ಸುಪ್ರೀಂ ಕೋರ್ಟ್ ತೀರ್ಪಿನಂತೆ ಹರಿಶಿಷ್ಟ ಜಾತಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ

ಪರಿಶಿಷ್ಟ ಜಾತಿಗಳ ಮೀಸಲಾತಿಯು 101 ಪರಿಶಿಷ್ಟ ಜಾತಿಗಳಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಆದ್ದರಿಂದ ಪರಿಶಿಷ್ಟ ಮೀಸಲಾತಿಯನ್ನು 4 ಗುಂಪುಗಳನ್ನಾಗಿ ವರ್ಗೀಕರಣ ಮಾಡಲು ಒತ್ತಾಯಿಸಿ 3 ದಶಕಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಚಳುವಳಿ ಮಾಡಿದ ಹಲವರು ಜೀವ, ಜೀವನ ಮತ್ತು ಬದುಕನ್ನೇ ಬಲಿಕೊಟ್ಟು ಬಸವಳಿದಿದ್ದಾರೆ.

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಲು ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 2004ರಲ್ಲಿ ನಿ. ನ್ಯಾ ಎ.ಜೆ. ಸದಾಶಿವ ಆಯೋಗ ರಚಿಸಿತು. ಆಯೋಗ ಸರ್ಕಾರಕ್ಕೆ ದಿನಾಂಕ 14-06-2012ರಂದು ವರದಿ ಸಲ್ಲಿಸಿತು. ಹಿಂದಿನ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರದ “ಸಚಿವ ಸಂಪುಟ”ವು ನಿವೃತ್ತ ನ್ಯಾ. ಸದಾಶಿವರವರ ವರದಿಯಲ್ಲಿನ ದತ್ತಾಂಶದ ಪ್ಯಾರ-1ನ್ನು ಅಂಗೀಕರಿಸಿ ದಿನಾಂಕ 31-03-2023ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. ಮುಖ್ಯಮಂತ್ರಿ ಮಾನ್ಯ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಸಹ ಪರಿಶಿಷ್ಠರ ಮೀಸಲಾತಿ ವರ್ಗೀಕರಣ ಮಾಡುವ ನಿರ್ಣಯವನ್ನು “ಸಚಿವ ಸಂಪುಟ ದಲ್ಲಿ ಅನುಮೋದಿಸಿ ದಿನಾಂಕ 17-03-2024ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು.

ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ಜಾರ್ಖಂಡ್, ಹರಿಯಾಣ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಲವಾರು ದಶಕಗಳಿಂದ ಹೋರಾಟ ನಡೆಯುತ್ತಿದೆ.

ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು :- ಪರಿಶಿಷ್ಟರ ಮೀಸಲಾತಿ ವರ್ಗೀಕರಣಕ್ಕಾಗಿ ವಿವಿಧ ರಾಜ್ಯಗಳ ಆಯೋಗಗಳ

ವರದಿಗಳು ಮತ್ತು ಕೋರ್ಟ್‌ಗಳ ಹಲವು ತೀರ್ಪುಗಳನ್ನು ಪರಮಾರ್ಶಿಸಿದ ಸುಪ್ರೀಂಕೋರ್ಟ್‌ನ 7 ನ್ಯಾಯಾಧೀಶರ ಸಂವಿಧಾನ ಪೀಠ ದಿನಾಂಕ : 01-08-2024ರಂದು “ಐತಿಹಾಸಿಕ ತೀರ್ಪು’ ನೀಡಿತು. ಈ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವ ಸಂವಿಧಾನಬದ್ಧ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ತೀಪು ನೀಡಿದೆ

ಕೆನೆಪದರ :- ಮೂಲ ಸಂವಿಧಾನದ ಅನುಚ್ಛೇದ 15(4) ಮತ್ತು 16 (4)ರಂತೆ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಿದ ಮೀಸಲಾತಿಯು ಮೂಲಭೂತ ಹಕ್ಕಾಗಿದ್ದು ಕೆನೆ ಪದರಕ್ಕೆ ಅವಕಾಶವೇ ಇಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಪೀಠ 1992ರಲ್ಲಿ ಇಂದ್ರಸಾಕ್ಷಿ ಕೇಸ್‌ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಸಂವಿಧಾನದ ವಿಧಿ 15(4) ಮತ್ತು 16 (16) “ಸಮಕಾಲೀನ ಪಟ್ಟಿ” (Concurrent List of Subject) ಆಗಿದೆ. ಹಾಗಾಗಿ ಕೇಂದ್ರ ಸರ್ಕಾರ ಅಳವಡಿಸಿಕೊಂಡ ನೀತಿಯನ್ನೇ ರಾಜ್ಯಗಳು ಅನುಸರಿಸಬೇಕು. ಈಗಾಗಲೇ ಸುಪ್ರೀಂಕೋರ್ಟಿನ ಆದೇಶವನ್ನು ಸ್ವಾಗತಿಸಿರುವ ಕೇಂದ್ರ “ಸಚಿವ ಸಂಪುಟ” ಪ.ಜಾ / ಪ. ವರ್ಗಗಳಿಗೆ ಕೆನೆಪದರ ಮೀಸಲಾತಿ ಅಳವಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕರ್ನಾಟಕ ರಾಜ್ಯ ಸರ್ಕಾರ ಮತ್ತಷ್ಟು ವಿಳಂಬ ಧೋರಣೆ ಮಾಡಿ ಮೀನಾಮೇಷ ಎಣಿಸದೆ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಹಾಗೂ ಸಂವಿಧಾನಕ್ಕೆ ಗೌರವ ನೀಡಿ ಈ ಕೂಡಲೇ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡಲು ದ.ಸಂ.ಸ. ಆಗ್ರಹಿಸಿದೆ.

-: ಹಕ್ಕೋತ್ತಾಯಗಳು :-

+ ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ತೀರ್ಪಿನಂತೆ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಲಿ.

