ಪರಾಜಿತಗೊಂಡಿರುವ ವ್ಯಕ್ತಿಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಂದು ಮನ್ನಣೆ ನೀಡಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿರುವುದರಿಂದ ಜಿಲ್ಲಾಧಿಕಾರಿಗಳ ಮೇಲೆ ಈ ಕೂಡಲೇ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿರವರಲ್ಲಿ ಛಲವಾದಿ ಮಹಾಸಭಾ (ರಿ) ಒತ್ತಾಯ

ಛಲವಾದಿ ಮಹಾಸಭಾ (ರಿ) ರಾಜ್ಯ ಸಮಿತಿಯು ಈ ಪತ್ರಿಕಾಗೋಷ್ಠಿಯ ಮುಖೇನ ತಿಳಿಯಪಡಿಸುವುದೇನೆಂದರೆ, ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛಲವಾದಿ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ಛಲವಾದಿ ಸಮುದಾಯದ ಹೆಮ್ಮೆಯ ನಾಯಕಿ, ವೀರವನಿತೆ ಒನಕೆ ಒಬ್ಬವ್ವನವರ ಜಯಂತಿ ಕಾರ್ಯಕ್ರಮವನ್ನು દ્ર ರಾಜ್ಯ ಸರ್ಕಾರವು ದಿನಾಂಕ : 18-12-2022, ಭಾನುವಾರದಂದು ಮಧ್ಯಾಹ್ನ 1.00 ಗಂಟೆಗೆ ನಿಗಧಿಪಡಿಸಿದ್ದು ಸದರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಛಲವಾದಿ ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ ಎಂದು ಇವರನ್ನು ವಿಶೇಷ ಆಹ್ವಾನಿತರು ಎಂದು ನಮೂದಿಸಲಾಗಿದೆ. ಇದರ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿ ಮಾನ್ಯ ಉಚ್ಛ ನ್ಯಾಯಾಲಯದ W.P.No.14701/2022: 29-07-2022 33 17-08-20228 ಆದೇಶದನ್ವಯ ಛಲವಾದಿ ಮಹಾಸಭೆಗೆ ದಿನಾಂಕ : 07-08-2022 ರಂದು ಚುನಾವಣೆ ನಡೆದು ನಿವೃತ್ತ IAS ಅಧಿಕಾರಿ ಶ್ರೀ ಕೆ.ಶಿವರಾಮುರವರ ನೇತೃತ್ವದ ಕಾನೂನುಬದ್ಧ ಕಾರ್ಯಕಾರಿ ಸಮಿತಿಯು ರಚನೆಯಾಗಿ ರಾಜ್ಯಾದ್ಯಂತ ಛಲವಾದಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುತ್ತೇವೆ. ಆದಾಗ್ಯೂ ರಾಜ್ಯ ಉಚ್ಛ ನ್ಯಾಯಾಲಯದ W.P. No. 17272/2022ರ ದಿನಾಂಕ : 07-09-2022ರ ಆದೇಶದನ್ವಯ ಚುನಾವಣೆಯಲ್ಲಿ ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ. ಕುಮಾರ್ ಮತ್ತು ಹೆಚ್. ಅಣ್ಣಪ್ಪಸ್ವಾಮಿ ಹಾಗೂ ಸಂಗಡಿಗರು ಹೀನಾಯವಾಗಿ ಪರಾಜಿತಗೊಂಡಿರುತ್ತಾರೆ ಮತ್ತು ಹೀನಾಯವಾಗಿ ಸೋತಿರುವುದನ್ನು ಸಹಿಸಿಕೊಳ್ಳದೆ ದ್ವೇಷ ಮತ್ತು ಅಸೂಹೆಯಿಂದ ಮಾನ್ಯ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಚುನಾವಣೆ ತಕರಾರು ಪಿಟಿಷನ್ WP No. 17272/2022 ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯಾಗಿ ಮಾನ್ಯ ಉಚ್ಛ ನ್ಯಾಯಾಲಯವು ಚುನಾವಣಾ ತಕರಾರು ಅರ್ಜಿಯನ್ನು ವಜಾ ಗೊಳಿಸಿರುತ್ತಾರೆ.

