ಕರುನಾಡ ಜನಸ್ಪಂದನ ವೇದಿಕೆ ವತಿಯಿಂದ ಹೃದಯಸ್ಪರ್ಶಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ

ಕರುನಾಡ ಜನಸ್ಪಂದನ ವೇದಿಕೆ ವತಿಯಿಂದ ಹೃದಯಸ್ಪರ್ಶಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ, ಅಭಿಯಂತರರಿಗೆ ಹಾಗೂ ಸಮಾಜ ಸೇವೆ ಮಾಡುತ್ತಿರುವ ಹಲವು ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಗರದ ಜ್ಞಾನ ಸೌಧ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಬಿಎಂಪಿ ಮಾಜಿ ಸದಸ್ಯರಾದ ವಾಗೀಶ್, ಸಂಜೆ ಸಮಾಚಾರ್ ಪತ್ರಿಕೆಯ ಸಂಪಾದಕರಾದ ಬಿ.ಎ ಮಹೇಂದ್ರ ಹಾಗೂ ಆರ್ ಆರ್ ಪ್ರಸಾದ್ ರವರು ಉದ್ಘಾಟಿಸಿ ನಂತರ ಸನ್ಮಾನಿತರಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮಾಜಿ ಬಿಬಿಎಂಪಿ ಸದಸ್ಯರಾದ ವಾಗೀಶ್ ಮಾತನಾಡಿ ಈ ಸಂಸ್ಥೆಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಈ ಸಂಸ್ಥೆಗಳ ಜೊತೆ ಸದಾ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು.

ಬಳಿಕ ಸಂಜೆ ಸಮಾಚಾರ್ ಪತ್ರಿಕೆಯ ಸಂಪಾದಕರಾದ ಬಿ.ಎ. ಮಹೇಂದ್ರ ಮಾತನಾಡಿ ಕರುನಾಡ ಜನಸ್ಪಂದನ ವೇದಿಕೆ ಈ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರು ಹಾಗೂ ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. 

ಮುಂಬರುವ ದಿನಗಳಲ್ಲಿ ಈ ಸಂಸ್ಥೆ ಉನ್ನತ ಮಟ್ಟಕ್ಕೆ ಏರಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲಿ ಎಂದು ಹೇಳಿದರು.

ನಂತರ ಸಮಾಜ ಸೇವಕರಾದ ಆರ್.ಆರ್. ಪ್ರಸಾದ್ ಮಾತನಾಡಿ ಈ ಸಂಸ್ಥೆಗಳ ಕಾರ್ಯವೈಖರಿ ನಿಜಕ್ಕೂ ವಿಭಿನ್ನವಾಗಿದ್ದು ಪರಿಸರ ಸಂರಕ್ಷಣೆ, ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಒತ್ತು ನೀಡುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಹೇಳಿದರು.

ಕರುನಾಡ ಜನಸ್ಪಂದನೆ ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್ ಬಿ.ಪಿ ಮಾತನಾಡಿ ಯಾರೇ ಒಬ್ಬ ವ್ಯಕ್ತಿಯ ಹಿಂದೆ ಗುರುವಿನ ಪರಿಶ್ರಮ ಇದ್ದೇ ಇರುತ್ತದೆ ತಾವೇನಾದರೂ ಇಂದು ಸಾಧಿಸುತ್ತಿದ್ದೇವೆ ಎಂದರೆ ಅದಕ್ಕೆ ಮೂಲಕಾರಣ ಶಿಕ್ಷಕರು ಅಂತಹ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸುತ್ತಿರುವುದು ನಿಜಕ್ಕೂ ನಮಗೆ ಸಂತೋಷ ತಂದಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಮೋಹನ್ ಕುಲಕರ್ಣಿ ಮಾತನಾಡಿ ಸಂಸ್ಥೆಗಳು ಹಲವು ಒಳ್ಳೆಯ ನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ ಈ ಸಂಸ್ಥೆಗಳೊಡನೆ ಕೈಜೋಡಿಸಿ ಕಾರ್ಯ ನಿರ್ವಹಿಸಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಕರುನಾಡ ಜನಸ್ಪಂದನ ವೇದಿಕೆ ಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ .ಆರ್, ಹೃದಯಸ್ಪರ್ಶಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಸುರೇಶ್, ಹಿರಿಯ ಪತ್ರಕರ್ತರಾದ ಮೋಹನ್ ಕುಲಕರ್ಣಿ, ಖ್ಯಾತ ವಕೀಲರಾದ ಹರಿಪ್ರಸಾದ್, ಸಮಾಜ ಸೇವಕರಾದ ಗೀತಾ, ಭರತನಾಟ್ಯ ಶಿಕ್ಷಕರಾದ ಕಾವ್ಯ ದಿಲೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.

