ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಶರಣು ಬಿ ತಳ್ಳಿಕೇರಿ , ಅಧ್ಯಕ್ಷರು , ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ರವರಿಂದ ಅಭಿನಂದನೆಗಳ ಸಲ್ಲಿಕೆ

ಸನ್ಮಾನ್ಯ ಮುಖ್ಯಮಂತ್ರಿಯವರು 2021-22 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಈ ಕೆಳಕಂಡ ಯೋಜನೆಗಳನ್ನು ಕುರಿಗಾರರ ಅನುಕೂಲಕ್ಕಾಗಿ ಘೋಷಿಸಿರುತ್ತಾರೆ . ಶ್ರೀ ಶರಣು ಬಿ ತಳ್ಳಿಕೇರಿ , ಅಧ್ಯಕ್ಷರು , ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಅವರು ರಾಜ್ಯದ ಕುರಿಗಾರರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳ ಸಲ್ಲಿಕೆ .

ಕರ್ನಾಟಕ ರಾಜ್ಯದಲ್ಲಿ 110.51 ಲಕ್ಷ ಕುರಿಗಳು ಮತ್ತು 61.69 ಮೇಕೆಗಳಿವೆ ,

*ರಾಜ್ಯದ ಕುರಿಗಾರರ ಕುರಿ / ಮೇಕೆಗಳು ಆಕಸ್ಮಿಕವಾಗಿ ಮರಣಿಸಿದಾಗ ಪರಿಹಾರಧನ ನೀಡುವುದನ್ನು ಮುಂದುವರೆಸುವುದು ,. ಕುರಿ / ಮೇಕೆಗಳ ಅಕಸ್ಮಿಕ ಮರಣಕ್ಕೆ ಕುರಿ ಮಾಲೀಕರುಗಳಿಗೆ ಪರಿಹಾರ ನೀಡುವ ಅನುಗ್ರಹ ಕೊಡುಗೆ ( Ex – gratia ) ಕಾರ್ಯಕ್ರಮವನ್ನು ಮುಂದುವರೆಸಿದ್ದು , ಇದರಿಂದ ರಾಜ್ಯದ ಕುರಿ ಸಾಕಾಣಿಕೆದಾರರು ಕುರಿ / ಮೇಕೆಗಳು ಮರಣ ಹೊಂದಿದಾಗ ಆರ್ಥಿಕ ನಷ್ಟವನ್ನು ಅನುಭವಿಸಿ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿಯಿಂದ ಪಾರಾಗಬಹುದು . ಪ್ರತಿ ಕುರಿ / ಮೇಕೆಗಳಿಗೆ ರೂ 5000 / – ಪರಿಹಾರ ಧನ ಮತ್ತು 3-6 ತಿಂಗಳ ಕುರಿ / ಮೇಕೆ ಮರಿಗಳಿಗೆ ರೂ 2500 / – ಗಳ ಪರಿಹಾರ ಧನವನ್ನು ನೀಡಲಾಗುವುದು ,

* ಚಿತ್ರದುರ್ಗ ಜಿಲ್ಲೆಯಲ್ಲಿ ನಂದಿದುರ್ಗ ಮೇಕೆ ಸಂವರ್ಧನಾ ಕೇಂದ್ರ ಸ್ಥಾಪನೆ ~ ನಂದಿದುರ್ಗ ಮೇಕೆಗಳನ್ನು ಅಧೀಕೃತ ಮೇಕೆ ತಳಿ ಎಂದು National Bureau of Animal Genetics Resources , Karnal ( Harayana ) ನೊಂದಾಯಿಸಿದೆ . ನಂದಿದುರ್ಗ ತಳಿಯ ದೇಹವು ಬಿಳಿ ಬಣ್ಣ , ಶೆಕಡಾ 60 % ಅವಳಿ ಮರಿಗಳಿಗೆ ಜನ್ಮ ನೀಡುತ್ತದೆ . ಉತ್ತಮ ಮಾಂಸದ ತಳಿ , ವಯಸ್ಕ ಗಂಡು 30-37 ಕೆ.ಜಿ. ಮತ್ತು ಹೆಣ್ಣು 25-30 ಕೆ.ಜಿ ತೂಕ ಹೊಂದಿರುತ್ತದೆ . ಮೇಕ ಸಂವರ್ಧನಾ ಕೇಂದ್ರ ಸ್ಥಾಪನೆಯಿಂದ ಸ್ಥಳೀಯ ಮೇಕೆಗಳನ್ನು ಉನ್ನತಿಕರಿಸಲು ಪ್ರತಿ ವರ್ಷ 150 ನಂದಿದುರ್ಗ ಹೋತದ ಮರಿಗಳನ್ನು ಆಸಕ್ತ ಮೇಕೆ ಸಾಕಾಣಿಕೆದಾರರಿಗೆ ತಳಿ ಸಂವರ್ಧನೆಗಾಗಿ ನೀಡಲಾಗುವುದು .

ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರವನ್ನು ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪನೆ –

ನಾರಿ ಸುವರ್ಣ ಕುರಿ ತಳಿಗಳಿಂದ ಅವಳಿ ಮತ್ತು ತ್ರಿವಳಿ ಮರಿಗಳನ್ನು ನೀಡುವ ಗುಣ ಹೊಂದಿರುವುದರಿಂದ ಕಡಿಮೆ ಅವಧಿಯಲ್ಲಿ ಕುರಿಗಳ ಸಂಖ್ಯೆಯನ್ನು ವೃದ್ಧಿಸಬಹುದಾಗಿದೆ , ನಾರಿ ಸುವರ್ಣ ತಳಿಯು ಗೆರೋಲ್ , ಡೆಕ್ಕನಿ , ಮಡ್ಡಾಳ್ , ಬಂಡೂರು ಮತ್ತು ಇಸ್ರೇಲ್ ದೇಶದ ಆವಾಸಿ ತಳಿಯ ಮಿಶ್ರತಳಿಯಾಗಿರುತ್ತದೆ , ನಾರಿ ಸುವರ್ಣ ತಳಿಯಿಂದ ಸಂಕರಣಗೊಳಿಸಿದ ಸ್ಥಳೀಯ ಕುರಿ ತಳಿಗಳಿಂದ ಉತ್ತಮಗುಣಮಟ್ಟದ ಮಾಂಸ , ಹಾಗೂ ಹೆಚ್ಚಿನ ಮರಿಗಳನ್ನು ಪಡೆಯಬಹುದಾಗಿದೆ . ಪ್ರತಿ ವರ್ಷ 150 ನಾರಿ ಸುವರ್ಣ ಟಗರು ಮರಿಗಳನ್ನು ಆಸಕ್ತ ಕುರಿಗಾರರಿಗೆ ತಳಿ ಸಂವರ್ಧನೆಗಾಗಿ ನೀಡಲಾಗುವುದು .

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.