ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಆಗಿರುವ ಡ್ಯಾಮೇಜುಗಳನ್ನು ಸರಿಪಡಿಸಲು ಸಾರಿಗೆ ಸಚಿವರು ಚರ್ಚೆ ಮಾಡಿ ಬಗೆಹರಿಸುವ ಭರವಸೆ

ಪತ್ರಿಕಾ ಹೇಳಿಕೆ

ಕೆ.ಎಸ್.ಆರ್.ಟಿ.ಸಿ ನೌಕರರು ಕೆಲ ತಿಂಗಳ ಹಿಂದೆ ಒಕ್ಕಲಿಗರ ಸಂಘಟನೆ , ರಾಜ್ಯ ರೈತ ಸಂಘ ಸೇರಿದಂತೆ ಹಲವಾರು ಸಂಘಟನೆಗಳ ಬೆಂಬಲದಿಂದ ಸಾರಿಗೆ ನೌಕರರ ಕೂಟದಿಂದ ತಮ್ಮ ಬೇಡಿಕೆ ಈಡೇರಿಕೆಗಾಗಿ ಬೃಹತ್ ಮುಷ್ಕರ ಮಾಡಿರುವುದು ತಮಗೆ ತಿಳಿದ ವಿಷಯವಾಗಿದೆ . ಮುಂದುವರೆದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ( ರಿ ) ದಿಂದ ನಮ್ಮ ಸಂಘಟನೆ ಸೇರಿ ಹಲವು ಸಂಘಟನೆಗಳು ಕೂಟದಿಂದ ಹೊರಬಂದಿರುತ್ತೇವೆ , ಕಾರಣ ಮುಷ್ಕರ ಸಂಧರ್ಬದಲ್ಲಿ ಹಲವಾರು ನೌಕರರಿಗೆ ವಜಾ , ವರ್ಗಾವಣೆ , ಅಮಾನತ್ತು ಹಾಗೂ ಪೊಲೀಸ್‌ ಕೇಸ್‌ಗಳು ಆಗಿದ್ದು ಅವುಗಳನ್ನು ಸರಿಪಡಿಸಲು ಇವರುಗಳು ಸರಿಯಾದಂತ ಕ್ರಮ ತೆಗೆದುಕೊಳ್ಳದೆ ಏಕ ಪಕ್ಷೀಯ ನಿರ್ಧಾರಗಳನ್ನು ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ಆರ್ ಚಂದ್ರಶೇಕರ್ ರವರ ನಡವಳಿಕೆ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ . ಗೌರವ ಅಧ್ಯಕ್ಷರು ಶ್ರೀ ಕೋಡಿಹಳ್ಳಿ ಚಂದ್ರಶೇಕರ್ ರವರು ಕೂಡ ಈ ವಿಷಯಗಳಲ್ಲಿ ವಿಫಲರಾಗಿರುತ್ತಾರೆ . ಈ ಎಲ್ಲಾ ಬೆಳವಣಿಗೆಗಳಿಂದ ನೌಕರರಿಗೆ 4 ತಿಂಗಳಿನಿಂದ ಸರಿಯಾದ ರೀತಿಯಲ್ಲಿ ಸಂಬಳ ಸಿಗದೆ ನೌಕರರು ಕುಟುಂಬ ನಿರ್ವಹಣೆ ಮಾಡಲು ಕಷ್ಟಸಾಧ್ಯವಾಗಿದೆ . ಆರ್.