ಬೆಂಗಳೂರು: ಬಸವನಗುಡಿಯಲ್ಲಿ ಭವ್ಯ “ಮಹಾಶಿವರಾತ್ರಿ – ಮಹಾಕುಂಭ ಉತ್ಸವ 2025”

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳಕ್ಕೆ ಹೋಗಲು ಸಾಧ್ಯವಿಲ್ಲದ ಭಕ್ತಾದಿಗಳಿಗೆ ಅನುಕೂಲವಾಗುವಂತೆ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಫೆಬ್ರವರಿ 23 ರಿಂದ 26 ರವರೆಗೆ ಭವ್ಯ “ಮಹಾಶಿವರಾತ್ರಿ – ಮಹಾಕುಂಭ ಉತ್ಸವ 2025” ಆಯೋಜಿಸಲಾಗಿದೆ.

ಈ ವಿಶೇಷ ಧಾರ್ಮಿಕ ಉತ್ಸವವು ಫೆಬ್ರವರಿ 23 ರಂದು ಸಂಜೆ 5 ಗಂಟೆಗೆ ಅಘೋರಿಗಳ ಸಾನಿಧ್ಯದಲ್ಲಿ ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡು, ಫೆಬ್ರವರಿ 27 ರ ಬೆಳಗ್ಗೆ 6 ಗಂಟೆಯವರೆಗೆ ಶಿವರಾತ್ರಿ ಆರಾಧನೆಯೊಂದಿಗೆ ಸಂಪನ್ನಗೊಳ್ಳಲಿದೆ.

ಪ್ರಮುಖ ವೈಶಿಷ್ಟ್ಯಗಳು:

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ಪವಿತ್ರ ಜಲ ಸಂಪ್ರೋಕ್ಷಣೆ

108 ಭವ್ಯ ಕುಂಭಗಳಲ್ಲಿ ಪವಿತ್ರ ಜಲ ಪ್ರತಿಷ್ಠಾಪನೆ ಮತ್ತು ಪೂಜೆ

108 ಸ್ಪಟಿಕ ಶಿವಲಿಂಗ ಪೂಜೆ

6 ಅಡಿ ಮಹಾ ಕುಂಭಕ್ಕೆ ಪ್ರತಿ ಗಂಟೆಗೊಮ್ಮೆ ವಿಶೇಷ ಪೂಜೆ

ಮಹಾಮೃತ್ಯುಂಜಯ ಹೋಮ (ಪ್ರತಿ ದಿನ ಬೆಳಗ್ಗೆ 10 ರಿಂದ 12.30)

ನಾಗಸಾಧುಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು

ಪ್ರಸಿದ್ಧ ಹಾಸ್ಯ ಕಲಾವಿದ ಪ್ರಾಣೇಶ್ ಹಾಗೂ ತಂಡದಿಂದ ಹಾಸ್ಯ ಸಂಜೆ

ಸುಪ್ರಸಿದ್ಧ ಹಿನ್ನಲೆ ಗಾಯಕರಿಂದ ಭಕ್ತಿ ಸಂಗೀತ ಕಾರ್ಯಕ್ರಮ

ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಿಂದ ತರಲಾದ ಶಿವಲಿಂಗಗಳ ದರ್ಶನ ಭಾಗ್ಯ

ಲೋಕ ಕಲ್ಯಾಣಾರ್ಥವಾಗಿ 3 ದಿನಗಳ ಮಹಾ ಮೃತ್ಯುಂಜಯ ಹೋಮ

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ದಾಖಲೆ ಪ್ರಯತ್ನ


ಪ್ರಯಾಗ್‌ರಾಜ್‌ನಿಂದ ತರಲಾದ ಪವಿತ್ರ ಜಲವನ್ನು ಭಕ್ತಾದಿಗಳು ತಮ್ಮ ಮನೆಗೆ ತೆಗೆದುಕೊಂಡು ಹೋಗುವ ಅವಕಾಶ ಕೂಡ ಕಲ್ಪಿಸಲಾಗಿದೆ. ಮಹಾಶಿವರಾತ್ರಿಯಂದು ಈ ಜಲದಿಂದ ಶಾಹಿ ಸ್ನಾನ ಮಾಡಿ ಪುನೀತರಾಗಲು ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬಹುದು.

