ನಾಡಿನ‌ ಜನತೆಗೆ ಮಕರ‌ ಸಂಕ್ರಮಣ ಹಬ್ಬದ ಶು‌ಭಾಶಯ ಕೋರಿದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ

ಹೊಸ ವರ್ಷಾರಂಭದ ಮೊದಲ ಹಬ್ಬವಾದ ಮಕರ ಸಂಕ್ರಮಣ ನಾಡಿನ‌ ಜನರೆಲ್ಲರಿಗೂ ಒಳಿತನ್ನು ಮಾಡಲಿ‌ ಎಂದು‌ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಶುಭಾಶಯ ಕೋರಿದ್ದಾರೆ.

ಸುಗ್ಗಿಯ ಕಾಲದ ಸಂಕ್ರಾಂತಿ ನಮ್ಮೆಲ್ಲರ ಜೀವನಾಡಿಯಾದ ರೈತರ ಬದುಕನ್ನು ಹಸನಾಗಿರಿಸಲಿ. ಸೂರ್ಯನ ಪಥ ಬದಲಾದಂತೆ ನಮ್ಮ ರಾಜ್ಯವೂ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಸಚಿವರು ಶುಭ ಕೋರಿದ್ದಾರೆ.

ಹೆಮ್ಮಾರಿ ಕೋವಿಡ್ ಸೋಂಕು ನಿರ್ಮೂಲನೆಯಾಗಿ ಸುಖ ಸಮೃದ್ಧಿಯ ಸುಗ್ಗಿ ಪ್ರತಿ ಕುಟುಂಬಗಳಲ್ಲಾಗಲಿ ; ರಾಜ್ಯವು ಅಭ್ಯುದಯ ಹೊಂದಲಿ ಎಂದು ಸಚಿವ ರಮೇಶ್ ಜಾರಕಿಹೊಳಿ‌ ತಮ್ಮ ಶುಭ ಸಂದೇಶ ದಲ್ಲಿ ತಿಳಿಸಿದ್ದಾರೆ.

City Today News
(citytoday.media)
9341997936