ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”

ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವ ಶ್ರೀ ಗುರು  ರಾಯರ ಬೃಂದಾವನಕ್ಕೆ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳಿಂದ “ಲಕ್ಷ ಪುಷ್ಪಾರ್ಚನೆ”
ಬೆಂಗಳೂರಿನ ಜಯನಗರದ 5 ನೇಬಡಾವಣೆಯನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ ಶ್ರೀ 10೦8 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾಧೀಂದ್ರಾಚಾರ್ಯರ ಮತ್ತು ಶ್ರೀ ಗುಂಡಾಚಾರ್ಯರ ನೇತೃತ್ವದಲ್ಲಿ ಶ್ರೀ ಗುರು ರಾಯರ ಬೃಂದಾವನಕ್ಕೆ ವಿಶೇಷ ಫಲ  ಪಂಚಾಮೃತ ಅಭಿಷೇಕಗಳು ಹಾಗೂ ಅಲಂಕಾರವು ನಡೆಯಿತು ನಂತರ  ಪರಮ ಪರಮ ಪೂಜ್ಯ ಶ್ರೀ108 ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಅತ್ಯಂತ ಆತ್ಮೀಯರಾದ ಪರಮ ಪೂಜ್ಯ ಶ್ರೀ 108 ಶ್ರೀ ಪೇಜಾವರ ಮಠದ   ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀ ಪಾದಂಗಳವರು ಶ್ರೀ ಮಠದ ವ್ಯವಸ್ಥಾಪಕರಾದ ಆರ್ ಕೆ ವಾದಿಂದ್ರ ಆಚಾರ್ಯರ ಆಹ್ವಾನದ ಮೇರೆಗೆ ರಾಯರ ಬೃಂದಾವನಕ್ಕೆ “ಲಕ್ಷ ಪುಷ್ಪ” ಅರ್ಚನೆ ಸೇವೆಯನ್ನು ಸಲ್ಲಿಸಲು ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಂಡರು ನಂತರ ಗುರುಗಳು ತಮ್ಮ ಸಂಸ್ಥಾನ ಪೂಜೆ ನೆರವೇರಿಸಿ ರಾಯರ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಯನ್ನು ನೆರವೇರಿಸಿದರು ನಂತರ ವಿದ್ವಾಂಸರಾದ ಬಂಡಿ ಶಾಮಾ ಚಾರ್ಯರ ಸಂಪಾದಕತ್ವದಲ್ಲಿ ತಯಾರಾದ”ಪ್ರಸನ್ನ ವಚನಂ”ಧ್ಯಾಯೇತ್ ಎಂಬ ಪುಸ್ತಕವನ್ನು ಶ್ರೀ ಗುರುರಾಯರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ “ಲೋಕಾರ್ಪಣೆ” ಮಾಡಿದರು ನಂತರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ  ಮಹಿಮೆಯನ್ನು ವಿಶೇಷವಾಗಿ ಪ್ರವಚನ ಮಾಡುವ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಹಿರಿಮೆಯನ್ನು ತಿಳಿಸಿ ಭಕ್ತರನ್ನು ಅನುಗ್ರಹಿಸಿದರು, ತದನಂತರ  ಶ್ರೀಸುಬುಧೇಂದ್ರ ತೀರ್ಥ ಶ್ರೀಗಳ  ಅಭಿಮಾನವನ್ನು ಕೊಂಡಾಡಿ ತಮ್ಮ ಸಂತೋಷವನ್ನು ವ್ಯಕ್ತ  ಪಡಿಸಿದರು, ನಂತರದಲ್ಲಿ  ಶ್ರೀಮಠದಿಂದ ಶ್ರೀಗಳಿಗೆ ಮಠದ ಪರವಾಗಿ ಆರ್ ಕೆ ವಾದಿಂದ್ರ ಆಚಾರ್ಯರು ಗೌರವಗಳನ್ನು ಸಲ್ಲಿಸಿ ಫಲ ಕಾಣಿಕೆಗಳನ್ನು ಸಮರ್ಪಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು  ತಿಳಿಸಿದರು, ಶ್ರೀ ಮಠಕ್ಕೆ ಆಗಮಿಸಿದ ಸಾವಿರಾರು ಭಕ್ತ ಜನರಿಗೆ ಅನ್ನ ಸಂತರ್ಪಣೆಯ ಕಾರ್ಯಕ್ರಮವು ನೆರವೇರಿತು. ಈ ಪೂಜಾ ವೈಭವದಲ್ಲಿ ಪಾಲ್ಗೊಂಡ ಭಕ್ತರು ರಾಯರಿಗೆ ಸಮರ್ಪಿಸಿದ ಲಕ್ಷ ಪುಷ್ಪಾರ್ಚನೆ ಯಲ್ಲಿ  ಕಂಗೊಳಿಸಿದ ರಾಯರ ಬೃಂದಾವನದ ದರ್ಶನವನ್ನು ಕಣ್ಣು ತುಂಬಿಕೊಂಡು ಸಂತೋಷದಲ್ಲಿ ಜೈ ಶ್ರೀ ರಾಮ್ , ಜೈ ಶ್ರೀ ಗುರೋ ರಾಘವೇಂದ್ರ ಎಂಬ ಘೋಷ ದೊಂದಿಗೆ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದ್ದ ಭಕ್ತ ಜನರು ನಂತರದಲ್ಲಿ ತೀರ್ಥ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು, ಶ್ರೀ ಮಠಕ್ಕೆ ಆಗಮಿಸಿದ ಸಹಸ್ರಾರು ಭಕ್ತ ಜನರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಯನ್ನು ಮಾಡಲಾಗಿತ್ತು, ಈ ಸಂದರ್ಭದಲ್ಲಿ, ವಿದ್ವಾನ್ ಬಂಡಿ ಶಾಮಾಚಾರ್ಯ, ವಿದ್ವಾನ್ ಅಗ್ನಿಹೋತ್ರೀ ವೇಣುಗೋಪಾ ಲಾಚಾರ್ಯ, ಶಾಸಕರಾದ ಸಿ ಕೆ ರಾಮಮೂರ್ತಿ ಅವರು ಚಿತ್ರನಟಿ ಪ್ರೇಮಾರವರು ಇನ್ನು ಹಲವಾರು ಗಣ್ಯಾತಿ ಗಣ್ಯರು ಭಕ್ತರು  ಭಾಗವಹಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