City Today News

9341997936

ಭಾರತ್ ಬಂದ್ ಪರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬೆಂಬಲ

ಪತ್ರಿಕಾ ಹೇಳಿಕೆ
1). ಮೆಕ್ಕೆಜೋಳ ಕನಿಷ್ಠ ಮೂರು ಸಾವಿರ ಗಳು ಬೆಂಬಲ ಬೆಲೆ ಘೋಷಣೆ ಮಾಡಬೇಕು ರಾಜ್ಯ ಸರ್ಕಾರ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಬೇಕು
2) ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 28 ಪ್ರಕರಣಗಳು ಸುಮಾರು 750 ಕ್ಕಿಂತ ಹೆಚ್ಚಿದ್ದು ರಾಣೆಬೆನ್ನೂರಿನಲ್ಲಿ ಎಸ್ಎಲ್ ಓ ಆಫೀಸಿನಲ್ಲಿ ಪೆಂಡಿಂಗ್ ಉಳಿದಿದ್ದು ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸಬೇಕು
3) ಕಾಡು ಪ್ರಾಣಿಗಳಿಂದ ರೈತರ ಜಮೀನಿಗೆ ಬೆಳೆಗಳನ್ನು ರಕ್ಷಿಸಲು ಸೋಲಾರ್ ತಂತಿ ಬೇಲಿಯನ್ನು ಅಳವಡಿಸಬೇಕೆಂದು ಶೇಕಡ 90% ಸಹಾಯದಲ್ಲಿ ನೀಡಬೇಕು
4) ರೈತರ ಕೃಷಿ ಯಂತ್ರೋಪಕರಣಗಳು ಖರೀದಿಯಲ್ಲಿ ಎಲ್ಲ ವರ್ಗದ ರೈತರಿಗೆ 90% ಸಹಾಯಧನ ನೀಡಬೇಕು
5) ರೈತರ ಪಂಪ್ಸೆಟ್ಗಳಿಗೆ ತ್ರಿಫೇಸ್ ಹತ್ತು ಗಂಟೆ ಕಾಲ ಹಗಲು ಹೊತ್ತಿನಲ್ಲಿ ವಿದ್ಯುತ್ತನ್ನು ಒದಗಿಸಿಕೊಡಬೇಕು
6) ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ತತ್ತರಿಸಿ ರೈತರಿಗೆ ಶೀಘ್ರದಲ್ಲಿ ಮನೆ ಹಾನಿ ಮತ್ತು ಬೆಳೆ ಪರಿಹಾರ ಒದಗಿಸಿಕೊಡಬೇಕು
7) ರೈತರ ಟ್ಯಾಕ್ಟರ್ 50% ಸಬ್ಸಿಡಿ ಒದಗಿಸಿಕೊಡಬೇಕು
8) ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕು
9) ರಾಗಿ ಬೆಳೆಗೆ ಕನಿಷ್ಠ 5000 ಬೆಂಬಲ ಬೆಲೆ ನೀಡಬೇಕು
10) ಭಾರತ್ ಬಂದ್ ಪರ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ಇರುತ್ತದೆ

