ಶ್ರೀ ಗುರುರಾಯರ ಸನ್ನಿಧಿಯಲ್ಲಿ ಗುರುವಾರ ಪ್ರಯುಕ್ತ ವಿಶೇಷ “ವೀಣಾವಾದನ”

ಪರಮಪೂಜ್ಯ ಶ್ರೀ1008  ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ  ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ  ನವೆಂಬರ್ 28, ಗುರುವಾರ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು, ರಾಯರ ಬೃಂದಾವನಕ್ಕೆ  ವಿಶೇಷ ಅಲಂಕಾರ ಸಹಸ್ರಾರು  ಭಕ್ತರಿಗೆ ಅನ್ನದಾನ ಸೇವೆ ಜರುಗಿದವು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು. ನಂತರ ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ ಪಲ್ಲಕ್ಕಿ ಉತ್ಸವ, ನರ್ತನ ಸೇವೆ, ಗಜವಾಹನೋತ್ಸವ ತೊಟ್ಟಿಲು ಸೇವೆ ಕಾರ್ತೀಕ ದೀಪೋತ್ಸವಗಳ ಸೇವೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಶ್ರೀಮತಿ ಮಾಲಾ ವೆಂಕಟೇಶ್ ಮತ್ತು ಅವರ ಶಿಷ್ಯೆ ಕು|| ಸ್ಫೂರ್ತಿ ಗುರುಪ್ರಸಾದ್ ಅವರಿಂದ ವೀಣಾ ವಾದನ ಕಾರ್ಯಕ್ರಮವು ಜರುಗಿತು. ಇವರ ವೀಣಾ ವಾದನಕ್ಕೆ ಸಹವಾದ್ಯದಲ್ಲಿ ವಿದ್ವಾನ್ ಮುರಳಿ ನಾರಾಯಣರಾವ್ ಮೃದಂಗದಲ್ಲಿ ಹಾಗೂ ವಿದ್ವಾನ್ ಬಾಲಸುಬ್ರಹ್ಮಣ್ಯಂ ಘಟದಲ್ಲಿ ಸಾಥ್ ನೀಡಿದರು ಈ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಶ್ರೀ ಹರಿ ವಾಯು  ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಮಂತ್ರಾಲಯದ ಶ್ರೀ1008 ಸುಬುಧೇಂದ್ರತೀರ್ಥ ಶ್ರೀಗಳಿಂದ 24 ಅಡಿ ಎತ್ತರದ “ಕಾಮಧೇನು ಕಲ್ಪವೃಕ್ಷ” ಶ್ರೀ ಗುರು ರಾಯರ ಪ್ರತೀಕ “ಉದ್ಘಾಟನೆ” ಜಯನಗರ ರಾಯರ ಮಠದ ಆವರಣದಲ್ಲಿ

ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಶ್ರೀ  ಸುಬುಧೇಂದ್ರತೀರ್ಥ  ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀ ಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ತದ ನಂತರ ರಾಯರ  24ಅಡಿ ಎತ್ತರದ ರಾಯರ ಪ್ರತೀಕವನ್ನು  ಪುಷ್ಪಾರ್ಚನೆ ಮತ್ತು ಮಹಾ ಮಂಗಳಾರತಿಯೊಂದಿಗೆ  ಶ್ರೀಪಾದರು ಉದ್ಘಾಟಿಸಿದರು ರಾಯರ ಅಂತರಂಗ ಭಕ್ತರಾದ,ಪ್ರತೀಕದ ಸಂಪೂರ್ಣ ವೆಚ್ಚವನ್ನು ಭರಿಸಿದ ಮುಕುಂದ ಕೃಷ್ಣ ಅವರಿಗೂ ಮತ್ತು ಈ ಚಿತ್ರಕಲೆ ನಿರ್ಮಾಣ ಮಾಡಿದ ಶಿವದತ್ತರಿಗೂ ರಾಯರ ಶೇಷ ವಸ್ತ್ರ ಫಲ ಮಂತ್ರಾಕ್ಷತೆ ಕೊಟ್ಟು ಅನುಗ್ರಹಿಸಿದರು ವಿಶೇಷವಾಗಿ ಈ ರಾಯರ ಪ್ರತೀಕವೂ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ  ಭಕ್ತರ ಸಹಕಾರದೊಂದಿಗೆ ಭಕ್ತರಿಂದ,ಭಕ್ತರಿಗಾಗಿ ,ಭಕ್ತರ ಅನುಗ್ರಕ್ಕಾಗಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ  ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ “ಲೋಕಾರ್ಪಣೆ”ಗೊಂಡಿತು.ಬಹಳ ಸುಂದರ ಅಪರೂಪವಾದ ಕಾಮಧೇನು- ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಪ್ರತೀಕದ ಸಂಪೂರ್ಣ ಜವಾಬ್ದಾರಿಯ ನಿರ್ವಹಣೆಯನ್ನು ಮಾಡಿದ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರಿಗೆ ಶ್ರೀ ಗುರುರಾಯರ ಅನುಗ್ರಹ ಸದಾ ಕಾಲ ಇರಲಿ ಎಂದು ಅನುಗ್ರಹಿಸಿದರು
ಪೂರ್ಣಪ್ರಜ್ಞ   ವಿದ್ಯಾ ಪೀಠದ ಹತ್ತಿರ ಇರುವ ಸ್ಥಪತಿ ಕ್ರಿಯೇಶನ್ಸ್ ನ ಮುಖ್ಯಸ್ಥರಾದ ಎನ್ ಶಿವದತ್ತ ರವರ ನಿರ್ದೇಶನದಲ್ಲಿ ಸುಮಾರು ಎರಡೂವರೆ ತಿಂಗಳಿನ ಗಡುವಿನಲ್ಲಿ 24 ಅಡಿ ಎತ್ತರದ 12 ಅಡಿ ಅಗಲ 3 ಅಡಿ ದಪ್ಪ ಉಳ್ಳ ಎಫ್ ಆರ್ ಪಿ ಮೌಲ್ಡ್  ಇಂದ “ಕಾಮಧೇನು ಕಲ್ಪವೃಕ್ಷ “ಶ್ರೀ ರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀ ರಾಮ ಕೃಷ್ಣರ” ಭಾವಚಿತ್ರದ  ನಿರ್ಮಾಣದ ಜವಾಬ್ದಾರಿಯನ್ನು ಶ್ರೀಯುತ ಶಿವದತ್ತರವರ ತಂಡವರಾದ  ರವಿಕುಮಾರ್, ಪ್ರವೀಣ್ ಕುಮಾರ್, ಶ್ರೀ ರಾಮ್, ನಾಗರಾಜ್, ಪ್ರದೀಪ್, ಶರತ್ ಚಂದ್ರ, ಮತ್ತು ಚಾಂದ್ ಇವರುಗಳ ಸಹಕಾರದಿಂದ ಒಟ್ಟುಗೂಡಿ ಸುಂದರವಾದ ಈ ಪ್ರತೀಕವನ್ನು ಶ್ರದ್ಧೆ ಮತ್ತು ಭಕ್ತಿ ತನು ಮನದಿಂದ ನಿರ್ಮಾಣ ಮಾಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತರಾಗಿದ್ದಾರೆ ಎಂದು ಶ್ರೀ ಮಠದ ಪುರೋಹಿತರಾದ ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು.

City Today News 9341997936

ಉದ್ಭವ ಕಲಾವಿದರು ಆಯೋಜಿಸಿದ್ದ  ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ 69ನೇ ಕನ್ನಡ ರಾಜ್ಯೋತ್ಸವ

ಉದ್ಭವ ಕಲಾವಿದರು ಆಯೋಜಿಸಿದ್ದ  ಐದನೇ ವರ್ಷದ ವಾರ್ಷಿಕೋತ್ಸವ 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಲಾಗ್ರಾಮದ ಸಮುಚ್ಚಾಯ ಭವನದಲ್ಲಿ ಎರಡು ದಿನಗಳ ನಾಟಕೋತ್ಸವದ ಪ್ರಯುಕ್ತ ಉದ್ಘಾಟನಾ ಸಮಾರಂಭವನ್ನು ಚಲನಚಿತ್ರ ದೂರದರ್ಶನ ರಂಗ ಭೂಮಿ ನಟಿ ಶ್ರೀಮತಿ ಲಕ್ಷ್ಮಿ ಭಟ್, ಡಾಕ್ಟರ್ ಪಾರ್ಶ್ವನಾಥ್,

ಪ್ರೆಸ್ ಕ್ಲಬ್ ನ ನಿವೃತ್ತ ಉದ್ಯೋಗಿ ಶ್ರೀ ಶಿವರುದ್ರಪ್ಪನವರು, ಕರಾಟೆ ಶ್ರೀನಾಥ್, ಪ್ರಧಾನ ಕಾರ್ಯದರ್ಶಿ ಶ್ರೀ ನಾಗೇಂದ್ರ ಪ್ರಸಾದ್, ಖಜಾಂಚಿ ಶಾಂತ ಇನ್ನಿತರ ಹೆಸರಾಂತ ನಟ ನಟಿಯರು ಉದ್ಘಾಟಿಸಿದರು.