ಚಂದ್ರಶೇಕರ್ ರವರು ಸಂಘವನ್ನು ಕಾನೂನು ರೀತಿಯಲ್ಲಿ ನಡೆಸದೆ ತನಗೆ ಇಷ್ಟಬಂದಹಾಗೆ ಸಂಘದಲ್ಲಿರುವ ಹಲವಾರು ಪಧಾದಿಕಾರಿಗಳನ್ನು ಉಚ್ಚಾಟನೆ ಮಾಡಿ ಸಂಘವನ್ನು ಮನಸೋ ಇಚ್ಛೆ ನಡೆಸುವುದರಿಂದ ಉಳಿದ ಪಧಾದಿಕಾರಿಗಳು ಇವರ ನಡೆವಳಿಕೆಯಿಂದ ಬೇಸತ್ತು ಸ್ವಯಂ ರಾಜೀನಾಮೆ ನೀಡಿ ಸಂಪೂರ್ಣ ವಾಪಸ್ಸು ಬಂದಿರುತ್ತಾರೆ . ಮೇಲೆ ತಿಳಿಸಿರುವ ಹಾಗೆ ಹಲವಾರು ನೌಕರರಿಗೆ ಆಗಿರುವ ಡ್ಯಾಮೇಜುಗಳನ್ನು ಸರಿಪಡಿಸಲು ಸಾರಿಗೆ ಸಚಿವರನ್ನು ದಿನಾಂಕ – 16-07-2021 , ಶುಕ್ರವಾರ ರಂದು ಭೇಟಿ ಮಾಡಿ ನೌಕರರಿಗೆ ಆಗಿರುವ ಅನ್ಯಾಯಗಳನ್ನು ಸರಿಪಡಿಸಿ ವೇತನದ ವಿಚಾರವಾಗಿ ಸಭೆ ಕರೆದು ಸರಿಪಡಿಸಬೇಕೆಂದು ಸುಮಾರು 2 ಗಂಟೆಗಳ ಕಾಲ ಚರ್ಚೆ ಮಾಡಿ ಮಾತನಾಡಿರುತ್ತೇವೆ . ಸಾರಿಗೆ ಸಚಿವರು ಕೂಡ ಅದಕ್ಕೆ ರೀತಿಯಲ್ಲಿ ಮಾತುಕತೆ ಮಾಡಿ ಸಮಸ್ಯೆ ಬಗೆಹಸುತ್ತೇನೆಂದು ಸಕರಾತ್ಮಕವಾಗಿ ಸ್ಪಂದಿಸಿರುತ್ತಾರೆ ಮತ್ತು ಘಟಕಗಳಲ್ಲಿ ಹಲವಾರು ರೀತಿಯ ಕಿರುಕುಳಗಳು ಆಗುತ್ತಿವೆ ಅದನ್ನು ಕೂಡ ಸರಿಪಡಿಸಬೇಕು ಎಂದು ತಿಳಿಸಿರುತ್ತೇವೆ ಅದಕ್ಕೆ ಅವರು ದಿನಾಂಕ 19-07-2021 , ಸೋಮವಾರ ದಂದು ವ್ಯವಸ್ಥಾಪಕ ನಿರ್ದೇಶಕರುಗಳು ಮತ್ತು ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ ಚರ್ಚೆ ಮಾಡಿ ಬಗೆಹರಿಸುವ ಭರವಸೆ ನೀಡಿರುತ್ತಾರೆ . ಈ ಎಲ್ಲಾ ವಿಷಯಗಳ ಸಂಬಂದ ಕ್ಯಾಬಿನೆಟ್ ಸಚಿವರುಗಳಾದ ಆರ್.ಅಶೋಕ್ ( ಕಂದಾಯ ಸಚಿವರು ) , ಎಸ್.ಆರ್.ಬೊಮ್ಮಾಯಿ ( ಗೃಹ ಸಚಿವರು ) ಹಾಗೂ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಅಧ್ಯಕ್ಷರು ನಂದೀಶ್ ರೆಡ್ಡಿ ಮತ್ತು ಉಪಾಧ್ಯಕ್ಷರು ಎಮ್.ಆರ್.ವೆಂಕಟೇಶ್ ರವರನ್ನು ಬೇಟಿ ಮಾಡಿ ಮನವಿ ಪತ್ರಗಳನ್ನು ನೀಡಿ ಸಮಸ್ಯೆ ಬಗೆಹರಿಸಲು ತಾವುಗಳು ಸಹಕರಿಸಬೇಕೆಂದು ಮನವಿ ಮಾಡಿರುತ್ತೇವೆ .

