ಜಾರಿ ನಿರ್ದೇಶನಾಲಯ ಮೇಲ್ಕಂಡ ಮಾಜಿ ಎಂ.ಎಲ್.ಸಿ ಪಿ.ಆರ್. ರಮೇಶ್, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇವರ ಪಟ್ಟಾಲಂ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸಿ / ಕ್ರಮ ಜರುಗಿಸಿ ಸರ್ಕಾರದ ಹಣವನ್ನು ಸಮುದಾಯದ ಬಳಕೆಗೆ ಉಪಯೋಗವಾಗುವಂತೆ ಮಾಡಿ ಅನ್ಯಾಯಕ್ಕೆ, ವಂಚನೆಗೆ, ಶೋಷಣೆಗೆ ಒಳಗಾಗಿರುವ ವಕ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ನ್ಯಾಯ ನೀಡಬೇಕು

ಕರ್ನಾಟಕ ಸರ್ಕಾರದ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಉಲ್ಲೇಖ 1 ರಿಂದ 3 ರಲ್ಲಿ ತಿಳಿಸಿರುವಂತೆ ಸುಮಾರು 120 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ವಗ್ನಿಕುಲ ಕ್ಷತ್ರಿಯ ಮತ್ತು ತಿಗಳ ಜಾತಿಗೆ ಸೇರಿದ ಸಮುದಾಯಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಂದರೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿ ರಹಿತ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನಿರಾವರಿ ಯೋಜನೆ, ಕಿರು ಸಾಲ ಯೋಜನೆ, ಸ್ವಯಂ ಉದ್ಯೋಗ ವಯಕ್ತಿಕ ಸಾಲ ಯೋಜನೆ, ಚೈತನ್ಯ ಸಹಾಯಧನ ಯೋಜನೆಗಳ ಅಡಿಯಲ್ಲಿ ಬಿಡುಗಡೆಗೊಂಡಂತಹ ಸುಮಾರು 120 ಕೋಟಿಗೂ ಅಧಿಕ ಹಣವನ್ನು ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್. ರಮೇಶ್ ರವರು ವಗ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ಯಾವುದೇ ಒಂದು ಶಾಲಾ ಕಾಲೇಜುಗಳಾಗಲಿ, ಸಮುದಾಯಭವನಗಳಾನ್ನಾಗಲೀ ನಿರ್ಮಿಸದೆ ತನ್ನದೇ ಆದ ಕಾಂಗ್ರೆಸ್ ಕಾರ್ಯಕರ್ತರ ಪಟ್ಟಾಲಂ ಕಟ್ಟಿಕೊಂಡು ಹಲವಾರು ವಗ್ನಿಕುಲ ಕ್ಷತ್ರಿಯ ಜಾತಿ ಹಾಗೂ ತಿಗಳ ಜಾತಿಯ ನಕಲಿ ಸಂಘ-ಸಂಸ್ಥೆಗಳ ಹಾಗೂ ನಕಲಿ ಖಾತೆಗಳನ್ನು ಹಾಗೂ ನಕಲಿ ಫಲಾನುಭವಿಗಳನ್ನು ಬಳಸಿಕೊಂಡು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮುಖಂಡರುಗಳ ಖಾತೆಗಳಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ನಾಯಕರ ಖಾತೆಗಳಿಗೆ ಕೋಟ್ಯಾಂತರ ಹಣವನ್ನು ವರ್ಗಾಯಿಸಿಕೊಂಡು ಭ್ರಷ್ಟಚಾರವೆಸಗಿರುತ್ತಾರೆ.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ 2013 -14 ರ ಅವಧಿಯಲ್ಲಿ ಸುಮಾರು 85,00,00,000/- ಗಳ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿರುತ್ತಾರೆ. ಈ ಕುರಿತು ಈಗಾಗಲೇ ದಿನಾಂಕ:16-09-2022 ರಂದು ಲೋಕಾಯುಕ್ತದಲ್ಲಿ ಕೇಸ್ ಸಂಖ್ಯೆ COMPT/LOK/BCD/3553/2022 ರಂತೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಭ್ರಷ್ಟಚಾರದಲ್ಲಿ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸುಮಾರು 2 ರಿಂದ 3 ಲಕ್ಷ ಜನಸಂಖ್ಯೆ ಹೊಂದಿರುವ ತಿಗಳ ಜನಾಂಗದವರು ತಿಗಳ ಜಾತಿಯ ನಾಯಕರಾದ ಮಾಜಿ ಎಂ.ಎಲ್.ಎ ನೆ.ಲ. ನರೇಂದ್ರಬಾಬುರವರ ನಾಯಕತ್ವದಲ್ಲಿ ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಕೆಲವು ಶಾಲಾ ಕಾಲೇಜು ಮತ್ತು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ.

