ಶ್ರೀಶೈಲ ಜಗದ್ಗುರುಗಳ ವಿರುದ್ದ ವೀರಶೈವದ ಮಹಾಸಭಾದ ವಿರುದ್ದ ದರಣೆ ಸತ್ಯಾಗ್ರಹ , ಉಪವಾಸ ಸತ್ಯಾಗ್ರಹದಂತಹ ಹೋರಾಟ

ಬೆಂಗಳೂರು ನಗರ ಜಿಲ್ಲೆ , ಯಲಹಂಕ ತಾಲ್ಲೂಕು , ಜಾಲ ಹೋಬಳಿ , ಹುಣಸಮಾರನಹಳ್ಳಿ ಗ್ರಾಮದಲ್ಲಿರುವ ಸುಮಾರು 1506 ರಲ್ಲಿ ಸ್ಥಾಪನೆಗೊಂಡಿರುವ ಐತಿಹಾಸಿಕ ಶ್ರೀ . ಮದ್ದೇವಣಾಪುರ ದೇವ ಸಿಂಹಾಸನ ಸಂಸ್ಥಾನ ಮಠವು ಶ್ರೀಶೈಲ ಪೀಠದ ಶಾಖಾ ಮಠವಾಗಿರುತ್ತದೆ . ಇದು ಗುರುಪರಂಪರೆಯ ವೀರಶೈವ ಲಿಂಗಾಯಿತ ಸಮುದಾಯದ ಮಠವಾಗಿರುತ್ತದೆ . ಇಲ್ಲಿ ವೇಧ ಪಾಠಶಾಲೆ , ಸಂಸ್ಕೃತ ಪಾಠಶಾಲೆ , ವಿದ್ಯಾರ್ಥಿ ನಿಲಯಗಳು ಮತ್ತು ಶಿಕ್ಷಣ ವಿದ್ಯಾ ಸಂಸ್ಥೆಗಳನ್ನು ಹೊಂದಿರುತ್ತದೆ . ಈ ಪೀಠಕ್ಕೆ 13 ಜನ ಪೀಠಾಧ್ಯಕ್ಷರಾಗಿ ಆಡಳಿತ ನಡೆಸಿರುತ್ತಾರೆ . 1957 ರಿಂದ ಇಚೆ 13 ನೇಯ ಪಟ್ಟಾಧ್ಯಕ್ಷರಾದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು ಪಟ್ಟ ವಹಿಸಿಕೊಂಡು ಕೆಲವು ವರ್ಷಗಳು ತುಂಬಾ ಚೆನ್ನಾಗಿ ಸ್ಕೂಲ್ , ಹಾಸ್ಟೆಲ್ , ವಿದ್ಯಾಸಂಸ್ಥೆಗಳು , ದಿನವೂ ದಾಸೋಹ ನಡೆಸಿಕೊಂಡು ಬಂದು ಗುರುಪರಂಪರೆಯನ್ನು ಎತ್ತಿ ಹಿಡಿದಿರುತ್ತಾರೆ . ತದನಂತರ ಇದೇ ಪೀಠಾಧ್ಯಕ್ಷರು ಇದೇ ಹೋಬಳಿಯ ಕೋಳಿಪುರ ಗ್ರಾಮದಿಂದ ಅಡುಗೆ ಕೆಲಸಕ್ಕೆ ಎಂದು ಬಂದ ಕೆಲವು ಮಹಿಳೆಯರಾದ ದಿವಂಗತ ರೇವಮ್ಮ ತಂಗಿಯಾದ ಪಟ್ಟಮ್ಮನ್ನು ಅನೈತಿಕವಾಗಿ ಸಂಬಂಧವನ್ನು ಬೆಳೆಸಿ ಗುರುಪರಂಪರೆಯ ಮಠದ ನಿಯಮಗಳನ್ನು , ಆಚಾರ – ವಿಚಾರಗಳನ್ನು ಗಾಳಿಗೆ ತೂರಿ 6 ಜನ ಮಕ್ಕಳನ್ನು ಪಡೆದು ಅವರ ವೈಭೋಗ ಜೀವನಕ್ಕೆ ಮಠದ ಆಸ್ತಿಗಳನ್ನು ಕಬಳಿಸಿ ಕಾನೂನು ಬಾಹಿರವಾಗಿ ಪರಭಾರೆ ಮಾಡಿ ಪಟ್ಟಭದ್ರ ಹಿತಾಸಕ್ತಿಗಳ ಜನರನ್ನು ಅಕ್ಕ ಪಕ್ಕದಲ್ಲಿಟ್ಟುಕೊಂಡು ಗ್ರಾಮದ ಜನರನ್ನು ಕಾಲಿನ ಕಸದಂತೆ ಕಂಡಿದ್ದಲ್ಲದೆ ಅವರ ವಿರುದ್ಧ ಮಾತನಾಡಿದರೆ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರ ಜಮೀನುಗಳ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಕೋರ್ಟು ಕಛೇರಿಗಳನ್ನು ಅಲೆದಾಡುವಂತೆ ಮಾಡಿ ದಬ್ಬಾಳಿಕೆ ಮಾಡಿರುವುದು ನಮಗೆ ನಿಮಗೆ ಎಲ್ಲರಿಗೂ ತಿಳಿದ ವಿಷಯವಾಗಿರುತ್ತದೆ . ಹಾಗೇಯೇ 2011 ರಲ್ಲಿ ಅನೈತಿಕ ಸಂಬಂಧದಲ್ಲಿ ಹುಟ್ಟಿರುವಂತಹ ದಯಾನಂದನನ್ನು ಪಟ್ಟಾಧಿಕಾರ ಮಾಡಲು ಹೊರಟಾಗ ಗ್ರಾಮದ ಎಲ್ಲಾ ಭಕ್ತಾಧಿಗಳು ಆ ಒಂದು ಪಟ್ಟಾಧಿಕಾರವನ್ನು ತಡೆದಿರುತ್ತಾರೆ . ಆದರೂ ತನ್ನ ಹಠ ಬಿಡದೆ ಅವನೇ ಮುಂದಿನ ಪೀಠಾಧಿಪತಿ ಎಂದು ಹೇಳಿಕೊಂಡು ಬಂದಿರುತ್ತಾನೆ . ಹಾಗೆ ಮುಂದುವರೆದ ದಯಾನಂದನು 2017 ರಲ್ಲಿ ಆತನೂ ಕೂಡ ಅನೈತಿಕವಾಗಿ ಸಂಬಂಧ ಬೆಳೆಸಿ ಅದು ಸಿ.ಡಿ. ರೂಪದಲ್ಲಿ ಪ್ರಚಾರವಾಗಿ ಇಡೀ ರಾಜ್ಯವು ದಯಾನಂದ ರಾಸಲೀಲೆ ಎಂದು ಮಠದ ಮರ್ಯಾದೆ ಮತ್ತು ವೀರಶೈವ ಲಿಂಗಾಯಿತ ಸಮಾಜದ ಮರ್ಯಾದೆಯನ್ನು ಹಾಳು ಮಾಡಿರುವುದು ತಮಗೆ ತಿಳಿದಿರುವ ವಿಷಯವಾಗಿರುತ್ತದೆ .