+ 2023-2024 ಮತ್ತು 2024-2025ನೇ ಸಾಲಿನಲ್ಲಿ 25,391 ಕೋಟಿ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ

ಎಸ್‌ಸಿಪಿ/ಬಿಎಸ್‌ಪಿ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಈ ಹಣವನ್ನು ಈ ಸಮಾಜದ

ಅಭಿವೃದ್ಧಿಗೆ ವಾಪಸ್ ನೀಡಲೇಬೇಕು. + ಪ.ಜಾತಿ / ಪ. ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸರಿಯಾಗಿ ನೀಡುತ್ತಿಲ್ಲ ಹಾಗೂ ಮೆರಿಟ್ ವಿದ್ಯಾರ್ಥಿ ವೇತನ ಮತ್ತು ವಿದೇಶದಲ್ಲಿ ಎಸ್.ಸಿ/ಎಸ್.ಟಿ. ವ್ಯಾಸಂಗ ಮಾಡಲು ಇದ್ದ ಪ್ರಬುದ್ಧ ಯೋಜನೆ ರದ್ದು ಮಾಡಲಾಗಿದೆ. ಪುನಃರಾರಂಭಿಸಲಿ.

+ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಜಾರಿಯಾಗುವವರೆಗೂ ಕೇಂದ್ರ ಮತ್ತು ರಾಜ್ಯದ ಎಲ್ಲಾ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸಲಿ.

+ ಪಾಸಗಿ ಉದ್ಯೋಗ ಕ್ಷೇತ್ರ ಮತ್ತು ಗುತ್ತಿಗೆ ನೇಮಕಾತಿಗಳಲ್ಲಿಯೂ ಎಸ್.ಸಿ/ಎಸ್.ಟಿ ಮೀಸಲಾತಿ ಜಾರಿಯಾಗಲಿ.

+ ಕೇಂದ್ರ ಸರ್ಕಾರ ಕೂಡಲೇ ಎಸ್.ಸಿ/ಎಸ್.ಟಿ ಅಭಿವೃದ್ಧಿಗಾಗಿ ಎಸ್ ಸಿಪಿ/ಬಿಎಸ್ಪಿ ಕಾಯ್ದೆ ರಚಿಸಿ ಜನಸಂಖ್ಯೆಗನುಗುಣವಾಗಿ ಐಜೆಟ್‌ನಲ್ಲಿ ಹಣ ನೀಡಬೇಕು ಎಂದು ದಾದಾ ಸಾಹೇಬ್ ಡಾ॥ ಎನ್. ಮೂರ್ತಿ ದ.ಸಂ.ಸ ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಆಗ್ರಹಿಸಿದರು.

ಕರ್ನಾಟಕ ರಸ್ತೆ ಸಾರಿಗೆ ಮದ್ದೂರ್ ಸಂಘ ಒಕ್ಕೂಟ (ರಿ) ಕರ್ನಾಟಕ ವತಿಯಿಂದ ಸರ್ಕಾರ ಮತ್ತು ಸಂಸ್ಥೆಯ ಕಣ್ಣು ತೆರೆಸಲು ಮತ್ತು ಗಮನ ಸೆಳೆಯಲು “ನಮ್ಮ ದುಡಿಮೆ ನಮ್ಮ ಹಕ್ಕು” ಜಾಗೃತಿ ಜಾಥಾ ಆಯೋಜನೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜೂರ್ ಸಂಘ ಒಕ್ಕೂಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಂದು ಉತ್ತಮ ಸಂಘಟನೆಯಾಗಿ ಮದ್ದೂರ್ ಸಂಘ ಸಂಸ್ಥೆ ಏಳಿಗೆಗೆ ಮತ್ತು ಕಾರ್ಮಿಕ ಹಿತಕ್ಕೊಸ್ಕರವಾಗಿ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಆದರೆ ಇಂದು ಈ ಸಮಯದಲ್ಲಿ “ನಮ್ಮ ದುಡಿಮೆ ನಮ್ಮ ಹಕ್ಕು” ಶೀರ್ಷಿಕೆ ಅಡಿಯಲ್ಲಿ ಕಾರ್ಮಿಕರಿಗೆ ದಿನಾಂಕ : 01.01.2020 ಪರಿಷ್ಕರಣೆ 01.03.2023ರಿಂದ ತಡವಾಗಿ 38 ತಿಂಗಳ ನಂತರ ವೇತನಕ್ಕೆ 15% ರಷ್ಟು ಹೆಚ್ಚಿಗೆ ಮಾಡಿರುತ್ತಾರೆ. ಆದರೆ 38 ತಿಂಗಳ ವೇತನ ಬಾಕಿ 56 ತಿಂಗಳಾದರೂ ನೀಡಿರುವುದಿಲ್ಲ ಸದರಿ ವಿಷಯದ ಬಗ್ಗೆ ಸಂಘಟನೆ ಸರ್ಕಾರಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಲವಾರು ಪತ್ರಗಳನ್ನು ನೀಡಿದ್ದರೂ ಸಹ ನಮಗೆ ಸಿಗಬೇಕಾದ ಬಾಕಿ ಹಣ ಸಂದಾಯವಾಗಿರುವುದಿಲ್ಲ. ಒಂದು ಲಕ್ಷದ ಇಪ್ಪತ್ತು ಸಾವಿರ (1,20,000) ನೌಕರರಿಗೆ ಸುಮಾರು 2 ಲಕ್ಷದಿಂದ 3.5 ಲಕ್ಷದ ವರೆಗೆ ಬಾಕಿ ಹಣ ಬರಬೇಕಾಗಿದೆ, ಇಲ್ಲಿ ನಾವು ಬಿಟ್ಟಿ ಭಾಗ್ಯ ಕೇಳುತ್ತಿಲ್ಲ, ಕಾಮಿಕರು ದುಡಿದಿರುವ ವೇತನ ಬಾಕಿ ಹಣ ಕೇಳುತ್ತಿದ್ದೇವೆ. ಸರ್ಕಾರವಾಗಲಿ ಅಥವಾ ಸಂಸ್ಥೆಯಾಗಲಿ ನೌಕರರ ಬೇಡಿಕೆ ಬಗ್ಗೆ ಗಮನ ಹರಿಸುತ್ತಿಲ್ಲ. ನಿವೃತ್ತ ನೌಕರರಿಗೂ 01.01.2020 ವೇತನ ಜಾರಿಯಾಗಿಲ್ಲ, ವೇತನ ಬಾಕಿ ಹಣ ನೀಡಿರುವುದಿಲ್ಲ.

