‘Self-Identification Under Threat’: Activists Demand Withdrawal of Transgender Amendment Bill

Bengaluru: Members of the Karnataka State Gender and Sexuality Minorities Coalition, popularly known as Okoota, have written an open letter to Prime Minister Narendra Modi urging the Union government to withdraw the proposed Transgender Persons (Protection of Rights) Amendment Bill, 2026, calling it a major setback to the rights of the transgender community.

Addressing a press conference at the Press Club of Bangalore, coalition members said the amendment threatens to dilute the legal protections established by the landmark National Legal Services Authority v. Union of India (2014) judgment of the Supreme Court of India, which recognised the right of individuals to self-identify their gender.

According to the coalition, the amendment seeks to narrow the legal definition of “transgender persons” by limiting it primarily to socio-cultural identities such as hijra, kinner, aravani and similar traditional communities, or people born with intersex variations. Activists argue that this definition excludes several groups including trans men, trans women, genderqueer and non-binary persons, who currently fall under the broader legal recognition.

Members of Okoota also raised concerns over the proposed removal of provisions guaranteeing the right to self-perceived gender identity. Under the amendment, individuals seeking recognition as transgender would need certification from a government-appointed medical board, followed by approval from a district magistrate. Activists say this process shifts the authority to determine gender identity from individuals to state authorities, potentially violating the rights to dignity, privacy and autonomy.
The coalition further argued that the amendment undermines international human rights standards such as the Yogyakarta Principles and contradicts the progressive framework established after the 2014 judgment.

Activists including Akkai Padmashali, Prakash-Prakashi, Arvind Narrain, Rumi Harish, Maya, Monika and Rakshitha said the proposed law risks reversing years of progress and could expose transgender persons and traditional communities to greater discrimination. They urged the Centre to withdraw the Bill immediately.