2017 ರಲ್ಲಿಯೇ ಈ ಒಂದು ಘಟನೆಯನ್ನು ಖಂಡಿಸಿ ಭಕ್ತಾಧಿಗಳು ಮತ್ತು ಟ್ರಸ್ಟಿನವರಾದ ನಾವುಗಳು ಅಹೋ ರಾತ್ರಿ ಧರಣಿ ಮತ್ತು ಉಪವಾಸ ಸತ್ಯಾಗ್ರಹವನ್ನು ಮಾಡಲಾಗಿ ಮಧ್ಯೆ ಪ್ರವೇಶಿಸಿದ ಮೂಲ ಪೀಠಾಧ್ಯಕ್ಷರಾದ ಶ್ರೀಶೈಲ ಪೀಠದ ಅಧ್ಯಕ್ಷರಾದ ಜಗದ್ಗುರು ಡಾ . ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಅಂದು 5 ಜನರ ಕಮಿಟಿಯನ್ನು ರಚಿಸಿ ಸಮಸ್ಯೆಯನ್ನು ಬಗೆಹರಿಸಲು ನೇಮಕ ಮಾಡಿದ್ದಲ್ಲದೆ ದಯಾನಂದ ಅಲಿಯಾಸ್ ಗುರುನಂಜೇಶ್ವರ ಸ್ವಾಮಿಯನ್ನು ಉತ್ತರಾಧಿಕಾರಿಯ ಪದವಿಯಿಂದ ನಿವೃತ್ತಿಗೊಳಿಸಿರುತ್ತಾರೆ . ಹಾಗೆ ಮುಂದುವರೆದು ದಯಾನಂದ ಅಲಿಯಾಸ್ ಗುರುನಂಜೇಶ್ವರ ಸ್ವಾಮಿ ಮತ್ತು ಅವನ ತಂಡ ಇದನ್ನು ಒಪ್ಪದೆ ಹಾಗೆ ಮುಂದುವರೆದು ಟ್ರಸ್ಟಿನವರಿಗೆ ಮತ್ತು ಭಕ್ತಾಧಿಗಳಿಗೆ ತೊಂದರೆ ನೀಡುತ್ತಿದ್ದಾನೆ . ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ಮಠದ ಆಸ್ತಿಗಳನ್ನು ಕಾನೂನು ಬಾಹಿರವಾಗಿ ಮತ್ತು ನ್ಯಾಯಾಲಯಗಳಲ್ಲಿರುವ ಮೊಕದ್ದಮೆಗಳನ್ನು ನಾನೇ ಸ್ವಾಮಿ ಎಂದು ರೈತರನ್ನು ನಂಬಿಸಿ ಕಾಂಪ್ರಮೈಸ್ ಪಿಟಿಷನ್‌ಗಳನ್ನು ಹಾಕಿಕೊಂಡು ಲಕ್ಷಾಂತರ ರೂಪಾಯಿಗಳನ್ನು ದೋಚಿರುತ್ತಾನೆ . ಇದೇ ಏಚಾರವಾಗಿ ಈ ಒಂದು ಲೂಟಿಕೋರ ಅನೈತಿಕ ಜನರಿಂದ ಮಠವನ್ನು ಕಾಪಾಡಲು ಮಠದ ಆಸ್ತಿಗಳನ್ನು ಕಾಪಾಡಲು ಟ್ರಸ್ಟಿನ ವತಿಯಿಂದ ಓ.ಎಸ್ .246 / 2012-13 ಮತ್ತು ಓ.ಎಸ್ . ನಂ.ಎಲ್.ಎ.