100 ವರ್ಷಗಳು, 123 ಅಡಿ ಉದ್ದದ ದೋಸೆ: ವಿಶ್ವದ ಅತೀ ಉದ್ದದ ದೋಸೆ ನಿರ್ಮಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್™ ದಾಖಲೆಯೊಂದಿಗೆ ನೂರನೇ ವರ್ಷವನ್ನು ಆಚರಿಸುತ್ತಿರುವ ಎಂಟಿಆರ್

100 ವರ್ಷಗಳು, 123 ಅಡಿ ಉದ್ದದ ದೋಸೆ: ವಿಶ್ವದ ಅತೀ ಉದ್ದದ ದೋಸೆ ನಿರ್ಮಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್™ ದಾಖಲೆಯೊಂದಿಗೆ ನೂರನೇ ವರ್ಷವನ್ನು ಆಚರಿಸುತ್ತಿರುವ ಎಂಟಿಆರ್

ರಾಷ್ಟ್ರೀಯ, ಮಾರ್ಚ್ 16, 2024: ದೇಶದ ಖ್ಯಾತ ಸಂಸ್ಕರಿತ ಆಹಾರ ಪದಾರ್ಥಗಳ ತಯಾರಿಕಾ ಕಂಪೆನಿ ಎಂಟಿಆರ್ ಫುಡ್ಸ್ ತನ್ನ ನೂರನೇ ವರ್ಷದ ಯಶಸ್ಸನ್ನು ಆಚರಿಸಿಕೊಳ್ಳುವ ಈ ಶುಭ ಸಂದರ್ಭದಲ್ಲಿ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಲ್ಲಿ ವಿಶ್ವದ ಅತೀ ಉದ್ದದ ದೋಸೆ ತಯಾರಿಕೆಗಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ತನ್ನ ಬೆಂಗಳೂರಿನ ಬೊಮ್ಮಸಂದ್ರ ಫ್ಯಾಕ್ಟರಿಯಲ್ಲಿ ಈ ಅಪರೂಪದ ದೋಸೆಯನ್ನು ತಯಾರಿಸಲು ಎಂಟಿಆರ್ ತನ್ನದೇ ಉತ್ಪನ್ನವಾದ ಸಿಗ್ನೇಷರ್ ರೆಡ್ ಬ್ಯಾಟರ್ ಅನ್ನು ಬಳಸಿದೆ.