ಆದರೆ, ಕರ್ನಾಟಕ ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 30 ಲಕ್ಷಕ್ಕೂ ಅಧಿಕ ಜನಸಂಖ್ಯೆವುಳ್ಳ ವಗ್ನಿಕುಲ ಕ್ಷತ್ರಿಯ ಜಾತಿಗೆ ಯಾವುದೇ ರೀತಿಯ ಶಾಲಾ-ಕಾಲೇಜುಗಳಾಗಲಿ, ಸಮುದಾಯ ಭವನಗಳನ್ನಾಗಲೀ ನಿರ್ಮಾಣ ಮಾಡದೇ ವಗ್ನಿಕುಲ ಕ್ಷತ್ರಿಯ ನಾಯಕ ಎಂದು ಬಿಂಬಿಸಿಕೊಂಡಂತಹ ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್.ರಮೇಶ್ ರವರು ಭ್ರಷ್ಟಚಾರದಲ್ಲಿ ತೊಡಗಿದ್ದು ವಗ್ನಿಕುಲ ಕ್ಷತ್ರಿಯ ಸಮಾಜ ಇಂದು ಶೋಷಣೆಗೆ ಒಳಗಾಗಿದೆ.

ಆದ್ದರಿಂದ, ಮಾನ್ಯ ಜಾರಿ ನಿರ್ದೇಶನಾಲಯ ಮೇಲ್ಕಂಡ ಮಾಜಿ ಎಂ.ಎಲ್.ಸಿ ಪಿ.ಆರ್. ರಮೇಶ್, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇವರ ಪಟ್ಟಾಲಂ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸಿ / ಕ್ರಮ ಜರುಗಿಸಿ ಸರ್ಕಾರದ ಹಣವನ್ನು ಸಮುದಾಯದ ಬಳಕೆಗೆ ಉಪಯೋಗವಾಗುವಂತೆ ಮಾಡಿ ಅನ್ಯಾಯಕ್ಕೆ, ವಂಚನೆಗೆ, ಶೋಷಣೆಗೆ ಒಳಗಾಗಿರುವ ವಕ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ನ್ಯಾಯ ನೀಡಬೇಕು ಎಂದು ಸಂಘದ ಮುಖಂಡರುಗಳ ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ವರ್ತೂರು ಜೆ.ಕೆ. ಗಿರೀಶ್ ರವರು  ಕೋರಿದರು.

City Today News 9341997936

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ NHM ಒಳ ಗುತ್ತಿಗೆ ನೌಕರರ ಸಂಘವು ಮಣಿಪುರ ರಾಜ್ಯದಲ್ಲಿ NHM ಒಳ ಗುತ್ತಿಗೆ ನೌಕರರು ಖಾಯಂ ಆಗಿರುವಂತೆ ಕರ್ನಾಟಕದಲ್ಲಿಯೂ ಸಹ ಖಾಯಂ ಮಾಡುವಂತೆ ಆಗ್ರಹ.

ಫೆಬ್ರವರಿ -2023 ರಲ್ಲಿ 40 ದಿನಗಳ ಕಾಲ 28000 NHM ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮುಷ್ಕರ ನಡೆಸಿರುತ್ತೇವೆ ಅಂದಿನ ಸರ್ಕಾರ ಕೊನೆ ಘಳಿಗೆಯಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸದೆ ಕಾಲ ಹರಣ ಮಾಡಿ ಇಂದು ವಿರೋಧ ಪಕ್ಷದಲ್ಲಿ ಕೂರುವಂತಾಗಿದೆ. ಅಂದು ಮುಷ್ಕರದ ವೇದಿಕೆಗೆ KPCC ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಹಾಗೂ ದಿನೇಶ್ ಗುಂಡೂರಾವ್ ರವರು ಆಗಮಿಸಿ ಕೊರೋನ-19 ಮಹಾಮಾರಿ ಕಾಯಿಲೆ ವಿಶ್ವದಾದ್ಯಂತ ಅಪ್ಪಳಿಸಿದ ಸಮಯದಲ್ಲಿ ಆರೋಗ್ಯ ಇಲಾಖೆಯ ಸೇವೆಯನ್ನು ಪರಿಗಣಿಸಿ ನಮ್ಮ NHM ನೌಕರರನ್ನು ಖಾಯಂ ಮಾಡುವುದಾಗಿ ಭರವಸೆ నిడి ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿರುತ್ತಾರೆ.ಇದರಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಪ್ರಚಂಡ ಬಹುಮತದೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಅಧಿಕಾರ ನಡೆಸುತ್ತಿದೆ.ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ 5 ಪ್ರಮುಖ ಭರವಸೆಗಳನ್ನು ಈಗಾಗಲೇ ಯಶಸ್ವಿಯಾಗಿ ಈಡೇರಿಸಿದ್ದು ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸಿರುತ್ತಾರೆ. ಇದರಂತೆ NHM ಒಳ ಗುತ್ತಿಗೆ ನೌಕರನ್ನು ಖಾಯಂ ಮಾಡುವಂತೆ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರನ್ನು NHM ಒಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿರುತ್ತೇವೆ.

