ಅಕ್ಷಯ ಬ್ರಾಹ್ಮಣ ಮಹಾಸಂಘದ 6ನೇ ವಾರ್ಷಿಕೋತ್ಸವ ಪ್ರಯುಕ್ತ  ಸೀತಾರಾಮ ಕಲ್ಯಾಣೋತ್ಸವ.

ಅಕ್ಷಯ ಬ್ರಾಹ್ಮಣ ಮಹಾಸಂಘದ 6ನೇ ವಾರ್ಷಿಕೋತ್ಸವ ಪ್ರಯುಕ್ತ  ಸೀತಾರಾಮ ಕಲ್ಯಾಣವನ್ನು ಜ್ಯೋತಿ ಬೆಳಗುವ ಮೂಲಕ ಸಂಘದ ಅಧ್ಯಕ್ಷರಾದ ಡಾ.ಅಂಬರೀಶ್ ಜಿ ಮತ್ತು ಡಾ. ಸಿ.ಎನ್.ಅಶ್ವಥ್ ನಾರಾಯಣ ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಬಿಬಿಎಂಪಿ ಮಾಜಿ ಸದಸ್ಯರಾದ  ಎನ್.ಜೈಪಾಲ್ ಬಿಬಿಎಂಪಿ ಮಾಜಿ ಸದಸ್ಯರಾದ ಮುನಿಸ್ವಾಮಿ ಗೌಡ ಮತ್ತು ಗಣೇಶ ದೀಕ್ಷಿತ್ ವೆಂಕಟರಮಣ ಶಾಸ್ತ್ರಿ  ಮತ್ತು ಭಾನುಪ್ರಕಾಶ್ ಶರ್ಮ ಭಾಗವಹಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಯಶವಂತಪುರ ಭಾಗದ ಸಾವಿರಾರು ಜನ ಭಕ್ತರು ಭಾಗವಹಿಸಿ ಸೀತಾರಾಮ ಕಲ್ಯಾಣೋತ್ಸವಕ ಯಶಸ್ವಿಯಾಗಿ ನೆರವೇರಿಸಿದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ, ಅನ್ನದಾನ ಸೇವೆ ಹಾಗೂ ಸಂಜೆ “ಭರತನಾಟ್ಯ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಡಿಸೆಂಬರ್ 19, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ಕಾವ್ಯ ರಾವ್ ಅವರ ನಿರ್ದೇಶನದಲ್ಲಿ ಹೇಮಾದ್ರಿ ಸ್ಟುಡಿಯೋಸ್  ವಿದ್ಯಾರ್ಥಿಗಳಿಂದ “ಭರತನಾಟ್ಯ” ಕಾರ್ಯಕ್ರಮವು ವಿಶೇಷವಾಗಿ ಜರುಗಿತು ಎಂದು ಶ್ರೀ  ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ನೂರಾರು ಭಕ್ತರು ಭರತನಾಟ್ಯ ಕಾರ್ಯಕ್ರಮವನ್ನು ವೀಕ್ಷಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಟ್ಟು ಸಂತೋಷ ವ್ಯಕ್ತಪಡಿಸಿದರು.