ಈ ಭವ್ಯ ಧಾರ್ಮಿಕ – ಸಾಂಸ್ಕೃತಿಕ ಉತ್ಸವವನ್ನು ಆಯುಷ್ ಟಿವಿ ಆಯೋಜಿಸಿದ್ದು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾಗವಹಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕ:
ಹರಿಕೃಷ್ಣ. ಎಂ – ವ್ಯವಸ್ಥಾಪಕ ನಿರ್ದೇಶಕರು, ಆಯುಷ್ ಟಿವಿ
📞 72599 63218 / 80500 32192

City Today News 9341997936

ಮಾಂಸ ತಿನ್ನುವ ಸೋಂಕಿನಿಂದ ಬಳಲುತ್ತಿದ್ದ 50 ವರ್ಷದ ಪೊಲೀಸ್ ಅಧಿಕಾರಿಗೆ ಯಶಸ್ವಿ ಚಿಕಿತ್ಸೆ



ಬೆಂಗಳೂರು: ಫ್ಯಾಸಿಟಿಸ್ ಎಂಬ ಮಾಂಸ ತಿನ್ನುವ ಸೋಂಕಿನಿಂದ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದ 50 ವರ್ಷದ ಪೊಲೀಸ್ ಅಧಿಕಾರಿಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ  ನಡೆಸಲಾಗಿದೆ.

ಫೋರ್ಟಿಸ್ ಆಸ್ಪತ್ರೆಯಲ್ಲಿ ,  ಸರ್ಜಿಕಲ್‌ ಗ್ಯಾಸ್ಟ್ರೋಲಾಜಿ ಹಿರಿಯ ಸಲಹೆಗಾರ ಡಾ. ಸಂತೋಷ್ ಎಂ.ಪಿ, ಅವರ ತಂಡ ಈ ಯಶಸ್ವಿ ಚಿಕಿತ್ಸೆಯನ್ನು ನಡೆಸಿದೆ. ಈ ಕುರಿತು ಮಾತನಾಡಿದ ಡಾ. ಸಂತೋಷ್‌,
50 ವರ್ಷದ ರವಿ (ಹೆಸರು ಬದಲಾಗಿದೆ) ಎಂಬ ಪೊಲೀಸ್‌ ಅಧಿಕಾರಿಯು ತೀವ್ರ ಕಾಲಿನ ಊತದಿಂದ ಬಳಲುತ್ತಿದ್ದರು, ಇದರ ಜೊತೆಗೆ, ಅತಿಯಾದ ನೋವು ಜ್ವರವನ್ನು ಹೊಂದಿದ್ದರು. ಈ ಹಿಂದೆಯೇ ಅವರು ಹೃದಯ ಸಮಸ್ಯೆ ಹೊಂದಿದ್ದ ಇವರಿಗೆ ಮಧಮೇಹದ ಇತಿಹಾಸವೂ ಇತ್ತು. ಹೃದಯ ಕಾಯಿಲೆಗಾಗಿ ಅನೇಕ ಚಿಕಿತ್ಸೆಗೆ ಒಳಗಾಗಿದ್ದ ಅವರ ಸ್ಥಿತಿ, ಈ ಕಾಲಿನ ಊತ ಹಾಗೂ ಸೋಂಕಿನಿಂದ ಹದಗೆಡುತ್ತಾ ಬರುತ್ತಿತ್ತು. ಅವರ ಕೀಲುಗಳು ಮತ್ತು ಮೂಳೆಗಳಿಗೂ ಈ ಸೋಂಕು ಹರಡಿತು. ಅವರ ಪೊಲೀಸ್‌ ವೃತ್ತಿಯಲ್ಲಿ ಕಾಲು ಅತಿ ಅವಶ್ಯಕವಾದ್ದರಿಂದ ಎಚ್ಚತ್ತೆಕೊಂಡ ಅವರು, ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು.

