ಕ್ರಿಸ್‌ಮಸ್ ಮತ್ತು ಹೊಸ ವರ್ಷ ಸಂಭ್ರಮಕಾಗಿ ವಂಡರ್ ಲಾ ಬೆಂಗಳೂರು ವಿಶೇಷವಾದ ಪಾಸ್ ಕೊಡುಗೆಗಳನ್ನು ಘೋಷಿಸಿದೆ

ಬೆಂಗಳೂರು, ಭಾರತ, ಡಿಸಂಬರ್ 10, 2024 – ಭಾರತದ ಅತಿ ದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಚೈನ್ ಆದ ವಂಡರ್ ಲಾ ಹಾಲಿಡೇಸ್ ಲಿ., ಡಿಸಂಬರ್ 21ರಿಂದ ವಿಶೇಷವಾದ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾಸ್ ಕೊಡುಗೆಗಳು ಹಾಗೂ ಅನೇಕ ಥೀಮ್ ಇರುವ ಚಟುವಟಿಕೆಗಳನ್ನು ತನ್ನ ಬೆಂಗಳೂರು ಪಾರ್ಕ್‌ನಲ್ಲಿ ಹಬ್ಬದ ಸಂಭ್ರಮಾಚರಣೆಗಳನ್ನು ಘೋಷಿಸಿದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪಾಸ್, ಅಥಿತಿಗಳು, ತಮಗೆ ಅನುಕೂಲವಾಗುವ ರೀತಿಯಲ್ಲಿ ಪಾರ್ಕ್‌ಅನ್ನು ಆನಂದಿಸುವ ಅಂತಿಮ ಪರಿವರ್ತನಾ ಆಯ್ಕೆಯಾಗಿ ನೀಡಿದೆ. ಡಿಸಂಬರ್ 10 ಮತ್ತು ಜನವರಿ 5 ನಡುವೆ,  ಯಾವುದೇ ದಿನದಲ್ಲಾದರೂ ಅತಿಥಿಗಳು ಈ ಪಾಸ್ಗಳನ್ನು ಬುಕ್ ಮಾಡಿ ಭೇಟಿ ನೀಡಬಹುದು-ಇದಕ್ಕೆ ಯಾವುದೇ ಪೂರ್ವ ಆಯ್ಕೆ ದಿನಾಂಕಗಳು ಅಗತ್ಯವಿಲ್ಲ. ಈ ಪಾಸ್ ಪಾರ್ಕ್ ಟಿಕೆಟ್‌ಗಳ ಮೇಲೆ 30% ರಿಯಾಯಿತಿ ಹಾಗೂ ವಿಶೇಷವಾಗಿ ರಚಿಸಲಾದ ಆಹಾರ ಕಾಂಬೋ ಪ್ಯಾಕೇಜಸ್ ಮೇಲೆ 30% ರಿಯಾಯಿತಿಯೊಂದಿಗೆ ಅದ್ವಿತೀಯ ಮೌಲ್ಯವನ್ನೂ ಒದಗಿಸುತ್ತದೆ.   ಈ ಕೊಡುಗೆಗಳು ಆನ್‌ಲೈನ್ ಬುಕಿಂಗ್‌ಗಳಿಗೆ ಮಾತ್ರ ಲಭ್ಯವಿರುತ್ತದೆ.
ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆಚರಣೆಯ ಚೈತನ್ಯಕ್ಕೆ ತಕ್ಕಂತೆ ಅದ್ಭುತವಾದ ಅಲಂಕಾರಗಳೊಂದಿಗೆ ಆರಂಭಗೊಂಡು, ಅತಿಥಿಗಳು ತಮ್ಮ ಪ್ರೀತಿಪಾತ್ರರೊಡನೆ ಆನಂದಿಸುವಂತಹ ಮನಮೋಹಕ ವಾತಾವರಣ ಸೃಷ್ಟಿಸುತ್ತದೆ. ವಿಶೇಷವಾಗಿ ರಚಿಸಲಾದ ಫುಡ್ ಫೆಸ್ಟಿವಲ್ ಋತುಮಾನಿಕ ಟ್ರೀಟ್‌ಗಳನ್ನು ಮತ್ತು ಈ ಹಬ್ಬದ ಸಂಭ್ರಮದಲ್ಲಿ ಇತರ ವಿಶೇಷ ತಿನಿಸುಗಳನ್ನೂ, ಅದರ ಜೊತೆಗೆ ವಿಶೇಷ ಡಿನ್ನರ್ ಬಫೆ  ಒಳಗೊಂಡಿರುತ್ತದೆ. ಒಂದು ಜೋಡಿಗೆ ರೂ. 349* ಕೈಗೆಟುಕುವ ದರದಲ್ಲಿ ಡಿಸಂಬರ್ 21ರಿಂದ ಜನವರಿ 1ರವರೆಗೆ, ವಿಶೇಷವಾಗಿ ರಚಿಸಲಾದ ಮೆನು ಇರುವ ವಂಡರ್ ಲಾದ ಐತಿಹಾಸಿಕ ಸ್ಕೈ ವೀಲ್ ಮೇಲೆ ವಿಶೇಷವಾದ ಸೆಲೆಬ್ರೆಟೊರಿ ಸ್ಕೈ-ಡೈನ್ ಆಯ್ಕೆಯನ್ನೂ ಪಾರ್ಕ್ ಒದಗಿಸುತ್ತಿದೆ.
ಕ್ರಿಸ್‌ಮಸ್-ಥೀಮ್ ಇರುವ ಉಡುಗೊರೆಗಳು, ವಸ್ತ್ರಗಳು ಮತ್ತು ಚಟುವಟಿಕೆಯ ಫ್ಲೀ ಮಾರ್ಕೆಟ್ ಕೂಡ ಲಭ್ಯವಿದ್ದು, ನಿಖರ ರಜಾ ಸ್ಮರಣೆಗಳನ್ನು ಖಾತರಿಪಡಿಸುತ್ತವೆ. ದಿನಕ್ಕೆರೆಡು ಬಾರಿ ನಡೆಯುವ ಅದ್ಧೂರಿ ಕ್ರಿಸ್‌ಮಸ್ ಮೆರವಣಿಗೆ ಅತಿಥಿಗಳಿಗಾಗಿ ಈ ವರ್ಷದ ಆಚರಣೆಗಳನ್ನು ಅವಿಸ್ಮರಣೀಯಗೊಳಿಸುತ್ತದೆ. ರಾತ್ರಿಯಾಗುತ್ತಿದ್ದಂತೆ, LED ಜಗ್ಲಿಂಗ್ ಪ್ರದರ್ಶನ, ಮ್ಯಾಜಿಕ್ ಶೋ,  ವಯೊಲಿನ್ ಶೋ, ಡಿಜೆ ಸೆಟ್‌ಗಳು ಮತ್ತು ಜೂಂಬಾ ಡ್ಯಾನ್ಸ್ ಒಳಗೊಂಡಂತೆ ಅನೇಕ ಕೌತುಕಮಯವಾದ ಚಟುವಟಿಕೆಗಳು ಸಾಲುಸಾಲಾಗಿ ಕಾದಿರುತ್ತವೆ. ಪ್ರತಿಯೊಂದು ಸಂಜೆಯೂ ಕಾರ್ಯಕ್ರಮಗಳ ವಿಶಿಷ್ಟ ಮಿಶ್ರಣ ಒಳಗೊಂಡಿರುತ್ತದೆ. ಇದರ ಜೊತೆಗೆ ಭಾಗವಹಿಸುವವರು, ಮೋಜು, ಸಂತೋಷ ಹಾಗೂ ಅವಿಸ್ಮರಣೀಯ ಕ್ಷಣಗಳಿಂದ ತುಂಬಿದ ಋತುವನ್ನು ಕೂಡ ನಿರೀಕ್ಷಿಸಬಹುದು.
ವಂಡರ್ ಲಾ ಹಾಲಿಡೇಸ್ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪಿಳ್ಳಿ ಯವರು, “ಈ ಹಬ್ಬದ ಋತುವಿನಲ್ಲಿ, ಬೆಂಗಳೂರಿನ ವಂಡರ್ಲಾಗೆ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಮಾಯೆಯನ್ನು ತರುವುದಕ್ಕೆ ನಮಗೆ ಅತ್ಯಂತ ಹರ್ಷವೆನಿಸುತ್ತಿದೆ. ಕೌತುಕಮಯವಾದ ಕೊಡುಗೆಗಳು, ಮನಮೋಹಕ ಅಲಂಕರಣಗಳು ಹಾಗೂ ಕುಟುಂಬದವರು ಮತ್ತು ಸ್ನೇಹಿತರಿಗಾಗಿ ಅನೇಕ ಚಟುವಟಿಕೆಗಳ ಮಿಶ್ರಣದೊಂದಿಗೆ ನಾವು ನಮ್ಮ ಸಂದರ್ಶಕರಿಗಾಗಿ ಅವಿಸ್ಮರಣೀಯ ಮನೋರಂಜನೆ ಸೃಷ್ಟಿಸುವ ಗುರಿ ಇರಿಸಿಕೊಂಡಿದ್ದೇವೆ. ಋತುವಿನ ಚೈತನ್ಯವನ್ನು ಹಿಡಿದಿಡುವ ಮನಸೂರೆಗೊಳ್ಳುವ ಮತ್ತು ಮೋಜಿನಿಂದ-ಕೂಡಿದ ಅನುಭವವನ್ನು ಒದಗಿಸುವ ಸಮಯದಲ್ಲೇ ಎಲ್ಲರೂ ಆಶ್ಚರ್ಯಗೊಳ್ಳುವ ವಿಶೇಷ ರಿಯಾಯಿತಿಗಳನ್ನು ಒದಗಿಸುವುದು ನಮ್ಮ ಧ್ಯೇಯೋದ್ದೇಶವಾಗಿದೆ.” ಎಂದು ಹೇಳಿದರು.

