ಈ ಹೊಸ ವರ್ಷದಂದು ನಿಮ್ಮ ಉಳಿತಾಯಗಳನ್ನು ಬಜಾಜ್‌ ಫೈನಾನ್ಸ್‌ ಆನ್‌ಲೈನ್ FD ಮೂಲಕ ಹೆಚ್ಚಿಸಿಕೊಳ್ಳಿ

2020 ರಲ್ಲಿ 4.2% ರಷ್ಟು ಭಾರಿ ಇಳಿಕೆಯಿಂದಾಗಿ, 2021 ರಲ್ಲಿ ವಿಶ್ವದ ಜಿಡಿಪಿ ಪ್ರಗತಿ ಕಾಣುವ ನಿರೀಕ್ಷೆ ಎಲ್ಲರಲ್ಲೂ ಮೂಡಿದೆ. ಮುಂದಿನ ವಿತ್ತ ವರ್ಷದಲ್ಲಿ 4.6% ದರದಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ. ಹೀಗಾಗಿ, ಹೊಸ ವರ್ಷ ಆಗಮಿಸುತ್ತಿದ್ದಂತೆಯೇ, ಹೊಸ ಆರಂಭದ ನಿರೀಕ್ಷೆ ಮೂಡಿದೆ. ಅಲ್ಲದೆ, ಮಾರ್ಕೆಟ್‌ ಪ್ರಗತಿ ಕಾಣುವ ನಿರೀಕ್ಷೆಯನ್ನು ಹೂಡಕೆದಾರರೂ ಹೊಂದಿದದಾರೆ. ತುರ್ತು ನಿಧಿಯನ್ನು ಇಟ್ಟುಕೊಳ್ಳುವುದು ಅತ್ಯಂತ ಪ್ರಮುಖ ಎಂಬುದನ್ನು 2020 ನಮಗೆ ಕಲಿಸಿಕೊಟ್ಟಿದೆ. ಎಫ್ಡಿ
ಫಿಕ್ಸೆಡ್‌ ಡೆಪಾಸಿಟ್‌ನಂತಹ ಹಣಕಾಸು ಪರಿಕರಗಳಲ್ಲಿ ಸುಸ್ಥಿರ ಹೂಡಿಕೆ ಮಾಡುವುದರಿಂದ ನಿಮ್ಮ ಭವಿಷ್ಯ ಸುಭದ್ರವಾಗಿರುತ್ತದೆ. ಇದೇ ವೇಳೆ, ಇದು ನಮ್ಮ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನೂ ಸಾಧಿಸುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳು ಲಭ್ಯವಿರುತ್ತವೆ. ಈ ಪೈಕಿ ಉತ್ತಮ ಆಯ್ಕೆಯೆಂದರೆ ಬಜಾಜ್‌ ಫೈನಾನ್ಸ್‌ನ ಆನ್‌ಲೈನ್‌ ಎಫ್‌ಡಿ. ಬಜಾಜ್‌ ಫೈನಾನ್ಸ್‌ ಎಫ್‌ಡಿಯಲ್ಲಿ ಹೂಡಿಕೆ ಮಾಡುವುದನ್ನು ಆಯ್ಕೆ ಮಾಡುವ ಮೂಲಕ 2021 ರಲ್ಲಿ ನೀವು ನಿಮ್ಮ ಉಳಿತಾಯವನ್ನು ವೃದ್ಧಿಸಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ.
ಡೆಪಾಸಿಟ್ ಮೇಲೆ ಆಕರ್ಷಕ ರಿಟರ್ನ್‌ಗಳು
ಇತರ ಬ್ಯಾಂಕ್‌ಗಳು ಮತ್ತು ಫೈನಾನ್ಷಿಯರ್‌ಗಳಿಗೆ ಹೋಲಿಕೆ ಮಾಡಿದರೆ, ಬಜಾಜ್ ಫೈನಾನ್ಸ್‌ ಒದಗಿಸಿದ ಎಫ್‌ಡಿ ಬಡ್ಡಿ ದರಗಳು ಆಕರ್ಷಕವಾಗಿವೆ. ಅದರಲ್ಲೂ, 2020 ರಲ್ಲಿನ ರೆಪೋ ದರ ಕಡಿತಗಳಿಂದಾಗಿ, ಡೆಪಾಸಿಟ್‌ಗಳ ಮೇಲೆ ಬಡ್ಡಿ ದರವು ಎಲ್ಲ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಬಜಾಜ್ಸ್ ಫೈನಾನ್ಸ್‌ನ ಎಫ್‌ಡಿ ಬಡ್ಡಿ ದರವು ಆಕರ್ಷಕವಾಗಿಯೇ ಇವೆ.
