ಏರ್‌ಟೆಲ್‌ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ಗೆ ಆ್ಯಪಲ್‌ ಸೇವೆಗಳ ಸೇರ್ಪಡೆ

ಬೆಂಗಳೂರು, ಸೆ. 22: ಭಾರ್ತಿ ಏರ್‌ಟೆಲ್ ತನ್ನ ₹999 ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆಗಳಿಗೆ Apple iCloud+, Apple TV ಮತ್ತು Apple Arcade ಸೇವೆಗಳನ್ನು ಸೇರ್ಪಡೆಗೊಳಿಸಿದೆ.

ಹೊಸ ಕೊಡುಗೆಯಡಿ ಗ್ರಾಹಕರು iCloud+ ಮೂಲಕ ಫೋಟೋ, ಫೈಲ್‌, ಪಾಸ್‌ವರ್ಡ್‌ ಹಾಗೂ ಇತರ ಪ್ರಮುಖ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಬ್ಯಾಕಪ್‌ ಮತ್ತು ಸಿಂಕ್‌ ಮಾಡಿಕೊಳ್ಳಬಹುದು. Apple TV ಮೂಲಕ ವಿವಿಧ ಒರಿಜಿನಲ್‌ ಸರಣಿ ಹಾಗೂ ಸಿನಿಮಾಗಳನ್ನು ವೀಕ್ಷಿಸಲು ಮತ್ತು Apple Arcade ಮೂಲಕ ಜಾಹೀರಾತು ಹಾಗೂ ಹೆಚ್ಚುವರಿ ಇನ್‌-ಆ್ಯಪ್‌ ಖರೀದಿ ಇಲ್ಲದೆ ನೂರಾರು ಗೇಮ್‌ಗಳನ್ನು ಆಡಲು ಅವಕಾಶವಿದೆ.

₹999ರ ಫ್ಯಾಮಿಲಿ ಪ್ಲಾನ್‌ನಲ್ಲಿ ಮೂವರು ಸದಸ್ಯರಿಗೆ ಅನಿಯಮಿತ ಡೇಟಾ, ಸ್ಪ್ಯಾಮ್‌ ಕರೆಗಳಿಂದ ರಕ್ಷಣೆ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದ್ದು, ಇದೀಗ ಕ್ಲೌಡ್‌ ಸ್ಟೋರೇಜ್‌, ಮನರಂಜನೆ ಮತ್ತು ಗೇಮಿಂಗ್‌ ಸೇವೆಗಳೂ ಒಂದೇ ಯೋಜನೆಯಲ್ಲಿ ದೊರೆಯಲಿವೆ.

ಗ್ರಾಹಕರು Airtel App ಅಥವಾ ಸಮೀಪದ ಏರ್‌ಟೆಲ್‌ ಮಳಿಗೆ ಮೂಲಕ ಯೋಜನೆಯನ್ನು ಅಪ್‌ಗ್ರೇಡ್‌ ಮಾಡಿಕೊಳ್ಳಬಹುದು.
ಏರ್‌ಟೆಲ್‌ ಮಾರ್ಕೆಟ್‌ ಆಪರೇಷನ್ಸ್‌ ನಿರ್ದೇಶಕ ಅಮಿತ್‌ ತ್ರಿಪಾಠಿ ಮಾತನಾಡಿ, ಸಂಪರ್ಕ, ಮನರಂಜನೆ ಮತ್ತು ಡಿಜಿಟಲ್‌ ಸೇವೆಗಳನ್ನು ಒಂದೇ ಯೋಜನೆಯಡಿ ನೀಡುವ ಉದ್ದೇಶದಿಂದ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

City Today News 9341997936

Leave a comment

This site uses Akismet to reduce spam. Learn how your comment data is processed.