-ಶ್ರೀ ಸಿದ್ದನಗೌಡ ಎಸ್ ಪಾಟೀಲ್ ಹಿರೇಕೆರೂರು ಹಾವೇರಿ ಜಿಲ್ಲೆ , ರಾಜ್ಯ ಅಧ್ಯಕ್ಷರು – ಅಖಂಡ ಕರ್ನಾಟಕ ರಾಜ್ಯ ರೈತ ಸಂಘ (ರಿ)

ಮಹೇಶ್ ಕೊಟ್ಟೂರ್ ಹಾವೇರಿ ಜಿಲ್ಲಾ ಅಧ್ಯಕ್ಷರು,ಚಂದ್ರು ಜೋಗಿಹಳ್ಳಿ ಹಿರೇಕೆರೂರು ತಾಲೂಕ ರೈತ ಸಂಘ,
ಬ್ಯಾಡಗಿ ತಾಲೂಕ ಅಧ್ಯಕ್ಷರು, ಶೇಖಪ್ಪ ಕಾಶಿ ಬಸವರಾಜಪ್ಪ ಚಿತ್ರದುರ್ಗ ತಾಲೂಕು ಅಧ್ಯಕ್ಷರು ( ಮುದ್ದಾಪುರ ) ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ತಿತರಿದ್ದರು.

City Today News

9341997936

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಭಾರತ್ ಬಂದ್‌ಗೆ ಬೆಂಬಲ

ಪತ್ರಿಕಾ ಪ್ರಕಟಣೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು . ಬೆಂಬಲ ಬಲ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳನ್ನು ಬೆಂಬಲಿಸಿ 27-09-2021 ರಂದು ಭಾರತ್ ಬಂದ್ ಮಾಡಲು ತೀರ್ಮಾನಿಸಿದ್ದು , ಅದನ್ನು ಬೆಂಬಲಿಸಿ ಕಾರ್ನಾಟಕ ಬಂದ್ ಮಾಡುತ್ತಿದ್ದೇವೆ . ಕಿಸಾನ್ ಸಂಯುಕ್ತ ಮೋರ್ಚ ಹಾಗು ಕಾರ್ನಾಟಕ ರಾಜ್ಯ ರೈತ ಸಂಘ , ರಾಜ್ಯ ಕಬ್ಬು ಬೆಳೆಗಾರರ ಸಂಘಗಳು ಬಂದ್‌ಗೆ ಬೆಂಬಲ ವ್ಯಕ್ತ ಪಡಿಸಿದ್ದು , ರಾಜ್ಯ ಹಾಗು ರಾಷ್ಟ್ರ ವ್ಯಾಪ್ತಿಯ ಅನೇಕ ರೈತ ಸಂಘಗಳು ಹಾಗು ಸಮಾನ ಮನಸ್ಕರ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಬಿ.ಡಿ.ಎ ಶಿವರಾಮ ಕಾರಂತ ಬಡಾವಣೆ ಹಾಗೂ ಪರಿಘರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸುತ್ತಾ ಸಾವಿರಾರು ಎಕರೆ ಕೃಷಿ ಜಮೀನು ವಶಪಡಿಸಿಕೊಂಡು ಭೂ ಮಾಲೀಕರಿಗೆ ಪುಡಿಗಾಸಿನ ಪರಿಹಾರ ನೀಡಲು ಯೋಜನೆ ರೂಪಿಸುತ್ತಿದ್ದು , ಇದರ ವಿರುದ್ಧವು ನಾವು ಹೋರಾಟ ರೂಪಿಸುತ್ತಿದ್ದೇವೆ .

ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಬಿ.ಡಿ.ಎ ಅಧಿಕಾರಿಗಳು ರೈತರಿಗೆ ಸರಿಯಾದ ಪರಿಹಾರ ಯೋಜನೆ ರೂಪಿಸದೆ ನಮ್ಮ ಭೂಮಿಯನ್ನು ವಶಪಡಿಸಿಕೊಂಡು ನಮಗೆ ಶೇ 40 % ಬಿ.ಡಿ.ಎಗೆ ಶೇ 60 % ಅಭಿವೃದ್ಧಿ ಹೊಂದಿದ ಭೂಮಿ ನೀಡಲು ತಯಾರಿ ನಡೆಸಿದ್ದು , ಖಾಸಗಿ ಕಂಪನಿಗಳು ಶೇ 60 % ಅಭಿವೃದ್ಧಿ ಹೊಂದಿದ ಭೂಮಿಯನ್ನು ನೀಡುವ ಯೋಜನೆಗಳು ಬೆಂಗಳೂರಿನಲ್ಲಿ ಇವೆ . ಆದರೆ ಸರ್ಕಾರದ ಭಾಗವಾದ ಬಿ.ಡಿ.ಎ ಏಕೆ ಈ ರೀತಿಯ ಯೋಜನೆ ಮಾಡುತ್ತಿದೆ ಎಂದು ನಮ್ಮ ಪ್ರಶ್ನೆ . ಈ ಬಗ್ಗೆ ನಮ್ಮ ಹೋರಾಟ ಮುಂದೆವರೆಯುತ್ತದೆ ಎಂದು ನಮ್ಮ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುತ್ತಿದ್ದೇವೆ .

ದಿನಾಂಕ : 27-09-2021 ರಂದು ಭಾರತ್ ಬಂದ್‌ಗೆ ನಮ್ಮ ಬೆಂಬಲ ಇದೆ .

–ವಿಆರ್ ನಾರಾಯಣರೆಡ್ಡಿ ರಾಜ್ಯಾಧ್ಯಕ್ಷರು

ಮಂಜುನಾಥ್ – ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರು

ಹರೀಶ ಅದ್ದೆ – ರಾಜ್ಯ ಸಮಿತಿ ಸದಸ್ಯರು

ನವೀನ್ ಗೌಡ – ಯಲಹಂಕ ತಾಲ್ಲೂಕು ಅಧ್ಯಕ್ಷರು

City Today News

9341997936

ಕಿಡಿಗೇಡಿಗಳನ್ನು ಬಂಧಿಸಿ ಡಾ.ಲೋಹಿತ್ ಮುನಿಯಪ್ಪ ರವರ ಕುಟುಂಬಕ್ಕೆ ಹಾಗೂ ಡಾ ॥ ಲೋಹಿತ್ ಮುನಿಯಪ್ಪ ರವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ಸರ್ಕಾರವನ್ನು ಎಚ್ಚರಿಸುತ್ತದೆ

