ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಉಂಡೆನಾಮ ಹಾಕಿದ ನಿರ್ಮಲಾ ಸೀತಾರಾಮನ್ ವಿರುದ್ಧ ನಾಳೆ ಚೊಂಬು ಹಿಡಿದು ಪ್ರತಿಭಟನೆ: ಮೋಹನ್ ದಾಸರಿ



ಬೆಂಗಳೂರು:ಮೋದಿ ಮೂರನೇ ಬಾರಿ ಅಧಿಕಾರ ಹಿಡಿದ ಬಳಿಕ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಲಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜ್ಯಕ್ಕೆ ಉಂಡೆನಾಮ ಹಾಕಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಕಿಡಿ ಕಾರಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮೇಕೆದಾಟು ಸಮಾನಾಂತರ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ರಾಜ್ಯಕ್ಕೆ ನಾಮ ಹಾಕಲಾಗಿದೆ ಎಂದು ಹೇಳಿದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು, ಅದಕ್ಕೂ ಕೇಂದ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ. ಬೆಂಗಳೂರಿನಲ್ಲಿ 60 ಕಿಮೀ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಕೂಡ ಪ್ರಸ್ತಾಪ ಮಾಡಿಲ್ಲ ಎಂದರು.

ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೋ ಮಾರ್ಗ ವಿಸ್ತರಣೆ ಮಾಡುವ ಬಗ್ಗೆ ಮತ್ತು 44.65 ಕಿ.ಮೀ ಉದ್ದದ ಮೂರನೇ ಹಂತದ ಮೆಟ್ರೋ ಹಂತದ ವಿಸ್ತರಣೆ ಬಗ್ಗೆ ಕೂಡ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. 37 ಕಿ.ಮೀ. ಹೆಬ್ಬಾಳ-ಸರ್ಜಾಪುರ ಯೋಜನೆಗೆ ಕೂಡ ಉಂಡೇನಾಮ ಹಾಕಿದ್ದಾರೆ ಎಂದರು.

ರಾಜ್ಯ ಸರ್ಕಾರದ ಹೊಸ ಹೆದ್ದಾರಿ ಯೋಜನೆಗಳಾದ ಗುಂಡ್ಲುಪೇಟೆ, ನಂಜನಗೂಡು ಮತ್ತಯ ಮೈಸೂರು ಮೂಲಕ ಕೊಳ್ಳೆಗಾಲ-ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766 ಅಗಲೀಕರಣ ಯೋಜನೆಯನ್ನು ಕಡೆಗಣಿಸಲಾಗಿದೆ ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿಕ ಪಕೋಡ ಮಾಡಿ ಎಂದಿದ್ದರು. ಈಗ ಪ್ರತಿ ವರ್ಷ 75 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳುವ ಮೂಲಕ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ ಎಂದರು. 75 ಲಕ್ಷ ಉದ್ಯೋಗ ಕೊಡುತ್ತೇನೆ ಎನ್ನುವ ಇವರು ಪ್ರತಿ ವರ್ಷ 4 ಕೋಟಿ ವಿದ್ಯಾರ್ಥಿಗಳಿಗೆ ಸ್ಕಿಲ್ ತರಬೇತಿ ಕೊಡುವುದಾಗಿ ಹೇಳಿದ್ದಾರೆ ಉಳಿದ 3.25 ಕೋಟಿ ಮಂದಿ ಏನು ಮಾಡಬೇಕು ಎಂದರು.

ರೈತರ ಆದಾಯ ದ್ವಿಗುಣವಾಗಿಲ್ಲ, ಭಾರತ ಇನ್ನೂ ಗುಡಿಸಲು ಮುಕ್ತವಾಗಿಲ್ಲ, 370 ಕಾಯಿದೆ ಮೂಲಕ ವಿಶೇಷ ಸ್ಥಾನಮಾನ ನೀಡಿದ ಜಮ್ಮು ಮತ್ತು ಕಾಶ್ಮೀರ ಇನ್ನೂ ಉಗ್ರರಿಂದ ಮುಕ್ತವಾಗಿಲ್ಲ, ಪ್ರತಿ ಮನೆಗೂ ವಿದ್ಯುತ್ ಕೊಟ್ಟಿಲ್ಲ ಇದೆಲ್ಲವೂ ಮೋದಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ, 100 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡುವುದಾಗಿ ಮೋದಿ ಮತ್ತೊಂದು ಟೋಪಿ ಹಾಕಿದ್ದಾರೆ ಎಂದರು.

