“ರಾಯರ ಸನ್ನಿಧಿಯಲ್ಲಿ ಯತಿಗಳ ಸಮಾಗಮ” ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿ ಪತಿಗಳಾದ ಪರಮ ಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಶ್ರೀ 108 ಶ್ರೀ ಹರಿ ಹರ ಪುರ ಮಠದ ಸ್ವಯಂ ಪ್ರಕಾಶ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಹಾಗೂ ಬಾಳಗಾರು ಅಕ್ಷೂಭ್ಯ ತೀರ್ಥ ಮಠದ 108 ಶ್ರೀ ರಾಮಪ್ರಿಯತೀರ್ಥ ಸ್ವಾಮಿಗಳು, ಸೋಸಲೆ ವ್ಯಾಸರಾಜ ಮಠದ ಶ್ರೀ 108ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮಿಗಳು ಹಾಗೂ ಶ್ರೀ108 ಶ್ರೀ ವಿದ್ಯಾ ವಿಜಯ ತೀರ್ಥ ಸ್ವಾಮಿಗಳು ಬೆಂಗಳೂರಿನ ಜಯನಗರ ರಾಯರ ಮಠದಲ್ಲಿ ರಾಯರ ಬೃಂದಾವನವನ್ನು ದರ್ಶಿಸಿ ನಂತರ ಮಂತ್ರಾಲಯ ಶ್ರೀಗಳ ಜೊತೆಯಲ್ಲಿ ಸಮಾಗಮದೊಂದಿಗೆ ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು, ಈ ಸಂದರ್ಭದಲ್ಲಿ ಪಂಡಿತ ಕೇಸರಿ ರಾಜಾ, ಎಸ್ ಗಿರಿ ಆಚಾರ್ಯರು ,ಸುಧೀಂದ್ರ ಆಚಾರ್ಯ, ಗೌತಮ ಆಚಾರ್ಯ, ಕೆ ವಾದಿಂದ್ರಾ ಚಾರ್ಯ, ಐ ಪಿ, ನರಸಿಂಹಮೂ ರ್ತಿ ಆಚಾರ್ಯ ಶ್ರೀ ನಂದಕಿಶೋರ್ ಆಚಾರ್ಯ, ಡಿ,ಪಿ ಅನಂತ ಆಚಾರ್ಯ, ಪುರಾಣಿಕ್ ಅನಂತ ಆಚಾರ್ಯ ಹಾಗೂ ಶ್ರೀಮಠದ ಸಿಬ್ಬಂದಿಗಳು ಶಿಷ್ಯರು ಭಕ್ತರು ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು.
From Mantralaya Sri at Sri Raghavendra Swami’s Math at Nanjangudu Sri Raghavendra Swami’s Math, Parama Pujya Sri 1008 Sri Subudhendratheertha Sripadamgala performed Sansthan Puja of Sriman Mula Ramachandra Deva with his amrita hands and then to Sri Raghavendra Swami’s Baghandavana Mahamangalarathi and Sri Raghavendra. Shri Nanda Kishore Acharya informed that on this occasion the Senior Manager of Sri Math, RK Vadindracharya, dignitaries, and devotees participated and received Tirtha Prasada and then received the blessings of Shri Hari Vayu Guru by receiving the blessings from the Most Reverend Sri Padangal.
