
ದಿನಾಂಕ : 27 . 12 . 2018 ಚಿಕ್ಕಮಗಳೂರು ಜಿಲ್ಲೆಯ ಕಾರ್ತಿಕೆರೆ ಗ್ರಾಮದ ಕಾರ್ತಿಕೆರೆ ಸರ್ಕಲ್‌ನ ಗ್ರಾಮಕರಣಿಕರಾದ ಓಂಕಾರಪ್ಪ ಇವರು ದಶರಥರಾಜ ಅರಸು ಕಾರ್ತಿಕೆರೆ ಇವರಿಗೆ 94 ಸಿ ಕರ್ನಾಟಕ ಲ್ಯಾಂಡ್ ರೆವಿನ್ಯೂ ಆಕ್ಸ್ ಅಡಿಯಲ್ಲಿ ಜಮೀನು ಮಂಜೂರಾತಿಗಾಗಿ ರೂಪಾಯಿ 15 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ 27 . 12 . 2018 ರಂದು ಆರೋಪಿತರು ಅರ್ಜಿದಾರರಿಂದ ರೂ . 15 , 000 / – ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರಿದಿದೆ .
City Today News
(Tj vision media)
9341997936