ಆನ್‌ಲೈನ್ ಪೋರ್ಟಲ್ https://bookings.wonderla.com/ ಮೂಲಕ ತಮ್ಮ ಎಂಟ್ರಿ ಟಿಕೆಟ್ ಬುಕ್ ಮಾಡಲು ವಂಡರ್ ಲಾ ಸಂದರ್ಶಕರನ್ನು ಪ್ರೋತ್ಸಾಹಿಸುತ್ತದೆ. ಅಥವಾ ಇದಕ್ಕಾಗಿ ಅವರು ಬೆಂಗಳೂರು ಪಾರ್ಕ್‌ಅನ್ನು ಈ ಸಂಖ್ಯೆಯಲ್ಲೂ ಸಂಪರ್ಕಿಸಬಹುದು -: +91 80372 30333, +91 9945557777.
ವಂಡರ್‌ಲಾ ಹಾಲಿಡೇಸ್ ಲಿ., ಕುರಿತು
ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್, ಭಾರತದ ಅತಿದೊಡ್ಡ ಹಾಗೂ ಪ್ರೀಮಿಯರ್ ಮನರಂಜನಾ ಪಾರ್ಕ್ ಆಪರೇಟರ್ ಆಗಿದ್ದು, ತನ್ನ ಅಗ್ರಮಾನ್ಯ ಮನರಂಜನೆ ಹಾಗೂ ವಿಶಿಷ್ಟ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ಸುಪ್ರಸಿದ್ಧ ವಂಡರ್‌ಲಾ ರೆಸಾರ್ಟ್ ಜೊತೆಗೆ, ಸಂಸ್ಥೆಯು ಕೊಚ್ಚಿನ್, ಬೆಂಗಳೂರು, ಹೈದರಾಬಾದ್, ಹಾಗೂ ಭುವನೇಶ್ವರಗಳಲ್ಲಿ ನಾಲ್ಕು ವಿಶ್ವ-ದರ್ಜೆ ಮನರಂಜನಾ ಪಾರ್ಕ್‌ಗಳ ಕಾರ್ಯಾಚರಣೆ ನಡೆಸುತ್ತದೆ. ಮುಂಚೂಣಿ ಅಂತರರಾಷ್ಟ್ರೀಯ ಸರಬರಾಜುದಾರರಿಂದ ಪಡೆದುಕೊಂಡ ಅಗತ್ಯಕ್ಕೆ-ತಕ್ಕಂತೆ ತಯಾರಿಸಿದ ರೈಡ್‌ಗಳ ಜೊತೆಗೆ ವಂಡರ್‌ಲಾ ಭಾರತದಲ್ಲಿ ಸರಿಸಾಟಿಯಿಲ್ಲದ ಅನುಭವಗಳನ್ನು ಒದಗಿಸುತ್ತದೆ. 2000ದಲ್ಲಿ ಸ್ಥಾಪನೆಯಾದಾಗಿನಿಂದಲೂ 43 ದಶಲಕ್ಷಕ್ಕಿಂತ ಹೆಚ್ಚಿನ ಮಂದಿ ವಂಡರ್‌ಲಾ ಪಾರ್ಕ್‌ಗಳನ್ನು ಆನಂದಿಸಿರುವುದು, ದೇಶದಲ್ಲಿ ಅತಿಹೆಚ್ಚು ಭೇಟಿನೀಡಲ್ಪಡುವ ಮನರಂಜನಾ ಪಾರ್ಕ್ ಆಗಿ ಅದರ ಪ್ರಸಿದ್ಧಿಯನ್ನು ದೃಢಪಡಿಸಿದೆ. ಭಾರತ ಹಾಗೂ ಏಶ್ಯಾದಲ್ಲಿರುವ ಅಗ್ರಮಾನ್ಯ ಮನರಂಜನಾ ಪಾರ್ಕ್‌ಗಳ ಪೈಕಿ ಸತತವಾಗಿ ಶ್ರೇಯಾಂಕ ಗಳಿಸಿರುವ ವಂಡರ್‌ಲಾ ಮೋಜು ಹಾಗೂ ಕುಟುಂಬ ಮನರಂಜನೆಗಾಗಿ ಒಂದು ಮಾನದಂಡ ಸ್ಥಾಪಿಸಿದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:
ವಂಡರ್‌ಲಾ ಹಾಲಿಡೇಸ್ ಲಿ.,                                                              
ಇ-ಮೇಲ್: pr@wonderla.com
ಅನನ್ಯ ಪಾಂಡೆ, ಅಕೌಂಟ್ ಎಕ್ಸಿಕ್ಯೂಟಿವ್, ಎಮ್‌ಎಸ್‌ಎಲ್ ಗ್ರೂಪ್ (MSLGroup)
ಇ-ಮೇಲ್: ananya.pandey@mslgroup.comn

