ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಹಾಗೂ ಮಾರ್ಗದರ್ಶಿ ಎಸ್ ಆರ್ ಹಿರೇಮಠ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಜ ಪರಿವರ್ತನಾ ಸಮುದಾಯದ ಈ ಹೋರಾಟವನ್ನು ಬೆಂಬಲಿಸುವಂತೆ ಕೇಳಿಕೊಳ್ಳಲಿದ್ದಾರೆ

ಜಿಂದಲ್ ಕಂಪೆನಿಗೆ 3 , 666 ಎಕರೆ ಭೂಮಿಯನ್ನು ಶುದ್ದ ಕ್ರಯ ಮಾಡಿ ಕೊಡಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಇದೀಗ ಬಹು ದೊಡ್ಡ ವಿವಾದವಾಗಿದೆ . ಅಕ್ರಮ ಗಣಿಗಾರಿಕೆ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ( SPS ) ಕಳೆದೊಂದು ದಶಕದಿಂದ ನಡೆಸುತ್ತಿರುವ ಹೋರಾಟದ ಫಲವಾಗಿಯೇ ಇಂದು ರಾಜ್ಯ ಮತ್ತು ದೇಶದ ಜನ ಕರ್ನಾಟಕದಲ್ಲಿನ ಅಕ್ರಮಗಣಿಗಾರಿಕೆ ಮತ್ತು ಅದರ ಸುತ್ತಲಿನ ವಿವಾದವನ್ನು ತಿಳಿದುಕೊಳ್ಳಲು ಮತ್ತು ಹೋರಾಟವನ್ನು ಬೆಂಬಲಿಸಲು ಸಾಧ್ಯವಾಗಿದೆ . ಹಾಗಾಗಿಯೇ , ಜನಾಭಿಪ್ರಾಯವನ್ನು ಮನಗಂಡು , ಸಮಾಜ ಪರಿವರ್ತನಾ ಸಮುದಾಯ ಇದೀಗ ಜಿಂದಲ್ ಕಂಪನಿಗೆ ಭಾರೀ ಲಾಭ ಮಾಡಿಕೊಡುವ ಸರ್ಕಾರದ ಈ ನಿರ್ಧಾರದ ವಿರುದ್ದ ಹೋರಾಟ ನಡೆಸಲು ನಿರ್ಧರಿಸಿದೆ . ಸುಪ್ರೀಂ ಕೋರ್ಟ್ ನ | ಹಿಂದಿನ ಅನೇಕ ಆದೇಶಗಳನ್ನು ಗಮನದಲ್ಲಿರಿಸಿದರೆ , ಸರ್ಕಾರದ ನಿರ್ಧಾರ ಮೇಲ್ನೋಟಕ್ಕೆ ಪ್ರಶಸ್ತ ಎನಿಸುತ್ತಿಲ್ಲ . ಈ ಸಂಬಂಧ ಸಮಾಜ ಪರಿವರ್ತನಾ ಸಮುದಾಯ ಕಲೆ ಹಾಕಿರುವ ಕೆಲವು ದಾಖಲೆಗಳನ್ನು ಗಮನಿಸಿದರೆ , ಸರ್ಕಾರದ ನಿರ್ಧಾರ ರಾಜ್ಯದ ಹಿತ ದೃಷ್ಟಿಯಿಂದ ಸೂಕ್ತ ಎನಿಸುತ್ತಿಲ್ಲ . ಈ ನಿಟ್ಟಿನಲ್ಲಿ , ಸಮಾಜ ಪರಿವರ್ತನಾ ಸಮುದಾಯ ಈ ಹೋರಾಟದಲ್ಲಿ ಎಲ್ಲಾ ರೀತಿಯ ಸಂಘ – ಸಂಸ್ಥೆಗಳ ಹಾಗೂ ರಾಜಕೀಯ ಪಕ್ಷಗಳ ಬೆಂಬಲ ನಿರೀಕ್ಷಿಸುತ್ತದೆ . ಕೆಲವೊಂದು ರಾಜಕೀಯ ಪಕ್ಷಗಳು ಹಾಗೂ ಸಂಘ – ಸಂಸ್ಥೆಗಳು ಈಗಾಗಲೇ ಸರ್ಕಾರದ ಈ ನಿರ್ಧಾರದ ವಿರುದ್ದ ಆಕ್ಷೇಪ ವ್ಯಕ್ತಪಡಿಸಿವೆ . ಸಮಾಜ ಪರಿವರ್ತನಾ ಸಮುದಾಯ ಈಗಾಗಲೇ ಈ ಬಗ್ಗೆ ಗದಗ ಶಾಸಕ ಎಚ್ ಕೆ ಪಾಟೀಲ್ ಅವರನ್ನು ಭೇಟಿಯಾಗಿದೆ . ಪಾಟೀಲ್ ಅವರು ಅಕ್ರಮ ಗಣಿಗಾರಿಕೆಯ ಮೇಲಿನ ಲೋಕಾಯುಕ್ತ ವರದಿ ಅನುಷ್ಠಾನ ಸಂಬಂಧ ರಚಿತವಾದ ಸಚಿವ ಸಂಪುಟ ಉಪ ಸಮಿತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ ಹಾಗೂ ತಮ್ಮ ಆಕ್ಷೇಪವನ್ನು ಬಹಿರಂಗಗೊಳಿಸಿರುತ್ತಾರೆ . ಸಿಟಿಜೆನ್ ಫಾರ್ ಡೆಮಾಕ್ರೆಸಿ ( ಕರ್ನಾಟಕ ಘಟಕ ) ಕೂಡ ಈ ಉದ್ದೇಶದಲ್ಲಿ ಕೈ ಜೋಡಿಸಲು ನಿರ್ಧರಿಸಿದೆ . ಈ ಹೋರಾಟದ ಮುಂದಿನ ಹೆಜ್ಜೆಯಾಗಿ ಸಮಾಜ ಪರಿವರ್ತನಾ ಸಮುದಾಯ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ . ಯಡಿಯೂರಪ್ಪನವರು ಜಿಂದಲ್ ಗೆ ಭೂಮಿ ಮಾರುವ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ . ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಹಾಗೂ ಮಾರ್ಗದರ್ಶಿ ಎಸ್ ಆರ್ ಹಿರೇಮಠ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಜ ಪರಿವರ್ತನಾ ಸಮುದಾಯದ ಈ ಹೋರಾಟವನ್ನು ಬೆಂಬಲಿಸುವಂತೆ ಕೇಳಿಕೊಳ್ಳಲಿದ್ದಾರೆ .