ಮಂತ್ರಾಲಯ ಶ್ರೀಗಳಿಂದ “ಸಂಸ್ಥಾನ ಪೂಜೆ” ಶ್ರೀಮನ್ ಮೂಲ ರಾಮಚಂದ್ರ ದೇವರ”ಸಂಸ್ಥಾನ ಪೂಜೆ” ಮಂತ್ರಾಲಯ ಶ್ರೀಗಳಿಂದ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮಹಾಮಂಗಳಾರತಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಸುವರ್ಣ ಪಾದಕ್ಕೆ ಪಾದ ಪೂಜೆಯನ್ನು ನೆರೆವೇರಿಸಿದರು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರಾಚಾರ್ಯರು, ಗಣ್ಯರು, ಹಾಗೂ ಭಕ್ತಾದಿಗಳು ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ನಂತರ ಪರಮ ಪೂಜ್ಯ ಶ್ರೀಪಾದಂಗಳವರಿಂದ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಕನ್ನಡ ನಾಡಿನ ಜನತೆಗೆ 68 ನೇ ಕನ್ನಡ ರಾಜ್ಯೋತ್ಸವ ಶುಭಾಶಯಗಳು
ಈ ಕನ್ನಡ ರಾಜ್ಯೋತ್ಸವ ಕೇವಲ ಸಂಘ ಸಂಸ್ಥೆಗಳ ಮಾತ್ರ ಅಲ್ಲ ಪ್ರತಿ ಮನೆ ಮನೆಯಲ್ಲಿ ಮನ ಮನದಲ್ಲೂ ನಾಲಿಗೆ ಮೇಲೆ ಸರಾಗವಾಗಿ ಸುಲಲಿತವಾಗಿ ಪ್ರತಿಕ್ಷಣ ಮುತ್ತಿನಂತ ಶಬ್ದಗಳಿಂದ ಹೊರಹೊಮ್ಮುವ ಪದಗಳು ಪದಗಳಿಂದ ಕೂಡಿದ ಕನ್ನಡ ಉತ್ಸವ ರಾಜ್ಯೋತ್ಸವ ಹಳೆಗನ್ನಡ ನಡುಗನ್ನಡ ಹೊಸಗನ್ನಡ ಹಚ್ಚ ಹಸಿರು ಶ್ರೀಗಂಧ ಸಿಹಿ ನೀರಿನ ಕಾವೇರಿ ಚಂದದ ಬೀಡು ಸಂತರು ದಾಸರು ಕವಿಗಳು ರನ್ನ ಪಂಪ ಕುಮಾರವ್ಯಾಸ ರಾಘವಾಂಕ ಜನ್ನ ನುಡಿ ಕಟ್ಟಿ ಬೆಳೆಸಿದ ಕಿತ್ತೂರ ಚೆನ್ನಮ್ಮ ಕೆಳದಿ ಚೆನ್ನಮ್ಮ ರಾಣಿ ಅಬ್ಬಕ್ಕ ಒನಕೆ ಓಬವ್ವದಿಯಾಗಿ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯ ಪಲ್ಲವರು ಹೊಯ್ಸಳರು ರಾಷ್ಟ್ರಕೂಟರು ಹಕ್ಕ-ಬುಕ್ಕರು ಡಕ್ಕಣ್ಣ ಜಕಣಾಚಾರಿ ಸಂಗೊಳ್ಳಿ ರಾಯಣ್ಣ ವೀರ ಮದಕರಿ ನಾಯಕರು ನೃತ್ಯ ಶಿಲ್ಪಿಗಳ ತವರೂರು ಮಹನೀಯರು ಕಟ್ಟಿ ಬೆಳೆಸಿದಂತ ನಾಡು ನಮ್ಮೆಲ್ಲರ ಕರುನಾಡು ,,,,,
ಎನ್.ಎ.ಹ್ಯಾರಿಸ್ ಶಾಸಕರು, ಶಾಂತಿನಗರ ಕ್ಷೇತ್ರ.
ಹೇಳಿ ಎದ್ದೇಳಿ ಕನ್ನಡಿಗರೇ ನಿಮ್ಮತನವನ್ನು ಬಿಡದೆ ಮುನ್ನುಗ್ಗಿ ಬನ್ನಿ ಕೇವಲ ಒಂದು ದಿನದ ಕನ್ನಡ ರಾಗಬೇಡಿ ಬೇಡಿ 365 ದಿನಗಳ ಕನ್ನಡಿಗರಾಗಿ ಬಾಳಿ ಬದುಕಿ.
ನಾಡಿನ ಹೆಮ್ಮೆಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಶತಮಾನೋತ್ಸವ ಸಂಭ್ರಮ : ನವೆಂಬರ್ 4 ಮತ್ತು 5 ರಂದು ಭದ್ರಾವತಿಯಲ್ಲಿ ವೈಭವದಿಂದ ಆಚರಣೆ.
ಬೆಂಗಳೂರು: ನಾಡಿನ ಕೈಗಾರಿಕಾ ವಲಯದಲ್ಲಿ ತನ್ನದೇ ಆದ ಹೆಗ್ಗುರುತುಗಳನ್ನು ಮೂಡಿಸಿ ಮುನ್ನಡೆಯುತ್ತಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಶತಮಾನೋತ್ಸವ ಸಂಭ್ರಮದಲ್ಲಿದ್ದು, ನವೆಂಬರ್ 4 ಮತ್ತು 5 ರಂದು ಎರಡು ದಿನಗಳ ಕಾಲ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಆವರಣದಲ್ಲಿ ಶತಮಾನೋತ್ಸವ ಸಮಾರಂಭ ನಡೆಯಲಿದೆ.