ಇದರಂತೆ ದಿನಾಂಕ 16-03-2024 ರಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿರುತ್ತಾರೆ.ಮುಖ್ಯಮಂತ್ರಿಗಳ ನಿರ್ದೇಶನದಂತೆ NHM ಒಳ ಗುತ್ತಿಗೆ ನೌಕರರ ಖಾಯಂ ಕಡತವು ತಯಾರಾಗಿದ್ದು ಸಚಿವ ಸಂಪುಟದಲ್ಲಿ ಅನುಮೋದನೆ ನೀಡುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ನಮ್ಮ ನೌಕರರು ವಿಚಾಲಿತರಾಗಿರುತ್ತಾರೆ. ಪ್ರಮುಖ ಭರವಸೆಗಳನ್ನು ಈಡೇರಿಸುವ ಜೊತೆಗೆ ಇನ್ನು ಅನೇಕ ಬೇಡಿಕೆಗಳನ್ನು ಈಡೇರಿಸಿರುತ್ತಾರೆ


1) ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ಸಮಯದಲ್ಲಿ ಇಡಿಘಂಟು ಯೋಜನ ಜಾರಿ ಮಾಡಿರುತ್ತಾರೆ.

2) ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿರುತ್ತಾರೆ.

3) ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿರುತ್ತಾರೆ.

ಇದರಂತೆ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿ ಜನಮನ್ನಣೆ ಪಡೆದಿರುವ ಸರ್ಕಾರವು ನುಡಿದಂತೆ ನಡೆಯುತ್ತಿದೆ.

ಸರ್ಕಾರಿ ನೌಕರರಿಗೆ ಸಮನಾಗಿ ಯಾವುದೇ ಸೌಲಭ್ಯಗಳನ್ನು NHM ನೌಕರರು ಪಡೆಯದೇ ಅತ್ಯಂತ ಕಡಿಮೆ ಸಂಚಿತ ವೇತನ ಪಡೆದು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅನೇಕ ವರ್ಷಗಳಳಿಂದ ಸೇವೆ ನೀಡುತ್ತಾ ಬಂದಿರುತ್ತೇವೆ. ಸಾಮಾಜಿಕ ನ್ಯಾಯದ ಬಗ್ಗೆ ಅಪಾರ ಕಾಳಜಿ ಹಾಗೂ ಅದನ್ನು ಜಾರಿ ಮಾಡುವಲ್ಲಿ ಯಶಸ್ವಿಯಾಗಿರುವ ನುಡಿದಂತೆ ನಡೆಯುತ್ತಿರುವ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ನಮ್ಮ ನ್ಯಾಯಯುತವಾದ ಖಾಯಂ ಬೇಡಿಕೆಯನ್ನು 15-08- 2024 ರ ಒಳಗೆ ಈಡೇರಿಸಬೇಕೆಂದು 28258 NHM ಒಳ ಗುತ್ತಿಗೆ ನೌಕರರು ಆಗ್ರಹಿಸುತ್ತೇವೆ ಎಂದು
ಅಶ್ವತ್ ಹೆಚ್. ಕೆ  ರಾಜ್ಯ ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News 9341997936

ಬೆಂಗಳೂರಿನ  ಶಾಂತಿನಗರದಲ್ಲಿನ, ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ ರವರಿಂದ ಕೋರಿಕೆ

ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಮತ್ತು ಇತರರು, ನಮ್ಮ ವಕೀಲರಾದ ಶ್ರೀ ಅರ್ಜುನ್ ರಾಮಾ ಖೋತ್ ರವರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರಿನ ಖಾಯಂ ವಾಸಿಯಾಗಿದ್ದು ಈ ಮೂಲಕ ತಿಳಿಸುವುದೇನೆಂದರೆ, ದಿನಾಂಕ: 15.04.2024 ರಂದು ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ, ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್, ಎಮ್.ಎಲ್.ಎ ಹ್ಯಾರೀಸ್ ರವರಿಗೆ, ಮಾನ್ಯ ಪಿ.ಸಿ ಮೋಹನ್ ರವರಿಗೆ, ಹಾಗೂ ಮಾನ್ಯ ಬಿಬಿಎಂಪಿ ಕಮೀಷನರ್, ಬೆಂಗಳೂರು, ಜಂಟಿ ಆಯುಕ್ತರವರಿಗೆ, ಜಂಟಿ ನಿರ್ದೇಶಕರು, ನಗರ ಯೋಜನೆ ಉತ್ತರ ರವರಿಗೆ, ಹಾಗೂ ಇತರರಿಗೆ ಮನವಿ ಸಲ್ಲಿಸಿ, ಶ್ರೀ ಅರುಣ್ ಎಂಬುವರು ಸ್ವತ್ತಿನ ಸಂಖ್ಯೆ: ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಕೋರಿರುತ್ತೇವೆ.

ಅದರಂತೆ ಉಲ್ಲೇಖ (1) ರ ಪತ್ರದಲ್ಲಿ ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಿರುವುದು ಕಂಡುಬಂದಿರುವುದಿಲ್ಲ. ಹಾಗಾಗಿ ನಾವು ತಿಳಿಸಿರುವ ಸ್ವತ್ತಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಿಕೊಂಡು ಉಲ್ಲೇಖ (2), (3) & (4) ರ ಮಾನ್ಯ ಮುಖ್ಯ ಆಯುಕ್ತರವರ ಕಛೇರಿ ಆದೇಶಗಳನ್ವಯ ಮುಂದಿನ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಮುಂದುವರೆದು ನಗರ ಯೋಜನೆ (ಪೂರ್ವ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರವರು ಮಾನ್ಯ ಜಂಟಿ ನಿರ್ದೇಶಕರು, (ನಗರ ಯೋಜನೆ ಉತ್ತರ) ಬಿಬಿಎಂಪಿ, ಎನ್.ಆರ್ ವೃತ್ತ, ಬೆಂಗಳೂರು ಹಾಗು ಅಹಮದ್ ಆಲಿ ರವರಿಗೆ ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಈಗಾಗಲೇ ಕಟ್ಟಡದ ಮಾಲೀಕರಿಗೆ 2020ថ ម 248(1) 248(2) 2: 31.05.2024 ರಂದು ಮತ್ತು 248(3) ಅನ್ನು ದಿನಾಂಕ: 15.06.2024 ರಂದು ಜಾರಿ ಮಾಡಿ ಕಲಂ 356ರನ್ವಯ ಡೆಮಾಲಿಷನ್ ಆರ್ಡರ್ (Demolish Order) ಜಾರಿಗೊಳಿಸಲು ಕೋರಿ ದಿನಾಂಕ: 25.06.2024 ರಂದು ಮೂಲ ಕಡತವನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನರ ವಿಭಾಗ ರವರಿಗೆ ಸಲ್ಲಿಸಲಾಗಿದ್ದು. ಮುಂದಿನ ಕ್ರಮದ ಬಗ್ಗೆ ಮಾಹಿತಿಯನ್ನು ಕಾರ್ಯಪಾಲಕ ಅಭಿಯಂತರರು, ಶಾಂತಿನಗರ ವಿಭಾಗ ರವರ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ತಿಳಿಸ ಅರ್ಜಿಯನ್ನು ಸಲ್ಲಿಸಿದ್ದಾರೆ.