ರವಿ ಅವರಿಗೆ ನೆಕ್ರೋಟೈಸಿಂಗ್ ಫ್ಯಾಸಿಟಿಸ್ ಮೂಲಕ ಸಂಕೀರ್ಣವಾದ ಮಧುಮೇಹದ ಪಾದದಿಂದ ಬಳಲುತ್ತಿರುವುದು ಗಮನಕ್ಕೆ ಬಂತು.ಇದು ಜೀವಕ್ಕೆ ಅಪಾಯಕಾರಿ ಸೋಂಕಾಗಿದ್ದು, ಮೃದು ಅಂಗಾಂಶಗಳನ್ನು ವೇಗವಾಗಿ ಹಾನಿಗೊಳಿಸುತ್ತದೆ, ಅಷ್ಟೇ ಅಲ್ಲದೆ, ಮೂಳೆಗಳಿಗೂ ಹರಡುತ್ತದೆ. ಹೀಗಾಗಿ ಅವರಿಗೆ ಕೂಡಲೇ. ಪ್ರತಿಜೀವಕಗಳು ಮತ್ತು ವ್ಯಾಕ್ಯೂಮ್‌ ಅಸಿಸ್ಟೆಡ್‌ ಕ್ಲೋಸರ್‌ (ವಿಎಸಿ) ಚಿಕಿತ್ಸೆಯನ್ನು ಶಿಫಾರಸು ಮಾಡಿದೆವು, ಈ ವಿಧಾನದ ನೂತನವಾಗಿದ್ದು, ಸೋಂಕನ್ನು ನಿಯಂತ್ರಿಸಿ, ವೇಗವಾಗಿ ಗುಣಪಡಿಸಲು ಸಹಕರಿಸುತ್ತದೆ.
ಒಂದು ತಿಂಗಳ ಅವಧಿಯಲ್ಲಿ, ರವಿ ಅವರಿಗೆ ಮೂರು ಶಸ್ತ್ರಚಿಕಿತ್ಸೆ ನಡೆಸಿ, ಪ್ರತಿಯೊಂದೂ ಸೋಂಕನ್ನೂ ತೆಗೆದುಹಾಕುವ ಕ್ರಿಯೆ ನಡೆಸಲಾಯಿತು. ಅವರ ಅಂತಿಮ ಶಸ್ತ್ರಚಿಕಿತ್ಸೆಯ ನಂತರ, ರವಿಯ ಸ್ಥಿತಿ ಸ್ಥಿರವಾಗಿದೆ ಎಂದು ವಿವರಿಸಿದರು.

City Today News 9341997936

ಮಡಿವಾಳ ಮಾಚಿದೇವ ಜಯಂತಿ ಮಹೋತ್ಸವಕ್ಕೆ ಭವ್ಯ ಸಿದ್ಧತೆ

ಬೆಂಗಳೂರು: ಮಡಿವಾಳ ಮಾಚಿದೇವ ಟ್ರಸ್ಟ್ ವತಿಯಿಂದ 2025ರ ಮಾರ್ಚ್ 2ರಂದು ಭಾನುವಾರ ಮಡಿವಾಳ ಮಾಚಿದೇವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ, ಮಡಿವಾಳ ಮಾಚಿದೇವರನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮೂಲಕ ಸಾಗಿಸಲಾಗುವುದು. ಇದಲ್ಲದೆ, 101 ಕಳಸದ ಉತ್ಸವವು ಮಹಿಳೆಯರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಬಸವ ಮಾಚಿದೇವ ಸ್ವಾಮೀಜಿ (ಚಿತ್ರದುರ್ಗ ಮಹಾಸಂಸ್ಥಾನ ಮಠ) ಹಾಗೂ ವಿವಿಧ ಮಡಿವಾಳ ಮುಖಂಡರು, ಸ್ಥಳೀಯ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮ ವಿವರ:
▶ ಮೆರವಣಿಗೆ: ಬೆಳಗ್ಗೆ 8.00 ಗಂಟೆಗೆ ಶಂಕರಮಠ ಸರ್ಕಲ್ ನಿಂದ ಪ್ರಾರಂಭವಾಗಿ ಕುರುಬರಹಳ್ಳಿ ಸರ್ಕಲ್ ವರೆಗೆ ನಡೆಯಲಿದೆ.
▶ ಅನ್ನದಾನ: ಮಧ್ಯಾಹ್ನ 12.00 ಗಂಟೆಗೆ ಡಾ. ರಾಜ್‌ಕುಮಾರ್ ಪ್ರತಿಮೆ ಮುಂಭಾಗ, ಕುರುಬರಹಳ್ಳಿ ಸರ್ಕಲ್, ಬೆಂಗಳೂರು-86 ನಲ್ಲಿ ಆಯೋಜಿಸಲಾಗಿದೆ.

