ಮೈಸೂರು ಸಂಸ್ಥಾನದ ದಿವಾನರಾಗಿ , ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದ, ಕರ್ಮಯೋಗಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನ

ಸರ್ ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ್ ಪ್ರತಿಷ್ಠಾನದ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಆವರಣ ನಯನ ಸಭಾಂಗಣದಲ್ಲಿ
ಮೈಸೂರು ಸಂಸ್ಥಾನದ ದಿವಾನರಾಗಿ , ತಾಂತ್ರಿಕ ವಿದ್ಯಾಭ್ಯಾಸ, ಕೈಗಾರಿಕಾ ವಿಕಾಸಕ್ಕೆ ಭದ್ರ ಬುನಾದಿ ಹಾಕಿದ, ಕರ್ಮಯೋಗಿ, ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರ ಜನ್ಮದಿನದ ಅಂಗವಾಗಿ ಕನ್ನಡ ನಾಡು ವಿಜ್ಞಾನ, ತಂತ್ರಜ್ಞಾನಗಳ ನೆಲೆಯಾಗಿಸಲು ಶ್ರಮಿಸುತ್ತಿರುವ  ದೂರದರ್ಶಿತ್ವದ ಎಂಜಿನಿಯರ್ ಗಳಿಗೆ, ಉಪಾಧ್ಯಾಯರುಗಳಿಗೆ, ಸಮಾಜ ಸೇವಕರು ಗಳಿಗೆ ಅವರ ಜನ್ಮದಿನದ ನಿಮಿತ್ತ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ರತ್ನ ಡಾ.ಅಂಬರೀಷ್ ರವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಬಸವ ರಮಾನಂದ ಮಹಾಸ್ವಾಮಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮುಕುಂದರಾಜು  ರವರು, ರಾಜಶೇಖರ ಮಠಪತಿಯವರು. ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ ಸುರ್ವೆಯವರು, ಚಿತ್ರ ಕಲಾವಿದರಾದ  ಮೀನ, ಶಂಕರಭಟ್ಟ್,
ಉಪಸ್ಥಿತರಿದ್ದರು.

City Today News 9341997936

ಶ್ರೀ ವಿಜಯಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಜೈಗಣೇಶ ಸೇವಾ ಸಮಿತಿ (ರಿ) ಇವರ ವತಿಯಿಂದ ಸಮಸ್ತ ಭಕ್ತಾದಿಗಳ ಸಹಯೋಗದೊಂದಿಗೆ ೪೧ನೇ ವರ್ಷದ ಗಣೇಶೋತ್ಸವ

ಜಯನಗರ ೧&೩ನೇ ಬಡಾವಣೆಯ ಸ್ವಿಮ್ಮಿಂಗ್ ಪೂಲ್ ಹತ್ತಿರದ ಶ್ರೀ ವಿಜಯಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ಜೈಗಣೇಶ ಸೇವಾ ಸಮಿತಿ (ರಿ) ಇವರ ವತಿಯಿಂದ ಸಮಸ್ತ ಭಕ್ತಾದಿಗಳ ಸಹಯೋಗದೊಂದಿಗೆ ೪೧ನೇ ವರ್ಷದ ಗಣೇಶೋತ್ಸವ (ದಿನಾಂಕ ೦೬-೦೯-೨೦೨೪ ರಿಂದ ೧೦-೦೯-೨೦ ೨೪ ವರೆಗೆ) ಸಕಲ ಧಾರ್ಮಿಕ ಕೈಂಕರ್ಯಗಳೊಂದಿಗೆ ಸುಸಂಪನ್ನಗೊಂಡಿತು. ಆದಿಯಲ್ಲಿ ಸ್ವರ್ಣಗೌರಿ ಅಮ್ಮನ ತನ್ನಂತರ ವರಸಿದ್ಧಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆಯಿಂದ ಮೊದಲುಗೊಂಡು ಚತುರ್ದಿನಗಳ ಪರ್ಯಂತ ಶ್ರೀದೇವರಿಗೆ ಸುಪ್ರಭಾತ, ಪಂಚಾಮೃತ, ಅಷ್ಟಗಂಧೋದಕ ಇತ್ಯಾದಿ ಸರ್ವಾಭಿಷೇಕ, ಸರ್ವಾಲಂಕಾರ ಹಾಗೂ ನೈವೇದ್ಯಾದಿ ಮಹಾಪೂಜೆಗಳು ನಡೆದವು. ನವಗ್ರಹ ಹೋಮ, ಮಹಾಗಣಪತಿ ಹೋಮ, ರುದ್ರ ಹೋಮ, ಸುಬ್ರಹ್ಮಣ್ಯ ಹೋಮ, ಸತ್ಯನಾರಾಯಣ ಪೂಜೆಗಳಲ್ಲಿ ಭಕ್ತಾದಿಗಳು ಪಾಲ್ಗೊಂಡುರು ಮಂಗಳವಾರ ೧೦ ರಂದು ಮಹಾಪ್ರಸಾದ ವಿತರಣೆಯ ನಿಮಿತ್ತ “ಅನ್ನಸಂತರ್ಪಣೆ” ವಿಜೃಂಭಣೆಯಿಂದ ನೆರವೇರಲಿದೆ.