City Today News 9341997936

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ



• ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್, ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3492 ಮತ್ತು 3191 ಸಾರಥ್ಯದಲ್ಲಿ ಆಯೋಜನೆ

• ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಸಮಗ್ರ ಆರೋಗ್ಯ ಟ್ರಸ್ಟ್ & ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್, ಮಯಾಮಿ, ಫ್ಲೋರಿಡಾ ಸಹಯೋಗ

* ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಇಂಟ‌ರ್ ನ್ಯಾಷನಲ್ ಕನ್ವೆನ್ಸನ್ ಸೆಂಟರ್‌ನಲ್ಲಿ ನಡೆಯಲಿರುವ ಯೋಗ ಶೃಂಗ

* 2024ರ ಯೋಗ ಶೃಂಗದ ಥೀಮ್- ಸ್ವಯಂ ಆರೈಕೆ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಯೋಗ

* 5000ಕ್ಕೂ ಹೆಚ್ಚು ಪ್ರತಿನಿಧಿಗಳು ಜಗತ್ತಿನ 50ಕ್ಕೂ ಹೆಚ್ಚು ದೇಶಗಳಿಂದ ಭಾಗಿ * ಕರ್ನಾಟಕದ 5000+ ಯೋಗ ಶಿಕ್ಷಕರಿಗೆ, ಥೆರಪಿಸ್ಟ್‌ಗಳಿಗೆ ಮತ್ತು ಕನ್ಸಲ್ಲೆಂಟ್‌ಗಳಿಗೆ ಉದ್ಯೋಗಾವಕಾಶಗಳ ಶೋಧಕ್ಕೆ ಯೋಗ ಶೃಂಗದ ಮೂಲಕ ಪ್ರಯತ್ನ

* ಯೋಗ ಶೃಂಗದಲ್ಲಿ ಡಾಕ್ಟರ್‌ಗಳು, ಶಿಕ್ಷಣ ತಜ್ಞರು, ಯೋಗ ಗುರುಗಳು, ವೇದ ಗುರುಗಳು ಸೇರಿದಂತೆ 50ಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ: ವೈಜ್ಞಾನಿಕ ಪ್ರಬಂಧ ಮಂಡನೆಗಳು: ಪ್ರಾಯೋಗಿಕ ಯೋಗ ತರಗತಿಗಳು: ಯೋಗದ ಮೂಲಕ ದಾಖಲೆಗಳ ನಿರ್ಮಾಣ: ಔಷಧರಹಿತ ಚಿಕಿತ್ಸೆಗಳು

ಬೆಂಗಳೂರು, ಬುಧವಾರ, ಡಿಸೆಂಬರ್ 11, 2024: ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ (ಜಿವೈಎಸ್) ಆಯೋಜನೆಗೆ ಬೆಂಗಳೂರು ಸಜ್ಜಾಗಿದೆ. ಯೋಗ ಮತ್ತು ಸ್ವಯಂ ಆರೈಕೆಯ ಮೂಲಕ ಪರಿಪೂರ್ಣ ಬದುಕಿನ ಆಶಯದೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಪಸರಿಸುವ ನಿಟ್ಟಿನಲ್ಲಿ ಈ ಶೃಂಗ ಆಯೋಜನೆಗೊಂಡಿದೆ. ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್ ಮತ್ತು ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3192 & 3191 ಸಂಸ್ಥೆಗಳು ಸ್ವಾಮಿ ವಿವೇಕಾನಂದ ಯೋಗ ಸಂಶೋಧನೆ ಮತ್ತು ಪರಿಪೂರ್ಣ ಆರೋಗ್ಯ ಟ್ರಸ್ಟ್ ಹಾಗೂ ಯೋಗ ಯುನಿವರ್ಸಿಟಿ ಆಫ್ ದಿ ಅಮೆರಿಕಾಸ್ (ಮಯಾಮಿ, ಫ್ಲೋರಿಡಾ) ಸಹಯೋಗದಲ್ಲಿ ಶೃಂಗವನ್ನು ಹಮ್ಮಿಕೊಂಡಿವೆ. ಎರಡು ದಿನಗಳ ಈ ಪ್ರತಿಷ್ಠಿತ ಯೋಗ ಸಮ್ಮೇಳನವು ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಇಂಟರ್ ನ್ಯಾಷನಲ್ ಕ ‌ನ್ಸನ್ ಸೆಂಟರ್‌ನಲ್ಲಿ 2024ರ ಡಿಸೆಂಬರ್ 14 ಮತ್ತು 15ರಂದು ನಡೆಯಲಿದೆ. ಸಂಪ್ರದಾಯ ಮತ್ತು ನಾವೀನ್ಯತೆಯ ಮಿಶ್ರಣವಾಗಿರುವ ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಆಯುಷ್ ಸಚಿವಾಲಯವು ಸಹಯೋಗ ನೀಡಿದೆ.

ಎರಡು ದಿನಗಳ ಶೃಂಗದಲ್ಲಿ ಜಗತ್ತಿನ 50ಕ್ಕೂ ಅಧಿಕ ದೇಶಗಳಿಂದ 5000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅವರಲ್ಲಿ ಶಿಕ್ಷಣ ತಜ್ಞರು, ಯೋಗ ಗುರುಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೈದ್ಯರು, ವೇದ ಪಂಡಿತರು ಮತ್ತು ಯೋಗ ಕುತೂಹಲಿಗಳು ಸೇರಿದ್ದಾರೆ. ಈ ವರ್ಷದ ಯೋಗ ಶೃಂಗದ ಥೀಮ್ ‘Yogu for Self-Care and Social harmony (Empowering Life)’ (ಸ್ವಯಂ ಆರೈಕೆಗಾಗಿ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಯೋಗ (ಬದುಕಿನ ಸಬಲೀಕರಣ) ಎಂಬುದಾಗಿದೆ. ಯೋಗದ ಮೂಲಕ ಮಾನಸಿಕ ಆರೋಗ್ಯ, ಸಾಮುದಾಯಿಕ ಸ್ವಾಸ್ಥ್ಯ ಹಾಗೂ ಸ್ವಯಂ ಸಬಲೀಕರಣದ ಆಶಯ ಇದರ ಹಿಂದಿದೆ.