ಎಂಟಿಆರ್ ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ನ ಮಾರ್ಗದರ್ಶನದಲ್ಲಿ ಅನುಭವಿ ತಜ್ಞರು ಮತ್ತು ಉದಯೋನ್ಮುಖ ಪಾಕಶಾಲೆಯ ಪ್ರತಿಭೆಗಳನ್ನು ಒಳಗೊಂಡಿರುವ 75 ಬಾಣಸಿಗರ ತಂಡವು ಈ ದಾಖಲೆಯನ್ನು ನಿರ್ಮಿಸಿದೆ. ಈ ಹಿಂದಿನ ದಾಖಲೆಯನ್ನು ಮುರಿಯುವ ಪ್ರಯತ್ನವು ಬ್ರ್ಯಾಂಡ್ನ ಪಾಕಶಾಲೆಯ ಕುಶಲತೆಯ ಪಾಂಡಿತ್ಯವನ್ನು ಎತ್ತಿ ತೋರಿಸಿದೆ ಮತ್ತು ದಕ್ಷಿಣ ಭಾರತದ ಆಹಾರದಲ್ಲಿ ಅದರ ಪರಿಣತಿಯನ್ನು ಪ್ರದರ್ಶಿಸುತ್ತದೆ.

ಈ ಐತಿಹಾಸಿಕ ಸಂದರ್ಭದಲ್ಲಿ ದೋಸೆಯು ಭಾರತದಾದ್ಯಂತದ ಜನರ ಹೃದಯ ಮತ್ತು ಅಂಗುಳಗಳಲ್ಲಿ ಇರಲೇಬೇಕಾದ ಸ್ಥಾನವನ್ನು ಹೊಂದಿದೆ. ಈ ಕುರಿತು ಮಾತನಾಡಿದ ಎಂಟಿಆರ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಸುನಯ್ ಭಾಸಿನ್ ಅವರು “ಇದು ನಮಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ನಾವು 100 ಅಡಿ ದೋಸೆಗಾಗಿ ಪ್ರಯತ್ನಿಸುತ್ತಿದ್ದೆವು, ಆದರೆ, ಅದನ್ನು ಮೀರಿ 123 ಅಡಿ ದೋಸೆಯನ್ನು ನಾವು ರಚಿಸಿದ್ದೇವೆ. ಈ ಅಪರೂಪದ ದೋಸೆ ನಮ್ಮ ಪರಂಪರೆ ಮತ್ತು ನಾವು ಅನೇಕ ತಲೆಮಾರುಗಳಿಂದ ಸ್ವೀಕರಿಸುತ್ತಿರುವ ಪ್ರೀತಿಯ ಆಚರಣೆಯಾಗಿದೆ. ದೋಸೆ ಮೊದಲಿನಿಂದಲೂ ಎಂಟಿಆರ್ ಪರಂಪರೆಯ ಭಾಗವಾಗಿದೆ ಮತ್ತು ಇಂದಿಗೂ ಇದು ಎಂಟಿಆರ್ ನ ಅತ್ಯಂತ ಪ್ರೀತಿಯ ಉತ್ಪನ್ನಗಳಲ್ಲಿ ಒಂದಾಗಿದೆ. ವಿನಮ್ರ ದಕ್ಷಿಣ ಭಾರತೀಯ ಖಾದ್ಯವಾಗಿರುವುದರಿಂದ, ಇದು ಈಗ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ ಮತ್ತು ಪ್ರೀತಿಸಲ್ಪಟ್ಟಿದೆ. ನಮ್ಮ ಗ್ರಾಹಕರು ಮತ್ತು ಅವರ ನೆಚ್ಚಿನ ಖಾದ್ಯದೊಂದಿಗಿನ ನಮ್ಮ ಬಾಂಧವ್ಯದ ಆಚರಣೆಯೇ ಅತಿ ಉದ್ದದ ದೋಸೆ ವಿಶ್ವ ದಾಖಲೆಯಾಗಿದೆ ಎಂದರು.

