ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಲ್ಲಿಸಿದ ಮನವಿ ಪತ್ರದ ಮುಖ್ಯಾಂಶಗಳು…

ವಿಶ್ವದ ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿರುವ ಕೊರೋನಾ (ಕೋವಿಡ್-19) ರೋಗವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡ ಚಪ್ಪಾಳೆ ತಟ್ಟುವಿಕೆ, ದೀಪ ಬೆಳಗುವಿಕೆ ಹಾಗೂ ಲಾಕ್‍ಡೌನ್ ಮುಂತಾದ ಎಲ್ಲ ನಿರ್ಣಯಗಳಿಗೆ ನಾವುಗಳು ಸಹಮತವನ್ನು ತೋರುತ್ತಾ ಬಂದಿದ್ದೇವೆ.

ಆದರೆ ರೋಗ ಹರಡುವಿಕೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಏರುಮುಖವಾಗಿದೆಯೇ ಹೊರತು ನಿಯಂತ್ರಣಕ್ಕೆ ಬಂದಿರುವ ಸೂಚನೆಗಳು ಕಾಣುತ್ತಿಲ್ಲ. ಅದಕ್ಕೆ ಕಾರಣಗಳನ್ನು ಸರ್ಕಾರವೇ ತಿಳಿಸಬೇಕಾಗಿರುತ್ತದೆ. ಡಬ್ಲ್ಯೂ.ಹೆಚ್.ಓ., ಮಾರ್ಗಸೂಚಿಯ ಪ್ರಕಾರ ಕೊರೋನಾ ರೋಗ ನಿಯಂತ್ರಣಕ್ಕೆ ಪ್ರಾಥಮಿಕವಾಗಿ 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ.

ಆದರೆ ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಪ್ರತಿ 10 ಲಕ್ಷಕ್ಕೆ ಕೇವಲ 152 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಬಂದಿದೆ. ಒಂದು ಕಡೆ ಕೊರೋನಾ ರೋಗ ಪರೀಕ್ಷೆಗೆ ರ್ಯಾಪಿಡ್ ಟೆಸ್ಟ್ ಕಿಟ್‍ಗಳು ಹಾಗೂ ಪಿ.ಸಿ.ಆರ್. ಮೆಷಿನ್‍ಗಳ ಕೊರತೆಯಾದರೆ, ಮತ್ತೊಂದು ಕಡೆ ವೈದ್ಯರ, ದಾದಿಯರ ಹಾಗೂ ಇನ್ನಿತರ ವೈದ್ಯಕೀಯ ಸಿಬ್ಬಂದಿಗಳಿಗೆ ಅವಶ್ಯವಾಗಿರುವ ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್, ಪಿ.ಪಿ.ಇ. ಕಿಟ್ ಮುಂತಾದವುಗಳ ಕೊರತೆಯಾಗಿರುತ್ತದೆ.

ಒಟ್ಟು 12 ಲಕ್ಷ ಕಿಟ್‍ಗಳ ಅಗತ್ಯವಿದ್ದರೆ ಈಗ 2,27,000 ಕಿಟ್‍ಗಳು ಮಾತ್ರ ಲಭ್ಯವಿವೆ. ಎನ್-95 ಮಾಸ್ಕ್‍ಗಳು ಕೇವಲ 5,46,721 ಮಾತ್ರ ಲಭ್ಯವಿವೆ ಮತ್ತು ಹೈಡ್ರಾಕ್ಸಿ ಕ್ಲೋರಾಕ್ಸಿನ್ ಮಾತ್ರೆಗಳು ಕೇವಲ 2,79,999 ರಷ್ಟು ಲಭ್ಯವಿವೆ.

ಇತ್ತೀಚಿನವರೆಗೂ ಕೇವಲ ರಾಜೀವ್‍ಗಾಂಧಿ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ರಂಗದೊರೈ ಆಸ್ಪತ್ರೆ ಮತ್ತು ಆನಂದ್ ಲ್ಯಾಬ್‍ಗಳಲ್ಲಿ ಮಾತ್ರ ಕೊರೋನಾ ರೋಗದ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ರಾಜ್ಯದಲ್ಲಿರುವ 18 ಲ್ಯಾಬ್‍ಗಳಲ್ಲಿ ಕೊರೋನಾ ರೋಗದ ಪರೀಕ್ಷೆ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ.

ಇವುಗಳ ಪೈಕಿ 9 ಲ್ಯಾಬ್‍ಗಳು ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿವೆ ಹಾಗೂ 12,500 ರ್ಯಾಪಿಡ್ ಟೆಸ್ಟ್ ಕಿಟ್‍ಗಳು ಬರಲಿವೆ ಎಂದು ದಿನಾಂಕ:17-4-2020 ರಂದು ಸರ್ಕಾರ ತಿಳಿಸಿರುತ್ತದೆ. ಇಲ್ಲಿಯವರೆಗೂ ನಮ್ಮ ರಾಜ್ಯಕ್ಕೆ ಕೊರೋನಾ ರೋಗ ಪತ್ತೆಗೆ ಬೇಕಾಗಿರುವ ರ್ಯಾಪಿಡ್ ಟೆಸ್ಟ್ ಕಿಟ್‍ಗಳು ಲಭ್ಯವಾಗಿರುದಿಲ್ಲ. ಲ್ಯಾಬ್‍ಗಳ ಮೂಲಕ ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ 17,594 ಜನರಿಗೆ ಕೊರೋನಾ ರೋಗ ಪರೀಕ್ಷೆ ಮಾಡಲಾಗಿದೆ.

ಈ ವೈದ್ಯಕೀಯ ಸೌಲಭ್ಯಗಳು ಕೊರೋನಾ ರೋಗ ತಡೆಗೆ ಏನೇನೂ ಸಾಲದು. ಇದರಿಂದ ಕೊರೋನಾ ರೋಗ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲವೆಂದು ಅನೇಕ ವೈದ್ಯರು, ತಜ್ಞರ ಅಭಿಪ್ರಾಯವಾಗಿರುತ್ತದೆ.

ಲಾಕ್‍ಡೌನ್ ಆಗಿ 25 ದಿನಗಳು ಕಳೆದಿದ್ದರೂ ಜನಸಾಮಾನ್ಯರ ಬದುಕಿಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯಾಡಳಿತ ಸಂಪೂರ್ಣ ವಿಫಲವಾಗಿದೆ. ಆ ಕಾರಣ ಜನರ ಬದುಕು ಅತ್ಯಂತ ದುಸ್ತರವಾಗಿದೆ.

ರಾಜ್ಯದ 6 ಕೋಟಿ 60 ಲಕ್ಷ ಜನಸಂಖ್ಯೆಯಲ್ಲಿ ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ ಸಂಘಟಿತ ಕಾರ್ಮಿಕರ ಸಂಖ್ಯೆ 21 ಲಕ್ಷಗಳಿದ್ದು, ಅಸಂಘಟಿತ ಕಾರ್ಮಿಕರ ಸಂಖ್ಯೆ ಸುಮಾರು 1 ಕೋಟಿ 32 ಲಕ್ಷ ಇರುತ್ತದೆ.