City Today News 9341997936

ಕಲ್ಚರ್  ಎಜುಕೇಶನಲ್  ಎನ್‌ಲೈಟ್  ಫೌಂಡೇಶನ್  (ರಿ) ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ

ದಿನಾಂಕ 05   ಸಪ್ಟೆಂಬರ್ 2024 ರಂದು
  ” ಶಿಕ್ಷಕರ ದಿನ”ದ ಅಂಗವಾಗಿ (ACE) ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್  ಫೌಂಡೇಶನ್  (ರಿ) ಸಂಸ್ಥೆಯ  ಮುಖ್ಯ   ಸಂಸ್ಥಾಪಕರಾದಂತಹ
  ಡಾ  ಅಂಬಿಕಾ ಸಿ ಅವರು   ಬೆಂಗಳೂರಿನ ಜಯನಗರದ
”  ಹೋಲಿ ಸೆಂಟ್ ಹೈಸ್ಕೂಲ್ ”  ಶಿಕ್ಷಕರೊಂದಿಗೆ  “ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್” ರವರ  ಉಲ್ಲೇಖನವನ್ನು ಓದುವುದರ ಮೂಲಕ  ಶಿಕ್ಷಕರ ದಿನಾಚರಣೆಯನ್ನು ಶಾಲಾ ಮಕ್ಕಳೊಡನೆ ಆಚರಿಸಿದರು. ಈ  ಸಂದರ್ಭದಲ್ಲಿ ಮುಖ್ಯ  ಅತಿಥಿಗಳಾಗಿ ಬಿಬಿಎಂಪಿ ಸದಸ್ಯರಾದಂತಹ ಶ್ರೀಯುತ ಲಕ್ಷ್ಮಿಕಾಂತ್  ರವರ  ಉಪಸ್ಥಿತರಿದ್ದು  ಶಾಲೆಯ  ಮುಖ್ಯಸ್ಥರು, ಪ್ರಾಂಶುಪಾಲರು , ಶಿಕ್ಷಕ ಮತ್ತು  ಶಿಕ್ಷಕರಿಗೆ  ಗೌರವಿಸಿ  ಶುಭಾಶಯ ಕೋರಿ  ಕಾರ್ಯಕ್ರಮ ಯಶಸ್ವಿಯಾಗಲು ಪ್ರಮುಖ ಪಾತ್ರ ವಹಿಸಿದರು.

City Today News 9341997936

ದೇಶದ ವಿವಿಧ ನಗರಗಳಲ್ಲಿ ಈಗಾಗಲೇ ಮೂರ್ತಿಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಮರುಬಳಕೆ ವಸ್ತುವಾಗಿ ಪರಿವರ್ತಿಸುವ ತಂತ್ರಜ್ಞಾನ ಬಳಸುತ್ತಿರುವ ನಗರ (ಪೂಣೆ) ಪಾಲಿಕೆಗಳನ್ನು ಸಂಪರ್ಕಿಸಿ. ತಂತ್ರಜ್ಞಾನದ ಅಧ್ಯಯನ ಮತ್ತು ಅದೇ ರೀತಿಯಲ್ಲಿ ಇಲ್ಲಿಯೂ ಕ್ರಮ ಕೈಗೊಳ್ಳಲು ನಿಶ್ಚಿಯಿಸಬೇಕು.

