ಅಡುಗೆ ಮಾಡುವ ಪ್ರೆಜರ್ ಕುಕ್ಕರ್‌ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡಿ ದೇಶ-ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯ ಬಂಧನ.

ಸುಮಾರು 1 10 ಕೋಟಿ ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಗೆ ಬಳಸುತ್ತಿದ್ದ ರಾಸಾಯನಿಕ ಮತ್ತು ರಾಸಾಯನಿಕ ಆಮ್ಲ (ಕೆಮಿಕಲ್‌ಗಳು) ಮತ್ತು ಇತರೆ ಉಪಕರಣಗಳ ವಶ.

ಬೆಂಗಳೂರು ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ವಿದೇಶಿ ಮೂಲದ ವ್ಯಕ್ತಿ ನಿಷೇದಿತ ಮಾದಕ ವಸ್ತು/ಮನೋಪರಿಣಾಮಕ ವಸ್ತುವಾದ ಎಂ.ಡಿ.ಎಂ.ಎ ತಯಾರು ಮಾಡುತ್ತಿರುವುದಾಗಿ, ಈ ನಿಷೇಧಿತ ಮಾದಕ ವಸ್ತು/ಮನೋಪರಿಣಾಮಕ ವಸ್ತುಗಳನ್ನು ಬೆಂಗಳೂರು ಸೇರಿದಂತೆ ಇತರೆ ರಾಜ್ಯ ಹಾಗೂ ದೇಶ-ವಿದೇಶಗಳಲ್ಲಿ ಇರುವ ಗಿರಾಕಿಗಳಿಗೆ ಹಾಗೂ ಸಬ್‌ ಪಡ್ತರ್‌ಗಳಿಗೆ ಮಾರಾಟ/ಸರಬರಾಜು ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ (ಸಿ.ಸಿ.ಬಿ) ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಿನಾಂಕ: 05.11.2023 ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಮಾದಕವಸ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಆತನ ವಿಚಾರಣೆ ವೇಳೆ ನೀಡಿದ ಹೇಳಿಕೆ ಮೇರೆಗೆ ಆವಲಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಆತನ ಮನೆಯಲ್ಲಿದ್ದ ಸುಮಾರು ಕೆ 10 ಕೋಟಿ ಮೌಲ್ಯದ 5 Kg MDMA ಮಾದಕವಸ್ತು, MDMA ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳಾದ Methylsulfonylmethane (MSM) 12 Kg 450 grams, Sodium Hydroxide Crystals 5 Kg, Hydrocloric acid-5 Liter. Acetone 2.5 Liter, MDMA ತಯಾರಿಕೆಗೆ ಬಳಸುತ್ತಿದ್ದ ಪ್ರೈಡ್ ಕಂಪನಿಯ 5 ಲೀಟರ್ ಕುಕ್ಕರ್, ಸೂರ್ಯ ಕಂಪನಿಯ ಸೈವ್, ! ಗ್ಯಾಸ್ ಸಿಲಿಂಡರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 01 ಮೊಬೈಲ್ ಫೋನು ಸೇರಿದಂತೆ 2 ಡಿಜಿಟಲ್ ತೂಕದ ಯಂತ್ರ, ಒಂದು ಎನ್‌ಟ್ರಾಕ್ ದ್ವಿಚಕ್ರ ವಾಹನವನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಈ ಸಂಬಂಧ ಆರೋಪಿತನ ವಿರುದ್ದ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾ ಮತ್ತು 14 ಫಾರೀನರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ದಿನಾಂಕ: 09-II-2023 ರಂದು ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ದಿನಾಂಕ: 20-II-2023ರ ವರೆಗೆ ಪೊಲೀಸ್ ಬಂಧನಕ್ಕೆ ಪಡೆಯಲಾಗಿದೆ, ಈಗ ಪೊಲೀಸ್ ವಶದಲ್ಲಿ ಆರೋಪಿಯನ್ನು ವಿಚಾರಣೆ ಮಾಡಲಾಗುತ್ತಿದೆ.

ಈ ಕಾರ್ಯಾಚರಣೆಯನ್ನು ಅಪರ ಪೊಲೀಸ್ ಆಯುಕ್ತರು (ಪಶ್ಚಿಮ) ರವರಾದ ಎನ್. ಸತೀಶ್ ಕುಮಾರ್, ಐಪಿಎಸ್‌ ಮತ್ತು ಉಪ ಪೊಲೀಸ್‌ ಆಯುಕ್ತರು. ಅಪರಾಧ-2 ಶ್ರೀನಿವಾಸ್ ಗೌಡ, ಐಪಿಎಸ್‌ ರವರ ಮಾರ್ಗದರ್ಶನದಲ್ಲಿ ಬೆಂಗಳೂರು ನಗರದ ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡವು ಕೈಗೊಂಡಿರುತ್ತದೆ.