ಕೋಲಾರ ತಾಲ್ಲೂರು , ಕಂಬೋಡಿ ಗ್ರಾಮದಲ್ಲಿ ದಿವಂಗತ ಡಾ.ಮುನಿಯಪ್ಪ ರವರ ಸ್ಮಶಾನ ಪಕ್ಕದಲ್ಲಿ ಸ.ನಂ. 127 ರಲ್ಲಿ ಡಾ || ಲೋಹಿತ್ ಮುನಿಯಪ್ಪ ರವರು ವೃದ್ಧಾಶ್ರಮವನ್ನು ಕಟ್ಟಡವನ್ನು ನಿರ್ಮಿಸಿರುತ್ತಾರೆ . ಸದರಿ ಸ.ನಂ. 127 ರ ಪಕ್ಕದಲ್ಲಿ ಸರ್ಕಾರಿ ಜಮೀನು ಇರುವುದರಿಂದ ಅಲ್ಲಿ ವೃದ್ದಾಶ್ರಮ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಸಹ ಅಲ್ಲಿಯೇ ಇಟ್ಟಿರುತ್ತಾರೆ , ಸರ್ಕಾರ ಜಮೀನು ಇದ್ದಲ್ಲಿ ಸರ್ಕಾರ ಸುತ್ತೋಲೆ , ಸರ್ಕಾರದ ಆದೇಶದ ಪ್ರಕಾರ ಸರ್ಕಾರ ಜಮೀನಿನಲ್ಲಿ ವೃದ್ದಾಶ್ರಮ ಕಟ್ಟಬಹುದೆಂದು ಕರ್ನಾಟಕ ಆದೇಶವು ಸಹ ಇರುತ್ತದೆ . ಇಲ್ಲಿ ಇದು ಟನ್ ಸ್ಟೀಲ್ ಮತ್ತು ಟೇಕ್ ವುಡ್ . ಹಾಗೂ ಸಿಮೆಂಟ್ ಮೂಟೆಗಳನ್ನು ಇಟ್ಟಿರುತ್ತಾರೆ . ಸದರಿ ಕೆಂಬೋಡಿ ಗ್ರಾಮದ ಕೆಲವು ಕಿಡಿಗೇಡಿಗಳು ರಾತ್ರೋರಾತ್ರಿ ಅಲ್ಲಿದ್ದ ಗಾರೆ ಮೇಸ್ತ್ರಿ ಚಂದ್ರಪ್ಪನವರನ್ನು ಎದರಿಸಿ , ಬೆದರಿಸಿ ಆ ಸಾಮಗ್ರಿಗಳನ್ನು ಕಳುವು ಮಾಡುವ ದುರುದ್ದೇಶದಲ್ಲಿ ಗೋಡೆಗಳನ್ನು ತಳ್ಳಿ ಧ್ವಂಸ ಮಾಡಿ ಅಲ್ಲಿರುವ ಸಾಮಗ್ರಿಗಳನ್ನು ಕಳುವು ಮಾಡಿ , ಪರಾರಿಯಾಗಿರುತ್ತಾರೆ . ಸದರಿ ಡಾ || ಲೋಹಿತ್ ಮುನಿಯಪ್ಪರವರು ಗ್ರಾಮಾಂತರ ಪೊಲೀಸ್ ಠಾಣೆ ಕೋಲಾರೆ ಇಲ್ಲಿಗೆ ದೂರಿ ನೀಡಿದ ಮೇಲೆ ಕರ್ನಾಟಕ ರಾಜ್ಯ ಪೊಲೀಸ್ ಪ್ರಥಮ ವರ್ತಮಾನ ವರದಿಯಲ್ಲಿ ಸದರಿ ಕಿಡಿಗೇಡಿಗಳ ವಿರುದ್ಧ ಐಪಿಸಿ ಸೆಕ್ಷನ್ 1960 ಅಂಡರ್ ಸಕ್ಷನ್ 379 , 506 , 14 , 149 ರ ಪ್ರಕಾರ ಪ್ರಕರಣವನ್ನು ದಾಖಲಿಸಿರುತ್ತಾರೆ . ಸದರಿ ರವರು ಅದೇ ಮನಸ್ಸಿನಲ್ಲಿಟ್ಟುಕೊಂಡು ಶ್ರೀ ಡಾ.ಲೋಹಿತ್ ಮುನಿಯಪ್ಪ ರವರನ್ನು ಕೊಲೆ ಮಾಡಲು ಸಂಚು ಹೂರಿಸುತ್ತಿದ್ದಾರೆ .

