
ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಿಂದ ರಾಜ್ಯದಲ್ಲಿ ಆಟೋಗಳಿಗೆ LPG ಕೊರತೆ ಉಂಟಾಗಿ, ದೊರಕಿದರೂ ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿದ್ದ ಹಿನ್ನೆಲೆ, ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭಕ್ಕೆ ಸ್ಪಂದಿಸಿದ ಕನ್ನಡದ ಖ್ಯಾತ ನಟ ‘ಅಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು 25 ಲಕ್ಷ ರೂ.ಗಳ ನೆರವು ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಚಾಲಕರಿಗೆ ಉಚಿತ LPG ಗ್ಯಾಸ್ ವಿತರಣೆ ನಡೆಸಿದರು.
ಈ ಮಾನವೀಯ ಕಾರ್ಯವನ್ನು ಗಮನಿಸಿ ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್ ವತಿಯಿಂದ ಧ್ರುವ ಸರ್ಜಾ ಅವರಿಗೆ ‘ಚಾಲಕರ ಸೇವಾರತ್ನ’ ಪ್ರಶಸ್ತಿ ಹಾಗೂ ಕಂಚಿನ ಆಟೋ ಪ್ರತಿಮೆಯನ್ನು ನೀಡಿ ಸನ್ಮಾನಿಸಲಾಯಿತು.
ಸಂಘದ ಗೌರವಾಧ್ಯಕ್ಷ ಗಂಡಸಿ ಸದಾನಂದಸ್ವಾಮಿ, ರಾಜ್ಯಾಧ್ಯಕ್ಷ ಸ್ನೇಹಜೀವಿ ಸಂತೋಷ್ ಕುಮಾರ್ ಸೇರಿದಂತೆ ರಾಜು ಕನ್ನಡಿಗ, ಶಿವಕುಮಾರ್, ಉಸ್ಮಾನ್ ಪಾಶಾ, ಶ್ರೀನಿವಾಸ್ ಬಾಬು, ಸ್ನೇಹಜೀವಿ ಸುಮಾ, ಶಿವು, ಮಂಜುನಾಥ್, ಕಡೇಶ್, ದಂಡಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೂರಾರು ಆಟೋ ಚಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
City Today News 9341997936

You must be logged in to post a comment.