ಇದಲ್ಲದೇ ಕೋಟ್ಯಾಂತರ ಕೃಷಿ ಕಾರ್ಮಿಕರು ರಾಜ್ಯದ ಉದ್ದಗಲಕ್ಕೂ ನೆಲೆಸಿದ್ದಾರೆ ಇವರಷ್ಟೇ ಅಲ್ಲದೇ ಕುಶಲಕರ್ಮಿಗಳಾದ ಸವಿತಾ ಸಮಾಜದವÀರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‍ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರು ಮುಂತಾದವರು ತಮ್ಮ ಜೀವನೋಪಾಯಕ್ಕಾಗಿ ದಿನನಿತ್ಯದ ದುಡಿಮೆಯನ್ನು ಅವಲಂಬಿಸಿ ಬದುಕುತ್ತಿದ್ದರು.

ಇವರುಗಳಿಗೆ ದುಡಿಮೆಯಿಲ್ಲದೇ ಅವರ ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಗುರಿಯಾಗಿವೆ. ಅನೇಕ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಊರುಗಳಲ್ಲಿ ಜೀವನೋಪಾಯಕ್ಕೆ ದಾರಿಯಿಲ್ಲದೇ ಕಷ್ಟವನ್ನು ಅನುಭವಿಸುತ್ತಿದ್ದಾರೆ.

ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರು ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿದ್ದು, ಅನೇಕರು ಕಾಲ್ನಡಿಗೆಯಲ್ಲೇ ಊರುಗಳಿಗೆ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಕೆಲವರು ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಸಾವನ್ನಪ್ಪಿರುತ್ತಾರೆ.

ಸರ್ಕಾರದ ಮಾಹಿತಿಯ ಪ್ರಕಾರವೇ ಈ ವರ್ಷದ ಬೇಸಿಗೆ ಋತುವಿನಲ್ಲಿ ರಾಜ್ಯದ ಉದ್ದಗಲಕ್ಕೂ ಸುಮಾರು 64,340 ಹೆಕ್ಟೇರ್ ಪ್ರದೇಶದಲ್ಲಿ 17 ಲಕ್ಷದ 38 ಸಾವಿರ ಕ್ವಿಂಟಾಲ್ ಇಳುವರಿಯ ತರಕಾರಿ ಬೆಳೆಗಳು ಮತ್ತು 1,91,895 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳ ಇಳುವರಿ ಅಂದಾಜು 32,55,969 ಟನ್‍ಗಳನ್ನು ನಮ್ಮ ರೈತರು ಬೆಳೆದಿದ್ದಾರೆ.

ವಿವಿಧ ರೀತಿಯ ಹೂಗಳನ್ನು ಸುಮಾರು 11,027 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುತ್ತಾರೆ. ಹಾಗೂ ಸುಮಾರು 1,08,168 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆದಿರುತ್ತಾರೆ. ಅದೇ ರೀತಿ ಭತ್ತ, ರಾಗಿ, ಮುಸುಕಿನ ಜೋಳ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಮುಂತಾದ ಬೆಳೆಗಳನ್ನು ರೈತರು ಬೇಸಿಗೆಯಲ್ಲೂ ಬೆಳೆದಿರುತ್ತಾರೆ. ರೈತರು ಬೆಳೆದಿರುವ ಹೂವು, ತರಕಾರಿ, ಹಣ್ಣು ಹಾಗೂ ಇನ್ನಿತರ ಬೆಳೆಗಳನ್ನು ಕಟಾವು ಮಾಡಿ, ಮಾರಾಟ ಮಾಡಲು ಲಾಕ್‍ಡೌನ್ ಅವಧಿಯಲ್ಲಿ ಸಾಧ್ಯವಾಗದೆ ರೈತರ ಹಾಗೂ ರೈತ ಕಾರ್ಮಿಕರ ಬದುಕು ದುಸ್ತರವಾಗಿದೆ.

ಇದರಿಂದ ರೈತರಿಗೆ ಸಾವಿರಾರು ಕೋಟಿ ಬೆಳೆಗಳು ನಷ್ಠವಾಗಿರುತ್ತದೆ. ಮತ್ತೊಂದು ಕಡೆ ಹಣ್ಣು, ಹಂಪಲು, ತರಕಾರಿ, ಹೂವು ಹಾಗೂ ಇನ್ನಿತರೇ ಪದಾರ್ಥಗಳು ದಿನನಿತ್ಯ ಲಭ್ಯವಾಗದೇ ಜನರು ಅದರಲ್ಲೂ ನಗರವಾಸಿಗಳು ಅತ್ಯಂತ ಕಷ್ಟಕ್ಕೆ ಗುರಿಯಾಗಿದ್ದಾರೆ. ಇದರ ಜೊತೆಗೆ ಕೋಳಿ, ಕುರಿ, ಹಂದಿ, ಮೀನು ಮುಂತಾದವುಗಳನ್ನು ಸಾಕಾಣಿಕೆ ಮಾಡುವ ರೈತರೂ ಸಹ ಮಾರುಕಟ್ಟೆಯಿಲ್ಲದೇ ಮತ್ತು ವಿವಿಧ ರೀತಿಯ ಅಪಪ್ರಚಾರಗಳ ಕಾರಣಕ್ಕಾಗಿ ನಷ್ಟಕ್ಕೆ ಗುರಿಯಾಗಿದ್ದಾರೆ.

ಈ ಎಲ್ಲಾ ಪದಾರ್ಥಗಳನ್ನು ಕೊಯಿಲು ಮಾಡುವುದಕ್ಕೆ ಮತ್ತು ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುತ್ತದೆ. ಇದರಿಂದ ರೈತಾಪಿ ವರ್ಗವು ಅತ್ಯಂತ ಕಷ್ಟಕ್ಕೆ ಗುರಿಯಾಗಿರುತ್ತದೆ.

ರಾಜ್ಯ ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ ಯುದ್ಧೋಪಾದಿಯಲ್ಲಿ ರಾಜ್ಯದ ಜನರನ್ನು ಕೊರೋನಾ ರೋಗದಿಂದ ದೂರ ಮಾಡಲು ಮತ್ತು ಜನರು ನೆಮ್ಮದಿಯಿಂದ ಜೀವನ ನಡೆಸಲು ಈ ಕೆಳಕಂಡ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸುತ್ತೇವೆ.

1) ಮನುಕುಲದ ಹೆಮ್ಮಾರಿಯಾದ ಕೊರೋನಾ ರೋಗ ರಾಷ್ಟ್ರವ್ಯಾಪ್ತಿಯಲ್ಲದೇ ವಿಶ್ವವ್ಯಾಪಿಯಾಗಿ ಹರಡಿರುವ ಹಿನ್ನೆಲೆಯಲ್ಲಿ “ರಾಷ್ಟ್ರೀಯ ವಿಪತ್ತು” ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಲು ಮತ್ತು ಕೊರೋನಾ ರೋಗ ನಿವಾರಣೆ ಹಾಗೂ ಲಾಕ್‍ಡೌನ್ ಅವಧಿಯಲ್ಲಿ ಜನರ ಸಂಕಷ್ಟಕ್ಕೆ ಎಲ್ಲಾ ರೀತಿಯ ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡಲು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು.

