S.J.P ನಲ್ಲಿ ವಾರ್ಷಿಕ ಏಕತಾ ಸಭೆ 2025 ಪಾಲಿಟೆಕ್ನಿಕ್ ಬೆಂಗಳೂರು

ಬೆಂಗಳೂರು, ಜನವರಿ 2025: ಎಸ್.ಜೆ.ಪಿ.   ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನ ಸರ್ಕಾರಿ-ನೋಂದಾಯಿತ ತಾಂತ್ರಿಕ-ಸಾಮಾಜಿಕ-ಆರ್ಥಿಕ ಹಳೆಯ ವಿದ್ಯಾರ್ಥಿಗಳ ಸಂಘವು ಹಳೆಯ ವಿದ್ಯಾರ್ಥಿಗಳ ಸಂಘ (R), ಹೆಚ್ಚು ನಿರೀಕ್ಷಿತ ವಾರ್ಷಿಕ ಏಕತಾ ಸಭೆ (AUM) 2025 ಗಾಗಿ ತಮ್ಮ ಕ್ಯಾಲೆಂಡರ್‌ಗಳನ್ನು ಗುರುತಿಸಲು ಹಳೆಯ ವಿದ್ಯಾರ್ಥಿಗಳು ಮತ್ತು ಮಾಧ್ಯಮಗಳನ್ನು ಆಹ್ವಾನಿಸುತ್ತದೆ. ಈ ಕಾರ್ಯಕ್ರಮವು ಶನಿವಾರದಂದು ನಡೆಯಲಿದೆ,  4ನೇ ಜನವರಿ 2026, SJP ಯಲ್ಲಿ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ  ಕ್ಯಾಂಪಸ್, ಶೇಷಾದ್ರಿ ರಸ್ತೆ, ಕೆ.ಆರ್.   ವೃತ್ತ, ಬೆಂಗಳೂರು.

1943 ರಲ್ಲಿ ಸ್ಥಾಪಿತವಾದ ಎಸ್.ಜೆ.ಪಿ.   ಪಾಲಿಟೆಕ್ನಿಕ್, ಈಗ 75 ವರ್ಷಗಳನ್ನು ಆಚರಿಸುತ್ತಿದೆ, 14 ತಾಂತ್ರಿಕ ವಿಭಾಗಗಳೊಂದಿಗೆ ಏಷ್ಯಾದ ಅತಿದೊಡ್ಡ ಪಾಲಿಟೆಕ್ನಿಕ್ ಆಗಿ ನಿಂತಿದೆ.   1997 ರಲ್ಲಿ ಪ್ರಾರಂಭವಾದಾಗಿನಿಂದ, ಹಳೆಯ ವಿದ್ಯಾರ್ಥಿಗಳ ಸಂಘವು ಪ್ರಯೋಗಾಲಯಗಳನ್ನು ನವೀಕರಿಸುವ, ಆಧುನಿಕ ಯಂತ್ರೋಪಕರಣಗಳನ್ನು ಸಂಗ್ರಹಿಸುವ ಮತ್ತು ಸೆಮಿನಾರ್‌ಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಗುರಿಯನ್ನು ಹೊಂದಿರುವ ಉಪಕ್ರಮಗಳ ಮೂಲಕ ಸಂಸ್ಥೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.   ಈ ಪ್ರಯತ್ನಗಳು ಭವಿಷ್ಯದ ತಂತ್ರಜ್ಞರನ್ನು ರೂಪಿಸಲು ಸಹಾಯ ಮಾಡುವುದನ್ನು ಮುಂದುವರೆಸುತ್ತವೆ, ರಾಷ್ಟ್ರದ ಸಾಮಾಜಿಕ-ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತವೆ.



  ಶಿಕ್ಷಣ, ತಂತ್ರಜ್ಞಾನ ಮತ್ತು ಸಮುದಾಯದ ಪ್ರಭಾವವನ್ನು ಹೆಚ್ಚಿಸಲು ಅಚಲ ದೃಷ್ಟಿಯೊಂದಿಗೆ, ಎಸ್.ಜೆ.ಪಿ.   ಹಳೆಯ ವಿದ್ಯಾರ್ಥಿಗಳ ಸಂಘವು ಈ ಈವೆಂಟ್ ಅನ್ನು ಹಂಚಿಕೊಳ್ಳಲು ಮಾಧ್ಯಮವನ್ನು ಆಹ್ವಾನಿಸುತ್ತದೆ, ಅರ್ಥಪೂರ್ಣ ಕೂಟಕ್ಕಾಗಿ ಪ್ರಪಂಚದಾದ್ಯಂತದ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ.

  ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು SJP ಹಳೆಯ ವಿದ್ಯಾರ್ಥಿಗಳ ಸಂಘದ ಕಚೇರಿಯನ್ನು ಸಂಪರ್ಕಿಸಿ.

  ಸಂಪರ್ಕ:
  ಎಸ್.ಜೆ.ಪಿ.   ಹಳೆಯ ವಿದ್ಯಾರ್ಥಿಗಳ ಸಂಘ (ಆರ್)
  ಶೇಷಾದ್ರಿ ರಸ್ತೆ, ಕೆ.ಆರ್.   ವೃತ್ತ, ಬೆಂಗಳೂರು 560001.

  9916717621,7892181477.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್‌ಜೆಪಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ಎಂ.ರಾಜೇಂದ್ರನ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಸುರೇಶ್ ಬಾಬು ಅವರು ಈ ಮಾಹಿತಿಯನ್ನು ಬಿಡುಗಡೆ ಮಾಡಿದರು.

City Today News 9341997936

Annual Unity Meet 2025 at S.J.P. Polytechnic Bengaluru

Bengaluru, January 2025: The S.J.P. Alumni Association (R), the Government-registered Techno-Socio-Economic Alumni Association of Sri Jayachamarajendra Polytechnic, invites alumni and media to mark their calendars for the highly anticipated Annual Unity Meet (AUM) 2025. The event will be held on Saturday, 4th January 2026, starting at 3:30 PM at the SJP Campus, Sheshadri Road, K.R. Circle, Bengaluru.

Established in 1943, S.J.P. Polytechnic, now celebrating 75 years, stands as the largest polytechnic in Asia, with 14 technical departments. Since its inception in 1997, the alumni association has played a pivotal role in supporting the institute through initiatives aimed at upgrading laboratories, procuring modern machinery, and organizing seminars and workshops. These efforts continue to help shape the future technocrats, contributing to the nation’s socio-economic progress.

With an unwavering vision to enhance education, technology, and community outreach, the S.J.P. Alumni Association invites media outlets to share this event, aiming to bring together alumni from across the world for a meaningful gathering.

For further information, please contact the SJP Alumni Association office.

Contact:
S.J.P. Alumni Association (R)
Sheshadri Road, K.R. Circle, Bengaluru 560001.

9916717621,7892181477.

The aforementioned information was released by K.M.RAJENDRAN, SJP Alumni Association(R) President and S.S.SURESH BABU,General Secretary at press meet held at press club of Bengaluru.

City Today News 9341997936

‘ರಾಯರ ಸನ್ನಿಧಿಗೆ ಭಕ್ತ ಜನ ಸಾಗರ” ಪ್ರಾತ:ಸ್ಮರಣೀಯ ಶ್ರೀ 1008 ಶ್ರೀ ಸುಯಮಿಂದ್ರತೀರ್ಥ ಶ್ರೀಪಾದರ “ಆರಾಧನಾ “ಮಹೋತ್ಸವ

ಬೆಂಗಳೂರಿನ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ಮತ್ತು ಧರ್ಮಾಧಿಕಾರಿಗಳಾದ  ಶ್ರೀ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಯಮಿಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವವು ವಿಶೇಷ ಉತ್ಸವಗಳೊಂದಿಗೆ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಇದೇ ಸಂದರ್ಭದಲ್ಲಿ ಆಂಗ್ಲ ಕ್ಯಾಲೆಂಡರ್ ಪ್ರಕಾರ ನೂತನ ವರ್ಷದ ಅಂಗವಾಗಿ  ನೂರಾರು ಭಕ್ತರು ಸನ್ನಿಧಿಗೆ ಆಗಮಿಸಿ, ಗುರುರಾಯರ ದರ್ಶನ ಪಡೆದು ಹುಗ್ಗಿ, ಪೊಂಗಲ್ ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಡಿಸೆಂಬರ್ 31: ಜನವರಿ 1ರ ಭೀಮ-ಕೊರೇಗಾಂವ್ ವಿಜಯೋತ್ಸವಕ್ಕೆ ಚಾಲನೆ