ಅಧ್ಯಕ್ಷರು

City Today News
9341997936

ಕರ್ನಾಟಕರಾಜ್ಯದ ಯುವಜನರ ಯೋಗಕ್ಷೇಮ ಚಿಂತಿಸುವ , ಅರಿವು ಮೂಡಿಸುವ , ಯುವಜನರ ಹಕ್ಕುಗಳ ರಕ್ಷಣೆಗಾಗಿ ವಕಾಲತ್ತು ವಹಿಸುವ ಯುವಜನರ ವೇದಿಕೆ

ಪತ್ರಿಕಾ ಗೋಷ್ಠಿ:

ಕೊರೋನ ಮತ್ತು ನಂತರದ ಕಾಲಘಟ್ಟದಲ್ಲಿ ಯುವಜನರ ಸಭಲೀಕರಣ ಮಾಡುವಂತೆ ಮತ್ತು ಯುವಜನರ ಸಂವಿಧಾನಾತ್ಮಕ ಹಕ್ಕುಗಳನ್ನು ರಕ್ಷಿಸುವಂತೆ ಹಕ್ಕೊತ್ತಾಯ…
ಯುವಮುನ್ನಡೆ – ಕರ್ನಾಟಕ
ರಾಜ್ಯದ ಯುವಜನರ ಯೋಗಕ್ಷೇಮ ಚಿಂತಿಸುವ , ಅರಿವು ಮೂಡಿಸುವ , ಯುವಜನರ ಹಕ್ಕುಗಳ ರಕ್ಷಣೆಗಾಗಿ ವಕಾಲತ್ತು ವಹಿಸುವ ಯುವಜನರ ವೇದಿಕೆ. ಕರ್ನಾಟಕದಲ್ಲಿ ಸುಮಾರು ೧.೮ ಕೋಟಿ ಯುವಜನರಿದ್ದಾರೆ. ೧೫ ರಿಂದ ೨೯ ವಷದೊಳಗಿನವರನ್ನು ಯುವಜನರೆಂದು ಪರಿಗಣಿಸಲಾಗಿದೆ. ಕೊರೊನ ೨ ನೇ ಅಲೆ ಹಾಗೂ ಲಾಕ್‌ ಡೌನ್‌ ಸಂಧರ್ಭದಲ್ಲಿ ಯುವಜನರಿಗೆ ಬಹಳಷ್ಟು ಸಮಸ್ಯೆಗಳಾಗಿವೆ. ೧೯೪೮ ರ ವಿಸ್ವಸಂಸ್ಥೆ ಮಾನವ ಹಕ್ಕುಗಳ ಒಡಂಬಡಿಕೆಯು ಮಾನವ ಹಕ್ಕುಗಳನ್ನು ಘೋಷಿಸಿದೆ. ಆದರೆ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಯುವಜನರು ಸಕ್ರಿಯವಾಗಿ ತಮ್ಮ ಹಕ್ಕುಗಳನ್ನು ಪಡೆಯುತ್ತಿಲ್ಲ. ಹಾಗಾದರೆ ಈಗ ಯುವಜನರ ಹಕ್ಕುಗಳ ಪರಿಸ್ಥಿತಿ ಏನು ? ಇವುಗಳ ಬಗ್ಗೆ ವಕಾಲತ್ತು ವಹಿಸುವವರು ಯಾರು ?

