ರಾಯರ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಉತ್ಸವ ಮತ್ತು “ಭರತನಾಟ್ಯ” ಕಾರ್ಯಕ್ರಮ

ಬೆಂಗಳೂರಿನ ಜಯನಗರದ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ1008 ಶ್ರೀ ಶ್ರೀ  ಸುಬುಧೇಂದ್ರತೀರ್ಥ  ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್‌.ಕೆ. ವಾದಿಂದ್ರಾಚಾರ್ಯರ ಮಾರ್ಗದರ್ಶನದಲ್ಲಿ  ಪ್ರತಿ ಗುರುವಾರದಂತೆ ವಿಶೇಷವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ, ಉತ್ಸವಗಳು ಮತ್ತು ಸಹಸ್ರಾರು ಭಕ್ತಾದಿಗಳಿಗೆ  “ಅನ್ನಸಂತರ್ಪಣೆ”ಯ ಕಾರ್ಯಕ್ರಮವು ನೆರವೇರಿತು. ಹಾಗೂ ಸಂಜೆ ಭರತನಾಟ್ಯ ಕಾರ್ಯಕ್ರಮವನ್ನು ಕಲಾಯೋಗಿ ವಿದ್ವಾನ್  ಎಸ್. ರಘುನಂದನ್ ಮತ್ತು ಅವರ ಶಿಷ್ಯವೃಂದದ ವಿದ್ಯಾರ್ಥಿಗಳು “ಭರತನಾಟ್ಯ” ಕಾರ್ಯಕ್ರಮವನ್ನು ವಿಶೇಷವಾಗಿ ನಡೆಸಿಕೊಟ್ಟರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ವೈ.ಕೆ. ಸಂಧ್ಯಾ ಶರ್ಮರವರು ಉಪಸ್ಥಿತರಿದ್ದರು. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಭಾರತೀಯ ಜನತಾ ಮನ್ಸೂರ್ ಸೆಲ್ ನ ಕರ್ನಾಟಕ ರಾಜ್ಯ ಘಟಕ ಉದ್ಘಾಟನಾ ಸಮಾರಂಭ

ಭಾರತೀಯ ಜನತಾ ಮನ್ಸೂರ್ ಸೆಲ್ ನ ಕರ್ನಾಟಕ ರಾಜ್ಯ ಘಟಕ ಉದ್ಘಾಟನಾ ಸಮಾರಂಭ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಭಾರತೀಯ ಜನತಾ ಮಜೂರ್ ಸೆಲ್ ಸುಮಾರು 28 ವರ್ಷಗಳಿಂದ ಭಾರತ ದೇಶದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಕಾರ್ಮಿಕರು ಪರವಾಗಿ ಸಭೆ ಸಮಾರಂಭಗಳನ್ನು ಮತ್ತು ಹೋರಾಟಗಳನ್ನು, ರೂಪಿಸುತ್ತಾ ಬಂದಿದ್ದು, ಕರ್ನಾಟಕ ರಾಜ್ಯ ಘಟಕದಲ್ಲಿ ನೂತನವಾಗಿ ಅಕ್ಟೊಬರ್ 5ರಂದು  ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಅತಿ ವಿಜೃಂಭಣೆಯಿಂದ ಕರ್ನಾಟಕ ರಾಜ್ಯಾಧ್ಯಕ್ಷರಾದಂತಹ ಶ್ರೀ ಆರ್ ಮಾಲೂರು ಚಂದ್ರು ರವರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಸಾರ್ವಜನಿಕ ವಲಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅರುಣ್ ಕುಮಾ‌ರ್.ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಭಾರತೀಯ ಜನತಾ ಮನ್ಸೂರ್ ಸೆಲ್ ಮುಖಂಡರುಗಳ ವತಿಯಿಂದ ತಿಳಿಸಲಾಯಿತು.

City Today News 9341997936

ON THE EVE OF EID MILAD, SPECIAL PRAYERS WERE OFFERED

ON THE EVE OF EID MILAD, SPECIAL PRAYERS WERE OFFERED BY SUFI WALIBA KADHRI, DARGA PRIEST OF “HAZRATH SYEED SAFDAR ALI SHAH KHADRI (R.A)” AT TIPPU SULTAN PALACE ROAD RAYAN CIRCLE CHAMRAJPET BANGALORE, WITH DR YOONAS JONES AS THE GUEST OF HONOR AND HUNDREDS OF DEVOTEES IN ATTENDANCE.

City Today News 9341997936

EID MILAD EVENT WAS HELD AT TANRARY ROAD, PULIKESHI NAGAR, BANGALORE

AN EID MILAD EVENT WAS HELD AT TANRARY ROAD, PULIKESHI NAGAR, BANGALORE, WITH DR. YOONAS JONES AS THE CHIEF GUEST, ACCOMPANIED BY OTHER ESTEEMED DIGNITARIES. THE EVENT WAS JOINTLY ORGANIZED BY THE, -TIPPU SULTAN UNITED FRONT, -AL-MUQEET DONOR CENTER BANGALORE,
-KARNATAKA MINORITIES UNITED FRONT, FEATURING A BLOOD DONATION DRIVE, HEALTH AND EYE CAMP, AND FOOD DISTRIBUTION TO THE GENERAL PUBLIC.THE PRIME ORGANISERES WERE DR.DAWOOD EQBAL, MR.KHALLEL, MR.RAHEEM MASTER, MR SYED AKBAR.

City Today News 9341997936

ಜಯನಗರ ರಾಯರ ಮಠದಲ್ಲಿ 108 ದಂಪತಿಗಳಿಂದ “ಸಾಮೂಹಿಕ ಶ್ರೀ ಅನಂತಪದ್ಮನಾಭ ವ್ರತ ಪೂಜೆ”

ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರಾಚಾರ್ಯರ  ನೇತೃತ್ವದಲ್ಲಿ “ಶ್ರೀ ಅನಂತಪದ್ಮನಾಭ ವ್ರತ  ಪೂಜೆ”ಯನ್ನು ಸ್ವರ್ಣ ಸಿಂಹಾಸನದಲ್ಲಿ ಕಳಶವನ್ನು ಕೂರಿಸಿ, ಅರ್ಚನೆಯೊಂದಿಗೆ ಅರ್ಚಕರಾದ ರಾಮಚಂದ್ರಾಚಾರ್ ಮತ್ತು ಕೃಷ್ಣಾಚಾರ್ ಇವರಿಂದ ಪೂಜೆಯನ್ನು ನೆರವೇರಿಸಲಾಯಿತು ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ವಿಶೇಷ ಉತ್ಸವಗಳೊಂದಿಗೆ 108 ದಂಪತಿಗಳಿಂದ ಸಾಮೂಹಿಕವಾಗಿ ಶ್ರೀ ಅನಂತಪದ್ಮನಾಭ ವ್ರತ ಪೂಜೆಯನ್ನು ಪ್ರತ್ಯೇಕ ಪ್ರತ್ಯೇಕ ಕಲಶವನ್ನು ಇರಿಸಿ  108 ದಂಪತಿಗಳು ಭಕ್ತಿಯಿಂದ ವ್ರತ ಪೂಜೆಯಲ್ಲಿ ಪಾಲ್ಗೊಂಡು ತೀರ್ಥಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು .

City Today News 9341997936