ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 25 ಆಗಸ್ಟ್ 2024  ರಂದು ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್   ಫೌಂಡೇಶನ್  (ರಿ)   ಡಾ  ಅಂಬಿಕಾ ಸಿ ರವರಿಂದ     ರಂಗಸ್ಥಳ, ಎಂಜಿ ರಸ್ತೆ  ,ಮೆಟ್ರೋ ನಿಲ್ದಾಣದ   ಬಳಿ,   ಶ್ರೀ ಕೃಷ್ಣ ರಾಸಲೀಲೆ  ನೃತ್ಯ, ನಾಟಕ  ಮತ್ತು ಚಿತ್ರಕಲೆ   ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು,

ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ದಿನಾಂಕ 25 ಆಗಸ್ಟ್ 2024  ರಂದು ಆರ್ಟ್ ಕಲ್ಚರ್  ಎಜುಕೇಶನಲ್  ಎನ್‌ಲೈಟ್   ಫೌಂಡೇಶನ್  (ರಿ)
  ಡಾ  ಅಂಬಿಕಾ ಸಿ ರವರಿಂದ      ರಂಗಸ್ಥಳ, ಎಂಜಿ ರಸ್ತೆ  ,ಮೆಟ್ರೋ ನಿಲ್ದಾಣದ   ಬಳಿ,   ಶ್ರೀ ಕೃಷ್ಣ ರಾಸಲೀಲೆ  ನೃತ್ಯ, ನಾಟಕ  ಮತ್ತು ಚಿತ್ರಕಲೆ   ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಧರ್ ಸಮಾಜ ಸೇವಕರು,  ರವಿ  ಎನ್   ಎಸ್  ಸಮಾಜ ಸೇವಕರು ಕಾಕ್ಸ್ ಟೌನ್,    ಸತೀಶ್ ಎಸ್   ಹಿರಿಯ ಪತ್ರಕರ್ತರು ಲಂಕೇಶ್ ಪತ್ರಿಕೆ,   ಯೋಗಚಾರ್ಯ ಕಲಂದರ್ ಭಾಷಾ,  ಶ್ರೀಮತಿ ಮಂಜುಳ ಚಂದ್ರು ಹಾಗೂ    ಶ್ರೀ ಕೃಷ್ಣ, ರಾಧೆ, ಯಶೋದೆ, ವೇಶಭೂಷಣಧಾರಿಗಳು , ನೃತ್ಯ ಶಿಕ್ಷಕರುಗಳು   ಕಾರ್ಯಕ್ರಮದಲ್ಲಿ  ಭಾಗವಹಿಸಿ ಸಂತೋಷದಿಂದ  ಸಂಭ್ರಮಿಸಿದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ,  ಹಾಗೂ ತಂದೆ-ಮಗನ ಜುಗಲ್ ಬಂದಿ ಸ್ಯಾಕ್ಸೋಫೋನ್ ವಾದನ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಆಗಸ್ಟ್ 23, ಶುಕ್ರವಾರ ಬೆಳಗ್ಗೆ ಶ್ರೀ  ಸುಜ್ಞಾನೇಂದ್ರತೀರ್ಥ ಆರಾಧನೆ ಪ್ರಯುಕ್ತ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ  ಕಾರ್ಯಕ್ರಮ ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ವಾನ್ ಜನಾರ್ಧನ್ ಮತ್ತು ಅವರ ಮಗ ಮಾಸ್ಟರ್ ಎಲ್.ಎನ್. ದತ್ತಾ (ತಂದೆ -ಮಗ) ಇವರಿಂದ ಸ್ಯಾಕ್ಸೋಫೋನ್ ವಾದನ ಜುಗಲ್ ಬಂದಿ ಜರುಗಿದವು ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ.

City Today News 9341997936

“ರಾಯರ ಮಹಾರಥೋತ್ಸವ ಜಯನಗರದರಾಜಭೀದಿಯಲ್ಲಿ” ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ 4:30 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ

“ರಾಯರ ಮಹಾರಥೋತ್ಸವ ಜಯನಗರದರಾಜಭೀದಿಯಲ್ಲಿ” ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ 4:30 ರಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು ದರ್ಶಿಸಲು ಸಹಸ್ರಾರು ಭಕ್ತಾದಿಗಳು ಸೇರಿ ಸರದಿ ಸಾಲಿನಲ್ಲಿ ಚಿಕ್ಕ ಮಕ್ಕಳು ಯುವಕರು ಯುವತಿಯರು ಪುರುಷರು ಮಹಿಳೆಯರು ಹಿರಿಯರು ವಯೋ ವೃದ್ಧರು ಪ್ರತಿಯೊಬ್ಬ ಭಕ್ತರು ರಾಯರ ದರ್ಶನ ಪಡೆದರು ದರ್ಶನಕ್ಕಾಗಿ ಪ್ರತ್ಯೇಕ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.45 ರವರೆಗೆ ಪ್ರತಿಯೊಬ್ಬ ಭಕ್ತರಿಗೂ ಅನ್ನ ಸಂತರ್ಪಣೆಯ ಪ್ರಸಾದ ಕಾರ್ಯಕ್ರಮ ವಿಶೇಷವಾಗಿ ನೆರವೇರಿತು ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:45 ರ ವರೆಗೂ ಶ್ರೀಮಠದಿಂದ ಬಿಎಸ್ಏನ್ಎಲ್ ಆಫೀಸ್ ಪೋಸ್ಟ್ ಆಫೀಸ್ ಮುಖಾಂತರ ಅದ್ದೂರಿಯಾಗಿ ಒಂದು ಪ್ರದಕ್ಷಿಣ ಆಕೃತಿಯಾಗಿ ಜಯನಗರದ ರಾಜಭೀದಿಯಲ್ಲಿ ಮಹಾ ರಥೋತ್ಸವವೂ ನೆರವೇರಿತು.

ಈ ರಥೋತ್ಸವದಲ್ಲಿ, ನಾದಸ್ವರ ಶ್ರೀಹರಿ ಭಜನೆ, ಮಹಿಳೆಯರಿಂದ ಕೋಲಾಟ, ಡೊಳ್ಳು ಕುಣಿತ, ನರ್ತನ ಸೇವೆ , ಸಿಡಿಮದ್ದು ಪಟಾಕಿಗಳಿಂದ ವಿಶೇಷವಾಗಿ ನೆರವೇರಿತು ಅಪಾರವಾದ ಸಂಖ್ಯೆಯಲ್ಲಿ ಭಕ್ತ ಜನಸಾಗರವೇ ಈ ಉತ್ಸವದಲ್ಲಿ ಭಾಗಿಯಾಗಿ ಗುರು ರಾಯರ ದರ್ಶನ ಪಡೆದು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು ಆರ್ ಕೆ ವಾದೀಂದ್ರ ಆಚಾರ್ಯ, ಜಿ, ಕೆ ಆಚಾರ್ಯ ನಂದಕಿಶೋರ್ ಆಚಾರ್ಯರ ನೇತೃತ್ವದಲ್ಲಿ ಅಚ್ಚುಕಟ್ಟಾಗ ವ್ಯವಸ್ಥೆಯೊಂದಿಗೆ ನೆರವೇರಿತು ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಭಕ್ತರಿಗೂ ಜಾತಿ ಮತ ಭೇದ ಇಲ್ಲದೆ ಸೇವಾಕರ್ತರಿಗೂ ಸಾರ್ವಜನಿಕ ಭಕ್ತರಿಗೂ ಸುಮಾರು 32 ಸಾವಿರಕ್ಕೂ ಮಿಗಿಲಾಗಿ ಭಕ್ತರಿಗೆ “ಅನ್ನ ಸಂತರ್ಪಣೆ” ಕಾರ್ಯಕ್ರಮವು ನೆರವೇರಿತು.

City Today News 9341997936

“ವಿಶ್ವಛಾಯಾಗ್ರಾಹಕ ದಿನಾಚರಣೆ”ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್  25ನೇ ವರ್ಷದ ವಾರ್ಷಿಕ ಪ್ರೊಜನ್ ಮೆಮೊರಿಸ್ 2024 ಛಾಯಾಚಿತ್ರ ಪ್ರದರ್ಶನ  ಸಮಾರೋಪ

ವಿಶ್ವಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಬೆಂಗಳೂರು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ  ಆಯೋಜಿಸಿದ್ದ  ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್  25ನೇ ವರ್ಷದ ವಾರ್ಷಿಕ ಪ್ರೊಜನ್ ಮೆಮೊರಿಸ್ 2024 ಛಾಯಾಚಿತ್ರ ಪ್ರದರ್ಶನ  ಸಮಾರೋಪ ಸಮಾಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ ಮಹದೇವಪ್ಪ ಛಾಯಾಚಿತ್ರಗಳನ್ನು ವೀಕ್ಷಿಸಿದರು.



ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್  ಅಧ್ಯಕ್ಷ ಮೋಹನ್ ಕುಮಾರ್ ಬಿ.ಎನ್, ಉಪಾಧ್ಯಕ್ಷ ಶೈಲೇಂದ್ರ ಭೋಜಕ್,  ಪ್ರಧಾನ ಕಾರ್ಯದರ್ಶಿ ಗಣೇಶ್ ಕೆ.ಎಸ್,  ಖಜಾಂಚಿ ರವೀಂದ್ರ ನಾಯಕ್ ಸಿ.ಹೆಚ್, ಸಮಿತಿಯ ಸದಸ್ಯರುಗಳಾದ  ಚೇತನ್ ಶಿವಕುಮಾರ್ ಕೆ,  ಸುರೇಶ್ ಪಿ, ಕೌಶಿಕ್ ಜೆ.ಎನ್,  ಮುನಿರಾಮೇಗೌಡ (ರವಿ), ಮುರಳಿಕುಮಾರ್ ಕೆ, ಪಾರ್ಥಸಾರಥಿ ಎಂ. ಭಾಗವಹಿಸಿದ್ದರು.

City Today News 9341997936

‘ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ “ಮಧ್ಯಾರಾಧನೆ” ರಾಯರ ಮಠದಲ್ಲಿ ಹಬ್ಬದ ಸಂಭ್ರಮ”

ಬೆಂಗಳೂರು ಆಗಸ್ಟ್ 21-ಈ ದಿನ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನದ ಒಳಗಡೆ ಜೀವಂತವಾಗಿ ಪ್ರವೇಶಿಸಿದ ದಿನ.  ಈ ಮಧ್ಯಾರಾಧನೆಯ ಅಂಗವಾಗಿ ರಾಯರ ಬೃಂದಾವನಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರದೊಂದಿಗೆ  ಮಹಾ ಅಭಿಷೇಕವು ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಿತು. ನಂತರ ರಾಯರ ಬೃಂದಾವನಕ್ಕೆ ವಿಶೇಷ ರತ್ನ ಕವಚದ ಅಲಂಕಾರ, ಬೆಳಗ್ಗೆ 7:00 ರಿಂದ 11 ಗಂಟೆಯವರೆಗೆ ಸ್ವರ್ಣ ಸಿಂಹಾಸನದಲ್ಲಿ ರಾಯರ ಪ್ರತೀಕವನ್ನು ಇರಿಸಿ ರಾಯರ ಪಾದಪೂಜೆ, ಫಲ ಪುಷ್ಪ ಸಮರ್ಪಣೆ, 11ಕ್ಕೆ ಸುವರ್ಣ ಕನಕಾಭಿಷೇಕ, ಮಹಾಮಂಗಳಾರತಿ ನಡೆಯಲಿದ್ದು ಸಹಸ್ರಾರು ಭಕ್ತರಿಗೆ “ಅನ್ನ ಸಂತರ್ಪಣೆ” ನೆರವೇರಲಿದೆ. ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತ ಜನರು ರಾಯರ ದರ್ಶನ, ತೀರ್ಥ, ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಿ ಶ್ರೀಮಠದ  ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಂಡು ಭಕ್ತರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ಈ ದಿನ ಸಂಜೆ 5 ರಿಂದ ರಾಯರ ಬಗ್ಗೆ ಪ್ರವಚನ,  6ಕ್ಕೆ  ರಥೋತ್ಸವ ಜರಗಲಿದ್ದು ನಂತರ 7 ಗಂಟೆಗೆ  ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್ ಎಂ ಬಿ, ವಿದ್ವಾನ್  ಅಶೋಕ್ ಎಸ್  ಮತ್ತು ವೃಂದದವರಿಂದ “ದಾಸ ತರಂಗಿಣಿ” ಕಾರ್ಯಕ್ರಮ  ನಡೆಯಲಿದೆ ಎಂದು ಈ ಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರು ತಿಳಿಸಿದರು. ವಿಶೇಷವಾಗಿ ಗುರುವಾರ 22ನೇ ತಾರೀಕು ಬೆಳಗ್ಗೆ 8:30ಕ್ಕೆ ಜಯನಗರದ  ರಾಜಬೀದಿಗಳಲ್ಲಿ ಮಹಾರಥೋತ್ಸವದ  ಮೆರವಣಿಗೆಯು ಹೊರಡಲಿದೆ ಭಕ್ತಾದಿಗಳು ಭಕ್ತಿಯಿಂದ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು.

City Today News 9341997936