ಗುರು ರಾಯರ ಸನ್ನಿಧಿಯಲ್ಲಿ ಸಂಗೀತೋತ್ಸವ ಹಾಗೂ ಪ್ರವಚನ ಮಾಲಿಕೆ ಹರಿ ಭಜನೆ

ಜಯನಗರ ಐದನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ರಾಜಾ, ಕೆ ವಾದೀಂದ್ರಾ ಚಾರ್ ಅವರ ನೇತೃತ್ವದಲ್ಲಿ ಶ್ರೀ ಗುರು ರಾಯರ ಮಹೋತ್ಸವ ಅಂಗವಾಗಿ ವಿದ್ವಾನ್ ಪ್ರಬಂಜನಾಚಾರ್ಯ ಪುರೋಹಿತ್ ರವರು ಶ್ರೀ ರಾಘವೇಂದ್ರ ವಿಜಯದ ಬಗ್ಗೆ ಪ್ರವಚನ ಮಾಲಿಕೆ ನೆರವೇರಿತು, ಹಾಗೂ ಈ ದಿನ ಗುರುವಾರದ ಪ್ರಯುಕ್ತ ವಿದ್ವಾನ್ ಶ್ರೀನಿಧಿ ಆಚಾರ್ಯ ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ದಾಸವಾಣಿ ಕಾರ್ಯಕ್ರಮವು ವಿಶೇಷವಾಗಿ ನೆರವೇರಿತು , ಮೃದಂಗದಲ್ಲಿ ಪಣೀಶ್ ರವರು , ವೈಲಿನ್ ನಲ್ಲಿ ಶ್ರೀಕಾಂತ್ ರವರು ಸಾತ್ ನೀಡಿದರು ಹಾಗೂ ಈ ದಿನ ಶ್ರೀ ಭಕ್ತಿ ಸುಧಾ ಭಜನಾ ಮಂಡಳಿ ಯಿಂದ ಭಜನೆ ನೆರವೇರಿತು , ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ನೂರಾರು ಭಕ್ತರು ಶ್ರೀ ಗುರು ಸೇವೆಯಲ್ಲಿ ಭಾಗವಹಿಸಿ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.

City Today News -:9341997936

Leave a Reply

This site uses Akismet to reduce spam. Learn how your comment data is processed.