ಎಲ್ಲಿ ಸರ್ಕಾರ ಬೀಳುತ್ತದೋ ಎನ್ನುವ ಭಯದಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಇವರಿಗೆ ಸರ್ಕಾರ ಭದ್ರಪಡಿಸಿಕೊಳ್ಳಬೇಕೆ ಹೊರತು ಅಭಿವೃದ್ಧಿ ಬೇಕಿಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ತೆರಿಗೆ ವಿನಾಯಿತಿ ಸಿಗುತ್ತದೆ ಎಂದು ಕಾಯುತ್ತಿದ್ದು ಮಧ್ಯಮ ವರ್ಗದವರಿಗೆ ನಿರಾಸೆ ಮಾಡಿದ್ದಾರೆ. ಸ್ಟಾಡಂರ್ಡ್ ಡಿಡಕ್ಷನ್ ಮಿತಿಯನ್ನು 50,000 ರೂ. ಗಳಿಂದ 75,000 ರೂ. ಗಳಿಗೆ ಮಾಡಿರುವುದಕ್ಕೆ ಮಧ್ಯಮ ವರ್ಗ ವಿರೋಧ ವ್ಯಕ್ತಪಡಿಸಿದೆ ಎಂದರು.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯವನ್ನು ಕಡೆಗಣಿಸಿರುವುದನ್ನು ವಿರೋಧಿಸಿ ನಾಳೆ 24-7-2024  ಬೆಳಿಗ್ಗೆ 11 ಗಂಟೆಗೆ  (ಬುಧವಾರ) ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಚೊಂಬು ಹಿಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

