ದಿನಾಂಕ 17 12 2024 ಮಂಗಳವಾರ ಬೆಳಿಗ್ಗೆ ವಾಯುಸ್ತುತಿ ಪೂರ್ವಕ ಮಧು ಅಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಬೆಳಿಗ್ಗೆ 10:30 ಕ್ಕೆ ವಾಯುಸ್ತುತಿ ಪುರಸ್ಚರಣ ಪವಮಾನ ಹೋಮ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಸಂಜೆ 5:30ಕ್ಕೆ ಯಶವಂತಪುರ ಪ್ರಮುಖ ಬೀದಿಗಳಲ್ಲಿ ಸಂತೃಪ್ತಿ ಬಳಗದಿಂದ ಆಂಜನೇಯ ದೇವರ ರಥಯಾತ್ರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹನುಮ ಸೇನೆ ಎಲ್ಲರೂ ಜೊತೆಗೂಡಿ ನೆರವೇರಿಸಲಿದ್ದಾರೆ ಸರ್ವರಿಗೂ ಸರ್ವರಿಗೂ ಸ್ವಾಗತ ಸುಸ್ವಾಗತ.
“ಧನುರ್ಮಾಸ ಪೂಜೆ ಪ್ರಾರಂಭ” ರಾಯರ ಸನ್ನಿಧಿಯಲ್ಲಿ 17-12-2024 ರಿಂದ 13-1-2025 ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ , ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ 17-12-2024 ರಿಂದ 13-1-2025ವರೆಗೆ ಧನುರ್ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ಪ್ರಾತ : ಕಾಲದಲ್ಲಿ ಪೂಜಾದಿ ಉತ್ಸವಗಳು ನೆರವೇರುತ್ತದೆ ಪ್ರತಿ ಗುರುವಾರ ಮಾತ್ರ ಸಂಜೆ 7 ಕ್ಕೆ ಉತ್ಸವಗಳು ನೆರವೇರುತ್ತದೆ, ವಿಶೇಷವಾಗಿ ಪ್ರಾತ :ಕಾಲದ ಧನುರ್ಮಾಸದಲ್ಲಿ ಹುಗ್ಗಿ ಮತ್ತು ಪೊಂಗಲ್ ನಿವೇದನ ಸೇವೆ ಕಾರ್ಯಕ್ರಮವು ನೆರವೇರುತ್ತದೆ ಎಂದು ಶ್ರೀ ನಂದಕಿಶೋರ ಆಚಾರ್ಯರು ತಿಳಿಸಿದ್ದಾರೆ ಈ ಸೇವೆಗಳಲ್ಲಿ ಭಾಗವಹಿಸುವಂತ ಭಕ್ತರು ಶ್ರೀ ಮಠದ ಈ ವಾಟ್ಸಪ್ 944 9133929 ನಂಬರ್ ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು. ಹೆಚ್ಚಿನ ಮಾಹಿತಿಗಾಗಿ -08022443962- 9945429129 -8660349906.
” ಶ್ರೀ ಸತ್ಯನಾರಾಯಣ ವ್ರತಪೂಜೆ” ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬೆಂಗಳೂರಿನ ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ “ಪೌರ್ಣಮಿ” ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ಶ್ರೀ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾ ಕರ್ತೃಗಳು ಈ ಸತ್ಯನಾರಾಯಣ ವ್ರತದ ಪೂಜೆಯ ಸಂಕಲ್ಪವನ್ನು ಮಾಡಿ ವ್ರತದ ಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ ಮತ್ತು ವಿಶೇಷ ಉತ್ಸವಗಳು ನೆರವೇರಿತು.