ದಿನಾಂಕ : 01.01.2024ಕ್ಕೆ ವೇತನ ಪರಿಷ್ಕರಣೆ ಜಾರಿಯಾಗಬೇಕಾಗಿದ್ದ 9 ತಿಂಗಳಾದರೂ ಜಾರಿ ಮಾಡಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಎಲ್ಲಾ ಬೆಲೆಗಳು ಗಗನಕ್ಕೆ ಏರಿರುತ್ತವೆ, ಕಾರ್ಮಿಕರು ಜೀವನ ಸಾಗಿಸುವುದು ಕಷ್ಟವಾಗಿದೆ. ಅವರೂ ಸಹ ಸಂಬಳ ಜಾಸ್ತಿ ಮಾಡಿರುವುದಿಲ್ಲ. ಈ ವಿಷಯದ ಬಗ್ಗೆ ಸಂಸ್ಥೆಗೆ ಹಲವಾರು ಬಾರಿ ಸಂಘಟನೆ ಪತ್ರಗಳನ್ನು ನೀಡಿದ್ದರೂ ಸಹ ವೇತನ ಹೆಚ್ಚಳ ಮಾಡಿರುವುದಿಲ್ಲ, ಹಾಗೂ ಸಂಘಟನೆಗಳನ್ನು ಮಾತುಕತೆಗಳಿಗಾಗಿ ಕರೆದು ಮಾತನಾಡಿಲ್ಲ.

ಸರ್ಕಾರಿ ನೌಕರರು ಅವರ ಸಂಘದಿಂದ “ಪೆನ್ ಡೌನ್” ಮಾಡುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದ ತಕ್ಷಣ ಅವರಿಗೆ ನೀಡಬೇಕಾಗಿರುವ 7ನೇ ವೇತನ ಆಯೋಗದಂತೆ 27% ಹೆಚ್ಚಿಗೆ ವೇತನ 01.08.2024 ರಿಂದ ಜಾರಿಗೆ ಬರುವಂತೆ ಆದೇಶ ಮಾಡಿರುತ್ತಾರೆ.

ನಮ್ಮ ಸಾರಿಗೆ ಕಾರ್ಮಿಕರು ಸಹ ಹಗಲು ರಾತ್ರಿ ಬಸ್ಸಿನಲ್ಲಿ ಮಲಗಿ ಎಲ್ಲಾ ಊರುಗಳಲ್ಲಿ ನೀರು ನೀಡಿ ಇಲ್ಲದೆ ಹಬ್ಬ ಹರಿದಿನಗಳು ಮನೆಯಲ್ಲಿ ಇಲ್ಲದೆ ದುಡಿಯುತ್ತಿದ್ದಾರೆ, ಇಂತಹ ನೌಕರರಿಗೆ ಏಕೆ ಅನ್ಯಾಯ ಮಾಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೋಸ್ಕರ ಸರ್ಕಾರ ಮತ್ತು ಸಂಸ್ಥೆಯ ಕಣ್ಣು ತೆರೆಸಲು ಮತ್ತು ಗಮನ ಸೆಳೆಯಲು “ನಮ್ಮ ದುಡಿಮೆ ನಮ್ಮ ಹಕ್ಕು” ಜಾಗೃತಿ ಜಾಥಾವನ್ನು ಸಂಘಟನೆ ಮಜೂರ್ ಸಂಘ ಆಯೋಜಿಸಲಾಗಿದೆ, ದಿನಾಂಕ : 18.08.2024 ರಿಂದ 04.09.2024 ರವರೆಗೆ ಬಸವ ಕಲ್ಯಾಣ ಮತ್ತು ನಿಪ್ಪಾಣಿಯಿಂದ ಎರಡು ಭಾಗವಾಗಿ ರಾಜ್ಯಾದ್ಯಂತ ಜಿಲ್ಲೆಗಳಾದ ಎಲ್ಲಾ ಘಟಕಗಳಿಗೆ ಬೀದರ್, ಗುಲಬರ್ಗಾ, ಬಿಜಾಪುರ, ಯಾದಗಿರಿ, ರಾಯಚೂರು, ವಿಜಯನಗರ, ಕೊಪ್ಪಳ, ಬಳ್ಳಾರಿ, ತುಮಕೂರು, ಮೈಸೂರು, ಬೆಳಗಾವಿ, ಹಾವೇರಿ, ದಾರವಾಡ, ಬಾಗಲಕೋಟೆ, ಗದಗ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಎಲ್ಲಾ ಜಿಲ್ಲೆಗಳ ಸಾರಿಗೆ ಸಂಸ್ಥೆಯ ಬಸ್ಸು ಘಟಕ ಬೇಟಿ ನೀಡಿ ಮೇಲಿನ ಕಾರ್ಯಕ್ರಮದ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ, ದಿನಾಂಕ : 04.09.2024ರಂದು ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿವಸದ ಶಾಂತಿಯುತ ಧರಣಿ ಸಭೆಯನ್ನು ಸಾವಿರಾರು ನೌಕರರೊಂದಿಗೆ ನಡೆಸಲು ತೀರ್ಮಾನಿಸಿ ಅದರಂತೆ ನಡೆಸಲಾಗುತ್ತಿದೆ.