City Today News

(citytoday.media)

9341997936

ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಅಳವಡಿಸದೆ ಅಗೌರವ, ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಎಚ್ಚರಿಕೆ

ಕರ್ನಾಟಕ ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆಯೇ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣರವರ ಭಾವಚಿತ್ರವನ್ನು ಅಳವಡಿಸಲು ಅಧಿಕೃತ ಆದೇಶ ಹೊರಡಿಸಿದ್ದರೂ ಇದುವರೆಗೂ ಅದು ಕಾರ್ಯಗತವಾಗಿಲ್ಲ . ಹಾಗಾಗಿ ಮೇ 7ರಂದು ಆಚರಣೆಯಾಗುತ್ತಿರುವ ಬಸವಜಯಂತಿಗೂ ಮುನ್ನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸದಿದ್ದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ . ಜಗದ್ಗುರು ಬಸವಣ್ಣನವರು ಯಾವುದೇ ಒಂದು ಧರ್ಮ , ಜಾತಿ , ವರ್ಗಕ್ಕೆ ಸೀಮಿತವಾದವರಲ್ಲ . 12ನೇ ಶತಮಾನದಲ್ಲಿಯೇ ಜಾತೀಯತೆ , ಕಂದಾಚಾರದ ವಿರುದ್ದ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು . ಜತೆಗೆ ಸಾಮಾಜಿಕ , ಆರ್ಥಿಕ ಸಮಾನತೆಗಾಗಿ ಅವಿರತ ಶ್ರಮಿಸಿ ಸಾಮಾಜಿಕ ಸುಧಾರಣೆ ತಂದ ಹರಿಕಾರರು . ಅಂತಹ ಮಹಾನುಭಾವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು 21ನೇ ಶತಮಾನವೇ ಬರಬೇಕಾಯಿತು .