ಇದು ಯಾವ ನ್ಯಾಯ ?
೪೫ ವರ್ಷದ ಮೇಲಿನವರಿಗೆ ಮಾತ್ರ ಮೊದಲು ಕೋವಿಡ್‌ ಲಸಿಕೆ… !
ಕೋವಿಡ್‌ ೨ ನೇ ಅಲೆ ಯುವಜನರನ್ನೂ ಬಲಿ ತೆಗೆದುಕೊಂಡಿದೆ. ಹ್ಯಾಪಿನೆಸ್‌ ಹೈಪಾಕ್ಸಿಯಾ ಯುವಜನರನ್ನೇ ಭಾದಿಸುತ್ತಿದೆ ಎಂದು ಈಗ ಗೊತ್ತಾಗಿದೆ. ಹಾಗಾದರೆ ಲಸಿಕೆ ಕೊಡುವಲ್ಲಿ ಯುವಜನರಿಗೆ ಮೊದಲ ಪ್ರಾಧಾನ್ಯತೆ ಯಾಕೆ ಕೊಟ್ಟಿಲ್ಲ ?
ಹಾಗೆಯೇ ೩೫ ವಷ ಮೇಲ್ಪಟ್ಟ ಕಲಾವಿದರಿಗೆ ಮಾತ್ರ ಕೋವಿಡ್‌ ಪರಿಹಾರ ಧನವನ್ನು ಘೋಷಿಸಲಾಯಿತು. ಆದರೆ ಯುವ ಕಲಾವಿದರ ಪರಿಸ್ಥಿತಿ ಏನು ? ವಯಸ್ಸಿನ ಆಧಾರದ ಮೇಲೆ ಇಷ್ಟು ತಾರತಮ್ಯ ಯಾಕೆ ? ಸಮಾನತೆಯ ಹಕ್ಕಿನ ಪ್ರಶ್ನೆ ಇಲ್ಲಿ ತಲೆದೋರುತ್ತದೆ…
ದ್ವಿತೀಯ ಪಿ.ಯು.ಸಿ ವಿದ್ಯಾಥಿಗಳಿಗೆ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ೧೦ ನೇ ತರಗತಿಯ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಯಾವುದೇ ವಿದ್ಯಾಥಿಗಳಿಗೆ ಸಂಪೂರ್ಣವಾದ ಪಠ್ಯಕ್ರಮ ಮುಗಿಸಿಲ್ಲ. ಆನ್‌ ಲೈನ್‌ ಪದ್ದತಿಯ ಶಿಕ್ಷಣ ವ್ಯವಸ್ಥೆಯು ಎಷ್ಟು ವಿದ್ಯಾಥಿಗಳನ್ನು ತಲುಪಿದೆ… ? ಗ್ರಾಮೀಣ ಭಾಗದ ವಿದ್ಯಾಥಿಗಳು ಬಹಳಷ್ಟು ಮಂದಿ ಮೊಬೈಲ್‌ / ಲ್ಯಾಪ್‌ ಟಾಪ್‌ ನೆಟ್ ವರ್ಕ್ ಹಾಗೂ ರೀಚಾರ್ಜ್ ಸಮಸ್ಯೆಗಳಿಂದ ಆನ್‌ ಲೈನ್‌ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದು ಶಿಕ್ಷಣದ ಹಕ್ಕಿನ ಪ್ರಶ್ನೆ…
ಆರೋಗ್ಯದ ಹಕ್ಕಿನ ಪ್ರಶ್ನೆ
ಒಂದು ವರದಿಯ ಪ್ರಕಾರ ಕೋವಿಡ್‌ ಸಂದಭದಲ್ಲಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಯುವಜನರ ಸಂಖ್ಯೆ ಶೇ. ೯ ರಷ್ಟು ಹೆಚ್ಚಾಗಿದೆ. ಇತ್ತೀಚಿಗೆ ನೇಸರ ಫೌಂಡೇಶನ್‌ ಮಾಡಿರುವ ಒಂದು ಅನ್‌ ಲೈನ್‌ ಸರ್ವೇ ಪ್ರಕಾರ ಕೋವಿಡ್‌ ಸಂದಭದಲ್ಲಿ ಯುವಜನರಲ್ಲಿ ಭಯ , ಆತಂಕ ಮತ್ತು ಏಕಾಂಗಿತನ ಹೆಚ್ಚಾಗಿದೆ.
ಉದೋಗದ ಹಕ್ಕು
ಲಾಕ್‌ ಡೌನ್‌ ಸಂದಭದಲ್ಲಿ ಹಲವಾರು ಯುವಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟದ ಪರಿಸ್ಥಿತಿ ಎದುರಾಗಿದೆ. ಇನ್ನೂ ಹಲವಾರು ಸಮಸ್ಯೆಗಳಿವೆ.

ಹಾಗಾದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವವರು ಯಾರು ? ಸಕಾರದ ಜವಾಬ್ದಾರಿ ಇಲ್ಲವೇ ?

ಈ ಬಗ್ಗೆ ಸಕಾರ ಶೀಘ್ರಗತಿಯಲ್ಲಿ ಗಮನ ಹರಿಸಿ , ಈ ಕೆಳಗಿನ ಅಂಶಗಳನ್ನು ತಕ್ಷಣವೇ ಪೂರೈಸಬೇಕಿದೆ.
೧. ಕೋವಿಡ್‌ ಮತ್ತು ಲಾಕ್‌ ಡೌನ್‌ ನಿಂದ ತೊಂದರೆಗೆ ಒಳಗಾದ ಎಲ್ಲಾ ಸಾಮಾಜಿಕ – ಆರ್ಥಿಕ ಹಿಂದುಳಿದಿರುವ ಕುಟುಂಬಗಳಿಗೆ ಅರ್ಥಿಕ ನೆರವು ನೀಡುವುದು.
೨. ಎಲ್ಲಾ ಪರೀಕ್ಷೆಗಳನ್ನು ರದ್ದು ಪಡಿಸುವುದು. ಈ ಶೈಕ್ಷಣಿಕ ವರ್ಷದ ಕಲಿಕೆಯಲ್ಲಾದ , ಆಗಬಹುದಾದ ಕೊರತೆಯನ್ನು ತುಂಬಲು ಕ್ರಮ ಕೈಗೊಳ್ಳುವುದು.
೩. ೨೦೧೨ ರ ಕರ್ನಾಟಕ ಯುವನೀತಿಯಲ್ಲಿ ಪ್ರಸ್ತಾಪಿಸುವಂತೆ ತಕ್ಷಣ ಯುವಜನ ಸಬಲೀಕರಣ ನಿಗಮವನ್ನು ಸ್ಥಾಪಿಸಿ.
೪. ಕೋವಿಡ್‌ ಲಸಿಕೆಯ ಬಗ್ಗೆ ಸಂಪೂರ್ಣ ಅರಿವನ್ನು ಮೂಡಿಸುವುದು.
ದೀರ್ಘ ಕಾಲಿಕ ಬೇಡಿಕೆಗಳು
೧. ಯುವಜನ ಸಬಲೀಕರಣ ಇಲಾಖೆಯ ಅಡಿಯಲ್ಲಿ ಇರುವ ಜಿಲ್ಲಾವಾರು ಆಪ್ತಸಮಾಲೋಚನಾ ಕೇಂದ್ರಗಳನ್ನು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಹಂತಕ್ಕೆ ವಿಸ್ತರಿಸಬೇಕು.
೨. ಯುವಜನರ ಆರೋಗ್ಯದ ಬಗ್ಗೆ ಕಾಲಜಿ ವಹಿಸಿ , ಸರಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪೌಷ್ಠಿಕ ಆಹಾರ ನೀಡುವ ವ್ಯವಸ್ಥೆ ನೀಡಬೇಕು.
೩. ಯುವನೀತಿ , ಯುವಜನ ಆಯೋಗ ಮತ್ತು ಯುವಜನ ಸಬಲೀಕರಣ ನಿಗಮವನ್ನು ಸ್ಥಾಪಿಸಬೇಕು.
೪. ಗುಡಿಕೈಗಾರಿಕೆಗಳು , ಸ್ವಯಂ ಉದ್ಯೋಗಗಳಿಗೆ ಹೆಚ್ಚು ಒತ್ತು ನೀಡಿ , ಎಲ್ಲರಿಗೂ ಭದ್ರತೆಯುಳ್ಳ ಉದ್ಯೋಗಗಳನ್ನು ಒದಗಿಸಿಕೊಡಬೇಕು.
೫. ರಾಜಕೀಯ ಮತು ಆಡಳಿತ – ಸಾಮಾಜಿಕ ಚಟುವಟಿಕೆಗಳಲ್ಲಿ ಯುವಜನರು ಭಾಗವಹಿಸಲು ಅವಕಾಶ ಒದಗಿಸಿಕೊಡಬೇಕು.
೬. ಯುವಜನರ ಹಕ್ಕುಗಳನ್ನು ಘೋಷಿಸಬೇಕು.