ಸಿ .2 / 13 ರಂತೆ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಕೋಟಿ ಕೋಟಿ ಬೆಲೆಬಾಳುವ ಆಸ್ತಿಗಳನ್ನು ಟ್ರಸ್ಟಿನ ವತಿನಿಂದ ಕಾಪಾಡಿಕೊಂಡು ಬಂದಿರುತ್ತೇವೆ . ಮೇಲಿನ ವಿಷಯಗಳನ್ನೆಲ್ಲಾ ಪಂಚ ಪೀಠಾಧ್ಯಕ್ಷರುಗಳಿಗೆ , ಮೂಲ ಪೀಠಾಧ್ಯಕ್ಷರಾದ ಶ್ರೀಶೈಲ ಪೀಠದ * ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾಗೆ ತಿಳಿಸಲಾಗಿ ನಮ್ಮ ಟ್ರಸ್ಟಿನ ವತಿಯಿಂದ ಸುಮಾರು ಸಭೆಗಳನ್ನು ಮಾಡಲಾಗಿ ಯಾವುದೇ ಪ್ರಯೋಜನವಾಗಿರುವುದಿಲ್ಲ . ಸದರಿ ಮಠದ 13 ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಪಟ್ಟದ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳು 2018 ರಲ್ಲಿ ಲಿಂಗಾಯಿತರಾದ ನಂತರ ಸುಮಾರು ಬಾರಿ ವೀರಶೈವ ಮಹಾಸಭೆ ರವರಿಗೆ ಮತ್ತು ಶ್ರೀಶೈಲ ಪೀಠಾಧ್ಯಕ್ಷರುಗಳಿಗೆ ನಮ್ಮ ಮಠಕ್ಕೆ ಉತ್ತಮ ಸುಸಂಸ್ಕೃತ ಪೀಠಾಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಮಾಡಿಕೊಂಡರೂ ಕೂಡ ಯಾವುದೇ ಪ್ರಯೋಜನವಾಗಿರುವುದಿಲ್ಲ . ಇದನ್ನು ನಾವು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇವೆ . ಕಾಮಿಸ್ವಾಮಿ ರಾಸಲೀಲೆಯ ಗುರುವಾಗಿರುವ ದಯಾನಂದ ಅಲಿಯಾಸ್ ಗುರುನಂಜೇಶ್ವರ ಸ್ವಾಮಿ ಈಗಲೂ ಕೂಡ ನಾನೇ ಸ್ವಾಮಿ ಎಂದು ಹೇಳಿಕೊಂಡು ಪ್ರತಿವರ್ಷದ ಪ್ರತೀತಿಯಂತೆ ಹೋಳಿ ಹುಣ್ಣಿಮೆಯ ದಿನದಂದು ನಮ್ಮ ಮಠದ ಅಧೀನ ದೇವಸ್ಥಾನವಾಗಿರುವ ಶ್ರೀ ಚಕ್ರ ರಾಜರಾಜೇಶ್ವರಿ ಸಮೇತ ಚಂದ್ರಮೌಳೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವನ್ನು ಆಚರಿಸುವುದಾಗಿ ಕ್ರಯಪತ್ರಗಳನ್ನು ಹೊರಡಿಸಿ ಕಾನೂನು ಬಾಹಿರವಾಗಿ ಭಕ್ತರ ಮೇಲೆ ದಬ್ಬಾಳಿಕೆ ಮಾಡಿ ಟ್ರಸ್ಟಿನವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಮಠದ ಆಸ್ತಿಯನ್ನು ಒಡೆಯುವ ದೊಡ್ಡ ಷಡ್ಯಂತ್ರವನ್ನು ರಚಿಸಿರುತ್ತಾನೆ ,