City Today News 9341997936

ಬಡವರಿಗೆ, ರೈತರಿಗೆ, ಸಣ್ಣ ಮತ್ತು ಮದ್ಯಮ ಕೈಗಾರಿಕೆ ಗಳ ಅಭಿವೃದ್ದಿ ಪರ ಈ ಬಜೆಟ್ ಇದೇ ಎಂದು ಶರವಣ ಶ್ಲಾಘನೆ ವ್ಯಕ್ತಪಡಿಸಿದರು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಏಳನೇ ಬಾರಿಗೆ ಮಂಡಿಸಿರುವ ಆಯವ್ಯಯ ಸುಧಾರಣೆ, ಪ್ರಗತಿಯ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯರಾದ ಜೆಡಿಎಸ್ ಹಿರಿಯ ನಾಯಕ ಟಿ. ಎ.ಶರವಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಡವರಿಗೆ, ರೈತರಿಗೆ, ಸಣ್ಣ ಮತ್ತು ಮದ್ಯಮ ಕೈಗಾರಿಕೆ ಗಳ ಅಭಿವೃದ್ದಿ ಪರ ಈ ಬಜೆಟ್ ಇದೇ ಎಂದು ಶರವಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಚಿನ್ನದ ಮೇಲೆ ಅಬಕಾರಿ ಸುಂಕವನ್ನು ಶೇಕಡಾ 6ರಷ್ಟು ಕಡಿತ ಗೊಳಿಸಿರುವ  ಕ್ರಮ ಅತ್ಯಂತ ಮಹತ್ವದ ನಿರ್ಧಾರವಾಗಿದೆ ಎಂದು ಸ್ವಾಗತಿಸಿದ್ದಾರೆ.
ಚಿನ್ನ ಬೆಳ್ಳಿ ಉದ್ಯಮ ಇದರಿಂದ ದೊಡ್ಡ ಮಟ್ಟದಲ್ಲಿ ದೇಶದ ಆರ್ಥಿಕ ಶಕ್ತಿಯ ಭಾಗವಾಗಲಿದೆ ಎಂದು ಶರವಣ ಹೇಳಿದ್ದಾರೆ
ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ, ಲಕ್ಷಾಂತರ ಹುದ್ದೆ ಸೃಷ್ಟಿಸುವ ದೃಷ್ಟಿಯಲ್ಲಿ ಯುವಕರ ಪಾಲಿಗೆ ಅಧ್ಬುತ ಅವಕಾಶಗಳನ್ನು ಸೃಷ್ಟಿಸುವ ಸಂಜೀವಿನಿ ಬಜೆಟ್ ನ್ನ ಪ್ರಧಾನಿ ಮೋದಿ ಸಾರಥ್ಯದ ಕೇಂದ್ರ ಸರಕಾರ ಕೊಡುವ ಮೂಲಕ ದೇಶವನ್ನು  ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಪ್ರಯತ್ನ ನಡೆಸಲಾಗಿದೆ ಎಂದು ಶರವಣ ಬಣ್ಣಿಸಿದ್ದಾರೆ.
ರೈತರ ಪಾಲಿಗಂತೂ ಇದು ಅವರಿಗೆ ನೆಮ್ಮದಿ ತಂದು ಕೊಡುವ ಅಮೋಘ ಬಜೆಟ್ ಎಂದು ವಿಶ್ಲೇಷಣೆ ಮಾಡಿರುವ ಶರವಣ ಕನಿಷ್ಠ ಬೆಂಬಲ ಬೆಲೆಯನ್ನು ಎತ್ತಿ ಹಿಡಿಯುವ ರೈತ ಸ್ನೇಹಿ ಆಯವ್ಯಯ ಎಂದಿದ್ದಾರೆ.
ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಭಾರಿ ಮಟ್ಟದಲ್ಲಿ ಅವಕಾಶ ಕಲ್ಪಿಸುವ ವಿಕಸಿತ ಭಾರತದ ಕನಸನ್ನು ನನಸು ಮಾಡುವ ದೂರದೃಷ್ಟಿಯ ಬಜೆಟ್ ಇದಾಗಿದೆ. ಸಧೃಢ ಭಾರತವನ್ನು ಕಟ್ಟುವ ಅದ್ಭುತ ಆಯವ್ಯಯ ಇದು ಎಂದು ಶರವಣ ಕೊoಡಾಡಿದ್ದಾರೆ.
ಬಡವರಿಗಾಗಿ ಆಹಾರ ಭದ್ರತೆಗಾಗಿ ಪಣ ತೊಡುವ ಬಜೆಟ್ನ್ನು ಉಚಿತ ಆಹಾರ ಧಾನ್ಯವನ್ನು ಬರುವ ಐದು ವರ್ಷಕ್ಕೆ ವಿಸ್ತರಿಸಿ, ಇಡೀ ಭಾರತವನ್ನೇ ಹಸಿವು ಮುಕ್ತ ಮಾಡುವ ಸಂಕಲ್ಪ ಈ ಬಜೆಟ್ ಹಿಂದಿದೆ. ನೀರಾವರಿ ಯೋಜನೆಗಳಿಗೆ ಈ ಬಾರಿ ಭಾರಿ ಆದ್ಯತೆ ನೀಡಲಾಗಿದೆ. ಮೂಲಭೂತ ಸೌಕರ್ಯ ಗಳಿಗೆ ಆದ್ಯತೆ ಕಲ್ಪಿಸಲಾಗಿದೆ ಎಂದು ಶರವಣ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದರು.

ಇದರ ಜೊತೆ ಮದ್ಯಮ ವರ್ಗಕ್ಕೆ ಬಂಪರ್ ಕೊಡುಗೆ ನೀಡಿರುವ ಹೊಸ ತೆರಿಗೆ ಪದ್ಧತಿ ದುಡಿಯುವ ವರ್ಗಕ್ಕೆ ಹರ್ಷ ತಂದಿದೆ. ಇದನ್ನು ತಾವು ಹೃತ್ಪೂರ್ವಕ ವಾಗಿ ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.

City Today News 9341997936

ಕರ್ನಾಟಕದ ಎಲ್ಲಾ ಬ್ಯೂಟಿಷಿಯನ್ಗಳಿಂದ ದಿನಾಂಕ 26/07/2024 ಶುಕ್ರವಾರ ಫ್ರೀಡಂ ಪಾರ್ಕಿನಲ್ಲಿ ಬೆಳಿಗ್ಗೆ 09.30 ರಿಂದ ಹೋರಾಟ