ಬಸವಣ್ಣನವರ ನಂಬಿದ್ದ ತತ್ವ – ಸಿದ್ದಾಂತ ಹಾಗೂ ಆದರ್ಶಗಳ ಅಳವಡಿಕೆ ಇಂದಿನ ದಿನಮಾನಗಳಲ್ಲಿ ಸಮಾಜಕ್ಕೆ ತುರ್ತು ಅಗತ್ಯ ಮತ್ತು ಅನಿವಾರ್ಯ ಎನಿಸಿದೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು , ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸುವಂತೆ ನಿರ್ಧರಿಸಿ ಸಚಿವಸಂಪುಟ ನಿರ್ಣಯ ಕೈಗೊಂಡು 2017ರ ಏಪ್ರಿಲ್ 29 ರಂದು ಸರ್ಕಾರಿ ಆದೇಶ ಹೊರಡಿಸಿದ್ದರು . ಅಲ್ಲದೆ ಬಸವಣ್ಣನವರ ಭಾವಚಿತ್ರದ ಮಾದರಿಯನ್ನೂ ಸರ್ಕಾರವೇ ಅಂತಿಮಗೊಳಿಸಿತ್ತು .

ಇದಕ್ಕೆ ಸರ್ವರೂ ಸ್ವಾಗತಿಸಿ ಸರ್ಕಾರವನ್ನು ಪ್ರಶಂಶಿಸಿದ್ದರು , ವೀರಶೈವ ಲಿಂಗಾಯತ ಸಮುದಾಯ ಗೌರವ ಮತ್ತು ಹೆಮ್ಮೆಯಿಂದ ಇದನ್ನು ಸ್ವಾಗತಿಸಿತ್ತು . ತ್ವರಿತ ಅನುಷ್ಟಾನದ ಆಶಯವನ್ನೂ ಹೊಂದಿತ್ತು . ಆದರೆ ದುರಾದೃಷ್ಟವಶಾತ್ ಜಾರಿಗೊಳಿಸಿ 2 ವರ್ಷ ಕಳೆದಿದ್ದರೂ , ಇಲ್ಲಿಯವರೆಗೆ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವನ್ನು ಅಳವಡಿಸದೆ ಬಸವಣ್ಣರವರಿಗೆ ಸರ್ಕಾರವೇ ಅಗೌರವ ತೋರಿದೆ . ಅಲ್ಲದೆ , ಸರ್ಕಾರಿ ಆದೇಶ ಜಾರಿಗೆ ತರುವಲ್ಲಿ ಆಡಳಿತಯಂತ್ರವೇ ವಿಫಲವಾಗಿದೆ . ಸರ್ಕಾರದ ಇಂತಹ ನಿರ್ಲಕ್ಷ್ಯ ಧೋರಣೆಯನ್ನು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ . ಮೇ . 7ರಂದು ನಡೆಯಲಿರುವ ಬಸವ ಜಯಂತಿಯ ಒಳಗಾಗಿ , ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಅಳವಡಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು . ಇಲ್ಲದಿದ್ದಲ್ಲಿ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಎಚ್ಚರಿಸಿದ್ದಾರೆ .

-ಪ್ರದೀಪ ಕಂಕಣವಾಡಿ ರಾಷ್ಟ್ರೀಯ ಅಧ್ಯಕ್ಷರು

City Today News

(citytoday.media)

9341997936

ಕರಾಳ ಭೂಸ್ವಾಧೀನ ಕರ್ನಾಟಕ ತಿದ್ದುಪಡಿ ಮಸೂದೆ – 2019 ಪ್ರತಿಯನ್ನು ಸುಟ್ಟು 02 . 03 . 2019 ರಂದು ರಾಜ್ಯದಾದ್ಯಂತ ಪ್ರತಿಭಟನೆ

ಕರಾಳ ಭೂಸ್ವಾಧೀನ ಕರ್ನಾಟಕ ತಿದ್ದುಪಡಿ ಮಸೂದೆ – 2019 ಪ್ರತಿಯನ್ನು ಸುಟ್ಟು 02 . 03 . 2019 ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಕರ್ನಾಟಕ ಪ್ರಾಂತ