ಹೀಗಿರುವಾಗ ನಾನು ಸದರಿ ಮೇಲೆ ತಿಳಿಸಿರುವ ಸ್ವತ್ತಿನ ಅನಧಿಕೃತ ಕಟ್ಟಡವನ್ನು ನಿರ್ಮಾಣಮಾಡುವ ಕಾರ್ಯವನ್ನು ಸ್ಥಗಿತಗೊಳಿಸಲು ಕೋರಿಯೂ ಸಹ ಅದನ್ನು ನಿಲ್ಲಿಸದೆ ಕಟ್ಟಡದ ಕಾರ್ಯವನ್ನು ಸಂಪೂರ್ಣಗೊಳಿಸಿದ್ದಾರೆ. ಎ.ಇ.ಇ. ಬಿಬಿಎಂಪಿ ಸರಸ್ವತಿ, ಮುನಿರಾಜು ಗೌಡ, ಹಾಗೂ ರಾಥೋಡ್ ರವರಿಗೆ ಹಲವಾರು ಬಾರಿ ಫೋನ್ ಕರೆ ಹಾಗೂ ನೇರವಾಗಿ ಭೇಟಿಮಾಡಿದರೂ ಸಹ ಅನಧಿಕೃತ ಕಟ್ಟಡದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲು ನೆರವು ಮಾಡಿರುವುದಿಲ್ಲ. ಸದರಿ ವಿಚಾರವಾಗಿ ಆರ್.ಟಿ.ಐ ದಲ್ಲಿ ಸಂಬಂಧಪಟ್ಟ ವಿಚಾರದಲ್ಲಿ : 2.2.2. (5) 4.5/72/2024-25, 2: 04.07.2024 ರಂತೆ ಅರ್ಜಿ ಸಲ್ಲಿಸಲಾಗಿದೆ. ಹಾಗೂ  ಬಿಬಿಎಂಪಿ ಕಮೀಷನರ್, ಬೆಂಗಳೂರು, ಲಕ್ಷ್ಮಿದೇವಿ ಜಂಟಿ ಆಯುಕ್ತರು, ಬೆಂಗಳೂರು, ಹಾಗೂ ಇತರರಿಗೆ ದಿನಾಂಕ: 03.07.2024, 05.07.2024, 06.07.2024, 24.07.2024 0 – ಅನಧಿಕೃತ ಕಟ್ಟಡಗಳ ನಿರ್ಮಾಣ ಸ್ಥಗಿತ ಕಾರ್ಯದ ಬಗ್ಗೆ ಕೇಳಿದಾಗಿಯೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಸೂರಜ್ ಗೋವಿಂದರಾಜ್ ರವರು “ಬಿಬಿಎಂಪಿ ರವರು ಯೋಜನೆಯನ್ನು ಮಂಜೂರು ಮಾಡಿದ ನಂತರ, ಸಂಬಂಧಪಟ್ಟ ವಾರ್ಡ್ ಅಧಿಕಾರಿ / ಇಂಜಿನಿಯರ್ ಅವರು 30 ದಿನಗಳಿಗೊಮ್ಮೆ ನಿಯತಕಾಲಿಕವಾಗಿ ತಪಾಸಣೆ ನಡೆಸಬೇಕು ಮತ್ತು ನಡೆಸಿದ ತಪಾಸಣೆಯ ಸ್ವರೂಪ, ಮಂಜೂರಾತಿ ಯೋಜೆಗೆ ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣಯನ್ನು ಹೊರಡಿಸಿದ್ದಾರೆ.

ಅನುಸರಣೆ ಅಥವಾ ಯೋಜನೆಯ ಯಾವುದೇ ಉಲ್ಲಂಘನೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಬೇಕು, ಎಂಬುದಾಗಿ ಪ್ರಕರಣೆಯನ್ನು ಹೊರಡಿಸಿದ್ದಾರೆ. ಹಾಗೂ ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ ಮಾಲೀಕರು/ ಬಿಲ್ಡರ್‌ಗಳು ಅಥವಾ ಯೋಜನೆ ಮಂಜೂರಾತಿಯನ್ನು ಪಡೆದ ವ್ಯಕ್ತಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಬೇಕು. ವ್ಯತ್ಯಾಸಗಳನ್ನು ಸೂಚಿಸಿ ಮತ್ತು ಸದರಿ ವ್ಯತ್ಯಾಸಗಳನ್ನು ತೆಗೆದುಹಾಕಲು ಷರತ್ತುಗಳನ್ನು ವಿಧಿಸಬೇಕು ಎಂದು ನ್ಯಾಯಾಲವು ಆದೇಶಿಸಿದೆ.

ಆದರೆ ಇಂದಿನವರೆವಿಗೂ ಸದರಿ ಸ್ವತ್ತಿನ ನಂ. 120, ಸ್ವಸ್ತಿಕ್ ಕ್ರಾಸ್ ರೋಡ್, ಭೀಮಣ್ಣ ಗಾರ್ಡನ್, ಎ.ಟಿ ಹಳ್ಳಿ, ಶಾಂತಿನಗರ, ಬೆಂಗಳೂರು ಇಲ್ಲಿ ಅನಧಿಕೃತವಾಗಿ 8 ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ನಿರ್ಮಾಣ ಮಾಡುತ್ತಿದ್ದು, ಬೈಲಾಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ಸ್ಥಗಿತಗೊಳಿಸಲು ಸಾಧ್ಯವಾಗಿರುವುದಿಲ್ಲ.