2) ಕೊರೋನಾ ರೋಗ ಹರಡುವಿಕೆಯನ್ನು ತಡೆಯಲು ವಿಶ್ವ ಆರೋಗ್ಯ ಸಂಘಟನೆ ಕೊರೋನಾ ರೋಗದ ಪರೀಕ್ಷೆಯನ್ನು ಯುದ್ಧದೋಪಾದಿಯಲ್ಲಿ ನಡೆಸಲು ಪ್ರತಿ ಜಿಲ್ಲೆಯಲ್ಲಿ ಕೂಡಲೇ ಸುಸಜ್ಜಿತವಾದ ಲ್ಯಾಬ್ ಅನ್ನು ತೆರೆಯಲು ಕ್ರಮ ಜರುಗಿಸುವುದು ಜೊತೆಗೆ ಉತ್ತಮ ಗುಣಮಟ್ಟದ ರ್ಯಾಪಿಡ್ ಟೆಸ್ಟ್ ಕಿಟ್‍ಗಳು, ಪಿ.ಪಿ.ಇ. ಕಿಟ್‍ಗಳು, ಗ್ಲೌಸ್‍ಗಳು, ಸ್ಯಾನಿಟೈಜರ್ಸ್, ಔಷಧಿಗಳು ಹಾಗೂ ಸಾಕಷ್ಟು ಪ್ರಮಾಣದ ವೈದ್ಯರು, ದಾದಿಯರು ಹಾಗೂ ಇನ್ನಿತರ ಸಿಬ್ಬಂದಿಯನ್ನು ಒದಗಿಸುವುದು.

3)ಪ್ರಾಣವನ್ನೇ ಪಣವಾಗಿಟ್ಟು ಕೊರೋನಾ ರೋಗದ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ಮುಂತಾದ ಸಿಬ್ಬಂದಿಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಸಂಬಳವನ್ನು ನೀಡಿರುವುದಿಲ್ಲವೆಂದು ತಿಳಿದುಬಂದಿರುತ್ತದೆ. ಕೂಡಲೇ ಸರ್ಕಾರ ಅವರುಗಳ ಸಂಬಳವನ್ನು ಪಾವತಿಸುವುದು ಮತ್ತು ಅವರುಗಳಿಗೆ ವಿಶೇಷ ಭತ್ಯೆಯನ್ನು (ಕನಿಷ್ಠ ಸಂಬಳದ ಎರಡು ಪಟ್ಟು) ನೀಡುವುದು.

4)ಕೊರೋನಾ ರೋಗ ಹೊರತಾದ ಇತರೆ ರೋಗಗಳಿಗೆ ಯಾವುದೇ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳು ವೈದ್ಯೋಪಚಾರ ಮಾಡದೇ ರೋಗಿಗಳು ತೀವ್ರ ತರದ ಕಷ್ಟಕ್ಕೆ ಗುರಿಯಾಗಿದ್ದಾರೆ. ಇದನ್ನು ನಿವಾರಿಸುವ ದೃಷ್ಟಿಯಿಂದ ಕೂಡಲೇ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳನ್ನು ತೆರೆದು ರೋಗಿಗಳಿಗೆ ಕಡ್ಡಾಯವಾಗಿ ಚಿಕಿತ್ಸೆ ನೀಡಲು ಸರ್ಕಾರ ಕ್ರಮ ಜರುಗಿಸುವುದು.
ಅವರುಗಳಿಗೂ ಕೊರೋನಾ ನಿರೋಧಕ ಸೌಲಭ್ಯಗಳನ್ನು ಸರ್ಕಾರ ಒದಗಿಸುವುದು.
5)ಕೊರೋನಾ ರೋಗ ಹರಡಿರುವ ರೆಡ್ ಜೋನ್ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಸೀಲ್‍ಡೌನ್ ಮಾಡುವುದು ಹಾಗೂ ಎಲ್ಲಾ ಪ್ರದೇಶಗಳಲ್ಲಿ ಜನರು ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸುವುದು.

6)ಲಾಕ್‍ಡೌನ್ ಅವಧಿಯಲ್ಲಿ ಎಲ್ಲಾ ಕಾರ್ಮಿಕರು, ಕುಶಲಕರ್ಮಿಗಳಾದ ಸವಿತಾ ಸಮಾಜದವÀರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‍ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಹಾಗೂ ಇನ್ನಿತರ ಬಡವರಿಗೆ ತಲಾವಾರು ಪ್ರತಿ ತಿಂಗಳು ಕನಿಷ್ಠ 10 ಕೆ.ಜಿ. ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಪದಾರ್ಥಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಲು ಕ್ರಮ ಕೈಗೊಳ್ಳುವುದು. ಹಾಗೆಯೇ ಆಹಾರವಿಲ್ಲದೇ ಪ್ರತಿನಿತ್ಯವೂ ಹಸಿವಿನಿಂದ ನರಳುತ್ತಿರುವ ಎಲ್ಲಾ ವರ್ಗದ ಜನರಿಗೆ ಇಂದಿರಾ ಕ್ಯಾಂಟಿನ್ ಅನ್ನು ಸಮರ್ಥವಾಗಿ ಬಳಸಿಕೊಂಡು ಉಚಿತವಾಗಿ ಪ್ರತಿನಿತ್ಯ ಆಹಾರ ಪೂರೈಸಲು ಅಗತ್ಯ ಕ್ರಮ ವಹಿಸುವುದು.

7)ಯಾವ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ಇರುವ ಊರುಗಳಲ್ಲಿ ಜೀವನೋಪಾಯಕ್ಕೆ ದಾರಿಯಿಲ್ಲದೇ ಕಷ್ಟವನ್ನು ಅನುಭವಿಸುತ್ತಿದ್ದಾರೋ ಹಾಗೆಯೇ ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬಂದಿರುವ ಕಾರ್ಮಿಕರು ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಅವರವರ ಊರುಗಳಿಗೆ ಹೋಗಲು ಸಾಧ್ಯವಾಗದೇ ಅತಂತ್ರ ಸ್ಥಿತಿಯಲ್ಲಿರುವವರ ಕೊರೋನಾ ರೋಗದ ವೈದ್ಯಕೀಯ ತಪಾಸಣೆ ಮಾಡಿ, ಅವರವರ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸುವುದು.