ಪ್ರತಿವರ್ಷವೂ ಆಚರಿಸಿತ್ತಿರುವಂತೆ ಮುಂದಿನ ಜನವರಿ 01ರಂದು ಭೀಮ- ಕೊರೇಗಾಂವ್ ವಿಜಯೋತ್ಸವವನ್ನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿ ಬಳಗದಿಂದ ದೇಶದಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲೂ ಸಹ ಎಲ್ಲಾ ಜಿಲ್ಲೆಗಳಲ್ಲೂ ಈ ವಿಜಯೋತ್ಸವವನ್ನು ಸಮತಾ ಸೈನಿಕ ದಳವು ಆಚರಿಸುತ್ತಿದೆ. ಅಸ್ಪೃಶ್ಯ ಜನಾಂಗಗಳು ಕೇವಲ ಗುಲಾಮರೆಂದು ಬಿಂಬಿಸುತ್ತಿದ್ದ ಜಾತಿವಾದಿ ಶಕ್ತಿಗಳಿಗೆ ಪಾಠಕಲಿಸುವ ಭೀಮ-ಕೊರೇಗಾಂವ್ ಯುದ್ಧದ 2 1-1-1818 ನಡೆದು ಈ ದೇಶದ ಹೊಸ ಚರಿತ್ರೆ ಬರೆಯಲ್ಪಟ್ಟಿತು. ಮಹರ್ ಜನಾಂಗದ 500 ಸೈನಿಕರ ಪಡೆಯು ಪೂನಾದ ಪೇಳ್ವೆ ಸಂಸ್ಥಾನದ 28000 ಸೈನಿಕರನ್ನು ಕೇವಲ 24 ಗಂಟೆಗಳಲ್ಲಿ ಸದೆಬಡೆದು 2ನೇ ಬಾಜಿರಾಯನನ್ನು ಯುದ್ಧ ಭೂಮಿಯಿಂದ ಓಡಿಸಿದ ಇತಿಹಾಸ ಗರ್ಭದಲ್ಲಿ ಹುದುಗಿದ್ದ ವಿಷಯವು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನದಿಂದ ಗೊತ್ತಾಗಿ ಇಂದಿನ ದೇಶದ ಅಸ್ಪೃಶ್ಯ ಜನಾಂಗಗಳಲ್ಲಿ ಹೊಸ ಚಿಂತನೆಯೊಂದರ ಸಂಚಲನ ಉಂಟುಮಾಡಿದೆ. ಪ್ರತಿ ವರ್ಷವೂ ಜನವರಿ 01ರಂದು ದೇಶದ ಎಲ್ಲಾ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭೀಮಾಕೊರೇಗಾಂವ್‌ಗೆ ಹೋಗಿ ವೀರಯೋಧರ ವಿಜಯ ಸ್ಥಂಭದ ಸ್ಮಾರಕಕ್ಕೆ ನಮನ ಸಲ್ಲಿಸಿ ಬರುತ್ತಿರುವ ಕೋಟ್ಯಾಂತರ ಜನತೆಯ ಭೆಟ್ಟಿಯು ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದಿದೆ. ಸಮತಾ ಸೈನಿಕ ದಳವು ಕಳೆದ 30ವರ್ಷಗಳಿಂದ ಈ ವಿಜಯೋತ್ಸವದ ಪ್ರವಾಸದಲ್ಲಿ ಭಾಗಿಯಾಗಿ ಕಾರ್ಯ ಕರ್ತರಿಗೆ ಭೀಮಾಸ್ಫೂರ್ತಿಯನ್ನು ನೀಡುತ್ತಾ ಬಂದಿದೆ. 2017ರಲ್ಲಿ ಭೀಮ- ಕೊರೇಗಾಂವ್‌ನಲ್ಲಿ ನಡೆದ ಜಾತಿ ಗಲಭೆಯಿಂದ ರೋಚಕ ತಿರುವು ಪಡೆದುಕೊಂಡು ದಲಿತ ಜನಾಂಗಗಳ ಇತಿಹಾಸದ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಅಂದಿನಿಂದ ಸಮತಾ ಸೈನಿಕ ದಳವು ಪ್ರತಿ ಡಿಸೆಂಬರ 31ರ ರಾತ್ರಿ ದಲಿತ ಜನಾಂಗಗಳ ವಿರೋಚಿತ ಹೋರಾಟಗಳ ಮೆಲುಕುಹಾಕುವ ಸಿಂಹಾವಲೋಕನದ ಸಂವಾದದ ಸಭೆಯನ್ನು ನಡೆಸಿ ರಾತ್ರಿ 12 ಗಂಟೆಗೆ ವಿಜಯೋತ್ಸವಗಳಿಗೆಗೆ ಚಾಲನೆ ನೀಡುವ ಸಂಭ್ರಮಾಚರಣೆಯನ್ನು ಆಯೋಜಿಸುತ್ತಾ ಬಂದಿದೆ. ಇದೇ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಈ ಪೂರಕವಾಗಿ ಚರಿತ್ರೆಯ ಸಿಂಹಾವಲೋಕನದ ಚರ್ಚೆ ಸಂವಾದಗಳನ್ನು ನಡೆಸಿ ಮದ್ಯರಾತ್ರಿ 12ಗಂಟೆಗೆ ವೀರಯೋಧ ಸಿದ್ಧನಾಕನ ವೇಷಧಾರಿಗಳಿಂದ ಹೊನಲುಬೆಳಕಿನ ಯುದ್ಧ ಪ್ರದರ್ಶನದ ಸಾಮೂಹಿಕ ನೃತ್ಯದ ಹಾಡಿನೊಂದಿಗೆ ಜನವರಿ 1ರ ಭೀಮಾಕೋರೇಗಾಂವ್ ವಿಜಯೋತ್ಸವಕ್ಕೆ ಚಾಲನೆ ನೀಡಲಾಗುವುದು.