ಬೆಂಗಳೂರು ಬ್ಯೂಟಿಷಿಯನ್ ವುಮೆನ್ಸ್ ಟ್ರಸ್ಟ್ ವತಿಯಿಂದ ಕರ್ನಾಟಕ ಎಲ್ಲಾ ಜಿಲ್ಲೆ ಮತ್ತು ತಾಲೂಕು ಬ್ಯೂಟಿಷಿಯನ್‌ಗಳು, ಮೇಕಪ್ ಆರ್ಟಿಸ್ಟ್‌ಗಳು ಮತ್ತು ಕರ್ನಾಟಕ ಸವಿತ ಸಮಾಜದ ಹೇರ್ ಡ್ರೆಸ್ಸರ್ಸ್‌ಗಳು ಸೇರಿ ಕೆಲವು ಬೇಡಿಕೆಗಳಿಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಮಹಿಳಾ ಬ್ಯೂಟಿಷಿಯನ್‌ ಗಳಿಗೆ ಹಾಗೂ ಸವಿತಾ ಸಮಾಜದವರಿಗೂ ಮತ್ತು ಬ್ಯೂಟಿಗೆ ಸಂಬಂಧಪಟ್ಟ ಯಾವುದೇ ವರ್ಗದವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸರ್ಕಾರದಿಂದ ದೊರೆಯದೆ ಇರುವುದರಿಂದ ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದೇವೆ, ಅವುಗಳು ಈ ಕೆಳಗಿನಂತಿವೆ.

1. ಒಂದು ಪಾರ್ಲ‌್ರಗೂ ಮತ್ತೊಂದು ಪಾರ್ಲ‌ರ್ಗೂ ಕನಿಷ್ಠ ಪಕ್ಷ ಒಂದರಿಂದ ಎರಡು ಕಿಲೋಮೀಟರ್ ಅಂತರವಿರಬೇಕು.

2. ಮೂರರಿಂದ ಆರು ತಿಂಗಳು ಬ್ಯೂಟಿ ಪಾರ್ಲರ್ ತರಬೇತಿಯಾದ ಬ್ಯೂಟಿಷಿಯನ್‌ಗಳಿಗೆ ಕನಿಷ್ಠ ಪಕ್ಷ ಒಂದು ವರ್ಷ ಸರ್ವಿಸ್ ಮುಗಿದ ನಂತರ ಪಾರ್ಲರ್ ತೆರೆಯಲು ಬಿ.ಬಿ.ಎಂ.ಪಿ ಯಿಂದ ಲೈಸೆನ್ಸ್ ನೀಡುವಂತೆ ಮನವಿ ಮಾಡಲಾಗಿದೆ.

3. ಕಾರ್ಮಿಕರ ಕಾರ್ಡ್ ಇರುವ ಹಾಗೆ ನಮಗೂ ಅಂದರೆ ಬ್ಯೂಟಿಷಿಯನ್ಸ್ ಗಳಿಗೆ ಒಂದು ಕಾರ್ಡ್ ನೀಡಬೇಕೆಂದು ಸರ್ಕಾರದಲ್ಲಿ ಮನವಿ ಮಾಡಿದ್ದೇವೆ.

4. ಎಲ್ಲಾ ಕಂಪನಿಗಳಲ್ಲಿ ಪಿ.ಎಫ್ ಮತ್ತು ಇ.ಎಸ್.ಐ ಗಳು ಇರುವ ಹಾಗೆ ನಮ್ಮ ಬ್ಯೂಟಿ ಪಾರ್ಲ‌್ರಗಳಿಗೂ ಒಂದು ವ್ಯವಸ್ಥೆಯಾಗಬೇಕು.

5. 50 ವರ್ಷ ಮೇಲ್ಪಟ್ಟ ಮತ್ತೆ 20 ರಿಂದ 30 ವರ್ಷ ಸರ್ವಿಸ್ ಆದವರಿಗೆ ಇಂತಿಷ್ಟು ಪೆನ್ನನ್ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿಸಿದ್ದೇವೆ.

6 . ಸರ್ಕಾರದಿಂದ ಸಿಗುವಂತಹ ಸಬ್ಸಿಡಿ ಲೋನ್‌ಗಳು ವ್ಯವಸ್ಥೆಯಾಗಬೇಕು.

7. ಎಲ್ಲಾ ಪಾರ್ಲ‌್ರಗಳಲ್ಲಿಯೂ ಒಂದೊಂದು ಸರ್ವಿಸ್‌ ಗೆ ನಿಗದಿತವಾದ ದರಗಳನ್ನು ಇಡಬೇಕು.