ಈ ಮೇಲಿನ ಎರಡು ಪ್ರಮುಖ ಬೇಡಿಕೆಗಳ ಜೊತೆಗೆ ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ (1) ನಗದು ರಹಿತ ವೈದ್ಯಕೀಯ ಸೌಲಭ್ಯ (2) ನೌಕರರ ಶಿರುಕುಳ (3) ಅವೈಜ್ಞಾನಿಕ ಪಾರಂ ನಂ.4 (ವೇಳಾಪಟ್ಟಿ) (4) ಏಕರೂಪ ಶಿಸ್ತುಕ್ರಮ, ಕ್ಯಾಂಟಿನ್ ಇಲ್ಲದೆ ಇರುವುದು, ಕಾರ್ಮಿಕರ ಮೇಲೆ ದಬ್ಬಾಳಿಕೆ, ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣ ಹಾಗೂ ಇನ್ನು ಇತರೆ ತೊಂದರೆ ಬಗ್ಗೆ ಉತ್ತಮ ರೀತಿಯಲ್ಲಿ ಸಂಸ್ಥೆಯ ಆಡಳಿತ ನಡೆಸಬೇಕು ನಮಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು.

ನಮ್ಮ ಎಲ್ಲಾ ಬೇಡಿಕೆಗಳು, ತೊಂದರೆಗಳು ನಿಲ್ಲಬೇಕು. ಆದ್ದರಿಂದ ದಿನಾಂಕ 04.09.2024ರಂದು ನಡೆಯುವ ಧರಣಿ ಸತ್ಯಾಗ್ರಹಕ್ಕೆ ಕಾರ್ಮಿಕರ ಬೆಂಬಲ ಮತ್ತು ತಮ್ಮಗಳ ಸಹಕಾರ ನೀಡಬೇಕು. ನಿಮ್ಮ ಮಾದ್ಯಮಗಳಿಂದ ಸರ್ಕಾರಕ್ಕೆ ವಿಷಯ ತಿಳಿಯುವಂತೆ ತಾವುಗಳು ಸಹ ಸಾರಿಗೆ ಕಾರ್ಮಿಕರ ಬವಣೆಗಳನ್ನು ಸರ್ಕಾರಕ್ಕೆ ಮುಟ್ಟಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಜೂರ್ ಸಂಘ (ರಿ)ವತಿಯಿಂದ ತಮ್ಮಲ್ಲಿ ಕೇಳಿಕೊಳ್ಳುತ್ತದೆ. ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಜಿ.ಎಸ್.ಮಹದೇವಯ್ಯ- ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.

City Today News 9341997936

02/09/2024 ರ ಸಂಜೆ 6 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ  ಹಿರಿಯ ಸಾಹಿತಿಗಳಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭ



ಸಿರಿವರ ಕಲ್ಚರಲ್ ಅಕಾಡೆಮಿ ಹಾಗೂ ಅನನ್ಯ ಕ್ರಿಯೇಷನ್ ಸಹಯೋಗದಲ್ಲಿ ದಿನಾಂಕ 02/09/2024 ರ ಸಂಜೆ 6 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ  ಹಿರಿಯ ಸಾಹಿತಿಗಳಾದ ಡಾ.ಹೆಚ್.ಎಸ್.ಶಿವಪ್ರಕಾಶ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಅಂದು ನಮ್ಮೊಂದಿಗೆ  ಹಿರಿಯ ಸಾಹಿತಿಗಳು , ಕನ್ನಡ ಅಭಿವೃಧ್ಧಿ ಪ್ರಾದಿಕಾರದ  ಮಾಜಿ ಅಧ್ಯಕ್ಷರು ಪ್ರೊ. ಎಸ್.ಜಿ.ಸಿದ್ದರಾಮಯ್ಯ , ಹಿರಿಯ ಸಂಗೀತ ನಿರ್ದೇಶಕರಾದ ಡಾ.ಹಂಸಲೇಖ ಅವರು, ಹಾಗೂ  ನಾಟಕ ಅಕಾಡೆಮಿ ಸದಸ್ಯರಾದ ಶ್ರೀ ರವೀಂದ್ರನಾಥ ಸಿರಿವರ ಅವರು ಉಪಸ್ಥಿತಿ ಇರುವರು. ಕಾರ್ಯಕ್ರಮದ ನಂತರ ಮೈಸೂರಿನ GPIER ಕಲಾ ತಂಡದಿಂದ ಡಾ.ಹೆಚ್.ಎಸ್.ಶಿವಪ್ರಕಾಶ್ ವಿರಚಿತ “ಮಂಟೇಸ್ವಾಮಿ ಕಥಾ ಪ್ರಸಂಗ ” ನಾಟಕ ಪ್ರದರ್ಶನ.

City Today News 9341997936

500 ಜನರಿಂದ ಅತುಲ್ಯ ಸೀನಿಯರ್ ಕೇರ್‌ ಅವರು ಆಯೋಜಿಸಿರುವ  “ಕೇರಿಂಗ್ ಫಾರ್ ಎ ಸೀನಿಯರ್” ವಾಕ್-ಎ-ಥಾನ್

ಸಮುದಾಯದ ಒಳಗೆ ಇರುವ ಬಂಧಗಳನ್ನು ಬಲಪಡಿಸಲು ಹಾಗೂ ಹಿರಿಯರ ಆರೈಕೆಯ ಬಗ್ಗೆ ಸಲಹೆ ಪಡೆಯುವುದನ್ನು ಕೇಂದ್ರೀಕರಿಸಿ, 500 ಜನರು ಅತುಲ್ಯ ಸೀನಿಯರ್ ಕೇರ್‌ ಅವರು ಆಯೋಜಿಸಿರುವ  “ಕೇರಿಂಗ್ ಫಾರ್ ಎ ಸೀನಿಯರ್” ವಾಕ್-ಎ-ಥಾನ್ ನಲ್ಲಿ ಭಾಗವಹಿಸಿದ್ದಾರೆ.