City Today News 9341997936

ಒಳ ಮೀಸಲಾತಿ ಜಾರಿಯಾಗದೆ ನೇಮಕಾತಿ ಬೇಡ: ಸರ್ಕಾರಕ್ಕೆ ಹೋರಾಟಗಾರರ ಎಚ್ಚರಿಕೆ

ಬೆಂಗಳೂರು: ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಮಾಡಿ ಅನುಮೋದನೆ ನೀಡಿರುವ ಸಂದರ್ಭದಲ್ಲಿ, ಅದೇ ಸಮಯದಲ್ಲಿ ಒಳ ಮೀಸಲಾತಿ ಅನ್ವಯವಾಗದಂತೆ 56 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಸರ್ಕಾರ ಕೈಗೊಂಡಿರುವ ಫೆಬ್ರವರಿ 26ರ ಸಚಿವ ಸಂಪುಟದ ತೀರ್ಮಾನವು ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಒಳಮೀಸಲಾತಿ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ತೀರ್ಮಾನವು ಕಳೆದ 35 ವರ್ಷಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಕ್ಕೆ ಮಹಾದ್ರೋಹವೆಂದು ಆರೋಪಿಸಿದ ಹೋರಾಟಗಾರರು, ಸರ್ಕಾರದ ಕ್ರಮವನ್ನು ಖಂಡಿಸಿ ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಜನರು ಸೇರಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಚಿತ್ರದುರ್ಗ ಸಮಾವೇಶದಲ್ಲಿಯೂ ಇದೇ ಮಾತು ಪುನರಾವರ್ತಿತವಾಗಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಈ ಬಗ್ಗೆ ಗಂಭೀರ ಪ್ರಯತ್ನ ನಡೆದಿಲ್ಲ ಎಂದು ಹೋರಾಟಗಾರರು ದೂರಿದರು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹೋರಾಟದ ಒತ್ತಡದಿಂದಾಗಿ ಸರ್ಕಾರ 2025ರ ಆಗಸ್ಟ್ 25ರಂದು ಒಳ ಮೀಸಲಾತಿ ಜಾರಿಗೆ ತರುವುದಾಗಿ ತಾತ್ವಿಕ ಒಪ್ಪಿಗೆ ನೀಡಿದೆಯಾದರೂ, ನೇಮಕಾತಿಗಳ ವಿಚಾರದಲ್ಲಿ ಗೊಂದಲಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದರೂ, ಅದಕ್ಕೆ ಅನುಗುಣವಾಗಿ ಉದ್ಯೋಗ ಅವಕಾಶಗಳನ್ನು ನೀಡದೇ ಸಾವಿರಾರು ಹುದ್ದೆಗಳನ್ನು ಕಡಿತಗೊಳಿಸಿರುವುದು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರುವಂತಾಗಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೋರಾಟಗಾರರ ನಿಯೋಗವನ್ನು ಭೇಟಿ ಮಾಡಿ ಒಳ ಮೀಸಲಾತಿ ಕುರಿತು ಸಂಪೂರ್ಣ ಚರ್ಚೆ ನಡೆಸಲು ಮಾರ್ಚ್ 27ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯುವುದಾಗಿ ಹಾಗೂ ಒಳ ಮೀಸಲಾತಿ ಜಾರಿಯಾಗದೆ ಯಾವುದೇ ಹುದ್ದೆಗಳನ್ನು ಭರ್ತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಆದರೆ ಹಿಂದಿನ ಸರ್ಕಾರಗಳ ಅನುಭವದ ಹಿನ್ನೆಲೆ ಈ ಭರವಸೆಯ ಮೇಲೂ ಸಂಪೂರ್ಣ ನಂಬಿಕೆ ಇಡುವುದು ಕಷ್ಟವೆಂದು ಹೇಳಿದ ಹೋರಾಟಗಾರರು, ಮಾರ್ಚ್ 27ರವರೆಗೆ ಸರ್ಕಾರದ ಮೇಲೆ ವಿವಿಧ ರೀತಿಯಲ್ಲಿ ಒತ್ತಡ ಮುಂದುವರಿಸುವುದಾಗಿ ಎಚ್ಚರಿಸಿದರು. ಅಂದು ಸಹ ಸರ್ಕಾರ ಒಳ ಮೀಸಲಾತಿ ಪರ ತೀರ್ಮಾನ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಅವರು ಹೇಳಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಮಾರಾಸಂದ್ರ ಮುನಿಯಪ್ಪ, ಎಸ್. ಮಾರಪ್ಪ, ಅಂಬಣ್ಣ ಆರೋಲಿಕರ್, ನರಸಪ್ಪ ದಂಡೋರ, ಗುರುಮೂರ್ತಿ, ಫರ್ನಾಂಡಿಸ್ ಇಪ್ಪಳಗಾಂವ್ ಹಾಗೂ ಚಂದ್ರ ತರಹುಣಿಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

City Today News 9341997936

ಗೋವನ್ನು ರಾಷ್ಟ್ರಮಾತೆ ಘೋಷಿಸಬೇಕು: ದೇಶವ್ಯಾಪಿ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ

ಮಾರ್ಚ್ 15ರಂದು ರಾಜ್ಯಮಟ್ಟದ ‘ಗೋ ಸಮ್ಮಾನ’ ಕಾರ್ಯಾಗಾರ

ಬೆಂಗಳೂರು, ಮಾ.14: ದೇಶಾದ್ಯಂತ ನಾಲ್ಕು ಹಂತಗಳಲ್ಲಿ ನಡೆಸಲು ಉದ್ದೇಶಿಸಿರುವ ‘ಗೋ ಸಮ್ಮಾನ ಅಭಿಯಾನ’ಕ್ಕೆ ಪೂರ್ವಭಾವಿಯಾಗಿ ಮಾರ್ಚ್ 15ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರಚಾರಕರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಅಭಿಯಾನದ ಸಂಘಟಕರು ತಿಳಿಸಿದ್ದಾರೆ. ಈ ಕುರಿತು ಇಂದು Press Club of Bangalore ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹಾಲಕ್ಷ್ಮೀಪುರಂನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ Hindu Sadar Kshemabhivruddhi Sangha ಸಭಾಂಗಣದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದೆ. ರಾಜ್ಯದ ವಿವಿಧ ತಾಲ್ಲೂಕುಗಳಿಂದ ಪ್ರತಿನಿಧಿಗಳಾಗಿ ಗೋಭಕ್ತರು, ಗೋಸಂರಕ್ಷಕರು ಹಾಗೂ ರಾಜ್ಯ-ಹೊರರಾಜ್ಯಗಳಿಂದ ಆಗಮಿಸುವ ಸಂತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಭಿಯಾನದ ಪ್ರಮುಖ ಬೇಡಿಕೆಗಳಲ್ಲಿ ಗೋವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸುವುದು, ದೇಶಾದ್ಯಂತ ಏಕಕಾನೂನಿನಡಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಹಾಗೂ ಗೋಮಾಳಗಳನ್ನು ಗೋಸಂರಕ್ಷಣೆಗೆ ಮೀಸಲಿಡುವುದು ಸೇರಿವೆ.