ಇದೆಲ್ಲ ತಿಳಿದು ಡಾಲೋಹಿತ್ ಮುನಿಯಪ್ಪ ರವರು ಕರ್ನಾಟಕ ದಲಿತ ರಕ್ಷಣಾ ಸಮಿತಿಗೆ ದೂರನ್ನು ನೀಡಿರುತ್ತಾರೆ . ಆದುದರಿಂದ ಕರ್ನಾಟಕ ದಲಿತ ರಕ್ಷಣಾ ಸಮಿತಿಯು ರಾಜ್ಯ ಸರ್ಕಾರವನ್ನು ಸಳೆಯಲು ಈ ಒಂದು ಮೀಡಿಯಾ ಮಿತ್ರರಿಗೆ , ಪತ್ರಕರ್ತದೇವರುಗಳಿಗೆ ದೇವರುಗಳ ಗಮನವನ್ನು ಸಳೆಯುತ್ತಿದೆ . ತಾವು ದಯವಿಟ್ಟು ಈ ಕಿಡಿಗೇಡಿಗಳನ್ನು ಬಂಧಿಸಿ ಡಾಲೋಹಿತ್ ಮುನಿಯಪ್ಪ ರವರ ಕುಟುಂಬಕ್ಕೆ ಹಾಗೂ ಡಾ ॥ ಲೋಹಿತ್ ಮುನಿಯಪ್ಪ ರವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ಸರ್ಕಾರವನ್ನು ಎಚ್ಚರಿಸುತ್ತದೆ . ಹಾಗೂ ಡಾ | ಲೋಹಿತ್ ಮುನಿಯಪ್ಪ ರವರಿಗೆ ಗನ್‌ಮಾನ್ ರವರನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತದೆ .

– ಎಂ.ಎಸ್.ನಾರಾಯಣಸ್ವಾಮಿ

ಕರ್ನಾಟಕ ದಲಿತ ರಕ್ಷಣಾ ಸಮಿತಿ

City Today News

9341997936

Karnataka bill banning online gaming will hurt Indian startups

The Karnataka Police (Amendment) Bill, 2021 was tabled in the Karnataka assembly on 17th September
New Delhi: Confederation of All India Traders ( CAIT), the powerful trade body, that represents 8 crore traders and over 40,000 trade associations, said that a proposed bill in the Karnataka assembly to ban online gaming, will hurt the Indian startup sector, the Indian gaming and animation industry and millions of Indian gamers and esports players.
The Karnataka Police (Amendment) Bill, 2021 was tabled in the Karnataka assembly on 17th September. The bill is expected to be discussed in the Karnataka legislative assembly this week.
While this bill proposes to ban online gambling, the bill has also introduced a clause that will ban all online games of skill. This will affect Indian startups like Dream11, Nazara, MPL, Games 24*7 and Paytm First Games. According to the data platform Tracxn, there are 623 gaming startups in India.
In a letter addressed to Basavaraj Bommai, the Chief Minister of Karnataka, the National Secretary General of CAIT, Praveen Khandelwal said:
“Unfortunately, the Karnataka bill does not distinguish between a game of skill and a game of chance. Game of chance is pure gambling and should be rightfully banned. However, by including games of skill in the ambit of the bill, it has not only gone against established jurisprudence but threatens the thriving Indian gaming startup sector.
“The gaming startup sector is the pride of India. Many of these homegrown startups have carried the Indian flag across the world by launching operations in various countries. Bills such as these will end up stifling innovation and enterprise shown by these startup and discourage Indian developers and help Chinese and other foreign companies profit at India’s expense.”
CAIT also said that this bill will end up encouraging illegal offshore gambling and betting apps who operate in the online grey market. Thousands of common Indians have lost their life savings to these illegal casino apps.
In August, 2020, the Hyderabad police busted an online gambling racket involving a Chinese firm called Beijing T Power Company. This Chinese company had floated several online gambling platforms and done illegal transactions worth Rs. 1100 crores.
“Once the bill bans online skill gaming, law abiding Indian companies will exit the market and users will turn to harmful offshore and betting apps,” Khandelwal added
CAIT also batted for a “strong and stable regulatory mechanism for online skill games” and requested the Karnataka government to relook at the bill, keeping in mind the interests of Indian companies and developers.

City Today News

9341997936