ದಯಮಾಡಿ ಶ್ರೀಶೈಲ ಪೀಠಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರವರಿಗೆ ಮನವಿ ಮಾಡುವುದೇನೆಂದರೆ ಆದಷ್ಟೂ ಬೇಗ ನಮ್ಮ ಮಠಕ್ಕೆ ಪೀಠಾಧ್ಯಕ್ಷರನ್ನು ನೇಮಕ ಮಾಡುವಂತೆ ಕೋರಿಕೊಳ್ಳುತ್ತೇವೆ . ಮುಂದುವರೆದು ಹಾಗೆಯೇ ವಿಳಂಬ ದೋರಣೆ ಅನುಸರಿಸಿದರೆ ನಾವು ಶ್ರೀಶೈಲ ಜಗದ್ಗುರುಗಳ ವಿರುದ್ದ ವೀರಶೈವದ ಮಹಾಸಭಾದ ವಿರುದ್ದ ದರಣೆ ಸತ್ಯಾಗ್ರಹ , ಉಪವಾಸ ಸತ್ಯಾಗ್ರಹದಂತಹ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ತಮಗೆ ಎಚ್ಚರಿಸುತ್ತಿದ್ದೇವೆ .

ಅಧ್ಯಕ್ಷರು : ಎಸ್.ಎ.ರುದ್ರಾರಾಧ್ಯ, ಕಾರ್ಯದರ್ಶಿ : ಪಿ.ಶಿವಕುಮಾರ್

ಟ್ರಸ್ಟಿ : ಬಸವರಾಜು , ಟ್ರಸ್ಟಿ : ಮಹೇಶ್.ಬಿ . ಟ್ರಸ್ಟಿ : ಮಲ್ಲೆಶ್.ಸಿ .

