ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ವಿಳಂಬ ಧೋರಣೆಯನ್ನು ಖಂಡಿಸಿ ದಿನಾಂಕ : 03-07-2022 ರಂದು “ಚಲೋ ಹೈದ್ರಾಬಾದ್ “

ಕರ್ನಾಟಕ ರಾಜ್ಯದಲ್ಲಿ ನಿರಂತರವಾಗಿ 25 ವರ್ಷಗಳಿಂದ ಭಾರತ ಸಂವಿಧಾನದ ಮೂಲ ಆಶಯ ಸರ್ವರಿಗೂ ಸಮಪಾಲು , ಸಮಬಾಳು ಎಂಬುದಾಗಿದೆ . ಸಂವಿಧಾನ 39 ನೇ ವಿಧಿಯಲ್ಲಿ ಬಾಬಾ ಸಾಹೇಬ್ ಡಾ . ಬಿ.ಆರ್ . ಅಂಬೇಡ್ಕರ್ ರವರು ತಿಳಿಸಿದ ಹಾಗೆ ಭೌತಿಕ ಸಂಪತ್ತನ್ನು ಬಡತನ ಮತ್ತು ನಿರುದ್ಯೋಗ ಹೋಗಲಾಡಿಸಿ ಪ್ರತಿಯೊಬ್ಬ ನಾಗಲೀಕರಿಗೂ ಮೂಲಭೂತ ಸೌಕರ್ಯವನ್ನು ನೀಡುವುದರ ಜೊತೆಗೆ ಆರ್ಥಿಕ , ಸಾಮಾಜಿಕ , ಶೈಕ್ಷಣಿಕ ಮಟ್ಟದಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳಬೇಕೆಂಬ ಹಂಬಲದಲ್ಲಿ ಭಾರತದ ಜನಸಂಖ್ಯೆಯಲ್ಲಿ ಆದಾರದ ಮೇಲೆ ಅಗ್ರಗಣ್ಯ ಸ್ಥಾನದಲ್ಲಿರುವ ಮಾದಿಗ ಮತ್ತು ಮಾದಿಗ ಸಂಬಂದಿತ ಇನ್ನೂ ತುಲಿತಕ್ಕೆ ಒಳಗಾಗಿರುವ ಜನಾಂಗಕ್ಕೆ ಮೀಸಲಾತಿಯಲ್ಲಿ ಒಳಮೀಸಲಾತಿ ಪಾಲನ್ನು ಕೊಡಿಸಲೇಬೇಕೆಂದು ಕಂಕಣ ಕಟ್ಟ ನಮ್ಮ ಮಾದಿಗ ದಂಡೋರ MRPS ಸಂಸ್ಥಾಪಕ ರಾಷ್ಟ್ರೀಯ ನಾಯಕರು ಅಭಿನವ ಅಂಬೇಡ್ಕರ್ ಶ್ರೀ ಮಂದಕೃಷ್ಣ ಮಾದಿಗರವರು ಕರ್ನಾಟಕ ರಾಜ್ಯದಲ್ಲಿ ದಿನಾಂಕ : 13-10-1997ರಲ್ಲ ಮಾದಿಗ ದಂಡೋರ ಸಂಘಟನೆಯೊಂದಿಗೆ ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಮಾದಿಗ ಜನಾಂಗದ ಅತ್ಮಗೌರವಕ್ಕೆ ಸಾಕ್ಷಿಯಾದರು .
ಇದರ ಪ್ರತಿಫಲ ಜಂಟಿ ಆಂಧ್ರಪ್ರದೇಶ ನ್ಯಾಯಮೂರ್ತಿ ರಾಮಚಂದ್ರರಾಜು ಆಯೋಗ , ಕೇಂದ್ರ ಉಷಾ ಮೆಹ್ರ ಆಯೋಗ , ತಮಿಳುನಾಡು ಜನಾರ್ಧನ ಆಯೋಗ , ಮಹಾರಾಷ್ಟ್ರ ಲಾಹೋಜ ಸಾಲ್ವೆ ಆಯೋಗ , ಉತ್ತರ ಪ್ರದೇಶ ಹುಕ್ಕುಂಸಿಂಗ್ ಆಯೋಗ , ಪಂಜಾಬ್ ಗುರ್ನೋಸಾ ಸಿಂಗ್ ಆಯೋಗ , ಈ ಆಯೋಗದ ವರದಿಗಳು ಪ್ರತಿ ರಾಜ್ಯದ ವರ್ಗಿಕರಣ ಪ್ರಸ್ತಾಪವನ್ನು ಸಲ್ಲಿಸಿದರೂ ಸಹಾ ಒಂಭತ್ತು ವರ್ಷಗಳು ಅಧಿಕಾರದಲ್ಲಿರುವ ಬಿ.ಜೆ.ಪಿ ಸರ್ಕಾರ ನಿರ್ಲಕ್ಷ ಮಾಡಿಕೊಂಡು ಬಂದಿರುತ್ತದೆ . ಆದುದರಿಂದ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರದ ದುರಾಡಲಿತದಿಂದ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಮಾದಿಗ ದಂಡೋರ , ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ದಿನಾಂಕ : 02-07-2022 ರಂದು ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ತಡೆ ಚಳುವಲಿಯ ಮೂಲಕ ಸಂಪೂರ್ಣ ಬಂದ್ ಕರೆ ನೀಡಿರುವ ರಾಷ್ಟ್ರೀಯ ನಾಯಕರು ಶ್ರೀ ಮಂದಕೃಷ್ಣ ಮಾದಿಗ ರವರು ಆದೇಶವನ್ನು ನೀಡಿರುತ್ತಾರೆ .