ಟ್ರಸ್ಟ್ ಪದಾಧಿಕಾರಿಗಳು ಸಮುದಾಯದ ಎಲ್ಲಾ ಸದಸ್ಯರಿಗೆ ಈ ಮಹೋತ್ಸವದಲ್ಲಿ ಭಾಗವಹಿಸಿ, ತನು-ಮನ-ಧನ ಸಹಾಯದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

City Today News 9341997936

South Indian Bank wins 5 awards at the 20th Annual IBA Technology Awards 2024



Bangalore, 17 February 2025: South Indian Bank (SIB), well known for its novel contributions in banking technology, was recognised at the 20th edition of the Annual Banking Technology Awards 2024. The awards reflect SIB’s commitment to delivering innovative and customer-centric digital solutions.

The Annual Banking Technology Awards 2024, were part of the Annual Banking Technology Conference, Expo & Citations, organised by the Indian Banks’ Association (IBA). The awards recognise organisations that have brought in transformational changes in their businesses by adopting modern digital solutions. At a glittering ceremony on January 24 in Mumbai, SIB was declared the winner in the category of ‘Best Tech Talent & Organization’. Additionally, SIB received a special mention in the categories of ‘Best Digital Sales, Payments & Engagement’, ‘Best IT Risk Management’ and ‘Best Fintech, & DPI Adoption’. Moreover, the Bank was adjudged runners-up in the ‘Best Financial Inclusion’ category.

Mr. P R Seshadri, MD & CEO, South Indian Bank,expressed joy at the achievement, “We are honoured to receive these prestigious recognitions from the IBA yet again. These awards underscore our commitment to leveraging technology to enhance customer experience, drive financial inclusion, and ensure secure digital transactions. The awards acknowledge our efforts toward nurturing talent and building a strong tech team. It encourages us to continue our drive of continuous innovation, uncovering novel banking solutions for all our stakeholders, while also affirming our position as a forward-thinking financial institution.”

City Today News 9341997936

ಗುತ್ತಿಗೆ ಶುಶ್ರೂಷಾಧಿಕಾರಿಗಳ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿಗೆ ಕರೆ – ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಕಠಿಣ ಹೋರಾಟ

ಬೆಂಗಳೂರು, ಫೆಬ್ರವರಿ 24: ರಾಜ್ಯದ ಗುತ್ತಿಗೆ ಶುಶ್ರೂಷಾಧಿಕಾರಿಗಳು ತಮ್ಮ ಸೇವೆಯನ್ನು ಖಾಯಂ ಮಾಡಬೇಕು ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ಫೆಬ್ರವರಿ 24 ರಿಂದ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿಗೆ ಕರೆ ನೀಡಿದ್ದಾರೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರು ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಧ್ಯಕ್ಷರಾದ ಪಿ.ಎನ್. ರಾಧಾ ಸುರೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಸೌಮ್ಯ ಶ್ರೀ.ಕೆ ಈ ಬಗ್ಗೆ ಮಾಹಿತಿ ನೀಡಿದರು.

ಪ್ರಮುಖ ಬೇಡಿಕೆಗಳು:

1️⃣ ಸೇವೆ ಖಾಯಂ: ಗುತ್ತಿಗೆ ಶುಶ್ರೂಷಾಧಿಕಾರಿಗಳನ್ನು ಖಾಯಂ ಮಾಡಿ, ಅವರಿಗೆ ಶಾಶ್ವತ ಉದ್ಯೋಗ ಭದ್ರತೆ ನೀಡಬೇಕು.