City Today News
9341997936

ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರು ( ಪದವೀಧರರಿಗೆ 230 ಹುದ್ದೆಗಳು ) ನೇರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎಫ್.ಎ. / ಬಿ.ವಿ.ಎ . ಪದವಿಯ ಅಂಕಗಳ ಸ್ಪಷ್ಟಿಕರಣವನ್ನು ಹಾಗೂ ವಿಶ್ವವಿದ್ಯಾಲಯದ ಪಟ್ಟಿಯನ್ನು “ ಉನ್ನತ ಶಿಕ್ಷಣ ಇಲಾಖೆ ” ಯಿಂದ ತರಿಸಿಕೊಂಡು ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ಇವರಿಗೆ ಅತಿ ತುರ್ತಾಗಿ ಕಳುಹಿಸಿಕೊಡುವ ಬಗ್ಗೆ ಮನವಿ

ಉಲ್ಲೇಖ : ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗಸೌಧ , ಬೆಂಗಳೂರು . ಇವರ ಅಧಿಸೂಚನೆ ಸಂಖ್ಯೆ : ಪಿ.ಎಸ್.ಸಿ .01 ಆರ್.ಟಿ. ( 4 ) ಬಿ -3 / 2016

ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಮುರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2016 ರಲ್ಲಿ ಚಿತ್ರಕಲಾ ಶಿಕ್ಷಕರು ಪದವೀಧರರಿಗೆ 230 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ( ಕೆ.ಪಿ.ಎಸ್.ಸಿ. ) ಮೂಲಕ ಕರೆಯಲಾಗಿತ್ತು . ಆರ್ಜಿಗಳನ್ನು ಸ್ವೀಕರಿಸಿದ ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಮಾಡಿದ್ದು ತದನಂತರ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಲು ಬಿ.ಎಫ್.ಎ. / ಬಿ.ವಿ.ಎ . ಪದವಿಯ ಅಂಕಗಳ ಸ್ಪಷ್ಟಿಕರಣ ಮತ್ತು ವಿಶ್ವವಿದ್ಯಾಲಯದ ಪಟ್ಟಿಯು ಕರ್ನಾಟಕ ಲೋಕಸೇವಾ ಆಯೋಗ ( ಕೆ.ಪಿ.ಎಸ್.ಸಿ. ) ಬೆಂಗಳೂರು . ಇವರಿಗೆ ಅತಿ ತುರ್ತಾಗಿ ಅವಶ್ಯಕತೆ ಇರುವುದರಿಂದ ಪದವಿಯ ಅಂಕಗಳ ಸ್ಪಷ್ಟಿಕರಣವನ್ನು ಮತ್ತು ವಿಶ್ವವಿದ್ಯಾಲಯದ ಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆ ” ಯಿಂದ ತರಿಸಿಕೊಂಡು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡುವುದರ ಮೂಲಕ ಅರ್ಹ ಬಿ.ಎಫ್.ಎ. / ಬಿ.ವಿ.ಎ . ಪದವೀಧರರಿಗೆ ಉದ್ಯೋಗವಕಾಶಕ್ಕೆ ಅನುವು ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ .

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಸಂಘ, ತುಮಕೂರು

ASSOCIATION OF PROFESSIONAL STREAM STUDENTS IN VISUAL ART ( R ) , KARNATAKA

City Today News
9341997936

ದಿನಾಂಕ 18-03-2021 ರಿಂದ ಸಾರಿಗೆ ನೌಕರರ ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ – ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ

ದಿನಾಂಕ 18-03-2021 ರಿಂದ ಸಾರಿಗೆ ನೌಕರರು ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ ನಡೆಸುವ ಕುರಿತು .

