಲಿ ಸಹಸ್ರಾರು ಭಕ್ತ ಜನ ಸಾಗರ ಭಕ್ತರಿಗೆ ಮಂತ್ರಾಲಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ”

ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹತ್ತಿರದಲ್ಲಿರುವ ಶಾಲಿನಿ ಮೈದಾನದಲ್ಲಿ ಶ್ರೀ ಗುರುರಾಘವೇಂದ್ರರ ಉತ್ಸವ ವೈಭವದ ರೂವಾರಿಯಾದ ಖ್ಯಾತ ಚಲನಚಿತ್ರ ನಿರ್ದೇಶಕರಾದ  ಡಾ|| ಮಧುಸೂದನ್ ಹವಾಲ್ದಾರ್  ಹಾಗೂ ಸಿರಿ ಕನ್ನಡ ಟಿವಿ ಚಾನೆಲ್ ಮುಖ್ಯಸ್ಥರಾದ ಶ್ರೀ ಸಂಜಯ್ ಸಿಂಧ್ಯಾ ಮತ್ತು ಸಿ ಆರ್ ಮುರಳಿ ಇವರುಗಳ ತಂಡದಿಂದ ಶ್ರೀ ರಾಘವೇಂದ್ರರ ಉತ್ಸವದ ವಿಶೇಷ ಅತ್ಯಂತ ಸುಂದರ ವೈಭವದಿಂದ ಈ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು. ವಿಶೇಷವಾಗಿ ಮಂತ್ರಾಲಯ ಕ್ಷೇತ್ರದ ಮರು ನಿರ್ಮಾಣವನ್ನೇ ಈ ಮೈದಾನದಲ್ಲಿ ಶ್ರೀ ರಾಘವೇಂದ್ರ ಉತ್ಸವಕ್ಕಾಗಿ ಮಾಡಲಾಗಿತ್ತು. ಮುಖ್ಯಪ್ರಾಣ ದೇವರ ಗುಡಿ, ರಾಯರು ಬೃಂದಾವನ , ಸುವರ್ಣದ ಗೋಪುರ, ರಾಯರ ಜೀವನ ಚರಿತ್ರೆ ಮತ್ತು ಮಂತ್ರಾಲಯ ಶ್ರೀಗಳ ಜೀವನ ಚರಿತ್ರೆ ಹಾಗೂ ಶ್ರೀಗಳಿಂದ ಅನುಗ್ರಹ ಸಂದೇಶ ಗಣ್ಯರಿಗೆ  ನಟ ನಟಿಯರಿಗೆ ರಾಜಕಾರಣಿಗಳಿಗೆ ಮತ್ತು ಭಕ್ತರಿಗೆ ಶ್ರೀ ರಾಘವೇಂದ್ರರ ಅನುಗ್ರಹ ಪ್ರಶಸ್ತಿಯನ್ನು ಆಯೋಜಿಸಲಾಗಿತ್ತು. ಈ ಒಂದು ಕಾರ್ಯಕ್ರಮಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಭವ್ಯ ಮೆರವಣಿಯೊಂದಿಗೆ ಸ್ವಾಗತಿಸಿ ತದನಂತರ  ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಅವರ ಅಮೃತ ಹಸ್ತದಿಂದ ಈ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಯರ ಬೃಂದಾವನಕ್ಕೆ ಪುಷ್ಪಾರ್ಚನೆ ಮಹಾಮಂಗಳಾರತಿಯೊಂದಿಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ, ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡುತ್ತಾ ಶ್ರೀ ರಾಘವೇಂದ್ರ ಸ್ವಾಮಿಗಳವರು ಪ್ರತಿಯೊಬ್ಬ ಭಕ್ತರಿಗೂ ಪೂಜ್ಯ ಗುರುಗಳು ಗುರು ರಾಯರನ್ನು ಯಾರು ಭಕ್ತಿಭಾವದಿಂದ ನಿಷ್ಕಲ್ಮಶದಿಂದ ಪ್ರಾರ್ಥಿಸುತ್ತಾರೋ ಅಂತಹ ಭಕ್ತರಿಗೆ ಶೀಘ್ರವಾಗಿ  ಫಲವನ್ನು ಕೊಡುವಂತಹ ಗುರುಗಳು ನಮ್ಮ ನಿಮ್ಮ ರಾಯರು ಕಲಿಯುಗದ ಕಾಮಧೇನು ಕಲ್ಪವೃಕ್ಷ ಗುರು ರಾಘವೇಂದ್ರರು. ಆದ್ದರಿಂದ ಪ್ರತಿಯೊಬ್ಬ ಭಕ್ತರ ಮನಸ್ಸಿಗೆ ಹತ್ತಿರವಾಗುವ ಗುರುಗಳು ರಾಘವೇಂದ್ರರು ಇಂತಹ ರಾಘವೇಂದ್ರರ ಉತ್ಸವವನ್ನು ಅತ್ಯಂತ ವೈಭವವಾಗಿ ಆಚರಿಸಿ “ಮನೆಯೇ ಮಂತ್ರಾಲಯ ಮನಸೇ ದೇವಾಲಯ” ಎಂಬ ಮಾತಿನಂತೆ ಮಂತ್ರಾಲಯ ಕ್ಷೇತ್ರವನ್ನು ಮರು ನಿರ್ಮಾಣವಾಗಿ ಬೆಂಗಳೂರಿನ ಮಹಾನಗರದಲ್ಲಿ ಮಾಡಲಾಗಿದ್ದು ನೋಡಿ ಬಹಳ ಸಂತೋಷವನ್ನು ವ್ಯಕ್ತಪಡಿಸುತ್ತಾ ಪಂಡಿತರಿಗೆ, ಹಿರಿಯರಿಗೆ, ಗಣ್ಯರಿಗೆ ಮತ್ತು ಕಲಾವಿದರಿಗೆ ಭಕ್ತರಿಗೂ ಅನುಗ್ರಹ ಸಂದೇಶವನ್ನು ನೀಡಿ ಫಲ ಮಂತ್ರಾಕ್ಷತೆ ಶೇಷವಸ್ತ್ರ ಕೊಟ್ಟು ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಧೀಶರಾದ ಶ್ರೀಯುತ ವಿ, ಶ್ರೀಶಾನಂದರವರು ಹಾಗೂ ಡಾ|| ಮಧುಸೂದನ್ ಹವಾಲ್ದಾರ್, ಸಿರಿ ಚಾನೆಲ್ ಮುಖ್ಯಸ್ಥರಾದ ಶ್ರೀಯುತ ಸಂಜಯ್ ಸಿಂದ್ಯಾ , ಆಡಿಟರ್ ಸಿ ಆರ್ ಮುರಳಿ , ಸುಬ್ಬನರಸಿಂಹ, ಸಿ ಕೆ ರಾಮಮೂರ್ತಿ, ವಿದ್ವಾನ್ ಅರಳು ಮಲ್ಲಿಗೆ ಪಾರ್ಥಸಾರಥಿ, ಡಾ|| ವ್ಯಾಸನಕೆರೆ ಪ್ರಭಂಜನಾಚಾರ್, ಡಿ ಪಿ ಅನಂತ, ಚಿತ್ರನಟರಾದ ಡಾಲಿ ಧನಂಜಯ, ಆಶಿಕಾ ರಂಗನಾಥ್, ವಿಜಯ ಕೃಷ್ಣ ಅರ್ಚನಾ ಉಡುಪ, ರಾಯಚೂರು ಶೇಷಗಿರಿದಾಸ್, ಮಂಜುಳಾ ಗುರುರಾಜ್, ಅನಂತ ಕುಲಕರ್ಣಿ, ವರದೇಂದ್ರ ಗಂಗಾಗೇಡ್, ಆರ್. ಕೆ. ವಾದಿಂದ್ರಾಚಾರ್ , ಅಪ್ರಮೇಯ ಆಚಾರ್ ನಂದಕಿಶೋರಾಚಾರ್ , ಬಂಡಿ ಶಾಮಾಚಾರ್, ಅಗ್ನಿಹೋತ್ರಿ ವೇಣುಗೋಪಾಲಾಚಾರ್ , ಹಾಗೂ ಹಲವಾರು ಗಣ್ಯರಿಗೆ ಭಕ್ತರಿಗೆ ಫಲ ಮಂತ್ರಾಕ್ಷತೆ ಕೊಟ್ಟು ಶ್ರೀಪಾದರು ಅನುಗ್ರಹಿಸಿದರು. ಈ ವಿಶೇಷವಾದ ಉತ್ಸವಕ್ಕೆ  ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಹಕಾರ ಪರಮಪೂಜ್ಯ ಶ್ರೀಪಾದಂಗಳವರ ಆಶೀರ್ವಾದ ಅನುಗ್ರಹದೊಂದಿಗೆ ಈ ಉತ್ಸವದ ಕಾರ್ಯಕ್ರಮವು ಶ್ರೀಯುತ ಡಾ|| ಮಧುಸೂದನ್ ಹವಾಲ್ದಾರ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು, ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು ಗುರು ರಾಯರ ದರ್ಶನ ಶ್ರೀಪಾದಂಗಳವರ ಅನುಗ್ರಹವನ್ನು ಪಡೆದುಕೊಂಡು ಕೃತಾರ್ಥರಾದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸಹಸ್ರಾರು ಭಕ್ತರಿಗೂ ಕೂಡ ಮಂತ್ರಾಲಯದ ಮಂತ್ರಾಕ್ಷತೆ ಮಂತ್ರಾಲಯದ ಪರಿಮಳ ಪ್ರಸಾದ ಸ್ವೀಕರಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936