ಇದರ ಸಲುವಾಗಿ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಜಿ . ನರಸಪ್ಪರವರ ನಾಯಕತ್ವದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಹಳ್ಳಿ ಹಟ್ಟಗಳಿಂದ ಮಾಡಿಗ ದಂಡೋರ ಪದಾಧಿಕಾರಿಗಳಿಂದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿ ವಿಳಂಬ ಧೋರಣೆಯನ್ನು ಖಂಡಿಸಿ ದಿನಾಂಕ : 03-07-2022 ರಂದು ಚಲೋ ಹೈದ್ರಾಬಾದ್ – ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯದಲ್ಲಿರುವ ಮಾದಿಗರು , ರಾಜ್ಯ ಪದಾಧಿಕಾರಿಗಳು , ಜಿಲ್ಲಾ ಪದಾಧಿಕಾರಿಗಳು , ತಾಲ್ಲೂಕು ಪದಾಧಿಕಾರಿಗಳು , ಹೋಬಳ ಪದಾಧಿಕಾರಿಗಳು , ಗ್ರಾಮ ಪದಾಧಿಕಾರಿಗಳು , ಮಹಿಳಾ ಪದಾಧಿಕಾರಿಗಳು , ಯುವಸೇನಾ ಪದಾಧಿಕಾರಿಗಳು , ವಿದ್ಯಾರ್ಥಿ ಘಟಕ ಪದಾಧಿಕಾರಿಗಳು , ಕಾರ್ಮಿಕ ಘಟಕ ಪದಾಧಿಕಾರಿಗಳು , ಬುದ್ಧಿಜೀವಿಗಳು , ಚಿಂತಕರು , ಸ್ವಾಭಿಮಾನ ಹೋರಾಟಗಾರರು , ಬಹುಸಂಖ್ಯೆಯಲ್ಲಿ ಭಾಗವಹಿಸಿ ರಸ್ತೆ ತಡೆ ಬಂದ್‌ನ್ನು ಯಶಸ್ವಿಗೊಲಿಸಬೇಕೆಂದು ರಾಜ್ಯಸಮಿತಿ ಕೋರಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಎಂ ಶ್ರೀನಿವಾಸ್ – ಎಂ.ಆರ್.ಪಿ.ಎಸ್ ವತಿಯಿಂದ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕೆ.ಬಿ.ನರಸಿಂಹ, ದಾಸ್.ಸಿ, ಪ್ರಸಾಧ್, ರಂಗಣ್ಣ ಡೇವಿಡ್ ಮತ್ತು ನಾರಾಯಣಮ್ಮ ಉಪಸ್ತಿತರಿದ್ದರು

City Today News

9341997936

ಸಿಎಂಆರ್ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸರ್ಕಾರಿ ಜಮೀನು ಭೂ ಕಬಳಿಕೆ ಮಾಡಿ ಸದರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ

ಸಿಎಂಆರ್ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸರ್ಕಾರಿ ಜಮೀನು ಭೂ ಕಬಳಿಕೆ ಮಾಡಿ ಸದರಿ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿ ಕೋಟ್ಯಾತರ ರೂಪಾಯಿ ಕೊಳ್ಳೆ ಹೊಡೆದು ಸರ್ಕಾರಕ್ಕೆ ವಂಚಿಸುತ್ತಿರುವ ಕುರಿತು ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹ . ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ( ರಿ ) ಕಳೆದ 4 ವರ್ಷಗಳಿಂದ ದೇಶದ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ತಮ್ಮ ಶಾಖೆಗಳನ್ನು ತೆರೆದು ಭ್ರಷ್ಟಾಚಾರ , ಅಪರಾಧ ತಡೆಯುವಲ್ಲಿ ಜಾಗೃತಿ ಮೂಡಿಸುವುದು ಮತ್ತು ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಹಾಗೂ ಮಾನವ ಹಕ್ಕುಗಳ ಬಗ್ಗೆ ಸಂದೇಶ ಸಾರಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಸೇವೆ ಸಲ್ಲಿಸುತ್ತಿದೆ . ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು ಜಾಲ ಹೋಬಳಿ ಜಾಗಲಟ್ಟಿ ಗ್ರಾಮಕ್ಕೆ ಸೇರಿದ ಸರ್ವೇ ನಂ 102 / ಪಿ 7 400 ಎಕರೆ ಸರ್ಕಾರಿ ಜಮೀನು ಇದ್ದು ಈ ಜಮೀನಿನ ಪಕ್ಕದಲ್ಲಿ ಪ್ರತಿಷ್ಟಿತ ಸಿಎಂಆರ್‌ ವಿಶ್ವವಿದ್ಯಾಲಯದ ಆಡಳಿತ ಪ್ರದೇಶವು ಇರುತ್ತದೆ ಆದರ ಸಿಎಂಆರ್ ವಿಶ್ವವಿದ್ಯಾಲಯ ಆಡಳಿತ ಮಂಡಳಿಯವರು ಅವರಿಗೆ ಸೇರಿದ ಜಮೀನಿಗೆ ಹೊಂದುಕೊಂಡಿರುವ ಮೇಲಿನ ಸರ್ವೇ ನಂ 102 / ಪಿ 7 ರ 4.00 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಂಡು ಅಲ್ಲಿ ಕಾವಲುಗಾರರನ್ನು ಇಟ್ಟು ಪೂರಾ ಸರ್ಕಾರಿ ಜಮೀನಿಗೆ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ ಆದರೆ ಸದರಿ ಸರ್ಕಾರಿ ಜಮೀನಿನಲ್ಲಿ ಕರಿ ಗ್ರಾನೈಟ್ ಕ್ವಾರಿಗಳಿದ್ದು ಇದು ಸುಮಾರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವಂತದ್ದಾಗಿರುತ್ತದೆ . ಸಿಎಂಆರ್ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಕಳೆದ ಮೂರು ವರ್ಷಗಳಿಂದ ಈ ಜಮೀನನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆಯನ್ನು ನಡೆಸುತ್ತಿದ್ದು ತಗೆದಿರುವ ಕಲ್ಲುಗಳನ್ನು ಸ್ಥಳಿಯರ ಸಹಾಯ ಹಾಗೂ ಬೆಂಬಲದಿಂದ ಬೆರೆಡೆಗೆ ಸಾಗಾಟ ಮಾಡುತ್ತಿದ್ದಾರೆ .
ಈ ಅಕ್ರಮ ಕಲ್ಲು ಗಣಿಗಾರಿಕೆ ಕುರಿತು ಸ್ಥಳಿಯರು ಪಂಚಾಯತಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳಿಗೆ ಮೌಖಿಕವಾಗಿ ತಿಳಿಸಿದ್ದರೂ ಇದುವರೆಗೂ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿರುವುದಿಲ್ಲ ವಿಷಯವಾಗಿ ದಿನಾಂಕ : 13-06-2022 ರಂದು ನಮ್ಮ ಸಂಸ್ಥೆಯಿಂದ ಸ್ಥಳಕ್ಕೆ ಹೋಗಿ ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಕೇಳಲಾಗಿ ಕೆಲವರು ನಮ್ಮ ಮೇಲೆ ಗಲಾಟೆ ಮಾಡಿದ ಸಂದರ್ಭದಲ್ಲಿ ಸ್ಥಳಿಯ ಕಂದಾಯ ಇಲಾಖೆ , ಪೋಲಿಸ್ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಸ್ಥಳಕ್ಕೆ ಆಗಿಮಿಸಿ ಅಕ್ರಮ ಕಲ್ಲು ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಯಂತ್ರಗಳು ಹಾಗೂ ಸಕರಣೆಗಳನ್ನು ಜಪ್ತಿ ಮಾಡಿದ್ದಾರೆ ಈ ಕುರಿತು ನಮ್ಮ ಸಂಸ್ಥೆಯಿಂದ ಬಾಗಲೂರು ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಬೆಂಗಳೂರು , ಉಪ ತಹಶೀಲ್ದಾರ್ ನಾಡ ಕಛೇರಿ , ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಲಹಂಕ ತಾಲ್ಲೂಕು ರವರಿಗೂ ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಿರುತ್ತವೆ . • ಆದ್ದರಿಂದ ಸರ್ಕಾರಿ ಜಮೀನನ್ನು ಭೂ – ಕಬಳಿಕೆ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಸಿಎಂಆರ್ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಹಾಗೂ ಈ ಅಕ್ರಮದಲ್ಲಿ ಭಾಗಿಯಾಗಿರುವವರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಸರ್ಕಾರವನ್ನ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ಒತ್ತಾಯಿಸುತ್ತಿದೆ ಎಂದು ಝಾನ್ ಸಾಮುವೇಲ್ ಕಿಮ್.ಜೆ ಯವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.9341997936