1. 2011 ರಿಂದ 2019-20 ರವರೆಗೆ ರೂ . 3550 / – ಕೋಟಿ ಗಳನ್ನು ಸಾರಿಗೆ ಸಂಸ್ಥೆಗೆ ರಾಜ್ಯ ಸರ್ಕಾರ ನೀಡದೇ ಬಾಕಿ ಉಳಿಸಿಕೊಂಡಿದೆ . ಉಳಿಸಿಕೊಂಡಿರುವ ಮೊತ್ತವನ್ನು ಬಿಡುಗಡೆಗೊಳಿಸಬೇಕು . 2. 2021-22 ಕ ಆಯ – ವ್ಯಯದಲ್ಲಿ ಸಾರಿಗೆ ಕಾರ್ಮಿಕರಿಗೆ 6 ನೇ ವೇತನದ ಸರಿಸಮಾನ ವೇತನ ಪಾವತಿ ಮಾಡಲು ನಾಲ್ಲು ನಿಗಮಗಳ ಕಾರ್ಯಸಾಧ್ಯತೆ ( Viability Fund ) ವ್ಯತ್ಯಾಸದ ಹಣವನ್ನು ಪ್ರತಿ ವರ್ಷ ಆಯ – ವ್ಯಯದಲ್ಲಿಯೇ ಘೋಷಿಸುವಂತೆ ಕ್ರಮಕೈಗೊಂಡು , ಕಾರ್ಮಿಕರ ಮತ್ತು ಸಾರಿಗೆ ಸಂಸ್ಥೆಯನ್ನು ರಕ್ಷಿಸುವ ಹಿತಾಸಕ್ತಿಯಿಂದ ಬೇಡಿಕೆ ಸಲ್ಲಿಸಲಾಗಿತ್ತು . ಅದರೆ ಮಾನ್ಯ ಘನ ಸರ್ಕಾರ ಆಯ – ವ್ಯಯದಲ್ಲಿ ಹಣ ನಿಗಧಿಪಡಿಸದೇ ಕಳೆದ ಸಾಂಗಿಂತ ಕಡಿಮೆ ಹಣ ನೀಡಿ ನೌಕರರಿಗೆ ನಿರಾಶೆಯನ್ನು ಮತ್ತು ಅವಿಶ್ವಾಸ ಮುಡುವಂತೆ ಮಾಡಿರುತ್ತದೆ . 3 , ಸಾರಿಗೆ ಕಾರ್ಮಿಕರ ಬಹುದೊಡ್ಡ ಬೇಡಿಕೆಯಾದ ಕಾಷ್ ಬೇಸ್ ( ಹಣ ರಹಿತ ) ವೈದ್ಯಕೀಯ ಸೌಲಭ್ಯ ಜಾರಿಗೆ ತರಲು ಕೋರಲಾಗಿತ್ತು . ಅದರೆ ಹಳೆಯ ಸುತ್ತೋಲೆಗೆ ಅಲ್ಪಪ್ರಮಾಣದ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ . 4. ನಾಲ್ಕು ನಿಗಮಗಳ ನಿವೃತ್ತ ಸಾರಿಗೆ ನೌಕರರ ಅಂತಿಮ ಪಾವತಿ ಬಾಕಿ ಹಣ ಪಾವತಿಗೆ ದಿನಾಂಕ : 11 12-2020 ರಂದು ಮುಷ್ಕರದ ಸಮಯದಲ್ಲಿ ಮಾನ್ಯ ಉಪಮುಖ್ಯ ಮಂತ್ರಿಯವರು ಹಾಗೂ ಸಾರಿಗೆ ಸಚಿವರು ವಿಕಾಸಸೌಧದಲ್ಲಿ ನಡೆದ ಸಂಸ್ಥೆಯ ನಾಲ್ಕು ನಿಗಮಗಳ ಕಾರ್ಮಿಕ ಸಂಘಟನೆಗಳಗೆ 15 ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದರು ಆದರೆ ಇಲ್ಲಿಯವರೆವಿಗೂ ಈಡೇರಿಸಿರುವುದಿಲ್ಲ . 5. ಆಡಳಿತ ವೆಚ್ಚ ಕಡಿಮೆ ಗೊಳಿಸಿ ಕಾರ್ಮಿಕರಿಗೆ ಸಲ್ಲಬೇಕಿರುವ ಕಾರ್ಯಗಳು ಘಟಕ ಮಟ್ಟದಲ್ಲಿಯೇ ಲಭಿಸಲು ನಾಲ್ಲು ನಿಗಮಗಳಲ್ಲಿ ಏಕರೂಪದ ಆಡಳಿತ ವ್ಯವಸ್ಥೆಯಾದ ಎರಡು ಹಂತದ ಆಡಳಿತ ಜಾರಿಗೆ ಕ್ರಮಕೈಗೊಳ್ಳು ಅಗ್ರಹಿಸಿ .