8) ರಾಜ್ಯವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆ ಒದಗಿಸುವುದು. ರೈತರು ಬೆಳೆದಿರುವ ಸದರಿ ಪದಾರ್ಥಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೇ ಇದ್ದ ಸಂದರ್ಭದಲ್ಲಿ ಸರ್ಕಾರವೇ ರೈತರ ಹೊಲದಿಂದ ನೇರವಾಗಿ ಬೆಳೆದ ಪದಾರ್ಥಗಳನ್ನು ಖರೀದಿಸಿ, ರೈತರಿಗೆ ಸಹಾಯ ಮಾಡುವುದು. ಹಾಗೆಯೇ ರೈತರು ಬಯಸಿದ ಕಡೆಗಳಲ್ಲಿ ತಾವು ಬೆಳೆದ ಬೆಳೆಗಳನ್ನು ದಾಸ್ತಾನು ಮಾಡಲು ಶೈತ್ಯಾಗಾರಗಳನ್ನು ಮತ್ತು ಗೋಡೌನ್‍ಗಳನ್ನು ಉಚಿತವಾಗಿ ಒದಗಿಸುವುದು.
ಲಾಕ್‍ಡೌನ್ ಅವಧಿಯಲ್ಲಿ ಕೊಯಿಲಿಗೆ ಬಂದ ಹಣ್ಣು, ಹೂವು, ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ಸಾಗಾಣಿಕೆ ಮಾಡಲು ಹಾಗೂ ಮಾರಾಟ ಮಾಡಲು ಅವಕಾಶವಾಗದೇ ನಷ್ಟ ಅನುಭವಿಸಿರುವ ರೈತರಿಗೆ ಹಾಗೂ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೇ ನಷ್ಟ ಅನುಭವಿಸಿರುವ ರೈತರಿಗೂ ಸೂಕ್ತ ನಷ್ಟ ಪರಿಹಾರವನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಅಡಿಯಲ್ಲಿ ನೀಡುವುದು.

9)ಕೊರೋನಾ ರೋಗ ಹರಡಿರುವ ವಿಚಾರವಾಗಿ ನಿರ್ಧಿಷ್ಟ ಜಾತಿ, ಧರ್ಮ, ವರ್ಗಗಳನ್ನು ಗುರಿಯಾಗಿ ಇಟ್ಟುಕೊಂಡು ಅವರುಗಳೇ ಕೊರೋನಾ ರೋಗ ಹರಡಲು ಕಾರಣರು ಎಂದು ಕೆಲವು ಬಿ.ಜೆ.ಪಿ. ಸಂಸದರು, ಶಾಸಕರು ಹಾಗೂ ಇನ್ನಿತರರು ಮಾಧ್ಯಮಗಳ ಮೂಲಕ ಹೇಳಿಕೆ ಕೊಟ್ಟಿರುತ್ತಾರೆ. ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚೋದನಕಾರಿ ಸುದ್ದಿಗಳನ್ನು ಹರಡುತ್ತಿದ್ದರೂ ಸರ್ಕಾರ ಪರಿಣಾಮಕಾರಿಯಾದ ಕ್ರಮಗಳನ್ನು ಜರುಗಿಸಿರುವುದಿಲ್ಲ ಹಾಗೂ ಆರೋಪಿಗಳನ್ನು ದಸ್ತಗರಿ ಮಾಡಿರುವುದಿಲ್ಲ. ಬದಲಾಗಿ ಹಾಸನ ಮುಂತಾದ ಕಡೆಗಳಲ್ಲಿ ಆರೋಪಿತರ ಮೇಲೆ ಕೇಸು ದಾಖಲಿಸಿದ ಪೊಲೀಸ್ ಅಧಿಕಾರಿಗಳ ಮೇಲೆ ತನಿಖೆಗೆ ಆದೇಶಿಸಿ, ಕೆಲವರನ್ನು ಕಡ್ಡಾಯವಾಗಿ ರಜೆ ಕಳುಹಿಸಿ, ಪೊಲೀಸರ ನೈತಿಕ ಸ್ಥೈರ್ಯವನ್ನು ಸರ್ಕಾರ ಕುಂದಿಸಿರುತ್ತದೆ. ಕೂಡಲೇ ಸರ್ಕಾರ ಇಂತಹ ಪೊಲೀಸರ ಮೇಲೆ ಕೈಗೊಂಡಿರುವ ಕ್ರಮಗಳನ್ನು ವಾಪಸ್ ಪಡೆಯುವುದು ಹಾಗೂ ಅಪರಾಧ ಎಸಗಿರುವ ಆರೋಪಿತರ ಮೇಲೆ ಕೇಸು ದಾಖಲಿಸಿ, ಅವರನ್ನು ದಸ್ತಗಿರಿ ಮಾಡುವುದು. ಇಂತಹ ಕಾನೂನುಬಾಹಿರ ಚಟುವಟಿಕೆಗಳು ಪುನರಾವರ್ತನೆಯಾಗದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಹಾಗೂ ವಾರ್ಡ್ ಮಟ್ಟಗಳಲ್ಲಿ ಜನರಲ್ಲಿ ಜಾಗೃತಿ ಉಂಟು ಮಾಡಲು ಸರ್ಕಾರ ಸೂಕ್ತ ಕ್ರಮ ವಹಿಸುವುದು.

10)ಲಾಕ್‍ಡೌನ್ ಅವಧಿಯಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಿದ ಕಾರಣ ನೋಂದಾಯಿತ ಕಾರ್ಮಿಕರಿಗೆ ಕೆಲಸವೂ ಇಲ್ಲದೇ, ಕೂಲಿಯೂ ಇಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ. ಆದುದರಿಂದ ಇವರುಗಳಿಗೆ ಲಾಕ್‍ಡೌನ್ ಅವಧಿಯ ದಿನಗೂಲಿಯನ್ನು ಅವರುಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಜಮಾ ಮಾಡತಕ್ಕದ್ದು ಮತ್ತು ಕೂಡಲೇ ನರೇಗಾ ಯೋಜನೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಲು ಸರ್ಕಾರ ಕ್ರಮ ಜರುಗಿಸುವುದು.

11)ಕುಶಲಕರ್ಮಿಗಳಾದ ಸವಿತಾ ಸಮಾಜದವÀರು, ಮಡಿವಾಳರು, ಬಡಗಿಗಳು, ಕುಂಬಾರರು, ನೇಕಾರರು, ಅಕ್ಕಸಾಲಿಗರು, ಚಮ್ಮಾರರು, ಶಿಲ್ಪಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್‍ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥ ಮುಂತಾದ ವೃತ್ತಿಗಳವರಿಗೆ ಲಾಕ್‍ಡೌನ್ ಅವಧಿಯಲ್ಲಿ ವ್ಯಾಪಾರವಿಲ್ಲದೇ ಅತ್ಯಂತ ನಷ್ಟಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಅವರುಗಳಿಗೆ ವಿಶೇಷ ಪ್ಯಾಕೇಜ್ ರೂಪಿಸಿ, ಪ್ರತಿಯೊಬ್ಬರಿಗೆ ಪ್ರತಿ ತಿಂಗಳೂ ಕನಿಷ್ಠ ರೂ.10,000/-ಗಳನ್ನು ಲಾಕ್‍ಡೌನ್ ಅವಧಿಯಲ್ಲಿ ನೀಡತಕ್ಕದ್ದು.