ರೈತ ಸಂಘದ ಕರೆ ಸಂಗಾತಿಗಳೇ , ಕಳೆದ ಫೆಬ್ರವರಿ 06 – 14 , 2019 ರಂದು ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಏನೊಂದು ಚರ್ಚೆ ಮಾಡದೇ , ದೊಡ್ಡ ಬಂಡವಾಳದಾರರು , ಬಹುರಾಷ್ಟ್ರೀಯ ಸಂಸ್ಥೆಗಳ ಲೂಟಿಗೆ ನೆರವಾಗುವ “ ಭೂ ಸ್ವಾಧೀನ , ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ( ಕರ್ನಾಟಕ ತಿದ್ದುಪಡಿ ) ಮಸೂದೆ – 2019 ” ನ್ನು ಅಂಗೀಕರಿಸಿದೆ . – ಬಿಜೆಪಿಯ ದುಷ್ಕೃತ್ಯದಿಂದುಂಟಾದ ಪರಿಸ್ಥಿತಿಯನ್ನು ವಿಧಾನಸಭೆಯಲ್ಲಿ ದುರುಪಯೋಗ ಪಡಿಸಿಕೊಂಡು ಈ ಮಸೂದೆ ಅಂಗೀಕರಿಸಿದೆ . ರೈತರ ಮತ್ತು ರೈತ ಸಂಘಗಳ ಜೊತೆ ಚರ್ಚೆ ನಡೆಸುವ ಸೌಜನ್ಯವನ್ನು ಸರಕಾರ ತೋರಲಿಲ್ಲ . ಇದೊಂದು ರೈತ ವಿರೋಧಿಯಾದ ಕರಾಳ ತಿದ್ದುಪಡಿಯಾಗಿದೆ . ಇದು ರೈತರ ಜಮೀನುಗಳನ್ನು ಯಾವುದೇ ಒಪ್ಪಿಗೆಯಿಲ್ಲದೇ , ಭೂಸ್ವಾಧೀನ ದಿಂದ ಸಮಾಜ ಹಾಗೂ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನಾಗಲೀ ಮತ್ತು ದೇಶದ , ರಾಜ್ಯದ ಆಹಾರ ಭದ್ರತೆ ಹಾಗೂ ಆಹಾರದ ಸ್ವಾವಲಂಬನೆಯ ಮೇಲಾಗುವ ದುಷ್ಪರಿಣಾಮಗಳನ್ನಾಗಲೀ ಪರಿಗಣಿಸದೇ , ಪುನರ್ವಸತಿ ಕ್ರಮಗಳನ್ನು ದುರ್ಬಲಗೊಳಿಸುವ ಹಾಗೂ ಬೇಕಾ ಬಿಟ್ಟೆ ದರಕ್ಕೆ ಸ್ವಾಧೀನ ಮಾಡುವ ದುರುದೇಶವನ್ನು ಹೊಂದಿದೆ . ಇದು ಈ ಹಿಂದೆ ಕೇಂದ್ರದ ನರೇಂದ್ರ ಮೋದಿ ಸರಕಾರ ಮೂರು ಬಾರಿ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲು ಯತ್ನಿಸಿದುದ್ದರ ಪಡಿಯಚ್ಚಾಗಿದೆ . * ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೂಲ ಸೌಕರ್ಯದ ಹೆಸರಿನಲ್ಲಿ ಮತ್ತು ಕೈಗಾರಿಕಾ ಕಾರಿಡಾರ್ ಹೆಸರಿನಲ್ಲಿ ಕೋಟಿ ಕೋಟಿ ಎಕರೆ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಲಿರುವ ಈ ಸಂದರ್ಭದಲ್ಲಿ ಇಂತಹ ಕಾಯೆಗಳ ಪರಿಣಾಮವು ವ್ಯಾಪಕವಾಗಿರಲಿದೆ . ಆದರಿಂದ ರೈತ ವಿರೋಧಿ ಈ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ವಾಪಾಸು ಪಡೆಯುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಎಲ್ಲಾ ತಾಲೂಕಾ ಕೇಂದ್ರಗಳಲ್ಲಿ ಸದರಿ ಕರಾಳ ತಿದ್ದುಪಡಿ ಕಾಯ್ದೆಯ ಪ್ರತಿಯನ್ನು ಸುಡುವ ಮೂಲಕ 02 . 03 . 2019 ರಂದು ಪ್ರತಿಭಟನೆ ನಡೆಸಿ , ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಕರ್ನಾಟಕ ಪ್ರಾಂತ ರೈತ ಸಂಘದ ರಾಜ ಸಮಿತಿ , ಎಲ್ಲಾ ಜಿಲ್ಲಾ ಹಾಗೂ ತಾಲೂಕಾ ಘಟಕಗಳಿಗೆ ಮತ್ತು ರಾಜ್ಯ ರೈತರಿಗೆ ಕರೆ ನೀಡುತ್ತದೆ , ಆ ಪಕಾತೀತವಾದ ಹೋರಾಟದಲ್ಲಿ ರಾಜ್ಯದ ರೈತರು ಹಾಗೂ ನಾಗರೀಕ ಬಂಧುಗಳು ದೊಡ್ಡ ರೀತಿಯಲಿ ಭಾಗವಹಿಸಬೇಕೆಂದು ಕೋರುತ್ತೇವೆ .

ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ , ಬೆಂಗಳೂರು ,

City Today News

(citytoday.media)

9341997936

ಸ್ವಾಧೀನ ಪುನರ್ವಸತಿ ಕಾಯ್ದೆ 2019 ಕಾಯ್ದೆಯ ಕರಾಳ ಮುಖ

ದಿನಾಂಕ 25 / 02 / 2019ರ

ಪೂಜಾವಾಣಿ ಪ್ರಕಟಣೆಯನ್ನು ಆಧರಿಸಿ ಭೂ ಸ್ವಾಧೀನ ತಿದ್ದುಪಡಿ ಮಸೂದೆ 2019 ಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಅನುಮೋದನೆ ಪಡೆದಿದ್ದು ರಾಜೀಪಾಲರ ಅಂಗಿಕಾರಬಾಕಿ ಇದೆ . ರಾಜ್ಯಪಾಲರ ಅಂಕಿತ ಬಿದ್ದ ತಕ್ಷಣ ಜಾರಿಗೆ ಬರುತ್ತದೆ . ಈ ಕಾಯ್ದೆಯಿಂದಾಗಿ ಸರ್ಕಾರದ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರ ಬದುಕು ಮೂರ ಬಟ್ಟೆಯಾಗಿರುತ್ತದೆ .

ಕಾಯೆಯ ಉದ್ದೇಶ

ಸರ್ಕಾರದ ಯೋಜನೆಗಳಿಗೆ ಭೂಮಿಯನ್ನು ಕಳೆದುಕೊಳ್ಳುವ ರೈತರ ಪುನರ್ವಸತಿ ಮತ್ತು ಅವರ ಪುನರ್‌ಸ್ಥಾಪನೆಯಾಗಿರುತ್ತದೆ . ಆದರೆ 2019ರ ಈ ಕಾಯ್ದೆ ಜಾರಿಗೆ ಬಂದರೆ ರೈತ ಪುನರ್‌ಸ್ಥಾಪನೆಯಾಗುವ ಬದಲು ರೈತನ ಬದುಕು ಬೀದಿಗೆ ಬರುತ್ತದೆ .

ಈ ಹಿಂದೆ ಬ್ರಿಟಿಷರ 1838 ರ ಲ್ಯಾಂಡ್ ಅಕ್ಲೀಜೆಷನ್ ಆಕ್ಸ್ ಪ್ರಕಾರ ಭೂಮಿಯನು ವಶಪಡಿಸಿಕೊಂಡು ಕಿಲುಬು ಕಾಸಿನ ಪರಿಹಾರವನ್ನು ನೀಡುತ್ತಿದ್ದ ಪರಿಸ್ಥಿತಿ ಇದ್ದಂತ ಸಮಯದಲ್ಲಿ 2014 ರಲ್ಲಿ ಯು . ಪಿ . ಎ ಸರ್ಕಾರವು ಕೇಂದ್ರದಲ್ಲಿ ಲ್ಯಾಂಡ್ ಅಕ್ಲೀಜೆಷನ್ ಬಿಲ್ಲನ್ನು ತಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ರೂಪಿಸಿದರು . 2015 ರಲ್ಲ ಎನ್ . ಡಿ . ಎ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿಸಲು ಹೊರಟಾಗ ವಿರೋದ ಪಕ್ಷಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು .

ಕರ್ನಾಟಕದಲ್ಲಿ ರೈತಪರ ಸರ್ಕಾರವೆಂದು ಹೇಳಿಕೊಂಡು ನಾವು ಮಣ್ಣಿನ ಮಕ್ಕಳೆಂದು ರೈತರ ಭೂಮಿಯಲ್ಲಿ ಪ್ರಚಾರಕ್ಕೋಸ್ಕರ ಪೈರು ನಾಟಿಮಾಡಿ ಪೋಸ್ ಕೊಡುವ ಮುಖ್ಯಮಂತ್ರಿಗಳು 2019 ರ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದು ನಿಜವಾದ ಮಣ್ಣಿನ ಮಕ್ಕಳನ್ನು ಗುಂಡಿಯಲ್ಲಿ ಹಾಕಿ ಗೋರಿ ಕಟ್ಟುವಂತಹ ಕೆಲಸಕ್ಕೆ ಮುಂದಾಗಿದ್ದಾರೆ . ಈ ಮಸೂದೆಯಲ್ಲಿ ಕಾಲ೦ 15 ( ಎ ) ಯನ್ನು ಸೇರಿಸಲಾಗಿದ್ದು ಇದರಿಂದ ಕೇವಲ ರಿಯಲ್ ಎಸ್ಟೇಟ್ ಕುಳಗಳಗೆ ಅನುಕೂಲವಾಗುವ ದುರುದ್ದೇಶ ಹೊಂದಿದೆ .