8. ಎಲ್ಲಾ ಪಾರ್ಲ‌್ರಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟು ಒಳ್ಳೆಯ ಗುಣಮಟ್ಟದ ಸೌಂದರ್ಯವರ್ಧಕಗಳನ್ನು ಬಳಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕು.

9. ಕೆಲವು ಸೌಕರ್ಯಗಳ ಬಗ್ಗೆ ಸರ್ಕಾರಕ್ಕೆ ಮನವಿ ಹಾಗೂ ಹೋರಾಟ ಮಾಡಲು ಬೆಂಗಳೂರು ಬ್ಯೂಟಿಷಿಯನ್ ವುಮೆನ್ಸ್ ಟ್ರಸ್ಟ್ ಎಲ್ಲಾ ಪದಾಧಿಕಾರಿಗಳು ಹೋರಾಡುತ್ತಿದ್ದೇವೆ ಹಾಗೂ ಈ ಹೋರಾಟಕ್ಕೆ ಸವಿತಾ ಸಮಾಜದವರು ಕೂಡ ಕೈಜೋಡಿಸುತ್ತಿದ್ದಾರೆ ಹಾಗೆಯೇ ನಮ್ಮ ಕರ್ನಾಟಕದ ಎಲ್ಲಾ ಬ್ಯೂಟಿಷಿಯನ್ಗಳು ದಿನಾಂಕ 26/07/2024 ಶುಕ್ರವಾರ ಫ್ರೀಡಂ ಪಾರ್ಕಿನಲ್ಲಿ ಬೆಳಿಗ್ಗೆ 09.30 ರಿಂದ ಹೋರಾಟ ಇರುತ್ತದೆ  ಎಂದು ಅಧ್ಯಕ್ಷರು ಹಾಗೂ ಬೆಂಗಳೂರು ಬ್ಯೂಟಿಷಿಯನ್ ವುಮೆನ್ಸ್ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಕರ್ನಾಟಕ ಸವಿತಾ ಸಮಾಜ ದವರು  ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಶಿವಾನಂದ ಫ್ಲೈ ಓವರ್ ಕ್ರಿಮಿನಲ್ ಪ್ರಕರಣದಲ್ಲಿ ಆಮ್ ಆದ್ಮಿ ನಾಯಕರುಗಳಿಗೆ ಬಿಡುಗಡೆ ಭಾಗ್ಯ

2022ನೇ ಆಗಸ್ಟ್ ತಿಂಗಳಿನಲ್ಲಿ ಕಾಮಗಾರಿಯ ಹಂತದಲ್ಲಿದ್ದ ಶಿವಾನಂದ ಫ್ಲೈ ಓವರ್ ಪ್ರಕರಣದಲ್ಲಿ 40 ಪರ್ಸೆಂಟ್ ಕಮಿಷನ್ ಹಗರಣ ಆಗಿದೆ ಎಂದು ಆರೋಪಿಸಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ  ಪ್ರತಿಭಟನೆ ಮಾಡಿದ್ದ ಆಮ್ ಆದ್ಮಿ ಪಕ್ಷದ ನಾಯಕರುಗಳಿಗೆ ಇಂದು ನ್ಯಾಯಾಲಯದಿಂದ ಬಿಡುಗಡೆ ಭಾಗ್ಯ ದೊರೆಯಿತು.

ಬೆಂಗಳೂರು ನಗರ ಒಂದನೇ ಎ ಸಿ ಎಂ ಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಆರೋಪಿಗಳ ಪರ ವಾದವನ್ನು ಮಂಡಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ  ನೇತೃತ್ವದ ಇನ್ನಿತರ 17 ಆರೋಪಿಗಳಿಗೆ ಪ್ರಕರಣದಿಂದ ಪ್ರಕರಣದಿಂದ ಮುಕ್ತಿ ನೀಡಿದರು.  ಆರೋಪಿಗಳ ಪರ  ಪಕ್ಷದ ಕಾನೂನು ವಿಭಾಗದ ಮುಖ್ಯಸ್ಥ ಹಾಗೂ ಖ್ಯಾತ ವಕೀಲ ದಿವಾಕರ್ ರವರ ವಾದವನ್ನು  ಮಂಡಿಸಿದರು. ಮಾನ್ಯ ನ್ಯಾಯಾಧೀಶರು ಎಲ್ಲಾ 17 ಜನ ಆರೋಪಿಗಳಿಗೆ ಬಿಡುಗಡೆ ಭಾಗ್ಯ ನೀಡಿದರು. ರಾಜ್ಯದಲ್ಲಿನ  ಭ್ರಷ್ಟಾಚಾರ ಪ್ರಕರಣಗಳಲ್ಲಿ ಆಮ್ ಆದ್ಮಿ ಪಕ್ಷವು ಸತತ ಹೋರಾಟವನ್ನು ಇದೇ ರೀತಿ ಮುಂದುವರಿಸಲಿದೆ ಹಾಗೂ ಪೊಲೀಸರ ಸುಳ್ಳು ಮಕದ್ದಮೆಗಳಿಗೆ ಹೆದರುವುದಿಲ್ಲ ಎಂದು  ಮೋಹನ್ ದಾಸರಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