12)ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರದಿಂದ ಬಡವರಿಗೆ ಹಂಚಿಕೆ ಮಾಡುತ್ತಿರುವ ಆಹಾರ ಮತ್ತು ಆಹಾರ ಪದಾರ್ಥಗಳ ಕಿಟ್‍ಗಳ ಮೇಲೆ ನಮೂದಿಸಿರುವ ಸರ್ಕಾರಿ ಎಂಬ್ಲೆಮ್‍ಗಳ ಮೇಲೆ ಆಡಳಿತ ಪಕ್ಷದ ನಾಯಕರುಗಳ ಹಾಗೂ ಶಾಸಕರುಗಳ ಮತ್ತು ಪಕ್ಷದ ಚಿನ್ಹೆ ಹೊಂದಿರುವ ಲೇಬಲ್‍ಗಳನ್ನು ಅಂಟಿಸಿ ನಮ್ಮ ಪಕ್ಷದಿಂದಲೇ ಆಹಾರ ವಿತರಣೆ ಮಾಡಲಾಗುತ್ತಿದೆಯೆಂದು ಮತದಾರರನ್ನು ಓಲೈಸಿಕೊಳ್ಳುವ ನೀಚ ರಾಜಕೀಯ ಪ್ರವೃತ್ತಿಯನ್ನು ತೋರುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಿ, ಘನತೆಯಿಂದ ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವುದು. ಹಾಗೂ ಸರ್ಕಾರದ ಸೌಲಭ್ಯಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿರುವ ಶಾಸಕರು ಹಾಗೂ ರಾಜಕೀಯ ನಾಯಕರುಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ.

13)ಜೀವ ಮತ್ತು ಜೀವನವನ್ನು ಉಳಿಸಿ, ಬೆಳೆಸಲು ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೂಡಲೇ ರಾಜಕೀಯ ತಜ್ಞರು, ಆರ್ಥಿಕ ತಜ್ಞರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ನಾಯಕರಗಳನ್ನು ಒಳಗೊಂಡಿರುವ ಕಾರ್ಯಪಡೆಯನ್ನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳುವುದು.

14)ಕೊರೋನಾ ರೋಗದ ಕಾರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳು ನಡೆಯುತ್ತವೋ ಇಲ್ಲವೋ, ನಡೆಯುವುದಾದರೆ ಯಾವಾಗ ನಡೆಯುತ್ತವೋ ಎಂಬ ಆತಂಕದಲ್ಲಿದ್ದಾರೆ. ಈ ಆತಂಕವನ್ನು ದೂರ ಮಾಡಲು ಸರ್ಕಾರ ಕೂಡಲೇ ಕ್ರಮ ಜರುಗಿಸುವುದು.

15)ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಜನರ ಬದುಕನ್ನು ಹಸನುಗೊಳಿಸುವ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ವಿಶೇಷ ಪ್ಯಾಕೇಜ್‍ಗಳನ್ನು ಎಲ್ಲಾ ಫಲಾನುಭವಿಗಳಿಗೆ ಯುದ್ಧೋಪಾದಿಯಲ್ಲಿ ದೊರೆಯುವಂತೆ ಸರ್ಕಾರ ಕ್ರಮ ವಹಿಸುವುದು.

City Today News

(citytoday.media)

9341997936

ಅಗತ್ಯ ಸರಕುಗಳ ಹೈಪರ್‌ಲೋಕಲ್ ಡೆಲಿವರಿ ವಲಯಕ್ಕೆ ಶಿಪ್‌ರಾಕೆಟ್‌ ಪ್ರವೇಶ

ಏಪ್ರಿಲ್,: COVID-19 ಸಾಂಕ್ರಾಮಿಕ ರೋಗ ಹರಡುವಿಕೆ ಮತ್ತು ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೇ 3 ರವರೆಗೆ ವಿಸ್ತರಣೆಯಾದ ಹಿನ್ನೆಲೆಯಲ್ಲಿ, ಡಿ2ಸಿ ಸೆಲ್ಲರ್‌ಗಳಿಗಾಗಿನ ತಂತ್ರಜ್ಞಾನ ಆಧರಿತ ಲಾಜಿಸ್ಟಿಕ್ಸ್ ಅಗ್ರಗೇಟರ್‌ ಶಿಪ್‌ರಾಕೆಟ್‌ ಅಗತ್ಯ ಸಾಮಗ್ರಿಗಳ ಹೈಪರ್‌ಲೋಕಲ್ ಡೆಲಿವರಿ ಸೇವೆಗೆ ಕಾಲಿಟ್ಟಿದೆ. ಹೊಸದಾಗಿ ಪ್ರಾರಂಭಿಸಲಾದ ಈ ಸೇವೆಯ ಮೂಲಕ, ಆಹಾರ, ದಿನಸಿ ಮತ್ತು ಔಷಧಗಳಂತಹ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಕಂಪನಿಗಳು ಶ್ಯಾಡೋಫ್ಯಾಕ್ಸ್‌ನ ವಿತರಣಾ ಪಾಲುದಾರರ ಪರಿಣತಿಯನ್ನು ಪಡೆದುಕೊಂಡು 8 ಕಿ.ಮೀ ವ್ಯಾಪ್ತಿಯಲ್ಲಿ ತಮ್ಮ ಆರ್ಡರ್‌ಗಳನ್ನು ತಲುಪಿಸಲು ಬ್ರ್ಯಾಂಡ್ ಅನುವು ಮಾಡಿಕೊಡುತ್ತದೆ.

ಅಹಮದಾಬಾದ್, ದೆಹಲಿ, ಜೈಪುರ, ಮುಂಬೈ, ಪುಣೆ, ಫರಿದಾಬಾದ್, ನೋಯ್ಡಾ, ಗುರುಗ್ರಾಮ್ ಮತ್ತು ಇನ್ನೂ 14 ಪ್ರಮುಖ ನಗರಗಳಲ್ಲಿ ಹೊಸ ಸೇವೆಯನ್ನು ಪ್ರಾರಂಭಿಸಲಾಗಿದೆ.

ಪಾಲುದಾರಿಕೆಯ ಮೂಲಕ ಶಿಪ್‌ರಾಕೆಟ್‌ ತನ್ನ ಸ್ಥಳೀಯ ಅನುಭವಿ ವಿತರಣಾ ಪೂರೈಕೆದಾರರಿಂದ ಅಗತ್ಯ ಉತ್ಪನ್ನಗಳ ತಡೆರಹಿತ ವಿತರಣೆಗೆ ಅನುಕೂಲ ಮಾಡಿಕೊಡಲಿದೆ. ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವುದರಿಂದ, ಬ್ರ್ಯಾಂಡ್‌ಗಳು ಗ್ರಾಹಕರನ್ನು ನೇರವಾಗಿ ತಲುಪಲು ಮತ್ತು ಒಂದೇ ದಿನ ಮತ್ತು ಮುಂದಿನ ದಿನದ ಡೆಲಿವರಿಗಳನ್ನು ತ್ವರಿತವಾಗಿ ಮಾಡಲು ಸಾಧ್ಯವಾಗುತ್ತದೆ. ತೂಕವನ್ನು ಆಧರಿಸಿ ನಿರ್ಬಂಧ ಹೇರುವುದು ಮತ್ತು ರಿಟರ್ನ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ಇದು ಹೊಂದಿರುವುದಿಲ್ಲ. 5 ಕಿ.ಮೀಗೆ 79 ರೂ. ಆರಂಭಿಕ ದರದಲ್ಲಿ ಎಲ್ಲ ಸಮೀಪದ ಆರ್ಡರ್‌ಗಳನ್ನು ಸಾಗಿಸಲು ಬ್ರಾಂಡ್‌ಗಳಿಗೆ ಶಿಪ್‌ರಾಕೆಟ್ ಅನುವು ಮಾಡಿಕೊಡಲಿದೆ.

