“ರಾಯರ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆ”

“ರಾಯರ ಮಠದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆ”

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಧರ್ಮಾಧಿಕಾರಿಗಳಾದ ಜಿ.ಕೆ. ಆಚಾರ್ಯರು ಹಾಗೂ ಪುರೋಹಿತರಾದ ನಂದಕಿಶೋರ್ ಆಚಾರ್ಯರು ಮತ್ತು ರಾಘವೇಂದ್ರ ಕಟ್ಟಿ ಆಚಾರ್ಯರು ಧನುರ್ಮಾಸದ “ಪೌರ್ಣಮಿ” ಪ್ರಯುಕ್ತ ಅರುಣೋದಯ ಕಾಲದಲ್ಲಿ ಸಾಮೂಹಿಕ ಶ್ರೀ “ಸತ್ಯನಾರಾಯಣ ವ್ರತ ಪೂಜೆ”ಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

SREENIDHI Bank celebrates 25th Anniversary-Silver Jubilee in Namma BENGALURU

SREENIDHI Bank celebrates 25th Anniversary-Silver Jubilee in Namma BENGALURU

24 Dec 2023,Bangalore: SREENIDHI Souharda Sahakari Niyamitha Bank Celebrated it’s 25th Anniversary at the NIMHANS Convention Centre in Namma BENGALURU.

The reputed Bank is known for:

*Dedicated,honest,trustworthy banking with discipline,decorum & state-of-art Technology enabled services

*Low NPA’s

*Good profits with Customer-centric beneficial policies/CSR

The landmark event with a housefull crowd of members in attendance saw the Top Managerial staff headed by Shri Sadashiva Reddy,who outlined the Bank’s past history:25 Glorious years of service-to it’s Members,Business Customers,Employees…

The full day(9am-5pm)event at the NIMHANS Convention Centre was a grand success and registered,active Members received a Memento-Fabulous Silver Coin at the end of the program.

City Today News 9341997936

ಹನುಮ ಜಯಂತಿ ಮಹೋತ್ಸವ

ದಿನಾಂಕ : 24-12-2023 ಭಾನುವಾರ ಬೆಳಿಗ್ಗೆ 6.00ಕ್ಕೆ

ಅಭಿಷೇಕ ಮತ್ತು ವಿಶೇಷ ನವನೀತ ಅಲಂಕಾರ, ಹನುಮಜಯಂತಿ ಪ್ರಯುಕ್ತ ವಿಶೇಷ ಪೂಜಾದಿಗಳ ಕಾರಣಿಕೆ ಸಂಜೆ 5.30ಕ್ಕೆ ಸರಿಯಾಗಿ ಭದ್ರಾವತಿ ಚಂದ್ರು ಅರ್ಪಿಸುವ ಸ್ವರ ಸಂಗೀತ ಭಕ್ತಿ ಗೀತೆಗಳ ಕಾರ್ಯಕ್ರಮ

ದಿನಾಂಕ : 25-12-2023 ಸೋಮವಾರ ಬೆಳಗ್ಗೆ 6.00ಕ್ಕೆ

ಮಧು ಅಭಿಷೇಕ ಹೂವಿನ ಅಲಂಕಾರ ಮಹಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸಂಜೆ 7.00ಕ್ಕೆ ಕರ್ನಾಟಕದ ಹೆಸರಾಂತ ಸುಪ್ರಸಿದ್ದ ಭಜನ ಸಾಮ್ರಾಟ್ ವೆಂಕಟಪ್ಪ ಹಾಗೂ ಗೋಪಾಲಕೃಷ್ಣ ತಂಡದಿಂದ ಭಕ್ತಿಗೀತೆಗಳು

ದಿನಾಂಕ : 26-12-2023 ಮಂಗಳವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕ. ಹೂವಿನ ಅಲಂಕಾರ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಸಂಜೆ 7.00ಕ್ಕೆ ಚಿಂತಲಪಲ್ಲಿ ಶ್ರೀನಿವಾಸ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ

ದಿನಾಂಕ : 27-12-2023 ಬುಧವಾರ ಬೆಳಿಗ್ಗೆ

ಪಂಚಾಮೃತ ಅಭಿಷೇಕ. ಹೂವಿನ ಅಲಂಕಾರ ಹಾಗೂ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸಂಜೆ 7.00ಕ್ಕೆ ದೀಪೋತ್ಸವ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ

ದಿನಾಂಕ : 28-12-2023 ಗುರುವಾರ ಬೆಳಗ್ಗೆ

ವಾಯುಸ್ತುತಿ ಪೂರ್ವಕ ಮಧು ಅಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಬೆಳಗ್ಗೆ 10.30 ಕ್ಕೆ ‘ವಾಯುಸ್ತುತಿ ಪುನಶ್ಚರಣ’, ‘ಪವಮಾನ ಹೋಮ” ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ

ಸಂಜೆ 5.30ಕ್ಕೆ ಯಶವಂತಪುರ ಪ್ರಮುಖ ಬೀದಿಗಳಲ್ಲಿ ಸಂತೃಪ್ತಿ ಬಳಗದಿಂದ

ಆಂಜನೇಯ ದೇವರ ರಥಯಾತ್ರೆ ಸರ್ವರಿಗೂ ಸ್ವಾಗತ

ತಾವು ತಮ್ಮವರಲ್ಲದೇ ಸ್ನೇಹಿತರನ್ನೂ ಕರೆ ತನ್ನಿರಿ, ದೈವ ಕೃಪೆ ಎಲ್ಲರಿಗೂ ಪುಣ್ಯವೂ ಪೂನೀತವೂ, ಶ್ರೇಯಸ್ಪೂ ಯಶಸ್ಥರವೂ ಸನ್ಮಂಗಳ ಪ್ರದವೂ ಆಗಿರುತ್ತೆ.

ಶ್ರೀ ದಾರೀ ಆಂಜನೇಯ ಸ್ವಾಮಿ ಚಾರಿಟಬಲ್ ಟ್ರಸ್ಟ್ (ರಿ)

ಸೂಚನೆ : ಭಕ್ತರು ತತ್ಸಂಬಂಧವುಳ್ಳ ಸೇವೆಗಳನ್ನು ತಾವು ಸ್ವತಃ ಕತ್ರರಾಗಿ ನಿರಹಿಸುತ್ತಾರೆ.

ಯಶವಂತಪುರ ಮುಖ್ಯದ್ವಾರ, ಶ್ರೀ ದಾರೀ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ, ಯಶವಂತಪುರ, ಬೆಂಗಳೂರು-22.

ಭಗತೇವಕರು ಹಾಗೂ ಭಕ್ತವೃಂದ

City Today News 9341997936

ಡಿಸೆಂಬರ್ 29 ಕುವೆಂಪು ಹುಟ್ಟಿದ ದಿನವನ್ನು*ಕುವೆಂಪು ಧ್ಯಾನ* ಎಂದು ಆಚರಣೆ

ಡಿಸೆಂಬರ್ 29 ಕುವೆಂಪು ಹುಟ್ಟಿದ ಹಬ್ಬ. ಕೆಲವು ವರ್ಷಗಳಿಂದ ಈ ದಿನವನ್ನು ದಿನದಲ್ಲಿ
*ಕುವೆಂಪು ಧ್ಯಾನ* ಎಂದು ಆಚರಿಸುತಿದ್ದೇವೆ. ವಿಶ್ವಮಾನವ ಧರ್ಮವನ್ನು ರೂಪಿಸಿಕೊಟ್ಟ ಕುವೆಂಪು ಅವರ ವಿಚಾರಗಳನ್ನು ಮನೆ ಮನೆಗೂ ತಲುಪಿಸುವ  ಕೆಲಸ ಮಾಡುತಿದ್ದೇವೆ.
ಯುಗಾದಿ, ಸಂಕ್ರಾಂತಿ, ಗೌರಿ, ಮಾರ್ನವಮಿ ಇತ್ಯಾದಿ ಹಬ್ಬಗಳನ್ನು ಮಾಡುವಂತೆ ನಮ್ಮ ಮನೆಗಳಲ್ಲಿ ಕುವೆಂಪು ಹಬ್ಬವನ್ನು ಮಾಡಬೇಕು.