City Today News 9341997936

ಮಂತ್ರಾಲಯ ಶ್ರೀಗಳಿಂದ ಶ್ರೀಮನ್ ಮೂಲ ರಾಮಚಂದ್ರ ದೇವರ”ಸಂಸ್ಥಾನ ಪೂಜೆ”

ಮಂತ್ರಾಲಯ ಶ್ರೀಗಳಿಂದ ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮಹಾಮಂಗಳಾರತಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಸುವರ್ಣ ಪಾದಕ್ಕೆ ಪಾದ ಪೂಜೆಯನ್ನು ನೆರೆವೇರಿಸಿದರು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರಾಚಾರ್ಯರು, ಗಣ್ಯರು, ಹಾಗೂ ಭಕ್ತಾದಿಗಳು ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ನಂತರ ಪರಮ ಪೂಜ್ಯ ಶ್ರೀಪಾದಂಗಳವರಿಂದ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

“Sansthan Pooja” of Sriman Mula Ramachandra Deva from Mantralaya Sri.

From Mantralaya Sri at Sri Raghavendra Swami’s Math at Nanjangudu Sri Raghavendra Swami’s Math, Parama Pujya Sri 1008 Sri Subudhendratheertha Sripadamgala performed Sansthan Puja of Sriman Mula Ramachandra Deva with his amrita hands and then to Sri Raghavendra Swami’s Baghandavana Mahamangalarathi and Sri Raghavendra. Shri  Nanda Kishore Acharya informed that on this occasion the Senior Manager of Sri Math, RK Vadindracharya, dignitaries, and devotees participated and received Tirtha Prasada and then received the blessings of Shri Hari Vayu Guru by receiving the blessings from the Most Reverend Sri Padangal.

City Today News 9341997936

ಮಂತ್ರಾಲಯ ಶ್ರೀಗಳಿಂದ “ಸಂಸ್ಥಾನ ಪೂಜೆ”ಶ್ರೀಮನ್ ಮೂಲ ರಾಮಚಂದ್ರ ದೇವರ”ಸಂಸ್ಥಾನ ಪೂಜೆ”

ಮಂತ್ರಾಲಯ ಶ್ರೀಗಳಿಂದ “ಸಂಸ್ಥಾನ ಪೂಜೆ”
ಶ್ರೀಮನ್ ಮೂಲ ರಾಮಚಂದ್ರ ದೇವರ”ಸಂಸ್ಥಾನ ಪೂಜೆ” ಮಂತ್ರಾಲಯ ಶ್ರೀಗಳಿಂದ
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಅಮೃತ ಹಸ್ತದಿಂದ ಶ್ರೀಮನ್ ಮೂಲ ರಾಮಚಂದ್ರ ದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಮಹಾಮಂಗಳಾರತಿ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಸುವರ್ಣ ಪಾದಕ್ಕೆ ಪಾದ ಪೂಜೆಯನ್ನು ನೆರೆವೇರಿಸಿದರು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರಾಚಾರ್ಯರು, ಗಣ್ಯರು, ಹಾಗೂ ಭಕ್ತಾದಿಗಳು ಭಾಗವಹಿಸಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ನಂತರ ಪರಮ ಪೂಜ್ಯ ಶ್ರೀಪಾದಂಗಳವರಿಂದ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

ಪಾವನಾ ನಟನೆಯ ‘ರುದ್ರಿ’ ಸಿನಿಮಾ ನಾಳೆ ನೇರವಾಗಿ ಒಟಿಟಿಯಲ್ಲಿ ರಿಲೀಸ್

ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ‘ರುದ್ರಿ’ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆ. ನೇರವಾಗಿ ‘ನಮ್ಮ ಫ್ಲಿಕ್ಸ್ ಕನ್ನಡದ ಓಟಿಟಿ ಆಪ್’ (NAMMAFLIX) ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ.

ಗೊಂಬೆಗಳ ಲವ್ ಖ್ಯಾತಿಯ ಪಾವನಾ ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದು, ಬಡಿಗೇರ ದೇವೇಂದ್ರ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಈಗಾಗಲೇ ಠಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ದೇಶ ವಿದೇಶಗಳ ಚಿತ್ರೋತ್ಸವದಲ್ಲಿ ರುದ್ರಿ ಭಾಗಿಯಾಗಿದೆ. ಅಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ.

ರುದ್ರಿ ಸಿನಿಮಾ 90ರ ದಶಕದ ಕಥೆ. ಆ ಕಾಲದಲ್ಲಿ ಇನ್ನೂ ಮಹಿಳೆಯರಿಗೆ ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಳ್ಳುವಂತಹ ಧೈರ್ಯವಿರಲಿಲ್ಲ. ಅಂತಹ ಮಹಿಳೆಯೊಬ್ಬರ ಶೋಷಣೆಯ ಕಥೆಯನ್ನು ರುದ್ರಿ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು.

ಸಿ.ಆರ್. ಮಂಜುನಾಥ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಧೂ ಕೋಕಿಲಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನನ್ಯ ಭಟ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಸುಧಾ ಪ್ರಸನ್ನ ಸೇರಿದಂತೆ ಹಲವು ನುರಿತ ಕಲಾವಿದರ ತಂಡವೇ ತಾರಾಗಣದಲ್ಲಿದೆ.

City Today News 9341997936