ಡಿಸೆಂಬರ್ 14ರಂದು ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲರಾಗಿರುವ ಘನತೆವೆತ್ತ ಶ್ರೀ ಸಿ.ಎಚ್.ವಿಜಯಶಂಕರ್ ಅವರು ಭಾಗವಹಿಸಲಿದ್ದಾರೆ. ಯಲಹಂಕದ ಶಾಸಕ ಶ್ರೀ ಎಸ್.ಆರ್.ವಿಶ್ವನಾಥ್, ಆರ್‌ಬಿಜಿವೈ ಚಾರ್ಟರ್ ಪ್ರೆಸಿಡೆಂಟ್ ಮತ್ತು ಜಿವೈಎಸ್ 2024 ಅಧ್ಯಕ್ಷರಾದ ರೊಟೇರಿಯನ್ ಡಾ.ಯೋಗಿ ದೇವರಾಜ್ ಗುರೂಜಿ ಉಪಸ್ಥಿತರಿರಲಿದ್ದಾರೆ. ಯೋಗಾಸಕ್ತರು ಹಾಗೂ ಆಯುಷ್ ತಜ್ಞರಿಗೆ ಶೃಂಗವು ಸಮಾಜದ ಒಳಿತಿಗಾಗಿ ಯೋಗದ ಕುರಿತಾದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆ ಒದಗಿಸಲಿದೆ. ಉದ್ಘಾಟನಾ ಸಮಾರಂಭದಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ನಿರಂಜನಾನಂದ ಪುಂ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ಶ್ರೀ ಶ್ರೀ ಶ್ರೀ ಡಾ.ಪ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಅವಧೂತ ಶ್ರೀ ಶ್ರೀ ವಿನಯ ಗುರೂಜಿ ಮುಂತಾದ ಗಣ್ಯರು ಕೂಡ

ಉದ್ಘಾಟನಾ ಸಮಾರಂಭದಲ್ಲಿ ‘ಯುವ’ ಅಂತಾರಾಷ್ಟ್ರೀಯ ತಜ್ಞ ಹಾಗೂ ದಾಸಸಾಹಿತ್ಯ ನಿಪುಣ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಗುರೂಜಿ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಎಂಡಿಎನ್‌ ವೈ ಮಾಜಿ ನಿರ್ದೇಶಕ ಡಾ.ಈಶ್ವರ ವಿ. ಬಸವರಡ್ಡಿ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ.

ಜಿವೈಎಸ್ 2024 ಚೇರ್ಮನ್ ರೊಟೇರಿಯನ್ ಬಿ.ಎಲ್.ನಾಗೇಂದ್ರಈ ಕುರಿತು ಹೆಚ್ಚಿನ ಮಾಹಿತಿ ನೀಡಿ, ಇದು ಕೇವಲ ಒಂದು ಶೃಂಗವಲ್ಲ, ಇದೊಂದು ಯೋಗ ಚಳವಳಿ, ಇಂದಿನ ಧಾವಂತದ ಯುಗದಲ್ಲಿ ಯೋಗವು ಎಲ್ಲರ ಕೈಗೆಟಕುವಂತೆ ಮಾಡಲು ಹಾಗೂ ಅದರ ಪ್ರಸ್ತುತತೆಯನ್ನು ಎನ್ನಲರಿಗೂ ತಿಳಿಸಲು ಯೋಗಾಸಕ್ತರು, ಸಂಶೋಧಕರು ಹಾಗೂ ಯೋಗ ವೃತ್ತಿಪರರಿಗೆ ವೇದಿಕೆಯನ್ನು ಇಲ್ಲಿ ಒದಗಿಸಲಾಗುತ್ತಿದೆ. ಯೋಗವು ಹೇಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಿ ಪರಿಪೂರ್ಣ ಮತ್ತು ಅರ್ಥಪೂರ್ಣ ಬದುಕು ಸಾಗಿಸಲು ನೆರವಾಗಲಿದೆ ಎಂಬ ಸಂದೇಶವನ್ನು ಎಲ್ಲೆಡೆ ಹರಡುವುದು ಇದರ ಉದ್ದೇಶ, ಜೊತೆಗೆ ಯೋಗ ವ್ಯಕ್ತಿಪರರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಲು ಇಲ್ಲಿ ಪ್ರಯತ್ನಿಸಲಾಗುತ್ತದೆ’ ಎಂದು ತಿಳಿಸಿದರು.

ಜಿವೈಎಸ್ 2024 ಅಧ್ಯಕ್ಷ ಡಾ.ಯೋಗಿ ದೇವರಾಜ್ ಮಾತನಾಡಿ, ‘ಯೋಗವು ಬದುಕಿನ ತತ್ವಜ್ಞಾನವಾಗಿದೆ. ಇದು ಕೇವಲ ಆಸನಗಳಿಗೆ ಸಂಬಂಧಿಸಿದ್ದಲ್ಲ. ಬದಲಿಗೆ ಯೋಗವು ಪರಿಪೂರ್ಣ ಬದುಕಿನ ಮಾರ್ಗವನ್ನು ತೋರಿಸುತ್ತದೆ. ಜೊತೆಗೆ ಧನಾತ್ಮಕ ಚಿಂತನೆ, ಭಾವನಾತ್ಮಕ ತಾಳ್ಮೆ ಹಾಗೂ ಸ್ವಯಂ ಜಾಗೃತಿಯನ್ನು ನಮ್ಮಲ್ಲಿ ಮೂಡಿಸುತ್ತದೆ. ಈ ವರ್ಷದ ಯೋಗ ಶೃಂಗದ ಆಶಯ ‘ಸ್ವಯಂ ಆರೈಕೆ ಹಾಗೂ ಸಾಮಾಜಿಕ ಸಾಮರಸ್ಯಕ್ಕಾಗಿ ಯೋಗ’ ಎಂಬುದಾಗಿದ್ದು, ಯೋಗವು ಹೇಗೆ ನಮ್ಮೊಳಗೆ ಪ್ರಶಾಂತತೆಯನ್ನು ಮೂಡಿಸಿ, ಅದರೊಂದಿಗೆ ಸಮಾಜದಲ್ಲೂ ಸಮತೋಲನವನ್ನು ತರಲು ಯತ್ನಿಸಲಿದೆ ಎಂಬುದನ್ನು ಇದು ಹೇಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ಜಿವೈಎಸ್ 2024ನಲ್ಲಿ ಏನೇನು ಇರಲಿದೆ?

