ಯುವಕರನ್ನು ಕೃಷಿಯತ್ತ ಸೆಳೆಯಲು ‘ವಿದ್ಯಾರ್ಥಿ–ರೈತ ವಾಕಥಾನ್’

ಬೆಂಗಳೂರು: ಯುವಜನರಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸಿ, ಅವರನ್ನು ಕೃಷಿ ಕ್ಷೇತ್ರದತ್ತ ಆಕರ್ಷಿಸುವ ಉದ್ದೇಶದಿಂದ ‘ಸ್ಟೂಡೆಂಟ್ ಫಾರ್ಮರ್ಸ್ ವಾಕಥಾನ್ ಎಡಿಷನ್–2’ ಕಾರ್ಯಕ್ರಮವನ್ನು ಜೂನ್ 14ರಂದು (ಭಾನುವಾರ) ಬೆಳಿಗ್ಗೆ 8 ಗಂಟೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ.

ಆಹಾರ ಸರಪಳಿ ಅಭಿಯಾನ (Food Chain Campaign) ನೇತೃತ್ವದಲ್ಲಿ ನಡೆಯುವ ಈ ವಾಕಥಾನ್‌ನಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಗೌಡ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತದ ನಿರ್ದೇಶಕ ಸಿ.ಎನ್. ಶಿವಪ್ರಕಾಶ್, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ. ಎ.ಬಿ. ಪಾಟೀಲ್, ಉಪ ಆಯುಕ್ತ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಎಸ್. ಕಾಂತರಾಜು, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ಶ್ರೀಗಂಧದ ಮರ ಮತ್ತು ವೇಣುಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ. ಅಮರನಾರಾಯಣ, ಗೋಶುಭಮ್ ಫೌಂಡೇಶನ್‌ನ ಸ್ಥಾಪಕ ನರೇಂದ್ರ, ಸಾರ್ವಜನಿಕ ಆರೋಗ್ಯ ತಜ್ಞ ಡಾ. ಸೌರೀಶ್ ಹೆಗ್ಡೆ, ಅಗ್ರೋಟಿಲ್ ಸಂಸ್ಥಾಪಕ ಅಲೆನ್ ಜೋಸೆಫ್ ಹಾಗೂ ಆಹಾರ ಸರಪಳಿ ಅಭಿಯಾನದ ಸ್ಥಾಪಕ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಯುವ ಅಧ್ಯಕ್ಷ ಯತೀಶ್ ತುಕಾರಾಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಯುವ ವಿದ್ಯಾರ್ಥಿಗಳು, ರೈತರು ಹಾಗೂ ಕೃಷಿ ಕ್ಷೇತ್ರದ ಆಸಕ್ತರು ಸೇರಿ ಸುಮಾರು 500 ರಿಂದ 600 ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ವಾಕಥಾನ್ ಫ್ರೀಡಂ ಪಾರ್ಕ್‌ನಿಂದ ಆರಂಭವಾಗಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

City Today News 9341997936