ಜಯನಗರ ರಾಯರ ಮಠದಲ್ಲಿ “ಶ್ರೀಮದ್ಭಾಗವತ ರತ್ನ ಶ್ರೀ ಪ್ರಹ್ಲಾದರಾಜರ ವೈಭವ”(ಧಾರ್ಮಿಕ ಪ್ರವಚನ)

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 6, 7 ಮತ್ತು 9ರಂದು ಪ್ರತಿದಿನ ಸಂಜೆ 6-30 ರಿಂದ 7-30ರ ವರೆಗೆ ಮ||ಶಾ||ಸಂ|| ಶ್ರೀ ಬ್ರಹ್ಮಣ್ಯಾಚಾರ್ಯರಿಂದ “ಶ್ರೀಮದ್ಭಾಗವತ ರತ್ನ ಶ್ರೀ ಪ್ರಹ್ಲಾದರಾಜರ ವೈಭವ” ವಿಷಯವಾಗಿ ಧಾರ್ಮಿಕ ಪ್ರವಚನ ಏರ್ಪಡಿಸಿದೆ ಎಂದು ಟಿಟಿಡಿಯ ಡಾ|| ಪಿ. ಭುಜಂಗರಾವ್ ಮತ್ತು ಶ್ರೀಮಠದ ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-41

City Today News 9341997936

6ನೇ ಆಗಸ್ಟ್ 2024ರಂದು ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿರವರ 103ನೇ ಆರಾಧನಾ ಮಹೋತ್ಸವ ಯಜಮಾನ್ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರವರ 103ನೇ ಆರಾಧನಾ ಮಹೋತ್ಸವ

6ನೇ ಆಗಸ್ಟ್ 2024ರಂದು ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿರವರ 103ನೇ ಆರಾಧನಾ ಮಹೋತ್ಸವ ಯಜಮಾನ್ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರವರ 103ನೇ ಆರಾಧನಾ ಮಹೋತ್ಸವ ನಡೆಯಲಿದೆ. ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಸಂಸದರು, ಶಾಸಕರು ಹಾಗೂ ಗಣ್ಯ ವ್ಯಕ್ತಿಗಳು, ಸಮುದಾಯದ ಹಿರಿಯರು ಭಾಗವಹಿಸುವರು. ಈ ಬಗ್ಗೆ ಮಾಹಿತಿ ನೀಡಲು ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆ ವತಿಯಿಂದ ಪತ್ರಿಕಾ ಗೋಷ್ಠಿ.

ಅಧ್ಯಕ್ಷರಾದ ಸುರೇಶ್ ಎಸ್. ಮತ್ತು ಆಡಳಿತ ಮಂಡಳಿಯ ಸದಸ್ಯರಾದ ವಿನೋದ್ ಎಂ.ಜಿ.. ವಿ.ಎಸ್.ಮಂಜುನಾಥ್, ನಿರಂಜನ್ ಗಾಣಿಗ.ಎನ್. ಮುನಿಚೆಟ್ಟಿ ವಿ. ಶ್ರೀಮತಿ ಉಮಾದೇವಿ ಜಿ.ಎ. ಶ್ರೀಮತಿ ಸ್ಪಪ್ನಚಂದ್ರಶೆಟ್ಟಿ, ರಾಜಣ್ಣ ಎಂ.ಸಿ. ಷಹ ಸಂಜಯ್, ಶ್ರೀಮತಿ ಕೃಷ್ಣವೇಣಿ ಡಿ.ಸಿ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಶ್ರೀ ದೊಡ್ಡಣ್ಣ ಶೆಟ್ಟರವರ ಧಾರ್ಮಿಕ ಕಾರ್ಯ. ಬಡವರಿಗೆ ಉಚಿತ ಶಿಕ್ಷಣ, ಹಾಗೂ ಉಚಿತ ಊಟ. ವಸತಿ ನೀಡಿದ ಮಹಾನ್ ವ್ಯಕ್ತಿತ್ವದವರು.

ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರ ಜೊತೆಯಲ್ಲಿ ಯಜಮಾನ್ ಜನೋಪಕಾರಿ ದೊಡ್ಡಣ್ಣ ಶೆಟ್ಟರವರ ಉತ್ತಮ ಒಡನಾಟವಿತ್ತು. ದೊಡ್ಡಣ್ಣ ಶೆಟ್ಟರ ರವರ ಸಮಾಜ ಸೇವೆಯನ್ನು ಗುರುತಿಸಿ ಇವರಿಗೆ ಜನೋಪಕಾರಿ ಎಂಬ ಬಿರುದು ಕೊಟ್ಟು ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ. ಮಹಾರಾಜರು ನೀಡಿದ 5.1/8 ಎಕರೆ ಜಾಗದಲ್ಲಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆ ಸ್ಥಾಪಿಸಿದರು.

1905ರಲ್ಲಿ ಕಲಾಸಿಪಾಳ್ಯದಲ್ಲಿ ಸಭಾಂಗಣ ಕಟ್ಟಡ ನಿರ್ಮಾಣ ಮಾಡಿದರು. ದೊಡ್ಡಣ್ಣ ಶೆಟ್ಟರವರ ಸಾಮಾಜಿಕ ಮುಂದಿನ ಪೀಳಿಗೆಗೆ ತಿಳಿಯಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕು ಎಂಬುದು ಧರ್ಮ ಸಂಸ್ಥೆಯ ಉದ್ದೇಶವಾಗಿದೆ.