ಆದ್ದರಿಂದ ಮಾನ್ಯರು ಮೇಲೆ ವಿವರಿಸಿರುವ ಸದರಿ ಸ್ವತ್ತಿನ ಅನಧಕೃತ ಕಟ್ಟಡದ ನಿರ್ಮಾಣದ ಕಾರ್ಯವನ್ನು ಸ್ಥಗಿತಗೊಳಿಸಲು ನೆರವಾಗುವಲ್ಲಿ ಸಹಕರಿಸಬೇಕೆಂದು ಹಾಗೂ ಸದರಿ ಕಾರ್ಯದಲ್ಲಿ ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ದ ಸೂಕ್ತ ಕಾನೂನು ರೀತ್ಯ ಕ್ರಮವನ್ನು ತೆಗೆದುಕೊಳ್ಳಲು ನೆರವಾಗಲು ಸದರಿ ಪ್ರಕರಣೆಯನ್ನು ಹೊರಡಿಸಲಾಗಿದೆ ಎಂದು ಅಹ್ಮದ್ ಅಲಿ ಬಿನ್ ಅಬ್ಬಾಸ್ ಅಲಿ, ಹಾಗೂ ಇತರರು ಸ್ವಸ್ತಿಕ್ ಕ್ರಾಸ್ ರೋಡ್, ಶಾಂತಿನಗರ, ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

‘ಮಾಧ್ಯಮ ಅನೇಕ’ ಸಂಸ್ಥೆಯಿಂದ ‘ತೇಜಸ್ವಿ ಎಂಬ ವಿಸ್ಮಯ’ ಸಾಕ್ಷ್ಯಚಿತ್ರ ಸರಣಿ ಅನಾವರಣ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬಹುಮುಖ ವ್ಯಕ್ತಿತ್ವದವರು, ಕನ್ನಡ ಸಾಹಿತ್ಯಲೋಕದಲ್ಲಿ ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರಕೇಂದ್ರಿತ ಕಥನಗಳನ್ನು ಕಟ್ಟಿದ್ದಷ್ಟೇ ಅಲ್ಲದೆ ಪರಿಸರ ಪ್ರಿಯನಾಗಿ, ಕೃಷಿಕನಾಗಿ, ಸಾಹಿತಿಯಾಗಿ, ಪಕ್ಷಿತಜ್ಞನಾಗಿ, ಪ್ರಕೃತಿ ತಜ್ಞನಾಗಿ, ಅತ್ಯುತ್ತಮ ಛಾಯಾಗ್ರಾಹಕನಾಗಿ, ವಿಜ್ಞಾನಿಯಾಗಿ, ವಿದ್ವಾಂಸನಾಗಿ ಹಲವಾರು ಬದುಕುಗಳನ್ನು ತಮ್ಮಜೀವಾವಧಿಯಲ್ಲಿ ಶೋಧಿಸಿ, ಸಾಧಿಸಿ, ಇತರರಿಗೂ ಅರಿವಾಗಲೆಂದು ತಮ್ಮ ಕೃತಿಗಳಲ್ಲಿ ದಾಖಲಿಸಿದವರು. ಹೇಳಿದಷ್ಟೂ ಮುಗಿಯದ ಇಂತಹ ಅಪ್ರತಿಮ ಪ್ರತಿಭೆಯ ವ್ಯಕ್ತಿಚಿತ್ರಣವನ್ನು ಕೆಲವು ಸಂಚಿಕೆಗಳಲ್ಲಿ ಬಿಚ್ಚಿಡುವ ಪ್ರಯತ್ನ ಈ “ತೇಜಸ್ವಿ ಎಂಬ ವಿಸ್ಮಯ” ಸಾಕ್ಷ್ಯಚಿತ್ರ ಸರಣಿ.

‘ಮಾಧ್ಯಮ ಅನೇಕ’ ಸಂಸ್ಥೆ ನಿರ್ಮಾಣದ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಕುರಿತಾದ ಬಹು ನಿರೀಕ್ಷಿತ, ಆರು ಕಂತುಗಳ “ತೇಜಸ್ವಿ ಎಂಬ ವಿಸ್ಮಯ” ಹೆಸರಿನ ಬೃಹತ್ ಸಾಕ್ಷಚಿತ್ರ ಸರಣಿಯ ಮೂಲ ಉದ್ದೇಶ ತೇಜಸ್ವಿಯವರ ಬದುಕು, ಬರಹ ಮತ್ತು ವಿಚಾರಧಾರೆಗಳನ್ನು ದೃಶ್ಯಮಾಧ್ಯಮದ ಮೂಲಕ ಅನಾವರಣಗೊಳಿಸುವುದು.