2️⃣ ಸಮಾನ ಕೆಲಸಕ್ಕೆ ಸಮಾನ ವೇತನ: ಸುಪ್ರೀಂ ಕೋರ್ಟ್ ಆದೇಶದಂತೆ ಖಾಯಂ ನೌಕರರಿಗೆ ನೀಡುವ ವೇತನವನ್ನು ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಸಹ ನೀಡಬೇಕು. ಕನಿಷ್ಠಪಕ್ಷ, ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ಇರುವ ವೇತನ ಮಾದರಿಯಂತೆ ವೇತನ ನಿಗದಿಪಡಿಸಬೇಕು.

3️⃣ ಜೇಷ್ಠತಾ ಆಧಾರದ ಮೇಲೆ ಕೃಪಾಂಕ: ಮುಂಬರುವ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತಾ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ನೀಡಬೇಕು. ಗುತ್ತಿಗೆ ವೈದ್ಯಾಧಿಕಾರಿಗಳಿಗೆ 30 ಕೃಪಾಂಕ ನೀಡಿದಂತೆ, ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಪ್ರತಿ ವರ್ಷಕ್ಕೆ 3 ಕೃಪಾಂಕಗಳಂತೆ ಗರಿಷ್ಠ 30 ಕೃಪಾಂಕ ನೀಡಬೇಕು.

4️⃣ ಜಿಲ್ಲಾ ವರ್ಗಾವಣೆ: ಕಳೆದ ಎರಡು ವರ್ಷಗಳಿಂದ ಹಲವಾರು ಸಮಿತಿಗಳು ಸಭೆ ನಡೆಸಿದರೂ, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಕುರಿತಂತೆ ಯಾವುದೇ ನೀತಿ ರೂಪಿಸಿಲ್ಲ. ತಕ್ಷಣ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು.

5️⃣ ಪರಿಗಣನೆ ಇಲ್ಲದ ಸೇವೆಯನ್ನು ಪರಿಗಣಿಸಬೇಕು: PHCO [2 ANM] ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಗುತ್ತಿಗೆ ಶುಶ್ರೂಷಾಧಿಕಾರಿಗಳ ಸೇವೆಯನ್ನು ನೇಮಕಾತಿಯಲ್ಲಿ ಪರಿಗಣಿಸಲು ಆದೇಶ ಹೊರಡಿಸಿದರೂ, ಅದು ಜಾರಿಗೆ ಬರಲಿಲ್ಲ. ತಕ್ಷಣ ಈ ಆದೇಶವನ್ನು ಜಾರಿಗೆ ತರಬೇಕು.

ಕೊನೆಗೆ, ಗುತ್ತಿಗೆ ಶುಶ್ರೂಷಾಧಿಕಾರಿಗಳು ಏನಂದರು?
“ಸರ್ಕಾರ ನಮ್ಮ ಬೇಡಿಕೆಗಳನ್ನು ಹಲವಾರು ಬಾರಿ ಕೇಳಿ ತಡೆಯಾಡಿದೆ. ಆದರೆ ಈ ಬಾರಿ ನಾವು ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ತೀವ್ರಗೊಳಿಸಬೇಕಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಿಶ್ಚಿತ!”

ಈ ಮುಷ್ಕರದಿಂದ ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದ್ದರೂ, ಪ್ರತಿಭಟನಾಕಾರರು ಸರ್ಕಾರದ ನಿರ್ಲಕ್ಷ್ಯವೇ ಈ ಹಂತಕ್ಕೆ ತರುವಂತಾಗಿದೆ ಎಂದು ತೋಡಿಕೊಂಡಿದ್ದಾರೆ. ಈಗ ಎಲ್ಲರ ಗಮನ ಸರ್ಕಾರದ ಪ್ರತಿಕ್ರಿಯೆ ಕಡೆ ಹೊರಳಿದೆ.

City Today News 9341997936