City Today News

9341997936

ವರ್ತೂರು ಮೇಲ್ಸೇತುವೆ ಯೋಜನೆ ಕೈಬಿಡುವಂತೆ ವರ್ತೂರು ನಾಗರಿಕರ ಹಿತರಕ್ಷಣಾ ವೇದಿಕೆ ಒತ್ತಾಯ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಹಿ ಸಂಗ್ರಹ ಚಳವಳಿಗೆ ಚಾಲನೆ

ಬೆಂಗಳೂರು, ಜೂ, 4; ಮಹದೇವಪುರ ವಿಧಾನಸಭಾ ಕ್ಷೇತ್ರದ ವರ್ತೂರಿನ ಕೆರೆ ಕೋಡಿ ಭಾಗದಿಂದ ವರ್ತೂರಿನ ವಿಶಾಲ್ ಮಾರ್ಟ್ ವರೆಗೆ ನಿರ್ಮಿಸಲು ಉದ್ದೇಶಿಸಿರುವ 482 ಕೋಟಿ ರೂಪಾಯಿ ಮೊತ್ತದ ಲಿವೇಟೆಡ್ ಕಾರಿಡಾರ್ ಯೋಜನೆ ವಿರೋಧಿಸಿ ಹೋರಾಟ ಮಾಡುವುದಾಗಿ ವರ್ತೂರು ನಾಗರಿಕರ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.

ವರ್ತೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ 30 ಸಾವಿರಕ್ಕೂ ಹೆಚ್ಚು ಜನರಿಗೆ ಅನಾನುಕೂಲವಾಗುವ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಕೈಬಿಡುವಂತೆ ಒತ್ತಾಯಿಸಿ ಸಹಿ ಸಂಗ್ರಹ ಚಳವಳಿ ಆರಂಭಿಸಲಾಗಿದ್ದು, ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಪದಾಧಿಕಾರಿಗಳು, ಇದಕ್ಕಾಗಿ “ನಮ್ಮ ಊರು ನಮ್ಮ ಹಕ್ಕು” ಎಂಬ ಅಭಿಯಾನ ಆರಂಭಿಸಲಾಗಿದೆ. ಮೇಲ್ಸೇತುವೆಯಿಂದ ವರ್ತೂರಿನ ಜನರ ವ್ಯಾಪಾರ, ವಹಿವಾಟು, ದೈನಿಂದಿನ ಬದುಕಿಗೆ ತೀವ್ರ ತೊಂದರೆಯಾಗಲಿದೆ. ಜನವಿರೋಧಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಬಿಟ್ಟು ಆದಷ್ಟು ಮಟ್ಟಿಗೆ ರಸ್ತೆ ಅಗಲೀಕರಣದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಸಾರ್ವಜನಿಕರ ಜೊತೆ ಸಮಾಲೋಚನೆ ಮಾಡದೇ ಮೇಲ್ಸೇತುವೆ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದ ಬಾಧಿತರಾದವರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿಲ್ಲ. ಸುತ್ತಲಿನ ಜನಸಾಮಾನ್ಯರ ವ್ಯವಹಾರಕ್ಕೆ ಧಕ್ಕೆಯಾಗುತ್ತದೆ. ತಲತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ರಥೋತ್ಸವ, ಕರಗ ಮತ್ತಿತರ ಧಾರ್ಮಿಕ ಭಾವನೆಗಳ ಮೇಲೆ ಪ್ರಹಾರ ಮಾಡಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮೇಲ್ಸೇತುವೆ ನಿರ್ಮಾಣದಿಂದ ಅಲ್ಲಿನ ಜಂಕ್ಷನ್ ಗಳಲ್ಲಿ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಲಿದ್ದು, ಆಸ್ತಿಯ ಮೌಲ್ಯ ಕಡಿಮೆಯಾಗಲಿದೆ. ವರ್ತೂರು, ಸೊರಹುಣಸೆ, ಬಳಗೆರೆ, ವಾಲೇಪುರ, ಮಧುರಾನಗರ, ಹಲಸಹಳ್ಳಿ, ಕತ್ರಿಗುಪ್ಪೆ ಗ್ರಾಮಗಳು ಆರ್ಥಿಕವಾಗಿ ಶಾಶ್ವತವಾಗಿ ತೊಂದರೆಗೆ ಒಳಗಾಗಲಿವೆ. ಮೆಟ್ರೋದಂತಹ ಪರಿಸರ ಸ್ನೇಹಿ ಸಮೂಹ ಸಾರಿಗೆ ವ್ಯವಸ್ಥೆಯಿಂದ ವಂಚಿತರಾಗುತ್ತೇವೆ.ಹೀಗಾಗಿ ಸರ್ಕಾರ ಗ್ರಾಮಸ್ಥರ ಮನವಿಗೆ ಮನ್ನಣೆ ನೀಡಿ ಜನಪರವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಎಂದು ವರ್ತೂರ್ ಜಗದೀಶ್ ರೆಡ್ಡಿ ಕೋರಿದ್ದಾರೆ.

City Today News

9351997936

ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿ ಜೂನ್ 3 ಕ್ಕೆ ಜನಸಾಮಾನ್ಯ ಒಕ್ಕಲಿಗರ ವೇದಿಕೆಯಿಂದ ಬೃಹತ್ ಪ್ರತಿಭಟನೆ

ಕುವೆಂಪು ರಚಿಸಿದ ನಾಡಗೀತೆಯನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ಉಚ್ಚಾಟಿಸಬೇಕು ಹಾಗೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು . ಎಂದು ಆಗ್ರಹಿಸಿ ಜೂನ್ 3 ರಂದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಜನಸಾಮಾನ್ಯ ಒಕ್ಕಲಿಗರ ವೇದಿಕೆ ತಿಳಿಸಿದೆ .