ಈ ಸಾಕ್ಷ್ಯ ಚಿತ್ರದಲ್ಲಿ ತೇಜಸ್ವಿಯವರ ಬಗ್ಗೆ 30 ಕ್ಕೂ ಹೆಚ್ಚು ಗಣ್ಯರು, ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ತೇಜಸ್ವಿಯವರೊಂದಿಗಿನ ತಮ್ಮ ನೆನಪು, ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಈ ಸರಣಿಯ ಪ್ರಾಸ್ತಾವಿಕ ಕಂತು ‘ತೇಜಸ್ವಿ ಎಂಬ ವಿಸ್ಮಯ – ಸಾಕ್ಷ್ಯಚಿತ್ರದ ಮುನ್ನುಡಿ’ ಈಗಾಗಲೇ ಬಿಡುಗಡೆಯಾಗಿದ್ದು ಓದುಗರು, ಸಾಹಿತ್ಯಾಭಿಮಾನಿಗಳು, ವೀಕ್ಷಕರು ಬಹುಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದೀಗ ಸಾಕ್ಷ ಚಿತ್ರ ಸರಣಿಯು 28ನೇ ಜುಲೈ 2024 ರಂದು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಉಪ- ಮುಖ್ಯಮಂತ್ರಿ ಹಾಗು ಮಲ್ಲೇಶ್ವರಂನ ಹಾಲಿ ಶಾಸಕರುಗಳಾದ ಡಾ ಸಿ.ಎನ್. ಅಶ್ವಥ್ ನಾರಾಯಣ್ ಅವರಿಂದ ಲೋಕಾರ್ಪಣೆಯಾಗಲಿದೆ. 29 ಜುಲೈ 2024 ರಂದು ಸೋಮವಾರ ಮಧ್ಯಾಹ್ನ 12:00-1:30 ರವರೆಗೆ ಸಾಕ್ಷ್ಯಚಿತ್ರ ಸರಣಿಯನ್ನು ಪ್ರದರ್ಶಿಸಲಾಗುತ್ತದೆ.

‘ತೇಜಸ್ವಿ ಎಂಬ ವಿಸ್ಮಯ’ ಎಂಬ ಸಾಕ್ಷ್ಯಚಿತ್ರ ಸರಣಿಯ ಮೂಲಕ ತೇಜಸ್ವಿಯವರ ಜೀವನ ಮತ್ತು ಕೃತಿಗಳನ್ನು ಸಂಸ್ಮರಿಸಲು, ಆಚರಿಸಲು ಮಾಧ್ಯಮ ಅನೇಕ ಸಂಸ್ಥೆ ನಿಮ್ಮನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತಿದೆ.

ಮಾಧ್ಯಮ ಅನೇಕ ದಿಂದ ‘ತೇಜಸ್ವಿ ಎಂಬ ವಿಸ್ಮಯ’ ಎಂಬ ಸಾಕ್ಷ್ಯ ಚಿತ್ರ ಸರಣಿ, ಡಾ ಸಿ ಎನ್ ಅಶ್ವಥ್ ನಾರಾಯಣ್, ಮಾಜಿ ಉಪಮುಖ್ಯಮಂತ್ರಿ ಹಾಗು ಮಲ್ಲೇಶ್ವರಂ ನ ಹಾಲಿ ಶಾಸಕರು ಅವರಿಂದ ಲೋಕಾರ್ಪಣೆ ಆಗುವುಧು ಎಂದು ಅರವಿಂದ ವೈ ಮೋತಿ,ನಿರ್ದೇಶಕರು, ಮಾಧ್ಯಮ ಅನೇಕಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಕಟಿಸಿದರು.


ದಿನಾಂಕ : 28ನೇ ಜುಲೈ 2024, ಭಾನುವಾರ

ಸಮಯ : ಬೆಳಿಗ್ಗೆ 10:00 ಗಂಟೆಗೆ

ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

City Today News 9341997936

ಹಾಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ರವರ ಏಕಪಕ್ಷೀಯ ನಿರ್ಧಾರಕ್ಕೆ ಸಂಯುಕ್ತ ಸಂಘರ್ಷ ಸಮಿತಿಯಿಂದ ತೀವ್ರ ವಿರೋಧ

ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿಯಲ್ಲಿರುವ ಸಂಘಟನೆಗಳು ತೆಗೆದುಕೊಂಡ ನಿರ್ಣಯಗಳು