ಹೊಸ ಸೇವೆಯ ಬಿಡುಗಡೆಯ ಸಮಯದಲ್ಲಿ ಮಾತನಾಡಿದ ಶಿಪ್‌ರಾಕೆಟ್‌ನ ಸಿಇಒ ಮತ್ತು ಸಹಸಂಸ್ಥಾಪಕ ಶ್ರೀ ಸಾಹಿಲ್ ಗೋಯೆಲ್‌, “ಡೆಲಿವರಿ ಏಜೆಂಟ್‌ಗಳು ಲಭ್ಯವಿಲ್ಲದ್ದರಿಂದಾಗಿ ಡೆಲಿವರಿ ವಿಳಂಬವಾಗುತ್ತಿದೆ. ಇದರಿಂದಾಗಿ ಇಕಾಮರ್ಸ್ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಳ್ಳುತ್ತಿವೆ. ಇದಲ್ಲದೆ, ಪ್ರಸ್ತುತ ಸನ್ನಿವೇಶದಲ್ಲಿ, ಗ್ರಾಹಕರು ತಮ್ಮ ಆರ್ಡರ್‌ ನೀಡಿದ ನಂತರ ಒಂದು ದಿನಕ್ಕಿಂತ ಹೆಚ್ಚು ಕಾಲ ಕಾಯಲು ಬಯಸುವುದಿಲ್ಲ.

ಪಾಲುದಾರಿಕೆ ಕುರಿತು ಮಾತನಾಡಿದ, ಭಾರತದ ಅತಿದೊಡ್ಡ ಕ್ರೌಡ್‌ಸೋರ್ಸ್ಡ್ ಲಾಜಿಸ್ಟಿಕ್ಸ್ ಪ್ಲಾಟ್‌ಫಾರ್ಮ್ ಶ್ಯಾಡೋಫ್ಯಾಕ್ಸ್ ಸಿಇಒ ಅಭಿಷೇಕ್ ಬನ್ಸಾಲ್, , “ಜನರಿಗೆ ಅಗತ್ಯವಾದಾಗ ಅಗತ್ಯ ವಸ್ತುಗಳನ್ನು ಲಭ್ಯವಾಗುವಂತೆ ಮಾಡುವುದರಲ್ಲಿ ಲಾಕ್‌ಡೌನ್‌ನ ಪ್ರಸ್ತುತ ಸ್ಥಿತಿಯ ಯಶಸ್ಸು ಅವಲಂಬಿಸಿರುತ್ತದೆ. ಶಿಪ್‌ರಾಕೆಟ್‌ನೊಂದಿಗಿನ ನಮ್ಮ ಸಹಭಾಗಿತ್ವವು ಗ್ರಾಹಕರಿಗೆ ತಮ್ಮ ವಿಶ್ವಾಸಾರ್ಹ ಮಳಿಗೆಗಳಿಂದ ಕೆಲವೇ ಗಂಟೆಗಳ ಅವಧಿಯಲ್ಲಿ ಅಗತ್ಯ ವಸ್ತುಗಳ ಹೈಪರ್‌ಲೋಕಲ್ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ನಿರಂತರ ಪ್ರಯತ್ನದ ಒಂದು ಪ್ರಮುಖ ಭಾಗವಾಗಿದೆ. ಈ ಸಹಭಾಗಿತ್ವವು ಓಮ್ನಿಚಾನಲ್ ಮೂಲಕ ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ಸ್ ಸೇವೆಯ ಸಂಯೋಜಿತ ಕೊಡುಗೆಯಾಗಿದ್ದು, ಚಿಲ್ಲರೆ ವ್ಯಾಪಾರಿಗಳು, ಹೈಪರ್‌ಮಾರ್ಕೆಟ್‌ಗಳು, ಔಷಧಾಲಯಗಳು ಗ್ರಾಹಕರಿಗೆ ತ್ವರಿತವಾಗಿ ಸೇವೆ ಸಲ್ಲಿಸಲು ಅನುವು ಮಾಡಲಿದೆ. ”

2016 ರಲ್ಲಿ ಪ್ರಾರಂಭವಾದ, ಶಿಪ್‌ರಾಕೆಟ್ ಇ-ಕಾಮರ್ಸ್ ವಲಯದಲ್ಲಿ ಕಾರ್ಯನಿರ್ವಹಿಸುವ ಎಂಎಸ್‌ಎಂಇಗಳೊಂದಿಗೆ ಕೆಲಸ ಮಾಡುತ್ತದೆ. 26000 ಪಿನ್ ಕೋಡ್‌ಗಳಲ್ಲಿ ಸುಮಾರು 220 ದೇಶಗಳಿಗೆ ಸಾಗಣೆಯನ್ನು ಇದು ಒದಗಿಸುತ್ತದೆ. ಇಂದು, ಈ ಬ್ರಾಂಡ್ 1.5 ಲಕ್ಷ ಮಾರಾಟಗಾರರನ್ನು ಹೊಂದಿದೆ ಮತ್ತು 15 ಕೊರಿಯರ್ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತದೆ

City Today News

(citytoday.media)

9341997936

‘Progress for Humanity’

Hyundai Motor India Partners with Air Liquide Medical Systems to Augment Production and Supply of Ventilators

* Hyundai Motor India to collaborate with Air Liquide Medical Systems in identification of Alternate Suppliers for Ventilator Parts

* Hyundai Motor India and Air Liquide Medical Systems aiming at enhancing the production and supply of Ventilators to Tamil Nadu and other states

April 18, 2020: Hyundai Motor India (HMI), country’s first Smart Mobility Solutions Provider and largest exporter since inception, has entered into a partnership with Air Liquide Medical Systems Pvt. Ltd. (ALMS) a Manufacturer of ICU Ventilators, to augment the production and supply of Ventilators in Tamil Nadu and other states. With this partnership HMI and ALMS aim to achieve a target of 1000 ventilators in the Phase 1 of production, and to scale up subsequently. 

Ventilators are medical devices used by healthcare professionals that take over the work of breathing from a patient who is unable to breathe on their own by delivering air with high concentration of oxygen to their lungs. For patients severely affected by COVID-19, ventilators are critical to ensure continuous oxygen is supplied to overcome respiratory insufficiency.

Commenting on this arrangement  with Air Liquide Medical Systems Pvt. Ltd. , Mr. SS Kim, MD & CEO, Hyundai Motor India Ltd., said, “Ventilators and other respiratory aids are critical devices in the fight against COVID-19 and to this end, Hyundai & Air Liquide Medical Systems are working together to ensure a steady supply of Ventilators in India. As a Socially Responsible and Caring Brand, Hyundai is committed to serving society in every way and will continue to support the Government in India’s war against         COVID-19.”