ಕೋವಿಡ್‌ ಸಮಯದಲ್ಲಿ ಯುವಜನರು ಹಕ್ಕುಗಳಿಂದ ಇನ್ನಷ್ಟು ವಂಚಿತರಾಗಿದ್ದಾರೆ ಎಂದು ನಮಗೆ ಅನಿಸಿದೆ. ನಮ್ಮ ಹಕ್ಕುಗಳನ್ನು ಕೇಳಲು ಹೊರಟಿದ್ದೇವೆ.

ಯುವಜನ ಮುಂದಾಳುಗಳು

ಪೂಜಾ ನಾರಾಯಣಪ್ಪ,ದಿಲೀಪ್
ಬೆಂಗಳೂರು, ಮಣಿ ಕೋಲಾರ,ಮೇಘನಾ,ಮಹಾಲಿಂಗ
ತುಮಕೂರು

ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮ ಪಕ್ಷದಿಂದ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಜಾಗೃತಿ ಕಾರ್ಯಕ್ರಮ

ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಶುಲ್ಕಗಳು , ಸರ್ಕಾರಿ ಶಾಲೆಗಳ ದುರ್ವ್ಯವಸ್ಥೆ , ಖಾಸಗಿ ಶಿಕ್ಷಕರ ಸಮಸ್ಯೆ , ಶುಲ್ಕ ನಿಯಂತ್ರಣ ಪ್ರಾಧಿಕಾರದ ರಚನೆ ಸೇರಿದಂತೆ ಹಲವಾರು ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರವು ಸಂಪೂರ್ಣ ವೈಫಲ್ಯಗೊಂಡಿದೆ . ಸರ್ಕಾರದ ಹೊಣೆಗೇಡಿತನದ ಪರಿಣಾಮವಾಗಿ ಇಂದು ರಾಜ್ಯದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸಂಕಷ್ಟಕ್ಕೀಡಾಗಿದೆ . ಶಾಲಾ ಶುಲ್ಕ ಗಳ ವಿಚಾರದಲ್ಲಿಯೂ ಸಹ ಪೋಷಕ ವರ್ಗ ಸಮಸ್ಯೆಗೀಡಾಗಿದೆ . ಈ ಎಲ್ಲ ಗೊಂದಲಗಳಿಂದಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ .

ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ಬಗೆಹರಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಆಮ್ ಆದ್ಮ ಪಕ್ಷದ ಸಾವಿರಾರು ಕಾರ್ಯಕರ್ತರು ಗಳು ಸತತ 15 ದಿವಸಗಳ ಕಾಲ ರಾಜ್ಯದಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಕನಿಷ್ಠ 5 ಲಕ್ಷ ಮನೆಗಳಿಗೆ ತೆರಳಿ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಾಂದೋಲನ ಕಾರ್ಯ ಕ್ರಮವನ್ನು ನಡೆಸುವವರಿದ್ದಾರೆ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಎಂದು ಇಂದಿಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಚಿತ್ರಣ ನೀಡಿದರು .