ಬೆಂಗಳೂರು,  ಸೆಪ್ಟೆಂಬರ್ 2024 –  ಭಾರತದಲ್ಲಿ ಮುಪ್ಪಿನ ಕಾಲದಲ್ಲಿ ಜೀವನವನ್ನು ನಡೆಸುವ ಸಲುವಾಗಿ ಸಹಾಯ ಮಾಡುವುದು  ಹಾಗೂ ಅಂತಹ ಹಿರಿಯರ ಆರೈಕೆಯನ್ನು ಮಾಡುವಲ್ಲಿ ಪ್ರಮುಖ ಹೆಸರನ್ನು ಹೊಂದಿರುವ ಅತುಲ್ಯ ಸೀನಿಯರ್ ಕೇರ್, ಇಂದು ಬೆಂಗಳೂರಿನ ವಿಧಾನಸೌಧದ ಅಂಬೇಡ್ಕರ್ ವೀಧಿಯಲ್ಲಿ “ಕೇರಿಂಗ್ ಫಾರ್ ಎ ಸೀನಿಯರ್” ವಾಕ್-ಎ-ಥಾನ್ ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಸುಮಾರು 500 ಹಿರಿಯ ವ್ಯಕ್ತಿಗಳ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಾಕ್ಷಿಯಾಗಿದ್ದು, ಎಲ್ಲರೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ಘನತೆಯನ್ನು ಪ್ರತಿಪಾದಿಸಲು ಒಗ್ಗೂಡಿದ್ದರು. ವೈವಿಧ್ಯಮಯ ಸ್ವಯಂಸೇವಕರು, ಕಾರ್ಪೊರೇಟ್ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸಿದ್ದ ಈ ವಾಕ್-ಎ-ಥಾನ್  ಕಾರ್ಯಕ್ರಮವು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಿ ಅದ್ಭುತ ಯಶಸ್ಸನ್ನು ಕಂಡಿತು ಹಾಗೂ ಎಲ್ಲರೂ ‘ಹಿರಿಯರ ಆರೈಕೆ’ ಎನ್ನುವ ಒಂದೇ ಹಂಚಿಕೊಂಡ ಉದ್ದೇಶವನ್ನು ಹೊಂದಿ ನಡಿಗೆಯಲ್ಲಿ.ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹೆಮ್ಮೆಯಿಂದ ಸ್ಮರಣಾರ್ಥ ಟಿ-ಶರ್ಟ್‌ಗಳು ಮತ್ತು ಕ್ಯಾಪ್‌ಗಳನ್ನು ಧರಿಸಿ, ಬೆಂಗಳೂರಿನ ರಮಣೀಯ ಮಾರ್ಗಗಳ ಹಾದಿಗಳಲ್ಲಿ ನಡಿಗೆಯ ಪ್ರಯಾಣವನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮವು ಕೇವಲ ದೈಹಿಕ ಚಟುವಟಿಕೆಗಿಂತ ಹೆಚ್ಚಿನ ಉದ್ದೇಶವನ್ನು ಹೊಂದಿತ್ತು; ಇದು ಐಕಮತ್ಯ, ಸಹಾನುಭೂತಿ ಮತ್ತು ಸಮುದಾಯ ಮನೋಭಾವದ ಪ್ರಬಲ ಪ್ರದರ್ಶನವಾಗಿತ್ತು.  ಹಿರಿಯ ನಾಗರಿಕರು ಎದುರಿಸುತ್ತಿರುವ ಅನನ್ಯ ಅಗತ್ಯತೆಗಳು ಮತ್ತು ಸವಾಲುಗಳನ್ನು ಪರಿಗಣಿಸಲು ವಾಕ್-ಎ-ಥಾನಿನಲ್ಲಿ ಭಾಗವಹಿಸುವವರು ಮತ್ತು ನೋಡುಗರನ್ನು ಸಮಾನವಾಗಿ ಒತ್ತಾಯಿಸಿ, ಹಿರಿಯರ ಆರೈಕೆಯ ಪ್ರಾಮುಖ್ಯತೆಯನ್ನು ನಮಗೆ ನೆನಪಿಸಲು ಸಹಾಯ ಮಾಡಿತು.
ಹಮ್ಮಿಕೊಂಡಿದ್ದ ನಡಿಗೆಯ ಜೊತೆಗೆ, ಕಾರ್ಯಕ್ರಮವು ಸದರಿ ಅನುಭವವನ್ನು ಸ್ಮರಣೀಯ ಮತ್ತು ಪ್ರಭಾವಶಾಲಿಯಾಗಿ ಮಾಡುವ ಗುರಿಯನ್ನು ಹೊಂದಿರುವ ಹಲವಾರು ಮುಖ್ಯಾಂಶಗಳನ್ನು ಒಳಗೊಂಡಿತ್ತು. ಅವರ ಅಮೂಲ್ಯ ಕೊಡುಗೆಯ ಕಾರಣಕ್ಕಾಗಿ ಗುರುತಿಸಿ, ಪ್ರತಿಯೊಬ್ಬ ಭಾಗವಹಿಸಿದವರಿಗೂ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಲಾಯಿತು. ಇದರಲ್ಲಿ ಭಾಗವಹಿಸಿದ್ದವರು ಶಕ್ತಿಯುತವಾಗಿರುವಂತೆ ಹಾಗೂ ತಮ್ಮನ್ನು ನಡಿಗೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮದ ಉದ್ದಕ್ಕೂ ಪೂರಕ ಉಪಹಾರಗಳು ಲಭ್ಯವಿದ್ದವು, ಇದರಿಂದಾಗಿ ಭಾಗವಹಿಸುವವರ ನಡುವೆ ಸೌಹಾರ್ದತೆ ಕಂಡಿದ್ದು ಹಂಚಿಕೆಯ ಉದ್ದೇಶವಾದ ಹಿರಿಯ ಸದಸ್ಯರ ಯೋಗಕ್ಷೇಮದ ಬಗ್ಗೆ ಸಮುದಾಯವು ಹೊಂದಿರುವ ಕಾಳಜಿಯ ಮೇಲೆ ಬೆಳಕು ಚೆಲ್ಲುತ್ತದೆ.