City Today News 9341997936

ಇಂದು ಯಶ್ವಂತಪುರದಲ್ಲಿ ಶ್ರೀ ದಾರಿ ಆಂಜನೇಯ ಹನುಮೋತ್ಸವದ ಐದನೆಯ ದಿನದ ರಥಯಾತ್ರೆ

ದಿನಾಂಕ 17 12 2024 ಮಂಗಳವಾರ ಬೆಳಿಗ್ಗೆ ವಾಯುಸ್ತುತಿ ಪೂರ್ವಕ ಮಧು ಅಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಬೆಳಿಗ್ಗೆ 10:30 ಕ್ಕೆ ವಾಯುಸ್ತುತಿ ಪುರಸ್ಚರಣ ಪವಮಾನ ಹೋಮ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಸಂಜೆ 5:30ಕ್ಕೆ ಯಶವಂತಪುರ ಪ್ರಮುಖ ಬೀದಿಗಳಲ್ಲಿ ಸಂತೃಪ್ತಿ ಬಳಗದಿಂದ ಆಂಜನೇಯ ದೇವರ ರಥಯಾತ್ರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹನುಮ ಸೇನೆ ಎಲ್ಲರೂ ಜೊತೆಗೂಡಿ ನೆರವೇರಿಸಲಿದ್ದಾರೆ ಸರ್ವರಿಗೂ ಸರ್ವರಿಗೂ ಸ್ವಾಗತ ಸುಸ್ವಾಗತ.

City Today News 9341997936

ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ “ಧನುರ್ಮಾಸ ಪೂಜೆ  ಪ್ರಾರಂಭ” ರಾಯರ ಸನ್ನಿಧಿಯಲ್ಲಿ 17-12-2024 ರಿಂದ 13-1-2025

“ಧನುರ್ಮಾಸ ಪೂಜೆ  ಪ್ರಾರಂಭ” ರಾಯರ ಸನ್ನಿಧಿಯಲ್ಲಿ 17-12-2024 ರಿಂದ 13-1-2025
ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ
ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌ , ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ 17-12-2024 ರಿಂದ 13-1-2025ವರೆಗೆ ಧನುರ್ಮಾಸದ ಪ್ರಯುಕ್ತ  ರಾಯರ ಸನ್ನಿಧಿಯಲ್ಲಿ ಪ್ರಾತ : ಕಾಲದಲ್ಲಿ  ಪೂಜಾದಿ ಉತ್ಸವಗಳು ನೆರವೇರುತ್ತದೆ ಪ್ರತಿ ಗುರುವಾರ ಮಾತ್ರ ಸಂಜೆ 7 ಕ್ಕೆ ಉತ್ಸವಗಳು ನೆರವೇರುತ್ತದೆ, ವಿಶೇಷವಾಗಿ ಪ್ರಾತ :ಕಾಲದ ಧನುರ್ಮಾಸದಲ್ಲಿ ಹುಗ್ಗಿ ಮತ್ತು ಪೊಂಗಲ್ ನಿವೇದನ ಸೇವೆ ಕಾರ್ಯಕ್ರಮವು ನೆರವೇರುತ್ತದೆ ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದ್ದಾರೆ ಈ ಸೇವೆಗಳಲ್ಲಿ ಭಾಗವಹಿಸುವಂತ ಭಕ್ತರು ಶ್ರೀ ಮಠದ ಈ ವಾಟ್ಸಪ್ 944 9133929 ನಂಬರ್  ಆನ್ಲೈನ್ ಮುಖಾಂತರ  ಸೇವೆ ಸಲ್ಲಿಸಿ ಶ್ರೀ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು. ಹೆಚ್ಚಿನ ಮಾಹಿತಿಗಾಗಿ -08022443962- 9945429129 -8660349906.

City Today News 9341997936

ಬೆಂಗಳೂರಿನ ಜಯನಗರ 5ನೇ ಬಡಾವಣೆಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ” ಶ್ರೀ ಸತ್ಯನಾರಾಯಣ ವ್ರತಪೂಜೆ”

” ಶ್ರೀ ಸತ್ಯನಾರಾಯಣ ವ್ರತಪೂಜೆ”
ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ
ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ  ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್‌. ಕೆ. ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ “ಪೌರ್ಣಮಿ” ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ಶ್ರೀ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾ ಕರ್ತೃಗಳು ಈ ಸತ್ಯನಾರಾಯಣ ವ್ರತದ  ಪೂಜೆಯ ಸಂಕಲ್ಪವನ್ನು ಮಾಡಿ ವ್ರತದ ಪೂಜೆಯಲ್ಲಿ  ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ  ಪಾತ್ರರಾದರು. ಹಾಗೂ  ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ ಮತ್ತು ವಿಶೇಷ ಉತ್ಸವಗಳು ನೆರವೇರಿತು.

City Today News 9341997936