ಅಲ್ಲದೇ ರೈತರಿಗೆ ನೀಡುವ ಪರಿಹಾರದಲ್ಲಿ ಕಾಲಂ 23 ( ಎ ) ಯನ್ನು ಸೇರಿಸಿ ರೈತರಿಗೆ ಬಾರಿ ಅನ್ಯಾಯವನ್ನು ಎಸಗಿದ್ದಾರೆ , ರೈತನಿಗೆ ವ್ಯವಸಾಯದ ಹೊರತು ಬೇರೆ ಕೆಲಸ ಗೊತ್ತಿಲ್ಲದೇ ಇರುವುದರಿಂದ ಅವನು ಮತ್ತೆ ಭೂಮಿಯನ್ನು ಕೊಳ್ಳಬೇಕಾಗುತ್ತದೆ . ಅದರೆ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಇವರ ಘೋಷಣೆ ಮಾಡಲಿರುವ ಪರಿಹಾರದಲ್ಲಿ ಭೂಮಿ ಕೊಳ್ಳುವುದು ಕಷ್ಟ ಸಾಧ್ಯವಾಗಿದೆ . ಏಕೆಂದರೆ ಭೂಮಿಯ ನೋಂದಣಾದರಕ್ಕೂ ನಿಜ ಮಾರುಕಟ್ಟೆ ಬೆಲೆಗೂ ಭಾರಿ ವ್ಯತ್ಯಾಸವಿರುವುದು ಈ ಕಾಯ್ದೆ ರೂಪಿಸಿರುವಂತಹ ನಮ್ಮನ್ನ ಆಳುವವರಿಗೂ ತಿಳಿದಿದೆ . ಎಕೆಂದರೆ ಅನೇಕ ರಾಜಕಾರಣಿಗಳು ರಿಯಲ್ ಎಸ್ಟೇಟ್ ದಂದೆಗಳನ್ನು ನಡೆಸುವಂತಹವರೆ ಆಗಿದ್ದಾರೆ .

ಆನೇಕಲ್ ತಾಲ್ಲೂಕಿನ ಸೂರ್ಯನಗರ 4ನೇ ಹಂತಕ್ಕೆ ಕರ್ನಾಟಕ ಗೃಹಮಂಡಳಿಯು ಭೂಸ್ವಾಧೀನ ಪ್ರಕ್ರಿಯೆಯನ್ನು 2013 ರಲ್ಲಿ ಹೊರಡಿಸಿದ್ದು ಆ ಲಾಗಾಯ್ತಿನಿಂದ ಈವರೆವಿಗೂ ನೋಂದಣಾಶುಲ್ಕವನ್ನು ಸರಿಯಾದ ರೀತಿಯಲ್ಲಿ ನಿಗದಿ ಪಡಿಸಿರುವುದಿಲ್ಲ . ಅಂತಹದರಲ್ಲಿ ಕಸಬಾ ಹೋಬಳಿಯ ಇಂಢವಾಡಿ , ಬಗ್ಗನದೊಡ್ಡಿ , ಜಿಗಣಿ ಹೋಬಳಿಯ ಕಾಡುಜಕ್ಕನಹಳ್ಳಿ , ಬೊಮ್ಯಂಡಹಳ್ಳಿ , ಕೋನಸಂದ್ರ ಗ್ರಾಮಗಳ ಒಟ್ಟು 1938 ಎಕರೆ 13 ಗುಂಟೆ ಜಮೀನನ್ನು ವಶಪಡಿಸಿಕೊಂಡು ರೈತರ ಪರಿಸ್ಥಿತಿಯನ್ನು ತ್ರಿಶಂಕು ಸ್ಥಿತಿಯಲ್ಲಿ ಇದುವರೆವಿಗೂ ನಿಲ್ಲಿಸಿದ್ದರು . ಆದರೆ ಈಗ ಇದ್ದಕ್ಕಿದ್ದಂತೆ ಮಾನ್ಯ ಕುಮಾರಸ್ವಾಮಿಯವರ ಕಿಚಡಿ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ನೇತು ಹಾಕಿ ಜೀವಂತವಾಗಿ ಚರ್ಮ ಸುಲಿಯಲು ಮುಂದಾಗಿದ್ದಾರೆ . ಈ ಐದು ಗ್ರಾಮಗಳ ಸುತ್ತಮುತ್ತಲ ಭೂಮಿಯ ಬೆಲೆ ಎಕರೆ ಒಂದಕ್ಕೆ 1 . 5 ಕೋಟಿಗೂ ಅಧಿಕವಾಗಿದ್ದು . ಆದರೆ ನೋಂದಣಾ ಮಾರ್ಗ ಸೂಚಿ ಬೆಲೆಯು ಕೇವಲ 18 ಲಕ್ಷದಿಂದ 50 ಲಕ್ಷದ ಅಸುಪಾಸಿನಲ್ಲಿದೆ . ಇದರಿಂದಾಗಿ ರೈತರಿಗೆ ಬಾರಿ ಅನ್ಯಾಯವಾಗುತ್ತದೆ , ಅದ್ದರಿಂದ 2019ರ ಈ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ . ಇಲ್ಲದೇ ಇರುವ ಪಕ್ಷದಲ್ಲಿ ರಾಜ್ಯಾದ್ಯಂತ ರೈತರ ಹೋರಾಟ ಪ್ರಾರಂಭಿಸಬೇಕಾಗುತ್ತದೆ .