ಸದರಿ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ತಿಳಿಸುತ್ತಾ, ಅತುಲ್ಯ ಸಂಸ್ಥೆಯ ಹಿರಿಯ ಆರೈಕೆಯ ಸಂಸ್ಥಾಪಕಿ ಹಾಗೂ ನಿರ್ದೇಶಕಿಯಾದ ಶ್ರೀಮತಿ ಜೆ ಕೃಷ್ಣ ಕಾವ್ಯ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು: “ಇಂದಿನ ವಾಕ್-ಎ-ಥಾನ್‌ನಲ್ಲಿ ಕಂಡಿರುವ ಅಗಾಧ ಭಾಗವಹಿಸುವಿಕೆಯು ನಮ್ಮ ಸಮುದಾಯದಲ್ಲಿ ವೃದ್ಧರ ಆರೈಕೆಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಮತ್ತು ಕಾಳಜಿಯನ್ನು ತೋರಿಸುತ್ತದೆ. ಇಂದಿನ ಕಾರ್ಯಕ್ರಮವು ಅತುಲ್ಯ ಸಂಸ್ಥೆಯಲ್ಲಿ  ಹಿರಿಯರ ವಿಮರ್ಶಾತ್ಮಕ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸಿ ಮತ್ತು ಸಮುದಾಯದ ಕ್ರಿಯೆಯ ಶಕ್ತಿಯನ್ನು ಎತ್ತಿ ತೋರಿಸಿದ್ದು ಅದರಿಂದಾಗಿ ಜನರನ್ನು ಒಟ್ಟುಗೂಡಿಸುವ ವೇದಿಕೆಗಳನ್ನು ರಚಿಸುವಲ್ಲಿ ನಾವು ನಂಬುತ್ತೇವೆ.
ಅತುಲ್ಯ ಸಂಸ್ಥೆಯವರಾದ ನಾವು ಸಮುದಾಯದ ಯೋಗಕ್ಷೇಮದ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದೇವೆ, ವಿಶೇಷವಾಗಿ ನಮ್ಮ ಹಿರಿಯ ನಾಗರಿಕರಿಗಾಗಿ. ಅವರು ನಮ್ಮ ಕಾಳಜಿ ಮತ್ತು ಗೌರವಕ್ಕೆ ಅರ್ಹರು. ಈ ವಾಕ್-ಎ-ಥಾನ್ ಅನ್ನು ಹಮ್ಮಿಕೊಂಡಿರುವುದು ಕಾಳಜಿ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಬೆಳೆಸಲು ನಾವು ಕೆಲಸ ಮಾಡುತ್ತಿರುವ ಹಲವಾರು ಮಾರ್ಗಗಳಲ್ಲಿ ಒಂದಾಗಿದೆ.

ಇದರಿಂದಾಗಿ ನಮ್ಮ ಹಿರಿಯರನ್ನು ಕೇವಲ ಕಾಳಜಿ ಮಾಡುವುದಕ್ಕಾಗಿ ಮಾತ್ರವಲ್ಲ, ಆದರೆ ಅವರನ್ನು ಗೌರವಿಸುವುದು ಹಾಗೂ ಅವರ ಮೌಲ್ಯತೆಯ ಬಗ್ಗೆ ವ್ಯಕ್ತಪಡಿಸುವುದು ಆಗಿರುತ್ತದೆ.”
ಅತುಲ್ಯ ಸೀನಿಯರ್ ಕೇರ್‌ ಅವರು ಸಮುದಾಯದ ಬಗ್ಗೆ ಹೊಂದಿರುವ ಹಾಗೂ ಆಳವಾಗಿ ಬೇರೂರಿರುವ ಕಾಳಜಿಯು, ಹಿರಿಯರು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಪರಿಹರಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಪ್ರತಿಫಲಿಸುತ್ತದೆ. “ಕೇರಿಂಗ್ ಫಾರ್ ಎ ಸೀನಿಯರ್” ವಾಕ್-ಎ-ಥಾನ್ ಎಂಬುದು ಅತುಲ್ಯ ಅವರ ವಿಶಾಲ ಉಪಕ್ರಮದ ಒಂದು ಭಾಗವಾಗಿದ್ದು, ಸಮುದಾಯದ ಬಗ್ಗೆ ಅರಿವು ಮೂಡಿಸುವುದು, ಒಳಗೊಳ್ಳಿಸುವಿಕೆ ಹಾಗೂ ವೃದ್ಧರಿಗೆ ಬೆಂಬಲವನ್ನು ಉತ್ತೇಜಿಸುವ ಅರ್ಥಪೂರ್ಣ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ  ಮೂಲಕ, ಅತುಲ್ಯ ಸಂಸ್ಥೆಯು ಬಲವಾದ ಸಮುದಾಯ ಬಂಧಗಳನ್ನು ನಿರ್ಮಿಸುವ ಹಾಗೂ ಹಿರಿಯರನ್ನು ಬೆಂಬಲಿಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದ್ದು ಸಮುದಾಯ ಜೀವನದ ಅವಿಭಾಜ್ಯ ಅಂಗವಾಗಿದೆ.
ಅತುಲ್ಯ ಸಂಸ್ಥೆಯ ಬದ್ಧತೆಯು ಈ ರೀತಿಯ ಕಾರ್ಯಕ್ರಮಗಳನ್ನು ಮೀರಿ ವಿಸ್ತರಿಸಿದೆ, ಏಕೆಂದರೆ ಸಂಸ್ಥೆಯು ಹಿರಿಯರಿಗೆ ಸಮಗ್ರ ಮತ್ತು ಸಹಾನುಭೂತಿಯ ಆರೈಕೆಯನ್ನು ನೀಡುವಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ವೈಯಕ್ತೀಕರಿಸಿದ ಆರೈಕೆ ಯೋಜನೆಗಳು, ನವೀನ ರೀತಿಯ ನೆರವನ್ನು ನೀಡುವ ಜೀವನ ಸೌಲಭ್ಯಗಳು ಹಾಗೂ ಆರೈಕೆ ಮಾಡುವವರ ಸಮರ್ಪಿತ ತಂಡವನ್ನು ಗಮನದಲ್ಲಿಟ್ಟುಕೊಂಡು, ಅತುಲ್ಯ ಸೀನಿಯರ್ ಕೇರ್ ಭಾರತದಲ್ಲಿ ಹಿರಿಯರ ಆರೈಕೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಇಂದು ನಾವು ಕಂಡಿರುವ ವಾಕ್-ಎ-ಥಾನ್‌ನ ಅಭೂತಪೂರ್ವ ಯಶಸ್ಸು ಸಾಮೂಹಿಕ ಕ್ರಿಯೆಯು ಬೀರಬಹುದಾದ ಪ್ರಭಾವದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಹಿರಿಯರ ಜೀವನದ ಗುಣಮಟ್ಟವನ್ನು ಸುಧಾರಿಸುವ ತನ್ನ ಪ್ರಯತ್ನಗಳನ್ನು ಮುಂದುವರೆಸಲು ಅತುಲ್ಯ ಸಂಸ್ಥೆಯು ಸಮರ್ಪಿಸಿಕೊಂಡಿರುವುದನ್ನು ತೋರಿಸುತ್ತದೆ.