ಈ ಮೇಲ್ಕಂಡ ವಿಷಯವು ತಿಳಿದುಕೊಂಡಿದ್ದರೂ ಸಹ ಚಿತ್ರದುರ್ಗ ಜಿಲ್ಲಾಡಳಿತವು ಸದರಿ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಅಧಿಕಾರವಿಲ್ಲದ ಅನಧಿಕೃತ ವ್ಯಕ್ತಿಗಳಾದ (1) ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ.ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ (2) ಹೆಚ್‌. ಅಣ್ಣಪ್ಪಸ್ವಾಮಿ, ಜಿಲ್ಲಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಮತ್ತು (3) ದಯಾನಂದ, ಉಪಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಎಂಬುವವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿ ಆಮಂತ್ರಣ ಪತ್ರದಲ್ಲಿ ಮುದ್ರಿಸಿ ರಾಜ್ಯಾದ್ಯಂತ ಪ್ರಕಟಣೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಹಾಗೂ ಶಿಷ್ಟಾಚಾರ ಉಲ್ಲಂಘನೆ ಮಾಡಿ ಚುನಾವಣೆಯಲ್ಲಿ ಪರಾಜಿತಗೊಂಡಿರುವ ವ್ಯಕ್ತಿಗೆ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಂದು ಮನ್ನಣೆ ನೀಡಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿರುವುದರಿಂದ ಜಿಲ್ಲಾಧಿಕಾರಿಗಳ ಮೇಲೆ ಈ ಕೂಡಲೇ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿರವರಲ್ಲಿ ಒತ್ತಾಯ ಮಾಡುತ್ತೇವೆ.

ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಈಗಲಾದರೂ ಆಗಿರುವ ಪ್ರಮಾದವನ್ನು ಸರಿಪಡಿಸಿ ದಿನಾಂಕ : 18-12-2022 ರಂದು ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಅಧಿಕಾರವಿಲ್ಲದ ಅನಧಿಕೃತ ವ್ಯಕ್ತಿಗಳಾದ (1) ಛಲವಾದಿ ಕುಮಾರ್ ಅಲಿಯಾಸ್ ಹೆಚ್.ಪಿ.ಕುಮಾರ್, ರಾಜ್ಯಾಧ್ಯಕ್ಷರು, ಛಲವಾದಿ ಮಹಾಸಭಾ (2) ಹೆಚ್‌. ಅಣ್ಣಪ್ಪಸ್ವಾಮಿ, ಜಿಲ್ಲಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ ಮತ್ತು (3) ದಯಾನಂದ, ಉಪಾಧ್ಯಕ್ಷರು, ಛಲವಾದಿ ಮಹಾಸಭಾ, ಚಿತ್ರದುರ್ಗ, ಇವರುಗಳನ್ನು ಕೈಬಿಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯುವಂತೆ ಛಲವಾದಿ ಮಹಾಸಭಾ(ರಿ)ವು ಆಗ್ರಹಿಸುತ್ತದೆ.

ಒಂದು ವೇಳೆ ಈ ಪ್ರಮಾದವನ್ನು ಸರಿಪಡಿಸದೇ ಕಾರ್ಯಕ್ರಮವನ್ನು ನಡೆಸಿದರೆ ಛಲವಾದಿ ಮಹಾಸಭಾದ ಎಲ್ಲಾ ಸದಸ್ಯರುಗಳು ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಎಸ್.ಕೆ.ಶಿವಕುಮಾರ್, ಎಸ್.ಸಿದ್ದರಾಜು ಮತ್ತು ಕೆ.ಪರಶುರಾಮ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು.

City Today News – 9341997936

19.12.2022 ರಂದು ಫ್ರೀಡಂ ಪಾರ್ಕ್, ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ

ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘವು ಎನ್‌ಪಿಎಸ್ ಯೋಜನೆಯಡಿ ಬರುವ ರಾಜ್ಯ ಸರ್ಕಾರಿ ನೌಕರರನ್ನು ಹಾಗೂ ವಿವಿಧ ನಿಗಮ ಮಂಡಳಿಗಳ / ಸ್ವಯತ್ತ ಸಂಸ್ಥೆಗಳ/ಅನುದಾನಿತ ಸಂಸ್ಥೆಗಳ NPS ನೌಕರರನ್ನು ಪುತಿನಿಧಿಸುತ್ತಿದ್ದು, ದಿನಾಂಕ:01.04.2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರ ಸಂಧ್ಯಾಕಾಲದ ಬದುಕಿಗೆ ಭದ್ರತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ NPSಗೆ ಒಳವಡುವ ನೌಕರರ ಅವಲಂಬಿತ ಕುಟುಂಬಗಳಿಗೆ ಮತ್ತು NPS ಯೋಜನೆಯಡಿ ನಿವೃತ್ತಿ ಹೊಂದಿ ಕನಿಷ್ಠ ಪಿಂಚಣಿಯು ಇಲ್ಲದೇ ದಯನೀಯ ಜೀವನ ನಡೆಸುತ್ತಿರುವ NPS ನೌಕರರ ಬದುಕಿಗೆ ನ್ಯಾಯ ಒದಗಿಸುವ ಹಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಸಂಘವು NPS ಯೋಜನೆಯನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ, ಅನೇಕ ಹೋರಾಟಗಳನ್ನು ದಾಖಲಿಸಿದೆ. ಪ್ರಸ್ತುತ ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್‌ ಮತ್ತು ದಿನಾಂಕ:19.10.2022 ಪಂಜಾಬ್ ರಾಜ್ಯಗಳಲ್ಲಿ NPS ಯೋಜನೆಯನ್ನು ರದ್ದುಪಡಿಸಿದ್ದು, ಪಸ್ತುತ ನಮ್ಮ ರಾಜ್ಯದಲ್ಲಿ ರದ್ದುಗೊಳಿಸುವಂತೆ ಕೋರಿ, ಅನೇಕ ಮನವಿಗಳನ್ನು ನೀಡಿದ್ದಾಗಿ ಸರ್ಕಾರವು ಸಂಘದ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ಸಕರಾತ್ಮವಾಗಿ ಸ್ಪಂದಿಸಿರುವುದಿಲ್ಲ, ಆದ್ದರಿಂದ, ದಿನಾಂಕ:19.12.2022 ರಂದು ಫ್ರೀಡಂ ಪಾರ್ಕ್, ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿರುವುದಾಗಿ ಶಾಂತಾರಾಮ – ರಾಜ್ಯಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

ಲವ್ ಜಿಹಾದ್ ಮೂಲಕ ಮತಾಂತರದ ಘಟನೆಗಳನ್ನು ತಡೆಯಲು ಮತ್ತು ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ವಿಶೇಷ ‘ಲವ್ ಜಿಹಾದ್ ವಿರೋಧಿ ಪೊಲೀಸ್ ದಳ’ದ ಸ್ಥಾಪನೆ ಮಾಡಿ !

ಲವ್ ಜಿಹಾದ್ ಮೂಲಕ ಮತಾಂತರದ ಘಟನೆಗಳನ್ನು ತಡೆಯಲು ಮತ್ತು ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ವಿಶೇಷ ‘ಲವ್ ಜಿಹಾದ್ ವಿರೋಧಿ ಪೊಲೀಸ್ ದಳ’ದ ಸ್ಥಾಪನೆ ಮಾಡಿ !