ಕಾರ್ಖಾನೆ ಮಾಜಿ ಉದ್ಯೋಗಿ ಹಾಗೂ ಹಿರಿಯ ಕಲಾವಿದ ಎಸ್. ದೊಡ್ಡಣ್ಣ ಮತ್ತು ಮಾಜಿ ಉದ್ಯೋಗಿ, ಹಿರಿಯ ನ್ಯಾಯವಾದಿ ಎಂ.ಎ. ರೇವಣ ಸಿದ್ಧಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ರತ್ನ ಸರ್,ಎಂ. ವಿಶ್ವೇಶ್ವರಾಯ ಮತ್ತು ಮೈಸೂರು ಯದುವೀರ ಅರಸರ ಆಸಕ್ತಿಯಿಂದ ಕಾರ್ಖಾನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್ 4 ರಂದು ಶತಮಾನೋತ್ಸವ ಸಮಾರಂಭವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಉದ್ಘಾಟಿಸಲಾಗುತ್ತಿದೆ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮಿಗಳು, ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಕೋಡಿ ಮಠದ ರಾಜೇಂದ್ರ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಡಾ. ಶಿವಾನಂದ ಶಿವಯೋಗಿ
ಕೇಂದ್ರ ಸಚಿವರುಗಳಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ಜ್ಯೋತಿರಾದಿತ್ಯ ಸಿಂಧ್ಯ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ನಾಡಿನ ಶ್ರೇಷ್ಠ ಸಾಧಕರಾದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಸಿ.ಎನ್. ಮಂಜನಾಥ್, ಕೆ.ಎಲ್.ಇ ಸಂಸ್ಥೆಯ ಮುಖ್ಯಸ್ಥರಾದ ಪ್ರಭಾಕರ ಕೋರೆ, ಎಆರ್‌ಎಲ್ ಸಂಸ್ಥೆಯ ಸಂಸ್ಥಾಪಕರಾದ ವಿಜಯ ಸಂಕೇಶ್ವರ ಅವರನ್ನು ಸನ್ಮಾನಿಸಲಾಗುತ್ತಿದೆ. ನಾಡಿನ ಎಲ್ಲಾ ಮಾಜಿ ಮುಖ್ಯಮಂತ್ರಿಗಳನ್ನು ಸಹ ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಹೇಳಿದರು.
ನವೆಂಬರ್ 5 ರಂದು ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಸಚಿವರಾದ ಎಚ್.ಕೆ. ಪಾಟೀಲ್, ಡಾ. ಜಿ.ಪರಮೇಶ್ವರ್, ಎಂ.ಬಿ. ಪಾಟೀಲ್, ಡಾ. ಎಚ್.ಸಿ. ಮಹದೇವಪ್ಪ, ಎನ್. ಚಲುವರಾಯ ಸ್ವಾಮಿ, ಕೃಷ್ಣ ಭೈರೇಗೌಡ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಮಲ್ಲಿಕಾರ್ಜುನ್, ಈಶ್ವರಖಂಡ್ರೆ ಅವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಮೈಸೂರಿನ ಮಹಾರಾಜರಾಗಿದ್ದ ಯದುವಂಶದ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಸುವರ್ಣ ಆಡಳಿತ ಕಾಲದಲ್ಲಿ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಾಯ ಅವರ ಮಾರ್ಗದರ್ಶನದಂತೆ ಈ ಬೃಹತ್ ಉದ್ಯಮವನ್ನು 1923 ರಲ್ಲಿ ಸ್ಥಾಪಿಸಲಾಯಿತು. ಎರಕಹೊಯ್ದ ಕಬ್ಬಿಣ, ಕಬ್ಬಿಣದ ಕೊಳವೆ ಹಾಗೂ ರೋಲಿಂಗ್ ಮಿಲ್ಫ್ ಮತ್ತು ಸಿಮೆಂಟ್ ಪ್ಲಾಂಟ್ ಅನ್ನು ನಂತರ ಆರಂಭಿಸಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಯನ್ನು ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಎಂದು ನಾಮಕರಣ ಮಾಡಲಾಯಿತು. 1975 ರಲ್ಲಿ ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಎಂಬುದಾಗಿ ಮರುನಾಮಕರಣವಾಯಿತು. ಭಾರತೀಯ ಉಕ್ಕು ಪ್ರಾಧಿಕಾರ 1989ರಲ್ಲಿ ಇದನ್ನು ತನ್ನ ಅಂಗಸಂಸ್ಥೆಯಾಗಿ ಸೇರಿಸಿ ನಂತರ 1998 ರಲ್ಲಿ ವಿಲೀನಗೊಳಿಸಿಕೊಂಡಿತು. ಸರ್ ಎಂ ವಿಶ್ವೇಶ್ವರಯ್ಯನವರ ನಿಸ್ವಾರ್ಥ ಸೇವೆ ಮತ್ತು ಮುಂದಾಲೋಚನೆಯಿಂದ ಭದ್ರಾವತಿಯ ಜೀವನಾಡಿಯಾಗಿ ಉಳಿದು ಲಕ್ಷಾಂತರ ಜನರಿಗೆ “ಬದುಕು ಮತ್ತು ಜೀವನ” ನಿರ್ಮಿಸಿಕೊಟ್ಟಿದೆ ಈ ಕಾರ್ಖಾನೆ ಎಂದರು.
You must be logged in to post a comment.