City Today News 9341997936

108 ಅಂಬುಲೆನ್ಸ್  ಟೆಂಡರ್ ರದ್ದಾದ ಕುರಿತು ಹಾಗು ಇದಕ್ಕೆ ಸಂಬಂಧಪಟ್ಟಂತೆ ನಡಿಯುತ್ತಿರುವ ಇತರ ಅಕ್ರಮಗಳ ಕುರಿತಂತೆ ಸದನದ ಶೂನ್ಯ ವೇಳೆಯಲ್ಲಿ ಪ್ರಶ್ನಿಸಿದ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ

ರಾಜ್ಯದಲ್ಲಿ ಡೆಂಘೀರುದ್ರನರ್ತನ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, 108 ಆ್ಯಂಬುಲೆನ್ಸ್ ಸೇವೆ ಒದಗಿಸುವ ಟೆಂಡರ್ ರದ್ದಾಗಿ ಏಳು ವರ್ಷ ಕಳೆದರೂ ಈವರೆಗೂ ಹೊಸಬರಿಗೆ ಟೆಂಡರ್ ನೀಡಲೂ ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಇದು ತುರ್ತು ಆರೋಗ್ಯ ಸೇವೆಗಳ ಬಗೆಗಿನ ವಿಳಂಬ ಧೋರಣೆಯ ದ್ಯೋತಕ ಎಂಬ ಆರೋಪ ಕೇಳಿ ಬಂದಿದೆ ಎಂದು ಕರ್ನಾಟಕ ವಿಧಾನಪರಿಷತ್ತು ಶಾಸಕರಾದ ಟಿ. ಎ. ಶರವಣ ಅವರು ಪ್ರಶ್ನಿಸಿದರು.