– ಹಿಂದೂ ಜನಜಾಗೃತಿ ಸಮಿತಿ ಹಾಗೂ ದುರ್ಗಾ ವಾಹಿನಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳ ಹಿನ್ನೆಲೆ ‘ಲವ್ ಜಿಹಾದ್’ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ‘ಪೊಲೀಸ್ ವಿಶೇಷ ಶಾಖೆ’ಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ದುರ್ಗಾ ವಾಹಿನಿಯಿಂದ ಮಾನ್ಯ ಗೃಹ ಸಚಿವರಾದ ಶ್ರೀ. ಅರಗ ಜ್ಞಾನೇಂದ್ರ ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ, ರಣರಾಗಿಣಿ ಮಹಿಳಾ‌‌ ಶಾಖೆಯ ಸೌ. ಭವ್ಯ ಗೌಡ, ದುರ್ಗಾ ವಾಹಿನಿಯ ಸೌ. ನಂದಿನಿ ರಾಜ್, ಶ್ರೀರಾಮ ಸೇನೆಯ ಸುಂದ್ರೇಶ, ಅಮರನಾಥ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಇವರು ಮಾತನಾಡಿ, ದೆಹಲಿಯ ಜಿಹಾದಿ ಅಪ್ತಾಭ್ ಹಿಂದೂ ಯುವತಿ ಶ್ರದ್ಧಾ ಬರ್ಬರವಾಗಿ ಹತ್ಯೆ ಮಾಡಿದಂತೆ ರಾಜಗಯದಲ್ಲಿ ಸಹ ಹೆಚ್ಚು ಲವ್ ಜಿಹಾದ್ ಘಟನೆಗಳು ನಡೆಯುತ್ತಿದೆ. ಕಳೆದ ವಾರ ರಾಯಚೂರಿನಲ್ಲಿ ಇಬ್ಬರು ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗಿ ಇಸ್ಲಾಮ್ ಗೆ ಮತಾಂತರವಾದರು. ಪೋಷಕರು ದೂರು ನೀಡಿದರೂ ಸಹ ಪೋಲಿಸರು ಅಪರಾಧಿಯ ಬಂಧನ ಮಾಡಿಲ್ಲ. ಈ ಪ್ರಕರಣವನ್ನು ಮತಾಂತರ ಕಾಯಿದೆ ಎಂದು ನೊಂದಣೆ ಮಾಡಿಲ್ಲ. ಮಾರ್ಚ್ 2022 ರಂದು ಗದಗದಲ್ಲಿ ಅಪೂರ್ವ ಯುವತಿಯು ಇಸ್ಲಾಮ್‌ಗೆ ಮತಾಂತರ ಮಾಡಿ, ನಂತರ ಆಕೆಯ ಹತ್ಯೆ ಮಾಡಲು ಪ್ರಯತ್ನ ನಡೆಯಿತಯ. ಮಂಗಳೂರು, ಉಡುಪಿ, ಶಿವಮೊಗ್ಗ, ಕೊಡಗು & ಬೆಂಗಳೂರಿನಲ್ಲಿ ಮುಸಲ್ಮಾನ್ ಯುವತಿಯರ ಶಾಹಿನ್ ಗ್ಯಾಂಗ್ ಲವ್ ಜಿಹಾದ್ ಮಾಡಲು ಕಾರ್ಯನಿರತವಾಗಿದೆ. ಅವರು ಹಿಂದೂ ಯುವತಿಯರನ್ನು ಮುಸಲ್ಮಾನ್ ಯುವಕರ ಜೊತೆಗೆ ಪರಿಚಯಿಸಿ ಲವ್ ಜಿಹಾದ್ ಮಾಡಿಸುತ್ತಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ಸಹ ವ್ಯಾಪಕವಾಗಿ ಲವ್ ಜಿಹಾದ್’ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ಹೆಚ್ಚಾಗಿದೆ. ಇದನ್ನು ತಡೆಯಲು ‘ಲವ್ ಜಿಹಾದ್ ವಿರೋಧಿ ಪೊಲೀಸ್ ದಳ’ ವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹ ಮಾಡಲಾಯಿತು.

ಲವ್ ಜಿಹಾದ್ ಗೆ ಪ್ರಚೋಧನೆ ನೀಡುವ ಮಸೀದಿ,‌ ಮದರಸಾ, ಮೌಲ್ವಿ, ಶಾಹಿನ್ ಗ್ಯಾಂಗ್‌ ಮೇಲೆ ಕ್ರಮ ಜರುಗಿಸಬೇಕು. ಅಷ್ಟೇ ಅಲ್ಲದೇ ರಾಜ್ಯದಲ್ಲಿ 21, 000 ಯುವತಿಯರು, ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಹಿಂದೆ ಲವ್ ಜಿಹಾದ್ ಮಾಫಿಯಾ ಕಾರ್ಯನಿರತ ಇದೆಯಾ ಪರಿಶೀಲನೆ‌ ಮಾಡಲು ಆಗ್ರಹ ಮಾಡಲಾಯಿತು.

ಮನವಿಗೆ ಸ್ಪಂದಿಸಿದ ಗೃಹ ಸಚಿವರು, ಇದರ ಬಗ್ಗೆ ಸರಕಾರದಲ್ಲಿ ಚರ್ಚೆ ಮಾಡುತ್ತೇವೆ. ಮತಾಂತರ ಉದ್ದೇಶದಿಂದ ನಡೆಯುವ ಲವ್ ಜಿಹಾದ್ ಪ್ರಕರಣಗಳನ್ನು ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಲು ಪೊಲೀಸ್ ಇಲಾಖೆಯ ಸಭೆಯಲ್ಲಿ ಸೂಚಿಸುತ್ತೇವೆ’ ಎಂದರು.