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

ದಿನಾಂಕ : 19-07-2024ರಂದು ಬೆಳಗ್ಗೆ 11-30ಕ್ಕೆ ಎಲ್ಲಾ ಸಂಯುಕ್ತ ಸಂಘರ್ಷ ಸಮಿತಿಯ ಅಂಗನವಾಡಿ ಸಂಘಟನೆಗಳ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕರ್ನಾಟಕ ಸರ್ಕಾರ ಶಿಶು ಅಭಿವೃದ್ಧಿ ಯೋಜನೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಚರ್ಚೆ ನಡೆಸಿದ ನಂತರ ಎಲ್ಲಾ ಸಂಘಟನೆಗಳು ಸರ್ವಾನುಮತದಿಂದ ಈ ಕೆಳಕಂಡ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

1) ಸರ್ವೋಚ್ಛ ನ್ಯಾಯಾಲಯ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರಾಚ್ಯುಟಿ) ಬಗ್ಗೆ ಆದೇಶ ಮಾಡಿರುತ್ತದೆ. ಆ ಆದೇಶದ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು 1975 ರಿಂದ ಕೆಲಸ ಮಾಡುತ್ತಿದ್ದು ಕಾಲ ಕಾಲಕ್ಕೆ ನಿವೃತ್ತಿಯಾದ ದಿನಾಂಕಗಳಲ್ಲಿ ಅವರಿಗೆ ಗ್ರಾಚ್ಯುಟಿ (ನಿವೃತ್ತಿ ಉಪಧನ) ಕೊಡುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಏಪ್ರಿಲ್ 25, 2022ರಲ್ಲಿ ಆದೇಶಿಸಿದೆ. ಆದರೆ ಕರ್ನಾಟಕ ಸರ್ಕಾರ 01-04-2023ರಿಂದ ಅನ್ವಯವಾಗುವಂತೆ ಗ್ರಾಚ್ಯುಟಿ (ಉಪಧನ) ಬಗ್ಗೆ ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ /ಸಹಾಯಕಿಯರಿಗೆ ಗ್ರಾಚ್ಯುಟಿ (ಉಪಧನ) ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

2) ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಶಿಕ್ಷಣ ನೀಡಲು ನಿರ್ಧರಿಸಿದ್ದು ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟಸ್ಸರಿ ಎಂದು ಹೊಸದಾಗಿ 22ನೇ ಜುಲೈ 2024 ರಿಂದ ನಾಮಕರಣ ಮಾಡಲು ಸರಿಯಷ್ಟೇ. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಮಾಡುವುದು ಸ್ವಾಗತನೀಯ. ಆದರೆ ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಅಂಗನವಾಡಿ ಸಂಘಟನೆಗಳು ಕಳೆದ 35 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ಆ ಸಂಘಟನೆಗಳ ಅಭಿಪ್ರಾಯವನ್ನು ಪಡೆಯದೇ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದನ್ನು ಸಂಯುಕ್ತ ಸಂಘರ್ಷ ಸಮಿತಿಯ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಇದರ ಬಗ್ಗೆ ಎಲ್ಲಾ ಸಂಘಟನೆಗಳ ಮುಕ್ತ ಅಭಿಪ್ರಾಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಇಲಾಖೆಯ ಆದ್ಯ ಕರ್ತವ್ಯ. ಇದಕ್ಕೆ ಬದಲಾಗಿ ಅಂಗನವಾಡಿ ಸಂಘಟನೆಗಳನ್ನು ಸದರಿ ವಿಷಯದಲ್ಲಿ ಹೊಡೆದು ಆಳುವ ಇಲಾಖೆಯ ಅಧಿಕಾರಿಗಳ ಮತ್ತು ಸಚಿವರ ಅಭಿಪ್ರಾಯಗಳನ್ನು ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ರಾಜ್ಯದಲ್ಲಿರುವ 61,876 ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ.ಯನ್ನು ಹಂತ ಹಂತವಾಗಿ ಪ್ರಾರಂಭಿಸುವುದಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ತರಭೇತಿ, ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಅಭಿಪ್ರಾಯ ವ್ಯಕ್ತಪಡಿಸಿವೆ.

3) ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಸರಿಯಿಲ್ಲದ ಕಾರಣ ಫಲಾನುಭವಿಗಳು ಆ ಪೌಷ್ಠಿಕ ಆಹಾರ ತಿನ್ನುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳಲ್ಲಿ ಸ್ಥಳೀಯ ಪೌಷ್ಠಿಕ ಆಹಾರ ನೀಡಲು ನಿಯಮವಿದ್ದರು ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಹಣ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವ ನೀತಿಯನ್ನು ನಮ್ಮ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.

4) ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಹಾಗೂ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಾರಂಭದಿಂದ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಹಾಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ರವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಯುಕ್ತ ಸಂಘರ್ಷ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಬೆಂಗಳೂರು  ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

City Today News 9341997936