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆ್ಯಂಬುಲೆನ್ಸ್ ಸೇವೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ 2023ರ ಜು.22ರಂದು ತಾಂತ್ರಿಕ ಸಲಹಾ ಸಮಿತಿ ನೇಮಿಸಲಾಗಿತ್ತು. ಈ ತಾಂತ್ರಿಕ ಸಲಹಾಸಮಿತಿ ವರದಿ ನೀಡಿ ತಿಂಗಳುಗಳೇ ಕಳೆದರೂ ಈವರೆಗೂ ಟೆಂಡರ್ ಕರೆಯಲು ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿಲ್ಲ. ಹೀಗಾಗಿ ಆ್ಯಂಬುಲೆನ್ಸ್ ಸೇವೆಗೆ ಹಿರಿದಿರುವ ಗ್ರಹಣ ಮುಂದುವರೆದಿದೆ ರಾಜ್ಯದಲ್ಲಿ ತುರ್ತು ಅನಾರೋಗ್ಯ ಸಂಧರ್ಭಗಳಲ್ಲಿ ಆರೋಗ್ಯ ಕವಚ ಆ್ಯಂಬುಲೆನ್ಸ್ ಸೇವೆ ಒದಗಿಸಲು 2007ರಲ್ಲಿ ಟೆಂಡರ್ ಪಡೆ ದಿದ್ದ ಜಿವಿಕೆಯ ಸಂಸ್ಥೆಯ ಗುತ್ತಿಗೆಯನ್ನು ಆಸಮರ್ಪಕ ಸೇವೆ ಹಾಗೂ ನಿಯಮ ಉಲ್ಲಂಘನೆ ಕಾರಣ ನೀಡಿ 2019ರಲ್ಲಿ ಟೆಂಡರ್ ರದ್ದುಪಡಿಸಿತ್ತು ಜೆವಿಕೆ-ಇಎಂಆ‌ರ್ಇ ನಂಸ್ಥೆಯು ವಿಳಂಬ ಸೇವೆ, ಜಿಐಎಸ್ ಆಳವಡಿಕೆ ಮಾಡದಿರುವುದು ಸಿಬ್ಬಂದಿಯ ನಿರ್ವಹಣೆ ವೈಫಲ್ಯ ಸೇರಿದಂತೆ ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬಕಾರಣಕ್ಕೆ ಟೆಂಡ‌ರ್ ರದ್ದುಪಡಿಸಲಾಗಿತ್ತು ಬಳಿಕ ಬಾರಿ ಟೆಂಡರ್ ಕರೆದಿದ್ದರೂ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಹೀಗಾಗಿ 2019ರಲ್ಲಿ ಜಿವಿಕೆ ಹಾಗೂ ತುರ್ತು ಗ್ರೀನ್ ಹೆಲ್ತ್ ಜತೆ ಒಡಂಬಡಿಕೆ ಆಧಾರದ ಮೇಲೆ ಆ್ಯಂಬುಲೆನ್ಸ್ ಸೇವೆನೀಡಲಾಗುತ್ತಿದೆ ಆದರೆ, 7 ವರ್ಷದಿಂದ ಅಧಿಕೃತ ಟೆಂಡರ್ ಪಡೆದಿರುವ ಆ್ಯಂಬುಲೆನ್ಸ್ ಸೇವಾದಾರ ಸಂಸ್ಥೆ ಇಲ್ಲದಂತಾಗಿದೆ. ಅದುದರಿಂದ, ಆ್ಯಂಬುಲೆನ್ಸ್ ಸೇವೆಯಲ್ಲಿ ಸತತವಾಗಿ ವ್ಯತ್ಯಯವಾಗುತ್ತಿದೆ ಎಂದು ವಿವರಣೆ ನೀಡಿದರು.

ಮುಂದುವರೆದು, 108 ಆ್ಯಂಬುಲೆನ್ಸ್ ಸೆ ಸೇವೆ ಕುರಿತು 2014 19ರವರೆಗಿನ ಪ್ರಕರಣಗಳ ಬಗ್ಗೆ ಸಿಎಜಿ ವರದಿ ಸಲ್ಲಿಸಿದ್ದು ಶೇ.60ರಷ್ಟು ಎಮರ್ಜನ್ಸಿ ಪ್ರಕರಣಗಳಲ್ಲಿ 100 ಆ್ಯಂಬು ಲೆನ್ಸ್ ಸೇವೆ ನಿಗದಿತ ಸಮಯಕ್ಕೆ ದೊರೆತಿಲ್ಲ. ಮತ್ತು, 51 ಲಕ್ಷ ಎಮರ್ಜೆನ್ಸಿಪ್ರಕರಣಗಳಲ್ಲಿ 41.9 ಲಕ್ಷ ಮಾತ್ರ ಆ್ಯಂಬುಲೆನ್ಸ್ ನಿಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿಟೆಂಡರ್ ರದ್ದುಪಡಿಸಿ ಬೇರೆ ಕಂಪನಿಗೆಟೆಂಡ‌ರ್ ನೀಡಲು ನಿರ್ಧರಿಸಲಾಗಿತ್ತು ಆದರೆ ಒಡಂಬಡಿಕೆ ಆಧಾರದ ಮೇಲೆ 746 ಆ್ಯಂಬುಲೆನ್ಸ್ ನಿರ್ವಹಿಸಲು ಅವಕಾಶ ನೀಡಲಾಗಿತ್ತು ಆದರೆ ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆಗೆ ಸರ್ಕಾರ ಕಾಲಕಾಲಕ್ಕೆ ವೇತನ ನೀಡುತ್ತಿದ್ದರೂ ಅವರು ಸಿಬ್ಬಂದಿಗೆ ನೀಡುತ್ತಿಲ್ಲ, ಗುತ್ತಿದೆ ಜತೆಗೆ ಸರ್ಕಾರಿ ಆಸ್ಪತ್ರೆ ಬದಲಿಗೆ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವುದು ರೋಗಿಯ ಬಳಿ ಹಣ ಪಡೆಯುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಈವರೆಗೆ ಪರಿಹಾರ ಕಂಡುಕೊಂಡಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

City Today News 9341997936