ಕರಪತ್ರ , ಎಲ್.ಇ.ಡಿ ವಾಹನ , ವಿಚಾರಗೋಷ್ಠಿ ಗಳು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ಯಶಸ್ವಿಯಾಗಿಸಲು ಈಗಾಗಲೇ ಹಲವು ರೂಪುರೇಷೆಗಳನ್ನು ಪಕ್ಷವು ಕೈಗೊಂಡಿದೆ .

ಈ ಬೃಹತ್ ಅಭಿಯಾನದ ಭಾಗವಾಗಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಪೃಥ್ವಿರೆಡ್ಡಿ ದವರು ದಿನಾಂಕ : 05 – 07 – 2021 ಸೋಮವಾರ ಬೆಳಿಗ್ಗೆ 9 ಗಂಟೆಗೆ ಬೆಂಗಳೂರು ನಗರದ ಸಂಪಂಗಿ ರಾಮನಗರ ವಾರ್ಡ್ ನಲ್ಲಿ ಮನೆ ಮನೆಗೆ ತೆರಳಿ ವಿದ್ಯುಕ್ತವಾಗಿ ಚಾಲನೆ ಯನ್ನು ನೀಡಲಿದ್ದಾರೆ . ಇವರೊಂದಿಗೆ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಪ್ರಚಾರ ಸಮಿತಿ ಅಧ್ಯಕ್ಷ ಶಾಂತಲಾ ದಾಮ್ಲ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಭಾಗವಹಿಸಲಿದ್ದಾರೆ . ಇದೇ ಸಮಯದಲ್ಲಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಹ ಈ ಅಭಿಯಾನಕ್ಕೆ ಚಾಲನೆ ದೊರಕಲಿದೆ . ಈ ಮೂಲಕ ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಸಮಸ್ಯೆಗೆ ಆಮ್ ಆದ್ಮ ಪಕ್ಷವು ರಾಜ್ಯದ ಜನತೆಯ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದು ಮೋಹನ್ ದಾಸರಿ ತಿಳಿಸಿದರು .

City Today News
9341997936

ತಮಿಳು ಸೂಪರ್ಸ್ಟಾರ್ ಥಳಪತಿ ವಿಜಯ್ ಸೈಕಲ್ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿ “ಇಂಧನ ದರ ಏರಿಕೆಗೆ ಖಂಡನೆ”

ತಮಿಳು ಸೂಪರ್ಸ್ಟಾರ್ ಥಳಪತಿ ವಿಜಯ್ ಸೈಕಲ್ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿ ಗಮನ ಸೆಳೆದಿದ್ದಾರೆ.

ಚೆನ್ನೈ,,ಏ.6 :
ಇಂದು ತಮಿಳುನಾಡು ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ತಮಿಳು ಸೂಪರ್ಸ್ಟಾರ್ ಥಳಪತಿ ವಿಜಯ್ ಸೈಕಲ್ ತುಳಿದುಕೊಂಡು ಮತಗಟ್ಟೆಗೆ ಬಂದು ವೋಟ್ ಮಾಡಿ ಗಮನ ಸೆಳೆದಿದ್ದಾರೆ.

ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ನ್ಯಾಷನಲ್ ಪ್ರೀ ಸ್ಕೂಲ್ನ ಮತಗಟ್ಟೆಯಲ್ಲಿ ವಿಜಯ್ ಮತ ಚಲಾಯಿಸಿದ್ರು. ವಿಜಯ್ ಸೈಕಲ್ ಸವಾರಿ ವೇಳೆ ಕೆಲ ಅಭಿಮಾನಿಗಳು ಅವರನ್ನ ಫಾಲೋ ಮಾಡಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಭಾರೀ ಸಂಖ್ಯೆಯ ಅಭಿಮಾನಿಗಳು ಸುತ್ತುವರಿದಿದ್ರಿಂದ ವಿಜಯ್ ಬೇಗನೆ ಅಲ್ಲಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.