ಲೋರ್ಮನ್ ಕಿಚನ್ ಎಕ್ವಿಪ್ಮೆಂಟ್ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಚಂದ್ರ ಮೌಳಿ ಅವರು ಮಾತನಾಡಿ “ವಿಶ್ವದ ಅತೀ ಉದ್ದವಾದ ದೋಸೆಯನ್ನು ವಿಶೇಷವಾಗಿ ನಿರ್ಮಿಸಿದ ಇಂಡಕ್ಷನ್ ಸ್ಟೌವ್ನಲ್ಲಿ ಬೇಯಿಸಲಾಗುತ್ತಿದೆ, ಇದು ಲೋರ್ಮನ್ ನಿರ್ಮಿಸಿದ ಅತೀ ಉದ್ದದ ಸ್ಟೌವ್ ಆಗಿದೆ. ಇಂಡಕ್ಷನ್ ಅಡುಗೆ ಉಪಕರಣಗಳು ಹೆಚ್ಚು ಪರಿಣಾಮಕಾರಿ, ಸಮರ್ಥನೀಯ ಮತ್ತು ಪರಿಸರ ಸ್ನೇಹಿಯಾಗಿದ್ದು, ಬಾಣಸಿಗರಿಗೆ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಈ ಐತಿಹಾಸಿಕ ಕ್ಷಣದಲ್ಲಿ ಎಂಟಿಆರ್ ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದರು.

ಈ ದೋಸೆಯ ನಿರ್ಮಾಣ ಸಮುದಾಯದ ಮನೋಭಾವದ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ, ಆಹಾರ ಉತ್ಸಾಹಿಗಳನ್ನು ಒಟ್ಟುಗೂಡಿಸುತ್ತದೆ. ಈ ಪಾಕಶಾಸ್ತ್ರದ ಅದ್ಭುತವನ್ನು ಎಂಟಿಆರ್ ನ ಉದ್ಯೋಗಿಗಳೊಂದಿಗೆ ಮಾತ್ರವಲ್ಲದೆ ಸ್ಥಳೀಯ ಶಾಲೆಗಳ ಮಕ್ಕಳು ಮತ್ತು ಸುತ್ತಮುತ್ತಲಿನ ಸಮುದಾಯಗಳ ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಎಂಟಿಆರ್ ಈ ಹಿಂದಿನ ವಿಶ್ವದ ಅತೀ ಉದ್ದದ ದೋಸೆಯ 16.68 ಮೀ (54 ಅಡಿ 8.69 ಇಂಚು) ದಾಖಲೆಯನ್ನು ಮುರಿದಿದೆ.

City Today News 9341997936

ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನ

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಕರ್ನಾಟಕ ವು ದಿನಾಂಕ 17-03-2024 ರವಿವಾರ ದಂದು ಬೆಂಗಳೂರಿನ ಶಿಕ್ಷಕರ ಸದನ, ಕೆ ಜೆ ರೋಡ, ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ “ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನ” ಹಮ್ಮಿಕೊಂಡಿದ್ದು ಈ ಸಮ್ಮೇಳನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಮಧು ಬಂಗಾರಪ್ಪನವರು ಇನ್ನು ಹಲವು ನಾಯಕರ ಉಪಸ್ಥಿತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ,