Commenting on the Partnership, Mr. Anil Kumar, MD, Air Liquide Medical Systems, India, said, “As a company that engages in supporting the healthcare professionals and systems worldwide, we have initiated a prompt response towards the fight against COVID-19 in support of the Government of India. We are confident that this collaboration with Hyundai Motor India will bring about a positive shift in this battle. We are one of the very few Global companies with a dedicated R&D to manufacture Ventilators in India. Air Liquide Medical Systems is employing all the resources available to manufacture innovative, easy-to use and high-performing ventilators and will hold the reins to deliver quality service across the country during this time of need, and to spearhead the Make in India initiative.” 

With a strong focus on Hyundai’s Global Vision of ‘Progress for Humanity’, HMI will continue to support the Government of India with multiple CSR initiatives for the betterment of society and communities.

City Today News

(citytoday.media)

9341997936

30 ದಿನಗಳ ಆನ್‌ಲೈನ್ ಕೋಡಿಂಗ್ ಬೂಟ್ ಕ್ಯಾಂಪ್  ಪ್ರಾರಂಭಿಸಿದ ಬ್ರಿಡ್ಜ್ ಲ್ಯಾಬ್ಜ್

ಬೆಂಗಳೂರು: ಉದಯೋನ್ಮುಖ ತಂತ್ರಜ್ಞಾನದ ಜಾಗದಲ್ಲಿ ಎಂಜಿನಿಯರಿಂಗ್ ಪ್ರತಿಭೆ ಮತ್ತು ಆಲೋಚನೆಗಳನ್ನು ಪೋಷಿಸುವ ಗುರಿಯನ್ನು ಹೊಂದಿರುವ ಭಾರತದ ಅತಿದೊಡ್ಡ ಐಪಿ-ಚಾಲಿತ ಇನ್ಕ್ಯುಬೇಷನ್ ಲ್ಯಾಬ್‌ಗಳಲ್ಲಿ ಒಂದಾದ ಬ್ರಿಡ್ಜ್‌ ಲ್ಯಾಬ್ಜ್ ಸೊಲ್ಯೂಷನ್ಸ್ ಎಲ್‌ಪಿ ಸಂಸ್ಥೆಯು 30 ದಿನಗಳ ಆನ್‌ಲೈನ್ ಕೋಡಿಂಗ್ ಬೂಟ್ ಕ್ಯಾಂಪ್ ಅನ್ನು “ಕೋಡಿನ್‌ ಕ್ಲಬ್” ಅನ್ನು ಪ್ರಾರಂಭಿಸಿದೆ. 
ದೇಶದಾದ್ಯಂತ ಏಪ್ರಿಲ್ 1 ರಿಂದ 30 ರವರೆಗೆ ಎಂಜಿನಿಯರ್‌ಗಳ ಕೌಶಲವನ್ನು ಹೆಚ್ಚಿಸುತ್ತದೆ. ಬೂಟ್ ಕ್ಯಾಂಪ್ ಹೊಸ ಎಂಜಿನಿಯರಿಂಗ್ ಪ್ರತಿಭೆಗಳಿಗೆ ಉದ್ಯಮ-ಸಂಬಂಧಿತ ಕೋಡಿಂಗ್ ಕೌಶಲ್ಯಗಳನ್ನು ಮತ್ತು ಅವರ ಮನೆಗಳ ಸೌಕರ್ಯದಿಂದ ಸಜ್ಜುಗೊಳಿಸುವ ಮೂಲಕ ಅಸ್ತಿತ್ವದಲ್ಲಿರುವ ಕೌಶಲ್ಯ-ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕಲಿಯುವವರನ್ನು ತಮ್ಮ ಮನೆಯ ಸೌಕರ್ಯದಿಂದ ಮೂಲಭೂತ ಕೋಡಿಂಗ್ ಪ್ರಾವೀಣ್ಯತೆಯ ಮಟ್ಟಕ್ಕೆ ತರಲು ಸಹಾಯ ಮಾಡಲು ಬ್ರಿಡ್ಜ್‌ಲ್ಯಾಬ್ಜ್ ಬೂಟ್ ಕ್ಯಾಂಪ್ ಅನ್ನು ರಚಿಸಿದೆ.
ಕಂಪನಿಯು ಕಳೆದ ವರ್ಷದಿಂದ ವಿವಿಧ ಸ್ಥಳಗಳಲ್ಲಿ ಕೋಡಿಂಗ್ ಬೂಟ್ ಕ್ಯಾಂಪ್‌ಗಳನ್ನು ನಡೆಸುತ್ತಿದೆ. ಮೊದಲ ತಿಂಗಳಿಗೆ 200 ಕ್ಕೂ ಹೆಚ್ಚು ಸೈನ್ ಅಪ್‌ ಗಳಿಂದ ಪ್ರಾರಂಭಿಸಿ ಈ ವರ್ಷ ಮಾರ್ಚ್ ವರೆಗೆ 1000 ಕ್ಕೂ ಹೆಚ್ಚು ತಲುಪಿದೆ. ಈ ಬಾರಿ ಬೂಟ್ ಕ್ಯಾಂಪ್‌ನ ವಾಸ್ತವ ಸ್ವರೂಪದಿಂದಾಗಿ ಕಂಪನಿಯು ಮುಂದಿನ ಮೂರು ತಿಂಗಳಲ್ಲಿ 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೂರೈಸುವ ನಿರೀಕ್ಷೆಯಿದೆ. ಏಪ್ರಿಲ್‌ನಲ್ಲಿ ಮಾತ್ರ 500 ಕ್ಕೂ ಹೆಚ್ಚು ಸೈನ್ ಅಪ್‌ಗಳನ್ನು ಹೊಂದಿದೆ.
ಕಳೆದ ವರ್ಷ ಎಫ್‌ವೈ 19-20 ಮಾರ್ಚ್‌ನಲ್ಲಿ ಕೊನೆಗೊಂಡಾಗ ಬ್ರಿಡ್ಜ್‌ ಲ್ಯಾಬ್ಜ್ ತನ್ನ ಫೆಲೋಶಿಪ್ ಕಾರ್ಯಕ್ರಮದ ಮೂಲಕ ಭಾರತದಾದ್ಯಂತ 1000 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಯಶಸ್ವಿಯಾಗಿ ಬೆಳೆಸಿದೆ. ಇದು ಉದ್ಯಮಗಳಿಗೆ ಸಂಬಂಧಿಸಿದ ಕೋಡಿಂಗ್ ಕೌಶಲ್ಯಗಳ ವ್ಯಾಪಕ ಅನುಭವದ ಕಲಿಕೆಯೊಂದಿಗೆ ಯೋಜನೆಗಳನ್ನು ಒದಗಿಸುತ್ತದೆ ಮತ್ತು ತಜ್ಞ ಮಾರ್ಗದರ್ಶಕರಿಂದ ಮಾರ್ಗದರ್ಶನ ನೀಡುತ್ತದೆ.