City Today News 9341997936

ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಒಳಮೀಸಲಾತಿ ಕುರಿತು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರ ವಿರೋಧ ಕರ್ನಾಟಕ ಬಿಎಸ್‌ಪಿ ರಾಜ್ಯ ನಾಯಕರುಗಳು ಪಕ್ಷವನ್ನು ತೊರೆಯುವ ನಿರ್ಧಾರ.

ಬಹುಜನ ಸಮಾಜ ಪಕ್ಷದ ಸರ್ವೋಚ್ಛ ನಾಯಕಿ ಬೆಹನ್ ಕುಮಾರಿ ಮಾಯಾವತಿಜೀಯವರು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ವರ್ಗಿಕರಣ (ಒಳಮೀಸಲಾತಿ) ವ್ಯವಸ್ಥೆಗೆ ಸಂಬಂಧಿಸಿದಂತೆ ಆಗಸ್ಟ್ 1. 2024ರ ಮಾನ್ಯ ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಬಲವಾಗಿ ವಿರೋಧಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೀಸಲಾತಿಯಲ್ಲಿ ಮಧ್ಯಪ್ರವೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ, ಮೀಸಲಾತಿಯನ್ನು ಒಂದು ಪೀಳಿಗೆಗೆ ಮಾತ್ರ ನಿಯಂತ್ರಿಸುವುದು ಮತ್ತು ಕೆನೆಪದರ ವಿಷಯಗಳನ್ನು ವಿರೋಧಿಸಿರುವ ರಾಷ್ಟ್ರೀಯ ಅಧ್ಯಕ್ಷರ ನಿಲುವನ್ನು ನಾವು ಸಂಪೂರ್ಣವಾಗಿ ಅನುಮೋದಿಸುತ್ತೇವೆ. ಆದರೆ ಒಳಮೀಸಲಾತಿ ವಿರೋಧಿಸುವ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನದ ಬಗ್ಗೆ ಕರ್ನಾಟಕ ಬಿಎಸ್‌ಪಿ ನಾಯಕರಾದ ನಾವು ಭಿನ್ನಾಭಿಪ್ರಾಯವನ್ನು ಹೊಂದಿದ್ದೇವೆ. ಏಕೆಂದರೆ ಕಳೆದ 30 ವರ್ಷಗಳಿಂದ ಒಳಮೀಸಲಾತಿ ಆಂದೋಲನವನ್ನು ನಾವು. ಬಿಎಸ್‌ಪಿ ನಾಯಕರು ಮತ್ತು ಕಾರ್ಯಕರ್ತರು, ಬೆಂಬಲಿಸುತ್ತಾ ಬಂದಿದ್ದಾರೆ.

ಕರ್ನಾಟಕದ ಸ್ಥಿತಿಯ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳಾದ ಡಾ. ಅಶೋಕ್ ಸಿದ್ಧಾರ್ಥ್ ಅವರ ಮೂಲಕ ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಒಂದು ಮನವಿಯನ್ನು ಸಲ್ಲಿಸಿದೆವು. ಅಲ್ಲದೆ ದಿನಾಂಕ: 09.08.2024 ರಂದು, ಅವರೊಂದಿಗೆ ಫೋನ್ ಮೂಲಕ ನಮ್ಮ ಅಹವಾಲನ್ನು ಹೇಳಿಕೊಂಡೆವು. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ನೀಡಿ ಮೀಸಲಾತಿಯಲ್ಲಿ ಒಳಮೀಸಲಾತಿ ಒದಗಿಸುವಂತೆ ನ್ಯಾ. ಸದಾಶಿವ ಆಯೋಗವು ಮಾಡಿರುವ ಶಿಫಾರಸ್ಸುಗಳು ಬಾಬಾಸಾಹೇಬ್ ಡಾ. ಅಂಬೇಡ್ಕ‌ರವರ ಸಾಮಾಜಿಕ ನ್ಯಾಯದ ಸಿದ್ಧಾಂತ ಮತ್ತು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳ ಪ್ರಕಾರವಾಗಿದೆ. ನಮ್ಮ ಮನವಿಯನ್ನು ಆಲಿಸಿದ ರಾಷ್ಟ್ರೀಯ ಅಧ್ಯಕ್ಷರಾದ ಅಕ್ಕ ಮಾಯಾವತಿಯವರು ಆಗಸ್ಟ್ 27, 2024 ರಂದು ಮಧ್ಯಾಹ್ನ 3 ಗಂಟೆಗೆ ಲಕ್ಕೋದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣಿ ಮುಗಿದ ಕೂಡಲೇ ಈ ವಿಷಯವನ್ನು ಚರ್ಚಿಸಲು ನಮಗೆ ಸಮಯ ನಿಗಧಿ ಮಾಡಿದ್ದರು.