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಸಾಮಾನ್ಯ ಒಕ್ಕಲಿಗರ ವೇದಿಕೆ ರಾಜ್ಯಾಧ್ಯಕ್ಷ ಬಿ.ಟಿ.ನಾಗಣ್ಣ , “ ಕುವೆಂಪುರವರು ನಾಡು ಕಂಡ ಅತ್ಯಂತ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು . ಅವರು ರಚಿಸಿದ ನಾಡಗೀತೆಯನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ರೋಹಿತ್ ಚಕ್ರತೀರ್ಥ ಒಕ್ಕಲಿಗ ಸಮುದಾಯಕ್ಕೆ ಮಾತ್ರವಲ್ಲದೇ ಇಡೀ ನಾಡಿಗೆ ಅವಮಾನ ಮಾಡಿದ್ದಾನೆ . ಜೊತೆಗೆ , ಕನ್ನಡ ಧ್ವಜವನ್ನು ತನ್ನ ಒಳಉಡುಪಿಗೆ ಹೋಲಿಸಿ ವ್ಯಂಗ್ಯವಾಡಿದ್ದಾನೆ . ಕುವೆಂಪುರವರ ಆಯ್ದ ಸಾಲುಗಳನ್ನು ಮುಂದಿಟ್ಟುಕೊಂಡು ಅವರ ವಿರುದ್ಧ ಅವಹೇಳನಕಾರಿಯಾಗಿ ಪತ್ರಿಕೆಯೊಂದಕ್ಕೆ ಲೇಖನವನ್ನೂ ಈತ ಬರೆದಿದ್ದ . ಇಂತಹವನಿಗೆ ಪಠ್ಯಪುಸ್ತಕ ಪರಿಶೀಲನಾ ಸಮಿತಿಯಂತಹ ಜವಾಬ್ದಾರಿಯುತ ಸ್ಥಾನ ನೀಡುವ ಮೂಲಕ ರಾಜ್ಯ ಸರ್ಕಾರ ದೊಡ್ಡ ತಪ್ಪು ಮಾಡಿದೆ ” ಎಂದು ಹೇಳಿದರು .

“ ಜೂನ್ 3 ರ ಶುಕ್ರವಾರದಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಮೌರ್ಯ ಹೋಟೆಲ್ ಸಮೀಪ ಬೃಹತ್ ಪ್ರತಿಭಟನ ನಡೆಸಲಿದ್ದೇವೆ . ಸುಮಾರು 500 ಕ್ಕೂ ಒಕ್ಕಲಿಗರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ . ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ರೋಹಿತ್ ಚಕ್ರತೀರ್ಥವನ್ನು ವಜಾ ಮಾಡಬೇಕು ಹಾಗೂ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಶೀಘ್ರವೇ ಬಂಧಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇವೆ . ಇದು ನಾಡಿನ ಸಮಸ್ತ ಒಕ್ಕಲಿಗರ ಸ್ವಾಭಿಮಾನದ ಪ್ರಶ್ನೆಯಾಗಿದ್ದು , ರಾಷ್ಟ್ರಕವಿ ಕುವೆಂಪುರವರಿಗೆ ಮಾಡಿದ ಈ ಅವಮಾನವನ್ನು ನೋಡಿಕೊಂಡು ಸುಮ್ಮನಿರುವ ಪ್ರಶ್ನೆಯೇ ಇಲ್ಲ ‘ ‘ ಎಂದು ಬಿ.ಟಿ.ನಾಗಣ್ಣ ಹೇಳಿದರು .

ಈಗಾಗಲೇ ಅನೇಕ ಸಾಹಿತಿಗಳು , ಸಂಘಟನೆಗಳು , ಗಣ್ಯ ವ್ಯಕ್ತಿಗಳು ರೋಹಿತ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ . ಸಾಹಿತಿಗಳಾದ ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣರವರು ತಮ್ಮ ಲೇಖನಗಳನ್ನು ಪಠ್ಯಪುಸ್ತಕದಿಂದ ಕೈಬಿಡಿ ಎಂದು ಆಗ್ರಹಿಸಿದ ಘಟನೆಯೂ ನಡೆದುಹೋಗಿದೆ . ಸರ್ಕಾರಕ್ಕೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ . ಕನ್ನಡ ಹಾಗೂ ಕುವೆಂಪು ವಿರೋಧಿಗಳಿಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ರಾಜ್ಯ ಸರ್ಕಾರವು ನಾಡದ್ರೋಹ ಮಾಡುತ್ತಿದೆ ” ಎಂದು ಬಿ.ಟಿ.ನಾಗಣ್ಣ ಪತ್ರಿಕಾ ಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು .

City Today News

9341997936

ಈಡಿಗ ಹಾಗೂ 26 ಪಂಗಡಗಳ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕೆಂದು ವಿನಂತಿ

ಕರ್ನಾಟಕ ರಾಜ್ಯದ ಈಡಿಗ ಹಾಗೂ 26 ಸಮುದಾಯ ಪಂಗಡಗಳ ಬೇಡಿಕೆಯನ್ನು ಈಡೇರಿಸುವ ಕುರಿತು .