ಹಕ್ಕೊತ್ತಾಯಗಳು

1 , ಕರ್ನಾಟಕ ಭೂಸ್ವಾಧೀನ ತಿದ್ದುಪಡಿ ಮಸೂದೆ 2019ನ್ನು ವಾಪಸ್ಸು ಪಡೆಯಬೇಕು . ರೈತರಿಗೆ 2014 ರ ಯು . ಪಿ . ಎ ಸರ್ಕಾರದ ಮಸೂದೆಯ ಪ್ರಕಾರ ಪರಿಹಾರ ನೀಡಬೇಕು .

2 . ಆನೇಕಲ್ ತಾಲ್ಲೂಕಿನ ಸೂರ್ಯನಗರದ 4ನೇ ಹಂತಕ್ಕೆ 2013ರಲ್ಲಿ ಸ್ವಾಧೀನಪಡಿಸಿಕೊಂಡು ಇಲ್ಲಿಯವರೆಗೂ ನೆನೆಗುದಿಗೆ ಬಿದಿದ್ದ ಯೋಜನೆಗೆ ತ್ವರಿತಗತಿಯಲ್ಲಿ ಚಾಲನೆಕೊಟ್ಟು ಈಗಿನ ಮಾರುಕಟ್ಟೆ ದರದಲ್ಲಿ ನಾಲ್ಕು ಪಟ್ಟು ಪರಿಹಾರವನ್ನು ನೀಡಬೇಕು .

3 , ಜಂಟಿ ಅಭಿವೃದ್ದಿಗೆ ಭೂಮಿ ನೀಡುವ ರೈತರುಗಳಿಗೆ ಶೇ 50ರ ದರದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡುವುದಲ್ಲದೇ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸುವಂತಹ ಒಂದು ಅಶ್ವಾಸನೆಯನ್ನ ನೀಡುವಂತೆ ಕ್ರಮವಹಿಸುವುದು ತಪ್ಪಿದಲ್ಲಿ ಅದಕ್ಕೆ ನಷ್ಟ ಪರಿಹಾರ ಕೊಡಬೇಕು .

City Today News

(citytoday.media)

9341997936

ದೇಶಾಧ್ಯಾಂತ ಪರಿಶಿಷ್ಟ ಜಾತಿ , ಪರಿಶಿಷ್ಠ ವರ್ಗದ ಜನರ ಮೇಲೆ ಮಿತಿಮೀರಿದ ದೌರ್ಜನ್ಯಗಳು ಅಲ್ಪಸಂಖ್ಯಾತ ಮುಸ್ಲಿಮರನ್ನು ಗೋಹತ್ಯ ನೆಪದಲ್ಲಿ ಕೊಲೆ , ದೌರ್ಜನ್ಯ