ಎರಡು ದಿನಗಳ ಯೋಗ ಶೃಂಗವು ಯೋಗಾಸಕ್ತರು, ಯೋಗ ತಜ್ಞರು, ಶಿಕ್ಷಣ ತಜ್ಞರು, ವೈದ್ಯಕೀಯ ವೃತ್ತಿಪರರು ಹಾಗೂ ಸ್ವಾಸ್ಥ್ಯ ತಜ್ಞರಿಗೆ ತಮ್ಮ ಕೌಶಲ ಮತ್ತು ಸಂಪರ್ಕ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸಲಿದೆ.

ಜಾಗತಿಕ ತಣ್ಣರಿಂದ ಪ್ರಧಾನ ಭಾಷಣ: ಯೋಗ ಗುರುಗಳು, ವೇದ ಪಂಡಿತರು. ಶಿಕ್ಷಣ ತಜ್ಞರು ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ವೈದ್ಯರೂ ಸೇರಿದಂತೆ 50ಕ್ಕೂ ಹೆಚ್ಚು ವಿಷಯ ತಜ್ಞರು ಯೋಗ ಮತ್ತು ಆಧುನಿಕ ಬದುಕಿನ ನಡುವೆ ಸಂಪರ್ಕ ಕಲ್ಪಿಸುವ ಬಗ್ಗೆ ಶೃಂಗದಲ್ಲಿ ಮಾತನಾಡಲಿದ್ದಾರೆ. ಜರ್ಮನಿ, ಬ್ರಿಟನ್, ರಷ್ಯಾ, ಮಲೇಷ್ಯಾ, ನೇಪಾಳ ಮತ್ತು ಆಸ್ಟ್ರೇಲಿಯಾದಿಂದ ಆಗಮಿಸಿದ ತಜ್ಞರು ಕೂಡ ಈ ವಿಷಯದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ವೈಜ್ಞಾನಿಕ ಪ್ರಬಂಧ ಮಂಡನೆಗಳು: ಸಂಶೋಧಕರು ಹಾಗೂ ತಜ್ಞರು ಯೋಗ ಮತ್ತು ಅದರ ಪ್ರಯೋಜನಗಳ ಕುರಿತಾಗಿ ತಾವು ಮಾಡಿದ ಸಂಶೋಧನೆಗಳ ಪ್ರಬಂಧವನ್ನು ಮಂಡಿಸಲಿದ್ದಾರೆ. ಅವುಗಳಲ್ಲಿ ಯೋಗದಿಂದ ಉಂಟಾಗುವ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳ ಕುರಿತಾಗಿ ಸಾಕ್ಷಾಧಾರಿತ ಒಳನೋಟಗಳು ಇರಲಿವೆ.

ಸಂವಾದ ಯೋಗ ಮತ್ತು ಥೆರಪಿ ವರ್ಕತಾಪ್: ಯೋಗ ಗುರುಗಳಿಂದ ಯೋಗದ ಹೊಸ ತಾಂತ್ರಿಕತೆಗಳ ಬಗ್ಗೆ ಹಾಗೂ ಔಷಧರಹಿತ ಚಿಕಿತ್ಸೆಗಳ ಬಗ್ಗೆ ಪ್ರಾಯೋಗಿಕ ತರಗತಿಗಳು ಇರಲಿವೆ. ಇದರಲ್ಲಿ ರೇಖ, ಆಕ್ಯುಪ್ರೆಷನರ್, ರಿಪ್ಲೆಕ್ನಾಲಜಿ ಮತ್ತು ಪ್ರಾಣಿಕ್ ಹೀಲಿಂಗ್ ಕೂಡ ಸೇರಿದೆ. ಮಾನಸಿಕ ಒತ್ತಡ, ಖಿನ್ನತೆ, ಆತಂಕ ಇತ್ಯಾದಿ ತೊಂದರೆಗಳಿಗೆ ಪರ್ಯಾಯ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ವರ್ಕಶಾಪ್ಗಳು ನಡೆಯಲಿವೆ.

ಯೋಗವಿಜ್ಞಾನದ ಕುರಿತು ಚರ್ಚೆ: ಯೋಗ ಯುನಿವರ್ಸಿಟಿ ಆಫ್ ದಿ ಅಮೆರಿಕಾಸ್ ವತಿಯಿಂದ ಸಾಕ್ಷಾಧಾರಿತ ಸಂಶೋಧನೆ ಮತ್ತು ಕಲಿಕಾ ಪದ್ಧತಿಗಳ ಕುರಿತು ವಿಶೇಷ ಮಾಹಿತಿ ನೀಡುವ ಸೆಷನ್‌ಗಳು ಇರಲಿವೆ. ಸಾಂಪ್ರದಾಯಿಕ ಮತ್ತು ಆಧುನಿಕ ವೈದ್ಯ ವಿಜ್ಞಾನಗಳ ಮಿತ್ರಣದ ಬಗ್ಗೆ ಅದರಲ್ಲಿ ಒತ್ತು ನೀಡಲಾಗುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ದಾಖಲೆ: ಶೃಂಗದಲ್ಲಿ ಮಲ್ಲಖಂಬ ಹಾಗೂ ಡೊಳ್ಳು ಕುಣಿತದ ಪ್ರದರ್ಶನವಿರಲಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಯೋಗ ಪಟುಗಳಿಂದ ಯೋಗ ಪ್ರದರ್ಶನ ಮತ್ತು ದಾಖಲೆ ನಿರ್ಮಾಣ ನಡೆಯಲಿದೆ.

ಆಯುಷ್ ಥೆರಪಿಗಳ ಪ್ರದರ್ಶನ: ಪ್ರತಿನಿಧಿಗಳಿಗೆ ಆಕ್ಯುಪಂಕ್ಚರ್, ಕಪ್ಪಿಂಗ್ ಥೆರಪಿ, ಮೆಡಿಕಲ್ ಆಸ್ಥಾನಮಿ ಮುಂತಾದ ಬೇರೆ ಬೇರೆ ರೀತಿಯ ಥೆರಪಿ ಮತ್ತು ಚಿಕಿತ್ಸೆಗಳನ್ನು ಪಡೆಯಲು ಅವಕಾಶವಿರಲಿದೆ.

ಯೋಗಪಟುಗಳಿಗೆ ಉದ್ಯೋಗಾವಕಾಶ: ಜಿವೈಎಸ್ 2024ರ ಪ್ರಮುಖ ಉದ್ದೇಶಗಳಲ್ಲಿ 4000-5000 ಯೋಗ ಶಿಕ್ಷಕರು, ಥೆರಪಿಸ್ಟ್‌ಗಳು ಹಾಗೂ ಕನ್ನೆಲ್ಲೆಂಟ್‌ಗಳಿಗೆ ಉದ್ಯೋಗಾವಕಾಶಗಳನ್ನು ಹುಡುಕಿಕೊಳ್ಳಲು ನೆರವಾಗುವುದೂ ಆಗಿದೆ. ಯೋಗ. ವೃತ್ತಿಪರರು ಮತ್ತು ಕಾರ್ಪೊರೇಟ್ ಕ್ಷೇತ್ರದ ನಡುವೆ ಸಂಪರ್ಕ ಕಲ್ಪಿಸುವ ಯತ್ನವನ್ನು ಯೋಗ ಶೃಂಗವು ಮಾಡಲಿದೆ.