ಈ ಬೇಡಿಕೆಗಳನ್ನು ಒತ್ತಿಹೇಳುವ ಉದ್ದೇಶದಿಂದ ಅಭಿಯಾನವನ್ನು ನಾಲ್ಕು ಹಂತಗಳಲ್ಲಿ ನಡೆಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಏಪ್ರಿಲ್ 27ರಂದು ದೇಶದಾದ್ಯಂತ ಸುಮಾರು 5,400 ತಹಶೀಲ್ದಾರ್‌ಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಎರಡನೇ ಹಂತದಲ್ಲಿ ಜುಲೈ 27ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತದೆ. ಮೂರನೇ ಹಂತದಲ್ಲಿ ಅಕ್ಟೋಬರ್ 27ರಂದು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವಿದೆ.

ನಾಲ್ಕನೇ ಹಂತವಾಗಿ 2027ರ ಫೆಬ್ರವರಿ 27ರಿಂದ ಆಗಸ್ಟ್ 15ರವರೆಗೆ ದೆಹಲಿಯಲ್ಲಿ ಸಂತರು ಮತ್ತು ಗೋಭಕ್ತರು ಶಾಂತಿಯುತ ಧರಣಿ ನಡೆಸುವ ಯೋಜನೆ ಇದೆ. ಆಗಲೂ ಬೇಡಿಕೆಗಳು ಈಡೇರದಿದ್ದರೆ, ಅಂತಿಮವಾಗಿ 2027ರ ಆಗಸ್ಟ್ 16ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಈ ಅಭಿಯಾನವು ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಸಂಸ್ಥೆಯ ಹೆಸರಿನಲ್ಲಿ ನಡೆಯದೇ, ಗೋಮಾತೆ ಹಾಗೂ ನಂದಿ ಬಾಬಾರವರ ನೇತೃತ್ವದಲ್ಲಿ ಸಾಮೂಹಿಕವಾಗಿ ನಡೆಯಲಿದೆ. ಅಭಿಯಾನದ ಹೆಸರಿನಲ್ಲಿ ವಂತಿಗೆ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಆರೂಡಭಾರತಿ ಸ್ವಾಮೀಜಿ,ಶ್ರೀಕಲಿತನಯ ಸ್ವಾಮೀಜಿ,ಮುಖೇಶ್ ಗೌಡ,ಸಂಜಯ್ ಕುಮಾರ್ ತಕ್ ಮತ್ತು ಇತರ ಮುಖಂಡರುಗಳ ಸಮ್ಮುಖದಲ್ಲಿ ಸ್ಪಷ್ಟಪಡಿಸಿದರು.

ಅಭಿಯಾನದಲ್ಲಿ ಭಾಗವಹಿಸಲು ಆಸಕ್ತರು 9067777323 ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ 9571712140 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

City Today News 9341997936

ಭೋವಿ–ವಡ್ಡರ ಸಮಾಜದ ಇತಿಹಾಸವನ್ನು ವಕ್ರೀಕರಿಸಬೇಡಿ: ಉಗ್ರಪ್ಪಗೆ ಎಚ್ಚರಿಕೆ

ಬೆಂಗಳೂರು: ಭೋವಿ–ವಡ್ಡರ ಸಮಾಜದ ಇತಿಹಾಸ ಮತ್ತು ಪರಿಶಿಷ್ಟ ಜಾತಿ ಸ್ಥಾನಮಾನ ಕುರಿತು ತಪ್ಪು ಮಾಹಿತಿ ಹರಡಬಾರದು ಎಂದು  ಭೋವಿ ವಡ್ಡರ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಲಯನ್ ಶ್ರೀಧರ್ ಅವರು ಎಚ್ಚರಿಕೆ ನೀಡಿದರು.

ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡಿದವರು ಮಹಾತ್ಮಾ ಛತ್ರಪತಿ ಶಾಹು ಮಹಾರಾಜರು ಹಾಗೂ ಮೈಸೂರು ರಾಜ್ಯದ ನಾಲ್ವಡಿ ಕೃಷ್ಣರಾಜ ವಡೆಯರ್ ಎಂದು ಹೇಳಿದರು. ಇವರ ಕಾಲದಲ್ಲೇ ಮಿಲ್ಲರ್ ಆಯೋಗ ರಚನೆಯಾಗಿ ಶೇ.75 ರಷ್ಟು ಮೀಸಲಾತಿ ಜಾರಿಗೆ ತರಲು ಪ್ರಯತ್ನ ನಡೆದಿತ್ತು ಎಂದು ತಿಳಿಸಿದರು.

ಅದೇ ಸಂದರ್ಭದಲ್ಲಿ ಮಿಲ್ಲರ್ ಆಯೋಗದ ಶಿಫಾರಸುಗಳನ್ನು ವಿರೋಧಿಸಿದ್ದ ಕಾರಣಕ್ಕೆ ಅಂದಿನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯರನ್ನು ಪದವಿಯಿಂದ ವಜಾಗೊಳಿಸಲಾಗಿತ್ತು ಎಂದು ಅವರು ಹೇಳಿದರು. ಮೈಸೂರು ರಾಜ್ಯದಲ್ಲಿ 1917ರಲ್ಲೇ ಭೋವಿ–ವಡ್ಡರ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿತ್ತು ಎಂದು ಕೂಡ ಅವರು ವಿವರಿಸಿದರು.

ಭಾರತದ ಸಂವಿಧಾನ ಜಾರಿಗೆ ಬಂದ ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಾಲ್ವಡಿ ಕೃಷ್ಣರಾಜ ವಡೆಯರ್ ಸಲ್ಲಿಸಿದ್ದ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮುಂದುವರಿಸುವಂತೆ ಆದೇಶ ನೀಡಲಾಗಿತ್ತು ಎಂದು ಅವರು ಹೇಳಿದರು.
ಆದರೆ ಇತ್ತೀಚೆಗೆ ಕೆಲವರು ಇತಿಹಾಸವನ್ನು ತಪ್ಪಾಗಿ ನಿರೂಪಿಸುತ್ತಿದ್ದಾರೆ ಎಂದು ಆರೋಪಿಸಿದ ಶ್ರೀಧರ್, ವಿ.ಎಸ್. ಉಗ್ರಪ್ಪ ಅವರು ಭೋವಿ–ವಡ್ಡರ ಸಮುದಾಯದ ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವುದು ವಿಷಾದನೀಯ ಎಂದು ಹೇಳಿದರು. ಇತಿಹಾಸದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಭೋವಿ ಮತ್ತು ಬೋಯಿ ಸಮುದಾಯಗಳನ್ನು ಒಂದೇ ಎಂದು ಹೇಳುವುದು ಸರಿಯಲ್ಲ ಎಂದು ಅವರು ಹೇಳಿದರು.