ಹಾಗಾಗಿ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ರಾಜ್ಯ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಅನಂತ್‌ ನಾಯ್ಕರವರು, ಅಧ್ಯಕ್ಷರಾದ ಶ್ರೀ ಹನುಮಂತ್ ಹೆಚ್ ಎಸ್ ರವರು,ಉಪಾಧ್ಯಕ್ಷರಾದ ಶ್ರೀಮತಿ. ಚಿತ್ರಲೇಖ, ಪ್ರದಾನ ಕಾರ್ಯದರ್ಶಿಯಾದ ಶ್ರೀ ಬಸವರಾಜ ಕರಡಿಗುಡ್ಡ, ನಿರ್ದೇಕ್ಷಕರಾದ ಶ್ರೀ ತಿಪ್ಪಣ್ಣ ಹತ್ತಿಗೂಡೂರು ಮತ್ತುಶ್ರೀ ಗಂಗಧರ ಹರಿಜನ್ ಹಾಗೂ ರಾಜ್ಯದ ಜಿಲ್ಲಾ/ತಾಲೂಕು ಸಮಿತಿಗಳ ಪದಾಧಿಕಾರಿಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಉತ್ಸವ – ಶ್ರೀಮತಿ ಗೀತಾ ಭತ್ತದ ವೃಂದದಿಂದ “ದಾಸವಾಣಿ ಸೇವೆ’

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ , ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 14, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ಹಾಗೂ ‘ಅನ್ನದಾನ” ಸೇವೆಯ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ಗಜವಾಹನೋತ್ಸವ, ತೊಟ್ಟಿಲು ಪೂಜೆ ಹಾಗೂ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಶ್ರೀಮತಿ ಗೀತಾ ಭತ್ತದ್ ಮತ್ತು “ಗಾನ ಸಿದ್ದಗಂಗಾ ಸಂಗೀತ” ವಿದ್ಯಾಲಯದ ವಿದ್ಯಾರ್ಥಿಗಳು ‘ದಾಸವಾಣಿ’ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ಯಶಸ್ವಿಯಾಗಿ ನಡೆಸಿಕೊಟ್ಟರು, ನೆರೆದಿದ್ದ ಭಕ್ತ ಸಮೂಹ  ಸಂಗೀತಾಸಕ್ತರು “ದಾಸವಾಣಿ” ಮತ್ತು ಭಕ್ತಿಯ ಸಂಗೀತವನ್ನು ಸವಿದರು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದರು , ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ಆರ್, ಕೆ ವಾದಿಂದ್ರಾಚಾರ್ಯರು ಮತ್ತು ಕಿಶೋರಾಚಾರ್ಯರು “ದಾಸವಾಣಿ”ವೃಂದದವರಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ  ಭಾವಚಿತ್ರವನ್ನು ನೀಡಿ ಗುರುಗಳ ಫಲ ಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು, ಸಹಸ್ರಾರು ಭಕ್ತರು ರಾಯರ ಸೇವೆಯಲ್ಲಿ ಭಾಗವಹಿಸಿ “ಅನ್ನಸಂತರ್ಪಣೆ” ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು,

City Today News 9341997936

ಕೆಲವು ಕಂಪನಿಗಳಿಗೆ ಅನುಕೂಲ ಮಾಡಿಕೋಡಲು ಅಮಿನಿಟಿಸ್ ಸ್ಥಳಗಳು ಹರಾಜ ಬದಲು ತರಾತುರಿಯಲ್ಲಿ ನೂರಾರು ಎಕರೆ ಹಂಚಿಕೆ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಪ್ರಶ್ನೆ ?

ಕೆಐಎಡಿಬಿಯಲ್ಲಿ ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ ; ಕೆಲವು ಕಂಪನಿಗಳಿಗೆ ಅನುಕೂಲ ಮಾಡಿಕೋಡಲು ಅಮಿನಿಟಿಸ್ ಸ್ಥಳಗಳು ಹರಾಜ ಬದಲು ತರಾತುರಿಯಲ್ಲಿ ನೂರಾರು ಎಕರೆ ಹಂಚಿಕೆ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಪ್ರಶ್ನೆ ?