ಸಮಾರೋಪ ಸಮಾರಂಭ ಡಿಸೆಂಬರ್ 15ರಂದು ನಡೆಯಲಿದೆ. ದೇಶದ ಪ್ರಸಿದ್ಧ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್.

ಕರ್ನಾಟಕ ಸರ್ಕಾರದ ಕಂದಾಯ ಸಚಿವ ಶ್ರೀ ಕೃಷ್ಣಬೈರೇಗೌಡ, ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಶ್ರೀ ಎನ್.ಚಲುವರಾಯಸ್ವಾಮಿ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ದಿನೇಶ್ ಗುಂಡೂರಾವ್, ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ವ್ಯವಹಾರಗಳ ಸಚಿವ ಶ್ರೀ ಕೆ.ಎಚ್.ಮುನಿಯಪ್ಪ ಪಾಲ್ಗೊಳ್ಳಲಿದ್ದಾರೆ.

ನೋಂದಾಯಿತ ಪ್ರತಿನಿಧಿಗಳಿಗೆ ಯೋಗ ತಜ್ಞರು ಮತ್ತು ಇನ್ನಿತರ ಪರ್ಯಾಯ ಚಿಕಿತ್ಸಾ ತಜ್ಞರಿಂದ ಉಚಿತ ಔಷಧರಹಿತ ಚಿಕಿತ್ಸೆಗಳ ಕನ್ಸಲೇಶನ್ ಲಭ್ಯವಿರಲಿದೆ. ರೇಖ, ಅಕ್ಯುಪಂಕ್ಚರ್, ಆಕ್ಯುಪ್ರೆಷರ್, ಕಲರ್ ಥೆರಪಿ, ಫೇಸ್ ರೀಡಿಂಗ್, ಮೆಡಿಕಲ್ ಆಸ್ಥಾನಮಿ, ಮೆಡಿಕಲ್ ನ್ಯೂಮರಾಲಜಿ, ಕೈಬರಹ ವಿಶ್ಲೇಷಣೆ, ಕಪ್ಪಿಂಗ್ ಥೆರಪಿ, ಅಗ್ನಿಹೋತ್ರ, ಧ್ಯಾನ ಮುಂತಾದವುಗಳ ಬಗ್ಗೆ ಮಾಹಿತಿ ಹಾಗೂ ಪ್ರಯೋಜನವನ್ನು ಇಲ್ಲಿ ಪಡೆಯಬಹುದು.

: 98868 01666, 63632 21012

ಜಿವೈಎಸ್ 2024 ಕುರಿತ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ http://www.globalyogasummit.in

City Today News 9341997936

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಏಜೆನ್ಸಿಗಳ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ನೌಕರಿಯಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಪ್ರತಿ ತಿಂಗಳು ನಿಗಧಿತ ಸಮಯಕ್ಕೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು.

1) ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್‌ಸಿಪಿ/ಟಿಎಸ್‌ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಸದೆ ದಲಿತರ ಅಭಿವೃದ್ಧಿಗಾಗಿ ಬಳಸಬೇಕು ಹಾಗೂ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಈಗಾಗಲೇ ಅನ್ಯ ಯೋಜನೆಗಳಿಗೆ ಬಳಸಿರುವ ಅನುದಾನವನ್ನು ಕೂಡಲೇ ವಾಪಸ್ಸು ತರಬೇಕು.

2) ರಾಜ್ಯದಲ್ಲಿ ಈಗಾಗಲೇ ದಲಿತರ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ 33 ವಿಶೇಷ ಪೊಲೀಸ್ ಠಾಣೆಗಳನ್ನು ತೆರೆಯಲು ಆದೇಶ ನೀಡಿರುವುದು ಸ್ವಾಗತಾರ್ಹ. ಆದರೆ, ನಿರಂತರವಾಗಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಜಿಲ್ಲಾಧಿಕಾರಿಗಳು / ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು.

3) ತೋಟಿ/ತಳವಾರು ಜಮೀನು ಕುಲವಾಡಿ ಜಮೀನು ರದ್ದಿಯಾತಿ ಕಾಯ್ದೆ 1961 (Village Officer Abolition Act 1961) ಅಡಿ ಭೂಮಿ ಮಂಜೂರಾತಿದಾರರನ್ನು ಪಿಟಿಸಿಎಲ್ ಕಾಯ್ದೆ ಸೆಕ್ಷನ್ 3(1) (ಬಿ) ವ್ಯಾಪ್ತಿಗೆ ಸೇರಿಸಿ ಸದರಿ ಪಿಟಿಸಿಎಲ್ ಕಾಯ್ದೆಗೆ ರಾಜ್ಯ ಸರ್ಕಾರವು ತಿದ್ದುಪಡಿ ತಂದು ದಲಿತರ ಜಮೀನು ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

4) ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೋಟೆಕೆರೆ ಮಧ್ಯ ಭಾಗದಲ್ಲಿ 100 ಅಡಿಯ ಭಗವಾನ್ ಬುದ್ಧರ ಪ್ರತಿಮೆಯನ್ನು ಕೂಡಲೇ ಅನಾವರಣಗೊಳಿಸಬೇಕು ಹಾಗೂ ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಿಂದ ಮಸೂದೆ ತೋಟಕ್ಕೆ ರಸ್ತೆ ಅನುಕೂಲ ಮಾಡಿಕೊಡಬೇಕು.

5) ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಏಜೆನ್ಸಿಗಳ ಮುಖಾಂತರ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಆಧಾರದ ನೌಕರಿಯಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಪ್ರತಿ ತಿಂಗಳು ನಿಗಧಿತ ಸಮಯಕ್ಕೆ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು.

6) ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಪ್ರಕಾರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕೂಡಲೇ ಒಳ ಮೀಸಲಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. 1

7) ಬಾಗಲಕೋಟೆ ನಗರದ ಸರ್ವೆ ನಂ.131 ರ 4ಎ-27 ಗುಂಟೆ ಸರ್ಕಾರಿ ಜಾಗದಲ್ಲಿ ಭಗವಾನ್ ಬುದ್ಧರ ವಿಹಾರ ನಿರ್ಮಿಸಿದ್ದು ಸದರಿ ಜಮೀನನ್ನು ಬುದ್ಧವಿಹಾರ ನಿರ್ಮಾಣ ಸಮಿತಿಗೆ ಮಂಜೂರು ಮಾಡಬೇಕು ಹಾಗೂ ಭಗವಾನ್ ಬುದ್ಧರ ಜಯಂತಿಗೆ ಸರ್ಕಾರಿ ರಜೆ ಘೋಷನೆ ಮಾಡಬೇಕು.