1977ರ ಜುಲೈ 27ರಂದು ಕರ್ನಾಟಕ ಸರ್ಕಾರದ ಆದೇಶದ ಮೂಲಕ ‘ಭೋವಿ’ ಜಾತಿಗೆ ಸಮಾನಾರ್ಥಕ ಪದಗಳಾಗಿ ‘ಒಡವಡ್ಡೆ’ ಮತ್ತು ‘ವಡ್ಡರ’ ಎಂದು ಗುರುತಿಸಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಬಳಿಕ 2015ರಲ್ಲಿ ಮಣ್ಣ ವಡ್ಡರ, ಕಲ್ಲವಡ್ಡರ ಸೇರಿದಂತೆ ಕೆಲವು ಉಪಜಾತಿಗಳನ್ನು ಸೇರಿಸಲಾಗಿದೆ ಎಂದು ಅವರು ವಿವರಿಸಿದರು.
ನಿಜವಾದ ಭೋವಿ–ವಡ್ಡರ ಸಮುದಾಯದವರು ಕಲ್ಲು ಒಡೆಯುವುದು, ಮಣ್ಣು ಅಗೆದು ಬಾವಿ ತೋಡುವುದು, ಮನೆಗಳು ಹಾಗೂ ದೇವಸ್ಥಾನಗಳ ನಿರ್ಮಾಣದಂತಹ ಕಠಿಣ ಕೆಲಸಗಳನ್ನು ಮಾಡುವವರು ಎಂದು ಹೇಳಿದರು. ಆದರೆ ಬೋಯಿ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿದ್ದು, ಅವರನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ವಾದಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬಳಿ ತಪ್ಪು ಮಾಹಿತಿ ನೀಡಬಾರದು. ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿ ವ್ಯವಸ್ಥೆಯ ಬಗ್ಗೆ ಸರಿಯಾದ ಅರಿವು ಹೊಂದಿ ಮಾತನಾಡಬೇಕು ಎಂದು ಅವರು ಹೇಳಿದರು. ಈ ರೀತಿಯ ಹೇಳಿಕೆಗಳನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಭೋವಿ–ವಡ್ಡರ ಸಮಾಜ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರುಗಳು ಉಪಸ್ಥಿತರಿದ್ದರು.

