ಅಯ್ಯಪ್ಪ ಧರ್ಮಾಚಾರ ಸೇವಾಶ್ರಮದ ವತಿಯಿಂದ ಗಣಪತಿ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪನಿಗೆ ಅಷ್ಟಾಭಿಷೇಕ, ಅಯ್ಯಪ್ಪ ಲಕ್ಷಾರ್ಚನೆ ,ಪಡಿಪೂಜೆ ಮಹಾ ಮಂಗಳಾರತಿ

ಶ್ರೀ ಅಯ್ಯಪ್ಪ ಸ್ವಾಮಿ ಮಂಡಲೋತ್ಸವ
ಬೆಂಗಳೂರಿನ  ಚಾಮರಾಜಪೇಟೆಯಲ್ಲಿ  ಮಂಡಲೋತ್ಸವದ  ಶುಭ ದಿನದಂದು ಶ್ರೀ ಅಯ್ಯಪ್ಪ ಧರ್ಮಾಚಾರ ಸೇವಾಶ್ರಮದ ವತಿಯಿಂದ ಗಣಪತಿ, ಸುಬ್ರಹ್ಮಣ್ಯ ಮತ್ತು ಅಯ್ಯಪ್ಪನಿಗೆ ಅಷ್ಟಾಭಿಷೇಕ, ಅಯ್ಯಪ್ಪ ಲಕ್ಷಾರ್ಚನೆ ,ಪಡಿಪೂಜೆ ಮಹಾ ಮಂಗಳಾರತಿ ನೆರವೇರಿತು ನಂತರ ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.  ಈ ಸಂದರ್ಭದಲ್ಲಿ  ಹಲವಾರು ಅಯ್ಯಪ್ಪ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಧರ್ಮ ಶಾಸ್ತರ ಆಶೀರ್ವಾದ ಪಡೆದರು ಎಂದು  ವ್ಯವಸ್ಥಾಪಕರಾದ ಶ್ರೀ ಚೇತನ್ ಗುರುಸ್ವಾಮಿ ತಿಳಿಸಿದರು (ಸದಾಸ್ – ಸದಾ ಧರ್ಮಶಾಸ್ತಾನ ಸೇವೆಯಲ್ಲಿ).

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ‘ಧನುರ್ಮಾಸ” ದ್ವಾದಶಿ ಪ್ರಾತಃಕಾಲದ ವಿಶೇಷ ಪೂಜೆ

“ಮಂತ್ರಾಲಯ ಶ್ರೀಗಳಿಂದ ಧನುರ್ಮಾಸ ಪೂಜೆ” ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ  ಶ್ರೀಮನ್ ಮೂಲರಾಮಚಂದ್ರದೇವರ ಸಂಸ್ಥಾನ ಪೂಜೆ ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ
‘ಧನುರ್ಮಾಸ” ದ್ವಾದಶಿ ಪ್ರಾತಃಕಾಲದ ವಿಶೇಷ ಪೂಜೆ, ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ನೆರವೇರಿತು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀಗಳು ತಮ್ಮ ಅಮೃತ ಹಸ್ತದಿಂದ ಮಹಾಮಂಗಳಾರತಿಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ  ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್  ಹಾಗೂ ಭಕ್ತರು ಶಿಷ್ಯರು ಪೂಜೆಯಲ್ಲಿ ಭಕ್ತಿಯಿಂದ ಭಾಗವಹಿಸಿದ್ದರು ಎಂದು ಪುರೋಹಿತರಾದ ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಇದೇ ಸಂದರ್ಭದಲ್ಲಿ  ನೂರಾರು ಭಕ್ತರು ಶ್ರೀಗಳಿಂದ ತೀರ್ಥ ಫಲ ಮಂತ್ರಾಕ್ಷತೆ ಪ್ರಸಾದ ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ‘ಶ್ರೀ ವಾಸವಿ ಕಾಂಡಿಮೆಂಟ್ಸ್’ ನ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರವರೆಗೆ ‘ಶ್ರೀ ವಾಸವಿ ಅವರೆಬೇಳೆ ಮೇಳ’ ನಡೆಯಲಿದೆ ಎಂದು ತಿಳಿಸಿದರು.

ಬೆಂಗಳೂರಿನ ಮಂದಿಗೆ ‘ಶ್ರೀ ವಾಸವಿ’ ಕಾಂಡಿಮೆಂಟ್ಸ್ ನ ಪರಿಚಯ ಇದ್ದೇ ಇರುತ್ತದೆ. ರುಚಿಕಟ್ಟು, ಅತ್ಯುತ್ತಮ ಗುಣಮಟ್ಟ ಮತ್ತು ತಾಜಾ ತಿಂಡಿ ತಿನಿಸುಗಳಿಗೇ ಹೆಸರು ವಾಸಿಯಾದ ವಾಸವಿ ಕಾಂಡಿಮೆಂಟ್ಸ್ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ವಿನೂತನವಾದ ಸಾಹಸ- ಪ್ರಯೋಗವನ್ನು ಮಾಡುತ್ತಾ ಅದರಲ್ಲಿ ಅಮೋಘ ಯಶಸ್ಸು ಕಂಡಿದೆ.

ಅದೇನೆಂದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ಶ್ರೀ ವಾಸವಿ ಕಾಂಡಿಮೆಂಟ್ಸ್ನ ವತಿಯಿಂದ ಅವರೇಕಾಯಿ ಮೇಳವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಅವರೇಕಾಯಿಯಿಂದ ತಯಾರಾದ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು, ಸಿಹಿ, ಖಾರ ಪದಾರ್ಥಗಳು ಸೇರಿದಂತೆ ಸುಮಾರು ನೂರು ಬಗೆಯ ತಿಂಡಿ, ತಿನಿಸುಗಳು, ರುಚಿಕಟ್ಟಾದ ಖಾದ್ಯಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಬೆಂಗಳೂರಿನ ಬಹಗಳಷ್ಟು ಜನ ಈ ವಾರ್ಷಿಕ ಅವರೇಕಾಯಿ ಮೇಳಕ್ಕಾಗಿ ಕಾತರಿಸುವಂತಾಗಿದೆ. ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಡಿಸೆಂಬರ್ 27, 2024 ರಿಂದ ಜನವರಿ 5, 2025ರ ತನಕ ಈ ಅದ್ದೂರಿ ಮೇಳ ನಡೆಯಲಿದ್ದು, ಎಂದಿನಂತೆ ಬೆಳಿಗ್ಗೆ 10ರಿಂದ 10ರ ತನಕ ಅಂಗಡಿ ತೆರೆದಿರುತ್ತದೆ. ಸಂಜೆ ತರಿಂದ ರಾತ್ರಿ 10ರ ತನಕ ಮಾತ್ರ ಕವಿಶೇಷ ಖಾದ್ಯಗಳಾದ ದೋಸೆ, ವಡೆ ಇತ್ಯಾದಿಗಳು ದೊರೆಯಲಿವ

ಮಾಗಡಿ ತಾಲೂಕಿನಲ್ಲಿ ರೈತರು ಬೆಳೆದ ಅವರೇಕಾಯಿಯನ್ನು ‘ವಾಸವಿ ಕಾಂಡಿಮೆಂಟ್ಸ್’ ನೇರವಾಗಿ ಖರೀದಿಸುತ್ತದೆ. ಇಲ್ಲಿ ಯಾವುದೇ ಮಧ್ಯವರ್ತಿಗಳ ಪ್ರವೇಶವಿಲ್ಲದೇ, ನೇರವಾಗಿ ಬೆಳೆಗಾರರ ಮನೆಬಾಗಿಲಿಗೇ ಹೋಗಿ ಅವರೇಕಾಯಿ ಖರೀದಿಸುವುದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಸಿಗುವ ಲಾಭಕ್ಕಿಂತ ಹೆಚ್ಚು. ಮೊತ್ತ ಕೈಸೇರುತ್ತದೆ. ಇದರಿಂದ ಕಷ್ಟಪಟ್ಟು ಅವರೇಕಾಯಿ ಬೆಳೆದ ರೈತಬಾಂದವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನು, ಹೊಂದಿ ಸಂತೃಪ್ತರಾಗುತ್ತಿದ್ದಾರೆ.

City Today News 9341997936

ಅಕ್ಷಯ ಬ್ರಾಹ್ಮಣ ಮಹಾಸಂಘದ 6ನೇ ವಾರ್ಷಿಕೋತ್ಸವ ಪ್ರಯುಕ್ತ  ಸೀತಾರಾಮ ಕಲ್ಯಾಣೋತ್ಸವ.

ಅಕ್ಷಯ ಬ್ರಾಹ್ಮಣ ಮಹಾಸಂಘದ 6ನೇ ವಾರ್ಷಿಕೋತ್ಸವ ಪ್ರಯುಕ್ತ  ಸೀತಾರಾಮ ಕಲ್ಯಾಣವನ್ನು ಜ್ಯೋತಿ ಬೆಳಗುವ ಮೂಲಕ ಸಂಘದ ಅಧ್ಯಕ್ಷರಾದ ಡಾ.ಅಂಬರೀಶ್ ಜಿ ಮತ್ತು ಡಾ. ಸಿ.ಎನ್.ಅಶ್ವಥ್ ನಾರಾಯಣ ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಬಿಬಿಎಂಪಿ ಮಾಜಿ ಸದಸ್ಯರಾದ  ಎನ್.ಜೈಪಾಲ್ ಬಿಬಿಎಂಪಿ ಮಾಜಿ ಸದಸ್ಯರಾದ ಮುನಿಸ್ವಾಮಿ ಗೌಡ ಮತ್ತು ಗಣೇಶ ದೀಕ್ಷಿತ್ ವೆಂಕಟರಮಣ ಶಾಸ್ತ್ರಿ  ಮತ್ತು ಭಾನುಪ್ರಕಾಶ್ ಶರ್ಮ ಭಾಗವಹಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಯಶವಂತಪುರ ಭಾಗದ ಸಾವಿರಾರು ಜನ ಭಕ್ತರು ಭಾಗವಹಿಸಿ ಸೀತಾರಾಮ ಕಲ್ಯಾಣೋತ್ಸವಕ ಯಶಸ್ವಿಯಾಗಿ ನೆರವೇರಿಸಿದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ, ಅನ್ನದಾನ ಸೇವೆ ಹಾಗೂ ಸಂಜೆ “ಭರತನಾಟ್ಯ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಡಿಸೆಂಬರ್ 19, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ಕಾವ್ಯ ರಾವ್ ಅವರ ನಿರ್ದೇಶನದಲ್ಲಿ ಹೇಮಾದ್ರಿ ಸ್ಟುಡಿಯೋಸ್  ವಿದ್ಯಾರ್ಥಿಗಳಿಂದ “ಭರತನಾಟ್ಯ” ಕಾರ್ಯಕ್ರಮವು ವಿಶೇಷವಾಗಿ ಜರುಗಿತು ಎಂದು ಶ್ರೀ  ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ ಈ ಸಂದರ್ಭದಲ್ಲಿ ನೂರಾರು ಭಕ್ತರು ಭರತನಾಟ್ಯ ಕಾರ್ಯಕ್ರಮವನ್ನು ವೀಕ್ಷಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಟ್ಟು ಸಂತೋಷ ವ್ಯಕ್ತಪಡಿಸಿದರು.

City Today News 9341997936