ಈ ಕಾರ್ಯಕ್ರಮವು ಎಸ್.ಎಸ್.ಡಿ.ಯ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂವಾದದ ವಿವಿಧ ಗೋಷ್ಠಿಗಳನ್ನು ಇತಿಹಾಸ ತಜ್ಞರಿಂದ, ಹಿರಿಯ ಹೋರಾಟಗಾರರಿಂದ ಮತ್ತು ಹಿರಿಯ ಅಧಿಕಾರಿ ವರ್ಗದಿಂದ ನಡೆಸಲಾಗುವುದು. ಪ್ರತಿ ಅಂಬೇಡ್ಕರ್ ಅಭಿಮಾನಿಯು ಡಿಸೆಂಬರ್ 13ರ ಸಂಜೆ 6ಗಂಟೆಗೆ ಬೆಂಗಳೂರಿನ ನಾಗಸೇನ ಬುದ್ಧ ವಿಹಾರದ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಂವಾದ ಮತ್ತು ರಾತ್ರಿ ನಡೆಯುವ ವಿಜಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ ಎಂದು ಸಮತಾ ಸೈನಿಕ ದಳ ವತಿಯಿಂದ ತಿಳಿಸಲಾಯಿತು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ  ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಅಂಬರೀಷ್. ದಿ. ಎಂ.,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಲಯನ್ ಮಂಜುನಾಥ್, ಯುವ ಘಟಕದ ರಾಜ್ಯಾಧ್ಯಕ್ಷರಾದ ಪ್ರಶಾಂತ್. ಜಿ.ಪಿ ಹಾಗೂ ಸಮತಾ ಸೈನಿಕ ದಳದ ಮುಖಂಡರುಗಳು ಉಪಸ್ಥಿತರಿದ್ದರು.

City Today News 9341997936

ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ

1. ದಿನಾಂಕ : 30-12-2024 ರಂದು ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು 10 ಗುಂಟೆ ಜಾಗದಲ್ಲಿ ಪೂಜಾ ಕಾರ್ಯಕ್ರಮ ಮಂದಿರಕ್ಕೆ ಹಾಗೂ ಅನ್ನದಾನ ಮತ್ತು ರಕ್ತದಾನ ಶಿಭಿರ ಆಯೋಜಿಸಿದ್ದೇವೆ;