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ಕರ್ನಾಟಕ ರಾಜ್ಯದಲ್ಲಿ ಈಡಿಗ , ಬಿಲ್ಲವ , ನಾಮದಾರಿ , ನಾಯ್ಕ , ದೀವರ ಈ ರೀತಿಯ ಜಾತಿಗಳು ಸೇರಿದಂತೆ 26 ಪಂಗಡಗಳು ಸೇರಿಕೊಂಡು 70 ಲಕ್ಷ ಜನ ಸಂಖ್ಯೆಗೂ ಹೆಚ್ಚ ಸಮುದಾಯಗಳು ಇರುತ್ತದೆ . ಈಗ ಆಡಳಿತ ಪಕ್ಷದಲ್ಲಿ 7 ಜನ ಶಾಸಕರು ಹಾಗೂ ಇಬ್ಬರು ಮಂತ್ರಿಗಳು ಕೂಡ ಆಗಿರುತ್ತಾರೆ . ಆದರೆ , ಈ ಸಮುದಾಯಕ್ಕೆ ಇಲ್ಲಿಯವರೆಗೆ ಸೂಕ್ತ ನ್ಯಾಯ ಸಿಕ್ಕಿರುವುದಿಲ್ಲ . ನಮ್ಮ ಈಡಿಗ ಸಮುದಾಯದ ಕುಲಕಸುಬಾದ ಸೇಂದಿ ನಿಲ್ಲಿಸಿ ಈಗಾಗಲೇ 18 ವರ್ಷಗಳಾಗಿವೆ . ನಮ್ಮ ಸಮುದಾಯದ ಕುಲಕಸುಬು ಮರಳಿ ಬರುವುದಕ್ಕೋಸ್ಕರ ಈಡಿಗ ಸಮುದಾಯದ ಗುರುಗಳಾದ ಪರಮ ಪೂಜ್ಯ ಡಾ || ಪ್ರಣವನಂದ ಸ್ವಾಮಿಗಳ ನೇತೃತ್ವದಲ್ಲಿ ಕಳೆದ ತಿಂಗಳು 5 ನೇ ತಾರೀಖಿನಿಂದ 11 ನೇ ತಾರೀಖಿನವರೆಗೂ 7 ದಿನಗಳ ಕಾಲ 178 ಕಿ.ಮೀ.ವರೆಗೂ ಚಿಂಚೋಳಿಯಿಂದ ಪ್ರಾರಂಭಿಸಿ ಕಲಬುರುಗಿ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪಾದಯಾತ್ರೆ ಮಾಡಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು . ಈ ಒಂದು ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಸೇರಿರುತ್ತಾರೆ . ಹಾಗೂ ನಮ್ಮ ಬೇಡಿಕೆ ಈಡೇರುವವರೆಗೂ ಶ್ರೀಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದಿನ ತಿಂಗಳುಗಳಲ್ಲಿ ಕೈಗೊಳ್ಳಲು ನಿರ್ಣಹಿಸಲಾಗಿದೆ . ಇದು ಸಮುದಾಯದ ಪ್ರಾರಂಭಿಕ ಹೋರಾಟವಾಗಿದೆ . ಹಾಗಾಗಿ ಇದೆಲ್ಲವನ್ನು ಗಮನಿಸಿ ಸರ್ಕಾರ ಕೂಡಲೇ ಕುಲಕಸುಬು ಮತ್ತು ಸಮುದಾಯದ ಅಭಿವೃದ್ಧಿ ನಿಗಮ ಘೋಷಣೆ ಮಾಡಬೇಕೆಂದು ಹಾಗೂ ಈ ಸಮುದಾಯ ಸಾಕಷ್ಟು ಸಂಕಷ್ಟ ಹಾಗೂ ನೋವಿನ ಪರಿಸ್ಥಿತಿಯಲ್ಲಿದೆ . ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಬೇಡಿಕೆಗಳನ್ನು ತಮ್ಮ ಸರ್ಕಾರದ ಮೂಲಕ ಈಡೇರಿಸಿ ನಮ್ಮ ಈಡಿಗ ಹಾಗೂ 26 ಪಂಗಡಗಳ ಸಮುದಾಯಕ್ಕೆ ನ್ಯಾಯವನ್ನು ಒದಗಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಡಾ || ಶ್ರೀಶ್ರೀಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು

City Today News

9341997936