ಶ್ರೀ. ಮೋಹನ್ ಗೌಡ,
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಸಂಪರ್ಕ : 7204082609

City Today News – 9341997936

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ 22-12-2022 ರಂದು ಬೆಳಗಾವಿ ಚಲೋ ಚಳುವಳಿ

ಅಂಗನವಾಡಿ ವ್ಯವಸ್ಥೆಯೊಳಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದನ್ನು ವಿರೋಧಿಸಿ, ಕನಿಷ್ಟ ವೇತನ ಜಾರಿಗೊಳಿಸುವುದು. ಗ್ರಾಚ್ಯುಟಿ ಸೌಲಭ್ಯ, ನಿವೃತ್ತಿ ವೇತನ ಜಾರಿ, ಕಳಪೆ ಮೊಬೈಲ್‌ಗಳ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡುವುದು ಸೇರಿದಂತೆ ಅಂಗನವಾಡಿ ನೌಕರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ದಿನಾಂಕ 22-12-2022 ರಂದು ಬೆಳಗಾವಿ ಚಲೋ ಚಳುವಳಿ”ಯನ್ನು ಹಮ್ಮಿಕೊಳ್ಳಲಾಗಿದೆ .

ಕಳೆದ 46 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅನುಷ್ಠಾನದ ರೂವಾರಿಗಳಾಗಿ ಕೇವಲ ಗೌರವಧನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ಔಧ್ಯಮಿಕ ಮತ್ತು ಆರ್ಥಿಕ ಭದ್ರತೆ ನೀಡುವ ಕುರಿತು ನಿರ್ಲಕ್ಷ ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಬಳಕೆಯ ವಸ್ತುಗಳಂತೆ ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡಲಾಗುತ್ತಿದೆ.

ಸೇವಾ ಹಿರಿತನದ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಗೌರವಧನದ ಮಾಸಿಕ ಹತ್ತರಿಂದ ಹನ್ನೊಂದುವರೆ ಸಾವಿರ ಹಾಗೂ ಸಹಾಯಕಿಯರಿಗೆ ಐದರಿಂದ ಐದುವರೆ ಸಾವಿರ

ರೂಪಾಯಿ ಸಂಭಾವನೆಯಲ್ಲಿ ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಬದುಕು ನಡೆಸುವುದು ಅತ್ಯಂತ ದುಸ್ಥರವಾಗಿದೆ.

ಆದುದರಿಂದ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ-ಬೆಳೆಸಲು ಪೂರಕವಾಗಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಅಗ್ರಹಿಸುತ್ತಿದ್ದೇವೆ.