2. ಅಭಿಮಾನಿ ಸ್ಫೂಡಿಯೋ ಮಾಲೀಕರು ಅಕ್ರಮ ಭೂ ಕಬಳಿಕೆಯ ಚಟುವಟಿಕೆಗಳಿಂದ ಮತ್ತು ಜೀವ ಬೆದರಿಕೆಯಿಂದ ರಕ್ಷಣೆ ಕೋರಿ ಹಲವು ಸಂಘಟನೆಗಳ ಮೇಲೆ ಕೆಂಗೇರಿ ಪೋಲೀಸ್ ಠಾಣೆಯಲ್ಲಿ ದಿನಾಂಕ: 28-08- 2024ರಂದು ದೂರು ಕೊಟ್ಟಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಾಂಕ: 17-09-2024(ಸಿಸಿಹೆಚ್ 12) ಓ.ಎಸ್ ನಂ.6544/2024ರ ಕೋರ್ಟ್‌ನಿಂದ ಡಾ|| ವಿಷ್ಣು ವರ್ಧನ್ ರವರ ಸಮಾಧಿ ಜಾಗ ಪುಣ್ಯ ಭೂಮಿಗೆ ಪ್ರವೇಶ ನಿರ್ಬಂಧ ತಡೆಯಾಜ್ಞೆಯನ್ನು ತಂದಿರುತ್ತಾರೆ. ದಿನಾಂಕ:18-09-2024ರಂದು ಡಾ|| ವಿಷ್ಣು ವರ್ಧನ್ ರವರ 74ನೇ ಜನ್ಮದಿನೋತ್ಸವ ಕಾರ್ಯಕ್ರಮ ಇರುತ್ತದೆ ಈ ಮೇಲ್ಕಂಡ ಟ್ರಸ್ಟ್ ವತಿಯಿಂದ ಆಯೋಜಿಸಿದ್ದೆವು.

3. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ដ ( 12) 4.2 0.6544/20245 всей ಡಾ| ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಡಾ|| ವಿಷ್ಣು ವರ್ಧನ್ ರವರ ಸಮಾಧಿ ಜಾಗ 0.10ಗುಂಟೆ ಜಾಗದ ಬಗ್ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು 2017ರಿಂದ 2024ರ ವರೆಗೆ ಕೋರ್ಟ್ಗೆ ಸಲ್ಲಿಸಿರುತ್ತೇವೆ. ಮತ್ತು ಡಾ| ವಿಷ್ಣುವರ್ಧನ್ ರವರ ಹುಟ್ಟು ಹಬ್ಬ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದ ಆಯೋಜಿಸಿದ ದಾಖಲೆಗಳನ್ನು ಸಲ್ಲಿಸಿರುತ್ತೇವೆ ಹಾಗೂ ಡಿಸೆಂಬರ್ 30 2024 15ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮದ ಜಿಲ್ಲಾಧಿಕಾರಿಗಳ ಆದೇಶ ಪ್ರತಿ ಹಾಗೂ ಬಿ.ಬಿ.ಎಂ.ಪಿ ಅನುಮತಿ ಪತ್ರವನ್ನು ಸಲ್ಲಿಸಿರುತ್ತೇವೆ. ಘನ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ಆಲಿಸಿದ ನ್ಯಾಯಾಧೀಶರು ಮೇಲ್ಕಂಡ ಪ್ರಕರಣದ ನಿರ್ಬಂಧ ತಡೆಯಾಜ್ಞೆಯನ್ನು ವಜಾಮಾಡಿರುತ್ತಾರೆ. ಸಿಟಿ ಸಿವಿಲ್ ಅಂಟ್ ಸೆಷನ್ ಜಡ್ಜ್ ಬೆಂಗಳೂರು (ಸಿಸಿಹೆಚ್ 12) ಓ.ಎಸ್ ನಂ.6544/2024ರ ದಿನಾಂಕ: 19- 12-2024ರ ತೀರ್ಪಿ ಹೊರಡಿಸಿ ಆದೇಶ ಮಾಡಿದ್ದು ಈ ಪ್ರಕರಣದ ಮುಂದುವರೆದ ಭಾಗವಾಗಿ ವಿಚಾರಣೆಯನ್ನು ದಿನಾಂಕ: 04-02-2025ಕ್ಕೆ ಮುಂದೂಡಿರುತ್ತಾರೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ರಾಜು ಗೌಡ, ಗೌರಾಧ್ಯಕ್ಷರಾದ ಬಿ. ವೈ. ರಮೇಶ್,ಕಾನೂನು ಸಲಹೆಗಾರರಾದ ಅರುಣ್ ಕೆ.ಎಸ್ (ಹೈಕೊರ್ಟ್ ವಕೀಲರು) ರವರು ಟ್ರಸ್ಟ್‌ನ ಪದಾಧಿಕಾರಿಗಳ ಸಮ್ಮುಖದಲ್ಲಿ ತಿಳಿಸಿದರು.

City Today News 9341997936