City Today News

(citytoday.media)

9341997936

ಮಿಶ್ರ ಸಂಕೇತ ನೀಡುತ್ತಿರುವ ಸರಕುಗಳು

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವ ಹಿನ್ನೆಲೆಯಲ್ಲಿ ತೀವ್ರ ನಷ್ಟವನ್ನು ತಪ್ಪಿಸಲು ಹೂಡಿಕೆದಾರರು ಸರಕುಗಳ ಮೇಲೆ ಆಕ್ರಮಣಕಾರಿ ಪಂತಗಳನ್ನು ಮಾಡುವುದನ್ನು ತಪ್ಪಿಸುತ್ತಿದ್ದಾರೆ. ಎಲ್ಲಾ ದೊಡ್ಡ ರಾಷ್ಟ್ರಗಳು ತಮ್ಮ ಆರ್ಥಿಕತೆಗಾಗಿ ಚೇತರಿಕೆ ಯೋಜನೆಗಳನ್ನು ರೂಪಿಸಿದ್ದರೂ ಕೈಗಾರಿಕಾ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಬರುವ ಮೊದಲು ಅಗತ್ಯವಿರುವ ಕನಿಷ್ಠ ಸಮಯದ ಬಗ್ಗೆ ಹೂಡಿಕೆದಾರರು ಈಗಲೂ ಖಚಿತವಾಗಿರುತ್ತಾರೆ ಎಂದು ಏಂಜಲ್ ಬ್ರೋಕಿಂಗ್ ಲಿಮಿಟೆಡ್ ಸಂಸ್ಥೆಯ ನಾನ್ ಅಗ್ರಿ ಕಮಾಡಿಟಿಸ್ ಅಂಡ್ ಕರೆನ್ಸಿಸ್ ವಿಭಾಗದ ಚೀಫ್ ಅನಾಲಿಸ್ಟ್ ಪ್ರಥಮೇಶ್ ಮಲ್ಯ ಹೇಳಿದರು.
ಸ್ಪಾಟ್ ಗೋಲ್ಡ್ ಬೆಲೆ ಸ್ವಲ್ಪಮಟ್ಟಿಗೆ ಏರಿಕೆಯಾಗಿ 0.11 ರಷ್ಟು ಏರಿಕೆ ಕಂಡು ಪ್ರತಿ ಔನ್ಸ್‌ ಗೆ 1717.7 ಡಾಲರ್ ತಲುಪಿದೆ. ಯುಎಸ್ ಆರ್ಥಿಕತೆಯು ಕಳೆದ ವಾರ ನಿರುದ್ಯೋಗ ಹಕ್ಕುಗಳ ಸಂಖ್ಯೆಯಲ್ಲಿ ಕುಸಿತವನ್ನು ವರದಿ ಮಾಡಿದೆ. ಇದು ಕೋವಿಡ್-19 ಸಾಂಕ್ರಾಮಿಕದ ಪರಿಣಾಮವು ಶೀಘ್ರದಲ್ಲೇ ಸರಾಗವಾಗಲಿದೆ ಎಂಬ ನಿರೀಕ್ಷೆಗೆ ಕಾರಣವಾಯಿತು.
ಸ್ಪಾಟ್ ಬೆಳ್ಳಿ ಬೆಲೆ 0.94 ರಷ್ಟು ಏರಿಕೆಯಾಗಿ oun ನ್ಸ್‌ಗೆ 6 15.6 ಕ್ಕೆ ತಲುಪಿದೆ ಆದರೆ ಎಂಸಿಎಕ್ಸ್‌ನ ಬೆಲೆಗಳು 0.51 ಶೇಕಡ ಏರಿಕೆಯಾಗಿ ಪ್ರತಿ ಕೆಜಿಗೆ 44,255 ರೂ.ಒಪೆಕ್ + ಮತ್ತು ಯು.ಎಸ್. ಉತ್ಪಾದನಾ ಚಟುವಟಿಕೆಗಳಲ್ಲಿನ ಮಂದಗತಿಯು ಬೆಲೆಗಳನ್ನು ಬೆಂಬಲಿಸಿದ್ದರಿಂದ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 19.9 ಡಾಲರ್ ರಂತೆ ಮುಕ್ತಾಯವಾಯಿತು. ಪ್ರಪಂಚದಾದ್ಯಂತದ ಲಾಕ್‌ ಡೌನ್‌ಗಳಿಂದಾಗಿ ಬೇಡಿಕೆಯ ನಾಶವು ಕಚ್ಚಾ ತೈಲದ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಇಂಧನಕ್ಕಾಗಿ ಕೈಗಾರಿಕಾ ಬೇಡಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಒಪೆಕ್ ಮತ್ತು ಅದರ ಮಿತ್ರರಾಷ್ಟ್ರಗಳು ತಮ್ಮ ಉತ್ಪಾದನೆಯನ್ನು ದಿನಕ್ಕೆ 19.5 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದಾರೆ.
ಜಾಗತಿಕ ಹಿಂಜರಿತದ ಬಗ್ಗೆ ಆತಂಕಗಳು ಕೈಗಾರಿಕಾ ಲೋಹಗಳ ಬೇಡಿಕೆಯ ದೃಷ್ಟಿಕೋನಕ್ಕೆ ಅಡ್ಡಿಯುಂಟುಮಾಡಿದ್ದರಿಂದ ಲಂಡನ್ ಮೆಟಲ್ ಎಕ್ಸ್ಚೇಂಜ್ (ಎಲ್ಎಂಇ) ನಲ್ಲಿನ ಬೇಸ್ ಮೆಟಲ್ ಬೆಲೆಗಳು ಬೆರೆತಿವೆ. ಚೀನಾದಿಂದ ಸಕಾರಾತ್ಮಕ ಆರ್ಥಿಕ ದತ್ತಾಂಶಗಳ ಮೇಲೆ ಬೆಲೆಗಳು ಕೆಲವು ಬೆಂಬಲವನ್ನು ಕಂಡುಕೊಂಡವು.
ಚೀನಾದ ಸಕಾರಾತ್ಮಕ ಆರ್ಥಿಕ ಮಾಹಿತಿಯು ಕೆಂಪು ಲೋಹದ ಬೆಲೆಗಳನ್ನು ಬೆಂಬಲಿಸುತ್ತಿರುವುದರಿಂದ ಗುರುವಾರ, ಎಲ್ಎಂಇ ತಾಮ್ರದ ಬೆಲೆಗಳು 0.56 ಶೇಕಡಾ ಹೆಚ್ಚಳದಿಂದ ಪ್ರತಿ ಟನ್‌ ಗೆ 40 5140 ಕ್ಕೆ ತಲುಪಿದೆ. ಎಲ್ಎಂಇ ಪರಿಶೀಲಿಸಿದ ಗೋದಾಮಿನ ತಾಮ್ರದ ದಾಸ್ತಾನು ಮಟ್ಟವು 2020 ರ ಆರಂಭದಿಂದಲೂ ದ್ವಿಗುಣಗೊಂಡಿದೆ.

City Today News

(citytoday media)

9341997936