
ಡಾ.ಬಿ.ಸುಧಾ ( ಕೆ.ಎ.ಎಸ್ ) ಆಡಳಿತಾಧಿಕಾರಿ , ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ , ಶಾಂತಿನಗರ , ಬೆಂಗಳೂರು ರವರ ವಿರುದ್ದ ಅಕ್ರಮ ಆಸ್ತಿಗಳ ಗಳಿಕೆ ಸಂಬಂಪಟ್ಟಂತೆ ದಿನಾಂಕ : 07.11.2020 ರಂದು ಬೆಂಗಳೂರು , ಮೈಸೂರು ಹಾಗೂ ಉಡುಪಿ ಜಿಲ್ಲೆಯ ಒಟ್ಟು 7 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಹಾಗೂ ಸಿಬ್ಬಂದಿಯವರ 6 ವಿವಿಧ ತಂಡಗಳಿಂದ ಶೋಧನೆ ಕಾರ್ಯವನ್ನು ಕೈಗೊಳ್ಳಲಾಗಿದೆ . ಶೋಧನಾ ಕಾಲದಲ್ಲಿ ಈ ಕೆಳಕಂಡಂತೆ ಚರ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿದ್ದು ಇವುಗಳ ಬಗ್ಗೆ ತನಿಖೆ ಮುಂದುವರೆದಿರುತ್ತದೆ .

1. ಆರೋಪಿತರು ಮತ್ತು ಅವರ ಕುಟುಂಬ ಸದಸ್ಯರು ಹಾಗು ಅವರಿಗೆ ಪರಿಚಯವಿರುವ ಇತರೆ ವ್ಯಕ್ತಿಗಳ ಹೆಸರಿನಲ್ಲಿರುವ ಸುಮಾರು 200 ಕ್ಕೂ ಹೆಚ್ಚು ಸ್ವತ್ತಿಗೆ ಸಂಬಂಧಪಟ್ಟ ದಾಖಲಾತಿಗಳು , ಆಸ್ತಿಗಳ ಕ್ರಯ ಪತ್ರಗಳು , ಜಿಪಿಎ ಪತ್ರಗಳು , ಕೆಲವು ಒಪ್ಪಂದದ ಕರಾರು ಪತ್ರಗಳು ಮತ್ತು ಇತರೆ ದಾಖಲಾತಿಗಳು ದೊರೆತ್ತಿರುತ್ತವೆ .
2. ಆರೋಪಿತರು ಮತ್ತು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 50 ಬ್ಯಾಂಕ್ ಖಾತೆಗಳ ವಿವರಗಳು , ಸುಮಾರು 50 ಕ್ಕೂ ಅಧಿಕ ಚೆಕ್ ಅಫ್ಗಳು ದೊರೆತಿರುತ್ತೇವೆ .
3. ಆರೋಪಿತರು ಮತ್ತು ಅವರೊಂದಿಗೆ ವ್ಯವಹಾರದ ಸಂಬಂಧ ಸಂಪರ್ಕದಲ್ಲಿರುವ ವ್ಯಕ್ತಿಗಳ ಮನೆಯಲ್ಲಿ ರೂ . 36,89.000 / – ನಗದು ಹಣ ದೊರೆತಿರುತ್ತದೆ .
4. ಆರೋಪಿ ಡಾ || .ಬಿ.ಸುಧಾ ರವರು ಮತ್ತು ಅವರಿಗೆ ಸಂಬಂಧಪಟ್ಟ ಇತರೆ ವ್ಯಕ್ತಿಗಳ ಬ್ಯಾಂಕ್ ಖಾತೆಗಳಲ್ಲಿ ಸುಮಾರು 3.5 ಕೋಟಿ ರೂ.ಗಳು ಠೇವಣಿಗಳು ಪತ್ತೆಯಾಗಿರುತ್ತದೆ .
5. ಆರೋಪಿತರು ಮತ್ತು ಅವರಿಗೆ ಸಂಬಂಧಪಟ್ಟ ಇತರೆ ವ್ಯಕ್ತಿಗಳ ಮನೆಯಲ್ಲಿ ಸುಮಾರು 3.7 ಕೆ.ಜಿ ಚಿನ್ನಾಭರಣಗಳು ಮತ್ತು ಮಾರು 10.5 ಗಳು ಬೆಳ್ಳಿಯ ವಸ್ತ್ರಗಳು ಪತ್ತೆಯಾಗಿರುತ್ತದೆ .
ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನಾ ಕಾರ್ಯ ಕೈಗೊಂಡಿದ್ದು , ಪ್ರಕರಣದಲ್ಲಿ ತನಿಖೆ ಮುಂದುವರೆದಿರುತ್ತದೆ .
City Today News
(citytoday.media)
9341997936