ಈ ವರ್ಷ ಸೆಪ್ಟೆಂಬರ್ 17ರ ಚತುರ್ಥಿಯಿಂದ ಸೆಪ್ಟೆಂಬರ್ 17ರ ಅನಂತ ಚತುರ್ದಶಿಯವರೆಗೆ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಮಹತ್ವ ಹೊಂದಿದೆ. ರಾಷ್ಟ್ರೀಯ ಏಕತೆ, ಸಾಮಾಜಿಕ ಸಾಮರಸ್ಯ, ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯ ಭಾಗವಾಗಿ ಉತ್ಸಹ ಆಚರಿಸಲ್ಪಡುತ್ತಿದೆ.

ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ಕಳೆದ 10 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಧ್ಯೆ ಕಾರ್ಯನಿರ್ವಹಿಸುತ್ತಿದ್ದು, ಗಣೇಶ ಉತ್ಸವ ಸಮಿತಿಗಳನ್ನು ಒಗ್ಗೂಡಿಸಿ ಗಣೇಶೋತ್ಸವ ಆಚರಣೆಗಳ ಧೈಯೋದ್ದೇಶಗಳಾದ ಧರ್ಮ, ಸಂಸ್ಕೃತಿ, ದೇಶಭಕ್ತಿ, ಸಾಮಾಜಿಕ ಜಾಗೃತಿ ಮತ್ತು ಸೇವಾಕಾರ್ಯಗಳ ಅರಿವನ್ನು ಸಮಿತಿಗಳಲ್ಲಿ ಮೂಡಿಸಲಾಗುತ್ತಿದ್ದು, ಸಾವಿರಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸುತ್ತಿವೆ. 2023ರಲ್ಲಿ 26 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮೂಹಿಕ ಗಣೇಶ ಉತ್ಸವಮೂರ್ತಿಗಳ ಶೋಭಾಯಾತ್ರೆಗಳು ನಡೆದದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ.

ಇದೇ ಸಂದರ್ಭದಲ್ಲಿ ಎಲ್ಲಾ ಗಣೇಶೋತ್ಸವ ಸಮಿತಿಗಳಲ್ಲಿ ಈ ವರ್ಷ “ಕಾರ್ಗಿಲ್ ವಿಜಯೋತ್ಸವ ವೀರಯೋಧರಿಗೆ ನಮನ – 25ನೇ ವರ್ಷದ ಸಂಭ್ರಮ” ಈ ಧೈಯ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದೆ

ಧಾರ್ಮಿಕ ಆಚರಣೆ, ನಂಬಿಕೆ ಮತ್ತು ತಮಗೆ ಇಷ್ಟವಾಗುವ ಮೂರ್ತಿಯನ್ನು ಪೂಜಿಸುವ ಹಕ್ಕು ಪ್ರತಿಯೊಬ್ಬ ಭಕ್ತನಿಗೆ ಇದೆ. ಕಳೆದ ನಾಲ್ಕು ವರ್ಷಗಳಿಂದ ಪರಿಸರ ಹೆಸರಿನಲ್ಲಿ ಎತ್ತರ, ಬಣ್ಣ, ಪಿಒಪಿ ಮೂರ್ತಿಗಳ ಮೇಲೆ ನಿಷೇಧವನ್ನು ಹೇರುವ ಪ್ರಯತ್ನ ನಿರಂತರವಾಗಿದೆ. ಪರಿಸರಕ್ಕೂ ಹಾನಿಯಾಗದೆ, ಭಕ್ತರ ಧಾರ್ಮಿಕ ಭಾವನೆಗಳಿಗೆ ಅಡ್ಡಿಯಾಗದಂತೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು BMGUS ಆಗ್ರಹ ಮಾಡುತ್ತ ಬಂದಿದೆ.

ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ಆದೇಶದಲ್ಲಿ ಪಿಒಪಿ ಮೂರ್ತಿ, ವಿಗ್ರಹದ ಎತ್ತರ, ಧಾರ್ಮಿಕ ಆಚರಣೆಗೆ ಬಗ್ಗೆ ಕೆಲವು ನಿರ್ಬಂಧಗಳನ್ನು ವಿಧಿಸಿ ಗಣೇಶ ಮೂರ್ತಿಗಳನ್ನು ಭಕ್ತರಿಗೆ ಸಿಗದಂತೆ ಸ್ಥಾನೀಯ ಆಡಳಿತವು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಐತಿಹಾಸಿಕ ಹಿನ್ನೆಲೆ ಇರುವ ಸಾರ್ವಜನಿಕ ಗಣೇಶೋತ್ಸವಗಳನ್ನು ಆಚರಿಸಲು ಅಡ್ಡಪಡಿಸಲಾಗಿದ್ದು, ಈ ಧೋರಣೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಇದನ್ನು BMGUS ತೀವ್ರವಾಗಿ ವಿರೋಧಿಸುತ್ತಿದ್ದು. ಇದು ಹೀಗೆ ಮುಂದುವರೆದಲ್ಲಿ ರಾಜ್ಯಾದಂತ ಧಾರ್ಮಿಕ ಸಂಘಟನೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ರಸ್ತೆಗಿಳಿದು ಹೋರಾಟ ನಡೆಸಲಿದ್ದಾರೆ.

ದೇಶಾದ್ಯಂತ ಗಣೇಶ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲು ಕಂಡುಕೊಂಡಿರುವ ಪರ್ಯಾಯ ಮಾರ್ಗಗಳಂತೆ ನಮ್ಮ ರಾಜ್ಯದಲ್ಲೂ ಪರಿಸರಕ್ಕೆ ಧಕ್ಕೆಯಾಗದಂತೆ ಕಂಡುಕೊಳ್ಳಲು ಸಾಧ್ಯವಿದೆ.

ಪರ್ಯಾಯ ಮಾರ್ಗಗಳು:-

ಪಿಒಪಿಗಳಿಂದ ನೀರು ಮತ್ತು ಪರಿಸರಕ್ಕೆ ಹಾನಿಯಾಗದಂತೆ ನಿಗದಿ ಪಡಿಸಿರುವ ಕಲ್ಯಾಣಿಗಳಲ್ಲಿ ಮಾತ್ರ ವಿಸರ್ಜನೆ ಮಾಡಿಸುವುದು ಮತ್ತು ಪಿಒಪಿ ಮೂರ್ತಿಗಳನ್ನು ಅಲಂಕಾರಕ್ಕೆ ಮಾತ್ರ ಬಳಸಿ ಮುಂದಿನ ವರ್ಷವು ಇದೇ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಎಲ್ಲಾ ಸಮಿತಿಗಳಿಗೂ ಅರಿವು ಮೂಡಿಸುತ್ತೇವೆ. ಅದರಂತೆ ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಯಾವುದೇ ಅಡಚಣೆ ಆಗದಂತೆ ತಾವು ನಿರ್ದೇಶನ ನೀಡಬೇಕೆಂದು ವಿನಂತಿಸುತ್ತೇವೆ.

ಉತ್ಸವ ಮೂರ್ತಿ ಬಿಡುವ ಕೆರೆ. ಕಲ್ಯಾಣಿ ಸ್ಥಳದಲ್ಲಿ ಅಗತ್ಯ ವ್ಯವಸ್ಥೆಗಳಾದ ಬೆಳಕು, ರಕ್ಷಣೆ, ಸಹಾಯಕ ಸಿಬ್ಬಂದಿಗಳು, ಕುಡಿಯುವ ನೀರು, ಶೌಚಾಲಯ, ಸಾಲಾಗಿ ಬರಲು ಬ್ಯಾರಿಕೇಡ್ ವ್ಯವಸ್ಥೆ, ರಸ್ತೆ ಸಂಚಾರ ನಿಯಂತ್ರಣ, ಸೂಚನೆಗಳನ್ನು ನೀಡಲು ಧ್ವನಿವರ್ಧಕ ವ್ಯವಸ್ಥೆ, ಅಂಬುಲೆನ್ಸ್ ಮತ್ತು ಪ್ರಥಮ ಚಿಕಿತ್ಸೆ, ದೊಡ್ಡ ಗಣಪತಿಗಳನ್ನು ವಿಸರ್ಜಿಸಲು ಕೆರೆಯ ಕಲ್ಯಾಣಿಗಳಲ್ಲಿ ನೀರಿನ ವ್ಯವಸ್ಥೆ, ಬೃಹತ್ ಕ್ರೇನ್ಗಳು, ಕಾಲ ಕಾಲಕ್ಕೆ ಕಲ್ಯಾಣಿಗಳ ಸ್ವಚ್ಛತೆಗಾಗಿ ಜೆಸಿಬಿಗಳು, ತುರ್ತು ನಿರ್ವಹಣೆ ಸುರಕ್ಷಾ ಪಡೆಗಳ ವ್ಯವಸ್ಥೆ ಮಾಡಿಸಬೇಕು. ಅನೇಕ ವರ್ಷಗಳಿಂದ ಆಚರಣೆ ಮಾಡುತ್ತಿರುವ ಸಮಿತಿಗಳಿಗೆ ಕನಿಷ್ಠ ಐದು ವರ್ಷಗಳ ಪರವಾನಿಗೆಯನ್ನು ಒಮ್ಮೆಲೆ ನೀಡಬೇಕು.