ದಿನಾಂಕ 18-03-2021 ರಿಂದ ಅನಿರ್ದಿಷ್ಟ ಅವಧಿಗೆ ಸ್ವಾತಂತ್ರ್ಯ ಉದ್ಯಾನ ಬೆಂಗಳೂರಿನಲ್ಲಿ ಸರಣಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ . ನೌಕರರ ಪ್ರಮಾಣಿಕ ಮತ್ತು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮತ್ತು ಆಡಳಿತ ಮಂಡಳಿ ವಿಫಲವಾಗಿರುವುದರಿಂದ ಅನಿವಾಯವಾಗಿ ನೌಕರರ ಹಿತಕಾಪಾಡುವ ದೃಷ್ಟಿಯಲ್ಲಿ ಸಂವಿಧಾನ್ಯಾಕವಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ .

– ಕೆ ರಾಮಕೃಷ್ಣ ಪೂಂಜಾ -ಅಧ್ಯಕ್ಷರು

ಮಂಜುನಾಥ ಫ್ರಸನ್ನ-
ಕಾರ್ಯದರ್ಶಿ

City Today News
9341997936

AITUC ವತಿಯಿಂದ ದಿನಾಂಕ 15.03.2021ರ ಸೋಮವಾರ ಬೆಳ್ಳಿಗೆ 9:30ರ ರಿಂದ ಸಂಜೆ 5 ಗಂಟೆಯ ವರೆಗೆ ರಂದು ರಾಜ್ಯ ಸರ್ಕಾರದ ವಿರುದ್ಧ ಒಂದು ದಿನದ ಪ್ರತಿಭಟನೆ ಮುಷ್ಕರ

ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಾಗದೆ ಮಹಿಳೆಯರಿಗೆ ಅನ್ಯಾಯವಾಗಿದ್ದು ಆಕ್ರೋಶಗೊಂಡಿರುತ್ತಾರೆ ಆದ್ದರಿಂದ
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಫೆಡರೇಷನ್ (AITUC )ವತಿಯಿಂದ ದಿನಾಂಕ 15.03.2021ರ ಸೋಮವಾರ ಬೆಳ್ಳಿಗೆ 9:30ರ ರಿಂದ ಸಂಜೆ 5 ಗಂಟೆಯ ವರೆಗೆ ರಂದು ರಾಜ್ಯ ಸರ್ಕಾರದ ವಿರುದ್ಧ ಒಂದು ದಿನದ ಪ್ರತಿಭಟನೆ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಮುಷ್ಕರಕ್ಕೆ ಬೆಂಗಳೂರು ಜಿಲ್ಲೆಯ ಯಲಹಂಕ ಯೋಜನೆ, ಬನಶಂಕರಿ ಯೋಜನೆ, ಕೇಂದ್ರ ಯೋಜನೆ, ರಾಜ್ಯ ಯೋಜನೆಯ ಎಲ್ಲಾ ಕಾರ್ಯಕರ್ತೆಯರು ಬಜೆಟ್ ವಿರೋಧಿ ಹೋರಾಟಕ್ಕೆ ಊಟ, ನೀರಿನ ಸಮೇತ್ತ ಸಮಯಕ್ಕೆ ಸರಿಯಾಗಿ ಸಮವಸ್ರ್ತ ಧರಿಸಿಕೊಂಡು ಬರಬೇಕು ಹಾಗೂ ಸಹಾಯಕಿಯರು ಕೇಂದ್ರ ತೆರೆಯಬೇಂದು ವಿನಂತಿಮಾಡುತ್ತೇನೆ. ವೃತ್ತದ ಲೀಡರ್ ಗಳು ಸಮಯ ಕಡಿಮೆ ಇರುವ ಕಾರಣ ತಾವೆಲ್ಲಾರು ತಪ್ಪದೆ ನಿಮ್ಮ ನಿಮ್ಮ ವೃತ್ತದ ಕಾರ್ಯಕರ್ತರಿಗೆ ವಿಷಯ ತಿಳಿಸಿ ಪ್ರತಿಭಟನಾ ದಿನದಂದು ಎಲ್ಲರೂ ಭಾಗವಹಿಸಿ ಯಶಸ್ವಿಯಾಗಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಸ್ಥಳ ಮೌರ್ಯ ಜಂಕ್ಷನ್( ಆನಂದ್ ರಾವ್ ವೃತ್ತದ ಬಳಿ )