City Today News 9341997936

ಗುರುವಾರದ “ಗುರುಪುಷ್ಯ ಯೋಗ” ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಭಿಷೇಕ ವಿಶೇಷ ಅಲಂಕಾರ “

ಬೆಂಗಳೂರಿನ ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಮಾರ್ಗದರ್ಶನದಲ್ಲಿ “ಗುರುಪುಷ್ಯ” ಯೋಗ ನಿಮಿತ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಫಲಪಂಚಾಮೃತ  ಅಭಿಷೇಕವು ನೆರವೇರಿಸಲಾಯಿತು. ನಂತರದಲ್ಲಿ ವಿಶೇಷ ಪುಷ್ಪಗಳಿಂದ ಅಲಂಕಾರವನ್ನು ಮಾಡಿ ಮಹಾಮಂಗಳಾರತಿಯು ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಹಿರಿಯ ಚಿತ್ರನಟಿ ಶ್ರೀಮತಿ ಪದ್ಮಜ ರಾವ್ ರವರು ಈ ದಿನ  ಸನ್ನಿಧಿಗೆ ಆಗಮಿಸಿ ಗುರುಗಳಲ್ಲಿ ಪ್ರಾರ್ಥನೆ ಸಲ್ಲಿಸಿ ದೀಪಗಳನ್ನು ಬೆಳಗಿಸಿ ಫಲಮಂತ್ರಾಕ್ಷತೆಯನ್ನು  ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಶ್ರೀ ಗುರು ರಾಯರ ಸನ್ನಿಧಿಗೆ ಆಗಮಿಸಿದ  ಸಹಸ್ರಾರು ಭಕ್ತರು ಅನ್ನಸಂಪರ್ಪಣೆಯ ಪ್ರಸಾದವನ್ನು ಸ್ವೀಕರಿಸಿದರು. ಸಂಜೆ ಭಕ್ತಾದಿಗಳು ಕಾರ್ತೀಕ ದೀಪೋತ್ಸವ ಪ್ರಜ್ವಲಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಕು|| ರಕ್ಷಿತಾ ಶರ್ಮಾ ಅವರು ತಮ್ಮ ಇಂಪು ಸಂಗೀತ ಶಾಲೆಯ ವಿದ್ಯಾರ್ಥಿಗಳೊಂದಿಗೆ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ “ಧಾತ್ರಿ ಹೋಮ” ಲೋಕಕಲ್ಯಾಣಕ್ಕಾಗಿ


ಬೆಂಗಳೂರಿನ ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ಮಾರ್ಗದರ್ಶನದಲ್ಲಿ ‘ಲೋಕ ಕಲ್ಯಾಣಕ್ಕಾಗಿ” ಧಾತ್ರಿ ಹೋಮದ ಕಾರ್ಯಕ್ರಮವನ್ನು  ರಾಮಚಂದ್ರ ಆಚಾರ್ಯರಿಂದ ನೆರವೇರಿಸಲಾಯಿತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಬೆಳ್ಳಿಯ ತೊಟ್ಟಿಲಿನಲ್ಲಿ ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು  ಕೂರಿಸಿ ರಜತ ಕಳಸಗಳಲ್ಲಿ ಲಕ್ಷ್ಮೀ ನರಸಿಂಹ ದೇವರನ್ನು ಆಹ್ವಾನಿಸಿ ಚಾತುರ್ಮಾಸ ಸಮಾಪ್ತಿಯ ಅಂಗವಾಗಿ ವಿಶೇಷವಾಗಿ ಪೂಜೆಯನ್ನು ರಥೋತ್ಸವದೊಂದಿಗೆ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಭಕ್ತರು ಮತ್ತು ಸೇವಾ ಕರ್ತೃಗಳು ಸಂಕಲ್ಪವನ್ನು ಮಾಡಿ ಪೂಜೆಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936