*ಕುವೆಂಪು ಧ್ಯಾನ* ಮಾಡುವ ಕ್ರಮ

೧. 29 ರಂದು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತುಕೊಳ್ಳಬೇಕು.
೨. ಸಾಧ್ಯವಾದರೆ ಅಕ್ಕಪಕ್ಕದ ಮನೆಯವರನ್ನು, ನೆಂಟರಿಷ್ಟರು, ಸ್ನೇಹಿತರನ್ನು ಆಹ್ವಾನಿಸಬೇಕು.
೩. ಕುವೆಂಪು ಅವರ ಭಾವಚಿತ್ರ ಅಥವಾ ಯಾವುದಾದರೂ ಒಂದೋ ಎರಡೋ ಪುಸ್ತಕ, ಭಾರತ ಮಾತೆಯ ಫೋಟೋ, ಭೂಪಟ, ರಾಮಕೃಷ್ಣ ಪರಮಹಂಸ, ಶಾರದಾಮಾತೆ, ವಿವೇಕಾನಂದ, ಬುದ್ಧ, ಬಸವಣ್ಣ, ಅಂಬೇಡ್ಕರ್ ಹೀಗೆ ಯಾರಾದರೂ ಮಹಾಪುರುಷರ ಫೋಟೊ ಇಟ್ಟುಕೊಳ್ಳಬೇಕು.
೪. ಅವುಗಳನ್ನು ಹೂವಿನಿಂದ ಅಲಂಕರಿಸಿ, ಸಾಧ್ಯವಾದರೆ ಊದುಬತ್ತಿ ಹಚ್ಚಿ, ದೀಪ ಬೆಳಗಬೇಕು.
೫. ಕುವೆಂಪು ವಿಚಾರಗಳ ಬಗ್ಗೆ ಮಾತನಾಡಬೇಕು.
೬. ಅವರ ಕಥೆ ಕಾದಂಬರಿ, ಕಾವ್ಯ, ಮಹಾಕಾವ್ಯ, ನಾಟಕಗಳಿಂದ ಒಂದೆರಡು ಪುಟಗಳನ್ನು ಓದಿ ಇತರರಿಗೆ ಹೇಳಬೇಕು.
೭. ಮಕ್ಕಳಿಂದ ಕುವೆಂಪು ಪದ್ಯಗಳನ್ನು ಓದಿಸುವುದು, ಹಾಡಿಸುವುದನ್ನು ಮಾಡಬೇಕು.
೮. ಅಲ್ಲಿ ಸೇರಿದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಸಾಧ್ಯವಾದರೆ ಸಿಹಿ ಹಂಚಬೇಕು.
ಹೆಚ್ಚು ಹಣ ಖರ್ಚು ಮಾಡದೆ ಈ ಹಬ್ಬ ಆಚರಿಸಿ, ಕುವೆಂಪು ಅವರ ವಿಚಾರಗಳನ್ನು ಎಲ್ಲರಿಗೂ ಮುಟ್ಟಿಸಬೇಕು.
೯. ಕಾರ್ಯಕ್ರಮದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.

– *ಎಲ್ ಎನ್ ಮುಕುಂದರಾಜ್*

City Today News 9341997936

ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್(ರಿ) ಬೆಂಗಳೂರು ಇವರ ಆಯೋಜನೆಯ ಪ್ರತಿಭೋತ್ಸವ “ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು” ಕಾರ್ಯಕ್ರಮ