ನೀವು 60 ವರ್ಷಗಳಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಾಗಿದ್ದರೆ, ಬಜಾಜ್ ಫೈನಾನ್ಸ್‌ ಎಫ್‌ಡಿಯಲ್ಲಿ ಆಫ್‌ಲೈನ್‌ ಮೋಡ್‌ನಲ್ಲಿ ಹೂಡಿಕೆ ಮಾಡುವಾಗ, 6.60% ವರೆಗೆ ಬಡ್ಡಿ ದರದ ಪ್ರಯೋಜನಗಳನ್ನು ಪಡೆಯಬಹುದು. ಆದರೆ, ಬಜಾಜ್‌ ಫೈನಾನ್ಸ್‌ ಆನ್‌ಲೈನ್‌ ಎಫ್‌ಡಿಯಲ್ಲಿ ಹಿರಿಯ ನಾಗರಿಕರಲ್ಲದವರು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿದರೆ, ಹೆಚ್ಚುವರಿ 0.10% ಬಡ್ಡಿ ದರವನ್ನು ಪಡೆಯುತ್ತಾರೆ. ಹೀಗಾಗಿ, 6.70% ವರೆಗೆ ಖಚಿತ ರಿಟರ್ನ್ಸ್‌ ಸಹಿತ ನಿಮ್ಮ ಉಳಿತಾಯವನ್ನು ನೀವು ಬೆಳೆಸಿಕೊಳ್ಳಬಹುದು.
ಒಂದು ಸಚಿತ್ರ ಉದಾಹರಣೆಯಲ್ಲಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಬ್ಬ ವ್ಯಕ್ತಿಯು ಐದು ವರ್ಷಗಳ ಅವಧಿಗೆ ಬಜಾಜ್‌ ಫೈನಾನ್ಸ್‌ ಎಫ್‌ಡಿಯಲ್ಲಿ ಹೂಡಿಕೆ ಮಾಡುತ್ತಾರೆ ಎಂದು ಊಹಿಸೋಣ. ಇತರ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಸಂಸ್ಥೆಯು ಒದಗಿಸುವ ಆನ್‌ಲೈನ್ ಫಿಕ್ಸೆಡ್‌ ಡೆಪಾಸಿಟ್‌ನೊಂದಿಗೆ ನಿಮ್ಮ ಉಳಿತಾಯ ಹೇಗೆ ಬೆಳೆಯುತ್ತದೆ ಎಂದು ನೋಡೋಣ.

ಟಿಪ್ಪಣಿ: ಈ ಮೇಲಿನ ಲೆಕ್ಕಾಚಾರದಲ್ಲಿ ಬಡ್ಡಿ ದರವು ಒದಗಿಸುವ ನೈಜ ದರದಲ್ಲಿ 4 ಬಿಪಿಎಸ್‌ವರೆಗೆ ವ್ಯತ್ಯಾಸವಾಗಿದೆ
ಇನ್ನೇನು ಬೇಕು – ಸುರಕ್ಷಿತ ಪರಿಸರದಲ್ಲಿ ತಮ್ಮ ಉಳಿತಾಯವನ್ನು ವೃದ್ಧಿಸಲು ಹಿರಿಯ ನಾಗರಿಕರಿಗೆ 0.25% ರಷ್ಟು ದರ ಪ್ರಯೋಜನವನ್ನು ಬಜಾಜ್‌ ಫೈನಾನ್ಸ್ ಒದಗಿಸುತ್ತದೆ.