ದಿನಾಂಕ : 14 – 02 – 2019

ಅಖಿಲ ಭಾರತ ಪರಿಶಿಷ್ಟ ಜಾತಿ , ಪಂಗಡ , ಹಿಂದುಳಿದ ಮತ್ತು ಅಲ್ಪಸಂಖ್ಯಾತ , ಕಾರ್ಮಿಕ ಕಲ್ಯಾಣಗಳ ಒಕ್ಕೂಟ , ನವದೆಹಲಿ , ದಿನಾಂಕ : 31 03 – 2019 ರಂದು ಮದ್ಯಾಹ್ನ ನವದೆಹಲಿಯ ಜೆಂತರ್ ಮಂತರ್ ನಲ್ಲ ಮಧ್ಯಾಹ್ನ : 3 ಗಂಟೆಯಿಂದ ಪ್ರತಿಭಟನ ಧರಣಿ ಏರ್ಪಡಿಸಲಾಗಿದೆ . ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಆರ್ . ಎನ್ . ಚಂಡೋಲಿಯ , ಮಹಾಪ್ರಧಾನ ಕಾರ್ಯದರ್ಶಿ , ಕೆ . ನಾಗೇಶ್ವರ ರಾವ್ , ಕೋಷಾಧ್ಯಕ್ಷ , ಎಂ . ಎಸ್ . ಮೀನ ರವರು ದರಣಿಗೆ ಕಾರ್ಯಕರ್ತರನ್ನು ಸಂಘಟಿಸಲು ರಾಷ್ಟ್ರಾಧ್ಯಾಂತ ಎಲ್ಲಾ ರಾಜ್ಯಗಳಲ್ಲಿ ಜನರನ್ನು ದರಣಿಗೆ ಅಣಿಯಾಗುವಂತೆ ಆಹ್ವಾನಿಸಲು ಬಂದಿದ್ದಾರೆ .

ದೇಶಾಧ್ಯಾಂತ ಪರಿಶಿಷ್ಟ ಜಾತಿ , ಪರಿಶಿಷ್ಠ ವರ್ಗದ ಜನರ ಮೇಲೆ ಮಿತಿಮೀರಿದ ದೌರ್ಜನ್ಯಗಳು ಅಲ್ಪಸಂಖ್ಯಾತ ಮುಸ್ಲಿಮರನ್ನು ಗೋಹತ್ಯ ನೆಪದಲ್ಲಿ ಕೊಲೆ , ದೌರ್ಜನ್ಯ , ಎಸಗುತ್ತಿದ್ದಾರೆ . ಯಾರ ಮೇಲು ಕಠಿಣ ಕ್ರಮ ಕೈಗೊಳ್ಳದಿರುವುದು ವಿಷಾದನೀಯ . ವರ್ಷಕ್ಕೆ ಒಂದು ಕೋಟಿ ಉದ್ಯೋಗ್ಯದ ಭರವಸೆ ಇಡೇರಿಸುವಲ್ಲಿ ವಿಫಲರಾಗಿ ಇಂದು ಪಿ . ಹೆಚ್ . ಡಿ ಮಾಡಿರುವ ಯುವಕ 2ನೇ ದರ್ಜೆ ಕೆಲಕಾಗಿ ಅರ್ಜಿ ಹಾಕುವುದು ಅಮಾನವೀಯ . ಯುವಕರಿಗೆ ಬಡ್ಲೆಟ್‌ನಲ್ಲಿ ಯಾವುದೇ ಬರವಸೆ ನೀಡದಿರುವುದು , 10 ಉದ್ಯೋಗ ಪ್ರಕಟಿಸಿದರೆ 50 ಸಾವಿರ ಅರ್ಜಿಗಳು ಬರುತ್ತಿರುವುದು ಉದ್ಯೋಗಕ್ಕಾಗಿ ಕಾತರಿಸುತ್ತಿರುವ ಯುವಕರ ಹತಾಶಭಾವನೆ ಎತ್ತಿ ತೋರಿಸುತ್ತದೆ .

ದರಣಿಯ ಉದ್ದೇಶಗಳನ್ನು ಮಹಾ ಪ್ರಧಾನ ಕಾರ್ಯದರ್ಶಿ ನಿಮಗೆ ವಿವರವಾಗಿ ತಿಳಿಸುತ್ತಾರೆ . ಕರ್ನಾಟಕ ರಾಜ್ಯದಿಂದ ಒಂದು ಸಾವಿರ ಕಾರ್ಯಕರ್ತರು ದರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ದರಣಿಯ ನಂತರ ಅಹವಾಲನ್ನು ಪ್ರಧಾನ ಮಂತ್ರಿ , ರಾಷ್ಟ್ರಪತಿಗಳಿಗೆ ಅರ್ಪಿಸಲಿದ್ದಾರೆ .

City Today News

(citytoday.media)

9341997936