ದಿನಾಂಕ; 17 ಡಿಸೇಂಬರ್
2023 ಭಾನುವಾರ
ಸ್ಥಳ; ನಯನ ಸಭಾಂಗಣ (ರವೀಂದ್ರ ಕಲಾಕ್ಷೇತ್ರ) ಬೆಂಗಳೂರುನಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿತು ಹಲವು ಊರುಗಳಿಂದ ಆಗಮಿಸಿದ ಪ್ರತಿಭಾವಂತರು ಚಿತ್ರೋದ್ಯಮದ ಗಣ್ಯರ ಎದಿರು ತಮ್ಮ ಪ್ರತಿಭೆ ಮೆರೆದರು, ಅದರಲ್ಲೂ ವಿಶೇಷವಾಗಿ ಶಿವ. ಗಣಪತಿ ದೇವರ ಸ್ತುತಿಯ ಸಮೂಹ ನೃತ್ಯ ಮತ್ತು ಸ್ತುತಿ ಆರ್ ನಾಡಿಗರ ಪ್ರತಿಭಾ ಪ್ರದರ್ಶನ ಸಭಿಕರ ಮನಸೂರೆಗೊಳಿಸಿದವರು.

ಕುಸುಮಾ ಎಲ್.
ಮಧುಶ್ರೀ,ನಾಗರಾಜ್,ನವೀನ್ , ಇವರುಗಳು ತಮ್ಮ ತಂಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಉತ್ತಮವಾಗಿ ಪ್ರತಿಭೆ ಮೆರೆಯಲು ಒಬ್ಬರಿಗಿಂತ ಒಬ್ಬರು ಕಷ್ಟ ಪಡುತಿದ್ದಿದ್ದು ಕಾಣಿಸುತಿತ್ತು.

ಗಣ್ಯರಿಂದ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ಪಡೆಯಲು
ಯುವ ಪ್ರತಿಭೆಗಳು ಅತೀ ಉತ್ಸಾಹ ತೋರಿದರು. ಇದರ ಮಧ್ಯ ಎಸ್. ಭಾಸ್ಕರನ್ ನಿರ್ಮಾಣದ
ಹ್ಯಾಟ್ರಿಕ್ ಸೂರ್ಯ ನಿರ್ದೇಶನದ
ತುಂತುರು ಮಳೆ
(TUNTURU MALEY)
ಚಿತ್ರದ ಪೋಸ್ಟರ್ ಅನಾವರಣ ಗೊಳಿಸಿದರು ಎಲ್ಲರೂ ಚಲನಚಿತ್ರಕ್ಕೆ ಶುಭ ಕೋರಿದರು.

ನಟ/ ನಿರ್ಮಾಪಕ/ ನಿರ್ದೇಶಕ.
ಶ್ರೀ ಜಯಸಿಂಹ ಮುಸರಿ
ಅವರ ಪತ್ನಿ ಶ್ರೀಮತಿ
ಲಲಿತಾ ಜಯಸಿಂಹ.
ರೇಣುಕಾದೇವಿ (ಹಿರಿಯ ನಟ ರಾಜೇಶ್ ರವರ ಮಗಳು) ರು￰ದ್ರಾಣಿ (ಹಿರಿಯ ನಟಿ ಮಂಜುಳಾರವರ ತಂಗಿ)
ಗೋವಿಂದೆ ಗೌಡ (GG) ಕಾಮಿಡಿ (ಕಿಲಾಡಿಗಳು ಖ್ಯಾತಿ) ದಿವ್ಯಶ್ರೀ (GG)
ಸತ್ಯಜಿತ್ (ತಮಿಳು ನಟ) ವಂಟೂರು ಶ್ರೀನಿವಾಸ ರೆಡ್ಡಿ
ಎಸ್. ಭಾಸ್ಕರನ್
(ನಿರ್ಮಾಪಕರು ತುಂತುರು ಮಳೆ ಚಿತ್ರ) ಮೋನಿಷಾ ಗಂಗಾಧರನ್, ಚೇತನಾ ಮಂಗನಳ್ಳಿ (ಡಾನ್ಸ್ ಸ್ಕೂಲ್ ಮಾಲೀಕರು)
ಇನ್ನು ಹಲವರು ಭಾಗವಹಿಸಿದ್ದರು

ಹ್ಯಾಟ್ರಿಕ್ ಸೂರ್ಯ ಮತ್ತು ಶಿಲ್ಪಶ್ರೀ ಕಾರ್ಯಕ್ರಮ ತುಂಬಾ ಚಂದವಾಗಿ ನಿರೂಪಿಸಿದರು.

City Today News 9341997936