ಆದರೆ ಅಂದು ನಮಗೆ ಸಂಪೂರ್ಣ ನಿರಾಶೆ ಮತ್ತು ಆಶ್ಚರ್ಯ ಕಾದಿತ್ತು. ರಾಷ್ಟ್ರೀಯ ಅಧ್ಯಕ್ಷರ ಆಹ್ವಾನದ ಮೇರೆಗೆ ಹಿರಿಯ ರಾಜ್ಯ ಪದಾಧಿಕಾರಿಗಳ ನಿಯೋಗವು ದಿನಾಂಕ: 27.08.2024 ರಂದು, ಅವರನ್ನು ನೇರವಾಗಿ ಭೇಟಿಯಾಗಿ ನಮ್ಮ ಮನವಿಯನ್ನು ಸಲ್ಲಿಸಲು ನಮಗೆ ಅವಕಾಶವನ್ನೇ ಮಾಡಿಕೊಡಲಿಲ್ಲ. ನಮ್ಮಂತೆಯೇ ಆಂಧ್ರಪ್ರದೇಶ ಮತ್ತು ತೆಲಂಗಾಣ ನಾಯಕರೂ ಸಹ ತಮ್ಮ ಮನವಿಯನ್ನು ಸಲ್ಲಿಸಲಾಗದೆ ಸಾಕಷ್ಟು ಅವಮಾನ ಅನುಭವಿಸಿದರು.

ಕಳೆದ ಹಲವಾರು ವರ್ಷಗಳಿಂದ ನಮ್ಮ ಅನುಭವದ ಹಿನ್ನಲೆಯಲ್ಲಿ ನಮಗೆ ಮನವರಿಕೆ ಆಗಿರುವುದೇನೆಂದರೆ, ನಮ್ಮ ಬಹುಜನ ಸಮಾಜ ಪಾರ್ಟಿಯು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಾನ್ಯವಾರ್ ಕಾಶ್ಮೀರಾಮ್ ಜೀಯವರ ಸಿದ್ಧಾಂತದಿಂದ ಸಂಪೂರ್ಣವಾಗಿ ದೂರಸರಿದಿದೆ. ಅಲ್ಲದೆ ಪಕ್ಷವು ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಆದ್ದರಿಂದಲೇ, ಬಹುಜನ ಸಮಾಜದಲ್ಲಿರುವ ಅತ್ಯಂತ ನಿಕೃಷ್ಟ ಸಮುದಾಯಗಳ ಅಳಲು ಇಂದು ಅರಣ್ಯರೋಧನೆಯಾಗಿದೆ. ಇಂತಹ ಹತಾಶ ಪರಿಸ್ಥಿತಿಯಲ್ಲಿ ನಾವು ಕರ್ನಾಟಕ ರಾಜ್ಯ ಸಮಿತಿಯ ಪದಾಧಿಕಾರಿಗಳು ಭಾರವಾದ ಹೃದಯದಿಂದ ಮತ್ತು ದುಖಃದಿಂದ ಬಹುಜನ ಸಮಾಜ ಪಕ್ಷವನ್ನು ತಕ್ಷಣದಿಂದ ತೊರೆಯಲು ನಿರ್ಧರಿಸಿದ್ದೇವೆ. ಆದಾಗ್ಯೂ ಮಹಾತ್ಮ ಪುಲೆ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕ‌ರ್ ಮತ್ತು ಮಾನ್ಯವಾರ್ ಕಾಶ್ಮೀರಾಮ್‌ಜೀಯವರ ಆದರ್ಶಗಳ ಮೇಲೆ ಬಹುಜನ ಚಳುವಳಿಯನ್ನು ಮುಂದುವರಿಸಲು ನಾವು ಧೃಡಸಂಕಲ್ಪ ಮಾಡಿದ್ದೇವೆ ಮತ್ತು ಬಾಬಾಸಾಹೇಬ್ ಅಂಬೇಡ್ಕ‌ರವರ ಕಾರವಾನನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಘನಕಾರ್ಯವನ್ನು ಎಂದಿನಂತೆ ಮುಂದುವರಿಸಲು 6 ತಣ ಬದ್ಧರಾಗಿರುತ್ತೇವೆ ಎಂದು ಮಾರಸಂದ್ರ ಮುನಿಯಪ್ಪ- ರಾಜ್ಯಾಧ್ಯಕ್ಷರು,ಗೋಪಿನಾಥ್ ರಾಜ್ಯ-ಸಂಯೋಜಕರು,ಆ‌ರ್. ಮುನಿಯಪ್ಪ-ರಾಜ್ಯ ಪ್ರಧಾನ ಕಾರ್ಯಧರ್ಶಿ, ಕೆ.ಬಿ.ವಾಸು-ರಾಜ್ಯ ಪ್ರಧಾನ ಕಾರ್ಯಧರ್ಶಿ, ಎಂ. ಗುರುಮೂರ್ತಿ-ರಾಜ್ಯ ಕಾರ್ಯಧರ್ಶಿ ಹಾಗೂ ಜಿ.ಎನ್. ವಿಷ್ಣು-ರಾಜ್ಯ ಖಜಾಂಚಿ ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

City Today News 9341997936