ಬಳಿಕ ಅವರು ತಮ್ಮ ಸಿಬ್ಬಂದಿಯೊಬ್ಬರ ಟೂ ವೀಲರ್​ನಲ್ಲಿ ಹಿಂದೆ ಕುಳಿತು ಪ್ರಯಾಣ ಮುಂದುವರಿಸಬೇಕಾಯ್ತು. ವಿಜಯ್ ಅವರ ಮತ್ತೋರ್ವ ಸಿಬ್ಬಂದಿ ಸೈಕಲ್​ ತೆಗೆದುಕೊಂಡು ಹೋದ್ರು. ಇನ್ನು ಮತಗಟ್ಟೆ ಬಳಿಯೂ ನೂರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ಅವರನ್ನ ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ರು.

ವಿಜಯ್ ಅವರು ಮತಗಟ್ಟೆಗೆ ಸೈಕಲ್​ನಲ್ಲಿ ಬಂದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ತಮ್ಮ ನೆಚ್ಚಿನ ನಟ ಬಿಸಿಲಿನಲ್ಲೂ, ಫೇಸ್​ ಮಾಸ್ಕ್​ ಧರಿಸಿ ಸೈಕಲ್ ತುಳಿದುಕೊಂಡು ಬಂದಿದ್ದಾರೆ, ಅದು ಸುಲಭವಲ್ಲ ಎಂದು ವಿಜಯ್ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ. ಇನ್ನು ವಿಜಯ್ ಅವರು ಇಂಧನ ದರ ಏರಿಕೆ ಖಂಡಿಸಲು ಸೈಕಲ್​ನಲ್ಲಿ ಬಂದಿದ್ದಾರೆ ಎಂದು ಚರ್ಚೆಯಾಗ್ತಿದೆ.

City Today News
9341997936

ರೈತ ನಾಯಕ ರಾಕೇಶ್ ಟಿಕಾಯತ್ ರವರಿಗೆ “ಮೂರು ಕರಾಳ ಕೃಷಿ ಕಾನೂನುಗಳು ತೊಲಗುವವರೆಗೂ ನಿಮ್ಮ ಜೊತೆ ಇರುತ್ತೇವೆ” ಎಂದು ಬೆಂಬಲ ಸೂಚಿಸಿದ ಆಮ್ ಆದ್ಮಿ ಪಕ್ಷದ ನಿಯೋಗ

ಶಿವಮೊಗ್ಗದಲ್ಲಿ ನಡೆಯುತ್ತಿರುವ ಐತಿಹಾಸಿಕ ಬೃಹತ್ ರೈತ ಪಂಚಾಯತ್‌‌ನಲ್ಲಿ ಭಾಗವಹಿಸಲು ಆಗಮಿಸಿರುವ ರೈತ ನಾಯಕ ರಾಕೇಶ್ ಟಿಕಾಯತ್ ಅವರನ್ನು ಬೆಂಗಳೂರಿಗೆ ಸ್ವಾಗತ ಮಾಡಿ “ಮೂರು ಕರಾಳ ಕೃಷಿ ಕಾನೂನುಗಳು ತೊಲಗುವವರೆಗೂ ನಿಮ್ಮ ಜೊತೆ ಇರುತ್ತೇವೆ” ಎಂದು ಬೆಂಬಲ ಸೂಚಿಸಿದ ಆಮ್ ಆದ್ಮಿ ಪಕ್ಷದ ನಿಯೋಗ. ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಉಪಸ್ಥಿತರಿದ್ದರು.

City Today News
9341997936