ಬೇಡಿಕೆಗಳು :-

1. ಎಲ್.ಕೆ.ಜಿ-ಯು.ಕೆ.ಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯ ಪ್ರಾರಂಭಿಸಲು ಒತ್ತಾಯಿಸಿ: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಅಂಗನವಾಡಿ ವ್ಯವಸ್ಥೆಯೊಳಗೆ ಜಾರಿಗೊಳಿಸಲು ಏಕಪಕ್ಷೀಯವಾಗಿ ಆತುರ ಪಡುತ್ತಿರುವ ರಾಜ್ಯ ಸರ್ಕಾರದ ನಿಲುವು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಯ ಮೂಲ ಆಶಯಗಳಿಗೆ ಚ್ಯುತಿಯನ್ನುಂಟು ಮಾಡಲಿದೆ . ಆರು ವರ್ಷದ ವಯೋಮಾನದೊಳಗಿನ ಮಕ್ಕಳು ಮತ್ತು ಗರ್ಭಿಣಿ-ಬಾಣಂತಿಯರ ಪೌಷ್ಠಿಕ ಆಹಾರ-ಆರೋಗ್ಯದ ಬಗ್ಗೆ ಕಾಳಜಿವಹಿಸಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಎನ್.ಇ.ಪಿ ಅಡಿಯಲ್ಲಿ ಶಾಲಾ ಪ್ರಾಂಗಣಕ್ಕೆ ಒಳಪಡಿಸಿದರೆ ಐ.ಸಿ.ಡಿ.ಎಸ್ ಯೋಜನೆ ಅವಸಾನವಾಗಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ ದೊರೆಯುತ್ತಿರುವ ಪೂರಕ ಪೌಷ್ಠಿಕ ಆಹಾರಕ್ಕೆ ಕಡಿವಾಣ ಬೀಳಲಿದ್ದು, ಭದ್ರತಾ ಕಾಯ್ದೆಯ ಸವಲತ್ತುಗಳಿಂದ ಮಕ್ಕಳು-ಮಹಿಳೆಯರು ವಂಚಿತರಾಗಲಿದ್ದಾರೆ. ಆದುದರಿಂದ ಈಗಿರುವ ಅಂಗನವಾಡಿ ವ್ಯವಸ್ಥೆಯನ್ನೆ ಮತ್ತಷ್ಟು ಬಲಗೊಳಿಸಲು ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ-ಯು.ಕೆ.ಜಿ ಪ್ರಾರಂಭಿಸಲು ಅವಕಾಶ ಮಾಡಬೇಕು ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿ ಅಂಗನವಾಡಿ ಶಿಕ್ಷಕಿಯರಿಗೆ ಸೂಕ್ತ ತರಬೇತಿ ಮತ್ತು ಪಠ್ಯ ಪುಸ್ತಕಗಳನ್ನು ಒದಗಿಸಬೇಕು. ಹಾಗೂ ಮಕ್ಕಳಿಗೆ ಸಮವಸ್ತ್ರ ಹಾಗೂ ವರ್ಗಾವಣೆ ಪತ್ರ ನೀಡುವ ಜವಾಬ್ದಾರಿಯನ್ನು ಅಂಗನವಾಡಿ ಕೇಂದ್ರಗಳಿಗೆ ವಹಿಸಬೇಕೆಂದು ಒತ್ತಾಯಿಸುತ್ತೇವೆ.

2. ಕನಿಷ್ಠ ವೇತನ: ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಅಂಗನವಾಡಿ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಗೌರವ ಧನದಲ್ಲಿ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ಮಾಸಿಕ ಕನಿಷ್ಠ ವೇತನ 31500 ರೂಪಾಯಿ ನೀಡಲು ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ.

3. ಗ್ರಾಚ್ಯುಟಿ : ಗ್ರಾಚ್ಯುಟಿ ಸೌಲಭ್ಯ ಪಡೆಯಲು ಅಂಗನವಾಡಿ ಉದ್ಯೋಗಿಗಳು ಅರ್ಹರು ಎಂಬುದಾಗಿ ಗುಜರಾತ್ ಪ್ರಕರಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು,

ಸದರಿ ತೀರ್ಪಿನ ಆಧಾರದಲ್ಲಿ ರಾಜ್ಯದಲ್ಲಿ ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಲು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.

4. ಕಳಪೆ ಗುಣಮಟ್ಟದ ಮೊಬೈಲ್‌ಗಳನ್ನು ವಾಪಸ್ ಪಡೆದು ಮಿನಿಟ್ಯಾಬ್‌ಗಳನ್ನು ನೀಡಬೇಕು: ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಗಳಲ್ಲಿ ಫಲಾನುಭವಿಗಳ ದಾಖಲೆಗಳ ಸಂಗ್ರಹಕ್ಕಾಗಿ ನೀಡಲಾಗಿರುವ ಎಲ್.ಜಿ ಮೊಬೈಲ್‌ಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದ್ದು, ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಸಂಗ್ರಹಣ ಸಾಮರ್ಥ್ಯವು ಸಹ ಕಡಿಮೆ ಜಿಬಿಯದಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯು ಎದುರಾಗುತ್ತಿದ್ದು ಸುಲಲಿತವಾಗಿ ಕಾರ್ಯನಿರ್ವಹಿಸಲಾಗುತ್ತಿಲ್ಲ. ಹಾಗೂ ಮೊಬೈಲ್‌ಗಳು ಅತ್ಯಂತ ಚಿಕ್ಕದಾಗಿರುವುದರಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಯಕರ್ತೆಯರಿಗೆ ಸಣ್ಣ ಅಕ್ಷರಗಳು ಗೋಚರಿಸದೆ ದಾಖಲೆ ಸಂಗ್ರಹಣೆ ಮಾಡಲು ತೊಡಕುಂಟಾಗುತ್ತಿದೆ. ಅದುದರಿಂದ ವಿತರಿಸಲಾಗಿರುವ ಮೊಬೈಲ್‌ಗಳನ್ನು ಹಿಂಪಡೆದು ಅದರ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ.