ಆಗಸ್ಟ್ 6ರಂದು ಶ್ರೀ ದೊಡ್ಡಣ್ಣಶೆಟ್ಟರವರ 103ನೇ ಆರಾಧನಾ ಮಹೋತ್ಸವವನ್ನು ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಬಯಲು ರಂಗಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಜರುಗಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ರವರು, ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗರೆಡ್ಡಿರವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆಯನ್ನು, ಸಂಸದರಾದ ಶ್ರೀ ತೇಜಸ್ವಿಸೂರ್ಯರವರು, ಶಾಸಕರಾದ ಡಾ: ಉದಯ ಸಿ ಗರುಡಾಚಾರ್ ರವರು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಸಮುದಾಯದ ಎಲ್ಲಾ ಸಂಘ ಸಂಸ್ಥೆಯವರು ಹಿರಿಯ ಮುಖಂಡರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಶ್ರೀ ದೊಡ್ಡಣ್ಣ ಶೆಟ್ಟರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ ಹಳೆಯ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಸ್.ಸುರೇಶ್ ಅಧ್ಯಕ್ಷರು, ಶ್ರೀ ಲ.ನ.ಧರ್ಮಸಂಸ್ಥೆ, ಕೋಟೆ, ಬೆಂಗಳೂರು. ತಿಳಿಸಿದರು.

ಸ್ಥಳ:ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಬಯಲು ರಂಗಮಂದಿರ.
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಧರ್ಮಸಂಸ್ಥೆ. ಬೆಂಗಳೂರು -560002.

City Today News 9341997936

ಭರತನಾಟ್ಯ ಪ್ರದರ್ಶನ : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ

ಭರತನಾಟ್ಯ ಪ್ರದರ್ಶನ : ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 1, ಗುರುವಾರ ಬೆಳಗ್ಗೆ ಪೂಜಾ ಕಾರ್ಯಕ್ರಮಗಳು, ಅನ್ನದಾನ ಸೇವೆ ಜರುಗಿದವು. ಸಂಜೆಯ ಕಾರ್ಯಕ್ರಮದಲ್ಲಿ ಅಷ್ಟಾವಧಾನ, ರಥೋತ್ಸವ, ಗಜವಾಹನೋತ್ಸವ, ತೊಟ್ಟಿಲು ಸೇವೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ – ಮಂಜು ಭೈರವಿ ನಿರ್ದೇಶನದಲ್ಲಿ “ನಾಟ್ಯ ಭೈರವಿ” ಕಲಾ ಕುಟೀರದ ವಿದ್ಯಾರ್ಥಿ ಗಳಿಂದ “ಭರತನಾಟ್ಯ” ಪ್ರದರ್ಶನ ಕಾರ್ಯಕ್ರಮ ಬಹಳ ವಿಶೇಷವಾಗಿ ನೆರವೇರಿತು ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದರು ,ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

City Today News 9341997936

“ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ವಿಶೇಷ  ಪೂಜೆ” ಹಾಗೂ ನರ್ತನ ಸೇವೆ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜುಲೈ 25, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಶ್ರೀ ಜಯತೀರ್ಥರ ಮಧ್ಯಾರಾಧನೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಮಾಲತೇಶ್ ಅವರ ನಿರ್ದೇಶನದಲ್ಲಿ  ನಾಟ್ಯ ಶಂಕರ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ  ನರ್ತನ ಸೇವೆ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

City Today News 9341997936

“ಗುರು ಪೂರ್ಣಿಮಾ ಶ್ರೀ ಗುರು ರಾಯರ ಸನ್ನಿಧಿಗೆ ಭಕ್ತ ಜನ ಸಾಗರ ವಿಶೇಷ ಪೂಜೆ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ” ಗುರುಪೌರ್ಣಿಮಾ” ಪ್ರಯುಕ್ತ ಶ್ರೀ ಗುರುರಾಯರ ಬೃಂದಾವನಕ್ಕೆ ಅಭಿಷೇಕ, ಮುಖ್ಯಪ್ರಾಣ ದೇವರಿಗೆ ರತ್ನ ಕವಚ ಹಾಗೂ ಶ್ರೀ ಗುರುರಾಯರ ಬೃಂದಾವನಕ್ಕೆ ಸುವರ್ಣ ಕವಚದ ಅಲಂಕಾರ ಮತ್ತು ವಿಶೇಷ ಉತ್ಸವಗಳನ್ನು ನೆರವೇರಿಸಲಾಯಿತು. “ಪೌರ್ಣಮಿ” ಪ್ರಯುಕ್ತ  ಸಾಮೂಹಿಕ ಶ್ರೀ ಸತ್ಯನಾರಾಯಣವ್ರತ ಪೂಜೆಯನ್ನು ಪುಷ್ಪಾರ್ಚನೆ, ಕಥಾಶ್ರವಣದೊಂದಿಗೆ ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು, ಕಟ್ಟಿ ರಾಘವೇಂದ್ರ ಆಚಾರ್ಯರು ನೆರವೇರಿಸಿದರು. ಈ ಸಂದರ್ಭದಲ್ಲಿ ಸೇವಾಕರ್ತರು ಗುರುರಾಯರಿಗೆ ಬೆಳ್ಳಿಯ ರಜತ ತಟ್ಟೆಯನ್ನು  ಸಮರ್ಪಿಸಿದರು. ಹಾಗೂ ಸೇವಾ ಕರ್ತೃಗಳು  ನೂರಾರು ಭಕ್ತರು  ಸಂಕಲ್ಪವನ್ನು ಮಾಡಿ ಮಹಾ ಮಂಗಳಾರತಿ ಪ್ರಸಾದವನ್ನು ಸ್ವೀಕರಿಸಿ ಶ್ರೀಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936