ಧ್ವನಿವರ್ಧಕ, ಡಿಜೆ ಬಳಕೆಗೆ ಯಾವುದೇ ನಿರ್ಬಂಧ ವಿಧಿಸದೆ ಅವಕಾಶವನ್ನು ಕಲ್ಪಿಸಿಕೊಡಬೇಕು. ಮಂಡಳಿಗಳಿಗೆ ಪೊಲೀಸರ ಕಿರುಕುಳ, ಕೇಸ್ ದಾಖಲು ಮಾಡದಂತೆ ರಕ್ಷಣೆಯನ್ನು ನಿಡಬೇಕು. ಮೆರವಣಿಗೆಯ ಸಮಯ, ಮಾರ್ಗಕ್ಕೆ ಅಡೆತಡೆ ಮಾಡದಂತೆ. ಮೆರವಣಿಗೆ ಮಾರ್ಗದಲ್ಲಿ ಸಂಚಾರಕ್ಕೆ ಎಲ್ಲಾ

• ವ್ಯವಸ್ಥೆಯನ್ನು ಮಾಡಬೇಕು.

ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಎಲ್ಲಾ ವ್ಯವಸ್ಥೆಗಳನ್ನು ರೂಪಿಸಿ ಮೂರ್ತಿಗಳ ವಿಸರ್ಜನೆಗೆ ಸಮಯದ ನಿಬಂಧನೆ ಮಾಡದೆ ಧಾರ್ಮಿಕ ವಿಧಿವಿಧಾನದಂತೆ ವಿಸರ್ಜಿಸಲು ವ್ಯವಸ್ಥೆ ರೂಪಿಸುವುದು.

ದೇಶದ ವಿವಿಧ ನಗರಗಳಲ್ಲಿ ಈಗಾಗಲೇ ಮೂರ್ತಿಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಮರುಬಳಕೆ ವಸ್ತುವಾಗಿ ಪರಿವರ್ತಿಸುವ ತಂತ್ರಜ್ಞಾನ ಬಳಸುತ್ತಿರುವ ನಗರ (ಪೂಣೆ) ಪಾಲಿಕೆಗಳನ್ನು ಸಂಪರ್ಕಿಸಿ. ತಂತ್ರಜ್ಞಾನದ ಅಧ್ಯಯನ ಮತ್ತು ಅದೇ ರೀತಿಯಲ್ಲಿ ಇಲ್ಲಿಯೂ ಕ್ರಮ ಕೈಗೊಳ್ಳಲು ನಿಶ್ಚಿಯಿಸುವುದು.

ರಾಜ್ಯಾದ್ಯಂತ ಕಳೆದ 4 ವರ್ಷಗಳಿಂದ ಈ ರೀತಿಯ ಬೇಡಿಕೆಗಳನ್ನು ರಾಜ್ಯ ಸರ್ಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿಯನ್ನು ಸಲ್ಲಿಸಿದ್ದು, ಸೂಕ್ತ ಕ್ರಮಗಳಿಗಾಗಿ ಹೋರಾಟವನ್ನು ನಡೆಸಿದ್ದರೂ ಸಹಾ ಇಲ್ಲಿಯವರೆಗೂ ಯಾವುದೇ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೆ, ಏಕಾಏಕಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಖಂಡನೀಯ,

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು-ಕರ್ನಾಟಕ ಸರ್ಕಾರ ಹೊರಡಿಸಿರುವ ಆಜ್ಞೆ ಸಂಖ್ಯೆ