ಬೆಂಗಳೂರು, ಮಾ, 15; ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಗಳಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ಎಕರೆಗಟ್ಟಲೆ ಜಮೀನುಗಳನ್ನು ಗುತ್ತಿಗೆ ಅಥವಾ ಮಾರಾಟದ ಕರಾರುಗಳಿಗೆ ಒಳಪಟ್ಟು ತರಾತುರಿಯಲ್ಲಿ ಹಲವು ಕಂಪೆನಿಗಳಿಗೆ ಹಂಚಿಕೆ ಮಾಡಿದ್ದು, ಇದನ್ನು ಕೂಡಲೇ ರದ್ದು ಮಾಡಬೇಕು ಎಂದು ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಘಟನೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಡಿ. ರಾಜ್ ಗೋಪಾಲ್, ರಿಯಲ್ ಎಸ್ಟೇಟ್ ವಲಯದ ಕಂಪನಿಗಳಿಗೆ ನೂರಾರು ಎಕರೆ ಜಮೀನು ಹಂಚಿಕೆಯಾಗಿದೆ. ರಿಯಲ್ ಎಸ್ಟೇಟ್ ಕಂಪನಿಯವರು ಯಾವಾಗಿನಿಂದ ಕೈಗಾರಿಕಾ ಉದ್ಯಮ ಮಾಡುತ್ತಿದ್ದಾರೆ? ಕೆಐಎಡಿಬಿಯು ತನ್ನ ನಿಯಮ 7 ನ್ನು ಉಲ್ಲಂಘಿಸಿ ಈ ಮಂಜೂರಾತಿ ಮಾಡಿದ್ದು, ಕೂಡಲೇ ಇದನ್ನು ರದ್ದುಪಡಿಸಬೇಕು. ಕೆಐಎಡಿಬಿಯ ಈ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ ನಷ್ಟವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭೂಮಿಗೆ ಹೆಚ್ಚಿನ ಬೇಡಿಕೆ ಇರುವ ಪ್ರದೇಶಗಳಲ್ಲಿ ಇಂತಹ ಹಂಚಿಕೆ ಮಾಡಿದ್ದು, ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ. ಭೂಮಿ ಹಂಚಿಕೆ ಮಾಡುವ ನಕ್ಷೆಯನ್ನು ಐದು ಬಾರಿ ಬದಲಾಯಿಸಲಾಗಿದೆ. ಪಾರ್ಕ್ ಮತ್ತು ನಿಲುಗಡೆ ಸ್ಥಳಗಳನ್ನು ಕೂಡ ಬಿಡದೇ ಹಂಚಿಕೆ ಮಾಡಲಾಗಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಆನೈನ್ ಮುಖಾಂತರ ಮಾಡಬೇಕಾಗಿತ್ತು, ಆದರೆ ಆಫ್ ಲೈನ್ ಮುಖೇನ ಮಾಡಿರುವುದು ಅಕ್ರಮಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಅತ್ಯಂತ ಬೆಲೆಬಾಳುವ ಪ್ರದೇಶಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕಾಗಿತ್ತು. ಆದರೆ ತಮಗೆ ಬೇಕಾದವರಿಗೆ ಮನಸ್ಸ ಇಚ್ಛೆ ಹಂಚಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆ. ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ಬೆಲೆ ಎಕರೆಗೆ 6 ಕೋಟಿ ಇದೆ, ಆದರೆ ಕೆಐಎಡಿಬಿಗೆ 2.5 ಕೋಟಿಗೆ ಹಂಚಿಕೆ ಮಾಡಿ ಕೆಐಎಡಿಬಿ ಕೈತೊಳೆದುಕೊಂಡಿದೆ. ಇಷ್ಟಕ್ಕೂ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಯಾಕೆ ಕರೆದಿಲ್ಲ ಎಂದು ಡಿ. ರಾಜ್ ಗೋಪಾಲ್ ರವರು ಪ್ರೆಸ್ ಕ್ಲಬ್ ಆಫ್ beMgaLUr ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪ್ರಶ್ನಿಸಿದರು.

City Today News 9341997936