5. ಮಾರಣಾಂತಿಕ ಕಾಯಿಲೆ ಹೊಂದಿರುವವರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಮಾಡಿಕೊಡುವ ಮೂಲಕ ಅವರಿಗೆ ಪರಿಹಾರ ಒದಗಿಸಬೇಕು ಹಾಗೂ ಅಂಗನವಾಡಿ ನೌಕರರನ್ನು ಸಾಮಾಜಿಕ ಸುರಕ್ಷ ಯೋಜನೆಯಾದ ಇ.ಎಸ್‌.ಐ ಸೌಲಭ್ಯ ಹಾಗೂ ಸರ್ಕಾರಿ ನೌಕರರಿಗಾಗಿ ರೂಪಿಸಿರುವ ನೌಕರ ಸ್ನೇಹಿ ಉಚಿತ ವೈದ್ಯಕೀಯ ಯೋಜನೆಯ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿ, ದಿನಾಂಕ 22.12.2022 ರಂದು ಗುರುವಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಪರಿಹಾರಕ್ಕಾಗಿ “ಬೆಳಗಾವಿ ಚಲೋ” ಚಳುವಳಿ ನಡೆಸುವ ಮೂಲಕ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು. ಬಿ.ಅಮ್ಜದ್ – ರಾಜ್ಯಾಧ್ಯಕ್ಷರು & ಜಯಮ್ಮ – ರಾಜ್ಯ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

March to Bellary from Sanduru demanding rehabilitation of Bellary Mining Workers

For the following demands:

  1. Rs. 5 lakh compensation to the mining workers who lost their job in 2011.
  2. 5 acres of land with irrigation facility for the family of mining workers
  3. Re-employment for the workers who lost their job in Class “A” and “B” mines where work has resumed.
  4. A monthly pension of Rs. 5,000/- for workers who have reached superannuation age
  5. Site and houses for mining workers
  6. Establishment of community facilities like Anganwadi, Community Halls, Library, Labor Center and Primary Health Centres
  7. Free medical service for mining workers
  8. Free education for the children of mining workers and financial assistance for higher education. The condition of the workers who had been and are working in the iron ore mines of Bellary district has been deplorable since the beginning. These workers are from the most vulnerable and marginalized communities and were not paid minimum wages and were doing life-threatening work without any basic amenities and proper safety equipment. It is through the exploitation of these workers that mine owners have made and continue to make huge profits. However, the government failed to provide proper support to workers even though the laws for the benefit and welfare of workers were being violated on a large scale in the mines of Bellary. In July, 2011, the Hon’ble Supreme Court ordered the closure of all mines to prevent illegal mining. As a result, more than 25,000 workers lost their jobs and were forced into the streets without compensation or rehabilitation. The mine owners used the Supreme Court order as a pretext to deny the workers compensation and other statutory rights. Due to this, the families of the workers had to face huge hardship and are currently living on the streets without any means of livelihood. The Government has set up the Karnataka Minerals Environment Rehabilitation Corporation (KMERC) to implement a comprehensive environmental plan for mine-affected areas. The Supreme Court has made it clear that the social infrastructure development component under this scheme also includes a scheme to provide livelihood to the workers. However, the Corporation has not implemented a single scheme for the welfare of mine workers till date. Thus the Bellary Mine Workers’ Organization filed a Writ Petition (Civil) no. 448/2018 before the Supreme Court. So far, the Government has collected over Rs. 19,000 Crores as fines from the mining companies. However, no amount has been allotted to the welfare of the workers. The Union has also approached all the concerned authorities seeking for a plan to be made for the rehabilitation of the workers, and the KMERC has also sought that the Deputy Commissioner, Ballari to prepare the same. However, the same is still to be done. Hence, the Bellary Zilla Gani Karmikara Sangha (affiliated to AICCTU) is organizing a padhyatra with the aggrieved mining workers to Bellary from Sandur to Bellary from 11th to 13th October, 2022.

City Today News

9341997936