
ನವದೆಹಲಿ, ಜುಲೈ 23: ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಆಕ್ಸೆಸರಿಗಳ ಕ್ಷೇತ್ರದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ZENO, ಭಾರತೀಯ ಮಾರುಕಟ್ಟೆಗೆ ಹೊಸ ZENO 100 Pro ಸ್ಮಾರ್ಟ್‌ಫೋನ್ ಜೊತೆಗೆ 10,000mAh ಮತ್ತು 20,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ, ZENO 100 Pro ತನ್ನ ವಿಭಾಗದಲ್ಲೇ ಅತ್ಯಂತ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ.
ಹೊಸ ZENO 100 Proಗೆ MIL-STD-810H ಮಿಲಿಟರಿ ಗ್ರೇಡ್ ಪ್ರಮಾಣೀಕರಣ ದೊರೆತಿದ್ದು, ಇದು ಹೆಚ್ಚಿನ ಬಾಳಿಕೆ ಹಾಗೂ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಜೊತೆಗೆ UltraLink ತಂತ್ರಜ್ಞಾನವನ್ನು ಒಳಗೊಂಡಿರುವುದರಿಂದ, ನೆಟ್‌ವರ್ಕ್ ದುರ್ಬಲವಾಗಿರುವ ಪ್ರದೇಶಗಳಲ್ಲಿಯೂ ಸಂಪರ್ಕವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ.

ಈ ಸ್ಮಾರ್ಟ್‌ಫೋನ್ 3GB RAM ಜೊತೆಗೆ 5GB ವರ್ಚುವಲ್ RAM ಹಾಗೂ 64GB ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದೇ ಸರಣಿಯ ZENO Lite ಮಾದರಿ 2GB RAM ಮತ್ತು 64GB ಸ್ಟೋರೇಜ್ ಆಯ್ಕೆಯೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಬೆಲೆ ಮತ್ತು ಲಭ್ಯತೆ
ZENO 100 Pro ಸ್ಮಾರ್ಟ್‌ಫೋನ್ Amazon ಮೂಲಕ ₹8,599ಕ್ಕೆ ಲಭ್ಯವಿದೆ. ZENO Lite ಬೆಲೆ ₹7,999 ನಿಗದಿಯಾಗಿದೆ. ಇನ್ನು 10,000mAh ಹಾಗೂ 20,000mAh ಸಾಮರ್ಥ್ಯದ ಪವರ್‌ಬ್ಯಾಂಕ್‌ಗಳು ಕ್ರಮವಾಗಿ ₹1,299 ಮತ್ತು ₹2,069 ಆರಂಭಿಕ ವಿಶೇಷ ಕೊಡುಗೆಯೊಂದಿಗೆ (ಹೆಚ್ಚುವರಿ ಶೇ.10 ರಿಯಾಯಿತಿ) ಮಾರಾಟವಾಗಲಿವೆ.
ZENO ಹೆಸರಿನ ಅರ್ಥ
ಕಂಪನಿಯು ZENO ಹೆಸರಿನ ಪ್ರತಿಯೊಂದು ಅಕ್ಷರಕ್ಕೂ ವಿಶೇಷ ಅರ್ಥ ನೀಡಿದೆ. Z – Zenith of Design, E – Elevated Experience, N – Nuanced Control ಮತ್ತು O – Optimized Output ಅನ್ನು ಪ್ರತಿನಿಧಿಸುತ್ತದೆ. ಈ ತತ್ವಗಳನ್ನೇ ಉತ್ಪನ್ನ ವಿನ್ಯಾಸ ಮತ್ತು ಬಳಕೆದಾರ ಅನುಭವದ ಆಧಾರವಾಗಿಟ್ಟುಕೊಂಡಿರುವುದಾಗಿ ಕಂಪನಿ ತಿಳಿಸಿದೆ.