ಸಕಾಲಿಕ ಪಾವತಿ ಆಯ್ಕೆಗಳು
ಕಾಲದ ಆಧಾರದಲ್ಲಿ ಪೇಔಟ್‌ಗಳನ್ನು ಪಡೆದುಕೊಳ್ಳಲು ಕೂಡಾ ತಮ್ಮ ಗ್ರಾಹಕರಿಗೆ ಬಜಾಜ್ ಫೈನಾನ್ಸ್‌ ಲಿಮಿಟೆಡ್‌ ಅನುಮತಿಸುತ್ತದೆ. ವಿಪತ್ತಿನ ಸಮಯದಲ್ಲಿ, ನಿವೃತ್ತಿಯ ನಂತರ ಆದಾಯದ ಮೇಲೆ ಅವಲಂಬಿಸುವುದಕ್ಕಾಗಿ ನಿಯತ ಆದಾಯವನ್ನು ನೀವು ಹೊಂದಿರುತ್ತೀರಿ. ಫಿಕ್ಸೆಡ್‌ ಅವಧಿಯಲ್ಲಿ, ನೀವು ಒಟ್ಟಾರೆ ಮೊತ್ತವನ್ನು ಹೂಡಿಕೆ ಮಾಡಬಹುದು ಮತ್ತು ನಿಮ್ಮ ಹೂಡಿಕೆ ಪೇಔಟ್‌ಗಳನ್ನು ಪಡೆಯಲು ಬಯಸುವ ಆವರ್ತನವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಇದು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ಇರಬಹುದು. ಎಫ್‌ಡಿ ಪಕ್ವತೆಯನ್ನು ತಲುಪಿದ ನಂತರ, ಪಕ್ವತೆಯಿಂದ ಪಡೆದ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದರಿಂದ ಕಿರಿಕಿರಿ ರಹಿತ ಅನುಭವ ನಿಮ್ಮದಾಗಲಿದೆ. ನೀವು ಬಯಸಿದ ಆವರ್ತನದಲ್ಲಿ ಪೇಔಟ್ ಮೊತ್ತವನ್ನು ತಿಳಿದುಕೊಳ್ಳಲು ನೀವು ಬಯಸಿದರೆ, ಬಜಾಜ್‌ ಫೈನಾನ್ಸ್‌ ಎಫ್‌ಡಿ ಕ್ಯಾಲಕ್ಯುಲೇಟರ್ ಅನ್ನು ಬಳಸಿ. ಮೊದಲೇ ನಿಮ್ಮ ರಿಟರ್ನ್ಸ್‌ ಅನ್ನು ಗುರುತು ಮಾಡಿಕೊಳ್ಳಲು ಸಹಾಯ ಮಾಡುವ ಉತ್ತಮ ಸಾಧನ ಇದಾಗಿದೆ.
ಠೇವಣಿಯ ಮೇಲೆ ಅತ್ಯಧಿಕ ಸುರಕ್ಷತೆ
2020 ರಲ್ಲಿ ನಮ್ಮ ಸುರಕ್ಷತೆಯೇ ಒಂದು ಪ್ರಮುಖ ಕಳವಳವಾಗಿದೆ. ಈ ಚಿಂತೆಯು ಹೊಸ ವರ್ಷದಲ್ಲೂ ಮುಂದುವರಿಯುವ ಸಾಧ್ಯತೆ ಇದೆ. 2021 ರಲ್ಲಿ, ಸೂಕ್ತ ಹೂಡಿಕೆ ಮಾಡಿದರೆ, ಆರಾಮವಾಗಿ ಕುಳಿತು ಹಣ ಗಳಿಕೆ ಮಾಡಬಹುದು. ಬಜಾಜ್‌ ಫೈನಾನ್ಸ್ ತಮ್ಮ ಹೂಡಿಕೆದಾರರಿಗೆ ಅತ್ಯುತ್ತಮ ಸುರಕ್ಷತೆಯನ್ನು ಒದಗಿಸುತ್ತದೆ. ಐಸಿಆರ್‌ಎ ಇಂದ ಎಂಎಎಎ ಮತ್ತು ಕ್ರಿಸಿಲ್‌ನಿಂದ ಎಫ್‌ಎಎಎ ಅತ್ಯಧಿಕ ಸ್ಥಿರತೆ ದರವನ್ನು ಇದರ ಫಿಕ್ಸೆಡ್ ಡೆಪಾಸಿಟ್ ಹೊಂದಿದೆ. ಈ ಸ್ಥಿರತೆ ದರದ ಜೊತೆಗೆ, ಕ್ಲೇಮ್ ಮಾಡಿಲ್ಲದ ಡೆಪಾಸಿಟ್‌ಗಳು ಶೂನ್ಯವಾಗಿವೆ ಎಂಬ ಹೆಗ್ಗಳಿಕೆಯನ್ನೂ ಬಜಾಜ್ ಫೈನಾನ್ಸ್‌ ಹೊಂದಿದೆ. ಅಲ್ಲದೆ, ಹೂಡಿಕೆದಾರರಲ್ಲಿ ಅತ್ಯಂತ ಸುರಕ್ಷಿತ ಹೂಡಿಕೆ ಸಲಕರಣೆ ಎಂದು ಮನ್ನಣೆ ಗಳಿಸಿದೆ.
