
ಬೆಂಗಳೂರು: ಆರೋಗ್ಯ ಸೇವೆಗಳು ದಿನೇದಿನೇ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ, ಸಾಮಾನ್ಯ ಜನರಿಗೆ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿರುವ ಸಂಸ್ಥೆಯಾಗಿ Karnataka Marwari Jain Charitable Trust ನಿರ್ವಹಣೆಯಲ್ಲಿರುವ Bhagwan Mahaveer Jain Netralaya ಗಮನ ಸೆಳೆಯುತ್ತಿದೆ.
ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆ ಸಮೀಪದಲ್ಲಿರುವ ಈ ವೈದ್ಯಕೀಯ ಕೇಂದ್ರದಲ್ಲಿ ಕಣ್ಣಿನ, ದಂತ ಹಾಗೂ ಇಎನ್ಟಿ ವಿಭಾಗಗಳ ವಿಶೇಷ ಚಿಕಿತ್ಸೆಗಳು ಲಭ್ಯವಿದ್ದು, ಜನಸಾಮಾನ್ಯರಿಗೆ ಅತಿ ರಿಯಾಯಿತಿ ದರದಲ್ಲಿ ಸೇವೆ ನೀಡಲಾಗುತ್ತಿದೆ.
ನೇತ್ರ ಚಿಕಿತ್ಸೆಯಲ್ಲಿ ಸ್ಯೂಚರ್ಲೆಸ್ ಕ್ಯಾಟರಾಕ್ಟ್ ಸರ್ಜರಿ, ಫೋಲ್ಡಬಲ್ ಲೆನ್ಸ್ನೊಂದಿಗೆ ಲೇಸರ್ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ (ಫ್ಯಾಕೋ ಎಮಲ್ಸಿಫಿಕೇಶನ್), ಸಂಪೂರ್ಣ ಕಣ್ಣಿನ ತಪಾಸಣೆ, ಆಟೋ ರಿಫ್ರಾಕ್ಟೊಮೀಟರ್ ಪರೀಕ್ಷೆ, ಕ್ಯಾಟರಾಕ್ಟ್ ನಂತರದ ಯಾಗ್ ಕ್ಯಾಪ್ಸುಲೋಟಮಿ ಸೇರಿದಂತೆ ಹಲವು ಆಧುನಿಕ ಸೇವೆಗಳು ಲಭ್ಯವಿವೆ. ಜೊತೆಗೆ ಇನ್ಹೌಸ್ ಆಪ್ಟಿಕಲ್ಸ್ ಸೌಲಭ್ಯವೂ ಕಲ್ಪಿಸಲಾಗಿದೆ.
ದಂತ ಚಿಕಿತ್ಸಾ ವಿಭಾಗದಲ್ಲಿ ಹಲ್ಲು ತೆಗೆಯುವುದು, ರೂಟ್ ಕೆನಾಲ್ ಚಿಕಿತ್ಸೆ, ರೆಸ್ಟೊರೇಷನ್, ಫ್ಲ್ಯಾಪ್ ಸರ್ಜರಿ, ಡೆಂಚರ್ ನಿರ್ಮಾಣ ಸೇರಿದಂತೆ ವಿವಿಧ ಚಿಕಿತ್ಸೆಗಳು ನೀಡಲಾಗುತ್ತಿವೆ.
ಇಎನ್ಟಿ ವಿಭಾಗದಲ್ಲಿಯೂ ತಜ್ಞ ವೈದ್ಯರಿಂದ ಓಪಿಡಿ ಸೇವೆಗಳು ಮತ್ತು ಸಣ್ಣ ಪ್ರಮಾಣದ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಅತ್ಯಾಧುನಿಕ ಸೌಲಭ್ಯಗಳಿದ್ದರೂ ಸಹ ಸಾಮಾನ್ಯ ಜನರ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಈ ಕೇಂದ್ರದ ವಿಶೇಷತೆ. ಕಣ್ಣು ಮತ್ತು ದಂತ ಚಿಕಿತ್ಸೆಗೆ ಕೇವಲ ₹100 ಹಾಗೂ ಇಎನ್ಟಿ ಸಲಹೆಗಾಗಿ ₹200 ಶುಲ್ಕ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 080-41162611 / 7619640116 ಸಂಖ್ಯೆಗೆ ಸಂಪರ್ಕಿಸಬಹುದು.
City Today News 9341997936

You must be logged in to post a comment.