ಸಿಇಒ ಅಭಿಪ್ರಾಯ
itel India ಸಂಸ್ಥೆಯ ಸಿಇಒ ಅರಿಂದೀತ್ ತಲಾಪಾತ್ರಾ ಮಾತನಾಡಿ, “ZENO ಸರಣಿಯು ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ. ಇಂದಿನ ಯುವಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸ, ಕಾರ್ಯಕ್ಷಮತೆ ಹಾಗೂ ಕೈಗೆಟುಕುವ ಬೆಲೆಯ ಸಮತೋಲನವನ್ನು ಸಾಧಿಸಿದ್ದೇವೆ. ಉತ್ಪಾದನಾ ವೆಚ್ಚ ಹೆಚ್ಚಿದ್ದರೂ ಗ್ರಾಹಕರಿಗೆ ಉತ್ತಮ ತಂತ್ರಜ್ಞಾನವನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದು ನಮ್ಮ ಉದ್ದೇಶ,” ಎಂದು ಹೇಳಿದರು.
ZENO 100 Pro ಪ್ರಮುಖ ವೈಶಿಷ್ಟ್ಯಗಳು:
ZENO 100 Proನಲ್ಲಿ 6.6 ಇಂಚಿನ 90Hz HD+ ಡಿಸ್ಪ್ಲೇ ಅಳವಡಿಸಲಾಗಿದ್ದು, DTS ಸೌಂಡ್ ತಂತ್ರಜ್ಞಾನ ಉತ್ತಮ ಧ್ವನಿ ಅನುಭವವನ್ನು ಒದಗಿಸುತ್ತದೆ. Dynamic Bar ವೈಶಿಷ್ಟ್ಯದ ಮೂಲಕ ಬ್ಯಾಟರಿ ಮಟ್ಟ, ಕರೆಗಳು ಹಾಗೂ ನೋಟಿಫಿಕೇಶನ್‌ಗಳ ಮಾಹಿತಿಯನ್ನು ಸುಲಭವಾಗಿ ವೀಕ್ಷಿಸಬಹುದು.
ಫೋಟೋಗ್ರಫಿಗಾಗಿ 8 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ನೀಡಲಾಗಿದೆ. ಜೊತೆಗೆ IR Blaster ಇರುವುದರಿಂದ ಟಿವಿ, ಏರ್ ಕಂಡೀಷನರ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಈ ಸ್ಮಾರ್ಟ್‌ಫೋನ್ Unisoc T7100 ಆಕ್ಟಾ-ಕೋರ್ ಪ್ರೊಸೆಸರ್ ಹಾಗೂ Android 15 Go ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಭದ್ರತೆಗಾಗಿ Face Unlock ಮತ್ತು Side Fingerprint Sensor ಸೌಲಭ್ಯಗಳನ್ನು ನೀಡಲಾಗಿದೆ. 5000mAh ಬ್ಯಾಟರಿ ಮತ್ತು 10W ಚಾರ್ಜರ್ ಹೊಂದಿರುವ ಈ ಫೋನ್ Comet Orange, Cloud White ಹಾಗೂ Black ಬಣ್ಣಗಳಲ್ಲಿ ಲಭ್ಯವಿದೆ.
20,000mAh ಪವರ್‌ಬ್ಯಾಂಕ್:
20,000mAh ಸಾಮರ್ಥ್ಯದ ZENO ಪವರ್‌ಬ್ಯಾಂಕ್ 45W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಹಾಗೂ ಹೊಂದಾಣಿಕೆಯ ಲ್ಯಾಪ್‌ಟಾಪ್‌ಗಳನ್ನೂ ಚಾರ್ಜ್ ಮಾಡಬಲ್ಲದು. ಇದರಲ್ಲಿ Digital Battery Display, PD 3.0, QC 3.0, Dual Output Ports ಹಾಗೂ Inbuilt Type-C Cable ಸೇರಿದಂತೆ ಹಲವು ವೈಶಿಷ್ಟ್ಯಗಳಿವೆ.
10,000mAh ಪವರ್‌ಬ್ಯಾಂಕ್:
10,000mAh ಸಾಮರ್ಥ್ಯದ ಪವರ್‌ಬ್ಯಾಂಕ್ ಹಗುರವಾದ ಮತ್ತು ಸುಲಭವಾಗಿ ಕೊಂಡೊಯ್ಯಬಹುದಾದ ವಿನ್ಯಾಸವನ್ನು ಹೊಂದಿದೆ. ಇದು 22.5W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವುದರ ಜೊತೆಗೆ Digital Battery Display, Dual Output Ports ಹಾಗೂ Type-C to Type-C ಕೇಬಲ್ ಅನ್ನು ಒಳಗೊಂಡಿದೆ. ಒಂದೇ ವೇಳೆ ಎರಡು ಸಾಧನಗಳನ್ನು ಚಾರ್ಜ್ ಮಾಡಬಹುದಾದ ಈ ಪವರ್‌ಬ್ಯಾಂಕ್ ದೈನಂದಿನ ಬಳಕೆಗೆ ಅನುಕೂಲಕರವಾಗಿದೆ.
City Today News 9341997936

You must be logged in to post a comment.