8) ಪ್ರತಿ ತಿಂಗಳ 2ನೇ ಭಾನುವಾರ ರಾಜ್ಯದ ಎಲ್ಲಾ ಪೊಲೀಸ ಠಾಣೆಗಳಲ್ಲಿಯೂ “ದಲಿತ ಸಭೆ” ನಡೆಸಲು ಆದೇಶವಿದ್ದು, ಇತ್ತೀಚೆಗೆ ಎಲ್ಲಿಯೂ ಸರಿಯಾಗಿ ದಲಿತರ ಕುಂದು ಕೊರತೆ ಸಭೆಗಳಾಗುತ್ತಿಲ್ಲ, ಆದ್ದರಿಂದ ನಿರಂತರವಾಗಿ ದಲಿತ ಸಭೆ ನಡೆಸಲು ನಿರಾಶಕ್ತಿ ತೋರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

9) ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕು, ಸುಗಟೂರು ಹೋಬಳಿ ನಾಗನಾಳ ಗ್ರಾಮದ ಗೋಮಾಳ ಸರ್ವೆ ನಂ.42 ರಲ್ಲಿ ಸೋಮಶೇಖರ್ ಬಿನ್ ಲೇಟ್ ನಾರಾಯಣಗೌಡ ರವರಿಗೆ ಮಂಜೂರಾಗಿರುವ ಕ್ವಾರಿ ಮತ್ತು ಜೆಲ್ಲಿ ಕ್ರಷರ್ ಹಾಗೂ ವೇಮಗಲ್ ಹೋಬಳಿ, ಮೇಡಿಹಾಳ ಗ್ರಾಮದ ಗೋಮಾಳ ಸರ್ವೆ ನಂ.24 ರಲ್ಲಿ ಹಾಗೂ ದನಮಟ್ಟಹಳ್ಳಿ ಗೋಮಾಳ ಸರ್ವೆ ನಂ.53 ರಲ್ಲಿ ಸೊಣ್ಣೆಗೌಡ ಬಿನ್ ಚೌಡೇಗೌಡ ರವರಿಗೆ ಮಂಜೂರಾಗಿರುವ ಕ್ವಾರಿ ಮತ್ತು ಜೆಲ್ಲಿಕ್ರಷರ್ ಪರವಾನಗಿಗಳನ್ನು ಗ್ರಾಮಸ್ಥರ/ರೈತರ ಹಿತ ದೃಷ್ಠಿಯಿಂದ ಸರ್ಕಾರ ಕೂಡಲೇ ರದ್ದುಗೊಳಿಸಬೇಕು ಮತ್ತು ಗಣಿದಣಿಗಳ ಜೊತೆ ಶಾಮೀಲಾಗಿ ಕರ್ತವ್ಯ ಲೋಪವೆಸಗಿ ರೈತರ ಜೀವನದ ಜೊತೆ ಚೆಲ್ಲಾಟವಾಡುವ ಸಂಬಂಧಪಟ್ಟಿ ಅಧಿಕಾರಿಗಳ ಮೇಲೆಸೂಕ್ತ ಕಾನೂನು ಕ್ರಮ ಜರುಗಿಸಬೇಕು.

10) ಉಚಿತ ಮತ್ತು ಕಡ್ಡಾಯ ಶಿಕ್ಷಣ (ಆರ್‌ಟಿಇ) 2006 ರಲ್ಲಿ ಜಾರಿಗೆ ಬಂದಿರುತ್ತದೆ. ಆದರೆ ಬಲಾಡ್ಯರ ಒತ್ತಾಯಕ್ಕೆ ಮಣಿದು ಸರ್ಕಾರಿ ಶಾಲೆಗಳ ಸಮೀಪ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಆರ್.ಟಿ.ಇ ಪ್ರವೇಶಕ್ಕೆ ಅವಕಾಶವಿಲ್ಲದೆ ಇರುವುದರಿಂದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಪಿ.ಯು.ಸಿ ವರೆಗೆ ವಿಸ್ತರಿಸಬೇಕು.

11) ರಾಯಚೂರು ಜಿಲ್ಲೆಗೆ ಎಐಎಂಎಸ್ ಕೂಡಲೇ ಜಾರಿಗೊಳಿಸಬೇಕು.

12) ರಾಜ್ಯದ ವಿವಿಧ ನಿಗಮಗಳಲ್ಲಿ ಸಾಲ ಪಡೆಯಬೇಕಾದರೆ ಸ್ಥಳೀಯ ಶಾಸಕರ ಶಿಫಾರಸ್ಸು ಪತ್ರ ಬೇಕಾಗಿರುವುದರಿಂದ ನಿಜವಾದ ಬಡವರಿಗೆ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಕೂಡಲೇ ಸರ್ಕಾರ ಶಾಸಕರ ಶಿಫಾರಸ್ಸು ಪತ್ರವನ್ನು ರದ್ದುಪಡಿಸಬೇಕು.

13) ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ದಲಿತರಿಗೆ ಮೀಸಲಿಟ್ಟಿರುವ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಕೂಡಲೇ ದಲಿತರಿಗೆ ಮೀಸಲಿಟ್ಟಿರುವ 24/% ಹಣವನ್ನು ದಲಿತರ ಅಭಿವೃದ್ಧಿಗೆ ಬಳಸಬೇಕು ಹಾಗೂ ದಲಿತರಿಗೆ ಸ್ಮಶಾನ ಭೂಮಿಯನ್ನು ಖರೀದಿಸಿ ಅದರ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು.

14) ಪಂಚಾಯ್ತಿಗಳಲ್ಲಿ ಕೆಲಸ ಮಾಡುತ್ತಿರುವ ಪಿಡಿಒ ಗಳು ಒಂದೇ ಪಂಚಾಯ್ತಿಗಳಲ್ಲಿ 10-12 ವರ್ಷಗಳ ಕಾಲ ನಿರಂತರವಾಗಿದ್ದು ಭ್ರಷ್ಟಾಚಾರಲ್ಲಿ ತೊಡಗಿದ್ದಾರೆ. ದಲಿತರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡದೆ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಆದ್ದರಿಂದ ಇವರುಗಳನ್ನು ಕೂಡಲೇ ಕಾಲಕಾಲಕ್ಕೆ ವರ್ಗಾವಣೆ ಮಾಡಬೇಕು.

15) ಪಂಚಾಯ್ತಿ ಅಧ್ಯಕ್ಷ/ಉಪಾಧ್ಯಕ್ಷರ ಅವಧಿ 2 ವರ್ಷಗಳು ಎಂದು ಸರ್ಕಾರದ ಆದೇಶವಿದ್ದರೂ ಸಹ 6-8 ತಿಂಗಳಿಗೊಮ್ಮೆ ಅಧ್ಯಕ್ಷ/ಉಪಾಧ್ಯಕ್ಷರ ಬದಲಾವಣೆ ಮಾಡುತ್ತಿರುತ್ತಾರೆ. ಇದರಿಂದ ಆಡಳಿತ ವ್ಯವಸ್ಥೆ ಕುಸಿದಿದೆ. ಇನ್ನು ಮುಂದೆ ಸರ್ಕಾರ ಕಟ್ಟುನಿಟ್ಟಾಗಿ ಸರ್ಕಾರದ ನಿಯಮ ಪಾಲಿಸಲು ಆದೇಶಿಸಬೇಕು.

16) ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಲ್ಲಿ ದಲಿತರ ಅಭಿವೃದ್ಧಿ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸದಿರುವುದನ್ನು ಕೂಡಲೇ ನ್ಯಾಯಾಂಗ ತನಿಖಗೆ ಒಳಪಡಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.

17) ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಭೂ ಒಡೆತನ ಯೋಜನೆಯ ಹಣವನ್ನು ಕೂಡಲೇ ಮಂಜೂರು ಮಾಡಬೇಕು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ರಾಜ್ಯ ಸರ್ಕಾರವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಭೀಮವಾದ),ರಾಜ್ಯ ಸಮಿತಿ, ಬೆಂಗಳೂರು ವತಿಯಿಂದ ಆಗ್ರಹಿಸಲಾಯಿತು.

City Today News 9341997936

WROGN Opens Its New Flagship Store in Jayanagar, Bengaluru,Amidst Massive Fan Frenzy

December, 2024, Bengaluru: WROGN, India’s leading youth fashion and lifestyle brand, inaugurated its new flagship store in the bustling heart of Jayanagar, 4th Block, Bengaluru. The store launch was a spectacular event, drawing an enormous crowd and creating a buzz like never before. Renowned Kannada actor Dhruva Sarja, the chief guest for the occasion, officially inaugurated the store, and his star power turned the launch into a mega celebration.

The excitement among fans was palpable as hundreds gathered at the venue to catch a glimpse of their favourite star. The overwhelming turnout brought Jayanagar to a standstill, cementing the event’s success. Fans not only enjoyed the presence of Dhruva Sarja but also explored WROGN’s extensive collection of trending outfits.

The flagship store is WROGN’S fifth store in Bengaluru and features sought-after merchandise, including t-shirts, shirts, denims, trousers, cargos, jackets, and more. The store is designed to deliver an immersive shopping experience with its silver interiors and dynamic visual displays, embodying WROGN’s bold persona.

Nishant Poddar, CMO of WROGN, expressed his excitement about the launch, stating:
“Jayanagar has always been a vibrant and iconic hub in Bengaluru, making it the perfect location for WROGN’s flagship store. The incredible response today reaffirms the love and support for our brand. This store represents the next step in our journey to offer high-quality, stylish, and accessible fashion to the youth.”

Since its inception, WROGN has been redefining casual menswear with its trendsetting designs and youth-centric approach. The new Jayanagar store not only enhances the brand’s retail footprint but also strengthens its presence in Bengaluru, a city synonymous with modernity and style.

City Today News 9341997936

Panel discussion on children affected by parental separation and shared parenting as a way forward

Panel discussion on children affected by parental separation and shared parenting as a way forward

The event, atled “Forgotten Voices in Fomaly Disputes. Addressing Parental Alienation is India, highlighted the critical issue of Parental Alienation Syndrome and its impact on children’s mental health and overall well-being

Moderated by Vasanthi Hariprakash

Bengaluru, 10th December 2024: Ayushman Initiative for Child Rights, a public charitable trust working for the rights of alienated children throughout India, & MILAAP for co-parenting, a platform for non-custodial parents, hosted a panel discussion on Forgotten Voices in Family Disputes: Addressing Parental Alienation in India, at the Press Club Bengaluru, on 10th December 2024.

The event brought together a diverse panel of speakers that included Advocate Juhi Damodar, President of the Child Welfare Committee, Udupi District, Prof. Sunita K Mani, a mental health expert, Gazal Raina, Founder of MILAAP for co-parenting. Arijit Mitra, Founder, Ayushman Initiative for Child Rights and alienated parents Pepe Zalba and Kaustav Das who shared their personal experiences. The panel was moderated by journalist Vasanthi Hariprakash

Advocate Juhi Damodar highlighted the legal fraternity’s role and the judiciary’s responsibility in protecting the rights of alienated children. Prof. Sunita K Mani discussed the mental health challenges faced by alienated children and therapies to address them. Pepe Zalba shared insights on fostering compassion for alienated children, while Gazal Raina and Kaustav Das shared their personal experiences as alienated parents, with Kaustav offering strategies for reversing parental alienation.

The panel discussion highlighted recent reports on the rising number of divorce and child custody cases in India and their impact on children’s mental health due to parental alienation. Studies show India’s divorce rate has doubled in the last two decades, with urban cities like Delhi, Mumbai, Bengaluru, and Kolkata seeing rates exceeding 30%. Bengaluru ranks second among the top states in divorce cases.

Commenting on the subject, Arijit Mitra, one of the Founders & Trustee, Ayushman Initiative For Child Rights said. ” A United Nation Women Report titled “Progress of the World’s Women 2019-2020″ highlights that 4.5% of Indian households are run by single mothers. This indicates that lakhs of children live separated from one of their parents Parental Alienation affects close 10 Lakh children in India every year. Through this initiative, we want to highlight this pressing issue and advocate for shared parenting as a legal norm to ensure the emotional and inental well-being of children who are caught in the middle of divorce or custody battles”.

The Law Commission Report 257 and is relevance to shared parenting as a law was discussed at the event.

Juhi Damodar, President of the Child Welfare Committee, Udupi District, said, it is observed in the Indian Courts that at least 6 out of 10 children are manipulated to treat the non-custodial parent with hostility and hatred. Parental Alienation Syndrome causes severe emotional and psychological stress on the child. To address this, we need to create a legal framework that ensures the rights of alienated children and we need to work towards protecting their mental well-being. We need more organizations like Ayushman Initiative & MILAAP that are actively advocating for systemic changes to address this issue and promoting shared parenting”

Gazal Raina, founder and the motivating force behind MILAAP stressed on the need to keep one’s mental health proper and to evolve oneself beyond this personal phenomena and the situation and to look at things in a positive way for brighter things ahead. Dr Mani herein laid the stress of therapy and an innovative idea called the DIY Emotional First Aid Kit which can help to relieve stress from such issues.

Vasanthi Haripraakash, the moderator for the event and owner of Pickle Jar Media moderated the event with her usual guile and forte and stressed her support for the cause and the children. She dwelled on some real life anecdotes and on humane aspects of Parental alienation and its impact on Society at large.

The organisers informed that few Public Interest Litigations on shared parenting and parenting guidelines have been filed in the Supreme Court of India and in the High Courts of Calcutta and Karnataka where AIFCR is the petitioner and intervening parties. (details available on request)

Vote of thanks was delivered by Gazal Raina on behalf of the organisers at the press meet held at press club of Bangalore.

City Today News 9341997936