ಬೆಂಗಳೂರು : ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆದೇಶ ಅನುಗ್ರಹ ದೊಂದಿಗೆ ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ ಮಾರ್ಗದರ್ಶನದಲ್ಲಿ”ಲೋಕ ಕಲ್ಯಾಣಕ್ಕಾಗಿ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಪಡೆದುಕೊಳ್ಳಲು ಗುರು ಪ್ರಾಪ್ತಿಗಾಗಿ ವಿಶೇಷ ಕಾರ್ತೀಕ ಮಾಸದ ಕೊನೆಯ ದಿನ ಅಮಾವಾಸ್ಯೆಯ ಅಂಗವಾಗಿ ಸಾಮೂಹಿಕ “ಲಕ್ಷ ದೀಪೋತ್ಸವ” ದ ಕಾರ್ಯಕ್ರಮವು ಶ್ರೀಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು ವಿಶೇಷವಾಗಿ ಭಕ್ತರಿಗಾಗಿ ದೀಪಗಳನ್ನು ಪ್ರಜ್ವಲಿಸಲು ಸಿಬ್ಬಂದಿಗಳ ಭಕ್ತರ ಸಹಕಾರದಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು , ಈ ವಿಶೇಷವಾದ ದೀಪೋತ್ಸವದ ಕಾರ್ಯಕ್ರಮದಲ್ಲಿ. ಶ್ರೀಯುತ ಶ್ರೀಪಾದ ಪಾಟೀಲ ವಾರ್ತಾ ವಿಭಾಗ, ರಿಪಬ್ಲಿಕ್ ಕನ್ನಡ, ರಿಪಬ್ಲಿಕ್ ನ್ಯಾಶನಲ್ ನೆಟ್ವರ್ಕ್ ವಾರ್ತಾ ನಿರೂಪಕರು ಅದ ಶ್ರೀಪಾದ್ ಪಾಟೀಲ್ ಕುಟುಂಬ ಸಮೇತ ಸನ್ನಿಧಿಗೆ ಆಗಮಿಸಿ ದೀಪಗಳನ್ನು ಬೆಳಗಿಸಿ ಗುರುಗಳ ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ಗುರು ರಾಯರ ಅನುಗ್ರಹಕ್ಕೆ ಪಾತ್ರರಾದರು ಹಾಗೂ ಭಕ್ತರು ಸಹ ಲೋಕ ಕಲ್ಯಾಣಕ್ಕಾಗಿ ಮತ್ತು “ಗುರು ಬಲ” ಪ್ರಾಪ್ತಿಗಾಗಿ ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿ ದೀಪಗಳನ್ನು ಪ್ರಜ್ವಲಿಸಿ ಫಲ ಮಂತ್ರಾಕ್ಷತೆ ಮತ್ತು ಪ್ರಸಾದವನ್ನು ಸ್ವೀಕರಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು
ಬೆಂಗಳೂರು : ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ದಿನಾಂಕ 1-12-2024 ರಂದು ವಿಶೇಷ ಕಾರ್ತೀಕ ಮಾಸದ ಕೊನೆಯ ದಿನ ಅಮಾವಾಸ್ಯೆಯ ಅಂಗವಾಗಿ “ಲೋಕ-ಕಲ್ಯಾಣ”ಕ್ಕಾಗಿ ಮತ್ತು “ಗುರು ಬಲ” ಪ್ರಾಪ್ತಿಗಾಗಿ ಸಾಮೂಹಿಕ “ಲಕ್ಷ ದೀಪೋತ್ಸವ” ದ ಕಾರ್ಯಕ್ರಮವನ್ನು ಮಠದಲ್ಲಿ ಹಮ್ಮಿಕೊಂಡಿದೆ ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ. ಭಕ್ತಾದಿಗಳು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಭಾನುವಾರ ಸಂಜೆ 6-30ಕ್ಕೆ ದೀಪಗಳನ್ನು ಪ್ರಜ್ವಲಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಹರಿ- ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರಾಗಬಹುದು.
ಈ ಸೇವೆಯಲ್ಲಿ ಭಾಗವಹಿಸುವ ಭಕ್ತರು ಶ್ರೀ ಮಠದ ವಾಟ್ಸಾಪ್ ಈ ನಂಬರ್ 9449133929 – ಆನ್ಲೈನ್ ಮುಖಾಂತರ ಸೇವೆಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ- ದೂರವಾಣಿ : 080-22443962, ಮೊಬೈಲ್ : 9945429129 -8660349906 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
You must be logged in to post a comment.