-ಎಂ ಜಯಮ್ಮ ಪ್ರಧಾನ ಕಾರ್ಯದರ್ಶಿ – ಎ ಐ ಟಿ ಯು ಸಿ

City Today News
9341997936

ಕೆ ಆರ್ ಪುರ ಗಂಗಶೆಟ್ಟಿ ಕೆರೆ ಒತ್ತುವರಿ: ಕೆರೆ ಇಂದು ಕಳ್ಳಕಾಕರ ಹಾವಳಿಯಿಂದ ಅಳಿವಿನ ಹಂಚಿನಲ್ಲಿದೆ

ಕೆ. ಆರ್. ಪುರ ಗಂಗಶೆಟ್ಟಿ ಕೆರೆ ಸರ್ವೇ ನಂ ೫೮ ಪೈಕಿ ಅಂದಾಜು 22 ಎಕರೆ ೩೮ ಗುಂಟೆ ಜಮೀನಿನ ಒತ್ತುವರಿ. ಇತಿಹಾಸ ಪ್ರಸಿದ್ದಿ ಕೆರೆಗಳಲ್ಲಿ ಒಂದಾದ ಕೆಆರ್ ಪುರದ ಗಂಗಶೆಟ್ಟಿ ಕೆರೆ ಇಂದು ಕಳ್ಳಕಾಕರ ಹಾವಳಿಯಿಂದ ಅಳಿವಿನ ಹಂಚಿನಲ್ಲಿದೆ ಇದನ್ನು ಒತ್ತುವರಿ ಮಾಡಿಕೊಂಡು ಕೆಲ ಪ್ರಭಾವಿ ರಾಜಕಾರಣಿಗಳ ಅಧಿಕಾರದ ದುರ್ಬಳಕೆಯಿಂದ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು ಬಡಾವಣೆ ಕಾಮಾಗಾರಿ ನಡೆಸುತ್ತಿದ್ದಾರೆ . ಕೆರೆಗಳು ರೈತರ ಜೀವನಾಡಿಯಾಗಿದ್ದು ಇಂದು ಅವನತಿಯತ್ತ ಸಾಗಿದೆ ಕುಡಿಯುವ ನೀರಿಗು ಸಹ ಹಾಹಕಾರ ಉಂಟಾಗಿದೆ . ಆದುದರಿಂದ ಸರ್ಕಾರಿ ಜಾಗವನ್ನು ಸೂಕ್ತವಾಗಿ ಸರ್ವೇ ನಡೆಸಿ ಕೆರೆ ಜಾಗವನ್ನು ಕೆರೆಗೆ ಮೀಸಲಿಡಲು ಹಾಗೂ ಇಂತಹ ಕೆಲ ಭೂ ಗಳರಿಗೆ ಕಾನೂನು ಪ್ರಕಾರ ತಕ್ಕ ಶಾಸ್ತಿ ಮಾಡಲು ಸಮಸ್ತ ಕೆ ಆರ್ ಪುರದ ನಾಗರೀಕರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೆವೆ . “ಕೆರೆಗಳ ರಕ್ಷಣೆ ನಮ್ಮೆಲ್ಲರ ಹೊಣೆ “

ಲಕ್ಷ್ಮಣ್ . ಎಲ್.ಎಸ್
ಕರ್ನಾಟಕ ರಾಜ್ಯಾಧ್ಯಕ್ಷರು
ರತ್ನ ಭಾರತ ರೈತ ಸಮಾಜ

City Today News
9341997936