HFW/FSSA/ENF/68/2024/25 : 31.08.2024 – ผูជ ជជ ở ಪ್ರತಿಷ್ಠಾಪನೆಗಾಗಿ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವ ಸಂದರ್ಭದಲ್ಲಿ FSSAI ನೊಂದಣಿ/ಪರವಾನಗಿ ಪಡೆದಿರುವ ವ್ಯಕ್ತಿ/ ಸಂಸ್ಥೆಗಳಿಂದ ಮಾತ್ರ ಅಲ್ಲಿ ವಿನಿಯೋಗವಾಗುವ ಪ್ರಸಾದವನ್ನು ಸಿದ್ದಪಡಿಸುವ ಕುರಿತಂತೆ ಆಜ್ಞೆ ಮತ್ತು ಸೂಚನೆಯನ್ನು ಒಪ್ಪಲು ಸಾಧ್ಯವಿಲ್ಲ ಈ ಹೇಳಿಕೆಯನ್ನು ನಾವು ಖಂಡಿಸುತ್ತೆವೆ. ಪಿಒಪಿ ಗಣೇಶ ವಿಸರ್ಜಿಸಿದ್ದರೆ 6 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ಈ ಸರ್ಕಾರಿ ಹೇಳಿಕೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಹಾಗೂ ಖಂಡಿಸುತ್ತೆವೆ. ಗಣೇಶ ಸಮಿತಿಯವರು ಅನುಮತಿ ಪಡೆಯಲು ಹೋದಾಗ ಶುಲ್ಕವನ್ನು ಕಟ್ಟಿ ಎನ್ನಲಾಗುತ್ತದೆ ಈ ಬಲವಂತದ ಸುಲಿಗೆಯನ್ನು ತಕ್ಷಣವೇ ನಿಲ್ಲಿಸಬೇಕು. ಯಾವುದೇ ಅಡೆತಡೆ ಇಲ್ಲದೆ ಹಬ್ಬವನ್ನು ಆಚರಿಸಲು ಸಹಕರಿಸಬೇಕು.

ಹಬ್ಬಕ್ಕೆ ಕೆಲವೇ ದಿನಗಳು ಇದ್ದು, ತಕ್ಷಣ ಸರ್ಕಾರ ಮಧ್ಯ ಪ್ರವೇಶಿಸಿ ಮುಕ್ತವಾಗಿ ಗಣೇಶೋತ್ಸವ ಆಚರಿಸಲು ಅನುಕೂಲವಾಗುವ ವಾತಾವರಣವನ್ನು ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್  ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಜಂಟಿಯಾಗಿ
ಅಶ್ವತ್ಥನಾರಾಯಣ ಅಧ್ಯಕ್ಷರು,ರಾಜಣ್ಣ ಹೊನ್ನೇನಹಳ್ಳಿ ಸಂಯೋಜಕರು, ಶ್ರೀ ಗೋಪಾಲಕೃಷ್ಣ ಯಶವಂತಪುರ ಸಹ ಸಂಯೋಜಕರು ಹಾಗೂ ಸಮಿತಿಯ ಮುಖಂಡರು ಜಂಟಿಯಾಗಿ ಪ್ರಕಟಿಸಿದರು.

City Today News 9341997936

ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾದ ಕಚೇರಿ ಉದ್ಘಾಟನೆಯ ಪೂಜಾ ಕಾರ್ಯಕ್ರಮ

ಕರ್ನಾಟಕ ವಿಧಾನ ಪರಿಷತ್ ಶಾಸಕರು ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾದ ಟಿ.ಎ ಶರವಣ ಅವರು  *ಸರ್ಕಾರಿ ಭರವಸೆಗಳ ಸಮಿತಿಯ* ನೂತನ *ಅಧ್ಯಕ್ಷರಾಗಿ* ಆಯ್ಕೆಯಾದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಕಚೇರಿ ಉದ್ಘಾಟನೆಯ ಪೂಜಾ ಕಾರ್ಯಕ್ರಮ  ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಟಿ. ಎ. ಶರವಣ ಅವರ ಕುಟುಂಬಸ್ಥರು, ಬಂಧು ಮಿತ್ರರು ಹಾಗೂ ಇತರ ರಾಜಕೀಯ ಗಣ್ಯರು ಭಾಗಿಯಾಗಿದ್ದರು.

City Today News 9341997936