
ಬೆಂಗಳೂರು, ಮೇ 15: ರಾಜ್ಯದಾದ್ಯಂತ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪರವಾನಗಿ ಭೂಮಾಪಕರನ್ನು ವಿಶೇಷ ನೇಮಕಾತಿ ಮೂಲಕ ಸರ್ಕಾರಿ ಹುದ್ದೆಗಳಲ್ಲಿ ಸಕ್ರಮಗೊಳಿಸಬೇಕೆಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ನಗರದ Bangalore Press Club ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ತಿರುಮಲೇಗೌಡ, ಉಪಾಧ್ಯಕ್ಷ ಡಿ.ಎಂ. ಪ್ರಸನ್ನಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು ಎನ್.ಕೆ. ಮಾತನಾಡಿದರು.
2002ರಿಂದಲೂ ಪರವಾನಗಿ ಭೂಮಾಪಕರು ಇಲಾಖೆಯ ವಿವಿಧ ಕೆಲಸಗಳನ್ನು ನಿರಂತರವಾಗಿ ನಿರ್ವಹಿಸುತ್ತಿದ್ದು, ಸರ್ಕಾರಿ ಭೂಮಾಪಕರು ಮಾಡುತ್ತಿರುವ ಕಾರ್ಯಗಳಿಗೆ ಸಮಾನವಾದ ಜವಾಬ್ದಾರಿಗಳನ್ನು ಹೊತ್ತು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದರು. ಸರ್ಕಾರಿ ಭೂಮಾಪಕರಿಗೆ ನೀಡಲಾಗುವ ತರಬೇತಿಗೆ ಸಮಾನವಾದ ತರಬೇತಿಯನ್ನು ನಾವು ಪಡೆದಿದ್ದೇವೆ. ವಿದ್ಯಾರ್ಹತೆ ಮತ್ತು ತಾಂತ್ರಿಕ ಪರಿಣತಿ ಎರಡೂ ವರ್ಗಗಳಲ್ಲೂ ಸಮಾನವಾಗಿವೆ ಎಂದು ತಿಳಿಸಿದರು.
ಭೂಮಾಪನ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ Siddaramaiah ನೀಡಿದ್ದ ಭರವಸೆಯನ್ನು ಸರ್ಕಾರ ಈಗ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪರವಾನಗಿ ಭೂಮಾಪಕರಿಗೆ ಒಂದು ಬಾರಿ ವಿಶೇಷ ನೇಮಕಾತಿ ಪ್ರಕ್ರಿಯೆ ಮೂಲಕ ಸರ್ಕಾರಿ ಭೂಮಾಪಕರಾಗಿ ಅವಕಾಶ ನೀಡಿ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
‘ಸಮಾನ ಕೆಲಸಕ್ಕೆ ಸಮಾನ ವೇತನ’ ಎಂಬ ತತ್ವದಡಿ ಸಂಭಾವನೆಯನ್ನು ಮರುಪರಿಶೀಲಿಸಿ ನ್ಯಾಯಸಮ್ಮತ ವೇತನ ವ್ಯವಸ್ಥೆ ಜಾರಿಗೊಳಿಸುವಂತೆ ಅವರು ಆಗ್ರಹಿಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಘದ ವತಿಯಿಂದ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
City Today News 9341997936