City Today News 9341997936

PTCL ಭೂಮಿ ಅನ್ಯಾಯಕ್ಕೆ ತೆರೆ ಬೇಕು: ಸರ್ಕಾರಕ್ಕೆ 10 ದಿನಗಳ ಗಡುವು

ಬೆಂಗಳೂರು, ಮಾರ್ಚ್ 3:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಟುಂಬಗಳ ಬದುಕಿನೊಂದಿಗೆ ಆಟವಾಡಲಾಗುತ್ತಿದೆ ಎಂದು ಆರೋಪಿಸಿ, PTCL ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ (ರಿ) ವತಿಯಿಂದ ಇಂದು ನಗರದ Press Club of Bangaloreನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಸಮಿತಿಯ ರಾಜ್ಯಾಧ್ಯಕ್ಷರಾದ ಪಿ.ಟಿ.ಸಿ.ಎಲ್. ಮಂಜುನಾಥ ಅವರು ಮಾತನಾಡಿ, ಸರ್ಕಾರದ PTCL ಕಾಯ್ದೆ ತಿದ್ದುಪಡಿಯ ನಂತರವೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಲಕ್ಷಾಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದರು. ಬದುಕು ಕಟ್ಟಿಕೊಳ್ಳಲು ಸರ್ಕಾರ ಮಂಜೂರು ಮಾಡಿದ್ದ ಜಮೀನುಗಳನ್ನು ಕಾನೂನುಬಾಹಿರವಾಗಿ, ನಯವಂಚನೆಯ ಮೂಲಕ ಕಬಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು-ಎಸಿ, ಡಿಸಿ ಸೇರಿದಂತೆ-ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ರಕ್ಷಿಸಬೇಕಾದ ನ್ಯಾಯಾಂಗದಲ್ಲಿಯೂ ಕಾಲಮಿತಿಯ ಆಧಾರದ ಮೇಲೆ ಅನ್ಯಾಯವಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ರಾಜ್ಯ ಸರ್ಕಾರ ಮೂರು ವರ್ಷ ಕಳೆದರೂ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಸರ್ಕಾರಕ್ಕೆ ಕೊನೆಯ ಅವಕಾಶವಾಗಿ 10 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಸಮಸ್ಯೆಗೆ ಸಮಗ್ರ ಪರಿಹಾರ ಕೈಗೊಳ್ಳದಿದ್ದರೆ, ರಾಜ್ಯದ ಭೂಮಿ ಕಳೆದುಕೊಂಡ ಬಾಧಿತರು ಹಾಗೂ ಹಿರಿಯ ಹೋರಾಟಗಾರರ ಮಾರ್ಗದರ್ಶನದಲ್ಲಿ ಮತ್ತೊಮ್ಮೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖ ಬೇಡಿಕೆಗಳು:
PTCL ಕಾಯ್ದೆ ತಿದ್ದುಪಡಿ ಜಾರಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ನಡೆಯುತ್ತಿರುವ ಅನ್ಯಾಯವನ್ನು ತಕ್ಷಣ ಸರಿಪಡಿಸಬೇಕು. ನ್ಯಾಯಾಲಯಗಳಲ್ಲಿ ಕಾಲಮಿತಿಯಿಂದ ಉಂಟಾಗುತ್ತಿರುವ ಅನ್ಯಾಯವನ್ನು ನಿವಾರಿಸಬೇಕು.
2023ರ ತಿದ್ದುಪಡಿ ಬಳಿಕ ಉಂಟಾದ ಗೊಂದಲಗಳನ್ನು ಸ್ಪಷ್ಟಪಡಿಸಿ, ಪೀಡಿತರಿಗೆ ನ್ಯಾಯ ಒದಗಿಸಬೇಕು.
PTCL ಕಾಯ್ದೆಯ ಕಲಂ 3(1)(ಬಿ) ವ್ಯಾಪ್ತಿಯಲ್ಲಿ ಬರುವ ವಿವಿಧ ರೀತಿ ಇನಾಂ ಭೂಮಿಗಳು (ತೋಟಿ ನೌಕರ ಇನಾಂ, ನಿರಗಂಟಿ, ತಳವಾರಿ, ಕುಲವಾಡಿಕೆ), ಕಿಮ್ಮತ್ತು, ಜಿಎಂಎಫ್, ಭೂ ಸುಧಾರಣೆ ಕಾಯ್ದೆಯಡಿ ಮಂಜೂರಾದ ಭೂಮಿಗಳು, ಪ್ರತಿಕೂಲ ಸ್ವಾಧೀನ ಹಾಗೂ ಸರ್ಕಾರದಿಂದ ಮಂಜೂರಾದ ಎಲ್ಲಾ ವಿಧದ ಭೂಮಿಗಳು ಒಳಪಡುವಂತೆ ಸ್ಪಷ್ಟಪಡಿಸಬೇಕು; ಅಗತ್ಯವಿದ್ದರೆ ತಿದ್ದುಪಡಿ ಮಾಡಬೇಕು.
2023ರ ತಿದ್ದುಪಡಿ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿರುವ ಡಿಸಿ, ಎಸಿ, ತಹಶೀಲ್ದಾರ್, ಆರ್‌ಐ, ವಿಎ ಸೇರಿದಂತೆ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಂಜೂರಾತಿ ದಾಖಲೆಗಳನ್ನು ಸಂರಕ್ಷಿಸಿ ಸೂಕ್ತ ಕ್ರಮ ಜರುಗಿಸಬೇಕು.
ಸರ್ಕಾರದ ಪರ ವಾದಿಸುವ ಅಭಿಯೋಜಕರ ಬೇಜವಾಬ್ದಾರಿಯಿಂದ ಸಂವಿಧಾನ ಮತ್ತು ಕಾಯ್ದೆಗಳ ವಿರುದ್ಧ ಆದೇಶಗಳು ಹೊರಬರುತ್ತಿವೆ. ಇಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯವನ್ನು ರಕ್ಷಿಸುವ ಹೊಣೆ ಸಮಾಜ ಕಲ್ಯಾಣ ಇಲಾಖೆಯ ಮೇಲಿದೆ. ಇಲಾಖೆಯ ವತಿಯಿಂದ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಮೇಲ್ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕು.
ಈ ಆರು ಬೇಡಿಕೆಗಳೇ ಹೋರಾಟದ ಮುಖ್ಯ ಉದ್ದೇಶಗಳಾಗಿವೆ ಎಂದು ಮಂಜುನಾಥ ಅವರು ಸ್ಪಷ್ಟಪಡಿಸಿದರು.

City Today News 9341997936