ನಿಮ್ಮ ಅನುಕೂಲಕ್ಕೆ ತಕ್ಕಂತೆ ಉಳಿಸಿಕೊಳ್ಳಿ
ವಿಶೇಷವಾಗಿ ಫಿಕ್ಸೆಡ್‌ ಡೆಪಾಸಿಟ್‌ಗಳಿಗೆ ಲಾಕ್‌ ಇನ್‌ ಅವಧಿ ಮತ್ತು ನಿಗದಿತ ಡೆಪಾಸಿಟ್ ಮೊತ್ತ ಇರುವುದರಿಂದ ಇವು ಬದಲಾವಣೆ ಮಾಡಲಾಗದ ಮತ್ತು ಸ್ಥಿರ ಎಂಬುದಾಗಿ ಪರಿಗಣಿಸಲ್ಪಟ್ಟಿವೆ. ಬಜಾಜ್ ಫೈನಾನ್ಸ್‌ ಎಫ್‌ಡಿಯೊಂದಿಗೆ ಕಸ್ಟಮೈಸೇಶನ್‌ನ ಎಲ್ಲ ಅನುಕೂಲವನ್ನು ನೀವು ಹೊಂದಿದ್ದೀರಿ. ನೀವು ಪ್ರತಿ ತಿಂಗಳು ಕನಿಷ್ಠ ರೂ. 5,000 ಅಥವಾ ಕನಿಷ್ಠ 25,000 ವರೆಗಿನ ಲಂಪ್‌ಸಮ್‌ ಹೂಡಿಕೆಯೊಂದಿಗೆ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ (ಎಸ್‌ಡಿಪಿ) ಅನ್ನೂ ನೀವು ಆಯ್ಕೆ ಮಾಡಿಕೊಳ್ಳಬಹುದು. ಇದರ ಜೊತೆಗೆ, ಎಸ್‌ಡಿಪಿ ಮೂಲಕ ಹೂಡಿಕೆ ಮಾಡುವಾಗ ಮಾಸಿಕ ಪಕ್ವತೆ ಸ್ಕೀಮ್‌ ಅನ್ನು ನೀವು ಪಡೆದಾಗ, ನಿಮ್ಮ ಡೆಪಾಸಿಟ್‌ಗಳ (ನೀವು ಆಯ್ಕೆ ಮಾಡಿದ ಅವಧಿಯನ್ನು ಆಧರಿಸಿ) ಮೇಲೆ ಮಾಸಿಕ ರಿಟರ್ನ್ಸ್ ಅನ್ನು ನೀವು ಪಡೆಯಬಹುದು. ಒಂದೇ ಪಕ್ವತೆ ಸ್ಕೀಮ್‌ ಮೂಲಕ ಒಮ್ಮೆಗೆ ನಿಮ್ಮ ಪೇಔಟ್‌ಗಳನ್ನು ಪಡೆಯಲು ನೀವು ಕಸ್ಟಮೈಸ್ ಕೂಡ ಮಾಡಬಹುದು. ಹೀಗಾಗಿ, ನಿಮಗೆ ಭದ್ರತೆ ಮತ್ತು ಅನುಕೂಲದ ಜೊತೆಗೆ, ಬಜಾಜ್ ಫೈನಾನ್ಸ್‌ ಎಫ್‌ಡಿಯೊಂದಿಗೆ ಖಚಿತ ರಿಟರ್ನ್ಸ್‌ ಕೂಡ ಲಭ್ಯವಾಗುತ್ತದೆ.
ಕೆಲವು ಸರಳ ಕ್ಲಿಕ್‌ಗಳಿಂದ ಕೆಲವೇ ನಿಮಿಷಗಳಲ್ಲಿ, ಬಜಾಜ್ ಫೈನಾನ್ಸ್ ಆನ್‌ಲೈನ್‌ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಸಂಕೀರ್ಣ ದಾಖಲಾತಿಯ ಯಾವುದೇ ಕಿರಿಕಿರಿ ಇಲ್ಲ. ಉದ್ದನೆಯ ಸರದಿಯಲ್ಲಿ ಕಾಯಬೇಕಿಲ್ಲ ಮತ್ತು ಕಿರಿಕಿರಿದಾಯಕ ಕಾಯುವಿಕೆ ಅವಧಿಯೂ ಇಲ್ಲ. ಬಜಾಜ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ನಿಮ್ಮ ತುರ್ತು ನಿಧಿಯನ್ನು ರಚಿಸುವ ಮೂಲಕ, ನೀವು ಹೊಸ ವರ್ಷವನ್ನು ಜವಾಬ್ದಾರಿಯುತವಾಗಿ ಆಚರಿಸಿ.

City Today News
9341997936